ಅಂದು ಒಂದು ಕಾಲಲ್ಲಿ, ಶಾಸ್ತ್ರಿ ಮುಖ್ಯಮಂತ್ರಿ ಆಗಿಪ್ಪಾಗ ದೇಶಲ್ಲಿ ಬಡಪ್ಪತ್ತು ಎದ್ದತ್ತಾಡ. ಭಾರತ-ಪಾಕಿಸ್ತಾನ ಯುದ್ಧವೂ ಇದ್ದ ಕಾರಣ ಇದ್ದ ಬದ್ದ ಪೈಶೆ ಪೂರ ಖರ್ಚಾತು. ಹಾಂಗಾಗಿ, ದೇಶದ, ಅದರ್ಲೂ ಸೈನಿಕರ ರಕ್ಷಣೆಗಾಗಿ ಎಲ್ಲೋರುದೇ ಒಂದು ಹೊತ್ತು ಊಟ ಬಿಡಿ – ಹೇದು ಶಾಸ್ತ್ರೀಜಿ ಒಂದು ಕರೆ ಕೊಟ್ಟವಡ.
ಅಷ್ಟು ಮಾಂತ್ರ ಅಲ್ಲ, ಸ್ವತಃ ಅದರ ಅನುಸರುಸಿ ತೋರ್ಸಿದವಾಡ.
ಇಂದು ಅದು ಪುನಃ ನೆಂಪಾತು. ಏಕೇದರೆ..
~
ಮಲೆ ಮಹದೇಶ್ವರದ ಆಸುಪಾಸಿಲಿ ಸುಮಾರು ಅರುವತ್ತು ಸಾವಿರ ದನಗೊ ಸಮಸ್ಯೆಲಿ ಇಪ್ಪದು ನಿಂಗೊಗೆ ಗೊಂತಿದ್ದೋ?
ಕರ್ನಾಟಕದ ಘನ ಸರಕಾರ ಬೆಟ್ಟಕ್ಕೆ ಹೋಪ ದಾರಿಯ ಬಂದು ಮಾಡಿತ್ತಾಡ. ಇದರಿಂದಾಗಿ ದಿನವೂ ಬೆಟ್ಟಲ್ಲಿ ಮೇದು ಬಂದುಗೊಂಡಿದ್ದ ಗಂಗೆ-ತುಂಗೆ-ಕಾವೇರಿಗೊ ಈಗ ಕಂಗಾಲು.
ಬೆಟ್ಟಕ್ಕೆ ಬಾಗಿಲು ಹಾಕಿದವು, ಆದರೆ ಬೆಟ್ಟದ ಬುಡಲ್ಲಿ ಗೋಸಾಕಣೆ ಮಾಡಿಗೊಂಡಿದ್ದ ಗೋಪಾಲಕರಿಂಗೆ ಎಂತ ಸಹಕಾರ ಮಾಡಿದ್ದವು?
ಒಂದೊಂದು ಮನೆಲಿ ಅರುವತ್ತು-ಎಪ್ಪತ್ತು-ನೂರು-ನೂರಿಪ್ಪತ್ತು ದನಂಗೊ ಇದ್ದಿದ್ದವು, ಅವರ ಹೊಟ್ಟಗೆ ಎಂತ ಹಾಕುಸ್ಸು – ಹೇದು ಗೋರ್ಮೆಂಟು ಆಲೋಚನೆ ಮಾಡಿದ್ದೋ?
ಇಲ್ಲೆ. ಮಾಡುವ ಮೊದಲೇ ಕಾನೂನು ಪಾಸು ಮಾಡಿ ಆಯಿದು. ಅಲ್ಲಿಯಾಣ ದನಗೊ ಕಂಗಾಲು ಆಗಿ ಹೋದವು.
ದನಗೊಕ್ಕೆ ಮೇವು ಇಲ್ಲೆ ಹೇದು ದೊಡಾ ಬೊಬ್ಬೆ ಅಪ್ಪಗ, ನಮ್ಮ ಗುರುಗಳ ನೇತೃತ್ವದ ಮಂಗಲ ಗೋ ಯಾತ್ರೆ ನೆಡೆತ್ತಾ ಇತ್ತು. ನಮ್ಮ ಗುರುಗಳ ಹತ್ರೆ ಬಂದು ಕೋರಿಕೆ ಮಡಗಿದವು. ಅಷ್ಟಪ್ಪಗ ಗುರುಗೊ ಶಿಷ್ಯರ ಮೂಲಕ ‘ವಿಶಯ ತಿಳಿವಲೆ’ ಸೂಚಿಸಿದವು. ಗೋವಿನ ಆಕ್ರಂದನ ನಿಜವಾದ್ಸು ಹೇದು ತಿಳುದು ಬಂತು. ಮತ್ತೆ ಹಿಂದೆಮುಂದೆ ನೋಡಿದ್ದವೇ ಇಲ್ಲೆ. ಗೋವಿಂಗಾಗಿ ಹೋರಾಡುವ ಮನಸ್ಸಿಲಿ ಸಮಾಜವ ಒಗ್ಗೂಡುಸಿದವು.
ಅದರಿಂದಾಗಿ, ಕಳುದ ತಿಂಗಳ ಮಲೆಮಹದೇಶ್ವರ ಬೆಟ್ಟದ ಬುಡಲ್ಲಿ ದೊಡ್ಡ ಸಮಾವೇಶ ಆತು.
ಊರಿಲಿ ಕ್ರಾಂತಿಯೇ ಆತು.
~
ಮಹದೇಶ್ವರಲ್ಲಿ ಗುಡ್ಡಗೆ ಗೇಟು ಹಾಕಿದ್ದರಲ್ಲಿ ಎರಡು ನಮುನೆ ತೊಂದರೆಗೊ ಇದ್ದು.
ಒಂದು ಇಂದಿಂಗೆ ಸಮಸ್ಯೆ ಕೊಡ್ತಾ ಇಪ್ಪದು, ಇನ್ನೊಂದು ಮುಂದಕ್ಕೆ ತೊಂದರೆ ಕೊಡುದು.
ಮುಂದಕ್ಕೆ ತೊಂದರೆ ಕೊಡುವ ಉಪದ್ರವ ನಿಧಾನಕ್ಕೆ ನ್ಯಾಯಾಲಯಕ್ಕೆ ಹೋಗಿ ಪರಿಹಾರ ಮಾಡ್ಳಕ್ಕು. ಅದಕ್ಕೆ ಬೇಕಾದ ಕಾನೂನು ತಜ್ಞರ ತಂಡ ಗುರುಗೊ ಈಗಾಗಲೇ ಮಾಡಿದ್ದವು; ಬೇಕಾದ ಕೆಲಸವ ಮಾಡ್ತಾ ಇದ್ದವು.
ಆದರೆ, ಈಗ ತಕ್ಷಣಕ್ಕೆ ಪರಿಹಾರ ಆಯೇಕಾದ್ಸು ಎಂತ್ಸರ?
ಲಕ್ಷಕ್ಕೆ ಹತ್ತರೆ ಅಲ್ಯಾಣ ಗೋವುಗೊಕ್ಕೆ ಮೇವು!
ಹೀಂಗೀಂಗೆ, ಎಂಗಳ ದನಗೊಕ್ಕೆ ಮೇವು ಇಲ್ಲೆ – ಹೇದು ಅಲ್ಯಾಣ ಕೆಲವು ದೊಡ್ಡಜೆನಂಗೊಕ್ಕೆ ಹೇಳಿದವಾಡ ರೈತರು; ಮಾರುಲೆ ಎಡಿಯದ್ರೆ ಮಾರಿಕ್ಕಿ – ಹೇದು ಆ ಜೆನ ಕೈತೊಳದತ್ತಾಡ. ಮಾರಿರೆ ಅದಕ್ಕೂ ರಜ ತೇಮಾನು ಸಿಕ್ಕುತ್ತೋ ಏನೋ – ಹೇದು ಗುಸು ಗುಸು, ಗುರು ಗುರು ಮಾತಾಡಿಗೊಂಡವು ರೈತರು. ಅಷ್ಟೇ.
ಊರವು ಸುಮ್ಮನೆ ಕೂದವು, ರಾಜಕೀಯ ನೇತಾರರು ಸುಮ್ಮನೆ ಕೂದವು; ಆದರೆ ನಾವು ಸುಮ್ಮನೆ ಕೂದರೆ ಅಕ್ಕೋ?
ಇದಕ್ಕೆ ಪುರುಸೊತ್ತಿಲ್ಲೆ, ಈಗಂದ ಈಗಲೇ ಆಯೇಕು. ಅಲ್ಲದ್ದರೆ ಅಲ್ಲಿಪ್ಪ ಗೋವುಗೊ ಸಾಯಿಗು!
ಈಗಾಗಳೇ ಮಾರಣ ಹೋಮ ಸುರು ಆಯಿದು. ಇನ್ನೂ ಮುಂದುವರುದರೆ ಮತ್ತೆ ಗೋವುಗಳ ಸಂತತಿಯೇ ನಾಶ ಅಕ್ಕು.
ಅದೂ – ಅಲ್ಲಿಪ್ಪದು ಬರಗೂರು ತಳಿ. ಆ ತಳಿಯೇ ಅಪಾಯಲಿ ಇದ್ದು.
~
ಇದಕ್ಕಾಗಿ ಗುರುಗೊ ಕೈಗೊಂಡ ಕ್ರಮವೇ – ಗೋ ಭಿಕ್ಷಾ ಸೇವೆ.
ಬೃಹದಾಕಾರದ ಶಿಷ್ಯವರ್ಗದ ಹತ್ತರೆ ಗುರುಗೊ ಕೇಳಿದ ಒಂದೇ ಕೋರಿಕೆ- “ಆ ದನಗೊಕ್ಕೆ ಮೇವು ಕೊಡದ್ರೆ, ಈ ಬೇಸಗೆ ಕಳಿಯ. ನಿಂಗಳಿಂದ ಒಳಿಶಲೆ ಎಡಿಯದೋ” – ಹೇದು. ಎಂತವಂಗೂ ಮನಸ್ಸಿಂಗೆ ತಟ್ಟುಗು.
ಮಹದೇಶ್ವರ ಬೆಟ್ಟದ ಬುಡಲ್ಲಿಪ್ಪ ಗೋವುಗೊ ನಮ್ಮ ಮನೆಯ ದನಗಳೇ ಆಗಿದ್ದರೆ? ಯೋಚನೆ ಮಾಡಿ!
~
ಹಾಂಗಾರೆ ನಾವು ಎಂತ ಮಾಡ್ಳಕ್ಕು?
ಶಿಷ್ಯವರ್ಗ ಕೂದುಗೊಂಡು ಎರಡು ಮೂರು ವಿಚಾರ ಆಲೋಚನೆ ಮಾಡಿತ್ತು.
೧. ದಕ್ಷಿಣ ಕನ್ನಡ ಭಾಗಲ್ಲಿ ಅಡಕ್ಕೆ ಹಾಳೆ ಧಾರಾಳ ಇದ್ದಲ್ಲದೋ, ಆ ಹಾಳೆಯ ಕುಂಟೆ ತೆಕ್ಕೊಂಡು ಹೋಗಿ ಮಲೆಮಹದೇಶ್ವರಕ್ಕೆ ಎತ್ತುಸುದು
ಕೆಲವು ಹಾಳೆ ಫೇಕ್ಟರಿಗಳೂ ಇದ್ದ ಕಾರಣ ಅಲ್ಲಿಂದ ಟನ್ನು ಗಟ್ಟಲೆ ಪ್ರಮಾಣಲ್ಲಿ ಸಿಕ್ಕುತ್ತಿದಾ.
೨. ಉತ್ತರ ಕರ್ನಾಟಕ ಹೊಡೆಲಿ ಧಾನ್ಯಂಗಳ ಮೊಳಕೆ ಬರುಸಿ, ಆ ಸಿರಿಧಾನ್ಯದ ತೆನೆಯ ಮಲೆಮಹದೇಶ್ವರಕ್ಕೆ ಎತ್ತುಸುದು.
೩. ಅದೆರಡೂ ಎಡಿಯದ್ದರೆ, ಗೋಗ್ರಾಸಕ್ಕೆ ಕಾಣಿಕೆ ಎತ್ತುಸುದು. ಬೆಂಗ್ಳೂರು ಅಥವಾ ಉಳುದ ಭಾಗಂಗಳಿಂದ ಅನುಕೂಲ ಆವುತ್ತ ಹಾಂಗೆ.
ಹಾಂಗೆ, ಸಮಾಜ ಸಮರೋಪಾದಿಲಿ ಕೆಲಸ ಮಾಡ್ತಾ ಇದ್ದು.
ರಜ ದಿನ ಕಳುದಪ್ಪಗ ಸ್ಪಷ್ಟ ಚಿತ್ರಣ ಸಿಕ್ಕುಗು. ಎಷ್ಟು ಜಾನುವಾರುಗೊಕ್ಕೆ ನಮ್ಮ ಮಠದ ಅಭಯಹಸ್ತ ಸಿಕ್ಕಿತ್ತು – ಹೇದು ನವಗೆ ಗೊಂತಕ್ಕು. ಗೊಂತಪ್ಪಗ ನಾವೆಲ್ಲ ಹೆಮ್ಮೆ ಪಡುವ ಹಾಂಗೆ ಅಕ್ಕು; ಕೊಶಿ ಅಕ್ಕು.
~
ಗೋಶಾಲೆಲಿ ದನಗಳ ಕಟ್ಟಿ, ಅದರಿಂದ ಲಾಭ ಪಡವ ಎಷ್ಟೋ ಸಂಸ್ಥೆ ಇಕ್ಕು.
ಆದರೆ, ಎಲ್ಲೋ ರಾಜ್ಯದ ಮೂಲೆಲಿ ದನಗಳ ಸಮೂಹಕ್ಕೆ ತೊಂದರೆ ಇದ್ದು ಹೇದು ಗೊಂತಾಗಿ ಅಲ್ಲಿಗೆ ಇಡೀ ಶಿಷ್ಯವರ್ಗದ ಗಮನ ಕೊಡುಸುವ ಸಂಸ್ಥೆ / ಸಂಸ್ಥಾನ ಇದ್ದರೆ ಅದು ನಮ್ಮದು ಮಾಂತ್ರ!
ಎಂತ ಹೇಳ್ತಿ?!
~
ಅಂದು ಶಾಸ್ತ್ರೀಜಿ ಹೇಳಿದ ಹಾಂಗೇ, ಇಂದು ಗುರುಗೊ ಹೇಳಿದವಾಡ- ವಾರಲ್ಲಿ ಒಂದು ದಿನ ಒಪ್ಪೊತ್ತು / ಉಪವಾಸ ಮಾಡೀ. ಅದರ್ಲಿ ಒಳುದ್ದರ ಗೋವುಗೊಕ್ಕೆ ಕೊಡುವ° – ಹೇದು.
~
ಒಂದೊಪ್ಪ: ತನ್ನ ಮಗುವಿನ ಹೊಟ್ಟೆ ಕಟ್ಟಿ ನವಗೆ ಹಾಲು ಕೊಡುವ ಗೋವಿಂಗೆ ಬೇಕಾಗಿ ನಾವುದೇ ರಜ್ಜ ಉಪವಾಸ ಮಾಡುವೊ°. ಆಗದೋ?
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಅಡಿಕೆ ಕೃಷಿಕರೆ ಒಂದಿಷ್ಟು ಕೆಮಿಕೊಡಿ|
ತೋಟದಾ ಹಾಳೆ ಸಂಗ್ರಹಣೆ ಮಾಡಿ|
ಮಾಡಿದಾ ಶೀಖರಣೆ ಕಳುಸಿಕೊಡಿ|
ಸಾಗಾಟಕ್ಕೆ ಗೋ ಕಿಂಕರರ ತಂಡಕ್ಕೆ ಬಿಡಿ|
ನಿಂಗೊಗೆ ಉಪವಾಸ ಕೂಬ್ಬಲೆಡಿಯದ್ರೆ ಬಿಡಿ|
ಉಪವಾಸ ಬಿದ್ದ ದನಗಳ ಸಾವಲೆ ಬಿಡೆಡಿ|
ಶ್ರೀಗುರುಗೊ, ಗೋಮಾತೆಯರ ಆಶೀರ್ವಾದ ಬೇಕಪ್ಪ|
ಈ ವಾರದ, ಈ ಶುದ್ದಿಗೆ ಮನದಾಳದ ಒಂದೊಪ್ಪ||