Oppanna.com

ಮಾವಿನಹಣ್ಣು ಸಾಸಮೆ

ಬರದೋರು :   ಶರ್ಮಪ್ಪಚ್ಚಿ    on   29/04/2017    12 ಒಪ್ಪಂಗೊ

ಈಗ ಮಾವಿನ ಹಣ್ಣಿನ ಕಾಲ. ಕಾಡಿನ ಮಾವಿನ ಹಣ್ಣಿನ ಗೊಜ್ಜಿ, ಸಾಸಮೆ ಇದ್ದರೆ ಊಟಕ್ಕೆ ಮತ್ತೆಂತ ಬೇಡ.
ಶ್ರೀಮತಿ ಪ್ರಸನ್ನಾ ವಿ  ಚೆಕ್ಕೆಮನೆ ಇವು ಮಾವಿನ ಹಣ್ಣಿನ ಸಾಸಮೆ ಬಗ್ಗೆ ಪದ್ಯ ರಚಿಸಿ ಹಾಡಿದ್ದವು.
ಹೇಂಗಾಯಿದು ಹೇಳಿ
ಮಾವಿನಹಣ್ಣು ಸಾಸಮೆಶ್ರೀಮತಿ ಪ್ರಸನ್ನಾ ಚೆಕ್ಕೆಮನೆ

ಸಾಸಮೆಗಳಲ್ಲೇ ರುಚಿಯು
ಹೆಚ್ಚು 
ಮಾವಿನಣ್ಣು ಸಾಸಮೆಗೆ

ಚೀಪೆ ಮಾವಿನಣ್ಣು ಬೇಕೇ
ಬೇಕು
ರುಚಿಯ ಸಾಸಮೆಗೆ

ಮಾವಿನಣ್ಣು ತೊಳದು ತೊಟ್ಟು
ತೆಗದು
ಚೋಲಿಯ ಕೆತ್ತೇಕು

ಗೊರಟಿನ ಬೇರೆ ಮಡುಗಿಕ್ಕಿ
ಚೋಲಿಯ
ನೀರಾಕಿ ಪುರುಂಚೆಕು

ಬಂದ ಎಸರಿನ ಗೊರಟಿನೊಟ್ಟಿಂಗೆ
ಹಾಕಿ 
ಮಡುಗೇಕು

ಒಂದಿಷ್ಟು ಉಪ್ಪು
ರಜಾ ಬೆಲ್ಲ
ಬೆರ್ಸಿ ಮಡುಗೆಕು

ಕಾಯಿಯ ಕೆರದು
ಗಡಗಡ ಕಡವಗ 
ಸಾಸಿಮೆ ಹಾಕೇಕು

ಬೇಕಾರೊಂದು
ಒಣಕ್ಕು ಮೆಣಸು
ಒಟ್ಟಿಂಗೆ ಸೇರ್ಸೆಕು

ಕಡದ ಅರಪ್ಪಿನ
ಗೊರಟಿಪ್ಪ ಪಾತ್ರಕ್ಕೆ
ಹಾಕಿ ಬೆರ್ಸೇಕು

ಆಹಾ….ಸಾಸಮೆ 
ರೆಡಿಯಾತನ್ನೇ
ಮಾವಿನಹಣ್ಣಿಂದು

ರುಚಿಯಾ ಸಾಸಮೆ
ಇಪ್ಪಗ ಎನಗಿಂದು 
ಹೆಚ್ಚಿಗೆ ಉಣ್ಣೇಕು

ಮಾವಿನಹಣ್ಣು ಸಾಸಮೆ
~~~***~~~

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

12 thoughts on “ಮಾವಿನಹಣ್ಣು ಸಾಸಮೆ

  1. ಸಾಸಮೆಯ ಪದ್ಯ ಮೋಸ ಇಲ್ಲೇ..ಸಾಸಮೆ ಪದ್ಯಕ್ಕೂ ಆವುತ್ತು,ಊಟಕ್ಕೂ ಆವುತ್ತು..! ಹಾಡಲೂ ಆವುತ್ತು..ಪ್ರಸನ್ನಕ್ಕಂಗೆ ಅಭಿನಂದನೆ.

  2. ಓ …..ಎಂತಾ ರುಚಿ ಮಾರಾರ್ರೆ…. ವಿಧ ವಿಧ ಅಡುಗೆಗಳ ಕವನ ರೂಪಲ್ಲೆ ಬರದು ಹೊಸ ಸಾಹಿತ್ಯ ಪ್ರಕಾರಕ್ಕೆ ಶ್ರೀಕಾರ ಹಾಕಲಕ್ಕು ಪ್ರಸನ್ನ.

    1. ಪ್ರಯತ್ನ ಮಾಡ್ತೆ ಅತ್ತೇ….ಪ್ರೊತ್ಸಾಹ ಕ್ಕೆ ಧನ್ಯವಾದ

  3. ಪ್ರಸನ್ನಕ್ಕ ಬರದು ಹಾಡಿದ ಮಾವಿನಹಣ್ಣು ಸಾಸಮೆ ಹಾಡು ತುಂಬಾ ರುಚಿಯಾಗಿತ್ತು. ನಿನ್ನೆಯೇ ವಾಟ್ಸ್ ಅಪ್ಪಿಲ್ಲಿ ಕೇಳಿದೆ. ಬೈಲಿಲ್ಲಿಯು ಕೇಳಿ ಕೊಶಿಯಾತು. ಹೀಂಗಿಪ್ಪದು ಬೈಲಿಂಗೆ ಬತ್ತಾ ಇರಳಿ.

    1. ಪ್ರಯತ್ನ ಮಾಡ್ತೆ ಅಣ್ಣಾ..ಕೆಲವು ಸರ್ತಿ ಕೆಲಸದ ತೆರಕ್ಕು.ನಿಂಗಳ ಒಪ್ಪ ನೋಡಿ ಕೊಶಿಯಾತು.

  4. ಕೊಶಿಯಾತು ಭಾವ.ನಿಂಗೊಗೂ ಸಾಸಮೆ ಮೆಚ್ಚಿತ್ತನ್ನೇ.

  5. ವ್ವಾಹ್ ವ್ವಾಹ್… ಆಚಕರೆ ಪುಟ್ಟನೂ ಇದರ ಕೇಟಿಕ್ಕಿ ನಾಕು ಮಾಯಿನಣ್ಣು ಹೆರ್ಕ್ಯೊಂಡು ಬಂದು ಸಾಸಮೆ ಮಾಡ್ಳೆ ಹೆರಟಿಕ್ಕುಗೋದು. ಸಾಸಮೆ ಮಾಡಿದಟ್ಟೇ ಪಟ್ಟಾಯ್ದು ಸಾಸಮೆ ರಚನೆ ಗಾಯನ

  6. ಕೊಶಿಯಾತು ನಿನ್ನ ಮೆಚ್ಚುಗೆ ನೋಡಿ.

  7. ಲಾಯಿಕಾಯಿದು ಪದ್ಯ.ಸಾಸಮೆ ಉಂಡಷ್ಟೇ ಕೊಶಿ ಆತು.

  8. ಕವನ ಮೆಚ್ಚುಗೆಯಾದ್ದು ಕೊಶಿಯಾತು.

  9. ಸಾಸಮೆ ಮಾಡುವ ಕ್ರಮವ ಸರಿಯಾಗಿ ಇದ್ದು. ಮಾಡ್ಲೆ ಗೊಂತಿಲ್ಲದ್ದವಂಗೆ ಪದ್ಯ ಓದಿ ಮಾಡ್ಲಕ್ಕು

  10. ಆನು ಬರದು ಹಾಡಿದ ಕವನವ ಒಪ್ಪಣ್ಣ ಬೈಲಿಂಗೆ ಹಾಕಿ ಪ್ರೋತ್ಸಾಹ ಕೊಟ್ಟ ಶರ್ಮಣ್ಣಂಗೆ ತುಂಬು ಹೃದಯದ ಧನ್ಯವಾದ….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×