Oppanna.com

ಆನು ನೋಡಿದ ಬೆಳಿ ಹಂದಿ

ಬರದೋರು :   ವಿನಯ ಶಂಕರ, ಚೆಕ್ಕೆಮನೆ    on   30/04/2017    7 ಒಪ್ಪಂಗೊ

ವಿನಯ ಶಂಕರ, ಚೆಕ್ಕೆಮನೆ
Latest posts by ವಿನಯ ಶಂಕರ, ಚೆಕ್ಕೆಮನೆ (see all)
ಆನು ನೋಡಿದ ಬೆಳಿ ಹಂದಿ

ಇದು ಆನು  ನಾಲ್ಕನೇ ಕ್ಲಾಸಿಲಿ ಕಲಿವಗ ನಡದ ನೈಜ ಪ್ರಸಂಗ.

ಆನು ಸಣ್ಣಾಗಿಪ್ಪಗಳೇ ಅಮ್ಮ ಎನಗೆ ಪೌರಾಣಿಕ ಕತೆ ಹೇಳುಗು, ಸಾಲದ್ದಕ್ಕೆ ಬಾಲಮಂಗಳ, ತುಂತುರು ಹೀಂಗಿಪ್ಪ ಪುಸ್ತಕಗಳನ್ನೂ ಓದಿಗೊಂಡಿತ್ತಿದೆ. ಹೊಸ ಪುಸ್ತಕ ಸಿಕ್ಕುಲೆ ಕಾದುಕೂದುಗೊಂಡಿತ್ತೆ..ಇದರೆಲ್ಲ ಓದಿ ಎನ್ನ ಮನಸ್ಸಿಲಿ ಎನ್ನದೇ ಆದ ಕಲ್ಪನೆಗಳೂ ಇತ್ತಿದು.

ಹೀಂಗಿಪ್ಪಗ ಒಂದು ದಿನ ಎಂತಾತು ಹೇದರೆ ಆನುದೇ ಎನ್ನ ಪ್ರೆಂಡುದೇ ಯೇವಗಣಾಂಗೆ ಶಾಲೆ ಬಿಟ್ಟಿಕ್ಕಿ ಒಟ್ಟಿಂಗೆ ಲೊಟ್ಟೆಹೊಡಕ್ಕೊಂಡು ಬಂದುಗೊಂಡಿತ್ತಿದೆಯ° .ಅಟ್ಟಪ್ಪಗ ಬಲ್ಲೆ ಎಡಕ್ಕಿಂದ ಎಂತದೋ ಪರಪರ ಶಬ್ದ ಕೇಳಿತ್ತು. ಎನಗೆ ರೆಜಾ ಧೈರ್ಯ ಹೆಚ್ಚಿಗೆ ಇದಾ…  ಹಾಂಗೆ ಆನು ಆ ಹೊಡೆಯಂಗೆ ತಿರುಗಿ ನೋಡಿದ್ದಿಲ್ಲೆ. ಎನ್ನ ಪ್ರೆಂಡಿದ್ದ ಅನ್ನೆ; ಅವ° ತಿರುಗಿ ನೋಡಿದ° …” *ಏ ಬೆಳಿ ಹಂದಿಯಾ …ಓಡುವ*” ಹೇಳಿ ಅವ° ಹೇಳಿ ಮುಗಿಶೆಕ್ಕಾರೆ ಎನಗೆ ಬಲಿಪ್ಪುಲೆ ಸುರು ಮಾಡಿ ಆಯ್ದು ; ಅದುದೇ ಸಿಕ್ಕಿದ ದಾರಿಲಿ….ಅಂಬಗ ಅಮ್ಮ ಹೇಳಿಗೊಡಿತ್ತಿದ್ದ ಹಿರಣ್ಯಾಕ್ಷನ ಕತೆಯೂ ನೆಂಪಾತು…” ದೇವರೇ..! ಎಂಗೊ ಏವ ತಪ್ಪೂ ಮಾಡದ್ದರೂ ಎಂಗಳ ಎಂತಕಪ್ಪಾ ಅಟ್ಟಸುತ್ತೆ..?” ಹೇಳಿ ಓಡಿದೆಯ° . ಆನು ಎನ್ನ ಸಣ್ಣಜ್ಜನ ತೋಟದ ಒರುಂಕಿಲೇಗಿ ಓಡಿದರೆ , ಅವ°  ಎಂಗಳ ನೆರೆಕರೆ ಮನೆಯ ದಾರಿಲಿ ಓಡಿದ….ಅವನ ಮನೆಗೆ ಇನ್ನುದೇ ಒಂದು ಮೈಲು ಹೋಯೆಕ್ಕು….ಎನ್ನ ಮನೆ ಎತ್ತಿಗೊಂಡು ಬೈಂದು.ಎನಗೆ ಹೆದರಿ ದೊಂಡೆ ಪಸೆ ಆರಿದ್ದು..ಹಿಂದೆ ತಿರುಗಿಯೂ ನೋಡಿದ್ದಿಲ್ಲೆ..ಆನು ಓಡಿದಲ್ಲಿ ಇನ್ನುದೇ ಹುಲ್ಲು ಹುಟ್ಟಿರ……

 ಸಣ್ಣಜ್ಜನ ಮನೆ ಬುಡಕ್ಕೆತ್ತಿಯಪ್ಪಗ ಅಲ್ಯಾಣ ಅಜ್ಜಿ ನಿಂದುಗೊಂಡಿತ್ತಿದವು.  “ಎಂತಕೆ ಹೀಂಗೆ ಸೇಂಕಿಗೊಂಡು ಓಡ್ತೆ ?” ಹೇಳಿ ಕೇಳಿದವು. ಆನು ” *ಬೆ …ಬೆ…ಬೆಳಿ….ಬೆಳಿಹಂದಿ…*” ಹೇಳಿಕ್ಕಿ ಓಡಿದೆ.ಅಜ್ಜಿ ಬೇರೆಂತೋ ಕೇಳೆಕ್ಕಾರೆ ಮೊದಲೇ ಎನಗವರ ಗೇಟು ದಾಂಟಿ ಆಯ್ದು..

ಮನೆಗಿನ್ನು ರಜ್ಜ ಇಪ್ಪದು..ರಜಾ ಸುತ್ತಾಗಿ ಬಂದದು ; ಇಲ್ಲದ್ದರೆ ಆಗಳೇ ಎತ್ತಿ ಆವ್ತಿತು..ಒಂದರಿ ಮನೆಗೆತ್ತಿರೆ ಸಾಕು ಹೇಳಿ ಹರುದುಬಿದ್ದು ಓಡಿದೆ…ಎಂಗಳ ಗೇಟಿನ ಬುಡಲ್ಲಿ ಅಮ್ಮನ ಕಂಡಪ್ಪಗ ಬಚ್ಚೆಲು,ದಃಖ,ಹೆದರಿಕೆ,ಸಂಕಟ ಎಲ್ಲಾ ಒಟ್ಟಿಂಗೆ ಹೆರಬಂತು….” *ಅಮ್ಮಾ ಒಳಹೋಗು ….ಬೆಳಿ ಹಂದಿ ಬತ್ತಾಇದ್ದು* ” ಹೇಳಿ ಬೊಬ್ಬೆ ಹೊಡದೆ..ಒಳಕೂದುಗೊಂಡಿತ್ತಿದ್ದ ಅಪ್ಪಂದೇ ಬೊಬ್ಬೆ ಕೇಳಿ ಹೆರ ಬಂದವು. ಅಪ್ಪನ ಕಂಡಪ್ಪಗ ಇಷ್ಟರವರೆಗೆ ಕಟ್ಟಿಹಿಡುದ ಉಸಿರು ಬಿಟ್ಟೆ….ಆದರುದೇ ಆನು ಅಪ್ಪನತ್ರೆ ” *ಬೆಳಿಹಂದಿ*” ಹೇಳಿ ಬೊಬ್ಬೆ ಹೊಡದೆ..ಅಪ್ಪ° ಅವಗ “ಬೆಳಿ ಹಂದಿಯಾ…? ಎಲ್ಲಿ ನೋಡುವ°” ಹೇಳಿ ಗೇಟು ದಾಂಟಿದವು..ಅಪ್ಪ ಹೆರ ಇಳುದ್ದದುದೇ, ಎರಡು ಚೆಂದದ, ಆರೋ ಸಾಂಕಿದ ನಾಯಿಗೊ ಜಾಲಿಂಗೆತ್ತಿದವು….ಕೊರಳಿಲಿ ನೇಲುವ ಸಂಕೋಲೆಯೂ ಇತ್ತಿದ್ದು..ಅಪ್ಪ ಕೈ ಬೇರಿ ಅಪ್ಪಗ ಅದೆರಡೂ ಪದ್ರಾಡು…. ” ಇದುವಾ ನೀನು ನೋಡಿದ ಬೆಳಿ ಹಂದಿ ” ಹೇಳಿ ಅಮ್ಮ ಕೇಳಿ ಅಪ್ಪಗ ಎನ್ನ ಮೋರೆ ನಿಂಗೊ ನೋಡೆಕ್ಕಿತ್ತು…..ನಾಚಿಕೆಲಿ ತಲೆ ಎತ್ತಿದ್ದಿಲ್ಲೆ……

~~~****~~~

 

7 thoughts on “ಆನು ನೋಡಿದ ಬೆಳಿ ಹಂದಿ

  1. ಹಳೆ ನೈಜ ಕತೆ ಪಷ್ಟಿದ್ದು ವಿನಯಾ. “ಆನು ಓಡಿದಲ್ಲಿ ಇನ್ನುದೆ ಹುಲ್ಲು ಹುಟ್ಟಿರ” ಓಡಿದ್ದಲ್ಲಿ ಹುಲ್ಲು ಹುಟ್ಟದ್ದೆ ಅಪ್ಪಲೆ ಕಾರಣ ಎಂತರ!?( ಈ ಮಾತು ಬೇರೆವೂ ಹೇಳುಸ್ಸು ಕೇಟಿದೆ…..ಎಂತಕಿದರ ಬಳಸುದು!?)

  2. ಒಂದು ಸತ್ಯ ಘಟನೆ ವಿನಯನ ಸಹಜ ಶೈಲಿಲಿ ಮೂಡಿ ಬಯಿಂದು. ಗ್ರೇಶುಗ ಈಗಲೂ ನೆಗೆ ಬತ್ತು.

  3. ಶುದ್ಧಿ ಪಷ್ಟಾಯ್ದು. ಓಡಿದ್ದು ಅದಂದಲೂ ಪಷ್ಟಾಯ್ದು. ಹೀಂಗಿಪ್ಪ ಅನುಭವಂಗಳ ಹಂಚ್ಯೊಂಡಷ್ಟು ಕೊಶಿ ಆವುತ್ತು. ಇನ್ನೂ ಇನ್ನೂ ಬರಲಿ

  4. ಪುಟ್ಟಾ..,ಪಷ್ಟಾಯಿದು ಆತೋ…
    ನಿನ್ನ `ನಟರಾಜನ ರಾಣಿ’ ಕವನವನ್ನೂ ಇಲ್ಲಿ ಹಾಕು ಮಾರಾಯಾ…ಎಲ್ಲರೂ ಓದಿ ಖುಷಿ ಪಡಲಿ.

  5. ಬಲಿಪ್ಪಲೆ ಸುರು ಮಾಡಿದ್ದದು, ಓಡಿದಲ್ಲಿ ಹುಲ್ಲು ಹುಟ್ಟ ಹೀಂಗಿಪ್ಪ ಹವ್ಯಕ ಭಾಷೆಯ ಪ್ರಯೋಗಂಗೊ ಬಂದಪ್ಪಗ ಶುದ್ದಿಯ ಓದಲೆ ಕೊಶೀ ಆವ್ತು. ಘಟನೆ ನೈಜವಾಗಿದ್ದು. ಹಂದಿ ಹೇಳಿಯಪ್ಪಗ ನೆಂಪಾವ್ತದು, ಎಂಗೊ ಸಣ್ಣಾದಿಪ್ಪಗ ಕೆಲವು ಬುದ್ಧಿಗೆ ಸವಾಲ್ ಹಾಕುವ ಪ್ರಶ್ಣೆ ಹಾಕೆಂಡಿದ್ದದು. ಹಂದಿ ಹೂಗು (ಹೂವು) ಕೊಯ್ಯುತ್ತರ ನೋಡಿದ್ದಿಯ ? ಕರಡಿ ಸಗಣ ಬಳುಗುತ್ತರ ನೋಡಿದ್ದಿಯಾ ? ಹೀಂಗಿಪ್ಪದು. ವಿನಯ, ಬೈಲಿಂಗೆ ಬತ್ತಾ ಇರು ಆತೊ ?

  6. ಹಶು ಆದ ಹೊತ್ತೋ ಎಂಸೋ… ಎನ ಬೇಲಿಕರೇಲಿ ನಿಂದು ನೋಡ್ವಾಗ ಆನು ಮಾಡಿದ ಹುಳಿ ಬೆಂದಿ ಹೇದು ಸುರೂವಿಲ್ಲಿ ಓದಿ ಹೋತು. ಪಡಿಬಾಗಿಲು ಬಿಡ್ಸಿ ಒಳಬಂದಪ್ಪಗ ನಿಂಗಳ ಬೆಳಿ ಹಂದಿ ಕಂಡತ್ತು ! ಪಷ್ಟಾಯ್ದು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×