Oppanna.com

ಮಲ್ಲಿಕಾರ್ಜುನನ ದೇವಸ್ಥಾನ ಅಂಡಾಕಾರದ ವೃಷಭಾಯ..!!

ಬರದೋರು :   ಒಪ್ಪಣ್ಣ    on   24/06/2017    21 ಒಪ್ಪಂಗೊ

ಆದಿಶಂಕರಾಚಾರ್ಯರು ಧರ್ಮರಕ್ಷಣೆಗಾಗಿ ಭಾರತ ಸುತ್ತಿದ ಸಂಗತಿ ನವಗೆ ಗೊಂತಿದ್ದು.
ಹಾಂಗೇ ಬಂದು ಬಂದು ಶಿಷ್ಯರ ಒಟ್ಟಿಂಗೆ ನಮ್ಮ ಗೋಕರ್ಣಕ್ಕೂ ಬಂದವು. ಅಲ್ಲಿ ಒಂದು ಜಿಂಕೆಯೂ – ಹುಲಿಯೂ ಪರಸ್ಪರ ವೈರತ್ವ ಮರದ ಒಂದು ಜಾಗೆ ಕಂಡತ್ತು. ಶೋಕವೇ ಇಲ್ಲದ್ದ ಆ ಭೂಮಿಗೆ ಅಶೋಕೆ – ಹೇದು ಗುರ್ತ ಮಡಿಕ್ಕೊಂಡವು.
ಅಷ್ಟು ಮಾಂತ್ರ ಅಲ್ಲ, ಈ ಸುಂದರ ಜಾಗೆಲಿ ಒಂದು ಧರ್ಮಪೀಠ ಆಯೇಕು ಹೇದು ಸ್ಫುರಣೆ ಆತು.

ಒಟ್ಟಿಂಗೇ ಇದ್ದ ವಿದ್ಯಾನಂದಾಚಾರ್ಯರಿಂಗೆ ತನ್ನ ಜ್ಯೇಷ್ಠ ಶಿಷ್ಯ ಸುರೇಶ್ವರಾಚಾರ್ಯರ ಮೂಲಕ ಸಂನ್ಯಾಸ ಕೊಡುಸಿದವು. ಆ ಅಶೋಕೆ ಜಾಗೆಲಿ ಇದ್ದು ಧರ್ಮ ಪ್ರಸಾರ ಮಾಡ್ತಾ ಇರಿ – ಹೇದು ಉತ್ತರದ ಹೊಡೆಂಗೆ ಹೋದವು ಆಚಾರ್ಯ ಶಂಕರರು.
ಶಂಕರಾಚಾರ್ಯರು ಅಂದು ಬೆಳಗಿದ ಅದ್ವೈತ ಪೀಠ ಇಂದಿಂಗೂ ಅವಿಚ್ಚಿನ್ನವಾಗಿ ೩೬ನೇ ಶಂಕರಾಚಾರ್ಯರ ರೂಪಲ್ಲಿ ಬೆಳಗುತ್ತಾ ಇದ್ದು.
ಕಾಲಕ್ರಮೇಣ ಅಲ್ಲಿಂದ ರಜ್ಜ ದೂರದ ಗೋಕರ್ಣ ದೇವಸ್ಥಾನವೇ ಜನವಾಸ, ಕೇಂದ್ರ ಆತು. ಇದರಿಂದಾಗಿ ಅಶೋಕೆಯ ಜಾಗೆಗೆ ಜನಸಂಪರ್ಕ ಕಡಮ್ಮೆ ಆತು. ಹಾಂಗಾಗಿ ನಮ್ಮದು “ಗೋಕರ್ಣ ಮಠ” – ಹೇಳಿಯೂ ಹೆಸರಾತು.

ಮುಂದೆ ಕಾಲ ಇನ್ನೂ ಬದಲಿತ್ತು. ಗೋಕರ್ಣಂದ ಅನಿವಾರ್ಯವಾಗಿ ಹೆರಡೆಕ್ಕಾಗಿ ಬಂತು ನಮ್ಮ ಪೀಠ. ಅಲ್ಲಿಂದ ಒಳನಾಡಿಂಗೆ ಬಂದು ನಗರ – ಹೊಸನಗರ ಹೇಳ್ತಲ್ಲಿ ಪೀಠ ನೆಲೆ ಆತು. ಇದರಿಂದಾಗಿ ಅಶೋಕೆ ಇನ್ನೂ ಹಡಿಲು ಬಿದ್ದತ್ತು.
~
ಇದೆಲ್ಲ ಆಗಿ ಎಷ್ಟೋ ಶತಮಾನ ಆತು. ಸುಮಾರು ತಲೆಮಾರು ಆಗಿ ಹೋತು.
ಈಗ ಮೂವತ್ತಾರ್ನೇ ಶಂಕರರು.
ಬ್ರಹ್ಮ ಹಾಂಗೇ ಬರದ್ದನೋ ಏನೋ.
ಮಠ ಸ್ಥಾಪನೆ ಆದ ಜಾಗೆಲಿ ಈಗ ಪುನಃ ಮಠ, ಮಲ್ಲಿಕಾರ್ಜುನ ಗುಡಿ ಅಪ್ಪ ಸುಸಂದರ್ಭ ಬಂತು.
~
ಮಠ ಸ್ಥಾಪನೆ ಆದ್ಸು ಅಶೋಕೆಲಿ.
ಮಲ್ಲಿಕಾರ್ಜುನ ದೇವರು ಆ ಅಶೋಕೆಯ ಅಧಿಪತಿ ಆಡ.
ಆ ಮಲ್ಲಿಕಾರ್ಜುನಂಗೆ ಒಂದು ಭವ್ಯ ಗುಡಿ – ಸುರೂವಾಣ ಅಪೇಕ್ಷೆ.
ಹಾಂಗೇ ಶಂಕರಾಚಾರ್ಯರು ಸ್ಥಾಪನೆ ಮಾಡಿದ ಮಠಕ್ಕಾಗಿ ಪುನಾ ಒಂದು ಮಠವನ್ನೇ ಅಲ್ಲಿ ಲೋಕಾರ್ಪಣೆ ಮಾಡುವ ಅಪೇಕ್ಷೆ – ಇದೆರಡು ಶ್ರೀಪೀಠಕ್ಕೆ ಸ್ಫುರಣೆ ಆಗಿತ್ತು.
ಆ ಪ್ರಕಾರ ಕೆಲಸ ಸುರು ಆತು.
ಅಶೋಕೆಯ ದೇವಸ್ಥಾನದ ಕೆಲಸವೂ, ಮೂಲಮಠದ ಕೆಲಸವೂ ಸುರು ಆತು.

ಶಿಲಾಮಯ ಅಶೋಕೆಯ ದೇವಸ್ಥಾನದ ಕಟ್ಟೋಣ ಎದ್ದು ನಿಂದತ್ತು.
ಕೆಂಪು ಶಿಲೆಯ ಮೂಲಮಠವೂ ತಯಾರಾತು.

ನಾಳೆಂದ – ಬಪ್ಪವಾರದ ವರೆಗೆ ಬ್ರಹ್ಮಕಲಶದ ಗವುಜಿ.
ಎಲ್ಲೋರುದೇ ಬಂದು ಆ ಗೌಜಿ ನೋಡೇಕು ಹೇದು ಕೇಳಿಗೊಂಡವು ಗುರಿಕ್ಕಾರ್ರು. ಅಪ್ಪು, ಈ ವಾರ ಗುರಿಕ್ಕಾರ್ರಿಂಗೆ ಮಾಂತ್ರ ಅಲ್ಲ, ಒಪ್ಪಣ್ಣಂಗೂ ಅಂಬೆರ್ಪು. ಅಶೋಕೆಗೆ ಹೋಗಿ ಗವುಜಿ ನೋಡೆಕ್ಕಲ್ದಾ!
~
ಅಶೋಕೆಯ ದೇವಸ್ಥಾನ – ಪ್ರಪಂಚಲ್ಲೇ ಅಪೂರ್ವ ಆದ “ಅಂಡಾಕಾರ” ಅಡ. ಬೆಳ್ಳಿಗೆ ಮಾವ° ಹೇಳಿತ್ತಿದ್ದವು.
ಕೋಳಿಯ ಮೊಟ್ಟೆಯ ಸರೀ ಅರ್ಧ ಮಾಡಿರೆ ಯೇವ ಆಕಾರ ಬತ್ತೋ – ಅದು ಅಂಡಾಕಾರ.
ಪೂರ್ಣ ವೃತ್ತ ಅಲ್ಲದ್ದ, ಪೂರ್ಣ ದೀರ್ಘವೃತ್ತ ಅಲ್ಲದ್ದ – ಒಂದು ನಮುನೆ ಓರೆ ಉರುಟು.
ಶಿಲ್ಪಿಗೊ ಇದರ ಪುಸ್ತಕಲ್ಲಿ ಓದಿರ್ತವು, ಆದರೆ ಎಲ್ಲಿಯೂ ಈ ಆಯ ಮಾಡ್ಳೆ ಅವಕಾಶ ಆಗಿತ್ತಿಲ್ಲೆ. ನಮ್ಮ ಅಶೋಕೆಲೇ ಪ್ರಥಮ.

ಆಯ, ಪಾಯ, ಮಾಡು ಎಲ್ಲವೂ ಇದಕ್ಕೆ ಅನುರೂಪವಾಗಿ ಇರೆಕ್ಕಾವುತ್ತಿದಾ.
ಹಾಂಗಿಪ್ಪ ಅಪೂರ್ವ ರಚನೆ ಇದು.

ಇದರ ವೈಶಿಷ್ಠ್ಯಕ್ಕಾಗಿ ಆದರೂ ಒಂದು ಗಳಿಗೆ ಹೋಪ°. ನಮ್ಮ ಮೂಲಮಠ ಪುನರುತ್ಥಾನ ಕಾರ್ಯದ ಗವುಜಿ ನೋಡುವೊ°.
~

ಒಂದೊಪ್ಪ: ಅಶೋಕೆಯ ಮಲ್ಲಿಕಾರ್ಜುನ ಸಮಸ್ತ ಸಮಾಜದ ಶೋಕವ ದೂರ ಮಾಡಲಿ.

21 thoughts on “ಮಲ್ಲಿಕಾರ್ಜುನನ ದೇವಸ್ಥಾನ ಅಂಡಾಕಾರದ ವೃಷಭಾಯ..!!

  1. Hi Mahesh,

    I saw you tweeting about health and I thought I’d check out your website. I really like it. Looks like Mahesh has come a long way!

    I’ve noticed your load time is decent on your website. If you want faster loading speeds on your website, I have a solution for you. You can check it out at here https://rebrand.ly/bluenetawpcleaner

  2. ಬಾ ಬಾ ಬಾರೊ ಒಪ್ಪಣ್ಣಾ… ಒಪ್ಪಣ್ಣನ ಶುದ್ದಿ ಇಲ್ಲದ್ದೆ ಬೈಲು ಒಣಗುತ್ತಾ ಇದ್ದು.

      1. ಎರಡು ಲೇಖನಂಗಳುದೇ ೨೪.೬.೧೭kke ಪಬ್ಲಿಶ್ ಆಯಿದು.

        1. ಅದರ ಅರ್ಥ- ಅದು ಒಂದೇ ಲೇಖನ ಹೇಳಿ. ಎರಡು ಲೇಖನ ಅಲ್ಲ.

        2. ಅದರ ಹೆಡ್ಡಿಂಗ್ ಎರಡು ಹೊಡೆಲಿ ಕಾಣ್ತಾ ಇದ್ದು. ಅದು ವೆಬ್ ಸೈಟಿನ ಡಿಸೈನ್ ಕಾರಣಂದ ಹಾಂಗೆ ಕಾಂಬದು. ಎರಡು ಸಲ ಪ್ರಿಂಟ್ ಆಯಿದು ಹೇಳಿ ಅರ್ಥ ಅಲ್ಲ.

    1. ಲೇಖನ ಎರಡು ಸರ್ತಿ ಬಯಿಂದಿಲ್ಲೆ ಶಂಕರಣ್ಣ ;ನಿಂಗಳ ಒಪ್ಪ ಎರಡು ಸರ್ತಿ ಬಂತು ಅದು ನಿಂಗೊಗೆ ಬಹು ಕೊಶಿ ಆಗಿ ಅಗಿಕ್ಕಲ್ಲೋ ?

      1. ಕುಂಞಣ್ಣ ಹೇದ್ದು ಸರಿ ವಿಜಯಕ್ಕ. ಅಶೋಕೆಯ ಲೇಖನ ೨ ಸರ್ತಿ ಪ್ರಿಂಟ್ ಆಯಿದು.

  3. ವಿಶ್ವಲ್ಲೇ ಅತೀ ಅಪರೂಪದ ಅಂಡಾಕಾರದ ದೇವಸ್ಥಾನ ನಮ್ಮ ಮೂಲ ಮಠದ ಮಲ್ಲಿಕಾರ್ಜುನ ಹೇಳುವ ಹೆಮ್ಮೆ ನಮ್ಮ ಹವ್ಯಕ ಬಾಂಧವರಿಂದು.

    ಗುರಿಕ್ಕಾರರೇಎಂತ ನಮ್ಮ ಒಪ್ಪಣ್ಣ ಬಯಲಿನ ೭ ನೇ ವರ್ಷ ಮುಗಿವದು ಏವಗ?

  4. ವಿಶ್ವಲ್ಲೇ ಅತೀ ಅಪರೂಪದ ಅಂಡಾಕಾರದ ದೇವಸ್ಥಾನ ನಮ್ಮ ಮೂಲ ಮಠದ ಮಲ್ಲಿಕಾರ್ಜುನ ಹೇಳುವ ಹೆಮ್ಮೆ ನಮ್ಮ ಹವ್ಯಕ ಬಾಂಧವರಿಂದು.

    ಎಂತ ಗುರಿಕ್ಕಾರರೇ ನಮ್ಮ ಒಪ್ಪಣ್ಣ ಬಯಲಿನ ೭ ನೇ ವರ್ಷ ಮುಗಿವದು ಏವಗ?

  5. ಎಂತ ಒಪ್ಪಣ್ಣ ಹೊಸ ಲೇಖನ ಇಲ್ಲೇ ?

  6. ಒಳ್ಳೆ ಶುದ್ದಿ. ಹರೇ ರಾಮ.
    ಅಂಡಾಕಾರದ ಬಗ್ಗೆ ಹೆಚ್ಚಿನ ವಿವರಣೆಯೇ ಬೇಡ. ಏಕೆ ಹೇಳಿರೆ, ಶಾಲೆಲಿ ಮಧುರಂಕಾನ ಡ್ರಾಯಿಂಗ್ ಮಾಶ್ಟ್ರು ಸುರೂವಿಂಗೆ ಹೇಳಿ ಕೊಟ್ಟದೇ ಅಂಡಾಕಾರ ಹೇಂಗೆ ಹಾಕುವದು ಹೇಳುವುದರ !!

    1. ಪರೀಕ್ಷೆಲಿಯೂ ಅದೇ ಸಿಕ್ಕಿಗೊಂಡು ಇತ್ತಾ ಹೇಂಗೆ? 🙂

      1. ಓ, ನಿಂಗಳ ಒಪ್ಪ ಕಾಣದ್ದೆ ಸುಮಾರು ದಿನ ಆತದ.

    1. mithamoole ಶಂಕರ ಭಟ್ರೇ ಲೇಖನ ಒಳ್ಳೆದಿದ್ದು
      ಹೇದರೆ ಸಾಲ. ಅಶೋಕೆಗೆ ಒಂದರಿ ಭೇಟಿ ಕೊಟ್ಟು ಬರೆಕು.

  7. ಆಯವೂ ವಿಶೇಷ, ಆಯನವೂ ವಿಶೇಷವೇ.
    ಈ ಶತಮಾನದ ಅಪೂರ್ವ ಘಟನೆಗೆ ನಾವು ಸಾಕ್ಷಿ ಆವ್ತಾ ಇದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×