- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ಪದಸ್ಥಿತಸ್ಯ ಪದ್ಮಸ್ಯ ಮಿತ್ರೇ ವರುಣಭಾಸ್ಕರೌ।
ಪದಚ್ಯುತಸ್ಯ ತಸ್ಯೈವ ಕ್ಲೇಶದಾಹಕರಾವುಭೌ।।
ಪದಚ್ಛೇದ:
ಪದಸ್ಥಿತಸ್ಯ ಪದ್ಮಸ್ಯ ಮಿತ್ರೇ ವರುಣಭಾಸ್ಕರೌ।
ಪದಚ್ಯುತಸ್ಯ ತಸ್ಯ ಏವ ಕ್ಲೇಶದಾಹಕರೌ ಉಭೌ।।
ಅನ್ವಯಾರ್ಥ:
ಪದಸ್ಥಿತಸ್ಯ(ತನ್ನ ಸ್ಥಾನ/ಪದವಿಯಲ್ಲಿ ಇಪ್ಪ) ಪದ್ಮಸ್ಯ(ತಾವರೆಗೆ) ವರುಣಭಾಸ್ಕರೌ (ನೀರೂ ಸೂರ್ಯನೂ) ಮಿತ್ರೇ(ಇಬ್ಬರೂ ಗೆಳೆಯರು)
ಪದಚ್ಯುತಸ್ಯ ತಸ್ಯ ಏವ (ಸ್ಥಾನವ ಕಳಕ್ಕೊಂಡ ಅದೇ ತಾವರೆಗೆ) ವರುಣಭಾಸ್ಕರೌ ಉಭೌ(ಅದೇ ನೀರು ಮತ್ತು ಸೂರ್ಯ ಇಬ್ಬರೂ) ಕ್ಲೇಶದಾಹಕರೌ (ಕಷ್ಟವನ್ನೂ ಉರಿಯನ್ನೂ ಕೊಡ್ತವು)
ಜೀವನಲ್ಲಿ ಶತ್ರು ಮಿತ್ರ ಉದಾಸೀನ ಇವು ಮೂರೂ ಶಾಶ್ವತ ಏನೂ ಅಲ್ಲ. ಇಂದು ಮಿತ್ರನಾದವ ನಾಳೆ ಶತ್ರುಪಕ್ಷ ಸೇರುಗು. ಮತ್ತೊಬ್ಬ ಶತ್ರುವೇ ನಮ್ಮ ಸಹಾಯಕ್ಕೆ ಬಪ್ಪಲೂ ಸಾಕು. ಇಂದ್ರಾಣ ಗೆಳೆಯ ನಾಳೆ ಗುರ್ತವೇ ಇಲ್ಲದೋನ ಹಾಂಗೆ ಹೋಪಲೂ ಸಾಕು.
ರಾಜಕೀಯಲ್ಲಿ ಅಂತೂ ಇದು ನೂರಕ್ಕೆ ನೂರಹತ್ತರಷ್ಟು ಸತ್ಯ. ಸ್ಥಾನ/ಪದವಿ ಇಪ್ಪಗ ಮಿತ್ರನಾದವಂಗೆ ಸ್ಥಾನ ಕಳಕ್ಕೊಂಡ ಕೂಡ್ಲೇ ಗುರ್ತವೇ ಇರ. ಅಥವಾ ಅವನೇ ಶತ್ರುವಾಗಿ ಮುಂದೆಂದೂ ಮೇಲೆ ಬಾರದ್ದ ಹಾಂಗ ಮಾಡುಗು.
ತಾವರೆ ಹೂಗು ಗೆಡುವಿಲೇ ಇಪ್ಪಗ ನೀರು ಅದಕ್ಕೆ ಆಧಾರವಾಗಿರ್ತು. ತಾವರೆ ಹೂ ಗಿಡವ ಬಿಟ್ಟರೆ ಅದೇ ನೀರು ಹೂವಿನ ಕೊಳೆಶುತ್ತು.
ಗೆಡುವಿಲಿಪ್ಪಗ ಅರಳುಸುವ ಸೂರ್ಯ ಗೆಡುವಿನ ಬಿಟ್ಟ ಕೂಡ್ಲೇ ಅದರ ಒಣಗುಸುತ್ತ.
ಯಾವ ಮಿತೃತ್ವವೂ ಶಾಶ್ವತ ಅಲ್ಲ ಹೇಳಿ ತಿಳ್ಕೊಂಡು ನಮ್ಮ ನಮ್ಮ ಜಾಗ್ರತೆಲಿ ನಾವಿರೆಕ್ಕು.
ಅಪ್ಪೊ ಶಿವರಾಮ, ನೀನು ಬಯಿಂದಿಲ್ಲೆ ತಿರುಪತಿಗೆ. ಎಂತ ಮರಾಯ?
ಪುಣಚ ಡಾಕ್ಟರೇ, ಆನು ಮದಲೇ ಹೇದ ಹಾಂಗೆ ಈ ಕಬ್ಬಿಣ ದ ಕಡ್ಳಗೆ ಹೆಚ್ಚು ಅಭಿಪ್ರಾಯ ಬಾರ.ಆದರೂ ಇದು ಆಮೃತದಂತೆ ಡಾಕ್ಟರ್ ರೇ. ಧನ್ಯವಾದಗಳು ಸರ್.