Oppanna.com

ಗೋವು ನಾವು

ಬರದೋರು :   ಶರ್ಮಪ್ಪಚ್ಚಿ    on   29/11/2017    0 ಒಪ್ಪಂಗೊ

ಗೋವು  ನಾವು

– ಪಂಕಜರಾಮ್
ಪಂಕಜ ರಾಮ ಭಟ್

ಮನೆಲಿದ್ದ ರೆ ಒಂದು ಗೋವು
ದೇವಸ್ಥಾನಲ್ಲಿ ಇಪ್ಪಂಗೆ ನಾವು
ರೋಗಂಗ ಯಾವದೂ  ಹತ್ತರೆಯುಬಾರ
ಗೋವಿನ ಹಾಲಿಲಿದ್ದು ಸತ್ವ ಸಾರ

ಎಲ್ಲಾ ದೇವತೆಗಳಿಪ್ಪ ಮನೆ ಗೋವು
ಕೊಡುತ್ತದು ಅಮೃತದ ಹಾಂಗಿಪ್ಪ ಹಾಲು
ತೆಗದು ಇಡುಕುವ ಹುಲ್ಲುತಿಂದು
ಕೊಡುಗದು ನವಗೆ ರುಚಿಯಾದ ಹಾಲು

ಗೋವಿನ ಹಾಲಿಲಿ ಜೀವರಸ ಇದ್ದು
ಅಬ್ಬೆ  ಹಾಲಿಂಗೆ ಸಮವಕ್ಕೂ ಇದು
ಇರೆಕ್ಕು ಪ್ರತಿ ಮನೆಲಿ ಒಂದು ಗೋವು
ಗೋಕಳ್ಳರಿಂದ ಅದರ ರಕ್ಷಿಸೆಕ್ಕು ನಾವು

ದೇವತೆಗಳ ನೆಲೆ ಅಕ್ಕು
ನಮ್ಮ ಮನೆ ನೋಡು
ಗೋಮೂತ್ರ ಗೋಮಯ ಎಲ್ಲದರಲ್ಲಿದ್ದು
 ಮದ್ದಿನಭಂಡಾರವೇ ಇದ್ದು ನೋಡು

ಸಾಕಕ್ಕು ನಾವದರ ನಮ್ಮ ಮಕ್ಕಳ ಹಾಂಗೇ
ಉಳಿಸೆಕ್ಕು ನಾವದರ ಸಂತತಿಯ ಇಂದೇ
ಕಟುಕರ ಕೈಯಿಂದ ಅದರ ರಕ್ಷಿಸೆಕ್ಕು
ಗೋಮಾಂಸ ತಿಂಬೋರ ಶಿಕ್ಷಿಸೆಕ್ಕು

ಗೋರಕ್ಷಣೆಗೆಇರೆಕ್ಕುನಮ್ಮ ಮದಲ ಆದ್ಯತೆ
ಇರೆಕ್ಕು ಅದರಲ್ಲಿ ಯಾವಾಗಲೂ ಬದ್ಧತೆ 
ಸಿಕ್ಕುಗಂಬಗ ನಮಗೆ ಆರೋಗ್ಯದ ಭದ್ರತೆ

ಗೋಕುಲವ ಉಳಿಸುಲೆ
ನಾವೆಲ್ಲ  ಒಂದಾಯಕ್ಕೂ
ನೀಡೆಕ್ಕು ನಾವೆಲ್ಲ ಅಭಯಾಕ್ಷರ
ದೇಶದ ಎಲ್ಲೋರು ಇದರಲ್ಲಿ ಪಾಲ್ಗೊಳ್ಳಕ್ಕೂ
ಗೋವಧೆಯ ನಿಲ್ಲುಸುಲೆ ಪಣ ತೊಡೆಕ್ಕು

ಗೋವಿದ್ದರೆ ಮಾತ್ರ ಇಕ್ಕು  ನಾವು 
ಇಲ್ಕದ್ದರೆ ಅಕ್ಕು ನಮ್ಮ ಸಾವು
ಹಾಂಗಾಗಿ ಉಳಿಸೆಕ್ಕು ಗೋವಿನ ನಾವು

ಪರಿಸರ ಸಂರಕ್ಷಣೆ ಇದರಂದ ಅಕ್ಕು
ಬರಡಾದ ಮಣ್ಣಿಂಗೆ ಸಂಜೀವಿನಿ ಅಕ್ಕು
ಒಳುಸಿ  ಬೆಳಸಿದರೆ ದೇಸಿ ಗೋವು

~~~~~****~~~~~

 

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)
ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×