ತೆಳ್ಳವು…. ರಸಾಯನ..!!
ನಾಳೆ ಉದಿಯಪ್ಪಗ ತಿಂಡಿ ಎಂತರ…?
ಎಲ್ಲಾ ಹೆಮ್ಮಕ್ಕಳ ಮಹಾ ಪ್ರಶ್ನೆ..!!
ಹಾಂಗೆಯೆ ಆತು ಇಲ್ಲಿಯು ನಿನ್ನೆ
ಎಂತ ಮಾಡುದಪ್ಪ? .. ಯೋಚನೆ..!!
ಮಾವಿನಹಣ್ಣಿನ ಕಾಲ ಇದಲ್ಲದೊ
ನೀಲಂ ಹಣ್ಣು ನಮ್ಮ ಮರದ್ದೆ!
ಉರಿ ಕಚ್ಚಿಸಿಗೊಂಡು ಕೊಯ್ದಾಗಿತ್ತು
ಹಣ್ಣಾಗಿ ಅದು ಕಾದುಗೊಂಡು ಇತ್ತು
ನಾಳೆ ರಸಾಯನ ಮಾಡುವ ಹಾಂಗಾರೆ
ತೆಳ್ಳವಿನೊಟ್ಟಿಂಗೆ ಜಬರ್ದಸ್ತು!
ಪತಿರಾಯರ ಆಸೆ ಅದೆ ಆತನ್ನೆ
ಹಾಂಗೆ ಮಾಡುವ ಹೇಳಿ ಒಪ್ಪಿತ್ತು !
ಅಜಪ್ಪಿದ ಹಣ್ಣು ಮೆಲ್ಲಂಗೆ ಹೆರಬಂತು
ಚೋಲಿ ಕೆತ್ತುಲೆ ಪೀಶಕತ್ತಿ ರೆಡಿ ಆತು
ಮಾವಿನಹಣ್ಣು ತೊಳದು ತಂದಾತು!
ಹಣ್ಣಿನ ಕೊಚ್ಚೇಲು ತಯಾರಾತು!
ಅದಕ್ಕೆ ಬೆಲ್ಲ ಸರಿಯಾಗಿ ಹಾಕೆಕ್ಕನ್ನೆ
ರಸಾಯನ ಹುಳಿ ಆದರೆ ಕಷ್ಟನ್ನೆ!
ಬೆಲ್ಲ ಕೆರಸಿ ಸರಿಯಾಗಿ ಹಾಕಿಕ್ಕಿ
ಮುಚ್ಚಿದೆ ಅದರ ಸರಿಯಾಗಿ ಬೆರ್ಸಿಕ್ಕಿ
ಕಾಯಿಹಾಲಿಂಗೆ ಹಸಿಕಾಯಿ ಆಯೆಕ್ಕನ್ನೆ
ಇನ್ನು ಅದರ ಅಟ್ಟಂದ ತೆಗೇಕ್ಕನ್ನೆ?
ಕಾಯಿಸುಳಿ ಕಡವಲೆ ಹಾಕಿ ಆತನ್ನೆ
ದಪ್ಪ ಕಾಯಿಹಾಲು ತಪಲೆಲಿ ತುಂಬಿತ್ತನ್ನೆ
ಅಂತೂ ರಸಾಯನ ತಯಾರಾತು
ಪರಿಮ್ಮಳಕ್ಕೆ ಏಲಕ್ಕಿ ಹಾಕಿ ಆತು!
ತೆಳ್ಳವಿನ ಅಟ್ಟಿ ಮೇಲೆ ಮೇಲಂಗೆ ಹೋತು !
ಲೋಟೆ ಬಟ್ಲು ಶಬ್ದ ಜೋರಾತು..!
ಮಾಯಾಬಜಾರ್ ನ ಘಟೋದ್ಗಜನ ಹಾಂಗೆ
ಎರಡನ್ನು ಹೊಡದೆಯೊ ರುಚಿಯಾಗಿ !
ಇಲ್ಲಿಗೆ ಇಂದ್ರಾಣ ರಸಾಯನ ಪುರಾಣ
ಮುಗಿಸೆಕ್ಕಾಗಿತ್ತು ತೆಳ್ಳವಿಂಗಾಗಿ..!!
~~~***~~~
-ಶಂಕರಿ ಶರ್ಮ, ಪುತ್ತೂರು.
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಶಂಕರಿ ಅಕ್ಕ, ಲೇಖನ ಒಳ್ಳೆದಿದ್ದು. ಒಂದು ಹೊಡೇಲಿ ನೀನು ಮಕ್ಕೋಗೆ ಕಲುಶುತ್ತಾ ಇದ್ದೆ. ಇನ್ನೊಂದು ಹೊಡೇಲಿ ಕುಶಲ ಹಾಸ್ಯ ಸಂಘ, ಪ್ರವಚನ , ಲೇಖನ ಇತ್ಯಾದಿ ಗಳಲ್ಲಿ busy ಆಗಿದ್ದೆ ಮಾರಾಯ್ತಿ. ಗ್ರೇಟ್.
ಲಾಯಕ ಆಯಿದು ಪದ್ಯ