ಎಂಗಳ ಪ್ರವಾಸ…”ಕೃಷಿ ದರ್ಶನ”
ಪುತ್ತೂರಿಲ್ಲಿಪ್ಪ ಕುಶಲ ಸಂಘದೊವು
ಹೊರಟೆಯೊ ಒಂದು ದಿನದ ಪ್ರವಾಸಕ್ಕೆ
ಐವತ್ತು ಆಸನದ ದೊಡ್ಡ ಬಸ್ಸದು
ಹೊರಟತ್ತು ಲಾಯಿಕಕ್ಕೆ ಉದೆಕಾಲಕ್ಕೆ
ಮಾಣಿಮಠಲ್ಲಿ ಹೊಟ್ಟಗೆ ಉಂಡೆಯ ತುಂಬ್ಸಿದೆಯೊ..replica-horloges kopen
ಸೀದಾ ಮೂರ್ಜೆ ಕಾಮತರ ಹಟ್ಟಿಗೆ ಹೋದೆಯೊ..!
ಘಿರ್,ಕಾಂಕ್ರೀಜ್ ಎಂಥಾ ದನಗಳೊ ಅಬ್ಬಬ್ಬ!
ಎಲ್ಲಾ ನೋಡುದೆ ನಮ್ಮ ಕಣ್ಣಿಂಗೆ ಹಬ್ಬ!!
ಅಲ್ಲಿಂದ ಸೀದಾ ಬಸದಿಯ ದಾರಿ
ನೂರು ಕಂಬಂಗಳ ಎಣುಸುದೇ ಸರಿ!
ಆಗಲೆ ನಡುಮಧ್ಯಾಹ್ನ ಆತದ
ಎಲ್ಲೋರ ಹೊಟ್ಟೆ ಚುರಚುರು ಹೇಳ್ತದ!
ಉಳಿಪ್ಪಾಡಿ ಗುತ್ತಿನ ಒಡ್ಡೂರು ತೋಟ
ತುಂಬಿದ ಕೆರಗಳ ಚೆಂದದ ನೋಟ!
ಪಾಯಸದ ಒಟ್ಟಿಂಗೆ ಗಮ್ಮತ್ತಿನ ಊಟ
ಒಟ್ಟಿಂಗೆ ಹೊಡದೆಯೊ ಮೂಗಿನ ಮುಟ್ಟ!
ಸೋನ್ಸ್ ತೋಟದ ಪರೆಂಗಿಚೆಕ್ಕೆಯ ಜೂಸು
ಉಳಿದೋರಿಂಗೆ ತಂಪಿನ ಕಬ್ಬಿನ ಜೂಸು!
ಅಲ್ಲಿಂದ ಹೆರಟರೆ ನರಹರಿ ಪರ್ವತ
ಹೊತ್ತು ಕಂತುಲಾತು ಬೇಗ ಹತ್ತೆಕ್ಕಾತ?
ತಿಂಡಿ ಕಟ್ಟಂಗೊ ಹೆರ ಬಂದಾತು
ಎಲ್ಲೋರು ಹೊಡದು ಗಮ್ಮತ್ತಾತು!
ಮಂಗಂಗಳ ಪಿರಿಪಿರಿ ತೊಂದರೆ ಇಲ್ಲೆ
ಅವಕ್ಕೂ ರಜ ಕೊಟ್ಟೆಯೊ.. ಸರಿ ಆತಲ್ಲೆ!
ಇರುಳಿನ ಊಟ ಅದು ಕಲ್ಲಡ್ಕಲ್ಲಿ
ಉಮಾಶಿವ ಕ್ಷೇತ್ರದ ಚೆಂದ ಸುಪರ್ದಿಲಿ
ಕುಜುವೆ ಮೇಲಾರ ಗಂಜಿಯ ಪರಿಮ್ಮಳ!
ಆಹಾ..ಉಂಡಿಕ್ಕಿ ಎಲ್ಲೋರು ನಿರುಮ್ಮಳ!
ಪುತ್ತೂರಿಂಗೆ ಎತ್ತಿತ್ತದ ಒಂಭತ್ತು ಗಂಟಗೆ
ಎಲ್ಲೋರು ಹೋದೆಯೊ ಅವರವರ ಮನಗೆ
ಹೀಂಗಿಪ್ಪ ಪ್ರವಾಸ ಒಂದೊಂದರಿ ಬೇಕು
ನಮ್ಮೆಲ್ಲ ರಗಳೆಗಳ ಮರವಲೆ ಸಾಕು…!
.…..ಅಲ್ಲದಾ…ಎಂತ ಹೇಳ್ತಿ…??
ಶಂಕರಿ ಶರ್ಮ,ಪುತ್ತೂರು.
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಶಂಕರಿ ಅಕ್ಕ, ನೀನು ಪದ್ಯದೇ ಬರೆತ್ತಿಯೊ ಮಾರಾಯ್ತಿ. ಒಳ್ಳೆದಿದ್ದು.