ಹ್ಮ್, ಗಣೇಶಮಾವನ ಗೊಂತಿದ್ದಲ್ದ?ಅದಾ, ಬೈಲಕರೆಲಿ ಮನೆ! ನಿಂಗೊಗೆ ಅವರ ಗೊಂತಿಲ್ಲದ್ರೂ ಅವಕ್ಕೆ ನಿಂಗಳ ಗೊಂತಿರ್ತು!
ಅವಕ್ಕೆ ಎಲ್ಲವುದೇ ಅರಡಿಗು.ಬೈಕ್ಕು ಬಿಡ್ಳೆ ಅರಡಿಗು, ಕಾರು ತಿರುಗುಸುಲೆ ಅರಡಿಗು, ಕೊದಿಲು ಮೇಲಾರ ಮಾಡ್ಳೆ ಅರಡಿಗು, ಅದರ ಉಂಬಲೂ ಎಡಿಗು!ಕರವಲೂ ಅರಡಿಗು, ಕೆಮ್ಕಕ್ಕೆ ಅಡಕ್ಕೆ ಹಾಕಲೂ ಅರಡಿಗು, ಬೆಂಗುಳೂರಿಂಗೆ ಹೋಗಿ ಬೇಕಾದ ಕೆಲಸ ಮಾಡಿಗೊಂಡು ಬಪ್ಪಲೂ ಅರಡಿಗು, ಪೂಜೆ-ಮಂತ್ರಂಗಳೂ ಅರಡಿಗು, ಮದುವೆ ಮಾಡುಸುಲೂ ಅರಡಿಗು, ಪೋನಿಲಿ ಇಂಗ್ಳೀಶಿಲಿ ಮಾತಾಡಲೂ ಅರಡಿಗು,ಕವುಡೆ ತಿರುಗುಸುಲೆ ಅರಡಿಗು, ಜಾತಕ ಬರವಲುದೇ ಅರಡಿಗು, ಪೇಂಟು ಹಾಯ್ಕೊಂಡು ಕಂಪ್ಯೂಟರು ಕುಟ್ಟುಲೂ ಅರಡಿಗು! ಮನೆಲಿಪ್ಪಗ ಅಡಕ್ಕೆ ಅಗುಕ್ಕೊಂಡು ಎಲೆ ತಿಂಬಲೂ ಅರಡಿಗು, ಪೇಟಗೆ ಹೋಪಗ ಪೌಡ್ರು ಹಾಕಲೂ ಅರಡಿಗು!!
ಸಾಮಾನ್ಯವಾಗಿ ಮನುಶ್ಯ ಒಬ್ಬಂಗೆ ಎಂತೆಲ್ಲ ಬೇಕೋ -ಅದೆಲ್ಲ ಅರಡಿಗು!ಅವು ಒಬ್ಬ ಇದ್ದರೆ ಹತ್ತು ಜೆನ ಇದ್ದ ಗುಣ ಹೇಳಿ ಮಾಷ್ಟ್ರಮನೆ ಅತ್ತೆ ಯೇವತ್ತೂ ಹೇಳುಗು.ಸದ್ಯ ಕಳುದೊರಿಷ ಮಾನಸ ಸರೋವರ ಕೈಲಾಸ ಪರ್ವತ ಎಲ್ಲ ತಿರುಗಿಕ್ಕಿ ಬಯಿಂದವು. ಬಂದ ಶುದ್ದಿಯ ಅವರ ಬ್ಲೋಗಿಲಿ ಬರದ್ದವು.ಅವು ಒಪ್ಪಣ್ಣನ ಬೈಲಿಲಿ ತುಂಬ ಮೊದಲಿಂದಲೇ ಇಪ್ಪವು.
’ಶುದ್ದಿ ಹೇಳ್ತಿರೋ’ ಕೇಳಿಯಪ್ಪಗ ಸಂತೋಷಲ್ಲಿ “ಅಕ್ಕು ಒಪ್ಪಣ್ಣೋ” ಹೇಳಿದವು. ಅವರನ್ನುದೇ ಅವರ ಮನೆಲಿ ಒಪ್ಪಣ್ಣ ಹೇಳಿಯೇ ದಿನಿಗೆಳುದು ಇದಾ, ಅವರಿಂದ ಹೆರಿಯೋರು!ಅವಕ್ಕೆ ‘ಎಂತರ ಬರೇಕಪ್ಪಾ’ ಹೇಳಿ ದೊಡಾ ಕನುಪ್ಯೂಸು. ಎಲ್ಲಾ ಅರಡಿಗಾದವಕ್ಕೆ ಈ ನಮುನೆ ಬಪ್ಪದು ಸಹಜ. ಅದಕ್ಕೆ ಅಜ್ಜಕಾನ ಬಾವ ಹೇಳಿದ°, ‘ನಿಂಗೊ ಮಂತ್ರಂಗಳ ಬಗ್ಗೆ ಶುರುಮಾಡಿ ಗಣೇಶಪ್ಪಚ್ಚಿ’.
ಹಾಂಗೆ ಕೆಲವೆಲ್ಲ ಮಂತ್ರಂಗಳ ಬಗ್ಗೆಯೋ, ಜ್ಯೋತಿಷ್ಯದ ಬಗ್ಗೆಯೋ, ಪೂಜೆ ಮಾಡ್ತ ವಿಧಾನದ ಬಗ್ಗೆಯೋ ಮತ್ತೊ ಶುದ್ದಿ ಹೇಳ್ತವಡ. ಅದರ ಒಟ್ಟಿಂಗೆ ಬೇರೆ ಶುದ್ದಿಗಳೂ ಹೇಳುಗು, ಅದು ಕುಶಾಲಿಂಗೆ!
ಸಂಸ್ಕೃತ ಮಂತ್ರಂಗಳ ಒಟ್ಟೊಟ್ಟಿಂಗೆ ಹವ್ಯಕ ಅರ್ತಂಗೊ- ಪ್ರಯೋಗಂಗೊ – ವಿವರಣೆಗೊ ಹೇಳ್ತಾ ಹೋವುತ್ತವು. ಇವರ ಒಟ್ಟಿಂಗೆ ಬಟ್ಟಮಾವಂದೇ ಸೇರ್ತವಡ- ಪ್ರತಿತೆಗವಲೆ.ಅವು ಬರದ್ದರ ಓದಿ, ಮನನ ಮಾಡಿಗೊಂಬೊ°. ಮದೂರಿಲಿಯೋ, ಕೋಟೆಲಿಯೋ – ಮಣ್ಣ ವಸಂತ ವೇದಪಾಟಶಾಲೆಲಿ ಕಲ್ತ ಮಂತ್ರಂಗಳ ಮತ್ತೊಂದರಿ ನೆಂಪುಮಾಡಿಗೊಂಬ°.
ಅವು ಬರದ್ದರ ನಾಕು ಜೆನಕ್ಕೆ ಹೇಳಿ. ಅವಕ್ಕುದೇ ಒಪ್ಪ ಕೊಡಿ.
ಆತೋ?ಏ°?
ನನಗೆ ಓದಿ ತುಂಬಾ ಸಂ ತೋಷವಾಯಿತು
ಸ್ವಾಮಿ ಖುಷಿ ಆಗ್ಲಿಕ್ಕೆ ನಿಮಗೆ ಈ ಭಾಷೆ ಹೇಗೆ ಅರ್ಥ ಆಯಿತು?
ಆನು ಈ ಪಟಂಗಳ ಬೈಲಿಲಿ ತೋರ್ಸಿದ್ದು ಒಳ್ಳೇದಾತು..ಮಿಂಚಂಚೆ ಬಂದದರ ಪೂರ್ತಿ ನಂಬುಲಾಗ ಹೇಳಿ ಈಗ ಗೊಂತಾತು..ಎನಗೂ ಆ ಕಲ್ಲಿನ ರಥ ನೋಡಿಯಪ್ಪಗ ಸಂಶಯ ಬಂತು,,ಆದರೂ ನಮ್ಮ ಬೈಲಿಲಿ ಹಿರಿಯವು,ಅನುಭವಸ್ಥರು ಇದ್ದವನ್ನೆ,,ಅವು ಸ್ಪಷ್ಟತೆ ಕೊಡುಗು ಹೇಳಿ ಎನ್ನ ನಂಬಿಕೆ..ಸುವರ್ಣಿನಿ ಅಕ್ಕನ ಅಭಿಪ್ರಾಯ ಒಳ್ಳೆದಾಯಿದು…ಅವು ಹೇಳುವದರ್ಲ್ಲಿಯೂ ಸ್ಪಷ್ಟತೆ ಕಾಣ್ತು..ಬೈಲಿಲಿ ಆರಾದರೂ ಈ ಬಗ್ಗೆ ಸರಿಯಾದ ಸ್ಪಷ್ಟತೆ ಕೊಡುವಿರೋ?
ಗಣೇಶ ಭಾವ ನಾವಿದಾ ಹೀಂಗೆ ಒಟ್ಟು ಸೇರಿಯಪ್ಪಗಳೇ ನವಗೆ ಗೊಂಥಿಪ್ಪದರ ವಿಮರ್ಶೆ ಮಾಡ್ಲೆಡಿತ್ತಿದಾ!!
ಭಾವ ನಮ್ಮ ಗೊಕರ್ಣಲ್ಲಿ ಒಂದು ವಿಶೇಷವಾದ ಸ್ಥಳ ಇದ್ದು ! ನಿಂಗೋಗೆ ಗೊಂತಿಪ್ಪಲೂ ಸಾಕು; ರಾಮಾಯಣಲ್ಲಿ ನಡದ ಒಂದು ಕಥೆಯ ಜಾಗೆ ಇದ್ದು!ರಾವಣ ಜಟಾಯುವಿನ ರೆಕ್ಕೆ ಕಡುದು ಬಿದ್ದ ಜಾಗೆ !!!! ದೇವಸ್ಥಾನಂದ ನಡದು ಹೋಪ ದೂರ ಅಷ್ಟೇ ಇಪ್ಪದು !
ಅಪ್ಪು,ಜಟಾಯುತೀರ್ಥ ಹೇಳಿ ಇಪ್ಪದು..ಓಂ ಬೀಚಿಂಗೆ ಆನು ಹೋಪಗ ನೋಡಿದ್ದೆ..ಸಮುದ್ರಕ್ಕೆ ತಾಗಿಗೊಂಡು ಸಿಹಿ ನೀರು ಬಪ್ಪ ಜಾಗೆ..ಅದುವೇ ಅಲ್ದೋ?
ಓಹ್.. ಈ ವಿಷಯ ಎನಗೆ ಗೊಂತೇ ಇತ್ತಿಲ್ಲೆ 🙁 ಇನ್ನಾಣ ಸರ್ತಿ ಖಂಡಿತಾ ನೊಡೆಕು 🙂
{ಇನ್ನಾಣ ಸರ್ತಿ ಖಂಡಿತಾ ನೊಡೆಕು}
ಈ ಸರ್ತಿಯೇ ನೋಡಿಕ್ಕಲಾವುತಿತು, ಒಟ್ಟಿಂಗಿದ್ದೋರು ಕೋಪಮಾಡಿ ಮೋರೆ ತಿರುಗುಸದ್ದೆ ಇರ್ತಿತರೆ!! 😉
ಈ ಸರ್ತಿ ಹೊಗಿತ್ತಿದ್ದೆ ಗೊಕರ್ನಕ್ಕೆ. ಆದರೆ ಗಣೇಶ ಮಾವ ಹೇಳಿದ್ದವೇ ಇಲ್ಲೆ. ಒಟ್ಟಿಂಗೇ ಇದ್ದರೂ ಹೇಳಿದ್ದವಿಲ್ಲೇಳಿ….
ಈ ವಿಚಾರದ ಬಗ್ಗೆ ಆನು ಒಂದು ಟಿವಿ ಕಾರ್ಯಕ್ರಮ ನೋಡಿತ್ತಿದ್ದೆ. ಜಾಗೆ ನೋಡ್ಲೆ ಚೆಂದ ಇದ್ದು, ಅಲ್ಲದ್ದೆ ರಾಮಾಯಣದ ಇತಿಹಾಸ ಬೇರೆ !! ಅಲ್ಲಿಯಾಣ ಕೆಲವು ಜಾಗೆಗಳಲ್ಲಿ ಮಣ್ಣು ಕಲ್ಲು ಎಲ್ಲವೂ ಮಸಿ ಕಪ್ಪು, ಹನುಮಂತ ಸುಟ್ಟ ಕಾರಣ ಹೇಳಿ ಹೇಳ್ತವು. ಸೀತಾಮಾತೆಯ ಮಡುಗಿದ್ದ ಅಶೋಕಾವನವನ್ನೂ ಅದರ್ಲಿ ತೋರ್ಸಿತ್ತಿದ್ದವು, ಆ ಜಾಗೆಲಿ ಈಗಳೂ ಅಶೋಕ ಮರಂಗೊ ತುಂಬಾ ಇದ್ದಡ. ಆ ಜಾಗೆಲಿ ನಮ್ಮಲ್ಲಿ ಅಶ್ವತ್ಥ ಕಟ್ಟೆ ಕಟ್ಟಿದ ಹಾಂಗೆ ಕಾಣ್ತು, ಆದರೆ ತುಂಬಾ ಹಳತ್ತು. ಇನ್ನು ಅಲ್ಲಿ ಸಂಜೀವಿನಿ ಪರ್ವತದ ಕುರುಹು ಇದ್ದು ಹೇಳ್ತವು. ಯಾವುದೋ ಒಂದು ಬೆಟ್ಟಲ್ಲಿ ಸುಮಾರು ಔಷದೀಯ ಗಿಡಂಗೊ ಇದ್ದಡ. ರಾವಣನ ಅರಮನೆಯ ಜಾಗೆಯೂ ಇದ್ದು, ಆ ಜಾಗೆ ನೋಡುವಗ ಈಗ ಯಾವುದೇ ಕಟ್ಟಡ ಇಲ್ಲದ್ರೂ..ಅಲ್ಲಲ್ಲಿ ಕಲ್ಲಿನ ಅಡಿಪಾಯ ಇಪ್ಪಹಾಂಗೆ ಕಾಣ್ತು. ಸಮುದ್ರ ತೀರಲ್ಲಿ ಯುದ್ಧ ನಡದ ಜಾಗೆಯೂ ಇದ್ದು. ಆದರೆ ಆನು ಟಿವಿಲಿ ನೋಡಿದ ಪ್ರಕಾರ ನಿಂಗೊ ಇಲ್ಲಿ ಹಾಕೊದ ಪಟಂಗೊ ಅಲ್ಲಿಯಾಣದ್ದಲ್ಲ, ರಾಮಸೇತುದು ಬಿಟ್ಟು.
{ ಯುದ್ಧ ನಡದ ಜಾಗೆಯೂ ಇದ್ದು. ಆದರೆ ಆನು ಟಿವಿಲಿ ನೋಡಿದ ಪ್ರಕಾರ }
ಯಬ್ಬ!
ಯುದ್ಧ ನಿಂಗಳ ಟೀವಿಲಿ ಕಂಡತ್ತೋ ಅಂಬಗ?
ಕೊಳಚ್ಚಿಪ್ಪು ಬಾವಂಗೆ ಗೊಂತಾದರೆ ನಿಂಗಳ ಟೀವಿಗೆ ಕ್ರಯಮಾಡುಗು! 😉
ಹಹ್ಹಹ್ಹಹ್ಹ
ಈ ಸುಗ್ರೀವ ಗುಹೆ ಮತ್ತೆ ಅಕೇರಿಯಾಣ ಪಟ ಹಂಪೆದು (ಹಂಪೆಲಿ ಕಿಷ್ಕಿಂದ ಹೇಳಿ ಬೆಟ್ಟ ಇದ್ದು )…ಬಾಕಿ ಇಪ್ಪದೆಲ್ಲ ಶ್ರೀಲಂಕದ್ದು ಆದಿಕ್ಕು…ಮಿಂಚಂಚೆಲಿ ಸುಮಾರು ಜನ ಹೀಂಗೆ ಲೊಟ್ಟೆ ಚಿತ್ರ ಹಾಕಿ ಕಳ್ಸುತ್ತವು. ಎಲ್ಲದನ್ನೂ ನಾವು ನಂಬುಲೆ ಎಡಿಯ.
ಅಪ್ಪು ಕೊಳಚ್ಚಿಪ್ಪುಭಾವಾ, ಎಲ್ಲೊರುದೇ ನೇರ್ಪದ ಪಟಂಗೊ ಹಾಕವು.
ನಿನ್ನ ಹೆಸರಿನೊಟ್ಟಿಂಗೆ ಇಪ್ಪ ಪಟದ ನಮುನೆ!! 😉
ಮಾವಾ,ಈ ಪಟಂಗ ಶ್ರೀಲಂಕದ್ದು ಅಲ್ಲ ಹೇಳಿ ಎನ್ನ ಅಂದಾಜು.
ಕಡೇ ಪಟ ಹಂಪೆಯ ಕಲ್ಲಿನ ರಥ.ರಾಮಸೇತುವಿಂದು ನಿಜ.ಒಳುದ್ದು ಎಂತದು ಹೇಳಿ ರಜಾ ಹುಡುಕ್ಕುವ ಪ್ರಯತ್ನ ಮಾಡ್ತೆ.
ಹ್ಮ್ಮ್,ಆದಿಕ್ಕು… ಎನಗೆ ಬಂದ ಮಿಂಚಂಚೆ ಪ್ರಕಾರ ಹೀಂಗೆ ತೋರ್ಸುತ್ತಾ ಇದ್ದೆ..ಈ ಬಗ್ಗೆ ಎನಗೆ ಸ್ಪಷ್ಟ ದೃಡೀಕರಣ ಕೊಡುವಿರಾ?
ಅಪ್ಪು, ಅದು ಹಂಪೆಯ ಪಟ.
“ಸುಗ್ರೀವನ ಗುಹೆ (ಹೆರಾಣ ನೋಟ)..” ಮತ್ತೆ.. “ಸೀತೆಯ ರಾವಣ ಬಂಧನಲ್ಲಿ ಮಡುಗಿದ ಅಶೋಕವನ”
ಭಾವೊ೦… ಇದರಲ್ಲಿ ಎರಡುದೆ.. ಹಂಪೆಲಿಪ್ಪದು.. ಎದಾ.. ಈ ಸನ್ಕೊಲೆ ನೋಡಿ.. 😛
http://sites.google.com/site/manjunathkp2/hampi
ಹ,ಈಗ ಗೊಂತಾತು…ಅಪ್ಪು,ಸರಿ,,,
ಯೋ… ಅನು ಎ೦ತರ ನ೦ಬುಸು, ಬಿಡುಸು.. ಎ೦ತದುದೆ… ಗೊ೦ತಾವುತ್ತಿಲೆನೆಪ್ಪಾ..!!! 😀