- ಜೀವನಲ್ಲಿ ಮುಂದೆ ಬಪ್ಪಲೆ ಓಡುದರೊಟ್ಟಿಂಗೆ ಓದುದೂ ಮುಖ್ಯವೇ - July 9, 2014
- “ಯಕ್ಷತ್ರಿವೇಣಿ” - September 24, 2012
- ಬದಲಾಗದ್ದದು ಬದಲಾವಣೆ ಮಾಂತ್ರ ! - September 12, 2012
ಕಳದ ವಾರ ಆನು ನಾಪತ್ತೆ !! ಹೋದ್ದು ಊರಿಂಗೆ.. ಚೌತಿಗೆ 🙂 ಅದಾಗಿ ಒಂದು ದಿನ ಪರೀಕ್ಷೆ 🙁 ಮಧ್ಯಲ್ಲಿ ಒಂದು ದಿನ ಗೋಕರ್ಣ/ಅಶೋಕೆ ಗೆ ಹೋಗಿತ್ತಿದ್ದೆ 🙂 ಒಂದುವಾರ ರಜೆ ಇದ್ದರೂ ರೆಸ್ಟ್ ಮಾಡಿದ್ದಿಲ್ಲೆ, ತಿರುಗಾಟವೇ ಹೆಚ್ಚು.
ಇದೆಲ್ಲ ಕಳದು ಮನೆಗೆ ಎತ್ತಿಯಪ್ಪಗ ಶುರುವಾತು ಸಣ್ಣಕ್ಕೆ ಶೀತ ಜ್ವರ. ಡಾಕ್ಟ್ರಿಂಗೂ ಅನಾರೋಗ್ಯವಾ? ಎಂಗಳೂ ಮನುಷ್ಯರೇ ಅಲ್ಲದಾ? ವೈರಸ್ಸಿಂಗೆ ಗೊಂತಾವ್ತಾ ಡಾಕ್ಟ್ರು ಆರು ಹೇಳಿ 😉 !!!
ಶೀತ ಜ್ವರ ಬಂದದಪ್ಪು, ಆದರೆ ಪರಿಹಾರ ಎಂತರ? ಒಂದು ಮಾತು ನಿಂಗೊಗೆಲ್ಲಾ ಹೇಳ್ಲೆ ಇಷ್ಟಪಡ್ತೆ..ಎಂತಪ್ಪಾ ಹೇಳಿರೆ.. ಈ ಶೀತ ಜ್ವರ (common cold) ಹೇಳ್ತ ಸಮಸ್ಯೆ ಒಂದು ವೈರಸ್ಸಿಂದಾಗಿ ಬಪ್ಪದು ..ಆಶ್ಚರ್ಯಕರ ವಿಷಯ ಹೇಳಿರೆ..ಇಷ್ಟೊಂದು ಸಾಮಾನ್ಯವಾದ ಸಮಸ್ಯೆಗೆ.. ಯಾವುದೇ ಮದ್ದು ಇಲ್ಲೆ [ಈ ವೈರಸ್ಸಿನ ತಡವಲೆ ಮದ್ದು ಇಲ್ಲೆ ಹೇಳೀ ಆನು ಓದಿ ತಿಳ್ಕೊಂಡದು, ಬೈಲಿನೋರಿಂಗೆ ಗೊಂತಿದ್ದರೆ ಎನಗೆ ತಿಳುಶಿ]. ಒಂದು ಮಾತಿದ್ದು “ಶೀತ ಜ್ವರ ಶುರು ಆದರೆ, ಮದ್ದು ತೆಕ್ಕೊಳ್ಳದ್ದರೆ ಒಂದು ವಾರ ಬೇಕು ಕಮ್ಮಿ ಅಪ್ಪಲೆ, ಮದ್ದು ತೆಕ್ಕೊಂಡರೆ ಏಳೇ ದಿನಲ್ಲಿ ಕಮ್ಮಿ ಆವ್ತು” !! ಮದ್ದು ತೆಕ್ಕೊಂಡದ್ರಿಂದ ಹೆಚ್ಚಿನ ಪ್ರಯೋಜನ ಆಗ ಹೇಳಿ ಈ ಮಾತಿನ ಅರ್ಥ, ಆದರೆ ದಿನನಿತ್ಯದ ಕೆಲಸ ಮಾಡ್ಲೆ ತೊಂದರೆ ಕೊಡುವ ತಲೆಬೇನೆ, ಮೂಗಿಲ್ಲಿ ಸುರಿವ ಧಾರೆ !, ಸುಸ್ತು, ಸೆಮ್ಮ, ಹಶು ಇಲ್ಲದ್ದೆ ಅಪ್ಪದು ಇತ್ಯಾದಿ ತೊಂದರೆಗಳ ನಾವು ನಿರ್ಲಕ್ಷ್ಯ ಮಾಡಿರೆ ಈ ಏಳು ದಿನದ ಜೀವನ ತುಂಬಾ ಕಷ್ಟ ಅನ್ಸುತ್ತು ಅಲ್ಲದಾ…? ಹಾಂಗಾರೆ ಇದಕ್ಕೆಲ್ಲ ಪರಿಹಾರ ಎಂತರ? ಮಾತ್ರೆ ತೆಕ್ಕೊಂಬದು ಮಾಂತ್ರವೆಯಾ? ಅಲ್ಲ, ಇದಕ್ಕೆ ನಮ್ಮ ಮನೆಲಿ ನಾವು ಎಂತ ಮದ್ದು/ಪರಿಹಾರ ಮಾಡ್ಲಕ್ಕು ಹೇಳಿರೆ…..
(Steam inhalation) ಹಬೆ ತೆಕ್ಕೊಂಬದು:
ಒಂದು ಪಾತ್ರೆಲಿ ನೀರು ಕೊದುಶಿ ಅದಕ್ಕೆ ಬೇಕಾರೆ ನಾಲ್ಕು ತುಳಸಿ ಎಲೆ ಹಾಕಿ ಅಥವಾ ಅರಶಿನ ಹೊಡಿ ಹಾಕಿ, ಪಾತ್ರೆಯ ಮೇಲೆ ಬಗ್ಗಿ, ಹಬೆ ಮೋರೆಗೆ ಬಪ್ಪ ಹಾಂಗೆ,ಸುತ್ತಲೂ ಒಂದು ಬೈರಾಸಿನ ಮುಚ್ಚಿಗೊಂಡು, ಹಬೆಯ ಉಸಿರಾಟ ಮಾಡೆಕು, ಹೀಂಗೆ ದಿನಕ್ಕೆ ಎರಡು ಸರ್ತಿ ಮಾಡಿರೆ ಒಳ್ಳೆದು. ಇದರಿಂದ, ಕಫ,ನೆಗಡಿ ಕರಗುಲೆ ಒಳ್ಳೆದು, ಇದರಿಂದಾಗಿ ಸೆಮ್ಮ, ತಲೆಬೇನೆಯೂ ಕಮ್ಮಿ ಆವ್ತು. ಉಸಿರಾಟವೂ ಸುಲಭ ಆವ್ತು.
ಆಹಾರ:
- ಶರೀರಕ್ಕೆ ರೋಗಾಣುಗಳ ವಿರುದ್ಧ ಹೋರಾಡ್ಲೆ ಶಕ್ತಿ ಬೇಕಾವ್ತು..ಹಾಂಗಾಗಿ ನಾವು ತೆಕ್ಕೊಂಬ ಆಹಾರ ಜೀರ್ಣ ಅಪ್ಪಲೆ ಸುಲಭ ಇರೆಕು, ಒಟ್ಟಿಂಗೇ ಹೆಚ್ಚಿನ ಶಕ್ತಿ ಸಿಕ್ಕೆಕು [ಇದು ಒಂದು ಸಿದ್ಧಾಂತ] ಹಾಂಗಾಗಿ ಗಂಜಿ,ತೆಳಿ, ಇತ್ಯಾದಿ ತೆಕ್ಕೊಳ್ಳೆಕು.
- ಒಟ್ಟಿಂಗೇ ಹೆಚ್ಚು ಆಹಾರ ತೆಕ್ಕೊಂಬ ಬದಲು, ರಜ್ಜ ರಜ್ಜ ಆಹಾರವ ದಿನಕ್ಕೆ ೪-೫ ಸರ್ತಿ ತೆಕ್ಕೊಂಬಲಕ್ಕು.
- ಇದರೊಟ್ಟಿಂಗೆ ಬಾರ್ಲಿ ನೀರು ಕುಡುದರೆ ಒಳ್ಳೆದು.
- ಬೆಶಿ ಬೆಶಿ ನೀರು ಕುಡುದರೆ ಒಳ್ಳೆದು. ಹೆಚ್ಚು ದ್ರವಾಹಾರ ತೆಕ್ಕೊಳ್ಳೆಕು.
- ಕೇವಲ ದ್ರವಾಹಾರ ಮಾಂತ್ರ ಸೇವನೆ ಮಾಡಿರೆ ಇನ್ನೂ ಉತ್ತಮ.
- ಪ್ರಕೃತಿ ಚಿಕಿತ್ಸೆಯ ಪ್ರಕಾರ ಜ್ವರದ ಸಂದರ್ಭಲ್ಲಿ ಆಹಾರ ಸೇವನೆ ಮಾಡದ್ದರೆ ಒಳ್ಳೆದು. ಹೇಳಿರೆ ಉಪವಾಸ ಚಿಕಿತ್ಸೆ. ಇದು ನಿಜವಾಗಿಯೂ ಸಹಾಯ ಮಾಡ್ತು. ಆದರೆ ಇದರ ಮಾಡುದು ಕಷ್ಟ,ಉಪವಾಸ ಮಾಡ್ತರೆ ಪೂರ್ತಿ ದಿನ ರೆಸ್ಟ್ ತೆಕ್ಕೊಳ್ಳೆಕು, ನಮ್ಮ ಕೆಲಸ, ಶಾಲೆ ಇತ್ಯಾದಿ ಗೌಜಿಲಿ ನವಗೆ ರೆಸ್ಟ್ ಮಾಡ್ಲೆ ಸಮಯ ಸಿಕ್ಕುತ್ತಿಲ್ಲೆ.
ಮನೆಮದ್ದು:
- ಹಾಲಿಂಗೆ ಅರಶಿನ ಹೊಡಿ ಹಾಕಿ ಕುಡಿವ ಕ್ರಮವೂ ಇದ್ದು, ಅರಶಿನಲ್ಲಿ ವೈರಸ್ಸಿನೊಟ್ಟಿಂಗೆ ಹೋರಾಡುವ ಅಂಶ ಇದ್ದು.
- ಇನ್ನು ಕಟುಕರೋಹಿಣಿ ಹೇಳ್ತ ಮದ್ದಿನ ಕೊದುಶಿದ ನೀರಿಲ್ಲಿ ತಳದು ರಜ್ಜ ಬೆಶಿ ಮಾಡಿ ಮೋರೆಗೆ, ಹಣೆಗೆ ಕಿಟ್ಟಿರೆ ತಲೆಬೇನೆ, ಆ ಭಾಗಂಗಳಲ್ಲಿ ಗಟ್ಟಿ ಕಟ್ಟಿದ ಕಫ ಕರಗುಲೆ ಸಹಾಯ ಮಾಡ್ತು ಸಮುದ್ರಹಾಗಲಕಾಯಿಯನ್ನುದೇ ತಳದು ಕಿಟ್ಟಿರೆ ಆವ್ತು ಹೇಳಿ ಆನು ಕೇಳೀ ತಿಳ್ಕೊಂಡದು.
- ಕಿರಾತಕಡ್ಡಿ ಮತ್ತೆ ಅಮೃತ ಬಳ್ಳಿಗಳ ಕಷಾಯವೂ ಕುಡಿವಲಕ್ಕು.
- (ಇದರ ಬಗ್ಗೆ ಹೆಚ್ಚಿನ ಮಾಹಿತಿ ಸೌಮ್ಯ ಡಾಕ್ಟ್ರ ಹತ್ತರೆ ಕೇಳುವ, ಆಯುರ್ವೇದದ ಬಗ್ಗೆ ಎನಗೆ ಹೆಚ್ಚಿನ ಮಾಹಿತಿ ಇಲ್ಲೆ )
ತಣ್ಣೀರಿನ ಪಟ್ಟಿ:
- ಜ್ವರ 101 ಡಿಗ್ರಿಂದ ಹೆಚ್ಚಿದ್ದರೆ ತಣ್ಣೀರಿಲ್ಲಿ ಮುಳುಗ್ಸಿ ಕಾಟನ್ ವಸ್ತ್ರವ ಹಣೆಯ ಮೇಲೆ ಪಟ್ಟಿ ಹಾಕೆಕು, ಪ್ರತಿ 2-3 ನಿಮಿಷಕ್ಕೊಂದರಿ ಬದಲ್ಸೆಕು.
- ಒಟ್ಟಿಂಗೇ ತಣ್ಣೀರಿಲ್ಲಿ ಅದ್ದಿದ ವಸ್ತ್ರಂದ ಕೈ ಮತ್ತೆ ಕಾಲುಗಳ ಉದ್ದುಲಕ್ಕು, ಇದರಿಂದ ಹೆಚ್ಚಾದ ತಾಪಮಾನ ವ ಕಮ್ಮಿ ಮಾಡ್ಲಕ್ಕು. [ಹೆಚ್ಚು ಮೈ ಬೆಶಿ (104 ಡಿಗ್ರಿ)ಇದ್ದರೆ ಕೆಲವು ಸರ್ತಿ ಐಸ್ ನ ಕೂಡ ಕೈ ಕಾಲುಗೊಕ್ಕೆ ಉದ್ದುಲಕ್ಕು, ಆದರೆ ಇಂತಹ ಸಂದರ್ಭ ಇದ್ದರೆ ಮನೆಲಿ ಕೂಬ ಬದಲು ವೈದ್ಯರ ಕಾಂಬದು ಉತ್ತಮ]
ಯೋಗ ಚಿಕಿತ್ಸೆ:
- ಜಲನೇತಿ ಮತ್ತೆ ಸೂತ್ರನೇತಿಗಳ ಅಭ್ಯಾಸ ಮಾಡಿರೆ ಉಸಿರಾಟ ಸರಾಗ ಆವ್ತು. ಮೂಗಿನ ಒಳ ಗಟ್ಟಿಕಟ್ಟಿದ ಕಫವ ಹೆರ ಹಾಕುಲೆ ಸಹಾಯ ಮಾಡ್ತು.
- ಮೈ ಬೆಶಿ ಇದ್ದರೆ ಶೀತಲಿ ಪ್ರಾಣಾಯಾಮವ ಅಭ್ಯಾಸ ಮಾಡ್ಲಕ್ಕು. ಅಥವಾ ಚಂದ್ರಾನುಲೋಮವನ್ನೂ ಮಾಡ್ಲಕ್ಕು.
- ವಮನ ಧೌತಿ ಮಾಡುದರಿಂದ ಶ್ವಾಸಕೋಶಲ್ಲಿಪ್ಪ ಕಫ ಹೆರ ಬಪ್ಪಲೆ ಸಹಾಯ ಆವ್ತು. ಅಲ್ಲದ್ದೇ ಅಜೀರ್ಣ ಸಮಸ್ಯೆಗೂ ಪರಿಹಾರ ಸಿಕ್ಕುತ್ತು.
- ಯೋಗದ ಈ ಅಭ್ಯಾಸಂಗಳ ಬಗ್ಗೆ ಗೊಂತಿಪ್ಪೋರು/ಕಲ್ತವ್ವು ಅದರ ಅಭ್ಯಾಸ ಮಾಡ್ಲಕ್ಕು. ಬೈಲಿಲ್ಲಿಪ್ಪವಕ್ಕೆ ಆನು ಇದರ ಬಗ್ಗೆ ಹೆಚ್ಚಿನ ಮಾಹಿತಿ ಕೊಟ್ಟಿದಿಲ್ಲೆ,ಕ್ಷಮಿಸಿ. ಪ್ರತಿಯೊಂದನ್ನೂ ವಿವರ್ಸುಲೆ ಒಂದೊಂದು ದೊಡ್ಡ ಲೇಖನ ಬರೆಯಕ್ಕು !! ನಿಧಾನಕ್ಕೆ ಬರೆವ ಆಲೋಚನೆಲಿ ಇತ್ತಿದ್ದೆ 🙁
ಎಲ್ಲಕ್ಕಿಂತ ಮುಖ್ಯವಾಗಿ ವಿಶ್ರಾಂತಿ ಮಾಡಿರೆ ತುಂಬಾ ಒಳ್ಳೆದು 🙂
ಈ ಮೇಲೆ ಹೇಳಿದ ಎಲ್ಲ ಪರಿಹಾರಂಗಳನ್ನೂ ಆನು ಮಾಡ್ತೆ, ಎನ್ನ ಮನೆಯೋರುದೇ ಇದನ್ನೇ ಮಾಡ್ತವು. ಹಾಂಗಾಗಿ ಹೆಚ್ಚಿನ ಸಂದರ್ಭಲ್ಲಿ ಎಂಗೊಗೆ ಯಾವುದೇ ಮಾತ್ರೆಯ ತೆಕ್ಕೊಂಬ ಅವಶ್ಯಕತೆ ಬತ್ತಿಲ್ಲೆ. ವಿಶ್ರಾಂತಿ ತೆಕ್ಕೊಂಬಲೆ ಎಂಗೊಗೂ ರಜ್ಜ ಬಙವೇ !! ಆದರೆ, ಆಹಾರ, ಯೋಗ ಚಿಕಿತ್ಸೆ ಇತ್ಯಾದಿಗಳ ತಪ್ಪದ್ದೇ ಮಾಡ್ತೆಂಯ.
ಸಾಮಾನ್ಯ ಶೀತ ಜ್ವರ ಬಂದರೆ ತಲೆಬೆಶಿ ಮಾಡೆಕಾದ ಅಗತ್ಯ ಇಲ್ಲೆ. ಆದರೆ ನವಗೆ ಬಂದ ಜ್ವರ ಸಾಮಾನ್ಯ ಶೀತಜ್ವರವೇ ಅಪ್ಪು ಹೇಳುವ ವಿಷಯ ಮಾಂತ್ರ ಸ್ಪಷ್ಟ ಇರೆಕು, ಬೇರೆ ಯಾವುದೇ ರೀತಿಯ ಜ್ವರಂಗೊ ಬಪ್ಪ ಸಾಧ್ಯತೆಗೊ ಈಗಾಣ ದಿನಂಗಳಲ್ಲಿ ಹೆಚ್ಚು. ಹಾಂಗಿಪ್ಪ ಸಂದರ್ಭಲ್ಲಿ ಮನೆಮದ್ದು ಇತ್ಯಾದಿಗಳ ಪ್ರಯೋಗ ಮಾಡದ್ದೆ ವೈದ್ಯರ ಕಾಂಬಲೆ ಹೋಪದು ಬುದ್ಧಿವಂತರ ಕೆಲಸ. ಹಾಂಗೆಯೇ ಅನಗತ್ಯ ಮದ್ದು ತಿನ್ನದ್ದೆ ಇಪ್ಪದುದೇ ಬುದ್ಧಿವಂತರ ಲಕ್ಷಣ !!
Sheetha, jwara bandare hopale 7 dina bekaavuthu.Maddu maadidare 1 vaaralli guna avuthu.
ಅಜ್ಜಿ ಹಿತ್ತಿಲಿಲ್ಲಿ ಅಮೃತ ಬಳ್ಳಿ, ಸಾಂಬ್ರಾಣಿ, ಎರಟಿ ಮದುರ, ಕೈಬೇವು ಇಲ್ಲೆಯಾ?
ಸುವರುಣೋ… ಒಳ್ಳೆದಾತು ನೀನು ಇದರೆಲ್ಲ ಬರದ್ದದು…
ಆನುದೇ ಶೀತಕ್ಕೆ ಹಾಲಿಂಗೆ ಅರಿಶಿನ ಹೊಡಿ ಹಾಕಿ ಕುಡಿತ್ತದು…
ಗೆಣಮೆಣಸು, ತೊಳಶಿ, ಶುಂಟಿ, ರೆಜಾ ಬೆಲ್ಲ, ಆಡುಸೋಗೆ, ಕಿರಾತಕಡ್ಡಿ ಎಲ್ಲ ಹಾಕಿ ಕಶಾಯ ಮಾಡಿ ಕುಡುದರೆ ಸೆಮ್ಮ, ಶೀತ ಎಲ್ಲದಕ್ಕೂ ಆವುತ್ತು… ಮತ್ತೆ ಶೀತ ಆದಿಪ್ಪಾಗ ತೆಂಗಿನೆಣ್ಣೆಗೆ ಗೆಣಮೆಣಸು ಗುದ್ದಿ ಹಾಕಿ, ರೆಜಾ ಅರಿಶಿನವುದೇ ಹಾಕಿ, ಬೆಶಿ ಮಾಡಿ ನೆತ್ತಿಗೆ ಹಾಕೆಕ್ಕು…
ಎಲ್ಲೋರಿಂಗೂ ಧನ್ಯವಾದಂಗೊ 🙂
ಕಳುದ ವಾರ ಆನು ನಾಪತ್ತೆ
ಈ ವಾರ ಆದೆ ನಾ ಪತ್ತೆ
ಡಾಗುಟ್ರಕ್ಕಾ,
ಧನ್ಯವಾದಂಗೋ.ಒಳ್ಳೆ ಲೇಖನ.
ಜೊರ ಶೀತದ ತಾಪತ್ರೆ,
ಹೋಪದು ಸೀತ ಆಸ್ಪತ್ರೆ!! 😉
ಓಹೊ…!! ಹಾ೦ಗೆಲ್ಲಾ ಇದ್ದಲ್ಲಾ ಅ೦ಬಗ… 😀 ಇನ್ನು.. ಹಬೆ ತೆಕ್ಕೊಂಡರಾತು… ಸುಲಾಬಲ್ಲಿ ಕಮ್ಮಿಮಾಡ್ಲಕ್ಕು…
{“…..ಒಂದು ವೈರಸ್ಸಿಂದಾಗಿ ಬಪ್ಪದು ..” }
ಹಾ.. ಆದರೆ.. ಸುವರ್ಣಿನೀ ಅಕ್ಕೊ.. ನವಗೆ ಶೀತ ಜ್ವರ ಬ೦ದರೆ ಹೀ೦ಗೆ ಮಾಡ್ಲಕ್ಕು… ಈ ಕ೦ಪುಟರ್ ಇ೦ಗೆ ವೈರಸ್ಸ ಬತ್ತಡ ಅಪ್ಪೊ ..??? ಅ೦ಬಗ ಎ೦ತ ಮಾಡುಸಪ್ಪಾ?? ಕ೦ಪುಟರ್ ಇ೦ಗೆ
ಹಬೆ ತೆಕ್ಕೊಂಬಲೆಡಿಗೊ?? ಉಮ್ಮಪ್ಪಾ… 😀
ಕಂಪುಟರಿಂಗೆ ವೈರಸ್ ಬಂದರೆ ಹಬೆ ಚಿಕಿತ್ಸೆ ಅಲ್ಲ, ಒಂದು ಘಂಟೆ ತಣ್ನೀರಿಲಿ ಅದ್ದಿ ಮಡುಗಿರೆ ಗುಣ ಅಕ್ಕು.
ಹೊ..!! ನಿ೦ಗೊ.. ಹಾ೦ಗೆಮಾಡುಸ್ಸೊ?? ಒಳ್ಳೆ ಉಪಾಯ…. ಆದರೆ… ನೀರಿಲಿ ಹಾಕಿರೆ.. ಶೀತಹಿಡಿಗನ್ನೆ… ಎನ್ತ್ಸೊಪಾ… ಮತ್ತೆ ಅಕ್ಕ ಹೇಳಿದಹಾ೦ಗೆ… ಬೆಶಿನೀರಿಲ್ಲಿ ಹಾಕಿರೆ ಅಕ್ಕೊ ಹೇಳಿ ಎ೦ತ ಕರ್ಮಾ…?? ಅಲ್ಲಾ ತಣ್ಣಿರಕ್ಕೊ?? ಉಮ್ಮಪ್ಪಾ… 😀
ಎಲ .. ಸುರ್ಪ ನೋಡಿ ನಿಘಂಟಾತು.ಒಳ್ಳೆ ಹೆಸರೇ.
ಕಿಸುದ್ದು ಲಾಯಿಕ್ಕಾಯಿದು.ಕತ್ತಲೆಲಿ ನೋಡಿರೆ ರಾಜಕುಮಾರನೆ.
ಇದು ಕಂಪುಟರಿನೊಟ್ಟಿ೦ಗೆ ನಿಂಗಳನ್ನೂ ಐಸ್ ನೀರಿಲಿ ಕೂರುಸಿರೆ ಎರಡೂ ಸರಿ ಅಕ್ಕು !!
ರಘು ಅನ್ನೋ ಎಂತ ಹೇಳೋದು ನೀನು !,ಈಗಲೇ ಆ ಬೋಸ ಹೀನ್ಗೆಲ್ಲ ಮಾತಾಡಿ ಆರೋ ಅದ ಅವನ ಮುಸುಡಿನ್ಗೆ ಗುದ್ದಿದ್ದವದ!! ನೋಡಿ ಮೂಗಿಂಗೆ ಮದಿಗಿದ್ದರಲ್ಲಿ ನೆತ್ಹರು ರಟ್ಟಿದ್ದು!!
ಹಲ್ಲೂ ರತ್ತಿತ್ಹೋ ಹೇಳಿ ಸಂಶಯ !!!
ಅದು ಎನ್ನತ್ರೆ ಪೆದಂಬು ಮಾತಾಡಿಪ್ಪಗ ಹಾಂಗಾದ್ದು. 🙁
ನೆಗೆಗಾರ° ಬಡಾಯಿ ಬಿಡುಸು..
ರಾಜಾರಾಮ ಅಣ್ಣೊ… ಎನಗೆ ಆರು ಗುದ್ದಿದಲ್ಲ ಆತ…!!! ಅದು ಅನು… ಒ೦ದರಿ ಬೆ೦ಗಳೂರಿಲಿಪ್ಪಾ ದೊಡಪ್ಪಾನ ಮನೆಗೆ ಹೊಗಿಪ್ಪಗ….. ಶೊಕೆಸಿಲ್ಲಿ ಮಡುಗಿದ್ದ ಸೇಬು ಹೇಳಿ.. ಪ್ಲಾಸ್ಟಿಕ್ ಹಣ್ಣು ತಿ೦ದದು.. ಹಾ೦ಗೆ ತಿ೦ದಪ್ಪಗ.. ಹಲ್ಲತ್ತೆ ಮುರುದತ್ತು ಇದಾ… 😀
ಎನ್ನ ನೆಗೆ ನಿ೦ಗೊಗೆ ಕೊಶಿಯಾತೊ… ದನ್ಯವಾದಗಳು… “….ಕತ್ತಲೆಲಿ ನೋಡಿರೆ ರಾಜಕುಮಾರನೆ”
ಹೇಳಿದಿರಲ್ಲದೊ.. … ನಿ೦ಗೊಗೆ ಕತ್ತಲೆಲ್ಲಾ ಕಾ೦ತೊ?? ಯೋ….. ನಿ೦ಗೊ ಅಸಾದರಣ…
ಅಲ್ಲಾ… ಐಸ್ ನೀರು ಅಕ್ಕೊ? ಬೆಶಿ ನೀರೊ?? ಐಸ್ ನೀರ್ ಲಿ ಎನಗೆ ಚಳಿ ಅಕ್ಕು… ಎನ್ನ೦ದೆಡಿಯಾಪಾ… 😀
ಯೇ ರಘುಭಾವಾ..
{ಒಂದು ಘಂಟೆ ತಣ್ನೀರಿಲಿ ಅದ್ದಿ ಮಡುಗಿರೆ ಗುಣ ಅಕ್ಕು}
– ಗುಣ ಅಕ್ಕು, ಆರಿಂಗೆ? ಕಂಪ್ಯೂಟ್ರು ಅಂಗುಡಿಯವಂಗಲ್ಲದೋ? 😉
ಹಾಂಗೆಲ್ಲ ಒಗಟು ಮಾಡಿ ಹೇಳೆಡಿ, ಮತ್ತೆ ಈ ಬೈಲಿಂಗೆ ಬಪ್ಪಲೆ ಕಂಪ್ಲೀಟರು ಇರ, ದಾರಿ ಸಿಕ್ಕ!! 🙁
ಬೈಲಿಲ್ಲಿ ಆರಾರು ಗಣಕಯಂತ್ರದ ವೈದ್ಯರು ಇದ್ದರೆ ನಮ್ಮ ಬೋಸಣ್ಣನ ಸಮಸ್ಯೆಗೆ ಪರಿಹಾರ ಕೊಟ್ಟಿಕ್ಕಿ 🙂
ಪೆರ್ಲದಣ್ಣಂಗೆ ಜೊರ, ಜೋರಿದ್ದು.
ಅಲ್ಲದ್ರೆ ಅವ° ಹೇಳದ್ದೆ ಇರ್ತಿತ°ಯಿಲ್ಲೆ!! 🙁
Good.
ಸುವರ್ನನೀ ಅಕ್ಕ ನಿಂಗಳ ಜ್ವರಕ್ಕೆ ಸುಲಭ ಪರಿಹಾರ ವ ಓದಿ ಬಹಳ ಖೋಷಿ ಆತು !! ಹೀಂಗಿಪ್ಪ ಚುಟುಕು ಪರಿಹಾರಂಗಳ ಇನ್ನೂ ಹೆಚ್ಚು ಇಲ್ಲಿ ಬಯಲಿಲಿ ಇಪ್ಪ ಎಲ್ಲೋರು ಬಯಸುತ್ತಿಕ್ಕು ಹೇಳಿ ಗ್ರೆಹಿಸುತ್ತೆ !! ಅಲ್ಲಾ ದಾಕುಟ್ರಕ್ಕ ಇಲ್ಲಿ ಒಂದರಿ ಎನ್ನ ಮಗಳಿಂಗೆ ಜೋರು ಜ್ವರ ಬಂದು ಆಸ್ಪತ್ರೆ ಲಿ ಇಪ್ಪ ಎಮೆರ್ಜೆನ್ಸಿ ವಿಭಾಗಕ್ಕೆ ಕರಕ್ಕೊಂಡು ಹೋದಪ್ಪಗ ಅಲ್ಲಿಯಾಣ ಡಾಕ್ಟ್ರು ಐಸ್ ಹಾಕಿದ ನೀರಿಲಿ (ತುಂಬಾ ತಂಪಾದ ) ಮಗಳ ಮೀಶಿದವು !! ಹೀನ್ಗೂ ಮಾಡುವ ಕ್ರಮ ಇದ್ದಾಯಿಕ್ಕಲ್ಲದ ?
ಅಕ್ಕನ ಹೀಂಗಿಪ್ಪ ಉಪಯೋಗಪ್ರದ ವಾದ ಲೇಖನಂಗಳ ಮುಂದೆಯೂ ಬಯಸುವ ಹಿತೈಷಿ
ನಿಂಗಳ ಕಣ್ಣಿಂಗೆಂತರ ಕರಿ ಹಿಡುದ್ದು?
ತುಂಬಾ ತಂಪಾದ ನೀರಿಲಿ ಒಂದರಿ ತೊಳದಿಕ್ಕಿ, ಹೋವುತ್ತೋ ಏನೋ!!
ಏ ಪುಟ್ಟು ಕುನ್ಹ್ಯೇ ಇದಾ ಅದು ಹಾಂಗೆಲ್ಲ ಹೋಗ ! ನೀನು ದೊಡ್ಡಪ್ಪಗ ಹೀನ್ಗಿಪ್ಪದೆಲ್ಲ ಹಾಕೆಕ್ಕತೋ !!
ಅಮ್ಬಗ ನಿನ್ನ ಕಣ್ಣೂ ಮೋರೆಯ ಹಾಂಗೆ ಚೆಂದ ಇಕ್ಕು !!
ಅರಶಿನ ಒಂದು ಥೆರಪ್ಯುಟಿಕ್ ಹೇಳಿ ಶಾಸ್ತ್ರೀಯವಾಗಿ ಹೇಳಿಪ್ಪದು, ಮತ್ತೆ ಇದರ ಉಪಯೋಗ ವ್ಯಾಪಕವಾಗಿ ಇಪ್ಪದು ಸರ್ವ ವಿದಿತ. ಆದರೆ ಇತ್ತೀಚಗೆ ಬೆಂಗಳೂರಿನ ಟಾಟಾ ಇನ್ಸ್ಟಿಟ್ಯುಟ್ ಇಂದ ಮತ್ತೆ ಅಮೆರಿಕದ ಒಂದು ಪ್ರಯೋಗಾಲಯಂದ ತಲೆತಿರುಗುಸುವ ಅಂಶನ್ಗೋ ಹೆರ ಬಯಿಂದು. ಅದರ ಪ್ರಕಾರ ಅರಶಿನ ಒಂದು ಪ್ರಕಾರದ ವೈರಸ್ಗಳ ತಡೆಗಟ್ತಿರೆ ಮತ್ತೊಂದರ ತೊಂದರಗೆ ದಾರಿ ಮಾಡ್ತು ಹೇಳಿ ಹೇಳಿದ್ದವು. ಮತ್ತೊಂದು ವಿಚಾರ – ಮಾಣಿಗೊಕ್ಕೆ ಅರಿಶಿನ ವಿರ್ಯಾಣು ನಾಶಕ ಹೇಳ್ತ ಇನ್ನೊಂದು ಅಂಶ ಸತ್ಯ. ಹಾಂಗಾಗಿ ಬೈಲಿನ ಮಾಣಿಗೊಕ್ಕೆ ಅರಿಶಿನ ಉಪಯೋಗ ಅತಿಯಾಗಿ ಬೇಡ ಹೇಳಿ ಎನ್ನ ಕಿವಿಮಾತು.
ಓಹ್..ಬೇರೆ ತೊಂದರೆಗಳ ಉಂಟುಮಾಡ್ತು ಹೇಳ್ತ ವಿಷಯ ಎನಗೆ ಗೊಂತಿತ್ತಿಲ್ಲೆ. ನೋಡ್ತೆ. ಅರಶಿನದ ಮತ್ತೆ ಕ್ಯಾನ್ಸರ್ ನ ಬಗ್ಗೆ ಸಂಶೋಧನೆಗೊ ನಡೆತ್ತಾ ಇಪ್ಪದರ ಬಗ್ಗೆ ಗೊಂತಿದ್ದು. ಆದರೆ…ಮುರಳಿ ಅಣ್ಣ…ವೀರ್ಯಾಣುಗಳ ಸಂಖ್ಯೆ ಕಮ್ಮಿ ಮಾಡ್ತು ಹೇಳ್ತ ವಿಷಯದ ಬಗ್ಗೆ ಎನಗೆ ಸಂಶಯ ಇದ್ದು, ಇದರ ಬಗ್ಗೆ ಎಲ್ಲಿ ಮಾಹಿತಿ ಸಿಕ್ಕುಗು ಹೇಳ್ತೀರ?
ಆನು ಓದಿದ್ದರ ಕಿವಿ ಮಾತು ಹೇಳಿದೆ ಹೇಳಿ ಮಾಹಿತಿ ಕೇಳಿರೆ ಎನ್ನತ್ರೆ ರೆಡಿ ಇಲ್ಲೆ. ತತ್ಕಾಲಕ್ಕೆ ಕೊಳ್ಳೇಗಾಲ ಶರ್ಮ ೨೮ ಜುಲಾಯಿಲಿ ಬರದ ಕನ್ನಡ ಪ್ರಭದ ಲೇಖನ ಓದಿ. ಆನು ಚೂರು ಫ್ರಿ ಅಪ್ಪಗ ಹೆಚ್ಚಿನ ಮಾಹಿತಿ ಸಿಕ್ಕಿರೆ ಹೇಳುಲೇ ಅಡ್ಡಿ ಇಲ್ಲೆ.
ಓಕೆ ಓಕೆ 🙂
ಓಕೆ = ಓದಿದ್ದು ಕೇಳಿದ್ದು? 😉
ಜ್ವರದ ಬಗ್ಗೆ ಲೇಖನ ಲಾಯಿಕ ಆಯಿದು..ತಣ್ಣೀರಿನ ಪಟ್ಟಿ ಆನು ಸಣ್ಣಕಿಪ್ಪಗ ಅಮ್ಮ ಎನಗೆ ಜ್ವರ ಬಂದಿಪ್ಪಗ ಪಟ್ಟಿ ಕಟ್ಟಿದ್ದು ನೆಮ್ಪಾತು ..ಈಗ ಹೀಂಗಿಪ್ಪ ಚಿಕಿತ್ಸೆ ಪಡೆಯದ್ದೆ ಸುಮಾರು ೧೫ ವರ್ಷ ಅಪ್ಪಲಾತು.ಅಂತೂ ನಿಂಗಳ ಲೇಖನ ಎನ್ನ ಒಂದರಿ ಬಾಲ್ಯದ ನೆಂಪು ಮಾಡಿತ್ತು..ಉತ್ತಮ ಸಲಹೆಗೊಕ್ಕೆ ಧನ್ಯವಾದಂಗ…
ಜ್ವರದ ಬಗ್ಗೆ ಒಳ್ಳೆ ಲೇಖನ. ಸಣ್ಣ ಮಟ್ಟಿನ ಶೀತಕ್ಕೆ ಬೆಶಿ ಹಾಲಿಂಗೆ ಅರಸಿನ ಹಾಕಿ ಕುಡುದರೆ releif ಸಿಕ್ಕುತ್ತು ಹೇಳುವದು ಎನ್ನ ಅನುಭವ. ಹಾಂಗೇ ಒಳ್ಳೆ ಮೆಣಸಿನ ಕಶಾಯ ಕೂಡಾ ಪ್ರಯೋಜನ ಆವುತ್ತು. ಈಗ ಹಲವಾರು ನಮೂನೆಯ ಜ್ವರಂಗೊ ಇದ್ದ ಕಾರಣ ಇದರ ಬಗ್ಗೆ ಉದಾಸೀನ ಒಳ್ಲೆದಲ್ಲ ಹೇಳ್ತ ಎಚ್ಚರಿಕೆ ಕೂಡಾ ಕೊಟ್ಟದು ಒಳ್ಳೆದಾತು.
{ ಮೆಣಸಿನ ಕಶಾಯ ಕೂಡಾ ಪ್ರಯೋಜನ ಆವುತ್ತು}
ಅಜ್ಜಕಾನಬಾವ ಬಿಂಗಿ ಮಾಡುವಗ ಕುಡಿಶೆಕ್ಕು ಒಂದರಿ.
ಅವನ ಬಿಂಗಿಜ್ವರ ಪೂರ ಬಿಡುಸೆಕ್ಕು!!;-)
ಒಂದು ಗಮನಿಸೆಕ್ಕಾದ ವಿಶಯ ಎಂತ ಹೇಳಿರೆ ಎಲ್ಲವೂ ಬರೀ ಶೀತ ಆಗಿರ್ತಿಲ್ಲೆ.ಶೀತ ಒಂದು ಚಿಹ್ನೆ ಮಾಂತ್ರ ಹೇಳುತ್ತದು.ಸರಿಯಾದವು ನೋಡಿ ಶೀತ ಹೇಳಿದ ಮೇಲೆ ಮದ್ದು ತೆಕ್ಕೊಳದ್ರೆ ತೊಂದರೆ ಇಲ್ಲೆ.
ಈಗಾಣ ಪರಿಸ್ತಿತಿಲಿ ಡೆಂಗುವಿಂದ ಹಿಡುದು ಎಚ್೧ಎನ್೧ ವರೆಗೂ ಮಾಮೂಲು ಶೀತದ ಹಾಂಗೇ ಸುರುವಕ್ಕು.ಹಾಂಗಾಗಿ ಡಾಕ್ಟ್ರ ಕಾಂಬದು ಅನಿವಾರ್ಯ.
ಶೀತವ ತಡವ ಇಂಜೆಕ್ಷನ್ ಇದ್ದು.ಆದರೆ ಸಮಸ್ಯೆ ಎಂತ ಹೇಳಿರೆ ಶೀತದ ವೈರಸ್ ಪ್ರತೀ ವರ್ಷ ಅಂಗಿ ಬದಲುಸಿಯೊಂಡು ಬತ್ತ ಕಾರಣ ಈ ವರ್ಷ ಸಿಕ್ಕುವ ಮದ್ದು ಕಳುದ ವರ್ಷದ ವೈರಸ್ಸಿಂದ ತಯಾರಪ್ಪ ಕಾರಣ ಎಷ್ಟು ಪ್ರಯೋಜನ ಅಕ್ಕು ಹೇಳುತ್ತದು ಕಷ್ಟವೇ.ಅಮೆರಿಕದ ಹಾಂಗಿಪ್ಪ ದೇಶಲ್ಲಿ ಈ ವೇಕ್ಸೀನ್ ಉಪಯೋಗಲ್ಲಿ ಇದ್ದು,ಅದಲ್ಲದ್ದೆ ನಮ್ಮ ದೇಶಲ್ಲಿ ಚೀನಲ್ಲಿ ಆದ ಹಾಂಗೆ ಈ ಕಾಯಿಲೆಂದ ಜೀವ ಹಾನಿ ಆವುತ್ತಿಲ್ಲೆ.
{ ಹಾಂಗಾಗಿ ಡಾಕ್ಟ್ರ ಕಾಂಬದು ಅನಿವಾರ್ಯ }
ಕೇಜಿಮಾವ°,
ಎನಗೊಂದು ಸಣ್ಣ ಕನುಪ್ಯೂಸು ಬಂದದು, ಇದರೆಡಕ್ಕಿಲಿ.
ನಿಂಗೊ ಶೀತ ಆದರೆ ಎಂತ ಮಾಡ್ತಿ? 😉
ಕುಶಾಲಿಂಗೆ ಕೇಳಿದ್ದು, ಬೈದಿಕ್ಕೆಡಿ, ಹಾಂ! 🙂
ಎಂಗೊಗೆ ಜ್ವರ ಬಂದರೆ ಇನ್ನೊಬ್ಬ ಡಾಕ್ಟ್ರ ನೋಡಿ ಪರೀಕ್ಷೆ ಮಾಡ್ಸಿಯೇ ಮುಂದುವರಿತ್ಸು.ಇದರಲ್ಲಿ ಬೈವ ವಿಶಯ ಎಂತೂ ಇಲ್ಲೆ ಅಳಿಯೊ.