ನಮ್ಮ ಅಜ್ಜಂದ್ರ ಕಾಲಲ್ಲಿ ಕೂಡು ಕುಟುಂಬoಗೋ ಇದಾ…ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಅಪ್ಪಚ್ಚಿ,ಅತ್ತೆ ,ಸಣ್ಣ ಸಣ್ಣ ಮಕ್ಕೋ.. …
ಎಲ್ಲಾರೂ ಒಂದೇ ಸರ್ತಿಗೆ ಮನೆ ಬಿಟ್ಟು ಎಲ್ಲಿಗಾರೂ ಹೋಪದು ಹೇಳಿ ಕ್ರಮ ಇಲ್ಲೆ ..ಆರಾರೂ ಒಬ್ಬ ಆದರೂ ಇಕ್ಕು ಮನೆಲಿ..ಕಳ್ಳರ ಹೆದರಿಕೆoದಾಗಿಯೋ ಏನೋ …ಮತ್ತೆ ತೋಟ,ದನ ಹೇಳಿ ಇತ್ತಿದ್ದು ಇದಾ ..ಈಗ ಎಲ್ಲಾ ಹಾಲು ಹೇಳಿರೆ ತೊಟ್ಟೆ ಹಾಲು..ಒಪ್ಪಣ್ಣ ಹೇಳಿದ ಹಾಂಗೆ..
ಅಂತೂ ಇಂತೂ ಆರಾರೂ ಒಬ್ಬ ಮೆನೆಲಿ ಇಕ್ಕು…ನೆಂಟ್ರ ಮನೆಗೆ ಬರೆಕ್ಕು ಹೇಳಿ ಇದ್ದರೆ ಎದ್ದುಗೊಂಡು ಬಂದರಾತು..ಬೆಲ್ಲ,ನೀರು ಅಥವಾ ಕಾಪಿ ಎಂತಾರು ಒಂದು ಸಿಕ್ಕುಗು.ಕಾಪಿಗೆ ಹೇಳಿಯೇ ಗಡ್ಡದ ಅಜ್ಜ ನ ಹಾಂಗಿಪ್ಪವು ಬಪ್ಪ ಕ್ರಮವೂ ಇತ್ತು …ಅದು ಬಿಡಿ…!!
ಈಗ ಎಲ್ಲೋರಿಂಗೂ ಅವರವರದ್ದೇ ಆಡಳಿತ ಆಯೆಕ್ಕು..ಕೂಡು ಕುಟುಂಬ ಹೇಳುವ ಕಲ್ಪನೆ ಹೋಗಿ 4/5 ಜನ ಇಪ್ಪ ಮನೆ ಹೇಳಿ ಆತು ..ಅದೇ ಕಾಲಲ್ಲಿ ಫೋನ್ ಹೇಳುದೂ ಚಾಲ್ತಿಗೆ ಬಂತು..ಕಾಲ ಮುಂದೆ ಹೋದ ಹಾಂಗೆ call rate ಗಳೂ ಕಮ್ಮಿ ಆತು ..ಈಗ ಒಬ್ಬೊಬ್ಬಂಗೆ ಒಂದೊಂದು ಮೊಬೈಲ್ ಬಂತು.
ಅಂತೂ ಈಗ ತೆರೆದಿದೆ ಮನೆ ಓ ..ಹೇಳಿ ಬಾ ಅತಿಥಿ …ಹೇಳಿ ಆಯಿದು .. ಪರಿಸ್ಥಿತಿ ..ಫೋನ್ ಮಾಡಿ ಬನ್ನಿ ಹೇಳಿ chaussure nike pas cher ಹೇಳಿಕೆ…ಆರಿಂಗೂ ಪುರ್ಸೋತ್ತಿಲ್ಲೇ ಇದಾ..ವೀಕೆಂಡ್ ಮಾತ್ರ ಪುರ್ಸೋತಿಪ್ಪದು .ಹೆಚ್ಚಿನವಕೂ… ಅದರಲ್ಲಿ ಎಂತರೂ ಪ್ರೊಗ್ರಾಮ್ ಗೊ..
ಅಂತೂ ಜೀವನ ಹೇಳುದು ಯಾಂತ್ರಿಕ ಹೇಳುವ ಹಾಂಗೆ ಆವ್ತಾ ಇದ್ದು ..
ಎಂತ ಹೇಳ್ತೀ …?!?
ಬರದೋರು : ಕಳಾಯಿ ಗೀತತ್ತೆ on 03/04/2010 5 ಒಪ್ಪಂಗೊ
5 thoughts on “ಕಾಲಕ್ಕೆ ತಕ್ಕ ಹಾಂಗೆ ಕೋಲವೋ ….!!!”
Comments are closed.
ಪೈಸೆಯ ಆಶೆಗೆ ಬಿದ್ದ ಕಾರಣವೋ ಏನೋ, ಪೇಟೆ ಜೀವನದ ಅತಿಯಾದ ಹಂಬಲವೂ ಕಾರಣ ಆದಿಕ್ಕು!!!.
ಹಳೆ ಬೇರು ಹೊಸ ಚಿಗುರು ಅಲ್ಲದಾ.. ವೆಂಕಟಣ್ಣ ….!!
Laika aaydu Geeta…Keep it up…ata..:):)
ಸರಿಯಾಗಿ ಹೇಳಿದ್ದಿರಿ ನಿಂಗ…
ಪರಿಸ್ಥಿತಿ ಹೀಂಗಾಗಿ ಹೋತನ್ನೇ ಹೇಳ್ತದೇ ಬೇಜಾರಿನ ವಿಷಯ…
ಕೆಪ್ಪಣ್ಣಂಗೆ ಬೇಜಾರೆಂತಕೆ???
ಕಾಲದನಡೆಗೆ(!!)
ಜೇಜಾರು ಮಾಡುವುದು ಬುಧ್ದಿವಂತರ ಲಕ್ಷಣವೇ??