Oppanna.com

ಬಲಿಪ್ಪಜ್ಜರ ದೇವಿಮಹಾತ್ಮೆ ಪ್ರಸಂಗ ಪುಸ್ತಕ ಆವುತ್ತಡ!

ಬರದೋರು :   ಶುದ್ದಿಕ್ಕಾರ°    on   17/04/2010    8 ಒಪ್ಪಂಗೊ

ಭಲ್ಲಿರೇನಯ್ಯಾ…!!!
ಬೈಲಿಂಗೊಂದು ಹೊಸ ಶುದ್ದಿ…! ತುಂಬಾ ತುಂಬಾ ಸಂತೋಷದ ಶುದ್ದಿ.!!
ಬಲಿಪ್ಪಜ್ಜನ ಗೊಂತಿದ್ದಲ್ಲದೋ – ಹಳೇ ಜಾನಪದ ಶೈಲಿಲಿ ಪದ ಹೇಳ್ತ ಹಿರಿಯ!
ನಮ್ಮ ಚೆನ್ನಬೆಟ್ಟಣ್ಣ ಅಂತೂ ಅವರ “ಯಕ್ಷಗಾನ ಬಾಗೊತಿಕೆಯ ಭೀಷ್ಮ!!” ಹೇಳಿಯೇ ಹೇಳ್ತ!
ಪರಂಪರೆ ಶೈಲಿಯ ಹಾಡುಗಾರಿಕೆ ಅಡ – ರಜವೂ ಆಧುನಿಕತೆ ಸೇರುಸದ್ದೆ, ಪಕ್ಕಾ ಜಾನಪದ ಶೈಲಿಲೇ ಹಾಡಿಗೊಂಡು ಬಂದದು ಅಡ ಅವು.
ಮಗುವಿನ ಮುಗ್ಧಮನಸ್ಸಿನ ಹಿರಿಯ ವೆಗ್ತಿ!
ಈ ಬಲಿಪ್ಪಜ್ಜರಿದ್ದವಲ್ಲದೋ – ಅವರಿಂದ ಮೊದಲು, ಅವರ (ಅಜ್ಜನಮನೆ)ಅಜ್ಜ ಇತ್ತಿದ್ದವಡ, ಅಜ್ಜಬಲಿಪ್ಪ ಹೇಳಿಗೊಂಡು ಇದ್ದಡ.
ಬಲಿಪ್ಪಜ್ಜನ ಅಜ್ಜ ಅಜ್ಜಬಲಿಪ್ಪ – ವೇಣೂರಣ್ಣ ಅಡ್ಡಹೆಸರು ಹಿಡುದು ಮಾತಾಡುಗು! 🙂
ಹ್ಮ್, ಹೇಳಿದಾಂಗೆ ವೇಣೂರಣ್ಣನ ಗೊಂತಿದ್ದಲ್ಲದೋ
– ಅದಾ, ಗಟ್ಟದ ಮೇಲೆ ದೊಡ್ಡಕೋಲೇಜಿಂಗೆ ಮಾಷ್ಟ್ರ ಆಗಿ ಇಪ್ಪೋರು – ಇಪ್ಪದು ಗಟ್ಟದ ಮೇಗೆ ಆದರೂ, ನೆರಿಯ ಬುಡ ಅಡ ಅವರದ್ದು, ಮದಲಿಂಗೆ ನಮ್ಮ ಬೈಲಿನೋರೇ!
ಅವು ಅಲ್ಲಿಗೆ ಹೋಗಿ ಕೂದರೂ, ನಮ್ಮ ನೀರಿಂದ ದೂರ ಹೋಯಿದಿಲ್ಲೆ.
ಊರಿಲಿಪ್ಪ ನಮ್ಮ ಬೈಲಿಂಗೆ ಒಳ್ಳೆತ ಸಂಪರ್ಕಲ್ಲಿ ಇದ್ದವು, ಬೆಂಗುಳೂರಿಲಿಪ್ಪ ಯಕ್ಷಗಾನಾಸಕ್ತರ ಗುಂಪಿಂಗೂ ಒಳ್ಳೆ ಸಂಪರ್ಕಲ್ಲಿದ್ದವು.!
ಗಟ್ಟದ ಮೇಲೆ, ನಮ್ಮ ಊರಿಲಿ, ಬೆಂಗುಳೂರಿಲಿ – ಎಲ್ಲದಿಕ್ಕುದೇ ಇದ್ದವು! ಎಲ್ಲಿ ಬೇಕಾರೂ ಇದ್ದವು!!
ಚೆನ್ನಬೆಟ್ಟಣ್ಣ, ರಾಜಣ್ಣ, ಚೆಂಬರುಪುಅಣ್ಣ – ಹೀಂಗಿರ್ತವರ ಸೇರಿಗೊಂಡು ಒಂದು ಒಳ್ಳೆಕೆಲಸ ಮಾಡ್ಳೆ ಹೆರಟಿದವು –
ಅದೆಂತರ?
ಬಲಿಪ್ಪಜ್ಜನ ಪರಂಪರೆಲಿ ಇರ್ತ ಐದು ದಿನದ “ದೇವಿಮಹಾತ್ಮೆ” ಪ್ರಸಂಗವ ಪುಸ್ತಕ ಮಾಡಿಗೊಂಡು ಇದ್ದವು.
ಸ್ಮೃತಿರೂಪಲ್ಲಿ ಇದ್ದದರ ಸಮಾಜಕ್ಕೆ ಸುಲಬಲ್ಲಿ ಸಿಕ್ಕಲೆ ಅಕ್ಷರ ರೂಪಕ್ಕೆ ಇಳುಸಿಗೊಂಡು ಇದ್ದವು. ಅನಂತಕಾಲ ಒಳಿತ್ತ ಕೆಲಸ ಇದು.
ಅಂದಿಂದ ಇಂದಿನ ಒರೆಂಗೆ ಬಲಿಪ್ಪಜ್ಜ ಒಳುಶಿದ್ದದೂ, ಇಂದಿಂದ ಮತ್ತೆ ಮುದ್ರಣರೂಪಲ್ಲಿ ಅನಂತ ಕಾಲ ಒಳಿವದುದೇ – ಎರಡುದೇ ಸಮಾಜ ಮೆಚ್ಚುವ ಕೆಲಸವೇ.
ಅಲ್ಲದೋ?
ನಮ್ಮ ಬೈಲಿನೋರು ಸಾಧನೆ ಮಾಡಿರೆ ನವಗೆ ಕೊಶಿಯೇ ಅಲ್ಲದೋ – ಎಂತ ಹೇಳ್ತಿ?
ನಾಳೆ, ಆಯಿತ್ಯವಾರ ಅವರಲ್ಲಿ ಕೃತಿಬಿಡುಗಡೆ ಕಾರ್ಯ ಇದ್ದಡ.
ಎಲ್ಲೊರು ಹೋಗಿ ಸೇರುವೊ, ಈ ಅಪರೂಪದ ದಾಖಲೆಯ ಒಂದು ಪ್ರತಿ ನಾವುದೇ ಮಡಿಕ್ಕೊಂಬ°!
ಬಲಿಪ್ಪಜ್ಜನ ಪ್ರತಿಭೆಯ ಒಳುಶುವೊ, ವೇಣೂರಣ್ಣನ – ಅವರ ಹಾಂಗಿರ್ತ ಯಕ್ಷಪ್ರೇಮಿಗಳ ಪ್ರಯತ್ನಕ್ಕೆ ಬೆನ್ನುತಟ್ಟುವೊ°,
ವೇಣೂರಣ್ಣನ ಸಂಪರ್ಕ Nike air max Pas Cherಆಯೆಕೋ?
ಇದಾ, ವಿವರಂಗೊ:
ಒಪ್ಪ ಹೆಸರು: ವೇಣೂರಣ್ಣ
ಇಪ್ಪ ಹೆಸರು : ಸುಬ್ರಹ್ಮಣ್ಯ ಭಟ್
ಪೋನ್ನಂಬ್ರ: 9448951856
ಮಿಂಚಂಚೆ: manyavenur@gmail.com
ಒಂದೊಂದು ಪ್ರತಿ ಎಲ್ಲಾ ಯಕ್ಷಪ್ರೇಮಿಗಳ ಮನೆಲಿ ಇರ್ತ ಹಾಂಗೆ ನೋಡಿಗೊಂಬ°.
ಎನಗೊಂದು ಪ್ರತಿ ಬೇಕು, ಅದಾಗಲೇ ವೇಣೂರಣ್ಣನ ಹತ್ರೆ ಹೇಳಿದ್ದೆ.
ನಿಂಗೊಗೂ ಬೇಕೋ – ಈಗಳೇ ಹೇಳಿ ಅವಂಗೆ, ಮತ್ತೆ ಮುಗುದರೆ ನಿಂಗೊಗೆ ಇಲ್ಲದ್ದೆ ಅಕ್ಕಿದಾ!

ನಮಸ್ಕಾರ!!

8 thoughts on “ಬಲಿಪ್ಪಜ್ಜರ ದೇವಿಮಹಾತ್ಮೆ ಪ್ರಸಂಗ ಪುಸ್ತಕ ಆವುತ್ತಡ!

  1. Dear Oppanna,
    Namma Kulakodlu Maheshannange, Ph.D; maadi aathu!!! Adu Mumbai ya IIT’li. Eega Awa Dr. Mahesh.
    Nammellara lekkali awange ondu Shubhashaya Patra oppannana hatranda barekanne oppanna!
    Best Wishes
    kuloor Subbanna, Mumbai

  2. BALIPPANA DEVIMAHATHME PRASANGA BIDUGADE SANTHOSHA ATHU. IDE REETHI OLLE PRASANGA BARADU KY BARAHALLI IPPA ITHARARA KRITHIGO BARALI

  3. ಬಲಿಪಜ್ಜ ಬರದ ಐದು ದಿನದ ಶ್ರೀದೇವಿ ಮಹಾತ್ಮೆ ಮಹಾಪ್ರಸಂಗ ಪುಸ್ತಕ ಬಿಡುಗಡೆ ಲಾಯಕ್ಕಕೆ ಕಳುದತ್ತು . ಪುಸ್ತಕ ಬೇಕಾದವು ಬಲಿಪಜ್ಜನ ಹತ್ತರೆ ಅಥವಾ ಎನ್ನ ಹತ್ತರೆ ತೆಕ್ಕೊಂಬಲಕ್ಕು. ಕ್ರಯ ಕೇವಲ ರೂ .200/-. ಬಪ್ಪ ತಿಂಗಳು ಒಂದನೇ ತಾರಿಕಿನ್ಗೆ ರಜೆ ಇಪ್ಪ ಕಾರಣ ಪುಸ್ತಕದ ಅಂಗಡಿಗೊಕ್ಕೆ ಆ ದಿನ ಪ್ರತಿಗಳ ಎತ್ತುಸುವ ಯೋಜನೆ ಇದ್ದು. ಆಸಕ್ತರು ಬಲಿಪಜ್ಜನ ಜೀವಮಾನದ ಈ ಸಾಧನೆಯ ಪುಸ್ತಕ ತೆಕ್ಕೊಂಬ ಮೂಲಕ ಪ್ರೋತ್ಸಾಹಿಸೆಕ್ಕು ಹೇಳಿ ಎನ್ನ ಕಳಕಳಿಯ ವಿನಂತಿ.
    manyavenur@gmail.com

  4. ಒಳ್ಳೆ ಸುದ್ದಿ, ಒಳ್ಳೆ ಕಾರ್ಯ, ಎನಗೂ ಒಂದು ಪುಸ್ತಕ ಇರಲಿ..

  5. ಒಳ್ಳೆಯ ಶುದ್ದಿ.ಎನಗೂ ಬೇಕು,ಹಾಂಗೇ ಎನ್ನ ಪುಸ್ತಕದ ಅಂಗಡಿಲಿ ಮಡುಗಿ ಮಾರಾಟ ಮಾಡ್ಲೂಅಕ್ಕದ.

  6. ನಿಜಾವಾಗಿಯೂ ತುಂಬಾ ಕೊಶಿ ಪಡುವ ಶುದ್ದಿ…!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×