Oppanna.com

ಹರಿಶ್ಚಂದ್ರನ ಫ್ಯಾಕ್ಟರಿಯ ಕತೆ

ಬರದೋರು :   ಕೊಳಚ್ಚಿಪ್ಪು ಬಾವ    on   03/05/2010    6 ಒಪ್ಪಂಗೊ

ಕೊಳಚ್ಚಿಪ್ಪು ಬಾವ

ದುಂಡಿರಾಜ ಗೋವಿಂದ ಫಾಲ್ಕೆಗೆ ಮದುವೆ ಆಗಿತ್ತು, ಮಕ್ಕೊ ಇತ್ತಿದ್ದವು ,ಸರಕಾರಿ ಕೆಲಸಲ್ಲಿ ಇತ್ತಿದ್ದ.
ಆದರೂ ಆ ಕೆಲಸಲ್ಲಿ ಮನಸಾಗದ್ದೆ ಅದರ ಬಿಟ್ಟು ಪ್ರಿಂಟಿಂಗ್ ಕೆಲಸ ಶುರು ಮಾಡ್ತ. ಚಿತ್ರಂಗಳ ಪ್ರಿಂಟ್ ಮಾಡ್ತ ಕೆಲಸಲ್ಲಿ ಗಟ್ಟಿಗ ಹೇಳ್ಸಿಕೊಳ್ತ. ಅವ ರಾಜ ರವಿವರ್ಮನ ಹತ್ರವೂ ಅವನ ಚಿತ್ರಂಗಳ ಪ್ರಿಂಟ್ ಮಾಡುವ ಕೆಲಸ ಮಾಡ್ತ.
ಆ ಕೆಲಸಕ್ಕೆ ಬೇಕಾದ ಹೊಸ ತಾಂತ್ರಿಕತೆ ಕಲಿವಲೆ ಜರ್ಮನಿಗೆ ಹೋವುತ್ತ. ಅಲ್ಲಿ ಪ್ರಿಂಟಿಂಗ್ ನ ಒಟ್ಟಿಂಗೆ ಜರ್ಮನಿಯ ಹೆಸರಾಂತ ಜಾದೂಗಾರನಲ್ಲಿ ಜಾದೂ ಕೂಡ ಕಲಿತ್ತ. ಅವಂಗೆ ಎಂತಾರು ಹೊಸತ್ತು ಕಂಡರೆ ಅದರ ಬಗ್ಗೆ ತಿಳಿವ ಕುತೂಹಲಂದಾಗಿ ತುಂಬಾ ಬೇರೆ ಬೇರೆ ವಿಷಯ ಕಲಿತ್ತ.
ಅವ 1911 ರಲ್ಲಿ ಭಾರತಕ್ಕೆ ವಾಪಸ್ ಬತ್ತ. ಬಂದಾದ ಮೇಲೆ ಅವನ ಪ್ರಿಂಟಿಂಗ್ ಪ್ರೆಸ್ಸಿನ ಪಾಲುದಾರರೊಟ್ಟಿಂಗೆ ಜಗಳ ಆಗಿ ಆ ಕೆಲಸಂದ ಹೆರ ಬತ್ತ.
ಬದುಕಲೆ ಅಲ್ಲಿ ಇಲ್ಲಿ ಜಾದೂ ಮಾಡ್ತಾ ಇರ್ತ. ಅವಂಗೆ ಒಬ್ಬ ಮಾರವಾಡಿ ಆನು ಪೈಸೆ ಕೊಡ್ತೆ, ನೀನು ಪ್ರೆಸ್ಸ್ ಶುರುಮಾಡು ಹೇಳಿರೂ ಕೇಳದ್ದೆ ಅವನ ಕೈಗೆ ಸಿಕ್ಕದ್ದೆ ತಿರುಗುತ್ತಾ ಇರ್ತ.
ಒಂದು ದಿನ ಹೀಂಗೆ ತಪ್ಪಿಸಿ ಓಡೆಕ್ಕಾರೆ ಅವ ಸಿನಿಮಾದ ಟೆಂಟಿನ ಹತ್ತರೆ ಬತ್ತ. ಕುತೂಹಲಕ್ಕೆ ಪೈಸೆ ಕೊಟ್ಟು ಒಳ ಹೋಗಿ ಕೂತರೆ.
ಕತ್ತಲೆಲಿ ಒಂದು ಕಿಂಡಿಲಿ ಬೆಳಕು ಬತ್ತಾ ಇರ್ತು, ಅದರಿಂದಾಗಿ ಚಿತ್ರಂಗೋ ನೆಡಕ್ಕೋಂಡು , ಓಡಿಯೊಂಡು ಇರ್ತವು,ಅವ ಮನೆಗೆ ಬಂದು ಹೆಂಡತಿಗೆ ಈ ವಿಷಯ ಹೇಳಿರೆ ಅದು ನಿಂಗೊಗೆ ಎಲ್ಲೊ ಮರ್ಲು ಹೇಳ್ತು.
ಅದರ ಮತ್ತೆ ಮಕ್ಕಳ ಮಾರನೇ ದಿನ ಟೆಂಟಿಂಗೆ ಕರಕ್ಕೊಂಡು ಹೋಗಿ “ನಡೆದಾಡುವ ಚಿತ್ರಂಗಳ (ಸಿನಿಮಾ) ತೋರ್ಸುತ್ತ. ಆ ದಿನದ ಸಿನಿಮಾ “ಏಸು ಕ್ರಿಸ್ತನ ಬದುಕಿನ ಕತೆ”.
ಅದರ ನೋಡಿ ಫಾಲ್ಕೆಗೆ ಏಸುವಿನ ಸಿನಿಮಾ ಮಾಡಿದಾಂಗೆ ನಮ್ಮ ರಾಮ, ಕೃಷ್ಣ ಮತ್ತೆ ಬಾಕಿ ದೇವರುಗಳ ಸಿನಿಮಾಏಕೆ ಮಾಡ್ಲೆಡಿಯ ಹೇಳ್ತ ಯೋಚನೆ ಬತ್ತು.
ಅದರ ಮೊದಲು ಸಿನಿಮಾದ ಬಗ್ಗೆ ಕಲಿವಲೆ ಪುಸ್ತಕ ಬೇಕನ್ನೆ ಮನೆಲಿಪ್ಪ ಕಪಾಟು ಮಾರಿ ಬಯೋಸ್ಕೋಪ್ ಹೇಳ್ತ ಪುಸ್ತಕ ತೆಕ್ಕೋಳ್ತ.
ಸುಮಾರು ದಿನ ಸತತ ಕೂತು ಸಿನಿಮಾ ನೋಡಿ ಅವನ ಕಣ್ಣಿನ ಬೇನೆ ಬತ್ತು. ಆದರೂ ಬಿಡದ್ದೆ ಅವನ ಇನ್ಸೂರೆನ್ಸಿನ ಅಡ ಇಟ್ಟು ಪೈಸೆ ತೆಕ್ಕೊಂಡು ಲಂಡನಿಂಗೆ ಹೋಗಿ ಸಿನಿಮಾದ ಬಗ್ಗೆ ಕಲ್ತು ಬತ್ತ.
ಸಿನಿಮಾ ಮಾಡುದು ಸರಿ, ಆದರೆ ಯಾವ ಕತೆ ಮಾಡುದು ಹೇಳಿ ಆಲೋಚನೆ ಮಾಡಿ – ಎಲ್ಲರಿಂಗೂ ಗೊಂತಿಪ್ಪ ಹರಿಶ್ಚಂದ್ರನ ಕತೆಯ ಸಿನಿಮಾ ರೂಪಕ್ಕೆ ತಪ್ಪಲೆ ತಯಾರು ಮಾಡ್ತ.

ಹರಿಶ್ಚಂದ್ರ ಚಿ ಫ್ಯಾಕ್ಟರಿ - ಸಿನೆಮದ ಭಿತ್ತಿಪತ್ರ
ಹರಿಶ್ಚಂದ್ರ ಚಿ ಫ್ಯಾಕ್ಟರಿ – ಸಿನೆಮದ ಭಿತ್ತಿಪತ್ರ

ಭಾರತಕ್ಕೆ ಬಂದ ಮೇಲೆ ಸಿನಿಮಾ ಮಾಡ್ಲೆ, ಪೈಸೆ ಸಿಕ್ಕದ್ದೇ ಅವನ ಹೆಂಡತಿಯ ಚಿನ್ನವ ಅಡ ಇಟ್ಟು ಪೈಸೆ ತತ್ತ.
ಅವ ಸಿನಿಮಾಲ್ಲಿ ವೇಷ ಹಾಕ್ಲೆ , ಅಭಿನಯ ಮಾಡ್ಲೆ ಜೆನ ಬೇಕು ಹೇಳಿ ಜಾಹಿರಾತು ಕೊಡ್ತ. ಆದರೆ ಆ ಕಾಲಕ್ಕೆ (1912 ರಲ್ಲಿ) ಸಿನಿಮಾಲ್ಲಿ ಅಭಿನಯ ಮಾಡ್ತವರ ಬಗ್ಗೆ ಸಮಾಜಲ್ಲಿ ಯಾರು ಗೌರವ ಕೊಡ್ತ ಇತ್ತಿದ್ದವಿಲ್ಲೆ.
(ಈಗ ಗಾಳಿಪಟದ ದಿಗಂತ ಹೇಳಿರೆ ಸಾಕು, ಕೋಲೇಜಿನ ಕೂಸುಗೊ ಪೂರ ಅವನ ಗುಣಗಾನ ಶುರು ಮಾಡ್ತವು!).
ಅವ ಸಿನಿಮಾಲ್ಲಿ ಹೆಣ್ಣಿನ ಅಭಿನಯಕ್ಕೆ ಕೂಸುಗೊ ಸಿಕ್ಕದ್ದೆ ನಾಟಕದ ಹುಡುಗರ ಹತ್ತರೆ ಹೆಣ್ಣಿನ ಅಭಿನಯ ಮಾಡುಸುತ್ತ. ದಾದ ಸಾಹೇಬ ಪಾಲ್ಕೆ (ಮರಾಠಿ ಭಾಷೆಲಿ ದಾದ ಹೇಳಿರೆ ದೊಡ್ಡಣ್ಣ ಹೇಳಿ ಅರ್ಥ) ಮಾಡುವ ಕೆಲಸಲ್ಲಿ ಎಲ್ಲವೂ ಸರಿ ಇರೆಕ್ಕು ಹೇಳುವ perferctionalist.
ಅವನ ಸಿನಿಮಾದ ಎಲ್ಲ ಕೆಲಸದವು ಉದಿಯಪ್ಪಗ ಬೇಗ ಎಳೆಕ್ಕು, ಎದ್ದು ವ್ಯಾಯಮ ಮಾಡಿ, ಒಟ್ಟಿಂಗೆ ಊಟ, ತಿಂಡಿ ಮಾಡಿಯೊಂಡು ಕೆಲಸ ಮಾಡೆಕ್ಕು.
ಯಾರು ಬೀಡಿ ಸಿಗ್ರೇಟು ಎಳವಲಾಗ, ಸರಾಯಿ ಕುಡಿವಲಾಗ ಹೇಳಿ ಒಪ್ಪಂದ ಮಾಡಿಯೊಂಡು ಕೆಲಸ ಕೊಡ್ತ ಇತ್ತಿದ್ದ.
ಆನು ಸಿನಿಮಾಲ್ಲಿ ಕೆಲಸ ಮಾಡುದಕ್ಕೆ ಯಾರು ಕೂಸು ಕೊಡ್ತಾ ಇಲ್ಲೆ ಹೇಳಿ ಒಬ್ಬ ನಟ ಹೇಳಿದ್ದಕ್ಕೆ , replica watches uk (“ಈಗ ಮನೆಲಿ ಕೃಷಿ ಮಾಡ್ತವಕ್ಕೆ ಕೂಸು ಸಿಕ್ಕುತ್ತಿಲ್ಲೆ/ಕೊಡ್ತವಿಲ್ಲೆ ಹೇಳಿ ಹೇಳ್ತವಲ್ಲ ,ಹಾಂಗೆ ಅವಗ ಸಿನಿಮಾದವಕ್ಕೆ ಕೂಸು ಕೊಡ್ತವಿತ್ತಿದ್ದಿಲ್ಲೆ ಅಲ್ಲದ ಭಾವ?”, ಹೇಳುದು ಒಪ್ಪಣ್ಣನ ಪ್ರಶ್ನೆ) ಎಲ್ಲರನ್ನು ದಿನಿಗೇಳಿ, “ನಿಂಗೋ ಸಿನಿಮಾಹೇಳಿ ಹೇಳೆಡಿ, ಫ಼್ಯಾಕ್ಟರಿಲಿ ಕೆಲಸ ಹೇಳಿ , ಹರಿಶ್ಚಂದ್ರನ ಫ಼್ಯಾಕ್ಟರಿಯ ಕೆಲಸ.” ಹೇಳಿ ಅವಕ್ಕೆ ಧೈರ್ಯ ಕೊಡ್ತ ಫಾಲ್ಕೆ.
ಹೇಂಗೆಲ್ಲಾ ಮಾಡಿ 1913ರಲ್ಲಿ “ರಾಜ ಹರಿಶ್ಚಂದ್ರ” ಹೇಳ್ತ ಸಿನಿಮಾ ಬಿಡುಗಡೆ ಮಾಡ್ತ.
ಅದರ ಮೊದಲ ಪ್ರದರ್ಶನಕ್ಕೆ ಜೆನವೇ ಇರ್ತಿಲ್ಲೆ. ಆದರೂ ಬೇಜಾರು ಮಾಡಿಯೊಳ್ಳದ್ದೆ ,ಅದರ ಬಗ್ಗೆ ಪ್ರಚಾರ ಮಾಡಿ ಜೆನ ಬಪ್ಪಂಗೆ ಮಾಡ್ತ.
ಜೆನ ಆ ಸಿನಿಮಾವ ಹುಚ್ಚುಗಟ್ಟಿ ನೋಡುವಷ್ಟು ಮರ್ಲು ಹಿಡಿಷುತ್ತ. ಅದಾದ ಮತ್ತೆ “ಮೋಹಿನಿ ಭಸ್ಮಾಸುರ”, “ಸತ್ಯವಾನ್ ಸಾವಿತ್ರಿ”,“ಲಂಕಾ ದಹನ”,”ಶ್ರೀ ಕೃಷ್ಣ ಜನ್ಮ” , ಹೀಂಗೆ ಹೊಸ ಹೊಸ ಚಿತ್ರ ತಯಾರಿ ಮಾಡ್ತ.
1932 ರಲ್ಲಿ ಫಾಲ್ಕೆಯ ಕೊನೆ ಮೂಕಿ ಚಿತ್ರ “ಸೇತು ಬಂಧನ” ಬಿಡುಗಡೆ ಮಾಡ್ತ. ಈ 19ವರ್ಷಲ್ಲಿ 100 ಸಿನಿಮಾ ಮಾಡ್ತ.
ಈ ರೀತಿ ಫಾಲ್ಕೆ ಹೆಂಡತಿಯ ಚಿನ್ನ ಮಾರಿ ಮಾಡಿದ ಸಿನಿಮಾಂದ ಶುರುವಾದ ಭಾರತದ ಸಿನಿಮಾ ಉದ್ಯಮ ಈಗ ವರ್ಷಲ್ಲಿ 900 ಕೋಟಿ ರುಪಾಯಿಯ ವ್ಯವಹಾರ ಮಾಡ್ತು.
ಈ ವಿಷ್ಯ ಯಾಕೆ ನೆಂಪಾತು ಹೇಳಿರೆ ಆನು ಮೊನ್ನೆ “ಹರಿಶ್ಚಂದ್ರಚಿ ಫ಼್ಯಾಕ್ಟರಿ” (ಹರಿಶ್ಚಂದ್ರನ ಫ಼್ಯಾಕ್ಟರಿ ) ಹೇಳ್ತ ಮರಾಠಿ ಸಿನಿಮಾ ನೋಡಿದೆ.
ಒಪ್ಪಣ್ಣಂಗೂ ನೋಡ್ಲೆ ಕೊಟ್ಟಿದೆ – ಎನಗೆ ಮರಾಠಿ ಬತ್ತಿಲ್ಲೆ. ಆ ಸಿನಿಮಾ ಇಂಗ್ಲಿಷ್ ಅನುವಾದದ ಒಟ್ಟಿಂಗೆ ಇತ್ತು.
ಆ ಸಿನಿಮಾಲ್ಲಿ ಫಾಲ್ಕೆ ಪಟ್ಟ ಕಷ್ಟವ ತಿಳಿ ಹಾಸ್ಯದ ಲೇಪಲ್ಲಿ ತೋರ್ಸಿದ್ದವು. ಆನು ಈವರೆಗೆ ನೋಡಿದ best rolex replica watch ಅತ್ಯುತ್ತಮ ಸಿನಿಮಾಗಳಲ್ಲಿ ಒಂದು.
ಹೊಸ ತಾಂತ್ರಿಕತೆಯಿಂದ ಹೊಸ ಹೊಸ ವಿಷಯ ಕಲ್ತು ಅದರ ಸಮಾಜಕ್ಕೆ ಒಳ್ಳೆ ರೀತಿಲಿ ಬಳಕೆ ಮಾಡ್ಲಕ್ಕು. ಹೇಳುದರ ಉದಾಹರಣೆಯೆ ಫಾಲ್ಕೆಯ ಈ ಕತೆ.moncler takit myynti
ಎಲ್ಲೊರುದೇ ನೋಡೆಕ್ಕಾದ ಒಳ್ಳೆ ಸಿನೆಮ ಇದು.

6 thoughts on “ಹರಿಶ್ಚಂದ್ರನ ಫ್ಯಾಕ್ಟರಿಯ ಕತೆ

  1. ಫಾಲ್ಕೆಯ ಚಿತ್ರ೦ಗೊ ಮೂಕ. ವಾಕ್ಚಿತ್ರ ಭಾರತಕ್ಕೆ ಪರಿಚಯ ಆದಾಗ ಫಾಲ್ಕೆಯ ಸಿನೆಮ ನೋಡುವವು ಕಡಮ್ಮೆ ಆದವು. ಗ೦ಗಾವತರಣ ಹೇಳ್ತ ಒ೦ದು ವಾಕ್ಚಿತ್ರ ನಿರ್ಮಾಣ ಮಾಡಿ ಈ ವೃತ್ತಿಗೆ ಕೊನೆ ಹಾಡ್ತ. ಅ೦ವ ಬೆಳೆಶಿದ ಒ೦ದು ಸ೦ಸ್ಕೃತಿಯ ಅವಸಾನ ಅಪ್ಪಲೆ ಕಾರಣ ಅವನ ಪ್ರೀತಿಪಾತ್ರ ಕೆಲಸಲ್ಲಿ ಆದ ಒಳ್ಳೆಯ ಬೆಳವಣಿಗೆಗೊ ಹೇಳ್ತದು ವಿಚಿತ್ರ.

  2. ವಿವರ ಓದಿ ಸಿನೆಮಾ ನೋಡುತ್ತ ಅಂದಾಜಿ ಮಾಡಿದ್ದು

  3. ಲೇಖನ ಲಾಯ್ಕಾಯಿದು. ಚೆ ಆ ಸಿನೆಮ ನೋಡೆಕ್ಕಾತನ್ನೆ…
    ಸಂಕೋಲೆ ಬೇಡ. ಈಗ ಸಿನೆಮ ಒಪ್ಪಣ್ಣನ ಕೈಲಿ ಇದ್ದನ್ನೆ. ಒಪ್ಪಣ್ಣಂಗೆ ನೋಡಿ ಆದ ಮತ್ತೆ ಎಲ್ಲೊರಿಂಗು ಕೊಟ್ಟೊಂಡು ಬರಳಿ. ಎಲ್ಲೊರು ನೋಡುವೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×