- ಯಕ್ಷ ಗೋವಿಂದನ ಅರ್ಥವೈಭವ.. - October 4, 2011
- ಪಾಠ ಪುಸ್ತಕಲ್ಲಿ 'ಪಳ್ಳತ್ತಡ್ಕ ಕೇಶವ ಮಾವ' - August 10, 2011
- ಮನಸ್ಸಿಂಗೆ ಮುದ ಕೊಡುವ ಯಕ್ಷಗಾನ ಸಿ.ಡಿ. "ಮುದ್ದಣ ಗೇಯ ಸೌಂದರ್ಯ" - May 24, 2011
ಪಳ್ಳತ್ತಡ್ಕ ಕೇಶವ ಮಾವ ದೊಡ್ಡ ಸಸ್ಯ ವಿಜ್ಞಾನಿ.
ನಮ್ಮ ನಡುವೆ ಬಾಳಿ ಬದುಕಿ ಪ್ರಾಕೃತಿಕ ಜೀವನ ಪದ್ಧತಿಯ ವಿಧಾನವ ಹೇಳಿಕೊಟ್ಟವು. ಹವ್ಯಕ ಸಮುದಾಯದ ಎಲ್ಲರೂ ಗರ್ವಪಡುವಷ್ಟು ಜೀವಮಾನ ಸಾಧನೆ ಮಾಡಿದವು.
ಅವರ ಕುರಿತು ಮಕ್ಕೊಗೆ ಪಾಠ ಪುಸ್ತಕಲ್ಲಿ ಒಂದು ಪಾಠವ ಕರ್ನಾಟಕ ಸರಕಾರ ಏಳನೇ ತರಗತಿಗೆ ಹೊಸದಾಗಿ ಬಿಡುಗಡೆ ಮಾಡಿದ ತೃತೀಯ ಭಾಷೆ ತುಳು ಪಾಠ ಪುಸ್ತಕ “ತುಳು ಎಸಲ್ -೨ “ ಹೇಳ್ತ ಪುಸ್ತಕಲ್ಲಿ ಪಳ್ಳತ್ತಡ್ಕ ಕೇಶವ ಮಾವನ ಜೀವನ ಸಾಧನೆ ಕುರಿತ ಒಂದು ಪಾಠವ ಮಡುಗಿದ್ದವು.
ನಾವು ಪ್ರಾಥಮಿಕ ಶಾಲೆಲಿಪ್ಪಗ ಗಾಂಧೀಜಿ , ಡಾ.ಬಿ.ಆರ್. ಅಂಬೇಡ್ಕರ್ ಬಗ್ಗೆ ಎಲ್ಲ ಬಾಷೆಗಳಲ್ಲೂ ಒಂದೊಂದು ಪಾಠವ ಮಡುಗಿ ಅವರ ಕಣ್ಣಿಲ್ಲಿ ನೋಡದ್ರೂ ಅವರ ಬಗ್ಗೆ ಸರಿಯಾಗಿ ತಿಳ್ಕೊಂಬ ಹಾಂಗೆ ಮಾಡಿದ್ದರೆ; ಈ ಸರ್ತಿ ನಾವು ಹೆಚ್ಚಿನವು ನೋಡಿದ, ಒಡನಾಡಿದ ಸರಳ ಧೀಮಂತ ವ್ಯಕ್ತಿಯೊಬ್ಬನ ಬಗ್ಗೆ ಸಕಾಲಲ್ಲಿ ಪಾಠ ಪುಸ್ತಕಲ್ಲಿ ಸೇರ್ಸಿ ನಮ್ಮ ಸುತ್ತಮುತ್ತವೇ ತುಂಬಾ ಜೆನ ಸಾಧಕರು ಇದ್ದವು ಹೇಳ್ತದ್ದರ ತಿಳಿಸಿ ಕೊಡುವ ಪ್ರಯತ್ನ ಮಾಡಿದ್ದು ನಿಜಕ್ಕೂ ನಾವೆಲ್ಲ ಹೆಮ್ಮೆ ಪಡೆಕ್ಕಾದ ವಿಷಯ.
ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ನೇತೃತ್ವದ ಪಾಠ ಪುಸ್ತಕ ಸಮಿತಿ “ತುಳು ಎಸಲ್-೨ ” ಪುಸ್ತಕಲ್ಲಿ ಅಚ್ಚುಕಟ್ಟಾಗಿ ಸರಳವಾಗಿ ಪಳ್ಳತ್ತಡ್ಕ ಕೇಶವ ಮಾವನ ಬಗ್ಗೆ ವಿವರ್ಸಿದ್ದವು .
ಡಾ.ಪಳ್ಳತ್ತಡ್ಕ ಕೇಶವ ಮಾವ ನಮ್ಮ ಅಗಲಿ ಒಂದು ವರ್ಷ ಆಗ್ಯೊಂಡು ಬಂತು. ಅಗೋಸ್ತು 13 ಕ್ಕೆ ಕೇಶವ ಮಾವನ ವರ್ಷಾಂತ.
ಅವರ ಸವಿನೆನಪಿಂಗೆ ಅವರ ಒಡನಾಡಿಗೋ ಎಲ್ಲ ಸೇರಿ ಬರದ ಸಂಸ್ಮರಣ ಸಂಪುಟ “ಸುರುಳಿ” ಯ ಬಿಡುಗಡೆ ಉಡುಪಿಯ ಎಂ.ಜಿ. ಎಂ. ಕಾಲೇಜಿನ ನೂತನ ರವೀಂದ್ರ ಮಂಟಪಲ್ಲಿ ಇದೇ ಅಗೋಸ್ತು ೧೧ಕ್ಕೆ ಮಧ್ಯಾಹ್ನ 3 ಗಂಟೆಗೆ ಲೋಕಾರ್ಪಣಗೊಳಿಸುವ ಕಾರ್ಯಕ್ರಮ ನಡವಲಿದ್ದು. ಇದರ ಒಟ್ಟಿ೦ಗೆ ಆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯ ಸಂಘಟಕರ ಪರವಾಗಿ ಕೊಡುತ್ತಾ ಇದ್ದೆ.
ಎಲ್ಲೋರೂ ಬಂದು ಭಾಗವಹಿಸೆಕ್ಕು ಹೇಳಿ ಡಾ.ಪಳ್ಳತ್ತಡ್ಕ ಕೇಶವ ಭಟ್ಟರ ಮಗಳು ಡಾ.ಸುಮಾ ಪಿ.ಭಟ್ ಪ್ರೀತಿಪೂರ್ವಕವಾಗಿ ಕೇಳಿಗೊಂಡಿದವು.
ಎಲ್ಲೋರು ಬನ್ನಿ ..
ಶುಭ ಹಾರೈಸಿ..
ಸೂ:
ಪಳ್ಳತ್ತಡ್ಕ ಕೇಶವಮಾವನ ಬಗ್ಗೆ ಬರದ ಪರಿಚಯ ಲೇಖನ ಇಲ್ಲಿದ್ದು:
https://oppanna.com/nammooru/pallathadka-keshava-bhat
—
Subrahmanya Bhat
Assistant Professor in E&EE Department,
Sri Dharmasthala Manjunatheshwara Institute of Technology,Ujire
Ujire-574240
http://www.feandft.com/Dr.%20Bhat.htm ಇಲ್ಲಿ ಇನ್ನುದೆ ರಜ್ಜ ಮಾಹಿತಿ ಸಿಕ್ಕುಗು ಹೇಳಿ ಕಾಣುತ್ತು…
ಶಾಲೆಲಿ ತುಳು ಪಾಠ ಶುರು ಆಯಿದೊ ಸುಬ್ಬಣ್ಣ? ಇದು ಒಳ್ಳೆ ಸ೦ಗತಿ. ಪಳ್ಳತ್ತಡ್ಕ ಕೇಶವ ಭಟ್ಟರ ಸರಳ ಪರಿಚಯ ಕೊಶಿ ಕೊಟ್ಟತ್ತು.’ಸುರುಳಿ’ ಬಿಡುಗಡೆ ಯಶಸ್ವಿಯಾಗಲಿ ಹೇಳಿ ಹಾರೈಕೆಗೊ.
ಒಳ್ಳೇ ಶುದ್ದಿ..ಸ೦ತೋಷ
ಆ ದಿವ್ಯ ಚೇತನಕ್ಕೆ ಅನಂತಾನಂತ ಪ್ರಣಾಮಂಗೊ
“ಸುರುಳಿ” ಬಿಡುಗಡೆಯ ಆಹ್ವಾನ ಪತ್ರಿಕೆ ಸಿಕ್ಕಿದ್ದು. ಬೈಲಿಲಿ ಹಾಕಿದ್ದಕ್ಕೆ ವೇಣೂರಣ್ಣಂಗೆ ಧನ್ಯವಾದ. ಈ ಪುಸ್ತಕ ಸಿಕ್ಕಿಕ್ಕಾರೆ ಆರ ಸಂಪರ್ಕಿಸೆಕ್ಕು..
ಸುರುಳಿ ಪುಸ್ತಕ ಮಂಗಳೂರಿನ ಸಾಹಿತ್ಯ ಕೇಂದ್ರಲ್ಲಿ ಸಿಕ್ಕುತ್ತು. ಗ್ರಂಥ ಕಾಣಿಕೆ ರೂ.240/-
ಧನ್ಯವಾದ೦ಗೊ………
🙂
ಪಳ್ಳತ್ತಡ್ಕ ಮಾವನ ಬಗ್ಗೆ ತುಳು ಪಠ್ಯಪುಸ್ತಕಲ್ಲಿ ಸೇರುಸಿದ್ದದು ನಿಜವಾಗಿಯು ನಮಗೆಲ್ಲ ಹೆಮ್ಮೆಯ ವಿಚಾರ. ತುಳುವಿಲ್ಲಿ ಚೆಂದಕೆ ಮಾವನ ಪರಿಚಯ ಮಾಡಿದ್ದವು. ನಿಜಾ ಹೇಳ್ತರೆ, ಕನ್ನಡ ಪುಸ್ತಕಲ್ಲೇ ಅವರ ಬಗ್ಗೆ ಕೊಡೆಕಾಗಿತ್ತು. ಹಾಂಗಿಪ್ಪ ವ್ಯಕ್ತಿತ್ವ ಅವರದ್ದು. ಸರಳ ಸಜ್ಜನ ಮೇಧಾವಿಗಳಾದ ಕೇಶವ ಭಟ್ಟರ ಜೀವನ ಶೈಲಿ ಅನುಕರಣೀಯ. ಒಪ್ಪ ಶುದ್ದಿಯ ಬೈಲಿಂಗೆ ಕೊಟ್ಟ ವೇಣೂರಣ್ಣಂಗೆ ಧನ್ಯವಾದಂಗೊ.
ಹವ್ಯಕರಿಗೆ ಸ೦ದ ಗೌರವ.
ಧನ್ಯವಾದಂಗೊ.
ಒಳ್ಳೆ ಶುದ್ದಿ. ಹೆಮ್ಮೆ ವಿಷಯವೂ.
ಸುರುಳಿ ಬಿಡುಗಡೆಯ ಆಹ್ವಾನ ಪತ್ರಿಕೆ ಕೈ ಸೇರಿದ್ದು ಕೂಡ.
ವೇಣೂರಣ್ಣಂಗೆ ಧನ್ಯವಾದ.