ಮಂಗಳೂರು ನಗರದ ಶಾರದಾ ಪದವಿ ಪೂರ್ವ ಕಾಲೇಜಿನ ಭೌತ ಶಾಸ್ತ್ರ ಉಪನ್ಯಾಸಕ ಶ್ರೀ ರವಿಪ್ರಕಾಶ ಈಂದುಗುಳಿ ಇವಕ್ಕೆ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಮಹಾ ವಿದ್ಯಾಲಯ ಕರ್ಣಾಟಕ (NITK)ಸುರತ್ಕಲ್, ಡಾಕ್ಟರೇಟ್ ನೀಡಿ ಗೌರವಿಸಿದ್ದು.
ಇವು ಎನ್.ಐ.ಟಿ.ಕೆ ಯ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಆಗಿಪ್ಪ ಪ್ರೊ.ಕಸ್ತೂರಿ.ವಿ.ಬಂಗೇರ ಅವರ ಮಾರ್ಗದರ್ಶನಲ್ಲಿ “ಪ್ರಿಪರೇಶನ್ ಎಂಡ್ ಇವಾಲುವೇಶನ್ ಓಫ್ ಸ್ಪ್ರೇ ಡೆಪಾಸಿಟೆಡ್ ಕೇಡ್ಮಿಯಂ ಜಿಂಕ್ ಸಲ್ಫೈಡ್ ತಿನ್ ಫಿಲ್ಮ್ಸ್” ಹೇಳುವ ಮಹಾ ಪ್ರಬಂಧವ ಮಂಡಿಸಿದ್ದಕ್ಕೆ ಈ ಗೌರವಕ್ಕೆ ಅರ್ಹರಾದವು.
ಇವರ ಹಲವಾರು ಸಂಶೋಧನಾ ಲೇಖನಂಗೊ ರಾಷ್ಟ್ರೀಯ ಮತ್ತೆ ಅಂತರಾಷ್ಟ್ರೀಯ ನಿಯತ ಕಾಲಿಕಂಗಳಲ್ಲಿ ಮತ್ತೆ ಸಮ್ಮೇಳನಂಗಳಲ್ಲಿ ಪ್ರಕಟವಾಯಿದು ಹೇಳುವದು ಹೆಮ್ಮೆಯ ವಿಷಯ.
ಇವು, ಮಂಗಳೂರು ವಿಶ್ವ ವಿದ್ಯಾಲಯದ ಮಾಜಿ ಸೆನೆಟ್ ಸದಸ್ಯರಾಗಿ ಮತ್ತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ABVP) ಮಂಗಳೂರು ನಗರದ ಘಟಕದ ಮಾಜಿ ಅಧ್ಯಕ್ಷರಾಗಿ ಸೇವೆ ಮಾಡಿ ಸಮಾಜಲ್ಲಿ ಗುರುತಿಸಿಗೊಂಡವು.
ಇವು ಪ್ರಾಥಮಿಕ ವಿದ್ಯಾಭ್ಯಾಸ ಕಾಸರಗೋಡು ತಾಲೂಕಿನ ಮುಂಡಿತ್ತಡ್ಕ ಶಾಲೆಲಿ , ಹೈಸ್ಕೂಲ್ ವಿದ್ಯಾಭ್ಯಾಸ ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜಿಲ್ಲಿ, ಪದವಿ ವಿದ್ಯಾಭ್ಯಾಸ ಸುರತ್ಕಲ್ಲಿನ ಗೋವಿಂದದಾಸ ಕಾಲೇಜಿಲ್ಲಿ ಮತ್ತೆ M.Sc ಪದವಿ ಮಂಗಳೂರು ವಿಶ್ವ ವಿದ್ಯಾನಿಲಯಲ್ಲಿ ಪಡಕ್ಕೊಂಡವು.
ಈಂದುಗುಳಿ ಶ್ರೀ ಮಹಾಲಿಂಗೇಶ್ವರ ಭಟ್ಟ ಮತ್ತೆ ಲಕ್ಷ್ಮಿ ಅಮ್ಮನವರ ಎರಡನೆ ಮಗನಾದ ಇವರ ಸಾಧನೆಯ ನಮ್ಮ Koop luxe horloges nethland ಸಮಾಜ ಗುರುತಿಸಿ ಗೌರವಿಸುವದರೊಂದಿಗೆ,
ಇವು ಇನ್ನು ಮುಂದೆಯೂ ಹೀಂಗೆ ಸಾಧನೆ ಮಾಡಲಿ ಮತ್ತೆ ಅವರ ಕುಟುಂಬ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಹೇಳಿ ಹಾರೈಸುವೊ.
–
ಶರ್ಮಪ್ಪಚ್ಚಿ
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ರವಿ ಪ್ರಕಾಶಂಗೆ ಅಭಿನಂದನೆ, ಶುಭಾಶೀರ್ವಾದಂಗೊ.
ರವಿ ಪ್ರಕಾಶಣ್ಣ೦ಗೆ ಅಭಿನ೦ದನೆಗೊ, ಅವು ಇನ್ನು ಎತ್ತರಕ್ಕೆ ಏರೆಕ್ಕೂಳಿ ಆಶಯ….
Bekur gramada hesarina ugamada bagge maahiti iddare tilisi!
annange shubha haraikegalu …….
BEST WISHES FOR RAVIPRAKASHA INDUGULI. I WISH YOU TO GET ANOTHER MORE DEGREE.I AM VERY HAPPY THAT, YOU GOT DOCTORATE IN THESE EARLY AGES. LET GOD HELP YOU IN YOUR FUTURE. S. Rameshwara Bhat, Shedigumme, KUMBLA
ಪೊಸವಣಿಕೆ ರವಿಯ ಬಗ್ಗೆ ಬರವಲಕ್ಕು.
CONGRATS.HAPPY TO SEE THE ARTICLE
ravisho ninage olledaagali
ರವಿ ಅಣ್ಣ ನ ಎನಗೆ ಮೊದಲಿಂದಲೇ ಗೊಂತಿದ್ದು. ನೀರ್ಚಾಲಿಲ್ಲಿ ಎನ್ನ ಅಕ್ಕನ ಸಹಪಾಟಿ ಮತ್ತೆ ಎನ್ನ ಗೆಳೆಯ ವ್ಯಾಸ ಪ್ರಸಾದ ನ ಅಣ್ಣ ಬೇರೆ, ಹಂಗೆ ಅವರ ಬಗ್ಗೆ ರಜ್ಜ ಗೌರವ ಜಾಸ್ತಿ . ಅವಕ್ಕೆ ಒಳ್ಳೆಯದಾಗಲಿ.
ಶರ್ಮ ಅಂಕಲ್ ಒಳ್ಳೆ ಕೆಲಸ ಮಾಡ್ತಾ ಇದ್ದಿ. ನಮ್ಮ ಜೆನಂಗಳ ನಾವೇ ಪ್ರಥಮವಾಗಿ appriciation ಮಾಡೆಕ್ಕು.
ಪ್ರಶಾಂತ್ ಕುವೈತ್
ರವಿಪ್ರಕಾಶ್ ಸರ್ ಆನು ಶಾರದಾ ಕಾಲೇಜ್ ಲಿ ಕಲ್ತುಗೊಂಡಿಪ್ಪಗ ಎನಗೆ physics ಹೇಳಿ ಕೊಟ್ಟಿದವು – 2 ವರ್ಷ. ಇವು ಇಂದಿಂಗುದೆ ಎನ್ನ “favourite teacher”!! ಇವರ ಪಾಠ best! ಸರ್ ನಿಂಗೊಗೆ ಎನ್ನ ಅಭಿನಂದನೆಗೋ! ಶರ್ಮಪ್ಪಚ್ಚಿ ಇವರ ಬಗ್ಗೆ ಬರದ್ದಕ್ಕೆ ಧನ್ಯವಾದನ್ಗೋ!
ರವಿ-ನಿನ್ನ ಬಗ್ಗೆ ತುಂಬ ಅಭಿಮಾನ ಎನುಸ್ತು,-ಎಂಗಳ ಈಂದುಗುಳಿ ಭಟ್ಟಜ್ಜನ ಪುಳ್ಳಿ ಹೇಳಿ,-ಎನ್ನ ಶಾಲೇಲೇ ಕಲ್ತ ಮಾಣಿ ಹೇಳಿ,-ಎನ್ನ ನೆರೆಕರೆ ಹೇಳಿ,-ಎನ್ನ ಹೋಮ್ ಮಿನಿಸ್ಟ್ರಿನ ಹತ್ತರಾಣ ಸಂಬಂಧ ಹೇಳಿ. ನಿನ್ನ ಈ ಹಾರ್ಡ್ ವರ್ಕ್ ಹೀಂಗೆ ಮುಂದುವರೆದು ಇನ್ನೂ ಸಂ ಥಿಂಗ್ ಎಛೀವ್ ಮಾಡು ಹೇಳಿ ಪುನಃ ಹಾರೈಸುತ್ತೆ.
ಬಯಲಿಂಗೆ ಅಳಿಯನ ಪರಿಚಯಿಸಿದ್ದಕ್ಕೆ ಶರ್ಮಣ್ಣಂಗೆ ಧನ್ಯವಾದಂಗೊ.
Abhinandanegalu, Shubha haaraikegalu.
ಅಭಿನಂದನೆಗಳು.
-ಪ.ರಾಮಚಂದ್ರ,
ರಾಸ್ ಲಫ್ಫಾನ್ , ಕತಾರ್
ಪ್ರಕಾಶಣ್ಣಂಗೆ ಅಭಿನಂದನೆ. ದೊಡ್ಡ ಭಾವನೂ ಈ ಶುದ್ದಿ ಹೇಳಿತ್ತಿದ್ದವು ಒಂದರಿ.
ಗೊಂತಿದ್ದೋ ನಿಂಗೊಗೆ? ಈ ಪ್ರಕಾಶಣ್ಣ ಉತ್ಸಾಹೀ ಪ್ರತಿಭಾವಂತ ವಿದ್ಯಾರ್ಥಿ ಆಗಿ ಶಾಲೆಲ್ಲಿಪ್ಪಗಳೇ ಪ್ರೇರಣೆ ಕೊಟ್ಟೊಂಡಿತ್ತಿದ್ದವು!!
ಮಹೇಶೋ,
IIT Mumbia ಂದ PhD ಕೊಟ್ಟು ಗೌರವಿಸಿದ್ದವು ಕೇಳಿ ಸಂತೋಷ ಆತು.
ಅಭಿನಂದನೆಗೊ.
ಹಾಂಗೇ ನಮ್ಮ ಬೈಲಿನವಕ್ಕೆ ಇದರ ಬಗ್ಗೆ ಮಾಹಿತಿ ಕೊಡೆಕು ಹೇಳಿ ಎನ್ನ ಕೋರಿಕೆ.
ಅಪ್ಪಚ್ಚಿ,
ತುಂಬಾ ಧನ್ಯವಾದ.
ರವಿಯಣ್ಣಂಗೆ ಧನ್ಯವಾದಗಳು. ಶರ್ಮ ದೊಡ್ಡಪ್ಪಂಗೆ ಒಪ್ಪ ಕೊಡ್ತೆ. ಹಾ..ಡೊಡ್ಡಪ್ಪ… ರವಿ ಅಣ್ಣಂಗೆ ಹೇಳಿ ಇಲ್ಲಿ ಒಪ್ಪಣ್ಣನ ಬ್ಲೋಗಿಂಗೆ ಬಂದು ಲೇಖನ ಬರೆವಲೆ.