- ಜೀವನಲ್ಲಿ ಮುಂದೆ ಬಪ್ಪಲೆ ಓಡುದರೊಟ್ಟಿಂಗೆ ಓದುದೂ ಮುಖ್ಯವೇ - July 9, 2014
- “ಯಕ್ಷತ್ರಿವೇಣಿ” - September 24, 2012
- ಬದಲಾಗದ್ದದು ಬದಲಾವಣೆ ಮಾಂತ್ರ ! - September 12, 2012
ಅಮ್ಮ ಇಲ್ಲದ್ದೆ ಎನಗೆ ಹೆಚ್ಚು ಅಸಕ್ಕ ಆಗದ್ರೂ ಅಮ್ಮ ನೆಟ್ಟ ಗಿಡಂಗೊಕ್ಕೆ ಬೇಜಾರಾಯ್ದು 🙁 ಎಂಗೊಗೆ ನಿತ್ಯವೂ ಮತಾಡ್ಸುವಷ್ಟು ಪುರ್ಸೊತ್ತಿಲ್ಲೆ. ಅಮ್ಮ ಬಪ್ಪಲೆ ಕಾಯ್ತಾ ಇದ್ದವು ಎಲ್ಲ ಗಿಡಂಗೊ. ಅಮ್ಮ ಇಲ್ಲದ್ದಿಪ್ಪಗಳೆ ಸುಮಾರು ಗಿಡಂಗಳಲ್ಲಿ ತುಂಬಾ ಹೂಗಾತು. ಅಮ್ಮಂಗೆ ತೋರ್ಸುಲೆ ಪಟ ತೆಗದು ಮಡುಗಿದ್ದೆ :). ಅಮ್ಮಂಗೆ ಕಿರಿಕಿರಿ ಮಾಡದ್ದೆ, ಅಮ್ಮನ ಹತ್ತರೆ ಬೈಶಿಗೊಳ್ಳದ್ದೆ, ಎನಗೂ ಎಂತದೋ ಒಂದು ಕಮ್ಮಿ ಆದ ಹಾಂಗೆ ಆವ್ತು 😉 , ಅದು ಹಾಂಗೇ ಅಲ್ಲದಾ… ಅದಿರಲಿ….ಅಮ್ಮನ ಕೈತೋಟದ ಬಗ್ಗೆ ಮಾತಾಡ್ತಾ ಇತ್ತಿದ್ದೆ. ವಿಷಯ ಎಂತರ ಹೇಳಿರೆ..ಅಮ್ಮನ ತೋಟಲ್ಲಿಪ್ಪ ಹೂಗಿನ ಗಿಡಂಗೊ ಕಣ್ಣಿಂಗೆ, ಮನಸ್ಸಿಂಗೆ ಖುಷಿ ಕೊಡ್ತು, ಅದರೊಟ್ಟಿಂಗೇ ಅಲ್ಲಿಪ್ಪ ಮದ್ದಿನ ಗಿಡಂಗ ಆರೋಗ್ಯಕ್ಕೆ. ಹಳ್ಳಿ ಮನೆಲಿದ್ದೋರಿಂಗೆ ಇದರ್ಲಿ ಎಂತ ವಿಶೇಷ ಕಾಣ. ಆದರೆ ಪೇಟೆಲಿ ಇಪ್ಪೋರಿಂಗೆ ಇಪ್ಪ ಜಾಗೆಲಿ ಹೂಗಿನ ಗಿಡ ಊರುಲೇ ಪುರ್ಸೊತ್ತು ಇರ್ತಿಲ್ಲೆ ಇನ್ನು ಮದ್ದಿನ ಗಿಡ ಎಲ್ಲಿಂದ!! ಎಲ್ಲೋರ ಮನೆಲಿಯೂ ಇಪ್ಪ..ಇರೆಕ್ಕಾದ ಒಂದು ಮುಖ್ಯ ಗಿಡದ ಬಗ್ಗೆ ಬರೆತ್ತೆ. ಅದುವೇ “ತುಳಸಿ”.
ಧಾರ್ಮಿಕವಾಗಿ ತುಳಸಿಯ ಪ್ರಾಮುಖ್ಯತೆ ಎಂತರ ಹೇಳ್ತದು ಎನಗೆ ಹೆಚ್ಚಿಗೆ ಗೊಂತಿಲ್ಲೆ, ಬೈಲಿಲ್ಲಿ ಇಪ್ಪ ತಿಳುದೋರು ವಿವರ್ಸೆಕು ಹೇಳೀ ಕೇಳಿಗೊಳ್ತೆ. ಆನು ಬರವದು ಆರೋಗ್ಯಕ್ಕೆ ಸಂಬಂಧಪಟ್ಟ ಹಾಂಗೆ ಅದರ ಪಾತ್ರ ಹೇಂಗೆ, ಎಂತ ಹೇಳಿ.
ಇಂಗ್ಲೀಷಿಲ್ಲಿ ಇದಕ್ಕೆ Indian Basil ಹೇಳ್ತವು. ಇದರ ಸಸ್ಯಶಾಸ್ತ್ರೀಯ ಹೆಸರು Oscimum sanctum. ಇದು Lamiaceae/Labiatae ಹೇಳುವ ಕುಟುಂಬಕ್ಕೆ ಸೇರಿದ ಗಿಡ. ಭಾರತದ ಎಲ್ಲಾ ಭಾಗಂಗಳಲ್ಲಿಯೂ ಬೆಳೆವ ಸೆಸಿ. ಸೆಸಿಯ ಬಗ್ಗೆ ಹೆಚ್ಚಿನ ವಿವರ ಕೊಡೆಕ್ಕಾದ ಅಗತ್ಯ ಇಲ್ಲೆ, ತುಳಸಿ ನೋಡದ್ದವ್ವು ಆರೂ ಇಲ್ಲೆ!
ಮದ್ದಿಂಗೆ ಉಪಯೋಗ್ಸುವ ಸೆಸಿಯ ಭಾಗಂಗೊ : ಇಡೀ ಸೆಸಿ. ಮುಖ್ಯವಾಗಿ ಎಲೆ, ಕಾಂಡ ಮತ್ತೆ ಬಿತ್ತು.
ಇದರ ಉಪಯೋಗಂಗೊ:
- ಅಸ್ತಮಾ , ಸೆಮ್ಮ, ಕಫ, ಶೀತ, ಜ್ವರ – ಈ ಸಂದರ್ಭಲ್ಲಿ ತುಳಸಿಯ ಎಸರಿನ ಜೇನಿನೊಟ್ಟಿಂಗೆ ತೆಕ್ಕೊಂಬದರಿಂದ ಕಫ, ಸೆಮ್ಮ, ಉಸಿರು ಕಟ್ಟಿದ ಹಾಂಗೆ ಅಪ್ಪದು ನಿಲ್ಲುತ್ತು, ಜ್ವರ ಕಮ್ಮಿ ಆವ್ತು. ತುಳಸಿಲಿ antiviral [ವೈರಸ್ ನ ವಿರುದ್ಧ ಹೋರಾಡುದು], expectorant [ಕಫ ಹೆರ ಹಾಕುದು] ಗುಣಂಗೊ ಇದ್ದು.
- ಮಲೇರಿಯ – ಕೊದುಶಿ ಇಳುಗಿದ ನೀರಿಂಗೆ ತುಳಸಿ ಎಲೆಗಳ ಹಾಕಿ ಮಡುಗಿ ರಜ್ಜ ಹೊತ್ತಿನ ಮತ್ತೆ ಗೆಣಮೆಣಸಿನ ಹೊಡಿಯ ಅದರೊಟ್ಟಿಂಗೆ ಸೇರ್ಸಿ ಹೊಟ್ಟೆಗೆ ತೆಕ್ಕೊಂಬದು.
- ಕಣ್ಣಿನ ಸೋಂಕು – ಎಲೆಯ ಎಸರಿನ ಕಣ್ಣಿಂಗೆ eye drops ನ ಹಾಂಗೆ ಹಾಕುದರಿಂದ ಸೋಂಕು ಕಮ್ಮಿ ಆವ್ತು.
- ವೈರಲ್ ಹೆಪಾಟೈಟಿಸ್ – ಈ ಸಮಸ್ಯೆಲಿಯುದೇ ತುಳಸಿ ಎಲೆಯ ಸಾರಂದ ತಯಾರ್ಸಿದ ಮದ್ದು ತುಂಬಾ ಪ್ರಯೋಜನ ಆವ್ತು. 14 ದಿನಂಗಳ ಮದ್ದಿಲ್ಲಿ ಪೂರ ಗುಣ ಆವ್ತು ಹೇಳಿ ಅಧ್ಯಯನಂಗೊ ಹೇಳ್ತು.
- ಹುಣ್ಣು/ಗಾಯ/ಕುರು – ಎಲೆಗಳ ನೀರಿನೊಟ್ಟಿಂಗೆ ಅರದು ಕಿಟ್ಟಿರೆ ಸೋಂಕು ಅಪ್ಪದರ ತಡೆತ್ತು. ಬೇಗ ಗುಣ ಅಪ್ಪಲೆ ಸಹಾಯ ಮಾಡ್ತು.
- ಚರ್ಮ ರೋಗ/ಅಲರ್ಜಿ – ಎಲೆಗಳ ಅರದು ಕಿಟ್ಟುದು ಮತ್ತೆ ಎಸರಿನ ಕುಡಿವದರಿಂದ ಚರ್ಮವ್ಯಾಧಿಗೊ ಗುಣ ಆವ್ತು.
- ಫ಼ಂಗಲ್ ಸೋಂಕು[fungal infections] – ಇದರ ಎಲೆಂದ ತಯಾರ್ಸಿದ ಎಣ್ಣೆ ಫ಼ಂಗಸ್ಸಿಂದ ಅಪ್ಪ ತೊಂದರೆಗಳ ಗುಣ ಮಾಡ್ತು.
ತುಳಸಿಯ ಉಪಯೋಗಂಗಳ ತಿಳ್ಕೊಂಡಾತು. ಇದರಿಂದ ಏನಾರು ತೊಂದರೆ ಇದ್ದೋ ಹೇಳಿ ತಿಳ್ಕೊಳ್ಳೆಡದಾ? ಅಪ್ಪು ತುಳಸಿಯ ಕೆಲವು ಗುಣಂಗೊ ಹಾನಿ ಉಂಟು ಮಾಡುವ ಹಾಂಗಿಪ್ಪದು.
- Antifertility property , ಹೇಳಿರೆ ಸಂತಾನಹೀನತೆಯ ಉಂಟುಮಾಡುವ ಗುಣ.
- Abortifacient property, ಹೇಳಿರೆ ಗರ್ಭಪಾತ ಪ್ರಚೋದಕ.
ಹಾಂಗಾಗಿ ಬಸರಿಯಕ್ಕೊ ತುಳಸಿಯ ಸೇವನೆ ಮಾಡುದು ಒಳ್ಳೆದಲ್ಲ. ಹಾಂಗೆಯೇ ಮದ್ದು ತೆಕ್ಕೊಂಬಗ ಎಷ್ಟು ಪ್ರಮಾಣಲ್ಲಿ ತೆಕ್ಕೊಳ್ಳೆಕು ಹೇಳುದು ಮುಖ್ಯ.
ಪ್ರಮಾಣ:
- ಕಷಾಯ – 50-100ml
- ಎಸರು – 10-20ml
- ಬಿತ್ತಿನ ಹೊಡಿ – 3-6gms
ಕೆಲವು ಸಂಶೋಧನೆಗೊ:
ಇತ್ತೀಚೆಗೆ ತುಳಸಿಯ ಬಗ್ಗೆ ನಡಶಿದ ಕೆಲವು ಸಂಶೋಧನೆಗೊ ಹೇಳ್ತು [ಸಂಶೋಧನೆಗಳ ಬಗ್ಗೆ ಓದುಲೆ ಸಂಕೋಲೆಗಳ ಒತ್ತಿ, ಇದೆಲ್ಲವೂ ವೈದ್ಯಕೀಯ ಭಾಷೆಲಿ ಇದ್ದು.]
- ತುಳಸಿಲಿ ಕ್ಯಾನ್ಸರ್ ನ ಗುಣ ಮಾಡ್ತ ಶಕ್ತಿ ಮತ್ತೆ ವಿಕಿರಣಂಗಳ ಪ್ರಭಾವವ ಕಮ್ಮಿ ಮಾಡ್ತ ಶಕ್ತಿ ಇದ್ದು.
- ಡಯಾಬಿಟೀಸ್ ಲ್ಲಿ ರಕ್ತಲ್ಲಿಪ್ಪ ಸಕ್ಕರೆಯ ಅಂಶವ ಕಮ್ಮಿ ಮಾಡುವ ಗುಣ.
- ಕೊಲೆಸ್ಟ್ರೋಲ್ ನ ಕಮ್ಮಿ ಮಾಡುವ ಅಂಶದೇ ಇದ್ದು.
- ಬಾಕ್ಟೀರಿಯಾ ಇತ್ಯಾದಿ ರೋಗಾಣುಗಳ ವಿರುದ್ಧ ಹೋರಾಡುವ ಶಕ್ತಿ.
http://www.ncbi.nlm.nih.gov/pubmed/1473788
http://www.ncbi.nlm.nih.gov/pubmed/17016661
http://www.ncbi.nlm.nih.gov/pubmed/11673069
http://www.ncbi.nlm.nih.gov/pubmed/10641157
http://www.ncbi.nlm.nih.gov/pubmed/7601491
http://www.ncbi.nlm.nih.gov/pubmed/16202376
http://www.ncbi.nlm.nih.gov/pubmed/15532130
http://www.ncbi.nlm.nih.gov/pubmed/12026506
[ಪ್ರತೀ ಸರ್ತಿಯಾಣ ಹಾಂಗೆ ಈ ಸರ್ತಿಯೂ ಹೇಳುದು ಎಂತರ ಹೇಳಿರೆ , ವೈದ್ಯರ ಸಲಹೆ ಇಲ್ಲದ್ದೆ ಯಾವುದೇ ಮದ್ದಿನ ಪ್ರಯೋಗ ಮಾಡೆಡಿ. ಆನು ಇಲ್ಲಿ ಬರವದು ಜೆನಂಗೊಕ್ಕೆ ಎಲ್ಲಾ ವಿಷಯದ ಮಾಹಿತಿ ಇರೆಕಾದ್ದು ಅಗತ್ಯ ಹೇಳ್ತ ಕಾರಣಕ್ಕೆ]
ಇದಿಷ್ಟು ತುಳಸಿಯ ಬಗ್ಗೆ ಎನಗೆ ಗೊಂತಿಪ್ಪ ಮಾಹಿತಿ. ಹೆಚ್ಚಿನದ್ದು ನಿಂಗೊಗೆ ಗೊಂತಿದ್ದರೆ ತಿಳುಶಿ.
-ನಿಂಗಳ, ಸುವರ್ಣಿನೀ ಕೊಣಲೆ.
ನಿಮ್ಮ ಟಿಪ್ಸ್ ನಮಗೆ ಸಹಕಾರಿಯಾಗಿದೆ
ಸುವರ್ಣಿನಿ
“ತುಳಸಿಲಿ ಕ್ಯಾನ್ಸರ್ ನ ಗುಣ ಮಾಡ್ತ ಶಕ್ತಿ ಮತ್ತೆ ವಿಕಿರಣಂಗಳ ಪ್ರಭಾವವ ಕಮ್ಮಿ ಮಾಡ್ತ ಶಕ್ತಿ ಇದ್ದು.” ಹಾಂಗೆ ಬರದ್ದಿ.
ತೊಳಶಿ ರೇಡಿಯೋ ಪ್ರೊಟೆಕ್ಟರಾಗಿ ಕೆಲಸ ಮಾಡುವ ವಿಷಯಲ್ಲಿ ಆನೊಂದು ಸಂಶೋಧನ ಲೇಖನ ಓದಿದ್ದೆ. ನಿಂಗೊ ಬರದ್ದದು ಒಳ್ಳೆದಾಯಿದು.
ಗುರುಗಳ ಒಪ್ಪ ನೋಡಿದ ನಂತರವೇ ಈ ಲೇಖನವ ಗಮನಿಸಿದ್ದು. ಗುರುಗಳಿಂಗೆ ಪ್ರಣಾಮಂಗೊ.
ಧನ್ಯವಾದ 🙂
ಹಸಿರಾತು ಮನಸೆಲ್ಲಾ…
ಶ್ರೀಗುರುಗಳ ಆಶೀರ್ವಾದಂದ ಜೀವನ ಹಸಿರಾತು 🙂
ಕರ್ಪೂರ ತುಳಸಿ ನಮ್ಮ ಈ ತುಳಸಿ ಯ ಹಾಂಗೆ ಇಪ್ಪ ಸೆಸಿ ಪರಿಮ್ಮಳ ಮಾಂತ್ರ ಇನ್ನೂ ಜಾಸ್ತ್ತಿ ಇದ್ದು ಈ ತುಳಸಿರಸಕ್ಕೆ ಕರ್ಪೂರ ಹಾಕಿದ ಹಾಂಗೆ ಪರಿಮ್ಮಳ ಇದ್ದು.ಆನು ಅದರ ಸೆಸಿಯ collect ಮಾಡಿಮತ್ತೆ ತಿಳಿಸುತ್ತೆ.
ಇನ್ನೊಂದು ಕರ್ಪ್ಪೂರ ತುಳಶಿ ಹೇಳುವಂತದ್ದು ಕೂಡಾ ಇದ್ದು ಎನ್ನಲ್ಲಿ ಮೊದಲು ಇತ್ತು ಈಗ ರಜ್ಜ ಸಮಯಂದ ಅದರ ಸೆಸಿ ಕಾಣುತ್ತಿಲ್ಲೆ..ಬೈಲಿಲಿ ಆರಹತ್ತರೆ ಆದರೂ ಇದ್ದ ಯೇನ???
ಆನು ಕರ್ಪೂರ ತುಳಸಿಯ ನೋಡಿದ್ದಿಲ್ಲೆ 🙁
ಕರ್ಪೂರ ತುಳಸಿ ಹೇಳುದು African blue basil ನ್ನೇ ಆಗಿರೆಕ್ಕು. ರಜ್ಜ ನೀಲಿ ಬಣ್ಣ ಇರ್ತು. ಇದು O.kilimandscharicum ಮತ್ತೆ O.basilicum ಇದೆರಡರ ಹೈಬ್ರೀಡ್ ಸೆಸಿ.
{ O.kilimandscharicum ಮತ್ತೆ O.basilicum ಇದೆರಡರ ಹೈಬ್ರೀಡ್ ಸೆಸಿ }
O. haango?! 😉
ಸುವರ್ಣಿನಿ ಅಕ್ಕಾ,
ನೈಸರ್ಗಿಕ ಜೀವನ ಶೈಲಿಯ ತಿಳಿಶುವ ನಿಂಗಳ ಶುದ್ಧಿ ಓದಿ ಕೊಶಿ ಆತು.
ಪ್ರಕೃತಿ ನವಗೆ(ಮನುಷ್ಯ/ಪ್ರಾಣಿ) ಬೇಕಾದ ಆಹಾರ, ಮದ್ದು,ಹೀಂಗೆ ಅನೇಕ ರೀತಿಯ ಸವಲತ್ತುಗಳ ಕೊಟ್ಟಿದು. ಅದರ ತಿಳುದು ನೈಸರ್ಗಿಕ ಜೀವನ ನಡೆಶುದು ಉತ್ತಮ. ಇದರಿ೦ದ ಪರಿಸರಕ್ಕೆ, ನವಗೆ, ಇತರೆ ಜೀವ ಸ೦ಕುಲಕ್ಕೆ ಒಳಿತು ಅಪ್ಪದು ಖಂಡಿತಾ!!ಉತ್ತಮ ಲೇಖನಕ್ಕೆ ಧನ್ಯವಾದಂಗ…
ಅಡ್ಕತ್ತಿಮಾರುಮಾವ° ಹೇಳಿದ ಹಾಂಗೆ ತುಳಶಿಯ ಬೇರೆ ಬೇರೆ ಜಾತಿಯ ಎಂಗೊಗೆ ತಿಳುಶಿ ಕೊಡುವಿರೋ?
ಡಾಗುಟ್ರಕ್ಕ…ತುಳಸಿಲಿ ಸುಮಾರು ಜಾತಿ ಇದ್ದಲ್ಲದ?ಅದರನ್ನೂ ತಿಳಿಸಿದರೆ ಒಳ್ಳೆದಿತ್ತು….ಲೇಖನ ಲಾಯಿಕ ಆಯಿದು..
ನಮ್ಮಲ್ಲಿ ಎರಡು ಬಗೆಯ ತುಳಸಿ ಇದ್ದು ಕೃಷ್ಣ ತುಳಸಿ; ಇದರ ಕಾಂಡ ಕಪ್ಪು ಬಣ್ಣ ಇರ್ತು. ಮತ್ತೆ ರಾಮ ತುಳಸಿ: ಇದರ ಕಾಂಡ ಬೆಳಿ[ಪಚ್ಚೆ] ಇರ್ತು. [ಇದರಿಂದ ಹೆಚ್ಚು ವಿವರ ಆರಿಂಗಾರು ಗೊಂತಿದ್ದರೆ ತಿಳುಶಿ].
ತುಳಸಿಲಿ ಬೇರೆ ಕೆಲವು ವಿಧದ ಗಿಡಂಗಳೂ ಇದ್ದು , ಇಡೀ ಪ್ರಪಂಚಲ್ಲಿ ಈ Ocimum ಹೇಳ್ತ ಗುಂಪಿಲ್ಲಿ ಸುಮಾರು 35 ಗಿಡಂಗೊ ಇದ್ದು !! ಎಲ್ಲವೂ ಹೆಚ್ಚು ಕಮ್ಮಿ ತುಳಸಿಯ ಹಾಂಗೆಯೇ. ಹೆಚ್ಚಿನದ್ದರ ಮದ್ದಿಂಗೆ ಉಪಯೋಗ್ಸುತ್ತವು [ಅದು ಹೆಚ್ಚು ಬೆಳೆತ್ತ ಊರಿಲ್ಲಿ], ಅಥವಾ ಅಡಿಗೆಲಿ ಉಪಯೋಗ್ಸುತ್ತವು.
ಉದಾಹರಣೆಗೆ: Ocimum canum, O.americanum, O.kilimandscharicum, O.basilicum ಇತ್ಯಾದಿ.
ಸುವರ್ಣಿನಿ ಡಾಗುಟ್ರಕ್ಕ°.,
ತುಳಸಿಯ ಬಗ್ಗೆ ಎಷ್ಟು ಬರದರೂ ಮುಗಿಯ.. ಅಷ್ಟು ಇದ್ದು ತುಳಸಿಯ ವಿಶೇಷತೆಗ. ಈ ಶುದ್ದಿಲಿ ಸುಮಾರು ವಿಷಯಂಗಳ ತಿಳಿಶಿ ಕೊಟ್ಟಿದಿ. ಧನ್ಯವಾದಂಗ..
ಮದ್ದಿನ ಅಂಶ ಇಪ್ಪ ಎಲ್ಲವನ್ನೂ ನಮ್ಮ ಹಿರಿಯರು ಪೂಜನೀಯ ಸ್ಥಾನ ಕೊಟ್ಟು, ಅದರ ಮಹತ್ತಿನ ನವಗೆ ತೋರ್ಸಿ ಕೊಟ್ಟಿದವು..
ಇದರ ಒಳಿಶಿ, ಬೆಳೆಶಿ ಕಾಪಾಡುದು ನಮ್ಮ ಕರ್ತವ್ಯ…
ಇದರದ್ದೇ ಇನ್ನೊಂದು ಪಂಗಡದ ಸಸ್ಯವ ಇಟಾಲಿಯನ್ ಅಡಿಗೆಲಿ ಉಪಯೋಗಿಸುತ್ತವಲ್ಲದಾ?
ಅಪ್ಪು,ಅದು Ocimum basilicum
ಡಾಗುಟ್ರಕ್ಕ… ತೊಳಶಿ ಬಗ್ಗೆ ಮಾಹಿತಿಯುಕ್ತವಾದ ಲಾಯಿಕ ಲೇಖನ. ಧನ್ಯವಾದಂಗೊ…
ಅಮ್ಮ ಇಲ್ಲದ್ದೆ ನಿಂಗೊಗೆ ನಿಜಕ್ಕೈ ಬೇಜಾರಾಯಿದು ಹೇಳಿ ಮೊದಲ ಪ್ಯಾರಾ ಓದಿಯಪ್ಪಗ ಗೊಂತಾತು..:);)
ಹಲೋ ಸುವರ್ಣಿನೀ,
ಲೇಖನ ಲಾಯ್ಕಾಯ್ದು. ಆದರೆ ಪೇಟೆಲಿಪ್ಪೋರಿಂಗೆ ಗಿಡ ನೆಡ್ಲೆ ಪುರುಸೊತ್ತು ಇರ್ತಿಲ್ಲೇಳಿ ಬರದ್ದೆನ್ನೆ. ಎನ್ನ ಬಾಲ್ಕನಿ ತೋಟದ (ಸ್ಯಾಂಪ್ಲಗೆ) ರಜ್ಜ ಪಟ ಹಾಕುವ ಹೇಳಿ ಗ್ರೇಶಿದೆ. ಆದರೆ ಪಟ ಹಾಕುಲೆ ಎನಗೆ ಗೊಂತಾವ್ತಿಲ್ಲೆನ್ನೆ!ಗಿಡ ಬೆಳೆಶುಲೆ ವಿಶೇಷ ಕಷ್ಟ ಇಲ್ಲೆ. ಒಂದು ರಜ್ಜ ಮನಸ್ಸು ರಜ್ಜ ಸಮಯ ಇದ್ದರೆ ಸಾಕು. ತರಕಾರಿ, ಅಕ್ಕಿ ತೊಳದ ನೀರು ತರಕಾರಿ ಸಿಪ್ಪೆ ಎಲ್ಲ ಗಿಡಕ್ಕೆ ಹಾಕ್ಲಕ್ಕು.
ಸುವರ್ಣಿನಿ,
ತುಳಸಿ ಗುಣ ಮತ್ತೆ ಅವಗುಣಂಗಳ ಬಗ್ಗೆ ಬರದ್ದು ಲಾಯಿಕ ಆತು.
ಹಿಂದುಗಳ ಮನೆ ಆಪ್ಪೋ ಅಲ್ಲದೋ ಗೊಂತಪ್ಪದು ಮನೆ ಎದುರು ತೊಳಸಿ ಕಟ್ಟೆ ಇದ್ದೋ ಇಲ್ಲೆಯೋ ನೋಡಿ.
ತುಳಸಿ ಇಲ್ಲದ್ದೆ ಯಾವ ಪೂಜೆಯೂ ಇಲ್ಲೆ.
@ ರಘು. ಕತೆ ಮತ್ತೆ ಅದಕ್ಕೆ ಈಗಾಣ ಹೋಲಿಕೆ ಕೊಟ್ಟದು ಲಾಯಿಕ್ ಆಯಿದು
ಡಾಗುಟ್ರಕ್ಕಾ ,ಒಳ್ಳೆ ಲೇಖನ,ಧನ್ಯವಾದ.
ಸ೦ಕೊಲೆಲಿದ್ದ ಯೇವದುದೆ ಅರ್ಥ ಆತಿಲ್ಲೆ, ಡಾಗುಟ್ರ ಭಾಷೆ ಗೊಂತಾಗದ್ದೆ.
ಒಪ್ಪಲ್ಲಿ,ಗಣೇಶಣ್ಣನೂ ಚುಬ್ಬಣ್ಣ ಭಾವನೂ ಪುರಾಣ ಶುರು ಮಾಡಿ ಅಪ್ಪಗ ಸರೀ ಅರ್ಥ ಆತು.
ಅದೂ, ಒಂದಾನೊಂದು ಕಾಲಲ್ಲಿ ಜಲಂಧರ ಹೇಳ್ತ ರಾಕ್ಷಸ ಇತ್ತಡ.ಅದರ ಹೆಂಡತಿಯೇ ತುಳಸಿ ಅಥವಾ ವೃಂದೆ , ಮಹಾ ಪತಿವೃತೆ. ಈ ಜಲಂಧರನೋ,ಜೆನ ಸರಿ ಇಲ್ಲೆ, ರೇಣುಕಾಚಾರ್ಯನ ಹಾಂಗೆ.
ಕೈಲಾಸಕ್ಕೆ ಹೋಗಿ ಶಿವ ಪಾರ್ವತಿಗೆ ಉಪದ್ರ ಕೊಟ್ಟತ್ತಡ. ಆದರೆ ಎಂತ ಮಾಡೊದು,ತುಳಸೀದೇವಿಯ ಪುಣ್ಯ೦ದ ( ಅಜ್ಜಿ ಪುಣ್ಯ ಹೇಳ್ತವಿಲ್ಲೆಯೋ,ಹಾಂಗೆ ಹಂಡತಿಪುಣ್ಯ ) ಎಂತದೂ ಮಾಡುಲೆ ಸಾಧ್ಯ ಆತಿಲ್ಲೆ ,ಈಶ್ವರ೦ಗೆ. (” ಯೆಡ್ಡಿ”ಯೂ ಹಾಂಗೆ ಆಗಿತ್ತನ್ನೇ,ಕಳುದ ವರುಷ).ಆದರೆ ದೇವರು ಬುದ್ಧಿವಂತ,ಮಹಾವಿಷ್ಣುವಿನ ಕಪಟನಾಟಕಕ್ಕೆ ಕಳುಸಿದ. ವಿಷ್ಣು ನವರಾತ್ರಿ ವೇಷದ ಹಾಂಗೆ ಜಲಂಧರನ ವೇಷ ಹಾಕಿ ವೃಂದೆಯ ಮನೆಗೆ ಹೋದ. ಅದಕ್ಕೆ ಒಂದರಿಕೊಶಿ ಆತು,ಪತಿ ಇಂದಾದರೂ ಸಮಯಕ್ಕೆ ಬಂದ ಹೇಳಿ ( ಆಫೀಸಿಂದ ಅಲ್ಲ).ಇದರಿಂದ ಅದರ ಪವಿತ್ರತೆ ಹೋಗಿ ಅಪ್ಪಗ ,ಜಲಂಧರನ ಸಂಹಾರ ಮಾಡುಲೆ ಎಡಿಗಾತು.
ವೃಂದೆಯ ಬೂದಿಂದ ತೊಳಸಿ ಸೆಸಿ ಹುಟ್ಟಲಿ ಹೇಳಿ ವಿಷ್ಣು ವರ ಕೊಟ್ಟು,ಪ್ರತಿ ವರುಷ ಉತ್ಥಾನ ದ್ವಾದಶಿ ದಿನ ತುಳಸೀ ಪೂಜೆ ( ಕಲ್ಯಾಣ) ಮಾಡುಸುವ ವ್ಯವಸ್ಥೆ ಮಾಡಿದ ಹೇಳ್ತಲ್ಲಿಗೆ ಕಥೆಮುಗಾತು.
ಒಳ್ಳೆ ಸಾಂದರ್ಭಿಕ ಉದಾಹರಣೆಗಳೊಟ್ಟಿಂಗೆ ವಿವರ್ಸಿದ್ದಿ, ಧನ್ಯವಾದ :).
ಸಂಕೋಲೆ ಕೊಟ್ಟದರ್ಲಿ ಇಪ್ಪ ವಿಷಯ ಎಂತರ ಹೇಳಿರೆ… ಆನು ಮೇಲೆ ಎಂತೆಲ್ಲ ಗುಣಂಗೊ ತುಳಸಿಲಿ ಇದ್ದು ಹೇಳಿ ಬರದ್ದನೋ, ಅದರ ಸಂಶೋಧನೆಯ ವಿವರಣೆ.
ಆಹಾಹಾ.. ಎಷ್ಟು ಚೆನ್ದಕೆ ಹೇಳಿದ್ದಿ.. ಪಷ್ಟು ಕ್ಲಾಸಾಯಿದು.. ಎನಗೆ ನಿನ್ಗೊ ಹೇಳಿದ್ದು ಕೇಳಿಯಪ್ಪಗಳೇ ಪೂರ್ತಿ ನೆನ್ಪಾದ್ದದು. ಗೆನ್ದನ ತ್ರಾಸಿಲ್ಲಿ ಹಾಕಿ ತೂಗಿದ್ದದು (ಶ್ರೀ ಕ್ರಿಷ್ಣ ತುಲಾಭಾರ) ಆರೆಲ್ಲಾ ಹೇಳಿಯು ಮರತ್ತತ್ತಿದಾ.. ರುಕ್ಮಿಣಿಯುದೆ ಸತ್ಯಭಾಮೆಯುದೆಯೊ?
ಕತೆ ಗೊಂತಿದ್ದದೇ. ಕತೆ ಒಟ್ಟಿಂಗೆ ಮುಳಿಯ ಭಾವಯ್ಯ ಕೊಟ್ಟ ಕೋಸಂಬರಿ, ಹಪ್ಪಳ ಸಂಡಿಗೆಂದಲಾಗಿ ಕತೆ ಮತ್ತೂ ಲಾಯಕು ಅರ್ಥ ಆತು !
Tulasi bagye olle lekhana.Hindanavu tulasi katte mane eduru beku heliddu ede uddeshanda.andella daiva devaru heladre nambadda kaala. hangaagi oushada sasya yaavaagalu ati hattare sikkeku heluva uddeshanda tulasi katte maadi tulasi nedle helidavu.nuru roogangokke tulasi maddu heli hiriyavu heltadu keliddde.yanmoole sarwa tirtaani yanmadye sarwa dewata yadaagre sarwa veda heli tulasiya helugu;helire tulasiya budalli yella tirtango ekkada hange madyalli ella dewatago hange tudili yella vedango ekku heli.Tulasi heluvadu astu sresta heli lekha.antu olle lekhana barada konale suvarninige ondu jai.oppangalottinge.
ತುಳಸಿ ಹೇಳುವ ಹೆಮ್ಮಕ್ಕಳ ಯಾವುದೋ ರಾಕ್ಷಸ ಉಪದ್ರ ಕೊಟ್ಟು ಕೊನ್ದತ್ತಾಡ. ಈ ತುಳಸಿ ದೊಡ್ಡಾ ವಿಷ್ಣು ಭಕ್ತೆ ಆಡ. ಹಾನ್ಗಾಗಿ ವಿಷ್ಣು ಆ ರಾಕ್ಷಸನ ಕೊನ್ದು ತುಳಸಿಗೆ ವರ ಕೊಟ್ಟದಾಡ “ಇನ್ನು ಮುನ್ದೆ ಎನಗೆ ಅತ್ಯನ್ತ ಪ್ರಿಯವಾದ ಸೆಸಿಯಾಗಿ ಯಾವತ್ತೂ ನೀನು ಇಪ್ಪೆ. ಎನ್ನ ಪೂಜೆಗೆ ನೀನು ಇಲ್ಲದ್ದೆ ಎಡಿಯ” ಹೇಳಿ. ಕಿಳಿನ್ಗಾರು ಶಾಲೆ ಮೈದಾನಲ್ಲಿ ಸಣ್ಣಾಗಿಪ್ಪಗ ಯಾವುದೋ ಆಟಲ್ಲಿ ನೋಡಿದ ನೆನಪು. ಕ್ರಿಷ್ಣ ದೇವರ ತುಲಾಭಾರ ಮಾಡಿಪಯಪ್ಪಗ ಎಷ್ಟು ಭಾರ ಮಡುಗಿಯುದೆ ತ್ರಾಸು ಮೇಲೆ ಎದ್ದಿದೇ ಇಲ್ಲೆ ಆಡ.ಬೇರೆ ದಾರಿ ಇಲ್ಲದ್ದೆ ಕಡೇನ್ಗೆ ಒನ್ದು ತುಳಸಿ ಎಲೆ ಮಡುಗಿಯಪ್ಪಗ ತ್ರಾಸು ಮೇಲೆ ಬನ್ತಾಡ. ಅದುದೆ ಸಣ್ಣ ಆಗಿಪ್ಪಗ ಚನ್ದಮಾಮಲ್ಲಿ ಓದಿದ್ದದು. ತುಳಸಿಯ ಬಗ್ಗೆ ಸುಮಾರು ಕತೆಗೊ ಇದ್ದು. ಎನಗೆ ಈಗ ಪುರುಸೊತ್ತೆ ಇಲ್ಲೆ. ಎನ್ತ ಮಾಡುವದು? 🙁
ಓಹ್ಹೋ.. ಈ ಕಥೆ ಎಲ್ಲಿಯೋ ಕೇಳಿದ ಹಾಂಗೆ ಇದ್ದು. ಧನ್ಯವಾದಂಗೊ, ವಿವರಣೆ ಕೊಟ್ಟದಕ್ಕೆ.
ಸುವರ್ಣಿನೀ ಅಕ್ಕ ಒಳ್ಳೆ ಮಾಹಿತಿ.. 🙂 😛
ತೊಳಶಿಗೆ ಸೀತೆ ಶಾಪ ಕೊಟಿದು ಹೇಳಿ ಎನ್ನ ಅಜ್ಜಿ ಹೇಳುಗು… ಅಪ್ಪೊ?? ಇದರ ಹಿನ್ನಲೆಯ ಬಟ್ಟಮಾವ ಅಥವ ಗಣೇಶ ಮಾವ ತಿಳುಶಿಕೊಡೆಕು…??
thanx 🙂
ಲೈಕಾಯಿದು ಅತ್ತಿಗೆ… ನಿಂಗಳ ಹೆಸರು change ಅತೋ ಹೇಳಿ????
thanx. ಹೆಸರು change ಆಯ್ದಿಲ್ಲೆ, ಪೂರ ಹೆಸರು ಬರದ್ದೆ, ಅಷ್ಟೇ 🙂