Oppanna.com

ನೆಲ್ಯಾರು ಗೋವಿಂದ ಭಟ್

ಬರದೋರು :   ಕೇಜಿಮಾವ°    on   14/10/2010    17 ಒಪ್ಪಂಗೊ

ಇವ° ಎಂಗಳ ಗೋವಿಂದ°.ವಿಟ್ಳದ ಹತ್ತರೆ ನೇಲ್ಯಾರು,ಅನಂತಾಡಿಲಿ ಮನೆ.ಹೆಚ್ಚಿನವಕ್ಕೆ ಇವನ ಸಾಹಸದ ಬಗ್ಗೆ ಓದಿಯಾರೂ ಗೊಂತಿಕ್ಕು.

ಅಪ್ಪ° ನಗ್ರಿಮೂಲೆ ಶಂಕರ ಭಟ್ರು.ವೃತ್ತಿಲಿ ಕೃಷಿಕ°.

ಸುಮ್ಮನೆ ಕೂಪಲೆ ಇವಂಗೆ ಎಡಿಯ.ಮನೆಲಿ ಸೌರ ಶಕ್ತಿಯ ಉಪಯೋಗ ಸುರು ಮಾಡಿದವರಲ್ಲಿ ನಮ್ಮ ಊರಿಲ್ಲಿ ಇವನೇ ಮದಲು ಹೇಳಿರೆ ತಪ್ಪಾಗ.

ಕೆಲಸಕ್ಕೆ ಜೆನ ಸಿಕ್ಕುತ್ತೊವಿಲ್ಲೆ ಹೇಳಿಯೊಂಡು ಕಳೆ ಕೊಚ್ಚುವ ಮಿಶನಿಂದ ಹಿಡುದು ಯಾವದೆಲ್ಲಾ ಸಾಧ್ಯ ಇದ್ದೋ ಅದೆಲ್ಲಾ ಮಿಶನಿಲ್ಲಿ ಮಾಡುವ ಜೆನ.

ಇಪ್ಪತ್ತು ವರ್ಷದ ಹಿಂದೆ ಸೈಕ್ಕಲಿಲ್ಲಿ ಪ್ರಪಂಚ ಸುತ್ತಿ ಬಯಿಂದ.

ಆಮೇಲೆ ಸಾಹಸದ ಪ್ರವೃತ್ತಿ ಆದ ಕಾರಣ ಒಂದು ಗ್ಲೈಡರ್ ತೆಕ್ಕೊಂಡ,ಅಲ್ಲಿ ರಜಾ ತೊಂದರೆ ಆತದಾ.೭೫-೧೦೦ ಅಡಿ ಎತ್ತರಂದ ಹಾರುವಾಗ ಬಿದ್ದು ರಜಾ ಪೆಟ್ಟು,ನೆಡವದು ಕಷ್ಟ.ತೋಟಕ್ಕೆ ಹೇಂಗೆ ಹೋಪದು?ಚೀನಂದ ತೋಟಕ್ಕೆ ಹೋಪಲೆ ಹೇಳಿ ಮೂರು ಚಕ್ರದ ವಾಹನ ತರುಸಿ ಅದರಲ್ಲಿ ಹೋವುತ್ತ°.

ಹೆಚ್ಚು ರಾಸಯನಿಕ ಗೊಬ್ಬರ ಉಪಯೋಗ ಮಾಡ°.

ತಾನು ಅನುಭವಿಸಿದ್ದದರ ಬರೆತ್ತ°.ಅಡಿಕೆ ಪತ್ರಿಕೆಲಿ ಇವನ ಬರಹಂಗೊ ಬಂದ ನೆಂಪು.

http://atvindia.blogspot.com/2010/04/second-part-of-our-seashore-trip.html

http://halliyimda.blogspot.com/

ಹೆಚ್ಚಿನ ಮಾಹಿತಿ ಈ ಬ್ಲೋಗುಗಳಲ್ಲಿದ್ದು.

ಕೇಜಿಮಾವ°
Latest posts by ಕೇಜಿಮಾವ° (see all)

17 thoughts on “ನೆಲ್ಯಾರು ಗೋವಿಂದ ಭಟ್

  1. ಅವ° ಎಲ್ಲೊರೂ ಬುದ್ಧಿವಂತರ ಹಾಂಗೇ ರಜಾ ಮೂಡಿ,ಹೇಳಿದ್ದೆ,ಈಗಂತೂ ಅವ° ಭಾರತ ಯಾತ್ರೆ ಮಾದುವ ತಯಾರಿಲಿ ಇದ್ದ°.ಹಾಂಗೆ ಹೇಳಿ ಮನಸ್ಸಾದರೆ ಬರಗು.ಇನ್ನೊಂದರಿ ನೆಂಪು ಮಾಡ್ತೆ.

  2. ಬೈಲಿಂಗೆ ಬತ್ತನೋ ಹೇಳಿ ಕೇಳುದರಲ್ಲಿ ತಪ್ಪಿಲ್ಲೆ.ಅವ° ರಜಾ ಮೂಡಿ.ಮನಸಾದರೆ ಬರಗು,ಈ ಬುದ್ಧಿವಂತರು ಎಂತ ಮಾಡುಗು ಹೇಳುದು ಕಷ್ಟವೇ.ಲಾಯಕ ಬರೆತ್ತ°.ಕೇಳಿ ನೋಡ್ತೆ.

    1. ಕೇಳಿನೋಡಿದಿರೋ ಮಾವಾ..?
      ಬೈಲಿಲಿ ಕಾದೊಂಡಿದ್ದವು,
      ಗೋವಿಂದಮಾವ ಬತ್ತರೆ ಸಂತೋಷ, ಬರೆತ್ತರೆ ತುಂಬಾ ತುಂಬಾ ಸಂತೋಷ.

  3. ನಮಸ್ತೇ ಕೇಜಿಮಾವ..
    ಗೋವಿಂದಣ್ಣನ ಬಗ್ಗೆ ಬರದ್ದರ ಕಂಡು ಕೊಶಿ ಆತು.
    ಹಳ್ಳಿಯಿಂದ ಚೆಂದ ಇದ್ದಡ, ಮಾಷ್ಟ್ರುಮಾವನ ದೊಡ್ಡಮಗ° – ಅಮೇರಿಕಲ್ಲಿಪ್ಪವ° – ನಿತ್ಯ ಓದುತ್ತನಡ, ನಿನ್ನೆ ಪೋನುಮಾಡಿಪ್ಪಗ ಹೇಳಿದ°.
    ಹೇಳಿದಾಂಗೆ, ಅವು ನಮ್ಮ ಬೈಲಿಲಿ ಅವರ ಶುದ್ದಿ ಹೇಳುಗೋ?

  4. ಇವರ ಬಗ್ಯೆ ಅತ್ರಿ ಬುಕ್ ಸೆ೦ಟರಿನ ಅಶೋಕ ವರ್ಧನ ಭಾವ೦ ಬರದಿತ್ತಿದ್ದವು.ಈಗ೦ತೂ ನಮ್ಮ ಬಯಲಿಲ್ಲಿಯೇ ಸುದ್ದಿ ಓದಿ ಕೊಶಿ ಆತು.ಅಡಿಕೆ ಪತ್ರಿಕೆಲಿಯೂ ಅವರ ಬಗ್ಯೆ ಲೇಖನ ಇತ್ತು.ಆಗಲಿ ಹಿ೦ಗಿಪ್ಪ ನಮ್ಮ ಹವೀಕ ಸಾಹಸಿಗಳ ಪರಿಚಯ ಮಡಿ ಕೊತ್ತೊನ್ದಿರಿ.ಒಪ್ಪ೦ಗಳೊಟ್ಟಿ೦ಗೆ.

    1. ಎಂಗಳ ಸುಬ್ಬಣ್ಣ ಭಟ್ರ ಪರಿಚಯ ಮಾಡೆಕ್ಕು ಹೇಳಿ ಗ್ರೇಶಿಯೊಂಡಿದ್ದೆ.ಅವು ಇಸ್ರೊಲ್ಲಿ ವಿಜ್ಞಾನಿಯಾಗಿ ಈಗ ನಿವೃತ್ತ ಜೀವನ,ಹೇಳಿರೆ ಸುಮ್ಮನೆ ಕೂದೊಂಡಲ್ಲ,ಕೆಲಸ ಮಾಡ್ತಾ ಇದ್ದವು,ಈಗ ಕನ್ಸಲ್ಟೇಶನ್ ಮಾಂತ್ರ.ಅವರ ಕೇಳಿ ಆಯೆಕ್ಕಷ್ಟೆ.

  5. ನಮ್ಮಲ್ಲಿ ಸಾಹಸ ಪ್ರವೃತ್ತಿಯವು ಇದ್ದವು. ಆದರೆ ಬೆಳಕಿಂಗೆ ಬತ್ತವಿಲ್ಲೆ. ನಾವು ಪ್ರಚಾರ ಪ್ರಿಯರು ಅಂತೂ ಖಂಡಿತಾ ಅಲ್ಲ. ಇವರ ಬಗ್ಗೆ ಬರವಲೆ ಹೆರಟರೆ ತುಂಬಾ ಇದ್ದು ಹೇಳ್ತವು ಕೇಜಿ ಅಣ್ಣ. ಆದರೂ ಸಣ್ಣ ಮಟ್ಟಿನ ಪರಿಚಯ ಕೊಟ್ಟದು ಅವರ ಬಗ್ಗೆ ಹೆಚ್ಚು ತಿಳಿವಲೆ ಅನುಕೂಲವೇ ಆತು. ಧನ್ಯವಾದಂಗೊ

  6. ಈ ಗೋವಿಂದಣ್ಣನ ಸುಮಾರು ೨೫ ವರ್ಷ ಹಿಂದೆ ಪರಿಚಯ ಆಗಿತ್ತು,ಅಂಬಗ ಅವು ಸೈಕಲಿಲ್ಲಿ ಜಗತ್ತು ತಿರುಗಿಕ್ಕಿ ಬಂದ ಸಮಯ,ಪಶ್ಚಿಮಘಟ್ಟ ಉಳಿಸಿರಿ ಆಂದೋಲನಲ್ಲಿ ಕಂಡು ಪರಿಚಯ ಆಗಿತ್ತು.ಇವರ ಜೀವನದ ಸಾಹಸಂಗೊ ನಮ್ಮ ಹಾಂಗಿಪ್ಪ ಸಾಮಾನ್ಯದವಕ್ಕೆ ಮಾಡಿ ತೋರುಸಲೆ ಕಷ್ಟಸಾಧ್ಯ!!ಕೆ.ಜಿ.ಮಾವ ಬಯಲಿಂಗೆ ಅವರ ಪೂರ್ತಿ ಸಾಹಸಂಗಳ ತಿಳಿಸಿದ್ದವಿಲ್ಲೆ ಹೇಳಿ ಎನಗೆ ಅನಿಸುತ್ತು,ಇನ್ನು ರಜ ವಿವರ ಬರತ್ತಿರಾ?

    1. ಅಪ್ಪು.ಅವನ ಪರಿಚಯ ಎಲ್ಲಿಂದ ಸುರು ಮಾಡುದು ಎಲ್ಲಿ ನಿಲ್ಲುಸುದು ಹೇಳಿ ಗೊಂತಾವುತ್ತಿಲ್ಲೆನ್ನೆ.ನಾಳ್ತು ಆದಿತ್ಯವಾರ ಬರೆತ್ತೆ,ಎನ್ನ ಚೈತನ್ಯ ಇಪ್ಪಷ್ಟು.

  7. ಸಣ್ಣದೆಂತಾರು ಆದಕೂಡ್ಲೆ ಎಲ್ಲವೂ ಮುಗುತ್ತು ಹೇಳಿ ಬದುಕ್ಕುವ ಜೆನಂಗಳೇ ಹೆಚ್ಚಾದಿಪ್ಪಗ… ಎಲ್ಲವೂ ಸರಿ ಇದ್ದರೂ ಏನೂ ಮಾಡದ್ದೇ ಬದುಕುವವಕ್ಕುದೇ ಮಾದರಿ ಆಗಿ ಬದುಕ್ಕುತ್ತಾ ಇಪ್ಪ ಗೋವಿಂದಣ್ಣನ ಪರಿಚಯ ಮಾಡಿಕೊಟ್ಟದು ಸಂತೋಷ ಆತು 🙂 ಧನ್ಯವಾದಂಗೊ

  8. ಕೇಜಿ ಮಾವ,ನಿಂಗಳ ಗೋವಿಂದನ ಎಂಗೊಗೆ ಪರಿಚಯ ಮಾಡಿದ್ದಕ್ಕೆ ಧನ್ಯವಾದ. ಇವು ಇನ್ನು ನಮ್ಮೆಲ್ಲರ ಗೋವಿಂದ° ಆಗಲಿ. ಬೈಲಿನವಕ್ಕೆ ಅನುಭವ ಹಂಚಲಿ,ಹೊಸ ಮಾರ್ಗದರ್ಶನ ಸಿಕ್ಕಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×