Oppanna.com

ಆಳ್ವಾಸ್ ನುಡಿಸಿರಿ ೨೦೧೦, ಮೂಡಬಿದಿರೆ.

ಬರದೋರು :   ಸುವರ್ಣಿನೀ ಕೊಣಲೆ    on   29/10/2010    32 ಒಪ್ಪಂಗೊ

ಸುವರ್ಣಿನೀ ಕೊಣಲೆ
ಆಳ್ವಾಸ್ ನುಡಿಸಿರಿ ಇಂದು ಶುರು ಆಯ್ದು, ಕಾರ್ಯಕ್ರಮಂಗೊ ನಡೆತ್ತಾ ಇದ್ದು, ಈ ಗೌಜಿಯ ನೋಡೆಕಾದ್ದೆ….ಅಂದಾಜಿ ಮಾಡಿದ್ದಕ್ಕಿಂತ ಹೆಚ್ಚು ಜೆನ ಬೈಂದವು !! ಜನಜಾತ್ರೆ. ಒಂದೊಂದು ಕಾರ್ಯಕ್ರಮವೂ ತುಂಬಾ ಲಾಯ್ಕಿದ್ದು.
ಉದಿಯಪ್ಪಗ ಮೆರವಣಿಗೆಲಿ ಸಮ್ಮೇಳನಾಧ್ಯಕ್ಷರ ವೇದಿಕೆಗೆ ಕರಕ್ಕೊಂಡು ಬಪ್ಪದರಿಂದ ಹಿಡುದು, ಉದ್ಘಾಟನೆ, ಅಧ್ಯಕ್ಷರ ಆಶಯ ಭಾಷಣ, ಬೇರೆ ಎಲ್ಲ ಕಾರ್ಯಕ್ರಮಂಗೊ ಎಷ್ಟು ಚೆಂದಕ್ಕೆ ನಡತ್ತು ಹೇಳಿ ಮಾತಿಲ್ಲಿ ಹೇಳುಲೆ ಸಾಧ್ಯವೇ ಇಲ್ಲೆ ! ಸ್ವತಃ ನಮ್ಮ ಕಣ್ಣಿಂದಲೇ ನೋಡೆಕ್ಕು !!
ಕವಿಸಮಯ-ಕವಿನಮನ… ಧರ್ಮ ಮತ್ತು ಜೀವನ ಮೌಲ್ಯಂಗಳ ಬಗ್ಗೆ ನಡದ ವಿಚಾರಗೋಷ್ಠಿಗೊ ಎಲ್ಲವೂ ಲಾಯ್ಕಕ್ಕೆ ನಡತ್ತು.
ಇಂದು ಹೊತ್ತೋಪಗ ಶತಾವಧಾನಿ ಆರ್.ಗಣೇಶ್ ಅವರ ಉಪನ್ಯಾಸ ಇತ್ತಿದ್ದು, “ಮೌಲ್ಯಗಳ ಪರಿಕಲ್ಪನೆ” ಹೇಳ್ತ ವಿಷಯದ ಬಗ್ಗೆ. ಒಂದು ಗಂಟೆ ಹೊತ್ತು ಅವರ ಮಾತಿನ ಕೇಳಿ ತುಂಬಾ ಸಂತೋಷ ಆತು…ಮಾತಿಲ್ಲಿ ಜೆನರ ಹಿಡುದು ಮಡುಗುವ ಅವರ ಕಲೆ…ಅವರ ಪಾಂಡಿತ್ಯ…ತತ್ವಜ್ಞಾನವನ್ನೂ ವಿಜ್ಞಾನವನ್ನೂ ಅವ್ವು ಹೊಂದಿಸಿ ಅರ್ಥ ಮಾಡ್ಸುವ ರೀತಿ… ವೇದವೇ ಆಗಲಿ ಜಾನಪದವೇ ಆಗಲಿ ಅದರದರ ಶ್ರೇಷ್ಠತೆಯ ವಿವರ್ಸಿದ ರೀತಿ…ಧರ್ಮ ಹೇಳೀರೆ ಎಂತರ ಹೇಳುದಕ್ಕೆ ಕೊಟ್ಟ ವಿವರಣೆ… ಮೌಲ್ಯಂಗೊ ಹೇಳಿರೆ ಎಂತರ ಹೇಳಿ ಅವ್ವು ಕೊಟ್ಟ ವಿವರಣೆ…. ಪ್ರತಿಯೊಂದೂ ವಿಚಾರಕ್ಕೆದೇ ಒಪ್ಪುವ ಉದಾಹರಣೆ ಸಮೇತ ಮಂಡಿಸುವ ಅವರ ಪ್ರಬುದ್ಧತೆ !!!! ….ಅದ್ಭುತ !!! ಇಂದ್ರಾಣ ಎಲ್ಲ ಕಾರ್ಯಕ್ರಮಂಗಳಲ್ಲಿ ಎನಗೆ ಹೆಚ್ಚು ಇಷ್ಟ ಆದ್ದು ಇದೇ ಕಾರ್ಯಕ್ರಮ 🙂
ಅದಾದಮೇಲೆ ಗಂಗಾವತಿ ಪ್ರಾಣೇಶ್ “ಬೀಚಿಯವರ ಸಾಹಿತ್ಯದಲ್ಲಿ ಹಾಸ್ಯ” ಹೇಳ್ತ ವಿಷಯಲ್ಲಿ ಮಾತಿನ ಮಂಟಪ ತುಂಬಾ ಚೆಂದಕ್ಕೆ ಕಟ್ಟಿದವ್ವು, ನಮ್ಮ ಸಮಾಜಲ್ಲಿ ಈಗ ಇಪ್ಪ ಸಮಸ್ಯೆಗಳ ಮೇಲೆಯೂ ಬೆಣಚ್ಚು ಚೆಲ್ಲಿದವು.
ಅದಾದಮೇಲೆ ಸಾಂಸ್ಕೃತಿಕ ಕಾರ್ಯಕ್ರಮಂಗೊ, ಆಳ್ವಾಸ್ ನ ಕಾರ್ಯಕ್ರಮಂಗಳ ಬಗ್ಗೆ ಹೇಳೆಕಾ? ಪ್ರತಿಯೊಂದೂ perfect. ಆನು ಹೊಗಳುದಲ್ಲ, ಇಪ್ಪ ವಿಚಾರ ಅದು. ಇಲ್ಲಿ ನೋಡಿದವಕ್ಕೆ ಗೊಂತಿಕ್ಕು. ಸಮಯದ ವಿಚಾರಕ್ಕೆ ಬಂದರೂ ಎಂಗಳ ಸಂಸ್ಥೆ perfect, ಒಂದು ನಿಮಿಷ ಹೆಚ್ಚು ಕಮ್ಮಿ ಇಲ್ಲೆ !! ಎಷ್ಟೇ ದೊಡ್ಡ ಕಾರ್ಯಕ್ರಮ ಆಗಲಿ.
ವಿದ್ಯಾಭೂಷಣರ ಭಕ್ತಿಸುಧೆ, ಕೆಲವು ನೃತ್ಯರೂಪಕಂಗೊ,ಸುಗಮ ಸಂಗೀತ, ಯಕ್ಷಗಾನ ಮತ್ತೆ ತಾಳ ಮದ್ದಳೆ. ಗಂದರ್ವಲೋಕ ಸೃಷ್ಟಿ ಆದ ಹಾಂಗೆ !!
ಇನ್ನೂ ಎರಡು ದಿನ ಕಾರ್ಯಕ್ರಮ ಇದ್ದು, ಸಾಧ್ಯ ಆದರೆ ಬನ್ನಿ 🙂
ಒಂದು ವಿಷಯ ಮರತ್ತು !!
ನುಡಿಸಿರಿ ಕಾರ್ಯಕ್ರಮಕ್ಕೆ ಬಪ್ಪ ಎಲ್ಲೋರಿಂಗೂ ಉದಿಯಪ್ಪಗಾಣ ತಿಂಡಿ, ಮಧ್ಯಾಹ್ನ ಮತ್ತು ಇರುಳಾಣ ಭೋಜನ ವ್ಯವಸ್ಥೆದೇ ಇದ್ದು.
ಇಲ್ಲಿ ಈ ಎಲ್ಲಾ ಕಾರ್ಯಕ್ರಮಂಗಳೊಟ್ಟಿಂಗೆ ಹಲವು ಪುಸ್ತಕ ಪ್ರದರ್ಶನ ಮತ್ತೆ ಮಾರಾಟ, ವಸ್ತ್ರಂಗಳ ಪ್ರದರ್ಶನ ಮತ್ತೆ ಮಾರಾಟ ಇತ್ಯಾದಿಗಳುದೇ ಇರ್ತು.
-ನಿಂಗಳ
ಸುವರ್ಣಿನೀ ಕೊಣಲೆ,ಮೂಡಬಿದಿರೆ.

32 thoughts on “ಆಳ್ವಾಸ್ ನುಡಿಸಿರಿ ೨೦೧೦, ಮೂಡಬಿದಿರೆ.

  1. kannada manassu jeevana moulagalu heluva parikalpane li mooru dina nedada nudisiri tumba laika aagi muguddu

    1. ಅಪ್ಪು, ಮೂರು ದಿನದ ನುಡಿಸಿರಿ ಗೌಜಿಲಿ ಕಳತ್ತು. ಅದಾದ ಮೇಲೆ ರಾಜೀವ್ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಯುವಜನೋತ್ಸವ “ಸ್ವರೂಪ-೨೦೧೦” ನವೆಂಬರ್ ೨ ರಿಂದ ೪ ರ ವರೆಗೆ ಗೌಜಿಲಿ ನಡತ್ತು. ಸುಮಾರು ಏಳು ವರ್ಷಂದ ಆಳ್ವಾಸ್ ನ ವಿದ್ಯಾರ್ಥಿಗೊಕ್ಕೇ overall championship ಸಿಕ್ಕಿಗೊಂಡಿತ್ತು. ಈ ಸರ್ತಿ ಇಲ್ಲಿಯೇ ಅಪ್ಪ ಕಾರಣ ಆಳ್ವಾಸ್ ನ ವಿದ್ಯಾರ್ಥಿಗೊ ಯಾವುದೇ ಸ್ಪರ್ಧೆಲಿ ಭಾಗವಹಿಸಿದ್ದವಿಲ್ಲೆ !!!

  2. ಎಲ್ಲಾಕಲಬೆರಕೆ ಕಾಲ ಅಲ್ಲದೊ ಮಣ್ಣು ಸೇರುಸವು ಹೇಳಿಯೇ ನ೦ಬಲೆಡಿಯ.ಮತ್ತೆ ಬೋಸ ಭಾವ೦ ಗ್ರಹಿಸಿದ ಹಾ೦ಗಿಪ್ಪ ಬೋಸ೦ ಅಲ್ಲ.ಅವ೦ ನಮ್ಮ ಬಯಲಿನ ಡಾಕುಟ್ರಕ್ಕಳನ್ನೆ ನ೦ಬಿಯೊ೦ಡಿದ ಅದ ಹಾ೦ಗಾಗಿ ನಮ್ಮ ಬಯಲಿನೋರು ಅವ೦ಗೊದಷ್ಟು ಸಹಾಯ ಮಾಡೆಕೆ. ಅಪ್ಪೊ ಭಾವ ರಘು ಅಣ್ಣನೋ ಶರ್ಮಪ್ಪಚ್ಚಿಯೋ ಹೇಳಿ ಕೊಟ್ಟದಲ್ಲಾನೆ?ಹೆ೦ಗಾರು ಇರಳಿ ನಾವು ಒಪ್ಪ ಕೊಟ್ಟು ಮುಗುಸುವೊ೦.ಒಪ್ಪ೦ಗಳೊಟ್ಟಿ೦ಗೆ.

  3. ಬೋಸ ಭಾವ ಪುಸ್ತಕ ಎಲ್ಲ ಬೇಕಾರೆ ಕಾಸ್ರೋಡಿ೦ಗೆ ಬ೦ದರೆ ಮುಸುತ್ತ ಬ್ಯಾರಿ ಹಾ೦ಗಿಪ್ಪವು ಇದ್ದವು ಅವು ಮಾಡಿ ಕೊಡುಗು ಅ೦ಬಗ ಬೋಸ ಭಾವ೦ ಸಿಕ್ಕಿ ಬೀಳುಗೋ ಹೇಳಿ ಹೆದರಿಕೆ ಹಾ೦ಗಾಗಿ ಸದ್ಯಕ್ಕೆ ಹಲ್ಲಿ೦ಗೆ ಸಿಮೇ೦ಟೊ ಮಣ್ಣೊ ಹಾಕುತ್ತವು ಊರಿಲ್ಲೇ ಸಿಕ್ಕುಗೊ ಹೇಳಿ ಕೆ.ಜಿ.ಭಾವನ ಹತ್ರೆ ತಿಳುಕ್ಕೊ೦ಬದು ಸುಖ.ಏವದಕ್ಕೂ ಮು೦ಜಾಗ್ರತೆ ಆಗಿ ನೀನು ಆ ಹಲ್ಲುಗಳ ರಜಾ ಒಳ ಎಳಕ್ಕೊ ಎಲ್ಲಿಯಾರು ಹೋಪಾಗ ಆರಿ೦ಗಾರು ತಾ೦ಟ್ಲಾಗಾನೆ.ಮತ್ತೆ ನೀನು ಸುವರ್ಣಿನಿ ಅಕ್ಕನ ಕೇಳಿರೆ ಅವು ಏವದಾರು ಅರಿಸ್ಟವೋ ಕಷಾಯವೋ ಕೊಡುಗು ಹೋಳಿಗೆ ಕಮ್ಮಿ ಮಾಡಿಕ್ಕೆಡ ಮೆನಿಯ೦.ನಮ್ಮ ಬಯಲಿನೋರಿ೦ಗೆ ಭೋಸ ಭಾವ೦ ಹೋಳಿಗೆ ಹೊಡವದರಲ್ಲಿ ನ೦ಬ್ರ ಒ೦ದು ಹೇಳಿ ಇದ್ದದ ಅದರ ಕಳವಲಾಗಾನೆ.ತಪ್ಪಿ ಹೋಗಿ ಗೇಸು ಬ೦ದರೆ ಈ ಕಾಲಲ್ಲಿ ಗೇಸು ಸಿಕ್ಕಲೆ ಕಷ್ಟಾ ಹೇಳಿ ಬಿಟ್ಟದು ಹೇಳೀರಾತು.ಒಪ್ಪ೦ಗಳೊಟ್ಟಿ೦ಗೆ

    1. ಹಲ್ಲಿಂಗೆ ಸಿಮೆಂಟು ಹಾಕುದು ಗೊಂತಿದ್ದು… ಮಣ್ಣುದೆ ಹಾಕುತ್ತವಾ?

      1. ಸಿಮೆಂಟು ಕಲಸಲೆ ಹೊಯಿಗೆ ಬೇಕಿದಾ.. ಅದೊ ಎನೊ??

    2. ಮುಸುತ್ತದು ಬೇಡ.. ಉದ್ದುತ್ತು ಬೇಡ.. 😀 😛 ನಮ್ಮ ಬಯಲಿ ಇಪ್ಪ ಡಾಗುಟ್ರ ಸರಿ ಮಾಡುಗಪ್ಪಾ… ಸಾಕು.. 😀 😛

      1. ಮೊನ್ನೆ 3 ಕ್ಕೆ 3 ಕೂಡಿಸಿರೆ 3 ಹೇಳ್ತವ ಈಗ 5 ಹೇಳ್ಲೆ ಸುರು ಮಾಡಿದ್ದ.ಉತ್ತರ ಹತ್ತರೆ ಹತ್ತರಂಗೆ ಬತ್ತಾ ಇದ್ದು. ಈಗ ರೆಜ ರೆಜವೆ ಹುಷಾರು ಆವ್ತಾ ಇದ್ದ. ಮತ್ತೆ ಎಲ್ಲರೂ ಸೇರಿ ಅವನ ದಾರಿ ತಪ್ಪಿಸೆಕ್ಕೆಡಿ.

  4. { ಎಲ್ಲೋರಿಂಗೂ ಉದಿಯಪ್ಪಗಾಣ ತಿಂಡಿ, ಮಧ್ಯಾಹ್ನ ಮತ್ತು ಇರುಳಾಣ ಭೋಜನ ವ್ಯವಸ್ಥೆದೇ ಇದ್ದು }
    ಎನಗೆ ಇಡೀದಿನಕ್ಕೆ ಪುರುಸೊತ್ತಾತಿಲ್ಲೆ!
    – ಇರುಳಿಂಗೆ ನಿಲ್ಲದ್ದೋರಿಂಗೆ ಕಟ್ಟಿಕೊಡ್ತವೋ ಸುವರ್ಣಿನಿಅಕ್ಕಾ°?

    1. [ಕಟ್ಟಿಕೊಡ್ತವೋ]
      ಬೆನ್ನಿಂಗೆ ಹಾಳೆ ಕಟ್ಟಿ ಎರಡು ಕೊಡ್ತವೋ ಹೇಳಿ ಕೇಳಿದ್ದಾ ನಗೆಗಾರ?

  5. ಬಯಲಿನೋರೆಲ್ಲ ಮನಸ್ಸು ಮಾಡಿರೆ ಬೋಸಭಾವನ ಹಲ್ಲು ಅಮೇರಿಕ ಅಲ್ಲದ್ರು ಚೀನಲ್ಲಿ ಆರು ಮಾಡ್ಸಿ ಗೊ೦ಬಲಕ್ಕು.ಚೀನಾ ಹೇಳಿದ್ದೆ೦ತಕೆ ಹೇಳೀರೆ ಚೀನದ್ದೆಲ್ಲದಕ್ಕು ಕ್ರಯ ಕಮ್ಮಿ ಅದ.ಮತ್ತೆ ಹಲ್ಲು ಸರಿ ಬಾರದ್ದೆ ಕೀಳುಸೇಕಾಗಿ ಬ೦ದರೆ ಖರ್ಚಿಲ್ಲೆ ಏಕೆ ಹೇಳಿರೆ ಅದಾಗಿಯೆ ಹೆಚ್ಹು ಸಮಯ ನಿಲ್ಲದ್ದೆ ಬಿದ್ದು ಹೋಕದ.ಮತ್ತೆ ಜೋಸ್ತಿಗೊ ಅಲ್ಲದ್ದವರ ಬೊಡುಸಲೆಡಿಯದ ಅವ್ವು ತಕ್ಕ ನೋಡಿ ತಪ್ಸಿಯೊ೦ಗು.ಹಾ೦ಗೇ ಹೋಳಿಗೆ ಒ೦ದು ಇಪ್ಪತಯಿದಾದರು ಹೊಡೆಯದ್ರೆ ಬೋಸ ಭಾವನ ಕೇಳಿಗೆ ಒ೦ದು ಕೊರತ್ತೆ ಅಲ್ಲದೊ.ಇನ್ನು ನಮ್ಮ ಪೆರ್ವ ಗಣೇಶ೦ಗೊ೦ದು ಟಿಪ್ಪಣಿ ಆರೂ ಬರೆಡದೊ.ಶತಾವದಾನಿ ಗಣೇಶರ ಹಾ೦ಗಿಪ್ಪವು ಈ ಕಾಲಲ್ಲಿ ಇದ್ದವೋ ಹೇಳಿಯೇ ಸ೦ಶಯ.ಆರಾರು ಕೇಳದ್ದವಿದ್ದರೆ ಕೇಳಿ ನಮ್ಮ ಕಾಲದ ಒ೦ದು ಅದ್ಭುತ ಪ್ರತಿಭೆಯ ಕೇಳುವ ಸದವಕಾಶವ ಎಲ್ಲಿದ್ದರೂ ಕಳ ಕ್ಕೋಳೇಡಿ.ಇನ್ನು ಒಪ್ಪ ಕೊಟ್ಟು ನಿಲ್ಲುಸುವೊ೦ ಆಗದೊ?ಒಪ್ಪ೦ಗಳೊಟ್ಟಿ೦ಗೆ

    1. ಛೇ… ಛೇ… ಎ೦ತ್ಸೂ ಬೇದಪ್ಪಾ… ಆರಿ೦ಗೆಡಿಗು ಗೊ೦ತಿಲ್ಲದ್ದ ಊರಿ೦ಗೆ ಹೋಯೆಕು…! ಮತ್ತೆ ವಿಮಾನಲ್ಲಿ ಹೋಯೆಕಾರೆ ಅಲ್ಲಿಗೆಲ್ಲಾ ಅದು ಎ೦ತ್ಸರಪ್ಪಾ..?? ಪಾಸ್ಪೋರ್ಟ್ ಪುಸ್ತಕ ಎಲ್ಲಾ ಬೇಕಡ… ಆರಿ೦ಗೆ ಎಡಿಗು..!!! ಅಮೇರಿಕವು ಬೇಡ ಚೀನವು ಬೇಡ…. 😛
      ಹಾ.. ಮತ್ತೆ ಇಪ್ಪತೈದು ಹೋಳಿಗೆ ಆನು ತಿ೦ದರೆ, ಮರು ದಿನ ಕಡ್ಲೆ ಪ್ರಬಾವ ಬೀರುಗು, ಹತ್ತರೆ ಆರು ಬಾರವಿದಾ…. 😀

  6. ಶತಾವಧಾನಿ R ಗಣೇಶರ ಅಷ್ಟಾವಧಾನ ಅಥವಾ ಶತಾವಧಾನ ಕಾರ್ಯಕ್ರಮ ನೋಡಿದ್ದಿರಾ? ೧೦-೧೨ ವರ್ಷ ಮೊದಲು ನೀರ್ಚಾಲು ಶಾಲೆಲಿ ಒ೦ದರಿ ಆಗಿಪ್ಪಗ ಆನು ಹೋಗಿತ್ತಿದ್ದೆ.. ನಿಜವಾಗಿಯೂ ಅದ್ಭುತ ಪಾ೦ಡಿತ್ಯ, ಅದರಿ೦ದಲೂ ವಿಶೇಷದ ನೆ೦ಪಿನ ಶಕ್ತಿ.. ಮೆಚ್ಚೆಕಾದ ಕಾರ್ಯಕ್ರಮ ಆಗಿದ್ದತ್ತು..

  7. ಏ ಬೋಸ ಭಾವ ನಿನಗೆ ಹೋಳಿಗೆ ಚಿ೦ತೆ ಹೊರತು ಬೇರೇನೂ ಇಲ್ಯೊ,ಒಟ್ಟಿ೦ಗೆ ಈ ಒ೦ದು ಅ೦ತ್ಯಾಕ್ಷರಿಯೂ;ಅಲ್ಲ ಈ ಶರ್ಮಪ್ಪಚ್ಚಿಯ ಒಟ್ಟಿ೦ಗೆ ಸೆರುಸಿಗೊ೦ಬದೆ೦ತಕೆ?ಅವು ಪಾಪ ನಿನ್ನ ಮೇಗೆ ಏನೋ ಒ೦ದು ಸಹತಾಪ ತೋರ್ಸುತ್ತವು ಹೇಳಿ ಅವರ ಬೊಡುಶೆಡ ಆತೊ.ಮತ್ತೆ ರಘುಭಾವ೦ ಆದರೆ ನಿನ್ನ ಹೇ೦ಗಾರು ಹದ್ದು ಬಸ್ತಿಲ್ಲಿ ಮಡಗಿಯೊ೦ಗು.ಮತ್ತೆ ನೀನು ಮನ್ನೆ ಹಲ್ಲಿನ ಡಾಕುಟ್ರತ್ರೆ ಹೋಗಿ ಮಾತಾಡುವದು ಕ೦ಡತ್ತು ಹೇಳಿ ಬಯಲಿನೋರು ಹೆಳುವದು ಕೇಳಿತ್ತು.ಎ೦ತ ಹಲ್ಲು ರಿಪೇರಿ ಆಲೋಚನೆ ಇದ್ದೊ.ಇದ್ದರೆ ಆ ಎದುರ೦ಗೆ ಗೆಣಪ್ಪಜ್ಜ೦ ಮಹಾಭಾರತ ಬರವಲೆ ತು೦ಡು ಮಾಡಿ ಉಪಯೋಗಿಸಿದ ಹಲ್ಲಿದ್ದದ (ಈಗ ಅದು ಅವ್೦ಗೆ ಅಸ್ಟು ಉಪಯೋಗ ಇರ) ಅದರನ್ನೇ ಮಡಗುವದು ಒಳ್ಳೆದು ಒಳ್ಳೆ ಚೇರ್ಚೆ ಬಕ್ಕದ.ಒಪ್ಪ೦ಗಳೊಟ್ಟಿ೦ಗೆ

    1. ಅದಾ.. ಆನು ಶರ್ಮಪ್ಪಚಿಯ ಬೊಡುಶುತ್ತಿಲ್ಲೆನೆಪ್ಪಾ…!! 🙁 ನಮ್ಮ ರಘು ಭಾವನುದೆ, ಶರ್ಮಪ್ಪಚಿ, ಆನುದೆ ಎಲ್ಲಾ ದೋಸ್ತಿ…!! 😀
      ಎನಗೆ ಹೋಳಿಗೆ ಹೇಳಿರೆ ಭಾರಿ ಇಷ್ಟ… ಅದ್ದಕೆ ಕಾಯಿ ಹಾಲು, ತುಪ್ಪ ಹಾಕಿರೆ.. 3 ರೊ, 4 ಕೊ.. ಹೊಡವೆ… 😛
      ಹಾ.. ಹಲ್ಲು ರಿಪ್ಪೆರಿ ಮಾಡ್ಲೆ ಹೊದೆ.. ಡಾಗುಟ್ರು, ಎನ್ನ ಹಲ್ಲು ಸರಿ ಮಾಡೆಕಾರೆ, ಅಮೇರಿಕಾಕೆ ಹೋಗಿಯೇ ತೀರೆಕು ಹೇಳಿತ್ತು…
      ಅಯ್ಯನ ಮ೦ಡೆ ಹೇಳಿ ಆತು…!! 🙁 ಎ೦ತಮಾಡುಸ್ಸು?? 😛

      1. { ಅಮೇರಿಕಾಕೆ ಹೋಗಿಯೇ ತೀರೆಕು ಹೇಳಿತ್ತು }
        ಹ್ಮ್, ನಿನ್ನ ನೋಡಿದ ಡಾಗುಟ್ರು ಅಲ್ಲಿಗೆ ಹೋಗದ್ರೂ ತೀರುಗು! 😉

        1. ಎನ್ನ ನೋಡಿದ ಡಾಗುಟ್ರು – ನಿಮಾನ್ಸ ರಿಟೇರು .. ! 😀 😛

  8. moodabidreli Alvas nudisiri nadetta iddu……Adbhuta kaaryakrama……chendakke, achchukattaagi, samaya prajneya ulisigondu, helida samayakke suru aagi mugittu helidre…..nambale saadhya illaddaru adu satyavee …..heengondu karyakrama maadekare !!!!!!!!!!!!!!!eshtu kashta allada…Javabdaari nijakku mechcheku….ee vishayakke aalvange aalvane saati!!!!!!!

  9. ಅಕ್ಕೊ..!! ಆನು ಮತ್ತೆ ಶರ್ಮಪ್ಪಚ್ಚಿ, ಅಂತ್ಯಾಕ್ಷರಿ ಇದ್ದರೆ ಬತ್ಯೊ…. 🙂 😀
    ಹಾ.. ಮತ್ತೆ.. ಮಧ್ಯಾಹ್ನ ಊಟಕ್ಕೆ ಹೋಳಿಗೆ ಇದ್ದೊ?? ಆನುದೆ ರಘು ಭಾವನುದೆ 4 ಕು ಹೋಳಿಗೆ ಹೊಡವಲಾವುತ್ತಿತ್ತು… 😀 😛

        1. ಹೋದ್ದು ಮಂಗ್ಳೂರು ಮಾಣಿ. ದೊಡ್ಡ ಭಾವ ಅಲ್ಲ. ನಿನಗೆ ಜೆನ ತಪ್ಪಿತ್ತೋ ಹೇಳಿ ಸಂಶಯ

          1. ವಿಶ್ವ ಹೇಳಿ… ಅಲ್ಲಿಯೇ BBM ಮಾಡಿದ್ದು ಕಳುದ ಸರ್ತಿ.. ಆನು NSSಲಿ ಇತ್ತಿದ್ದೆ ಇದ.. ಹಾಂಗೆ ಒಂದು National Integration campಲಿ ಪರಿಚಯ ಆದ… ಈಗ ಬಾರಿ ಒಳ್ಳೆ ದೊಸ್ತಿಗೋ. ಮೊನ್ನೆ ೩ ದಿನ ಇಪ್ಪಲೇ ಅವನೇ ವ್ಯವಸ್ತೆ ಮಾಡಿ ಕೊಟ್ಟದು….

          2. [ಆನು ಸಮಕ್ಕೆ ಹೊಡದೆ]
            ಮಾಣಿ ಕಂಡ ಹಾಂಗೆ ಅಲ್ಲ. ಸಮಾ ಹೊಡದ್ದಡ. ಆರಿಂಗೊ!!!

          3. ಅದಾ ಬಿಂಗುರ್ಟಿ…ಜಾಸ್ತಿ ಕಣ್ಣು ಹೊಡದರೆ ಬೆನ್ನಿಂಗೆರಡು ಬೀಳುವಗ ಹೊಡದ ಲಿಸ್ಟಿಂಗೆ ಬೊಬ್ಬೆಯೂ ಸೇರುಗು ಮಿನಿಯಾ…ಜಾಗ್ರತೆ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×