Oppanna.com

ಒಂದು ಪ್ರಕರಣದ ಸುತ್ತ -೬ : ರಮ್ಯ ನೆಕ್ಕರೆಕಾಡು

ಬರದೋರು :   ಶರ್ಮಪ್ಪಚ್ಚಿ    on   25/06/2020    3 ಒಪ್ಪಂಗೊ

ಒಂದು ಪ್ರಕರಣದ ಸುತ್ತ -೬

-ರಮ್ಯ ನೆಕ್ಕರೆಕಾಡು

ಕೇಶವಂದೆ ಅರವಿಂದನ ಮನೆಗೆ ಇಷ್ಟರವರೆಗೆ ಹೋಗಿತ್ತಿದನೇಲ್ಲೆ. ಆದರೆ ಅವರ ಮನೆ ಎಲ್ಲಿತ್ತು ಹೇಳ್ತ ಅಂದಾಜಿ ಇದ್ದ ಕಾರಣ ಶರತ್ಚಂದ್ರನ ಕರ್ಕೊಂಡು ಹೋಪಲೆ ಬಂಙ ಆಯ್ದಿಲ್ಲೆ. ಜೀಪು ಮೈನ್ ರೋಡಿಂದ ತಿರುಗಿ, ಕಾಂಕ್ರೀಟ್ ರೋಡಿಲಿ ಹೋಗಿ ಒಂದು ರಬ್ಬರ್ ತೋಟದತ್ರಂಗೆ ಎತ್ತಿತ್ತು. ಅಲ್ಲಲ್ಲಿ ರಬ್ಬರ್ ಮರದ ಎಡಕ್ಕಿಂದ ಬಪ್ಪ ಸೂರ್ಯನ ಕಿರಣ, ಉಸುಲು ತೆಕ್ಕೊಂಬಗ ಮನಸ್ಸಿಂಗೆ ಹಿತ ಅಪ್ಪಂಗಿಪ್ಪ ಶುಭ್ರ ಗಾಳಿ,”ಚೆರೇ…” ನೆ ಹರಟೆ ಮಾಡುವ ಇರಿಂಟಿಗಳ ಸ್ವರ ಜೀಪಿನ ಶಬ್ದಂದ ಬಲ ಇತ್ತು. ಇದರ ಎಲ್ಲಾ ಕಳ್ದು ಜೀಪು ಒಂದು ದೊಡ್ಡ ಬಂಗ್ಲೆ ಹಾಂಗೆಪ್ಪ ಮನೆ ಎದುರೆ ಬಂದು ನಿಂದತ್ತು.  ಮನೆ ಎದುರೆ  ಸಾಲಾಗಿ ಕೂದು ಅಡಕ್ಕೆ ಸೊಲ್ಕೊಂಡಿತ್ತ ಆಳುಗ,  ಮನೆಯ ಒಂದು ಹೊಡೆಲಿತ್ತ ಶೆಡ್ ಲಿ ನಿಂದುಗೊಂಡಿತ್ತ ಎರಡು ಮೂರು ವಾಹನಂಗ, ಮನೆಯ ಎದುರಣ ಹೊಡೆಲಿ ಕಣ್ಣು ಎಕ್ಕದ್ದಷ್ಟು ದೊಡ್ಡ ರಬ್ಬರ್ ತೋಟ, ಇನ್ನೊಂದು ಹೊಡೆಲಿ ಎಕ್ಕರೆ ಗಟ್ಲೆ ಅಡಕ್ಕೆ ತೋಟ, ಗೇಟಿಂದ ಮನೆಗೆ ಬಪ್ಪಷ್ಟು ಜಾಗೆ ಬಿಟ್ಟರೆ ದೊಡ್ಡ ಜಾಲಿಲಿ ಹರಗಿಗೊಂಡಿತ್ತ ಅಡಕ್ಕೆ, ಎಲ್ಲಾ ಆ ಮನೆಯವರ ಶ್ರೀಮಂತಿಕೆಯ ಎತ್ತಿ ತೋರ್ಸಿಗೊಂಡಿತ್ತು.  ಪೋಲಿಸ್ ಜೀಪು ಬಂದು ನಿಂದಪ್ಪದ್ದೇ ಆಳುಗ ಅಡಕ್ಕೆ ಸೊಲಿವದರ ನಿಲ್ಸಿಕ್ಕಿ ಮೋರೆ ಮೋರೆ ನೋಡಿಗೊಂಬಲೆ ಸುರು ಮಾಡಿದವು. ಗೂಡಿಲಿ ಕಟ್ಟಿಹಾಕಿತ್ತಿದ ತೋಳದ ಹಾಂಗಿಪ್ಪ ಒಳ್ಳೆ ತಳಿಯ ಎರಡು ನಾಯಿಗ ಹಾರಿ ಹಾರಿ ಹರ್ದು ತಿಂಬಾಂಗೆ ಕೊರವಲೆ ಸುರು ಮಾಡಿದವು. ನಾಯಿಗಳ ಆರ್ಭಟೆ ಕೇಳಿ ಮನೆಒಳಂದ ಒಂದು ಹೆಮ್ಮಕ್ಕ ಹೆರ ಬಂತು. ಕೇಶವ, ಶರತ್ಚಂದ್ರ ಮತ್ತೆ ನಾಗರಾಜ ಆ ಹೆಮ್ಮಕ್ಕಳ ಹತ್ತರಂಗೆ ಹೋದವು. ಕೇಶವನೊಟ್ಟಿಂಗೆ ಅವಕ್ಕೆ ಬರೇ ಫೋನಿಲಿ ವ್ಯವಹಾರ ಇತ್ತ ಕಾರಣ ಆ ಹೆಮ್ಮಕ್ಕೋಗೆ ಕೇಶವಂದೆ ಅಪರಿಚಿತ. ಎಂತ ಮಾಡೆಕ್ಕು ಹೇಳಿ ಅಂದಾಜಾಗದ್ದೆ ಆ ಹೆಮ್ಮಕ್ಕ,” ಆರು…??” ಹೇಳಿ ಪ್ರಶ್ನಾರ್ಥಕವಾಗಿ ನೋಡಿತ್ತು. ಕೇಶವ ” ಆನು ಅಂಜಲಿಯ ಅಪ್ಪ..” ಹೇಳಿ ಪರಿಚಯ ಮಾಡ್ಸಿಯಪ್ಪಗ ಆ ಹೆಮ್ಮಕ್ಕೊಗೆ ಅರೆವಶಿ ಕುತೂಹಲ, ಹೆದರಿಕೆ ಎಲ್ಲಾ ಕಮ್ಮಿ ಆತು,” ಹೋ… ಮೊದಲು ನೋಡಿ ಗುರ್ತ ಇಲ್ಲದ್ದೇ ಪಕ್ಕಕ್ಕೆ ಅಂದಾಜಿ ಆಯ್ದಿಲ್ಲೆ… ಆನು ಅರವಿಂದನ ಅಮ್ಮ… ಒಳ ಬನ್ನಿ..” ಹೇಳಿ ತಿರುಗಿ ಹೋಪಗ ಆ ಹೆಮ್ಮಕ್ಕಳ ದೊಡ್ಡ ಮಗನ ಮಗ ಹೊಸ್ತಿಲಿಲಿ ಕೂದುಗೊಂಡಿತ್ತಿದ. ಕೂಡ್ಲೇ ಆ ಹೆಮ್ಮಕ್ಕ,” ಪುಟ್ಟೋ… ಹಾಂಗೆ ಹೊಸ್ತಿಲಿಲಿ ಎಲ್ಲ ಕೂಪ ಕ್ರಮ ಇಲ್ಲೆ… ಒಳ ಹೋಗು..” ಹೇಳಿತ್ತು. ಆ ಹೆಮ್ಮಕ್ಕ ಹಾಂಗೆ ಹೇಳಿದ್ದು, ಅದರ ವೇಷಭೂಷಣ ಎಲ್ಲ ನೋಡಿದ ಕೂಡ್ಲೇ ಶರತ್ಚಂದ್ರಂಗೆ ಅವು ಒಳ್ಳೆ ಸಂಪ್ರದಾಯಸ್ಥರು ಹೇಳಿ ಅಂದಾಜಾಗಿ, ಹೆರಜಾತಿಯ ನಾಗರಾಜನ ಒಳ ಬಪ್ಪದು ಬೇಡ ಅಲ್ಲಿಯೇ ನಿಲ್ಲು ಹೇಳುವಾಂಗೆ ಸೂಚನೆ ಕೊಟ್ಟು ಒಳ ಹೋದ.
“ಆನು ಅಂಜಲಿಯ ಮಾವ. ನಿನ್ನೆ ಉದಿಯಪ್ಪಗಂದಿತ್ತೆ ಅಂಜಲಿಯ ಕಾಣ್ತಾ ಇಲ್ಲೆ.. ಹಾಂಗೆ ಅರವಿಂದನತ್ರೆ ರಜ ಮಾತಾಡೆಕ್ಕಿತ್ತು.” ಹೇಳಿ ಶರತ್ಚಂದ್ರ ತಡವು ಮಾಡದ್ದೇ ಸೀದಾ ವಿಷಯಕ್ಕೆ ಬಂದ. ” ಅಯ್ಯೋ… ಇದೊಳ್ಳೆ ಕತೆ ಆತನ್ನೇ…!! ಎಂಗೊಗೂ ಇದಕ್ಕೂ ಯಾವ ಸಂಬಂಧವೂ ಇಲ್ಲೆ… ಎಂಗ ಎಂಗಳಷ್ಟಕೆ ಇದ್ದೆಯ. ಎಂಗಳ ಇದಕ್ಕೆ ಎಳೆದು ಹಾಕೆಡಿ..” ಹೇಳಿ ಆ ಹೆಮ್ಮಕ್ಕಳದ್ದು ಜೋರೇ ಜೋರು!! ಅಷ್ಟೊತ್ತಿಂಗೆ ಅರವಿಂದ ಹೆರ ಬಂದ. ಬಂದದು ಅರವಿಂದ ಹೇಳಿ ಗೊಂತಾದ ಮತ್ತೆ ಶರತ್ಚಂದ್ರ ಎಲ್ಲವನ್ನುದೇ ತಿಳಿಶಿದ. ಅಂಜಲಿ ಕಾಣೆ ಆಯ್ದು ಹೇಳಿಯಪ್ಪಗ ಅರವಿಂದಂಗೆ ಒಂದರಿಯಂಗೆ ನಂಬುಲೆಡಿಗಾಯ್ದಿಲ್ಲೆ. ಅಂಜಲಿಗೆ ಅರವಿಂದ ಯಾವ ಹೊಡೆಂದಲೂ ಒಳ್ಳೆ ಜೋಡಿ ಅಲ್ಲ ಹೇಳಿ ನೋಡಿಯಪ್ಪಗಳೇ ಅಂದಾಜಿ ಅಪ್ಪಾಂಗಿಪ್ಪ ರೂಪ ಅರವಿಂದಂದು. “ವೆಲ್… ಅರವಿಂದ… ಎನಗೆ ನೀನು ಅಂಜಲಿಯ ಭೇಟಿ ಆದಿಪ್ಪಗ ಎಂತೆಲ್ಲಾ ಆತು ಹೇಳ್ತ ಸಂಪೂರ್ಣ ವಿವರ ಬೇಕು..” ಹೇಳಿ ಕೇಳಿಯಪ್ಪಗ ಅರವಿಂದ ಎಲ್ಲಾ ವಿಷಯ ತಿಳಿಶಿದ.
ಐಸ್ಕ್ರೀಮ್ ಪಾರ್ಲರಿಲಿ ಅರವಿಂದನ ಎದುರೆ ಬಂದು ಕೂದ ಅಂಜಲಿಯ ನೋಡಿಯಪ್ಪಗ ಅರವಿಂದಂಗೆ ಫೋಟೊಲ್ಲಿ ನೋಡಿದಷ್ಟು ಚೆಂದ ಕಂಡತ್ತಿಲ್ಲೆ.” ಉಷಾರಿತ್ತಿಲ್ಲೆಯಾಳಿ ನಿನಗೆ.. ಮೋರೆಲಿ ಎಂತ ಕಳೆಯೇ ಇಲ್ಲೆ.. ಮೊದಲೇ ಹೇಳ್ತಿತ್ತದ್ದರೆ ಇನ್ನೊಂದರಿ ಮೀಟ್ ಅಪ್ಪಲಾವ್ತಿತ್ತು..” ಹೇಳಿಯಪ್ಪಗ ಅಂಜಲಿ,” ಹಾಂಗೆಂತ ಇಲ್ಲೆ.. ಆನು ಕಾಂಬಲೆ ಹೀಂಗೆ ಇಪ್ಪದು..” ಹೇಳಿ ಎದುರೆ ಇತ್ತ ಗ್ಲಾಸಿಂದ ಗಳಗಳನೆ ಪೂರಾ ನೀರು ಕುಡ್ತತ್ತು. ಅರವಿಂದಂಗೆ ಮೊದಲೇ ಒಂದು ಮದುವೆ ಆಗಿತ್ತ ಕಾರಣ ಕೂಸುಗಳೊಟ್ಟಿಂಗೆ ಹೇಂಗೆ ಮಾತಾಡೆಕ್ಕು ಹೇಳಿ ಗೊಂತಿತ್ತು. ಆದರೆ ಅಂಜಲಿಗೆ ಇದು ಮೊದಲ ಅನುಭವ ಆದ ಕಾರಣ ಹೆದರಿಕೆ ಆವ್ತಾಯ್ಕು ಹೇಳಿ ಗ್ರೇಶಿಕ್ಕಿ ಅರವಿಂದ ಸುಮ್ಮನೆ ಕೂದ. ಮತ್ತೆರಡು ಐಸ್ಕ್ರೀಮ್ ಆರ್ಡರ್ ಮಾಡಿದ. ಸುಮಾರು ಒಂದೆರಡು ಗಂಟೆ ಹೊತ್ತು ಅಂಜಲಿಯೊಟ್ಟಿಂಗೆ ಕಾಲ ಕಳೆದರುದೇ ಅಂಜಲಿಯ ವರ್ತನೆಲಿ ಅರವಿಂದಂಗೆ ಎಂತ ಬದಲಾವಣೆದೆ ಕಂಡಿದಿಲ್ಲೆ. ಎರಡು ಗಂಟೆಹೊತ್ತಿಲಿ ಒಂದು ನೆಗೆ ಮಾಡಿದ್ದಿಲ್ಲೆ. ” ಆನಿನ್ನು ಹೆರಡ್ತೆ… ಅಪ್ಪ ರಜ ಕೆಲಸ ಹೇಳಿದ್ದವು. ಮತ್ತೆ ತಡವಾಕ್ಕು..” ಹೇಳಿ ಅಷ್ಟೊತ್ತಿಲಿ ಅದೊಂದು ಮಾತು ಬಿಟ್ಟರೆ ಅದುವಾಗಿಯೇ ಮತ್ತೆಂತದೂ ಮಾತಾಡಿತ್ತಿದಿಲ್ಲೆ. ಅಂಜಲಿಯ ನಡವಳಿಕೆ ನೋಡೆರೆ ಅರವಿಂದಂಗೆ ಮಾತ್ರ ಅಲ್ಲ, ಆರಿಂಗುದೇ ಅದಕ್ಕೆ ಮದುವೆ ಅಪ್ಪಲೆ ಇಷ್ಟ ಇಲ್ಲೆ ಹೇಳಿ ಅಂದಾಜಿ ಅಕ್ಕು. ಒಂದು ವೇಳೆ ಅರವಿಂದ ಅಂಜಲಿಯ ಇಷ್ಟಕ್ಕೆ ವಿರುದ್ಧವಾಗಿ ಹೋಪದು ಬೇಡಾಳಿ ನಿರ್ಧಾರಕ್ಕೆ ಬರ್ತಿದ್ದರೆ ಮತ್ತೆ ಅಂಜಲಿಯಷ್ಟು ಒಳ್ಳೆ ಕೂಸು ಖಂಡಿತ ಸಿಕ್ಕ ಹೇಳಿ ಗೊಂತಿದ್ದ ಕಾರಣ ಅರವಿಂದ ಅಂಜಲಿಯ ಮದುವೆ ಆಯೆಕ್ಕು ಹೇಳ್ತ ನಿರ್ಧಾರಕ್ಕೆ ಬಂದದು. ಹೇಳಿ ಅರವಿಂದ ಎಲ್ಲಾ ವಿವರಣೆಯನ್ನುದೇ ಕೊಟ್ಟ.
“ನಿಂಗಳ ಸಮಯ ಬಿಡುವು ಮಾಡಿಗೊಂಡು ಎಂಗೊಗೆ ಸ್ಪಂದಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್… ಫರ್ದರ್ ಇನ್ಫಾರ್ಮೇಷನ್ ಬೇಕಾರೆ ಹೇಳಿ ಕಳ್ಸುತ್ತೆಯ.. ನಿಂಗ ಬರೆಕ್ಕಾವ್ತು..” ಹೇಳಿ ಶರತ್ಚಂದ್ರ ಕೇಶವ ಮತ್ತೆ ನಾಗರಾಜನೊಟ್ಟಿಂಗೆ ಜೀಪು ಹತ್ತಿಕ್ಕಿ ಹೋದ.
ಜೀಪಿಲಿ ಹೋಪಗ ಶರತ್ಚಂದ್ರ,” ಭಾವ…. ಅರವಿಂದ ‌ಹೇಳುವ ಪ್ರಕಾರ ನಿಂಗ ಅಂಜಲಿಗೆ ಎಂತದೋ ಕೆಲಸ ಹೇಳಿತ್ತಿದಿಯಡ ಅಲ್ದಾ..?? ಅದು ಅಂಜಲಿ ಅರವಿಂದನ ಕೈಯಿಂದ ತಪ್ಸಿಗೊಂಬಲೆ ಸುಳ್ಳು ಹೇಳಿದ್ದಾ…? ಅಲ್ಲ ನಿಂಗ ನಿಜವಾಗಿಯೂ ಎಂತಾರು ಕೆಲಸ ಹೇಳಿತ್ತಿದಿರಾ..??” ಹೇಳಿ ಕೇಶವನ ನೋಡಿದ. ಕೇಶವ,” ಅಂಜಲಿ ಸುಳ್ಳು ಹೇಳಿದ್ದಲ್ಲ.. ಬ್ರೋಕರ್ ಗೋಪಾಲಣ್ಣ ಮನೆಗೆ ಬಂದು ಹೋಗಿಪ್ಪಗ ಅವರ ಕೈಚೀಲವ ಮನೆಲಿಯೇ ಬಿಟ್ಟಿತ್ತಿದವು. ಹೇಂಗೂ ಹೋಪ ದಾರಿಯಾವ್ತನ್ನೇ.. ಹೇಳಿ ಮಗಳತ್ರೆ ಕೊಟ್ಟು ಕಳ್ಸಿತ್ತಿದ್ದೆ..” ಹೇಳಿದ. ಶರತ್ಚಂದ್ರ ಕೂಡ್ಲೇ,” ನೋಡಿ ಈ ವಿಷಯವ ನಿಂಗ ಎನ್ನತ್ರೆ ಹೇಳಿದ್ದೇಲ್ಲಿ.. ಈ ಕೇಸಿಲಿ ಹೀಂಗೆಪ್ಪ ಸಣ್ಣ ಸಣ್ಣ ವಿಷಯವುದೇ ಮ್ಯಾಟರ್ ಆವ್ತು.. ಇನ್ನು ಮುಂದೆಯಾದರುದೇ ಗೋಂತಿಪ್ಪ ವಿಷಯವ ತಿಳಿಶಿಕ್ಕಿ… ಅಂಬಗ ಒಂದರಿ ಈಗ ಬ್ರೋಕರ್ ಗೋಪಾಲಣ್ಣನ ಮನೆಗೆ ಹೋಯ್ಕೊಂಡು ಬಪ್ಪ.. ಅವರ ಕೈಯಿಂದ ಎಂತಾರು ಕ್ಲೂ ಸಿಕ್ಕುಲೂ ಸಾಕು…” ಹೇಳಿ  ಗೋಪಾಲಣ್ಣನ ಮನೆಗೆ ಹೋಪ ಅಂದಾಜಿ ಮಾಡಿದವು.
ಜೀಪು ಗೋಪಾಲಣ್ಣನ ಮನೆ ಎದುರೆ ನಿಂದತ್ತು. ಶರತ್ಚಂದ್ರ, ಕೇಶವ, ನಾಗರಾಜ ಮೂರು ಜನವುದೇ ಗೇಟು ತೆಗೆದು ಜಾಲಿಂಗೆತ್ತೆಕ್ಕಾರೆ,”ಯಬ್ಬಾ…..” ಹೇಳ್ತ ಉದ್ಗಾರ ಮೂರು ಜನರ ಬಾಯಿಂದ ಬಂದತ್ತು. ಎಂತದೋ ಕೊಳೆತ  ಹಾಂಗಿಪ್ಪ ಕೆಟ್ಟ ವಾಸನೆ ಮೂಗಿಂಗೆ ಬಂದು ಬಡುದತ್ತು. ಆ ವಾಸನೆ ಕೇಳಿ ಅವರ ಕಾಲು ಮುಂದೆಯೇ ಹೋಯ್ದಿಲ್ಲೆ…!!

        -ಮುಂದುವರೆತ್ತು….>>>>

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

3 thoughts on “ಒಂದು ಪ್ರಕರಣದ ಸುತ್ತ -೬ : ರಮ್ಯ ನೆಕ್ಕರೆಕಾಡು

  1. ಎನ್ನ ಕಾಮೆಂಟ್ ಲಿ ಒಂದು ಅಕ್ಷರ ತಪ್ಪಾಯಿದು.” ಇದ್ದ ” ಅಲ್ಲ “ಇದ್ದು ” ಆಯೆಕ್ಕಾತು !

  2. ರಮ್ಯನ ಎಲ್ಲಾ ಕತೆ,ಲೇಖನಂಗಳಲ್ಲಿಪ್ಪ ಹಾಂಗೆ ಇಲ್ಲಿಯೂ ಆಕರ್ಷಕ ಶೈಲಿ ಕಾಣ್ತಾ ಇದ್ದು ! ಇನ್ನು ಈ ಕತೆಗೆ ತಾರ್ಕಿಕ ಅಂತ್ಯ‌ ಕೊಡ್ತಾ ಹೇಳ್ತ ಕುತೂಹಲ ಇದ್ದ !. ☺

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×