Latest posts by ಸುವರ್ಣಿನೀ ಕೊಣಲೆ (see all)
- ಜೀವನಲ್ಲಿ ಮುಂದೆ ಬಪ್ಪಲೆ ಓಡುದರೊಟ್ಟಿಂಗೆ ಓದುದೂ ಮುಖ್ಯವೇ - July 9, 2014
- “ಯಕ್ಷತ್ರಿವೇಣಿ” - September 24, 2012
- ಬದಲಾಗದ್ದದು ಬದಲಾವಣೆ ಮಾಂತ್ರ ! - September 12, 2012
ಜ್ಞಾನ..ಜೀವನ ..ಎರಡೂ ಬೆಳಗಲಿ..ಬೆಳೆಯಲಿ… ಬೈಲಿನೋರಿಂಗೆ ಎಲ್ಲೋರಿಂಗೂ ದೀಪಾವಳಿಯ ಶುಭಾಶಯಂಗೊ.
ಹಬ್ಬ ಗಮ್ಮತ್ತಿಲ್ಲಿ ಕಳವಲೆ ರಜೆ ಇದ್ದು 🙂 ಕುಟುಂಬದೋರೊಟ್ಟಿಂಗೆ,ಸ್ನೇಹಿತರೊಟ್ಟಿಂಗೆ [ನೆರೆಕರೆಯವರೊಟ್ಟಿಂಗೆ] ಆಚರಣೆ ಮಾಡಿ ಎಲ್ಲೋರು. ಒಟ್ಟಿಂಗೆ ನೆಂಪಿಲ್ಲಿ ಮಡುಗೆಕಾದ ಅಂಶ ಹೇಳಿರೆ ೨ ದಿನದ ಹಬ್ಬ ಜೀವನ ಪರ್ಯಂತಕ್ಕೆ ದುಃಖ ತಾರದ್ದೇ ಇರಲಿ ಹಾಂಗಾಗಿ…….[ನಿಂಗೊಗೆ ಗೊಂತಿಪ್ಪದೇ, ಎಲ್ಲಿಯಾರು ಮರದಿದ್ದರೆ ಹೇಳಿ ನೆಂಪು ಮಾಡ್ಲೆ ಬರೆತ್ತೆ]
1]ಪಟಾಕಿ ಹೊಡೇರಿ, ಆದರೆ…..
- ಪರಿಸರ/ಶಬ್ದ ಮಾಲಿನ್ಯ ಆದಷ್ಟು ಕಮ್ಮಿ ಮಾಡಿ,
- ಕಿಚ್ಚಿನ ಹತ್ತರೆ ಜಾಗೃತೆಲಿ ಇರಿ,
- ಪುಟ್ಟು ಮಕ್ಕಳ ಹೆಚ್ಚಿಗೆ ಕಿಚ್ಚಿನ ಹತ್ತರೆ ಬಿಡೆಡಿ.
- ಹೆಚ್ಚು ಶಬ್ದ ಅಪ್ಪ ಪಟಾಕಿಂದ ಸಣ್ಣ ಮಕ್ಕೊಗೆ,ಪ್ರಾಯ ಆದವಕ್ಕೆ, ಸಾಂಕಿದ ಪ್ರಾಣಿಗೊಕ್ಕೆ ಹೆದರಿಕೆ ಅಕ್ಕು, ಇದರ ನಿರ್ಲಕ್ಷ್ಯ ಮಾಡೆಡಿ. ಆರೋಗ್ಯಕ್ಕೆ, ಮನಸ್ಸಿಂಗೆ, ಜೀವಕ್ಕೆ ತೊಂದರೆ ಅಪ್ಪ ಸಾಧ್ಯತೆಗೊ ಇದ್ದು.
2]ದೀಪಾವಳಿಯ ಹೋಳಿಗೆ ಸಮಾ ತಿನ್ನಿ [ಅಜೀರ್ಣ ಅಪ್ಪಷ್ಟಲ್ಲ], ಆಹಾರ ಮಿತಿಲಿಯೇ ಇರಲಿ. ಇನ್ನು ಡಯಾಬಿಟೀಸ್ ಇಪ್ಪೋರು ಸಿಹಿ ತಿಂಬಲೆ ಎಡಿತ್ತಿಲ್ಲೆ ಹೇಳಿ ಬೇಜಾರು ಮಾಡೆಡಿ..ಬದಲಿಂಗೆ ಒಂದು ’ಸಣ್ಣ’ ತುಂಡು ತಿನ್ನಿ,ತೊಂದರಿಲ್ಲೆ. ನೆಂಪಿರಲಿ ’ಅತಿ ಆಸೆ………..’.
3]ಇನ್ನು ಇಡೀ ವರ್ಷ ಮೀಯದ್ದೆ ಇದ್ದೋರು ಎಣ್ಣೆ ಕಿಟ್ಟಿ ಮೀವಲೆ ಒಂದು ಸಂದರ್ಭ [ಬೋಸಣ್ಣ ಮುಖ್ಯವಾಗಿ]. ಎಣ್ಣೆ ಕಿಟ್ಟಿ ಮೀವದು ಆರೋಗ್ಯಕ್ಕೆ ಒಳ್ಳೆದು. ಎಳ್ಳೆಣ್ಣೆ ಆದರೆ ಒಳ್ಳೆದು. ಅಲ್ಲದ್ರೆ ಯಾವ ಎಣ್ಣೆ ಆದರೂ ಅಕ್ಕು [ಊರ ಹೆರ(?) ಗಡಂಗಿಲ್ಲಿ ಸಿಕ್ಕುವ ತೊಟ್ಟೆ ಎಣ್ಣೆ ಅಲ್ಲ]
4]ಹಬ್ಬಲ್ಲಿ ಪಟಾಕಿ ಶಬ್ದದೊಟ್ಟಿಂಗೆ ನಮ್ಮ ಸಂಪ್ರದಾಯ ಕಾಣೆ ಅಪ್ಪದು ಬೇಡ. ಹೆಚ್ಚಿನ ಆಚರಣೆಗೊ ಮಾಡ್ಲೆ ಎಡಿಯದ್ದರೂ ಒಂದರಿ ದೇವಸ್ಥಾನಕ್ಕೆ ಹೋಗಿಬಪ್ಪಲಕ್ಕನ್ನೇ? ಎಂಗಳ ಊರಿಲ್ಲಿ ಇದು ದೊಡ್ಡ ಹಬ್ಬ.. ತುಂಬಾ ಗೌಜಿ 🙂 ನಮ್ಮ ದಕ್ಷಿಣಕನ್ನಡಲ್ಲಿ ರಜ್ಜ ಗೌಜಿ ಕಮ್ಮಿ ಆ ಲೆಕ್ಕಕ್ಕೆ ನೋಡ್ತರೆ. ಆದರೆ ಮನಸ್ಸಿನ ಭಾವನೆಗಳಲ್ಲಿ ಕಮ್ಮಿ ಇಲ್ಲೆನ್ನೇ !!
ಆತು ಆನು ಹೇಳೆಕು ಗ್ರೇಶಿದ ಮುಖ್ಯ ವಿಷಯ ಹೇಳಿ ಆತು !! ಎಲ್ಲೋರಿಂಗೂ ದೇವರ..ಗುರುಗಳ ಆಶಿರ್ವಾದ ಸದಾ ಇದ್ದು ಸಂತೋಷ..ಸಂತೃಪ್ತಿ ನೆಮ್ಮದಿ ನಮ್ಮೆಲ್ಲರದ್ದೂ ಆಗಲಿ 🙂
once again …ದೀಪಾವಳಿಯ ಶುಭಾಶಯಂಗೊ 🙂
ದೀಪಾವಳಿ ಶುಭಾಶಯ೦ಗೊ.. ಇಲ್ಲಿ ಪಟಾಕಿ ಹೊಟ್ಟುಸಲೆ ಪೋಲೀಸ್ ಅನುಮತಿ ಬೇಕಾದ ಕಾರಣ ಎನಗೆ ಮಾ೦ತ್ರ ಅಲ್ಲ, ಆರಿ೦ಗು ಈ ಸರ್ತಿಯಾಣ ದೀಪಾವಳಿಗೆ ಪಟಾಕಿ ಇಲ್ಲೆ. ಶಬ್ದ ಮಾಲಿನ್ಯವೂ ಇಲ್ಲೆ.
ಹೋಳಿಗೆ ಮಾಡ್ಳೆ ಎನಗೆ ಗೊ೦ತಿಲ್ಲೆ. ಆದ ಕಾರಣ ಹೋಳಿಗೆಯುದೆ ಇಲ್ಲೆ..:)
ಇಲ್ಲಿ ಇಪ್ಪ ಒ೦ದೇ ಒ೦ದು ದೇವಸ್ಥಾನದ ಹತ್ತರೆ ಹೋಪಲೆ ಕೂಡ ಎಡಿಯದ್ದಷ್ಟು ಜನರ ನೂಕು ನುಗ್ಗಲು. 🙁 ಕಸ್ತಲೆಪ್ಪಗಳೋ ನಾಳೆಯೋ ಹೋಪಲೆ ಎಡಿತ್ತೋ ನೋಡೆಕು.
ದೇವರ ದಯ೦ದ ಎಣ್ಣೆ ಕಿಟ್ಟಿ ಮೀವಲೆ ಯಾವ ತೊ೦ದರೆಯೂ ಇಲ್ಲೆ.. 🙂
ಉತ್ತಮ ವಿವರಣೆಯ ಮೂಲಕ ಜಾಗ್ರತೆ ತಿಳಿಶಿದ್ದಕ್ಕೆ ಧನ್ಯವಾದಂಗ..
ದೀಪಾವಳಿ ಹೇಂಗೆ ಆಚರಿಸೆಕ್ಕು ಹೇಳಿ ತಿಳಿಸಿದ್ದು ಲಾಯಿಕ ಆಯಿದು.
ದೀಪಾವಳಿಯ ಶುಭಾಶಯಂಗೊ
ಒಪ್ಪಿದೆ. ನಿಂಗೊಗು ಶುಭಾಶಯನ್ಗೋ…