Oppanna.com

ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್

Yakshagana Songs - Undemane Shrikrishna Bhat

ಬರದೋರು :   ಒಪ್ಪಣ್ಣ    on   25/11/2022    0 ಒಪ್ಪಂಗೊ

ನಮಸ್ಕಾರಂಗೊ,

ಪದ ಎಲ್ಲರಿಂಗೂ ಇಷ್ಟವೇ. ಶಿಶುಗಳಿಂದ ಹಿಡುದು ಪಶುಗಳ ವರೆಗೂ ಆನಂದಿಸುತ್ತವು. ಅದರ್ಲಿಯೂ ಯಕ್ಷಗಾನ ಪದ ನಮ್ಮ ಬೈಲಿನ ಎಲ್ಲೋರಿಂಗೂ ಇಷ್ಟ.
ಅಡಕ್ಕೆ ಸೊಲಿವಲ್ಲಿ, ಅಡಿಗೆ ಮಾಡುವಲ್ಲಿ, ಆಪೀಸು ಕೆಲಸ ಮಾಡುವಲ್ಲಿ, ತೋಟದ ಕೆಲಸಲ್ಲಿ, ಪ್ರಯಾಣಲ್ಲಿ, ಮನುಗಿದಲ್ಲಿ – ಒಟ್ಟಿಂಗೆ ಯಕ್ಷಗಾನ ಪದ ಇದ್ದರೆ ರೈಸುತ್ತು ಅಪ್ಪೋ.
ಪಾರಂಪರಿಕ ಶೈಲಿಯ ಯಕ್ಷಗಾನ ಮಟ್ಟಿನ ಭಾಗವತಿಕೆ ಕೇಳಿಂಡು ಆನಂದಿಸುಲೆ ಕೂದರೆ ಹೊತ್ತು ಹೋದ್ದದೇ ಗೊಂತಾಗ.

ಉಂಡೆಮನೆ ಶ್ರೀಕೃಷ್ಣಭಟ್:

ಉಂಡೆಮನೆ ಶ್ರೀಕೃಷ್ಣಣ್ಣ ನಮ್ಮ ಸಮಾಜಲ್ಲಿಪ್ಪ ಬಹುಮುಖ ಪ್ರತಿಭೆಗಳಲ್ಲಿ ಒಬ್ಬರು.
ಯಕ್ಷಗಾನದ ಭಾಗವತಿಕೆ, ಚೆಂಡೆ, ಮದ್ದಳೆ, ವೇಷಗಾರಿಕೆ – ಹೀಂಗೆ ಸರ್ವವನ್ನೂ ತಿಳುದ ಅಪೂರ್ವ ಕಲಾವಿದರು.
ಏರಿಕ್ಕಳ ಶ್ರೀನಿವಾಸ ರಾವ್ ಅವರತ್ರೆ ಹಿಮ್ಮೇಳ ವಾದನವ, ನೆಲ್ಲಿಕುಂಜೆ ನಡುಮನೆ ಜತ್ತಪ್ಪ ರೈ ಹತ್ತರೆ ಭಾಗವತಿಕೆ ಕಲ್ತ ಶ್ರೀಕೃಷ್ಣಣ್ಣ, ಧರ್ಮಸ್ಥಳದ ಲಲಿತಕಲಾ ಕೇಂದ್ರ ಲ್ಲಿ ಸೂರಿಕುಮೇರಿ ಗೋವಿಂದಣ್ಣ ಮತ್ತೆ ಕರ್ಗಲ್ಲು ವಿಶ್ವೇಶ್ವರಣ್ಣನತ್ರೆ ನಾಟ್ಯವನ್ನು ಕಲ್ತು ಪರಿಪೂರ್ಣ ಕಲಾವಿದರಾಗಿ ರೂಪುಗೊಂಡವು.

ಇವರ ದಕ್ಷ°, ಇಂದ್ರಜಿತುವೇ ಮೊದಲಾದ ಕಿರೀಟವೇಷಂಗೊ ಜನಮನ್ನಣೆ ಗಳಿಸಿದ್ದು.

ಬೆಳಿ ನಾಲ್ಕರ ಏರು ಶ್ರುತಿಲಿ ನಿರಾಯಾಸವಾಗಿ ಪದ್ಯ ಹೇಳುವ ಇವರ ಸಾಮರ್ಥ್ಯ – ಎಲ್ಲ ಯಕ್ಷಗಾನ ಪ್ರಿಯರು ಮೆಚ್ಚುವಂಥದ್ದು.
ಸದ್ಯ ಪೌರೋಹಿತ್ಯ , ಮಂತ್ರವಾದ ವೃತ್ತಿಲಿ ನಿರತರಾಗಿಪ್ಪ ಬಹುಮುಖ ಪ್ರತಿಭೆ ಉಂಡೆಮನೆ ಶ್ರೀಕೃಷ್ಣಣ್ಣನ ಪದ್ಯಂಗಳ ದಾಖಲಿಸಿ ಮಡುಗುವ ಉದ್ದೇಶಂದ, ಬೈಲಿನ  ವೇಣೂರಣ್ಣ –  ವೇಣೂರು ಕಜೆ ಡಾ.ಸುಬ್ರಹ್ಮಣ್ಯ ಅಣ್ಣ  ಪರಿಶ್ರಮವಹಿಸಿ ದಾಖಲಿಸಿದ್ದವು.

ಆಸಕ್ತರು ಕೇಳಿ, ನಿಂಗಳ ಪೈಕಿಯೋರಿಂಗೆ ಕಳುಸಿ, ಅಭಿಪ್ರಾಯ ತಿಳುಶಿ..

ಇನ್ನೂ ಹೀಂಗಿರ್ತ ಅಪೂರ್ವ ಸಂಗತಿಗೊ ನಿಂಗೊಗೆ ಕೊಡ್ತೆಯೊ°..
ಕಾದೊಂಡಿರಿ..

ನಮಸ್ತೇ
~
ಒಪ್ಪಣ್ಣ
@NammaOppanna

ಭಾಗ – 1:

 

ಭಾಗ – 2:

 

 

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×