Oppanna.com

ಫಕ್ಕನೆ ನೆಂಪಾದ ಚೊಕ್ಕ ಶುದ್ದಿಗೊ!

ಬರದೋರು :   ಒಪ್ಪಣ್ಣ    on   03/12/2010    79 ಒಪ್ಪಂಗೊ

ಹೋ – ಅದಪ್ಪು!
ಪಕ್ಕನೆ ಹೇಳುವಗ ನೆಂಪಾತು, ಮನಿಶ್ಶರಿಂಗೆ ಎಂತಾರು ಹೇಳುವಗ/ ಕೇಳುವಗ/ಮಾಡುವಗ / ಮಾತಾಡುವಗ ಅದಕ್ಕೆ ಸಮ್ಮಂದಪಟ್ಟ ಯೇವದಾರು ಶೆಬ್ದ / ಕಾರ್ಯ/ ಕೃತಿ / ವಸ್ತು ನೆಂಪಪ್ಪದು.
ಒಂದರ ಕೇಳುವಗ ಮತ್ತೊಂದು ನೆಂಪಪ್ಪದು, ಒಂದರ ಹೇಳುವಗ ಇನ್ನೊಂದು ನೆಂಪಪ್ಪದು – ಅವೆರಡಕ್ಕೆ ಸಮ್ಮಂದವೇ ಇರ, ಅತವಾ ಇಪ್ಪಲೂ ಸಾಕು. ಆದರೂ ನೆಂಪಾವುತ್ತು. ಬೇಕೂಳಿರೂ ನೆಂಪಾಗದ್ದದು ಕೆಲವು ಬೇಡ ಹೇಳಿರೂ ನೆಂಪಾವುತ್ತು!
ಇದಕ್ಕೆ ಕಾರಣ ಎಂತರ!? – ಅವೆರಡಕ್ಕೆ  ಏನಾರು ಸಾಮ್ಯತೆ ಇರ್ತು.
ನಮ್ಮ ಮನಸ್ಸಿಂಗೆ ಈ ವಸ್ತುವಿಂಗೂ ಆ ವಸ್ತುವಿಂಗೂ ತಾಳೆ ಹಾಕಿ ಆವುತ್ತು. ಹಾಂಗಾಗಿ ಈ ವಿಶಯ ಹೇಳುವಗ ಆ ವಿಶಯ ನೆಂಪಪ್ಪದು.
ವಿಶಯಂದಲೂ ಈ ವಿಶಯಲ್ಲಿಪ್ಪ ಆ ಶೆಬ್ದ ಕೇಳಿ ಅಪ್ಪಗ ಆ ವಿಶಯಲ್ಲಿಪ್ಪ ಅದೇ ಶಬ್ದ ನೆಂಪಪ್ಪದು.

ಪ್ರಾಯ ಆಗಿ ರಜ ಮರವಲೆ ಸುರು ಆದರೆ ಅಂತೂ ಈ ಸಂಗತಿ ಜೋರೇ ಜೋರು!
ಆರಾರು ಎಂತಾರು ಹೇಳಿರೆ ಒರಕ್ಕಿಲಿ ಕಿಚ್ಚುಮುಟ್ಟಿ ಎಚ್ಚರಿಗೆ ಆದ ಹಾಂಗೆ, ಪಕ್ಕನೆ ಬೇರೆಂತದೋ ಯೋಚನೆ ಮಾಡಿ ತಲೆ ಅಲ್ಲಿಗೆ ಓಡುಸುಗು..
ಎಷ್ಟೋ ಸರ್ತಿ ಇದು ಒಳ್ಳೆದೇ ಆದರೂ, ಕೆಲವು ಸರ್ತಿ ಇದು ಗಮ್ಮತ್ತಿನ ನೆಗೆಗೆ ಕಾರಣ ಆವುತ್ತು. ಅತವಾ, ಮತ್ತೆ ನೆಂಪು ಮಾಡುವಗ ನೆಗೆಬತ್ತು. 🙂

ಶುದ್ದಿಒಪ್ಪಣ್ಣಂಗೂ – ಶುದ್ದಿ ಹೇಳುವಗ ಹಾಂಗೇ ಆದರೆ ಹೇಂಗಕ್ಕು?
ಈ ವಾರ ಅದೇಶುದ್ದಿ ಮಾತಾಡುವೊ°, ಆಗದೋ?

ಸಂಕೊಲೆಯ ಕೊಂಡಿಗಳ ಹಾಂಗೆ, ಮೆದುಳಿಲಿ ವಿಶಯಂಗೊ!!

~

  • ಮಾತಾಡುದು ಹೇಳುವಗ ನೆಂಪಾತು, ಮೊನ್ನೆಂದ ಬೀಸ್ರೋಡುಮಾಣಿ ದಿನಕ್ಕೆ ಎರಡೇಗಂಟೆ ಮಾತಾಡುದಡ, ಒಟ್ಟಿಂಗೆ ಇಪ್ಪವರ ಹತ್ತರೆ. ಒಳುದ ಹೊತ್ತು ಪೂರ ಮೊಬಯಿಲಿಲಿ ಅಂಬೆರ್ಪಡ – ಬೌಶ್ಷ ಬಪ್ಪ ಮೇಶ ಒರೆಂಗೆ ಹಾಂಗೆಯೋ ಏನೋ! ಉಮ್ಮಪ್ಪ.
  • ಉಮ್ಮಪ್ಪ ಹೇಳುವಗ ನೆಂಪಾತು – ರಾಂಪೂಜಾರಿಯ ಸೊಸೆ ಉಮ್ಮಕ್ಕನ ಗೆಂಡ ಮೊನ್ನೆ ಕಳ್ಳುಕುಡುದು ನೆಡಕ್ಕೊಂಡು ಬಪ್ಪಗ ಕಲ್ಪಣೆಗೆ ಬಿದ್ದತ್ತಡ, ಪುತ್ತೂರಿನ ಧನ್ವಂತರಿಲಿ ಎಡ್ಮಿಟ್ಟಾಯಿದಡ.
  • ಧನ್ವಂತರಿ ಹೇಳುವಗ ನೆಂಪಾತು – ಮೊನ್ನೆ ಧನ್ವಂತರಿ ಜಯಂತಿ ಬಂತಲ್ಲದೋ – ಚೂರಿಬೈಲುದೀಪಕ್ಕನ ಮನೆಲಿ ವಿಶೇಷ ಕುಂಕುಮಾರ್ಚನೆ ಇತ್ತಡ ಆ ದಿನ!
  • ಜಯಂತಿ ಹೇಳುವಗ ನೆಂಪಾತು – ಬಟ್ಯನ ಪುಳ್ಳಿ ಜಯಂತಿ ಕಂಪ್ಯೂಟರು ಕಲಿವಲೆ ನೀರ್ಚಾಲಿಂಗೆ ಹೋವುತ್ತಡ..
  • ನೀರ್ಚಾಲು ಹೇಳುವಗ ನೆಂಪಾತು – ಮೊನ್ನೆ ಮದುವೆ ಕಳುದ ಮತ್ತೆ ಸಿದ್ದನಕೆರೆಮಾಣಿ ನೀರ್ಚಾಲಿನ ಕಂಪ್ಯೂಟರು ಅಂಗುಡಿಯ ಬಾಗಿಲೇ ತೆಗದ್ದನಿಲ್ಲೆಡ; ಒಳ ಇದ್ದನೋ – ಹೆರ ಇದ್ದನೋ ಜೆನಂಗೊಕ್ಕೆ ಅರಡಿಯ!
  • ಕಂಪ್ಯೂಟರು ಹೇಳುವಗ ನೆಂಪಾತು – ಎಡಪ್ಪಾಡಿಬಾವನ ಕಂಪ್ಯೂಟರಿಲಿ ಈಗ ಸೊರ ಬತ್ತಿಲ್ಲೆಡ, ಮೊನ್ನೆ ಎಡೆಬಿಡದ್ದೆ ಬಿದ್ದ ಮಳಗೆ ಸ್ಪೀಕರಿಂಗೆ ಬೂಸುರು..
  • ಬೂಸುರು ಹೇಳುವಗ ನೆಂಪಾತು – ಬಂಡಾಡಿ ಅಜ್ಜಿ ಹಪ್ಪಳವ ಎಲ್ಲ ಹೊಗೆಅಟ್ಟಲ್ಲಿ ಹುಗ್ಗುಸಿತ್ತಡ, ಬೂಸುರು ಬಾರದ್ದ ಹಾಂಗೆ. ಹೊಗೆ ಅಟ್ಟ ಸೋರಿ ಹಪ್ಪಳಕಟ್ಟ ಪೂರ ಚೆಂಡಿ ಆಗಿ ಬೂಸುರು ಲಾಯಿಕಂಗೆ ತೊಳದು ಹೋತಡ!
  • ಹಪ್ಪಳ ಹೇಳುವಗ ನೆಂಪಾತು – ಹರಿಪ್ರಸಾದದ ತುಪ್ಪದೋಸೆ ಹಪ್ಪಳದಷ್ಟಕೇ ಇಪ್ಪದು ಹೇಳ್ತ ಕೋಪಲ್ಲಿ ಬಲ್ನಾಡುಮಾಣಿ ಗಣೇಶುಪ್ರಸಾದಿಂಗೆ ಹೋಪದಡ ಈಗೀಗ.
  • ತುಪ್ಪ ಹೇಳುವಗ ನೆಂಪಾವುತ್ತು – ತರವಾಡುಮನೆ ವಿದ್ಯಕ್ಕ ತುಪ್ಪ ತಿಂತಿಲ್ಲೆ ಅಲ್ಲದೋ – ಮೊನ್ನೆ ತುಪ್ಪಲ್ಲಿ ಮಾಡಿದ ಮಯಿಸೂರುಪಾಕಿನ ಒಂದು ಬಟ್ಳು ಕಾಲಿಮಾಡಿದ್ದಡ!
  • ಮೈಸೂರು ಹೇಳುವಗ ನೆಂಪಾತು – ಪಂಜೆಕುಂಞಜ್ಜಿಯ ಮಗಳ ಮನೆಲಿ ಪುಳ್ಳಿದು ಬಯಂಕರ ಕಾರುಬಾರು ಅಡ. ಅಮ್ಮನ ಕರಕ್ಕೊಂಡು ಆಪೀಸಿಂಗೆ ಹೋದರೆ, ಬಪ್ಪದು ಇರುಳೇಡ!
  • ಕಾರುಬಾರು ಹೇಳುವಗ ನೆಂಪಾತು – ಬೆಂಗುಳೂರಿಲಿ ಇದ್ದಿದ್ದ ನಮ್ಮೋರು ಕೆಲವು ಜೆನ ಬಯಂಕರ ಕಾರುಬಾರು ಮಾಡಿದ್ದವಡ, ಕೆಲವು ಜೆನ ಒಳ; ಕೆಲವು ಜೆನ ಮೇಗೆ – ಹೋದವಡ!
  • ಬೆಂಗುಳೂರು ಹೇಳುವಗ ನೆಂಪಾತು – ಶುಬತ್ತೆಗೆ ಈ ಒರಿಶ ಊರಿಂಗೆ ಬಪ್ಪಲೆ ಕಷ್ಟ ಅಡ, ಪ್ರಕಾಶಮಾವನ ಕಂಪೆನಿಲಿ ರಜೆಯೇ ಇಲ್ಲೆಡ!
  • ಶುಬತ್ತೆ ಹೇಳುವಗ ನೆಂಪಾತು – ಸುಬ್ರಮಣ್ಯದ ಆನೆಗೆ ಬಯಂಕರ ಪೋಲಿ ಎಳಗುತ್ತಡ ಒಂದೊಂದರಿ! ಸಣ್ಣ ಪ್ರಾಯ ಅಲ್ಲದೋ!!
  • ಸುಬ್ರಮಣ್ಯ ಹೇಳುವಗ ನೆಂಪಾತು, ಈ ಒರಿಶದ ಸುಬ್ರಮಣ್ಯ ಸ್ರಶ್ಟಿಗೆ (ಷಷ್ಠಿ) ಹೋಗಿಪ್ಪಗ ಹೊಸ ನಾಗರಬೆತ್ತ ತಪ್ಪಲೆ ಮಾಷ್ಟ್ರುಮಾವ° ಈಗಳೇ ಹೆರಟು ನಿಂದಿದವಡ.
  • ನಾಗರ ಹೇಳುವಗ ನೆಂಪಾತು, ಶ್ರೀಅಕ್ಕನ ಮನೆ ಜಾಲಿಲಿ ಮೊನ್ನೆ ನಾಗರಹಾವು ಕಂಡಿತ್ತಡ, ಜೋಯಿಶಪ್ಪಚ್ಚಿ -ಇದೊಂದು ಒಳ್ಳೆ ಲಕ್ಷಣ ಹೇಳಿದ್ದವಡ. ಆರಿಂಗೆ?!
  • ಜೋಯಿಶಪ್ಪಚ್ಚಿ ಹೇಳುವಗ ನೆಂಪಾತು, ಜ್ಯೋತಿಷ್ಯದ ಯೇವದೋ ಒಂದು ವಿಶಯಲ್ಲಿ ನಮ್ಮ ಮಹೇಶಣ್ಣ ಪ್ರಬಂದ ಬರದ್ದಕ್ಕೆ ಡೋಕ್ಟ್ರೇಟು ಕೊಟ್ಟಿದವಡ, ಹಾಂಗೆ ಡಾಮಹೇಶಣ್ಣ ಆಯಿದನಡ.
  • ಡಾಕ್ಟ್ರು ಹೇಳುವಗ ನೆಂಪಾತು, ಬೈಲಿಂಗೆ ಬತ್ತ ನಮ್ಮ ಡಾಗುಟ್ರಕ್ಕನ ಸಂಕ ಪುನಾ ಮುರುದ್ದಡ, ಬಾವನತ್ರೆ ನಿತ್ಯ ಜಗಳ ಅಡ ಈಗೀಗ!
  • ಜಗಳ ಹೇಳುವಗ ನೆಂಪಾತು, ಒಪ್ಪಕ್ಕಂಗೆ ಈಗೀಗ ಜಗಳ ಮಾಡ್ಳೇ ಪುರುಸೊತ್ತಿಲ್ಲೆ, ರಾಮಜ್ಜನ ಕೋಲೇಜಿಲಿ ಲೇಬು-ಪರೀಕ್ಷೆ ತಪ್ಪುಲಿಲ್ಲೆ ಅಲ್ಲದೋ?! ಒಳ್ಳೆದಾತು ಅಲ್ಲಿ ಸೇರುಸಿದ್ದು ಅದರ!! 😉
  • ರಾಮಜ್ಜ ಹೇಳುವಗ ನೆಂಪಾತು, ಈಗ ಇಪ್ಪ ಕೋಲೇಜುಗಳ ಒಟ್ಟಿಂಗೆ ಒಂದು ಆಯುರ್ವೇದ ಕೋಲೇಜುದೇ ಆಯೆಕ್ಕು ಹೇಳಿ ಮೊನ್ನೆ ಹೇಳಿಗೊಂಡು ಇತ್ತಿದ್ದವಡ. ನಿಜವಾದ ವಿದ್ಯಾಭಿಮಾನಿ ಅವು!
  • ವಿದ್ಯ ಹೇಳುವಗ ನೆಂಪಾತು, ಪಾತಿ ಅತ್ತೆಯ ಸೊಂಟಬೇನೆಂದಾಗಿ ವಿದ್ಯಕ್ಕಂಗೆ ತುಂಬ ಕೆಲಸಂಗೊ ಕಲ್ತಾತಡ ಈಗ! ರಂಗಮಾವ° ಹೇಳಿದವು ಓ ಮೊನ್ನೆ!
  • ರಂಗ ಹೇಳುವಗ ನೆಂಪಾತು, ಶಡ್ರಂಪಾಡಿ ದೇವಸ್ತಾನಲ್ಲಿ ರಂಗಪೂಜಗೆ ಹೋಪಲಾಯಿದಿಲ್ಲೆ ಹೇಳಿ ಪಾರೆ ಮಗುಮಾವ ಬೇಜಾರು ಮಾಡಿಗೊಂಡವಡ.
  • ಪಾರೆ ಹೇಳುವಗ ನೆಂಪಾತು, ಈ ಸರ್ತಿ ಬಲೀಂದ್ರಂಗೆ ಪಾರೆ ಹೂಗು ಸಿಕ್ಕದ್ದೆ ಮತ್ತೆ ಸಿಂಗಾರದ ಮಾಲೆ ಹಾಕಿದ್ದಡ.
  • ಮಾಲೆ ಹೇಳುವಗ ನೆಂಪಾತು, ಮಾಲ ಚಿಕ್ಕಮ್ಮನ ಮಗಳು ಈ ಒರಿಶಂದ ಕೋಲೇಜು! ಪುತ್ತೂರು ಹೋಶ್ಟೆಲಿಂದ ಹೋಪದಡ.
  • ಕೋಲೇಜು ಹೇಳುವಗ ನೆಂಪಾತು, ಮೊನ್ನೆ ಕೋಲೇಜಿಲಿ ಓಡಿಬಂದುಹಾರ್ತ ಸ್ಪರ್ಧೆಲಿ ಮಾಷ್ಟ್ರುಮಾವನ ಮಗಳಿಂಗೆ ಚಿನ್ನ ಸಿಕ್ಕಿದ್ದಡ. ಈ ರೇಟಿನ ಎಡಕ್ಕಿಲಿ ಚಿನ್ನ ಸಿಕ್ಕಿದ್ದಕ್ಕೆ ಮಾಷ್ಟ್ರಮನೆ ಅತ್ತೆಗೆ ಕೊಶಿಯೋ ಕೊಶಿ!
  • ಚಿನ್ನ ಹೇಳುವಗ ನೆಂಪಾತು, ಮುಳಿಯಲ್ಲಿ ಚಿನ್ನ ತೆಗವಗ ಟೀವಿಲಿ ಕಾಣ್ತಲ್ಲದೋ – ದ್ವಾರಕದಣ್ಣ ಮದುವೆ ಚಿನ್ನ ತೆಗವಲೆ ಹೋಗಿ ಟೀವಿನೋಡಿಗೊಂಡೇ ಕೂಯಿದನಡ.
  • ಮುಳಿಯ ಹೇಳುವಗ ನೆಂಪಾತು, ನಮ್ಮ ಮುಳಿಯಭಾವನ ಚೆಂದದ ಭಾಮಿನಿಗೊ ಬೈಲಿಲಿ ರೈಸುತ್ತಡ. ಅಪೂರ್ವ ಪ್ರಯತ್ನವ ಜೆನಂಗೊಕ್ಕೆ ಎತ್ತುಸಿದ್ದಕ್ಕೆ ಎಲ್ಲೋರುದೇ ಅವರ ಅಭಿನಂದುಸುತ್ತವಡ.
  • ಭಾಮಿನಿ ಹೇಳುವಗ ನೆಂಪಾತು, ಕಾನಾವಣ್ಣ ಈ ಒರಿಶ ಒಂದೇ ಒಂದು ದಿನ ರಜೆ ಮಾಡಿದ್ದನಿಲ್ಲೆಡ. ಮಾಣಿಗೆ ಕಲಿತ್ತದರ್ಲಿ ಒಳ್ಳೆ ಆಸಗ್ತಿ ಇದ್ದು ಹೇಳಿ ಶ್ರೀಅಕ್ಕ° ಹೇಳಿಗೊಂಡು ಇತ್ತಿದ್ದವು!
  • ಕಾನಾವು ಹೇಳುವಗ ನೆಂಪಾತು, ಮಳೆಗಾಲ ಉದ್ದ ಆದ ಲೆಕ್ಕಲ್ಲಿ ಕಾನಾವು ಕೆರೆಲಿ ಒಳ್ಳೆತ ನೀರಿದ್ದಡ ಈ ಸರ್ತಿ! ಈಜಲೆ ಯೇವತ್ತು ಹೋಪದು – ಹೇಳಿ ದೊಡ್ಡಭಾವ° ಲೆಕ್ಕ ಹಾಕಿಗೊಂಡು ಇದ್ದ°.
  • ಲೆಕ್ಕ ಹೇಳುವಗ ನೆಂಪಾತು, ಕಾಯಿಮಾಪಳೆಗೆ ಲೆಕ್ಕ ತಪ್ಪಿದ್ದರ್ಲಿ ಮಿಂಚಿನಡ್ಕ ಬಾವಂಗೆ ಡಬ್ಬಲು ಲಾಬ ಆಯಿದಡ. ಬಪ್ಪೊರಿಶ ಹೊಸ ಮನೆ ಕಟ್ಟಿರೂ ಆತು – ಹೇಳಿಗೊಂಡು ಇತ್ತಿದ್ದವು! 😉
  • ಕಾಯಿ ಹೇಳುವಗ ನೆಂಪಾತು, ಬಟ್ಟಮಾವಂಗೆ ಅಕ್ಕಿಕಾಯಿ ಹೊರ್ಲೆಡಿಯದ್ದೆ ಈಗೀಗ ಅದರ ಬಾಬ್ತು ತೆಕ್ಕೊಂಡು ಹೋಪದಡ.
  • ಬಾಬ್ತು ಹೇಳುವಗ ನೆಂಪಾತು, ಬಂಡಾರಿಬಾಬು ಮೊನ್ನೆ ಹೊಸನಗರಕ್ಕೆ ಹೋದಪ್ಪಗ ಅದರ ಕೆಲಸದ್ದು ಚೌರ ಮಾಡಿದ್ದಡ. ಸರಿ ಅರಡಿಯದ್ದೆ ಎಲಿ ತಿಂದ ಹಾಂಗೆ ಮಾಡಿಹಾಕುತ್ತಡ!
  • ಎಲಿ ಹೇಳುವಗ ನೆಂಪಾತು, ರೂಪತ್ತೆ ಮನೆಲಿ ಎಲಿ ಉಪದ್ರ ಇದ್ದದಕ್ಕೆ ತಂದ ಎಲಿ ಪೆಟ್ಟಿಗೆಯ ಜಾಲಿಲಿ ಹಾಕಿದ್ದು ಮಣ್ಣಿಡುದು ಕುಂಬಾಯಿದಡ!
  • ರೂಪತ್ತೆ ಹೇಳುವಗ ನೆಂಪಾತು, ಕಾರಿನ ಪೆಟ್ರೋಲು ಮುಗುದು ಗುಡ್ಡೆತಲೆಲಿ ಬಾಕಿ ಆದ್ದಕ್ಕೆ ಅಪುರೂಪಲ್ಲಿ ಗೆಂಡಂಗೆ ಪೋನು ಮಾಡಿತ್ತಡ!
  • ಪೋನು ಹೇಳುವಗ ನೆಂಪಾತು, ಪೆರ್ಲದಣ್ಣ ಮೊನ್ನೆ ಪೋನು ಮಾಡಿತ್ತಿದ್ದ – ಯೆಡಿಯೂರಪ್ಪ° ಉದುರುವ ಅಂದಾಜು -ಹೇಳಿಗೊಂಡು!
  • ಯೆಡಿಯೂರಪ್ಪ° ಹೇಳುವಗ ನೆಂಪಾತು, ಗುಣಾಜೆಮಾಣಿ ಮೊನ್ನೆ ಊರಿಂಗೆ ಬಂದಿತ್ತಿದ್ದನಡ, ಅಂಬೆರ್ಪಿಲಿ ಒಪಾಸು ಹೋದನಡ.
  • ಗುಣಾಜೆಮಾಣಿ ಹೇಳುವಗ ನೆಂಪಾತು, ಶೋಬಕ್ಕ° ಈ ಸರ್ತಿ ಸುಮಾರು ಕರೆಂಟಿನ ಕ್ರಯಕ್ಕೆ ತೆಗೆತ್ತಡ, ಈ ಸರ್ತಿ ಕೇಂಡ್ಳಿಂಗೆ ಗಿರಾಕಿ ಇರ ಅಂಬಗ!
  • ಕರೆಂಟು ಹೇಳುವಗ ನೆಂಪಾತು, ಮೊನ್ನೆ ಅಜ್ಜಕಾನಬಾವ° ಕೆಂಡದಡ್ಯೆ ಮಾಡ್ಳೆ ಹೆರಟು ಕರಂಚಿದ್ದಡ!
  • ಕೆಂಡದಡ್ಯೆ ಹೇಳುವಗ ನೆಂಪಾತು, ನೆಗೆಗಾರ ಓ ಮೊನ್ನೆ ಪಂಚಾಂಗಂದ ಕೆಳ ಉರುಳಿ ಬಿದ್ದದಡ! ಮೋರೆ ಪಾಪ ಕೆಂಡದಡ್ಯೆಯ ಹಾಂಗೆ ಆಯಿದಡ.
  • ಪಂಚಾಂಗ ಹೇಳುವಗ ನೆಂಪಾತು, ಬೈಲಕರೆ ಜೋಯಿಶಪ್ಪಚ್ಚಿಗೆ ಈ ಒರಿಶ ಮಲೆಯಾಳ ಪಂಚಾಂಗ ಸಿಕ್ಕದ್ದೆ ಒಯಿಜಯಂತಿ ಮಾಂತ್ರ ಇಪ್ಪದಡ. ಮೂರ್ತ ಮಾಡ್ಳೆ ಭಾರೀ ಬಂಙ ಆವುತ್ತು ಹೇಳ್ತದು ಅವರ ಅಭಿಪ್ರಾಯ!!
  • ಬೈಲಕರೆ ಹೇಳುವಗ ನೆಂಪಾತು, ಗಣೇಶಮಾವಂಗೆ ಹಲ್ಲು ಸೆಳಿತ್ತದು ಜೋರಾದ್ದಕ್ಕೆ ಪುತ್ತೂರಿಂಗೆ ಬಯಿಂದವಡ. ಡಾಗುಟ್ರ ಹೆಂಡತ್ತಿಯ ಸೆಂಟಿನ ಪರಿಮ್ಮಳಕ್ಕೆ ತಲೆಸೆಳಿವಲೆ ಸುರು ಆಯಿದಡ!
  • ಪರಿಮ್ಮಳ ಹೇಳುವಗ ನೆಂಪಾತು, ಕೆದೂರುಡಾಗುಟ್ರು ಬೋದತಪ್ಪುಸುಲೆ ಕೊಡ್ತ ಮದ್ದಿನ ಪರಿಮ್ಮಳ ನೋಡಿದ್ದಡ ನಮ್ಮ ಬೋಸಬಾವ. ಮತ್ತೆ ಒಂದು ವಾರ ಆರಿಂಗೂ ರಗಾಳೆ ಇಲ್ಲೆ!
  • ರಗಳೆ ಹೇಳುವಗ ನೆಂಪಾತು, ಲೋನು ಕೇಳುಲೆ ಬಂದು ರಗಳೆ ಅಪ್ಪದು ಬೇಡ ಹೇಳಿಗೊಂಡು ಬೇಂಕಿನಪ್ರಸಾದ° ಅಷ್ಟಂಟುಮೆನೇಜರ ಆಯಿದನಡ!
  • ಬೇಂಕು ಹೇಳುವಗ ನೆಂಪಾತು, ಬೇಂಕಿಲಿರ್ತ ಬೊಳುಂಬುಮಾವ ಮೊನ್ನೆ ಶೇಡಿಗುಮ್ಮೆಬಾವಂಗೆ ಜೋರುಮಾಡಿದ್ಡಡ, ಅವರ ಬೇಗಿಲಿ ಪೈಸೆ ಇಪ್ಪದೋ ಕೇಳಿದ್ದಕ್ಕೆ!
  • ಬೇಗು ಹೇಳುವಗ ನೆಂಪಾತು, ಪುಟ್ಟತ್ತೆಯ ವೇನಿಟಿ ಬೇಗಿಂಗೆ ಮೊನ್ನೆ ಎರುಗು ಬಂತಡ! ಒಳ ಮಡಗಿದ ಚೋಕುಲೇಟಿಂಗೆ ಆಯಿಕ್ಕು!
  • ಚೋಕುಲೇಟು ಹೇಳುವಗ ನೆಂಪಾತು, ಕೊಕ್ಕಕ್ಕೆ ಈಗ ಒಳ್ಳೆತ ಕ್ರಯ ಅಡ, ಎಲ್ಲ ಚೋಕುಲೇಟು ಮಾಡ್ಳೆ ಹೋವುತ್ತಡ!
  • ಕೊಕ್ಕ ಹೇಳುವಗ ನೆಂಪಾತು, ಈ ಸರ್ತಿ ಅಡಕ್ಕೆ ತೆಗವಲೆ ಕೊರಗ್ಗ° ಬಯಿಂದೇ ಇಲ್ಲೆಡ, ರಂಗಮಾವ° ಕೇಳುವಗ ಕೊಕ್ಕೆ ಮುರುದ್ದು ಹೇಳಿತ್ತಡ!
  • ಅಡಕ್ಕೆ ಹೇಳುವಗ ನೆಂಪಾತು, ಅಡ್ಕತ್ತಿಮಾರುಮಾವ ಕೆಮರವ ಕಪಾಟಿನೊಳದಿಕೆ ಮಡಗಿದ್ದವಡ, ಮಳೆಗಾಲ ಪೂರ್ತ ಕಳಿಯದ್ದರೆ  ಚೆಂಡಿ ಆಗಿ ಪಟ ಹಾಳಕ್ಕೂಳಿ!
  • ಮಳೆಗಾಲ ಹೇಳುವಗ ನೆಂಪಾತು, ಮಾಷ್ಟ್ರುಮಾವನಲ್ಲಿ ಮೊನ್ನೆ ಮಳೆಗಾಲ ಅಡಕ್ಕೆ ಮುಗುದು ನೀರ್ಕಜೆಂದ ನೀರಡಕ್ಕೆ ತಂದದಡ!
  • ನೀರಡಕ್ಕೆ ಹೇಳುವಗ ನೆಂಪಾತು, ಅಜ್ಜಕಾನಬಾವ° ನೀರಡಕ್ಕೆ ಅಳಗೆ ಒಡದ್ದು ನೆಂಪಿದ್ದಲ್ಲದೋ – ಮಂಗಂಗೊ ಈಗ ಅಜ್ಜಕಾನಬಾವನಲ್ಲಿಗೆ ಬತ್ತವೇ ಇಲ್ಲೆಡ!
  • ಅಳಗೆ ಹೇಳುವಗ ನೆಂಪಾತು, ರೂಪತ್ತೆ ಮಗಳು ಸಪುರ ಅಪ್ಪಲೆ ಉಪವಾಸ ಸುರುಮಾಡಿದ್ದಡ!
  • ಉಪವಾಸ ಹೇಳುವಗ ನೆಂಪಾತು, ಶರ್ಮಪ್ಪಚ್ಚಿ ಹೊತ್ತಪ್ಪಗ ಹನ್ನೆರಡೇ ಚಪಾತಿ ತಿಂದರೆ ಆತು, ಇರುಳಿಂಗೆ ಊಟ ಇಲ್ಲೆ – ಉಪವಾಸ ಅಡ! ಶ್ರೀಶಣ್ಣ ನೆಗೆಮಾಡುಗು ಒಂದೊಂದರಿ!!
  • ಚಪಾತಿ ಹೇಳುವಗ ನೆಂಪಾತು, ಕಳಾಯಿಗೀತತ್ತೆ ಮೊನ್ನೆ ಲಟ್ಟಣಿಗೆ ಬೇರಿದ್ದಡ – ಲಟ್ಟುಸುಲೆ ಹೇಳಿದ ತಂಗಗೆ!
  • ಕಳಾಯಿ ಹೇಳುವಗ ನೆಂಪಾತು, ಕಲಾಯಿಪಾತ್ರಲ್ಲಿ ಹಾಲು ಬೇಗ ಹಾಳಪ್ಪದಡ, ಮೋಂತಿಮಾರುಮಾವ ಹೇಳಿದವು.
  • ಹಾಲು ಹೇಳುವಗ ನೆಂಪಾತು, ಕೆಪ್ಪಣ್ಣಂಗೆ ಇರುಳಿಂಗೆ ಕುಡಿವಲೆ ಪೆರ್ವದ ಮಂದಹಾಲೇ ಆಯೆಕ್ಕಡ, ವಜ್ರಾಂಗಿಭಾವ ಹೇಳಿ ಹೇಳಿ ನೆಗೆಮಾಡ್ತ°.
  • ವಜ್ರಾಂಗ ಹೇಳುವಗ ನೆಂಪಾತು, ಸ್ವರ್ಗದ ಇಂದ್ರನ ಹತ್ತರೆ ವಜ್ರಾಯುಧವೇ ಇಪ್ಪದಡ, ಚೆನ್ನಬೆಟ್ಟಣ್ಣ ಮೊನ್ನೆ ಮುಳಿಯಭಾವನ ಹತ್ತರೆ ವಾದಮಾಡಿಗೊಂಡು ಇತ್ತಿದ್ದ°!
  • ವಾದ ಮಾಡುದು ಹೇಳುವಗ ನೆಂಪಾತು, ಬಲಿಪ್ಪಜ್ಜನ ತಾಳಮದ್ದಳೆಲಿ ಲೆಕ್ಕಂದ ಜಾಸ್ತಿ ವಾದ ಮಾಡಿರೆ ಅವಕ್ಕೆ ಬೇಜಾರಕ್ಕು ಹೇಳಿ ವೇಣೂರಣ್ಣ ಹೇಳಿತ್ತಿದ್ದವು.
  • ವೇಣೂರಿನ ಶುದ್ದಿ ಬಪ್ಪಗ ನೆಂಪಾತು, ವೇಣೂರಿಂದ ಮೂಡಬಿದ್ರೆಗೆ ಬತ್ತ ಮಾರ್ಗದ ಕರೆಲಿ ತುಂಬಾ ಮದ್ದಿನ ಗೆಡುಗೊ ಇದ್ದಡ, ಸುವರ್ಣಿನಿಅಕ್ಕ° ಪ್ರತಿ ಶುದ್ದಿ ಹೇಳುವಗಳೂ ನೆಂಪು ಮಾಡುಗು!
  • ಮದ್ದಿನ ಗೆಡು ಹೇಳುವಗ ನೆಂಪಾತು, ಅರದ ಮದ್ದುಗೊ ಮಾಂತ್ರ ಸಾಲ, ಇಂಜೆಕ್ಷನುಗಳೂ ಬೇಕು ಹೇಳಿ ಕೇಜಿಮಾವ° ಒಂದೊಂದರಿ ಜೋರುಮಾಡುಗು ಒಪ್ಪಣ್ಣಂಗೆ.
  • ಕೇಜಿ ಹೇಳುವಗ ನೆಂಪಾತು, ಚುಬ್ಬಣ್ಣ ಸಿಂಗಾಪುರಂದ ಬಪ್ಪಗ ಕೇಜಿಗಟ್ಳೆ ಸೆಂಟು ಚೋಕ್ಲೇಟು ತಯಿಂದನಡ!
  • ಸೆಂಟು ಹೇಳುವಗ ನೆಂಪಾತು, ಕಾಸ್ರೋಡು ಬಿಗ್-ಬಜಾರಿಲಿ ಸೆಂಟಿನ ನಾತಕ್ಕೆ ಜೆನ ಕಮ್ಮಿ ಅಕ್ಕಡ. ಗುಣಾಜೆಮಾಣಿ ಹೋಗಿ ಪಿಸುರಿಲಿ ಬಯಿಂದ°.
  • ಕಾಸ್ರೋಡು ಹೇಳುವಗ ನೆಂಪಾತು, ಬೀಸ್ರೋಡುಮಾಣಿಗೆ ಪೋನು ಬಿಡ್ಳೇ ಎಡಿತ್ತಿಲ್ಲೆಡ!

    ನಮ್ಮ ಬೈಲಿಲಿ ಈಗ ನೆಗೆಸಂಕೊಲೆ, ಅಲ್ಲದೋ!?

ಅದಾ, ಶುದ್ದಿ ಒಂದು ಸುತ್ತು ಹೊಡದು ಪುನಾ ಸುರೂವಿಂಗೇ ಬಂದು ನಿಂದತ್ತು!!
~
ಮನುಶ್ಶಂಗೆ ಹೀಂಗಪ್ಪಲೆ ಕಾರಣ ಎಂತರ?
ಮಾಷ್ಟ್ರುಮಾವನ ದೊಡ್ಡಮಗ° – ಅಮೇರಿಕಲ್ಲಿಪ್ಪವನ ಹತ್ತರೆ ಕೇಳಿರೆ ತುಂಬಾ ದೊಡ್ಡ ವಿಶಯಂಗೊ ಹೇಳುಗು!
ಮೆದುಳು ಪ್ರತಿ ವಿಶಯವನ್ನೂ ತಲೆ ಒಳದಿಕೆ ತೆಗದು ಮಡಗುತ್ತು.
ಅದು ತೆಗದು ಮಡಗುವಗ, ಪ್ರತಿ ವಿಶಯವನ್ನೂ ಮತ್ತೊಂದಕ್ಕೆ ಸುಲಾಬಲ್ಲೆ ಸಂಕೊಲೆ ಸಿಕ್ಕುವ ಹಾಂಗೆ ಮಡಗುತ್ತಡ.
ಹಾಂಗಾಗಿ ನವಗೆ ಒಂದು ವಿಶಯ ಕೇಳಿದ ಕೂಡ್ಳೇ ಅದಕ್ಕೆ ಸಮ್ಮಂದದ ಸಂಪೂರ್ಣ ವಿವರಂಗೊ ಹೆರಬತ್ತು.
ಇದರಿಂದ ಮನುಶ್ಶಂಗೆ ನಿತ್ಯ ವೆವಹಾರ ಸುಲಾಬ ಆಗಲಿ ಹೇಳ್ತ ಲೆಕ್ಕಲ್ಲಿ (ಚಾಮಿ) ಹಾಂಗೆ ಮಾಡಿದ್ದಡ.
ಈಗಾಣ ಕಂಪ್ಲೀಟರುಗಳುದೇ ಹಾಂಗೇಡ ನೆಂಪುಮಡಗುದು, ಸಂಕೊಲೆಪಟ್ಟಿಗಳ (linked-list) ಹಾಂಗೆ.
ಒಂದರ ಮೇಗೆ ಒಂದು ಸಂಕೊಲೆಯೇ!

ಏನೇ ಆಗಲಿ, ಸಾವಿರ ಉಪಯೋಗ ಇಪ್ಪ ಈ ವೆವಸ್ತೆಲಿ ಒಂದೊಂದು ನೆಗೆ ಇರ್ತಲ್ಲದೋ –
ಅದುವೇ ಇಂದ್ರಾಣ ಒಪ್ಪಣ್ಣನ ನೆಗೆಯ ಶುದ್ದಿ.

ಒಂದೊಪ್ಪ: ಹಾಂ! ಒಂದೊಪ್ಪ ಹೇಳುವಗ ನೆಂಪಾತು, ಒಳ್ಳೆ ಶುದ್ದಿಗೊಕ್ಕೆ ಬೈಲಿನೋರು ಎಲ್ಲೊರುದೇ ಒಂದೊಪ್ಪ ಕೊಡ್ತವಡ, ಅಪ್ಪೋ?

ಸೂ: ಇಲ್ಲಿಪ್ಪ ಎಲ್ಲಾ ಶುದ್ದಿಯೂ ನೆಗೆಗೇ ಇಪ್ಪದು. ನೆಗೆಬಾರದ್ದೆ ಇದ್ದರೆ ಪಕ್ಕನೆ ಬೊಳುಂಬುಮಾವನ ’ನಗದು’ ನೆಂಪಕ್ಕು, ಜಾಗ್ರತೆ!

79 thoughts on “ಫಕ್ಕನೆ ನೆಂಪಾದ ಚೊಕ್ಕ ಶುದ್ದಿಗೊ!

  1. ಇಷ್ಟೆಲ್ಲಪ್ಪಗ ಎನಗೆ ಎನ್ನ ಅಜ್ಜನ ನೆಂಪಾತು. ಮತ್ತೆ ಅಜ್ಜ ನೆಂಪು ಮಾಡಿಗೊಂಡಿದ್ದ ಒಂದು ಕ್ರಮವೂ ನೆಂಪಾತು. ಹೆರ ಮುಖಮಂಟಪಲ್ಲಿ ಕೂದುಗೊಂಡಿಪ್ಪಗ ಎಂತದೋ ವಿಶಯ ಅಜ್ಜಿಯತ್ರೆ ಹೇಳುಲೆ ನೆಂಪಾಗಿ “ಅಪಾ…. ಇದಾ… ಕೇಳಿತ್ತಾ… ಮಿನಿಯಾ..” ಹೇಳಿ ದಿನಿಗೇಳಿಗೊಂಡು ಮುಖಮಂಟಪಂದ ಚಾವಡಿಲಿಯಾಗಿ ದೇವರೊಳ ಕಳುದು ಉಂಬೊಳದ ಕೊಡೀಲಿ ಅಟ್ಟುಂಬೊಳದ ಬಾಗಿಲಿನತ್ರಂಗೆ ಬಂದು `ಇದಾ.. ಮಿನಿಯಾ…` ಹೇಳಿಯಪ್ಪಗ ಛೆ ಛೆ ಮರತ್ತದ ಹೇಳಿ ವಿಶಯ ನೆಂಪು ಮಾಡುಲೆ ವಾಪಾಸು ಉಂಬೊಳಂದ ದೇವರೊಳಾಗಿ ಚಾವಡಿ ಕಳುದು ಪುನಾ ಮುಖಮಂಟಪಕ್ಕೇ ಬಂದು ನೆಂಪು ಮಾಡಿಗೊಂಡಿದ್ದ ಕ್ರಮ ನೆಂಪಾತು.

  2. ಏ ನೆಗೆಗಾರ ಭಾವ ಬ್ಯಾರ್ತಿ ಪ್ರದೇಶದಿ೦ದ ಹೊರಗಿದ್ದರೆ ಹೇಳಿರೆ ನಾಚಿಕೆ ಇಲ್ಲೆ ಬ್ಯಾರ್ತಿ ಪ್ರದೇಶದ ಒಳಗಿದ್ದಾರೆ ಹೇಳೀರೆ ಜಾಗ್ರತೆ ಬೇಕದ ಈಗ ಎಲ್ಲ ಬ್ಯಾರಿಗೊ ಗಲ್ಪಿಲ್ಲಿ ಇಪ್ಪದದ.ಒಪ್ಪ೦ಗಳೊಟ್ಟಿ೦ಗೆ

  3. ಈ ಒಪ್ಪ ನೋಡಿಯಪ್ಪಗ ನೆ೦ಪಾತದ ಸುವರ್ಣಿನಿ ಅಕ್ಕ೦ ಬೈಲಿ೦ಗೆ ಬಾರದ್ದೆ ಸುಮಾರು ಸಮಯ ಆತು ಹೇಳಿ.ಆಗಲಿ ಸುವರ್ಣಿನಿ ಅಕ್ಕೊ ಹಿ೦ಗೆ ತು೦ಬ ದೂರ ಮಾಡ್ಲಾಗ ಆತೊ.ಏವಗಳು ಕಾಣ್ತವರ ಕಾಣದ್ರೆ ಅಸಕ್ಕ ಆವುತ್ತದ. ಅ೦ತು ದರ್ಶನ ಆದ್ದಕ್ಕೆ ಧನ್ಯವಾದ೦ಗೊ.ಒಪ್ಪ೦ಗಳೊಟ್ಟಿ೦ಗೆ.

  4. ಈ ಶುದ್ದಿ ಲಾಯ್ಕಾಯ್ದು … ಆನು ಬೈಲಿಂಗೆ ಬಾರದ್ದೆ ಸುಮಾರು ಸಮಯ ಆತು..ಓದುಲೇ ಆಯ್ದಿಲ್ಲೆ.ಹಾಂಗಾಗಿ ಒಪ್ಪ ಬರವಗ ತಡವಾತು 🙁
    ಒಂದು ವಿಷಯ ನೆಂಪಪ್ಪಗ ಅದಕ್ಕೆ ಸಂಬಂಧ ಇಪ್ಪ/ಇರದ್ದ ಇನ್ನೊಂದು ನೆಂಪಪ್ಪದು ಸಹಜ 🙂 ಅದಕ್ಕೆ ಕಾರಣ ನಿಂಗೊ ಹೇಳಿದ ಹಾಂಗೆ ’ಮೆದುಳು ಒಂದಕ್ಕೊಂದು ಸಂಬಂಧ ಕಲ್ಪಿಸಿ ಅದರ ಒಂದು ಭಾಗಲ್ಲಿ ಜಾಗೃತೆಲಿ ಎಲ್ಲವನ್ನೂ ಸಂಗ್ರಹಿಸಿ ಮಡುಗುತ್ತು, ಅದು ಸಂಕೋಲೆಯ ಹಾಂಗೆ ಒಂದಕ್ಕೊಂದು ನೆಂಪಾವ್ತಾ ಹೋವ್ತು !!’
    ಮನುಷ್ಯನ ಮೆದುಳು ದೇವರ ಸೃಷ್ಠಿ… ಎಷ್ಟು ಅದ್ಭುತ !!!

  5. ಅದಾ , ಒಪ್ಪಣ್ಣ ಕುಶಾಲು ಮಾಡ್ತ ………ಲಾಯಿಕಯಿದು

  6. ಈ ಶುದ್ದಿ ಓದಿಯಪ್ಪಗ ಕುಂಬ್ಳೆ ಅಜ್ಜಿಯ ನೆಂಪಾತು…ಅಜ್ಜಿಗೆ ಜೋರು ಒಂದು ವಿಶಯ ಹೇಳುವಾಗ ಇನ್ನೊಂದು ವಿಶಯ ನೆಂಪಪ್ಪದು….ಆಚ ವಿಶಯ ಮಾತ್ರ ಅರ್ದಲ್ಲೆ ಬಾಕಿ…
    ಓ ಮೊನ್ನೆ ಕುಂಬ್ಳೆ ಅಜ್ಜಿ ಮನಗೆ ಒಪ್ಪಣ್ಣ ಹೋಗಿ ಬೈಂದ ಹಾಂಗೆ ಈ ಶುದ್ದಿ ಹೇಳುಲೆ ನೆಂಪಾತೋ ಏನೋ…. 😉

    1. ಓದಲೆ ಹೇಳುವಗ ನೆಂಪಾತು, ಬಂಡಾಡಿಪುಳ್ಳಿಗೆ ಪರೀಕ್ಷೆ ಇದ್ದಡ, ಓದುತ್ತೇ ಇಲ್ಲೆ ಹೇಳಿ ಅಜ್ಜಿ ಪರಂಚಿಗೊಂಡಿತ್ತು. 🙁

  7. ನೆಗೆಗಾರ ಹೇಳುವಗ ‘ವ್ಯಾಪ್ತಿ’ಗೆ ಒ೦ದು ಉದಾಹರಣೆ ನೆ೦ಪಾತು.
    ನೆಗೆಗಾರ ಇದ್ದಲ್ಲಿ ಪಾಚ ಇದ್ದು ಹೇಳಿ ಅರ್ಥ. ಪಾಚ ಇಲ್ಲದ್ದಲ್ಲಿ ನೆಗೆಗಾರ ಇಲ್ಲೆ.

  8. ಒಪ್ಪಣ್ಣ! ಲಾಯಕಾಯಿದು!
    {ವಿಶಯಂದಲೂ ಈ ವಿಶಯಲ್ಲಿಪ್ಪ ಆ ಶೆಬ್ದ ಕೇಳಿ ಅಪ್ಪಗ ಆ ವಿಶಯಲ್ಲಿಪ್ಪ ಅದೇ ಶಬ್ದ ನೆಂಪಪ್ಪದು}
    ಇದು ನವಗೆಲ್ಲ ಜೀವನಲ್ಲಿ ಸಾಮಾನ್ಯ ಆದರುದೆ (ಹಲವು) ಪತ್ರಕರ್ತರ, ಬುದ್ಧಿ/ಸುದ್ದಿಜೀವಿಗಳ ಬ೦ಡವಾಳವೇ ಇದು! ಇವ್ವೆಲ್ಲ ಪ್ರಶ್ನೆ ಕೇಳಿಕ್ಕಿ ಉತ್ತರ ಹೇಳಿದ್ದದರ ಕೇಳುವ ತಾಳ್ಮೆ ಇಲ್ಲದ್ದವು. ಅವಕ್ಕೆ ಬೇಕಾದ ಶಬ್ದ ಸಿಕ್ಕಿರೆ ಸಾಕು, ಮತ್ತೆ ಅವಕ್ಕೆ ಬೇಕಾದ ಹಾ೦ಗೆ ಬರವದು. ಬರವಲೆ ಬೇಕಾದ ಹಾ೦ಗಿಪ್ಪ ಶಬ್ದ೦ಗ ಬಪ್ಪ ಹಾ೦ಗೇ ಪ್ರಶ್ನೆ ಕೇಳುಗು!

    ಒ೦ದು ಮಾತಾಡುವಗ ಮತ್ತೊ೦ದು ಶಬ್ದ ನೆ೦ಪಾಗಿ ಮಾತಾಡುವ ಸ್ವಭಾವ ಜನರಲ್ಲಿಪ್ಪದರಿ೦ದಲೇ ಅಲ್ಲದ ಲಾಯರುಗೊಕ್ಕೆ ಸುಲಭ ಅಪ್ಪದು!

    ಮತ್ತೆ ಕೆಲವಿದ್ದು.
    ನವಗೆ ಅಯೋಧ್ಯೆ ಹೇಳಿರೆ ರಾಮನ ನೆ೦ಪಾದರೆ ಕೆಲವಕ್ಕೆ ಬಾಬರಿ ಮಸೀದಿಯೇ ನೆ೦ಪಪ್ಪದು.
    ಹಿ೦ದು/ಸ೦ಘ ಹೇಳಿರೆ ದೇಶಪ್ರೇಮ ನೆ೦ಪಾದರೆ ಕೆಲವಕ್ಕೆ ಕೋಮುವಾದವೆ ನೆ೦ಪಪ್ಪದು.
    ಸ೦ಸ್ಕೃತ ಕಲಿವದು ಹೇಳಿರೆ ಕೆಲವು ಜೆನಕ್ಕೆ ಮ೦ತ್ರ ಹೇಳುವದು ಮಾ೦ತ್ರ ನೆ೦ಪಪ್ಪದು!

    ಒಪ್ಪಣ್ಣ ಹೇಳಿದ ಶುದ್ದಿಗೂ “ವ್ಯಾಪ್ತಿ ಜ್ನಾನ” ಹೇಳುವ ವಿಶಯಕ್ಕೂ ಸ೦ಬ೦ಧ ಇದ್ದು.
    ಹೀ೦ಗೆ ಒ೦ದು ವಿಷಯ೦ದ ಮತ್ತೊ೦ದು ನೆ೦ಪಪ್ಪದು ವ್ಯಾಪ್ತಿ ಜ್ನಾನ೦ದಾಗಿ ಅಡ. ಅದು ಸರಿ ಇದ್ದರೆ ನೆ೦ಪಾಯೆಕಾದ್ದದೇ ನೆ೦ಪಕ್ಕು. ಇಲ್ಲದ್ರೆ ಮತ್ತೆ೦ತಾದರೂ (ಅದಕ್ಕೆ ರಜ ರಜ ಸ೦ಬ೦ಧಿಸಿದ್ದದು) ನೆ೦ಪಕ್ಕು.

    1. ವ್ಯಾಪ್ತಿ ಹೇಳೋಗ ನೆ೦ಪಾತದ.ನೆಗೆಗಾರ ವ್ಯಾಪ್ತಿ ಪ್ರದೇಶದ ಹೆರ೦ದ ಬೈಲಿನ ಒಳ ಬಪ್ಪದು ಯೇವಗಳೋ?

      1. ಅದಾ, ಮುಳಿಯಭಾವ ಹೀಂಗೆ ಹೇಳುವಗ ನೆಂಪಾತು..
        ಅಜ್ಜಕಾನಬಾವನ ಮೊಬಯಿಲಿಂಗೆ ಪೋನು ಮಾಡಿರೆ ಕೆಲವು ಸರ್ತಿ ಒಂದು ಹೆಮ್ಮಕ್ಕೊ ಹೇಳ್ತು:

        ನೀವು ಕರೆಮಾಡಿರುವ ಚಂದಾದಾರರು ಬ್ಯಾರ್ತಿ ಪ್ರದೇಶದಿಂದ ಹೊರಗಿದ್ದಾರೆ.. – ಹೀಂಗೆಂತದೋ..

        ಎನಗೆ ನಾಚಿಗೆ ಆಗಿ ಪೋನು ಮಡಗುದು ಮತ್ತೆ. ಅವನತ್ರೆ ಕೇಳಲೆ ಹೋಯಿದಿಲ್ಲೆ ಮತ್ತೆ! ಅವಂಗೂ ನಾಚಿಗೆ ಅಕ್ಕಿದಾ..! 😉

  9. ನಾಡ್ತು ೧೦ನೇ ತಾರೀಕಿಂದ ೨೩ರವರೆಗೆ ಎನಗೆ ‍ಎಕ್ಸಾಮುಗೊ.ನಿಂಗಳ ಹಾರೈಕೆ ಎನ್ನ ಮೇಲಿರ್ಲಿ.ಮತ್ತೆಂತಾರು ಸುದ್ದಿಗೊ ಸಿಕ್ಕಿರೆ ಹೇಳಿ.
    ಪ್ರೀತಿಯಿರಲಿ…
    ಸಂಚಾರಿ…
    ನಿರಂತರ….

    1. ಮೇಲಿರ್ಲಿ ಹೇಳೋಗ ನೆ೦ಪಾತು.ಹೊಗೆ ಅಟ್ಟದ ಮೇಲೆ ಒಯ್ಶಿದ ಅದಕ್ಕೆ ಜಾಲಿಂಗೆ ಹಾಕೆಕ್ಕು,ಮಳೆ ಬಿಟ್ಟತ್ತದಾ..
      ಪರೀಕ್ಷೆಗೆ ಸರಿ ಓದಿದ್ದೆಯನ್ನೇ ಭಾವ,ಹೆಂಗೆ ಓದೋದು ಹೇಳಿ ಶ್ರೀಶಣ್ಣನ ಹತ್ತರೆ ಹೇಳಿದ್ದೆ,ಗುಟ್ಟಿಲಿ..ಲಾಯಿಕ ಬರೆ ಮಿನಿಯಾ.ಎಂತ ಪರೀಕ್ಷೆ ಅಷ್ಟು ಉದ್ದಕೆ ?

  10. ನಿನ್ನ ಚೊಕ್ಕ ಶುದ್ದಿಗೆ ಎನ್ನ ಚಿಕ್ಕ ಸುದ್ದಿಗ..
    ಬೀಸ್ರೋಡು ಮಾಣಿ ಮೊಬೈಲ್ ಲಿ ಮಾತಾಡುದು ಮಾತ್ರ ಅಲ್ಲ ಅವಂಗೆ ಈಗ ನೋಡಿದಲ್ಲಿ ಎಲ್ಲ ಚಿತ್ರಂಗಳೇ ಕಾಂಬದಡ್ಡ.. 😉
    ಚಿತ್ರಂಗಳ ನೋಡಿ ಕಂಪ್ಯೂಟರಿಲಿದೇ ಚೆಂದ ಚೆಂದದ ಚಿತ್ರಂಗಡ್ಡ..:-)
    ಕಂಪ್ಯೂಟರು, ಬೂಸರು ಹೇಳುವಾಗ ನೆಂಪಾತು ಬಂಡಾಡಿ ಅಜ್ಜಿ ಬೈಲಿಂಗೆ ಬಯಿಂದವಿಲ್ಲೇ ಹೇಳಿ.. ಇಷ್ಟು ಪುಳ್ಯಕ್ಕ ಇದ್ದುದೇ ಅಜ್ಜಿಯ ಬೈಲಿಂಗೆ ಕರ್ಕೊಂಡು ಬಪ್ಪಲೆ ಆವುತ್ತಿಲ್ಲೆ…
    ಪುಳ್ಳಿ ಹೇಳುವಾಗ ನೆಂಪಾತು ಕಾನಾವಜ್ಜಿಯ ಪುಳ್ಳಿಗೆ ಸೈಕಲ್ ಲಿ ಶಾಲೆಗೆ ಹೋಪಲೆ ಉದಾಸಿನ ಅಡ್ಡ. ಅಪ್ಪನೊಟ್ಟಿನ್ಗೆ ಕಾರಿಲಿ ಹೋಪದಡ್ಡ. ಕೇಳಿದರೆ ಮಳೆ ಬಿಡ್ತಿಲ್ಲೇ ಹೇಳ್ತ ಕಾರಣ.

    1. ಚಿತ್ರವಿಚಿತ್ರವಾದ ಬದಲಾವಣೆ ಬೀಸ್ರೋಡುಮಾಣಿಯ ಮುಖಚಿತ್ರಲ್ಲಿ! – ಹೇಳಿ ಪೆರ್ಲದಣ್ಣ ರಾಗಲ್ಲಿ ಹೇಳ್ತ°; ಅದೆಂತಗೆ?

  11. ಒಪ್ಪಣ್ಣ, ನಮ್ಮ ಜೀವನಲ್ಲಿ ನಿತ್ಯ, ಪ್ರತಿ ಕ್ಷಣ ಅಪ್ಪ ವಿಷಯ ಇದು. ಪಕ್ಕನೆ ನೆಂಪಪ್ಪ ಚೊಕ್ಕದ ಶುದ್ದಿಗಳ ಎಷ್ಟು ಚೆಂದಲ್ಲಿ, ತಮಾಷೆಲಿ ಚೊಕ್ಕಕ್ಕೆ ಹೇಳಿದ್ದೆ. ತುಂಬಾ ಲಾಯ್ಕಾಯಿದು.

    ಅದಪ್ಪು.., ಮನೆಗೆ ಬಂದ ಜೆನವ ಎನಗೆ ಪುನಾ ನೆಂಪು ಮಾಡಿದ್ದು ಎಂತಕ್ಕೆ?:-(
    ಜೋಯಿಶಪ್ಪಚ್ಚಿ ಬಂದ ಜೆನ ಒಳ್ಳೇದು ಮಾಡ್ಲೆ ಬಂದದು ಹೇಳಿ ಅಪ್ಪಗ ಅಲ್ಲದಾ ನೀನು ಸಿಕ್ಕಿದ್ದು?
    ನಿನ್ನಂದಾಗಿ ಒಳ್ಳೆದಪ್ಪದಾ ಹೇಳಿಯೇ ಆತದ ಅಕ್ಕಂಗೆ!!!! ಹಾಂಗೆ ಆಯಿದು. ಜೋಯಿಶಪ್ಪಚ್ಚಿ ಹೇಳಿದ್ದು ತಪ್ಪ ಅಲ್ಲದಾ?
    ಕಾನಾವಣ್ಣನ ಶುದ್ದಿ, ಒಪ್ಪಣ್ಣ ನ ಚೊಕ್ಕ ಶುದ್ದಿಲಿ ಬಂದದಕ್ಕೆ ಶಾಲೆಗೆ ಹೋಗಿ ಭಾಮಿನಿಗೆ ವರದಿ ಆಯಿದು.. ಭಾಮಿನಿಲಿಯೇಯಾ ಗೊಂತಿಲ್ಲೆ.. ರಾಗ ಇದ್ದಿಕ್ಕು 😉

    ನೀನು ಹೇಳಿದ ಮೆದುಳಿನ ವಿಷಯಂಗಳ ನೋಡುವಾಗ ಮಾಷ್ಟ್ರು ಮಾವ° ಹಾಂಗೆ ಅಲ್ಲದಾ ಹೇಳಿ ಅನ್ಸಿತ್ತು. ಒಂದು ವಿಷಯ ಹೇಳಿದರೆ ಅದಕ್ಕೆ ಸಂಬಂಧ ಇಪ್ಪ ನೂರು ವಿಷಯಂಗಳ ಹೇಳುಗು ಹೇಳಿ ಮಾಷ್ಟ್ರು ಮಾವನ ಸಣ್ಣ ಮಗ° ಹೇಳ್ತ. ಅವು ವಿಷಯ ಹೇಳುವಾಗ ಬರಕ್ಕೊಂಬಲೂ ಎಡಿತ್ತಿಲ್ಲೇಡ್ಡ ಅಷ್ಟು ವಿಷಯ ಬತ್ತಡ್ಡ ಒಂದಾಗಿ ಒಂದು ಹೇಳಿತ್ತಿದ್ದ°. ಅವರಲ್ಲಿಪ್ಪ ಇನ್ನುದೇ ವಿಷಯಂಗ ಜೆನಂಗಳ ಹತ್ತರೆ ಎತ್ತಲಿ. ಅವರ ಪಾಂಡಿತ್ಯ ಲೋಕಕ್ಕೆ ಸಿಕ್ಕಲಿ ಹೇಳಿ ಎನ್ನ ಆಸೆ.

    1. ಕಳಾಯಿಗೀತತ್ತೆ ಬೈಲಿಂಗೆಬಂದು ಒಂದು ನೆಗೆಮಾಡದ್ದೆ ಮೂರುನಾಕು ತಿಂಗಳು ಕಳಾತಿದಾ. ಕೊಶಿ ಆತು ಒಪ್ಪಣ್ಣಂಗೆ!
      ಅದಾ, ಕಳಾಯಿಗೀತತ್ತೆಯ ನೆಗೆನೋಡುವಗ ನೆಂಪಾತು,
      ಮನೆಲಿ ಪೇಷ್ಟು ಮುಗುದ್ದು; ಇಂದು ಹೊತ್ತಪ್ಪಗ ಪೇಟಗೆ ಹೋಗಿ ತರೆಕ್ಕು!

    1. ಪೆರುವದಣ್ಣಂಗೆ ಕೊಶಿ ಆಗಿ ಮಾತೇ ಬತ್ತಿಲ್ಲೆ, ಕೇವಲ ನೆಗೆಮಾಂತ್ರ!
      ಇನ್ನು ಎನಗೆಂತ ಕೆಲಸ! 🙂

      1. ನಗೆಗಾರನ ಮೋರೆಯುದೆ, ನಗೆಯುದೆ ನೋಡುವಗ ಮತ್ತೂ ಜಾಸ್ತಿ ಕೊಶಿ ಆಗಿ ನೆಗೆ ಬತ್ತು.. :-):-):-):-)

  12. ಒಪ್ಪಣ್ಣ.
    ಕೊಶೀ ಆತಿದ ಓದಿ. ಅದರೊಟ್ಟಿಂಗೆ:
    ಹೀಂಗೆ ಒಂದು ದಿನ ಆಪೀಸಿಂಗೆ ಹೆರಡುವಾಗ ಡ್ರೆಸ್ಸಿಂಗೆ ಇಸ್ತ್ರಿ ಹಾಕಿದ್ದಿಲ್ಲೆ ಹೇಳಿ ನೆಂಪಾತು
    ಇಸ್ತ್ರಿ ಪೆಟ್ಟಿಗೆ ತಪ್ಪಲೆ ಹೋಪಗ ಕರೆಂಟ್ ಬಿಲ್ ಕಟ್ಟಲೆ ಅದೇ ದಿನ ಅಕೇರಿ ಹೇಳಿ ನೆಂಪಾತು.
    ಬಿಲ್ ಹುಡ್ಕಲೆ ಹೋಪಗ ನೆಂಪಾತು ಅವರದ್ದೊಂದು ಪೋರ್ಮಿಲ್ಲಿ ವಿವರ ತುಂಬಿಸಿ ಕೊಟ್ಟರೆ ಪ್ರತೀ ತಿಂಗಳು ಹೋಗಿ ಕಟ್ಟುವದು ತಪ್ಪುತ್ತು ಹೇಳಿ
    ಫೋರ್ಮ್ ನೆಂಪಪ್ಪಗ ಪೆನ್ ನೆಂಪಾತು.
    ಪೆನ್ ನೆಂಪಪ್ಪಗ ಅದು ನಿನ್ನೆ ಹಾಕಿದ ಅಂಗಿ ಗಿಸೆಲಿ ಇದ್ದು ಹೇಳಿ ನೆಂಪಾತು
    ನಿನ್ನೆ ಹಾಕಿದ ಅಂಗಿ ನೆಂಪು ಅಪ್ಪಗ ಅದರ ತೊಳವಲೆ ಹಾಕೆಕ್ಕು ಹೇಳಿ ನೆಂಪಾತು
    ತೊಳವೆಲೆ ಹಾಕೆಕ್ಕು ನೆಂಪಪ್ಪಗ ಸರ್ಫ್ ಹೊಡಿ ಇಲ್ಲೆ ಹೇಳಿ ನೆಂಪಾತು
    ಸರ್ಫ್ ಹೊಡಿ ನೆಂಪಪ್ಪಗ ಅಂಗಡಿಗೆ ಹೋಯೆಕ್ಕು ಹೇಳಿ ನೆಂಪಾತು
    ಅಂಗಡಿಗೆ ಹೋಯೆಕ್ಕು ಹೇಳಿ ನೆಂಪಪ್ಪಗ ಪೈಸೆ ತಂದಾಯಿದಿಲ್ಲೆ ಹೇಳಿ ನೆಂಪಾತು
    ಪೈಸೆ ಹೇಳಿ ಅಪ್ಪಗ ಬೇಂಕಿಂಗೆ ಹೋಯೆಕ್ಕು ಹೇಳಿ ನೆಂಪಾತು.
    ಬೇಂಕಿಂಗೆ ಹೋಯೆಕ್ಕು ನೆಂಪಪ್ಪಗ ಟೈಮ್ ಎಷ್ಟು ನೋಡ್ಲೆ ನೆಂಪಾತು
    ಟೈಂ ನೋಡಿ ನೆಂಪಪ್ಪಗ ಆಪೀಸಿಂಗೆ ಹೋಪಲೆ ತಡವು ಆತು ಹೇಳಿ ನೆಂಪಾತು
    ಫಲಿತಾಂಶ:
    ಡ್ರೆಸ್ಸಿಂಗೆ ಇಸ್ತ್ರಿ ಹಾಕಿ ಆಯಿದಿಲ್ಲೆ.
    ಕರೆಂಟ್ ಬಿಲ್ ಸಿಕ್ಕಿದ್ದಿಲ್ಲೆ
    ಕರೆಂಟ್ ಆಪೀಸಿನ ಪೋರ್ಮ್ ಸಿಕ್ಕಿದ್ದಿಲ್ಲೆ.
    ಪೆನ್ ಸಿಕ್ಕಿದ್ದಿಲ್ಲೆ.
    ಅಂಗಿ ತೊಳವಲೆ ಹಾಕಿ ಆಯಿದಿಲ್ಲೆ
    ಅಂಗಡಿಗೆ ಹೋಗಿ ಸರ್ಫ್ ತಪ್ಪಲೆ ಆಯಿದಿಲ್ಲೆ.
    ಬೇಂಕಿಂಗೆ ಹೋಗಿ ಪೈಸೆ ತಪ್ಪಲೆ ಆಯಿದಿಲ್ಲೆ.
    ಆಪೀಸಿಂಗೆ ಸಮಯಕ್ಕೆ ಸರಿಯಾಗಿ ಎತ್ತಲೆ ಆಯಿದಿಲ್ಲೆ

    1. ಆಫೀಸಿಂಗೆ ತಡವಾಗಿ ಹೋಪ ಬದಲು ಪರೀಕ್ಷೆಗೆ ಓದುವವರ ಹಾಂಗೆ ಗುಡಿ ಹೆಟ್ಟಿ ಒರಗುಲೆ ಹೇಳಿತ್ತಿದ್ದೆ,ನೆ೦ಪಾಯಿದಿಲ್ಲೆಯೋ ?

      1. ನೆಂಪು ಆಯಿದು ರಘು ಭಾವ,
        ಹೋಗದ್ದರೆ ಒಂದು ಓವರ್ ಟೈಂ ತಪ್ಪುತ್ತಲ್ಲದಾ ಹೇಳಿ ನೆಂಪಾತು

        1. ಟೈಂ ಹೇಳುವಗ ನೆಂಪಾತು, ಟೈಂಪೀಸು ಹಾಳಾಗಿ ಎಳ್ಡ್ರಾಮು ಸರಿ ಇಲ್ಲೆ, ಏಳುವಗ ಉದಿ ಆಗಿರ್ತು ಈಗೀಗ! 🙁

  13. ನೆನಪಿನ ಸಂಕೋಲೆಯ ಬಿಚ್ಚಿಗೊಂಡು ಹೋಗಿ ಒಂದು ಸಂಕೋಲೆ ಮಾಡಿದ್ದು ಲಾಯಿಕ ಆಯಿದು ಒಪ್ಪಣ್ಣ. ಮನುಷ್ಯನ ಈ ಚಿಂತನಾ ಶಕ್ತಿಯೇ ಅವನ ಬೇರೆ ಜೀವಿಂದ ಉತ್ಕೃಷ್ಟನಾಗಿ ಮಾಡಿದ್ದಲ್ಲದ.
    ಜ್ಞಾನ ಭಂಡಾರ ಇಷ್ಟು ಹೆಚ್ಚು ಅಪ್ಪಲೆ, ಮನುಷ್ಯನ ಕ್ರಿಯಾಶೀಲತೆಗೆ ನಿರಂತರ ಚಿಂತನೆಯೇ ಕಾರಣ ಅಲ್ಲದಾ?, ನೆನಪಿನ ಸುರುಳಿಲಿ ಸಿಹಿ ಕಹಿ ಎಲ್ಲಾ ಇಕ್ಕು. ಸಮ ಭಾವಲ್ಲಿ ನೋಡ್ಲೆ ಎಡಿಗಾದವಂಗೆ ಎಲ್ಲವೂ ಸವಿ ಸವಿ ನೆನಪು.
    @ ಶ್ರೀಶ:
    ಆನು ಹನ್ನೆರಡು ಚಪಾತಿ ತಿಂದದು ಒಪ್ಪತ್ತಿನ ದಿನ ಹೊತ್ತೋಪಗ ಅಲ್ಲದಾ?
    3 ಡಜನ್ ಮಾಡಿದ್ದರಲ್ಲಿ ಒಳುದ್ದರ ನೀನು ತಿಂದು ಮುಗುಶಿದ್ದು ಹೇಳ್ಲೆ ನೆಂಪಾಯಿದಿಲ್ಲೆಯಾ? ಮರುದಿನ ಚಪಾತಿ ತಿಂದಿಕ್ಕಿ ಊಟ ಉಂಡದು ನೆಂಪಾಯಿದಿಲ್ಲೆಯಾ?
    ಶರ್ಮಪ್ಪಚ್ಚಿ

    1. ಚಪಾತಿ ಪೂರಾ ಕಾಲಿ ಆಗಿ ಬಾಕಿದ್ದವಕ್ಕೆಲ್ಲ ಅವಲಕ್ಕಿಯೇ ಗೆತಿಯಾಯಿದಡ!
      ಹೀಂಗುದೇ ಗುಟ್ಟು ರಟ್ಟು ಮಾಡುದಾ ಶರ್ಮಪ್ಪಚ್ಚಿ?

      1. ರಟ್ಟು ಹೇಳುವಗ ನೆಂಪಾತು,
        ಮುಳಿಯಾಲದಪ್ಪಚ್ಚಿ ಮೊನ್ನೆ ಚೀಪೆ ತಂದು ಕೊಟ್ಟದು; ರಟ್ಟಿನ ಪೆಟ್ಟಿಗೆಲಿ.. 🙂

  14. ಈ ಚೊಕ್ಕ ಶುದ್ಧಿಗಳ ಓದಿಗೊಂಡು ಹೋವ್ತಾ ಇದ್ದ ಹಾಂಗೆ ಡಾಕುಟ್ರು ಎನ್ನ ಹಲ್ಲಿಂಗೆ ಸರಿಗೆ ಹಾಕಿದ್ದು ನೆಂಪಾತು. ನಿಜವಾಗಿಯೂ ಅಂದು ಎನಗೆ ತಲೆ ಸೆಳುದ್ದು..ಬೀಸ್ರೊಡು ಮಾಣಿಂದ ಸುರು ಮಾಡಿದ ಸಂಕೋಲೆ ವಾಪಾಸು ಅವನ ಹತ್ತರಂಗೆ ಕೊಂಡು ಹೋದ್ದು ಲಾಯ್ಕ ಆಯಿದು.ಎನಗೆ ಗೋಪಾಲ ಮಾವ ಹೇಳಿದ ಹಾಂಗೆ ಶಾಲಗೆ ಹೋಪಗ ಶಬ್ದ ಬಂಡಿ ಮಾಡಿಗೊಂಡು ಇದ್ದದು ನೆಂಪಾತು. ಇನ್ನುದೆ ಹೀಂಗಿಪ್ಪ ಶುದ್ದಿಗ ಬರಲಿ.ವಿಭಿನ್ನ ರೀತಿಲಿ ಶುದ್ಧಿ ಹೇಳಿದ್ದಕ್ಕೆ ಧನ್ಯವಾದಂಗೋ…

    1. ಸಂಕೊಲೆ ಹೇಳುವಗ ನೆಂಪಾತು;
      ತರವಾಡುಮನೆಲಿ ನಾಯಿ ಸಂಕೊಲೆ ಬಿಡುಸಿ ಓಡಿದ್ದು, ನಾಕುದಿನ ಆತು, ಬಯಿಂದೇ ಇಲ್ಲೆ!

  15. laikaidu oppanno.nege shuddiya koshili odule aavuttu.
    haasya nege ella iddare oduvaga nege battu.comentsgo ondarinda ondu
    laika irthu.maastru mavanatre betta atteye kandidilleda.
    oppannana bailinavakke henge kandatto 🙂
    oppannangu oppannana bailinavakku aradigaste.
    anthu nege sankole bhari pastaidu.

    1. { ಮಾಷ್ಟ್ರುಮಾವನತ್ರೆ ಬೆತ್ತ ಅತ್ತೆಯೇ ಕಂಡಿದಿಲ್ಲೆಡ }
      – ಮಾಷ್ಟ್ರಮನೆ ಅತ್ತಗೆ ಕನ್ನಡ್ಕ ಬದಲೆಕ್ಕಾರೆ ಶ್ರೀಅಕ್ಕನತ್ರೆ ಮಾತಾಡ್ತೆ ಆನು. 😉

      1. [ಕನ್ನಡ್ಕ ಬದಲೆಕ್ಕಾರೆ]

        ಅಪ್ಪಪ್ಪು, ನೀನು ಮಾತಾಡಿರೆ ಕನ್ನಡ್ಕ ಖಂಡಿತಾ ಬದಲುಗು, ಬರೆಕ್ಕಾದ ಕನ್ನಡ್ಕದ ಬದಲಿಂಗೆ ಬೇರೆ ಪವರಿಂದು ಬಕ್ಕೋ ಹೇಳಿ….

  16. ಈ ಲೇಖನಕ್ಕೆ ಎಲ್ಲರುದೆ ಎಂತರ ನೆಂಪಾದ್ದದು ಹೇಳಿಯೇ ಒಪ್ಪ ಬರೆಯಕ್ಕು ಹೇಳಿ ಇದ್ದೋ ಹೇಳಿ ಸಂಶಯ ಆವ್ತಾ ಇದ್ದೆನಗೆ.. ಸಂಶಯ ಹೇಳಿಯಪ್ಪದ್ದೆ ನೆಂಪಾತು, ನಗೆಗಾರಂಗೆ ಮೊನ್ನೆ ಮೇಷ್ಟ್ರುಮಾವ° ಬೆತ್ತ ತೋರ್ಸಿದ್ದವಡ.. ಸಂಶಯ ಪಿಶಾಚಿ ಹೇಳಿ ಹೇಳಿರೆ ಆರು ಹೇಳಿ ಕೇಳಿದ್ದಕ್ಕೆ.. 😉

      1. ಇಂಗ್ಲೀಷ್ ಹೇಳುವಾಗ ನೆಂಪಾತು, ಪೆರ್ಲದಣ್ಣ ಸೂಪರ್ ನೋಡಿ ಬಂದು ಕಂಗ್ಲೀಶಿಲೆ ಮಾತಾಡ್ಸು ಹೇಳಿದ ಬೀಸ್ರೋಡು ಮಾಣಿ.

  17. ಯಬೋ!!! ಒಪ್ಪಣ್ಣನ ಬಯಲಿಲಿ ಇಷ್ಟು ಜೆನ ಇದ್ದವಾ!! ಬಯಂಕರ,,

    ಎಲ್ಲರ ಒಪ್ಪ ನೋಡಿದಪ್ಪದ್ದೆ ನೆಂಪಾತು, ಆದರೆ ಬರವಲೆ ಹೆರಟಪ್ಪದ್ದೆ ಎಂತರ ನೆಂಪಾದ್ದು ಹೇಳಿ ಮರತ್ತು 🙂 ಎಂತ ಮಾಡ್ತ್ಸು??

  18. ಲಿಂಕುಗವಕ್ಕೆ ಲಿಂಕುಗಳ ಲಿಂಕು ಮಾಡಿ ಒಪ್ಪಣ್ಣ ಒಂದು ಹಾಸ್ಯ ಸಂಕಲೆಯನ್ನೇ ಮಾಡಿದ್ದ. ಒಪ್ಪದೊಟ್ಟಿಂಗೆ ಎನ್ನನ್ನೂ ಲಿಂಕು ಮಾಡಿ ಆನು ನೆಗೆ ಮಾಡದ್ದ ಜಾತಿ ಹೇಳಿ ನೆಗೆ ಮಾಡಿದ್ದ. ಲಾಯಕಾಯಿದು. ಹೇಳಿದ ಹಾಂಗೆ ಈ ಲೇಖನವ ನೋಡುವಗ ಎನಗೊಂದು ನೆಂಪಾತು. ಶಾಲೆಗೆ ಹೋಗೆಂಡಿಪ್ಪಗ ಎಂಗೊ ಎಲ್ಲ ಆಡೆಂಡು ಇದ್ದಿದ್ದ ಶಬ್ದ ಬಂಡಿ ಪದ್ಯ. ಕಪ್ಪು ಕಪ್ಪು ಯಾವುದು ಕಪ್ಪು, ಕಪ್ಪು ಕಪ್ಪು ಕಾಗೆ ಕಪ್ಪು, ಕಾಗೆ ಕಾಗೆ ಯಾವ ಕಾಗೆ, ಕಾಗೆ ಕಾಗೆ ಊರ ಕಾಗೆ, …. ಮಕ್ಕಳ ಶಬ್ದ ಬಂಡಿ ಹೀಂಗೇ ಓಡುತ್ತಾ ಇರುತ್ತು. ಶಾಲೆ ಬಿಟ್ಟು ಅಡ್ಕಲ್ಲಿ ನೆಡಕ್ಕೊಂಡು ಹೋಪಗ ಈ ಬಂಡಿ ಓಡುತ್ತು. ಮನೆಗೆ ಎತ್ತಿದ್ದದೆ ಗೊಂತಾವ್ತಿಲ್ಲೆ. ನೆಂಪು ಮಾಡಿದ್ದಕ್ಕೆ ನೊಂಪಾದ ಧನ್ಯವಾದಂಗೊ.

    1. ಈ ಒಪ್ಪಣ್ಣ ಭಾರೀ ನೊಂಪಣ್ಣನೋ?,ಎಲ್ಲೋರಿಂಗುದೆ ಕೆಂಪೆಣ್ಣೆ ಕಿಟ್ಟಿ ಕೊದಿವ ನೀರೆರದಾಂಗೆ ಕಾಣುತ್ತು

  19. @”ಕಳಾಯಿ ಹೇಳುವಗ ನೆಂಪಾತು”
    = ಎಂಗಳಲ್ಲಿ ಭೂತ ಕಟ್ಟುವ ಚನಿಯಂಗೆ ಮಳೆಗಾಲಲ್ಲಿ ಇಡೀ ಗುಳಿಗಂಗೆ “ಕಳಾಯಿ”(ಗಂಗಸರ) ಒಪ್ಪುಸುದೇ ಕೆಲಸ. ಮನೆ ಮನೆ ತಿರುಗಿ ಪೈಸೆ ವಸೂಲುಮಾಡಿ ಮಾರಾಪಿಂದ ಕುಪ್ಪಿ ತೆಗದು ಗಳಾಸಿಂಗೆ ಎರಶಿ ಗುಡ್ಡೆಗೆ ಹೋಗಿ ಬೆರಳಿಲಿ ಆಕಾಶಕ್ಕುದೆ ನೆಲಕ್ಕುದೆ ಗಂಗಸರ ಕುಡುಗಿ “ಎಡ್ಡೆ ಪಾತೇರೋ” ಹೇಳಿ ಬೇಕಾಷ್ಟು ನೇಟುತ್ತು.

    1. ಪೈಸೆ ಹೇಳೋಗ ನೆ೦ಪಾತು.ಪೈಸೆ ಕಟ್ಟು ಹೊತ್ತ ಕಟ್ಟಾ ಮಂತ್ರಿಗೋ ಈಗ ಕೇಸಿನ ಕಟ್ಟ ಹಿಡುಕ್ಕೊಂಬ ಕಾಲ ಬಯಿಂದಡ.ಇವಕ್ಕೆ ಈ ಕಟ್ಟು ಹೊತ್ತು ಬಚ್ಚುತ್ತಿಲ್ಲೆಯೋ??

      1. ನಮ್ಮ ಬೈಲಿನವೇ ಆರಾರೂ ಒಕೀಲಕ್ಕಳ ಹಿಡುದರೆ ಪುಳ್ಯಕ್ಕಳ ಕಾಲಕ್ಕೊರೆಗೆ ಕೇಸಿನ ಎಳದುಕೊಡುತಿತವು.

      2. ಕೆಸು ಪಣ್ಣಾಗ ನೆಂಪಾಡ್, ಮುರಾಣಿ ಇಲ್ಲಾಳ್ ಪತ್ರೊಡೆ ಮಲ್ತಿತ್ತಾಳ್…

  20. ಮದಾಲು ಒಂದು ಸಕ್ಕರೆಯೊಪ್ಪ;
    @”ಪೋನು ಹೇಳುವಗ ನೆಂಪಾತು, ಪೆರ್ಲದಣ್ಣ ಮೊನ್ನೆ ಪೋನು ಮಾಡಿತ್ತಿದ್ದ”
    = ಹೇಳಿಯಪ್ಪಗ ನೆಂಪಾತು ಅವಂಗೆ ಒಂದು ಫೋನು ಮಾಡೆಕ್ಕು ಹೇಳಿ.ಈಗಳೇ ಮಾಡಿಗುತೆ.

  21. ಇದರ ಓದುವಾಗ ನೆ೦ಪಾತು ಆನು ಒಪ್ಪಣ್ಣನ ಒ೦ದು ಒಪ್ಪಕ್ಕೆ ಒಪ್ಪ ಕೊಟ್ಟಿದಿಲ್ಲೆ ಹೇಳಿ.ಃಇ೦ಗೆ ನೆ೦ಪಾಗಿ ನೆ೦ಪಾಗಿ ಒಪ್ಪಣ್ಣನ ಲೇಖನ೦ದ ಎನ್ನ ಒಪ್ಪ ದೊಡ್ಡ ಅಕ್ಕೋ ಹೇಳಿ.ಹಾ೦ಗಾಗಿ ಇನ್ನು ಜೋರು ನೆ೦ಪು ಮಾಡ್ಲೆ ಹೋವುತ್ತಿಲ್ಲೆ.ಒಪ್ಪ೦ಗಳೊಟ್ಟಿ೦ಗೆ.

    1. ಜೋರು ಹೇಳೋಗ ನೆ೦ಪಾತು,ಯೆಜಮಾನ್ತಿ ಹೊತ್ತೋಪ್ಪಗ ಆಫೀಸಿ೦ದ ಬೇಗ ಬನ್ನಿ ಹೇಳಿ ಜೋರು ಮಾಡಿದ್ದು, ಬೇಗ ಹೆರಡುತ್ತೆ .

      1. ಅಂಬಗ ಒಂದು ಕೊಂಗಾಟದ ಭಾಮಿನಿ ಹೇಳಿದರೆ ಆತನ್ನೆ!

        1. ಕೊಂಗಾಟ ಹೇಳಿ ಅಪ್ಪಗ ನೆ೦ಪಾತು,ಕೊಂಗೋಟಿಲಿ ಮನ್ನೆ ಮದುವೆಸಮ್ಮಾನ ಭಾರಿ ಗೌಜಿಯಡ.

  22. (ಅದು ತೆಗದು ಮಡಗುವಗ, ಪ್ರತಿ ವಿಶಯವನ್ನೂ ಮತ್ತೊಂದಕ್ಕೆ ಸುಲಾಬಲ್ಲೆ ಸಂಕೊಲೆ ಸಿಕ್ಕುವ ಹಾಂಗೆ ಮಡಗುತ್ತಡ)
    ಇದರ ಓದುವಗ ನೆಂಪಾತು…ಗೂಗುಲಿಲಿ ನಾವು ಹುಡ್ಕುಲೆ ಹೇಳಿ ಯಾವುದೇ ಒಂದು ಪದ(word) ಟೈಪು ಮಾಡಿರೆ ಕೂಡ್ಲೆ ಅದೇ ಒಂದು ಲಿಸ್ಟು ತೋರ್ಸುತ್ತು…

    1. ಓದುವಗ ಹೇಳೋಗ ನೆಂಪಾತು.ಪರೀಕ್ಷೆಗೆ ಓದುವಗ ಒರಕ್ಕು ತೂಗಿರೆ ಪಾಚ ಉಂಡು ಗುಡಿ ಹೆಟ್ಟಿ ಒರಗೆಕ್ಕಡ.

      1. ಪರೀಕ್ಷೆ ಹೇಳ್ವಾಗ ನೆಂಪಾತು, ಒಪ್ಪಕ್ಕ ಓದುವಾಗ ಒರಕ್ಕು ಬಂದರೆ ಗೊಂತಪ್ಪಲೆ ಕೈಲಿ ಸ್ಟೀಲು ಗ್ಲಾಸು ಹಿಡುದು ಓದುತ್ತಡಡ, ಒರಕ್ಕು ತೂಗಿಯಪ್ಪದ್ದೆ ಗ್ಲಾಸು ಬೀಳ್ತಡ, ಶಬ್ದಕ್ಕೆ ಒರಕ್ಕು ಬಿಡ್ತಡ, ಚೆನ್ನಬೆಟ್ಟಣ್ಣ ಕೊಟ್ಟ ಐಡಿಯಾ ಅಡ.. !!

        1. (ಒರಕ್ಕು ತೂಗಿಯಪ್ಪದ್ದೆ)
          ಒರಕ್ಕಿನ ಹೇಂಗೆ ತೂಗುದು? ತೊಟ್ಲು ತೂಗುದು, ಮಕ್ಕಳ ತೂಗುದು ಗೊಂತಿದ್ದು….

          1. { ತೂಗುದು }
            ಅದ, ತೂಗುದು ಹೇಳುವಗ ನೆಂಪಾತು.. ನೆಂಪಾತು… ನೆಂಪಾತು..
            ಎಂತದೋ ನೆಂಪಾಗಿತ್ತು, ಈಗ ಮರದತ್ತು! 🙁 😉

    1. ಧನ್ಯವಾದಂಗೊ ಶಾಂಬಾವ.
      ಲೇಖನ ಹೇಳುವಗ ನೆಂಪಾತು, ರಾಮಜ್ಜನ ಕೋಲೇಜಿನ ಲೇಖಟೀಚರು ಮೊನ್ನೆಂದ ರಜೆ ಹಾಕಿತ್ತಡ; ಒಪ್ಪಕ್ಕಂಗೆ ಒಂದು ಲೇಬು ಕಮ್ಮಿ ಅಡ ಈಗ! 🙁

  23. ಎಲಾ ಒಪ್ಪಣ್ಣಂಗೆ ಆನು ಕೆಮರವ ಕಪಾಟಿನ ಒಳ ಮಡುಗಿದ್ದು ಹೇಂಗೆ ಗೊಂತಾತು ಹೇಳಿ..!!!!ಸರೀ ಬೆಶಿಲು ಬಾರದ್ದೆ ತೆಗವಲೆ ಮಿನಿಯ….ಬರದ್ದು ಬಾರೀ ಲಾಯಿಕ ಆಇದು…ಒಂದು ಒಪ್ಪ…

    1. ಈ ವರ್ಷದ ಮಳೆಯ ಅವಸ್ಠೆ ನೋಡಿದರೆ ಇನ್ನುದೆ ಒಂದು ವರ್ಷ ಕೆಮರವ ಒಳವೇ ಮಡುಗೆಕ್ಕಕ್ಕೋ ಹೇಳಿ ಕಾಣ್ತು

      1. ಮಳೆ ಹೇಳೊಗ ನೆ೦ಪಾತು,ಕೊಡೆ ಅಡ್ಯನಡ್ಕ ಶೆಣೈ ಅಂಗಡಿಲೇ ಬಾಕಿ.

        1. ಕೊಡೆ ಹೇಳೊಗ ನೆ೦ಪಾತು, ಕಳುದ ಸರ್ತಿ ನಿಂಗಲಲ್ಲಿಂದ ಬಪ್ಪಗ ತಂದ ಕೊಡೆ ಗಾಳಿ ಬಪ್ಪಗ ಟಿವಿ ಕೊಡೆಯ ಹಂಗೆ ಆಗಿ ಹಾರಿ ಹೊದ್ದು ಸಿಕ್ಕಿದ್ದೇ ಇಲ್ಲೆ. .:D

    2. ಮಾವ° ಕೆಮರವ ಬೆಶಿಲಿಂಗೆ ಮಡಗಿದ್ದವೋ ಏನೋ?. ದಾಸ್ತಾನು ಮಾಡಲೆ ಒಳ್ಳೆದು.

  24. ಲೇಖನ ಲಾಯ್ಕ ಆಯಿದು. ಮತ್ತೆ ಈ ಒಪ್ಪಣ್ಣ ಎಲ್ಲಾ ಲೇಖನಂಗಳ 12amಗೇ ಬರವದು ಎಂತಗೆ? ಅಂದೇ ಕೇಳೆಕ್ಕು ಹೇಳಿ ಗ್ರೇಶಿದ್ದೆ. ಈ ಲೇಖನ ಓದಿಯಪ್ಪಗ ನೆಂಪಾತು!!! 😉

    1. ಎಂತದೋಪ್ಪ ನೆಂಪಾದ್ದು 😉

    2. {ಎಲ್ಲಾ ಲೇಖನಂಗಳ 12amಗೇ ಬರವದು ಎಂತಗೆ? }
      ಚೆಲಾ.. ಈ ಪ್ರದೀಪಣ್ಣ ಬಿಡ್ತವಿಲ್ಲೆ ಅಲ್ಲದೋ ಒಪ್ಪಣ್ಣನ!
      ಇದಾ – ನಮ್ಮ ದಿನನಿತ್ಯದ ಕೆಲಸಂಗೊ – ಕಿದೆ, ತೋಟ, ಬೆಶಿನೀರಿಂಗೆ ಕಿಚ್ಚು ಹಾಕುತ್ತದು, ಪೂಜೆ, ಜೆಪ, ಅನುಷ್ಠಾನ, ಬೊಬ್ಬೆ, ಚೆಂಙಾಯಿ, ಗೌಜಿ – ಎಲ್ಲ ಅಪ್ಪಗ ಹಗಲಿಡೀ ಮುಗಿತ್ತು!
      ರಜ ಪುರುಸೊತ್ತು ಹೇಳಿ ಅಪ್ಪಗ ಇಷ್ಟು ಹೊತ್ತು ಆವುತ್ತಿದಾ. ಹಾಂಗೆ ತಡವಾಗಿ ಹನ್ನೆರಡು ಗಂಟೆ ಅಪ್ಪದು!

      ಅದಾ, ಹನ್ನೆರಡು ಹೇಳುವಗ ನೆಂಪಾತು – ಇಬ್ರಾಯಿಯ ಮಗನ ಕಾರು ಪೆರಡಾಲ ಸಂಕದ ಹತ್ತರೆ ಅಡಿಮೊಗಚ್ಚಿದ ಹಾಂಗಾಗಿ ಅದರ ಹಲ್ಲೆರಡು ಹೋಯಿದಡ! 😉

      1. ಹಲ್ಲೆರಡು ಹೇಳೊಗ ನೆ೦ಪಾತು.ಬೋಸ° ಹಲ್ಲೆರಡು ಹೋಗಿದ್ದರೂ ಒಳುದೋರ ತಲೆ ತಿ೦ಬದು ಬಿಟ್ಟಿದಾ° ಇಲ್ಲೆಡ. ಹೀಂಗೇ ಆದರೆ ಒಳುದ ಹಲ್ಲು ಎಷ್ಟು ದಿನ ಒಳಿಗೋ?

        1. ಹಲ್ಲಿಲ್ಲದ್ದ ಅಜ್ಜಂದ್ರು ಚಕ್ಕುಲಿ ಬಾಯಿಲಿಯೇ ಬೊದುಲುಸಿ ತಿಂತಾಂಗೆ ಬೋಸ ಭಾವ°ತಲೆ ತಿಂಬದಾಯಿಕ್ಕಲ್ಲದೊ?

        2. ತಿಂಬದು ಹೇಳಿಯಪ್ಪದ ನೆಂಪಾತು, ಅಜ್ಜಕಾನ ಭಾವ ಕಡ್ಲೆಕಾಲಿ ತಿಂಬಲೆ ಹೇಳಿ ಬೆಂಗ್ಳೂರಿಂಗೆ ಬಂದಿತ್ತಿದ್ದವು. ಈಗ ಪಿತ್ತ ನೆತ್ತಿಗೇರಿದ್ದಡ!

          1. ಪಿತ್ತ ನೆತ್ತಿಗೇರಿದ್ದಡ ಹೇಳೋಗ ನೆ೦ಪಾತು,ಪುನರ್ಪುಳಿ ಕೊಯ್ವಲೇ ಮರದ್ದು,ಕೊಕ್ಕೆ ಎಲ್ಲಿದ್ದಪ್ಪಾ..

          2. ಕೊಕ್ಕೆ ಹೇಳುವಗ ನೆಂಪಾತು, ಕಿಣಿಯ ಅಂಗಡಿಲ್ಲಿ ಶಾರದಾ ಕ್ಯಾಲೆಂಡರ್ ಬೈಂದಡ.

          3. ಶಾರದ ಹೇಳುವಗ ನೆಂಪಾತು,
            ತರವಾಡುಮನೆ ದನ ಶಾರದೆ ಮೊನ್ನೆ ಹಾಲು ಬತ್ತುಸಿತ್ತಡ; ರಂಗಮಾವ ಸೂರಂಬೈಲಿಂದ ಹಾಲು ತಪ್ಪದು ಈಗ!

          4. ಸೂರಂಬೈಲು ಹೇಳುವಗ ನೆಂಪಾತು,ನಾಳೆಂದ ಸೂರಂಬೈಲಿಲ್ಲಿ ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವ ಅಡ. ಒಪ್ಪನ ನೋಡ್ಳೆ ಹೋಯೆಕ್ಕು ನವಗೆ…!

          5. ಒಪ್ಪನ ಹೇಳಿ ಅಪ್ಪಗ ನಮ್ಮ ಒಪ್ಪಣ್ಣನ ನೆಂಪು ಆಗದ್ದೆ ಇಕ್ಕೊ ?

  25. olledaayidu.namma nenapina sankaleya heenge ativegalli odisidare namage tumbaa vishayango nenapaavuttu.baravaloo hosa vicharango sphurisuthu .maadekku heli grahisida baaki olida kelasa iddare ella nempaavuttu.idu enna anubhava.ee reeti tale odisuvadara nijavaagiyoo alavadisikondare namage tumbaa guna iddu.summane ondu hattu nimisha koodondu manassinge bappadara ella nenesikondu nodi bekaadare!
    Oppannange dhanyavaada ee vishaya baravale sandarbha odagisiddakke.

  26. ಇದು ಒಪ್ಪಣ್ಣ ಬರದ್ದೋ ಮಾಷ್ಟ್ರು ಮಾವ° ಬರದ್ದೋ ಹೇಳಿ ಎನಗೆ ಸಂಶಯ,ಎಂತಾದರೂ ಓದಲೆ ನೆಗೆ ಮಾಡಲೆ ಅಡ್ಡಿ ಇಲ್ಲೆನ್ನೆ?ಲಾಯಕಾಯಿದು.ಬೀಸ್ರೋಡು ಹೇಳ್ವಾಗ ನೆಂಪಾತು ಇಂದು ಎಂಗಳದ್ದೊಂದು ಮೀಟಿಂಗ್ ಇದ್ದು ಹೇಳಿ.

    1. ಮಾಷ್ಟ್ರುಮಾವ° ಬರದ್ದದು ಆಗಿರ ಕೇಜಿಮಾವ°..
      ಅವರ ಅಕ್ಷರ ಇಷ್ಟು ಲಾಯಿಕಿಲ್ಲೆ!
      ಮತ್ತೆ ಗೊಂತಿಲ್ಲೆ.. 😉

      1. ಆವರ ಅಕ್ಢರ ಆನು ನೋಡಿದ್ದಿಲ್ಲೆನ್ನೆ.ಬೆತ್ತ ಮಾಂತ್ರ ನೋಡಿದ್ದು.ಅವು ಬೋರ್ಡಿಲ್ಲಿ ಬರವ ಕ್ರಮ ಇದ್ದರೂ ಚೋಕಿಲ್ಲಿ ಲಾಯಕಾವುತ್ತಿಲ್ಲೆದಾ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×