Oppanna.com

ಚುಕ್ಕು(ಶುಂಠಿ)ಕಾಫಿ

ಬರದೋರು :   ಗಣೇಶ ಮಾವ°    on   04/12/2010    26 ಒಪ್ಪಂಗೊ

ಗಣೇಶ ಮಾವ°

ಓ ಮೊನ್ನೆ ಬದಿಯಡ್ಕಲ್ಲಿ  ಡಾಮಹೇಶಣ್ಣನ ಸಮ್ಮಾನ ಕಳುಸಿ ಬಪ್ಪಗ – ದೊಡ್ದಭಾವನೂ ಯೇನಂಕೂಡ್ಳು ಅಣ್ಣನೂ ಬದಿಯಡ್ಕ ಪೇಟೇಲಿ ಇಪ್ಪ ಆನಂದ ಸಾಗರ ಹೇಳುವ ಹೋಟೇಲಿಂಗೆ ಕರಕ್ಕೊಂಡು ಹೋದವು.
ಬೈಲಿನವಕ್ಕೆ ನಿಜವಾಗಿ ಅಂದು ಆನಂದ ಸಾಗರ ಎಲ್ಲಾ ರೀತಿಲೂ ಆಯಿದು ಹೇಳುದಕ್ಕೆ ಇಷ್ಟರ ವರೆಗಾಣ ಶುದ್ಧಿಗಳ ನೋಡಿದ್ದೀರನ್ನೇ.

ಮಹೇಶಣ್ಣ ಅಂದು ಎಂಗೊಗೆ ಆನಂದ ಸಾಗರಲ್ಲಿ ಚುಕ್ಕು ಕಾಪಿ ಕುಡಿಶಿದವು..ಇದರ  ರುಚಿ  ಸೀವುದೇ ರೆಜ್ಜ ಖಾರವುದೇ ಒಟ್ಟು ಮಿಶ್ರಣವಾಗಿಯೇ ಇದ್ದು.
ನಮ್ಮ ಜೀವನ ಆನಂದ ಸಾಗರಲ್ಲಿ ಮುಳುಗಿ ಹೋಯಿಗೊಂಡಿಪ್ಪಗ ಕಷ್ಟ-ಸುಖ ಹೇಳುವ ಸೀವು ಖಾರ ಮಿಶ್ರಣಲ್ಲಿಯೇ ಇರೆಕು ಹೇಳುವ ಮರ್ಮವೋ ಎಂತೋ?

ಛೆ!! ವಿಷಯ ಎಲ್ಲೆಲ್ಲಿಗೋ ಹೋವ್ತು.
ಹ,ಅಷ್ಟೆಲ್ಲಾ ಆಲೋಚನೆ ಮಾಡಿಯೊಂಡಿಪ್ಪಗ  ಶ್ರೀ ಅಕ್ಕ ಹೇಳಿದವು.. ಈ ವಿಶೇಷವಾದ ಚುಕ್ಕು(ಶುಂಠಿ)ಕಾಪಿಯ ಬಗ್ಗೆ ಬೈಲಿಲಿ ತಿಳಿಶಿಕ್ಕು ಹೇಳಿ.
ನವಗೆ ಕಾಪಿ ಕುಡುದು ಮಾಂತ್ರ ಗೊಂತಿದಾ!!! ಅಂಬಗ ಅಲ್ಲಿಯಾಣವರ ಹತ್ತರೆ ಯೇನಂಕೂಡ್ಳು ಅಣ್ಣ ಈ ಕಾಪಿಯ ಹೇಂಗೆ (ಪಾಕ) ಮಾಡುದು ಹೇಳಿ ಕೇಳಿದವು.

ಅಷ್ಟೊತ್ತಿಂಗೆ ಅವು ಹೇಳಿದವು:
ಬದಿಯಡ್ಕ ಬಸ್ಸು ಸ್ಟಾಂಡಿನ ಎದುರೇ ಒಂದು ಅಂಗಡಿ ಇದ್ದು. ಅಲ್ಲಿ ಸಿಕ್ಕುತ್ತು. ಅದರ ಪೇಕೆಟಿಲಿ ಎಲ್ಲಾ ವಿವರಂಗ ಇದ್ದು ಹೇಳಿ.

ಹಾಂಗೆ ಶ್ರೀ ಅಕ್ಕ ಎರಡೆರಡು ಕಟ್ಟ ತೆಕ್ಕೊಂಡು ಬಂದವು.
ಡಾಕುಟ್ರಕ್ಕಂಗೆ ಕೊಡ್ಲೋ ಏನೋ?ಹೇಳಿ ಗ್ರೇಶಿದೆ.ಅಲ್ಲ!!
ಎಂಗೊಗೆ ಎಲ್ಲಾ ಒಂದೊಂದು  ಪೇಕೇಟು ಕೊಟ್ಟವು.ಅದರ ಪಟಂಗಳ ಇಲ್ಲಿ ಹಾಕುತ್ತೆ..

ಹೇಂಗೆ ಮಾಡುದು ಹೇಳಿ ಇನ್ನೂ ಹೆಚ್ಚು ವಿವರ ಬೇಕಾರೆ ಶ್ರೀ ಅಕ್ಕನ ಸಂಪರ್ಕ ಮಾಡಿ..

26 thoughts on “ಚುಕ್ಕು(ಶುಂಠಿ)ಕಾಫಿ

  1. ಏ ಒಪ್ಪಕು೦ಞಿ ಕೂಗೇಡ ಆತೊ ಅದಕ್ಕೆ ಮತ್ತೆ ಸಮಯ ಇದ್ದು೦.ನಿನು ಅಜ್ಜಕಾನ ಅಜ್ಜನತ್ರೆ ಹೋಗಾತೊ ಅವ್ವು ನಿನಗೆ ಕಾಸಿ ಕೊಡ್ತವಾಡ ಅದರ ತಿ೦ದಪ್ಪಗ ಹೋರ್ಲಿಕ್ಸಿನ ರುಚಿಯು ಚೋಕ್ಲೇಟಿನ ರುಚಿಯೂ ಒಟ್ಟು ಗೊ೦ತಕ್ಕು ಆತೊ.ಒಪ್ಪ್ಪ೦ಗಳೊಟ್ಟಿ೦ಗೆ.ಒಪ್ಪಕು೦ಞಿಗೆ ಒ೦ದು ಒಪ್ಪ ಹೆಚ್ಹು ಆತೊ.

  2. ಏ ಗಣೇಶಮಾಮ, ಚಕ್ಕುಕಾಪಿಯ ಪಟ ನೋಡಿರೆ ಆನು ಕುಡಿತ್ತ ಹಾರ್ಲಿಕ್ಸಿನ ಹಾಂಗೆ ಇದ್ದನ್ನೆ!! 😉 ರುಚಿಯುದೆ ಹಾಂಗೆ ಇರ್ತಾ? ಇನ್ನೊಂದರಿ ಹೋಪಾಗ ಎನ್ನನ್ನು ಕರಕೊಂಡ್ ಹೋಯೆಕ್ಕು, ಎನಗೆ ಚಾಕ್ಲೇಟಿನೊಟ್ಟಿಂಗೆ ಚಕ್ಕು ಕಾಪಿ ಕುಡಿಯೆಕ್ಕು, ಅಮ್ಮಂಗೆ ಹೇಳಿರೆ ಮಾಡಿಕೊಡ್ತಿಲ್ಲೆ ಅದು, ಮಕ್ಕೊ ಕುಡ್ಯಲಾಗ ಹೇಳ್ತು.. 😡

  3. ಅಂಗಡಿ ಹೆಸರು ಹೇಳಿದರೆ ಒಳ್ಳೇದಿತ್ತು

    1. ಹೆಚ್ಚಿನ೦ಶ ಎಲ್ಲಾ ದಿನಸಿ ಅ೦ಗಡಿಗಳಲ್ಲೂ ಸಿಕ್ಕುಗು ಇದು. Eastern ಚುಕ್ಕುಕಾಪಿ ಕೇಳಿದರೆ ಸಾಕು. ‘ಮರುತ್ವ’ ಹೇಳ್ತ ಕ೦ಪೆನಿದು ಕೂಡ ಚುಕ್ಕುಕಾಪಿ ಸಿಕ್ಕುತ್ತು, ಅದು ಹೊಡಿ. ಕೊದಿತ್ತ ನೀರಿ೦ಗೆ ೧ ಚಮ್ಚ ಹಾಕಿ ಬತ್ತುಸಿರೆ ಸಾಕಾವ್ತು. ಇಲ್ಲಿ ಹೆಚ್ಚಿನ ಭಾರತೀಯ ಸುಪರ್ ಮಾರ್ಕೆಟಿಲ್ಲಿಯುದೆ ಇದು ಸಿಕ್ಕುತ್ತು. ಬದಿಯಡ್ಕ, ನೀರ್ಚಾಲುಗಳಲ್ಲಿ, ಹೆಚ್ಚಿನ೦ಶ ಎಲ್ಲಾ ದಿನಸಿ ಅ೦ಗಡಿಗಳಲ್ಲೂ ಸಿಕ್ಕುಗಾಯಿಕ್ಕು..

  4. ಕಾಪಿ ಮೊದ್ಲೇ, ಉಷ್ಣ.. 😛
    ಅದಕ್ಕೆ ಶು೦ಠಿ ಹಾಕಿರೆ… ಅದೋ ಗತ್ತಿ ಅಕ್ಕನ್ನೆಪ್ಪಾ…!! 🙁

    1. ಬೋಸ ಭಾವ,ಹೊಳೇಲಿ ಮಿಂದು ನಿನಗೆ ಶೀತ ಆಯಿದನ್ನೇ.ಚುಕ್ಕು ಕಾಪಿ ನಿನಗೆ ಸರಿಯಾದ ಮದ್ದು .

      1. ಅಪ್ಪು ರಘು ಭಾವಾ.. ಶೀತಾ ಶೀತ…!! ಎ೦ತ ಮಾಡುಸ್ಸು??
        ಕಶಾಯ ಮಾಡಿ ಕುಡಿಯೆಕೊ ಹೇಳಿ….!!
        ಚುಕ್ಕಿ ಕಾಪಿ ಉಷ್ಣ ಅಕ್ಕು.. 🙁

  5. ಈ ಚುಕ್ಕು ಕಾಪಿ ಸುಮಾರು ವರ್ಷ ಮದಲಿ೦ದಲೇ ಇತ್ತು ಅ೦ತು ಬಯಲಿನೋರಿ೦ಗೆ ಈಗ ಗೊ೦ತಾತಾನೆ.ಹಿ೦ಗೆ ಹೊಸತ್ತು ಗೊ೦ತಾಗಿಯಪ್ಪಗ ಒಬ್ಬೊಬ್ಬ೦ಹೇಳಿರೆ ಬಯಲಿನೋರಿ೦ಗೆ ಎಲ್ಲ ಗೊ೦ತಾವುತ್ತದ.ಒಪ್ಪ೦ಗಳೊಟ್ಟಿ೦ಗೆ.

  6. ಕಡೇಗಾಣ ಫೊಟೋ ನೋಡುವಗ ಹಾಲು ಸೇರಿಸಿದ ಕಾಪಿಯ ಹಾ೦ಗೆ ಕಾಣ್ತು..? ಚುಕ್ಕು ಕಾಪಿಗೆ ಹಾಲು ಸೇರುಸುತ್ತ ಕ್ರಮ ಇದ್ದಾ? ಎನಗೆ ಗೊ೦ತಿಪ್ಪ ಹಾ೦ಗೆ ಇಲ್ಲೆ..

      1. [ಕಿಶೋರಣ್ಣ ಕುಡಿತ್ತಾ ಇಪ್ಪ ಪಟ]

        ಅಪ್ಪಪ್ಪು, ಕುಡಿದವನೇ ಬಲ್ಲ, ಕುಡಿದದ್ದರ ಸವಿಯ 😉

  7. ಗಣೇಶ ಭಾವ,
    ಕಾಪಿ ಪ್ರಿಯರಿ೦ಗೆ ಕೊಶಿ ಆತದಾ.ಬೇಗ ಬದಿಯಡ್ಕಕ್ಕೆ ಹೋಗಿ ಚುಕ್ಕು ಕಾಪಿ ತೆಕ್ಕೊಂಡು ಶ್ರೀ ಅಕ್ಕಂಗೆ ಫೋನು ಮಾಡುತ್ತೆ ಆಗದೋ?ಪೆಕೆಟಿಲಿ ಒಂದು ತುಂಡಿನ ಒಂದು ಗ್ಲಾಸ್ ನೀರಿಂಗೆ ಹಾಕಿ ಎರಡು ನಿಮಿಷ ಕೊದುಶೆಕ್ಕು ಹೇಳಿ ಇದ್ದಪ್ಪ..

    1. ಹಾಂಗೇ ಚುಕ್ಕು ಕಾಪಿಯ ಬಗ್ಗೆ ಒಂದು ಭಾಮಿನಿಯೂ ಬಕ್ಕಾ ಹೇಳಿ ಕಾಣ್ತು….:)

      1. ಶ್ಯಾಮಣ್ಣ ಮೆಲ್ಲಂಗೆ ಕಡ್ಡಿ ಒರದವದ ಕಿಚ್ಚು ಹೊತ್ತಿತ್ತು..

        ಶಶಿಯ ಪ್ರಭೆ ಮೀರಿಸುವ ರೀತಿಯ
        ಕೊಶಿಯ ಮೊರೆಯ ನೋಡಿಯಪ್ಪಗ
        ವಶವದಾತೀಗೆನ್ನ ತನುವಾನಂದಸಾಗರದಿ
        ದಶಗುಣದ ಜೀವಾಮೃತ೦ಗಳ
        ಕಶಿಯ ಮಾಡಿದ ಕಾಪಿಹೊಡಿ ತಲೆ
        ಬೆಶಿಯ ನೀಗಿಸೆಬನ್ನಿ ಕುಡಿಯುವ° ಚುಕ್ಕು ಕಾಪಿಯನು.

        ಇನ್ನು ಭೋಗ ಷಟ್ಪದಿಲಿ ಕಾಪಿ ಕುಡುದರೆ ಹೇಂಗೆ?( ತಿರುಕನೋರ್ವನೂರ ಮುಂದೆ ನೆ೦ಪಕ್ಕೋ?)

        ಚಕ್ಕು ಬಾಳೆಹಣ್ಣ ಕಡದು
        ಮುಕ್ಕಿ ದೋಸೆಯನ್ನು ಬೋಸ°
        ನೆಕ್ಕುತಿದ್ದ° ರವೆಗೆ ಬೆರಳನದ್ದಿ ಕಿಸಿಯುತ
        ಪಕ್ಕ ಬೆಶಿಯ ಲೋಟೆ ತ೦ದ
        ಅಕ್ಕ° ಹೇಳಿತಿ೦ದು ಮೋರೆ
        ಸುಕ್ಕು ಮಾಯವಕ್ಕು ಕುಡಿಯೊ° ಚುಕ್ಕು ಕಾಪಿಯ

          1. ಆದು ಈ ಗಜಲು ಹೇಳ್ತವದ… ಆವಾಗೆಲ್ಲ ಖುಶಿ ಆದರೆ ಹಾಂಗೆ ಹೇಳುದದ..

          2. ಇಂದು ಷೇರಿಲಿ ಎಷ್ಟು ಲೋಸಾತು ಹೇಳಿ ನೋಡಿಕೊಂಡು ಇತ್ತಿದ್ದೆ…. ಹಾಂಗಾಗಿ ಅದೇ ಪದ ನೆಂಪಾತದ…

          3. ಹಾ, ಶೇರೋ??
            ಮೇಲೆ ಹೋದ್ದದು ಕೆಳ ಬರೆಕ್ಕಾದ್ದು ಪ್ರಕೃತಿಯ ನಿಯಮ ಅಲ್ಲದೋ? ಸಮುದ್ರದ ನೀರು ಆವಿ ಆಗಿ ಮುಗಿಲು,ಮಳೆ ಆಗಿ ಭೂಮಿಗೆ ಮತ್ತೆ ಸಮುದ್ರಕ್ಕೆ. ಹಾಂಗೆ ಶೇರುದೆ ,ಆದರೆ ಒಂದು ವೆತ್ಯಾಸ ಆ ಮುಗಿಲು ಗಾಳಿಗೆ ಎಲ್ಲಿಗೆ ರಟ್ಟುತ್ತೋ ಗೊಂತಾವುತ್ತಿಲ್ಲೆ, ಎಲ್ಲಿ ಪೈಸೆಯ ಮಳೆ ಸುರಿತ್ತೋ ದೇವರೇ ಬಲ್ಲ° !!

          4. ಶೇರಿನಿಂ ನಗೆನುಡಿಯು, ಶೇರಿನಿಂ ಹಗೆಹೊಲೆಯು
            ಶೇರಿನಿಂ ಸರ್ವಸಂಪದವು ಲೋಕಕ್ಕೆ
            ಶೇರೇಮಾಣಿಕವು —

          5. ಎಂತದೇ ಆಗಲಿ ಶ್ಯಾಮಣ್ಣ ಮುಳಿಯ ಭಾವನ ಹತ್ತರಂದ ಭಾಮಿನಿಯ ಹೆರಡ್ಸಿಯೇ ಬಿಟ್ಟವು.ಲಾಯಕ ಆಯಿದು..ಇಬ್ರಿಂಗೂ ಧನ್ಯವಾದ……

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×