Oppanna.com

ಸಮ್ಮಾನ – ಸಮಾಜೋತ್ಸವ – ಸಂಸ್ಕೃತಿ

ಬರದೋರು :   ಪೆಂಗಣ್ಣ°    on   13/12/2010    5 ಒಪ್ಪಂಗೊ

ಪೆಂಗಣ್ಣ°

ತುಂಡರಿಸುವ ಶುದ್ದಿ ಹೇಳಿ ಹೋದ ಪೆಂಗ ನಾಪತ್ತೆಯೋ ಹೇಳಿದ ಮುಳಿಯ ಬಾವ. ಈ ಸರ್ತಿ ಬಿಡುವಿಲ್ಲದ ಕಾರ್ಯಕ್ರಮಂಗೊ. ಹಾಂಗೆ ಮಧ್ಯಾಹ್ನ ಪೆರ್ಲದ ಬಾವ ಸಿಕ್ಕಿದ. ಅದೂ ಇದೂ ಮಾತಾಡಿತ್ತು. ಒಂದು ಹೊಸ ಸುದ್ದಿ ಹೇಳಿದ, ಇಂದು ವಿ.ಕ.ಲ್ಲಿ ಪೇಜಾವರ ಶ್ರೀಗಳ ಸಮ್ಮಾನ ಶುದ್ದಿ ಸಣ್ಣಕೆ ಬೈಂದಷ್ಟೆ ಅದೇ ಪ್ರಜಾವಾಣಿ ಮುಖಪುಟಲ್ಲಿ ದೊಡ್ಡಕೆ ಬೈಂದು ಹೇಳಿ. ಎಂತಾ ಬದಲಾವಣೆ. ಒಪ್ಪಣ್ಣ ಹಾಕಿದ ಚಿತ್ರ ನೋಡಿದ್ದೀರಲ್ಲದೋ. ಹಾಂಗಪ್ಪಲೆ ಹೆಚ್ಚು ದಿನ ಬೇಡ ಕಾಣ್ತು.

ಪೇಜಾವರ ಶ್ರೀಗೋಕ್ಕೆ ೮೦ ವರ್ಷ. ಅರಬ್ಬೀ ಸಮುದ್ರ ಕರೆಲಿ ದೊಡ್ಡ ಹಬ್ಬ, ಉಡುಪಿಲಿ ತುಂಬಾ ಜೆನ ಆಯಿದವು,  ಅಡ್ವಾನಿ ಅಜ್ಜನುದೆ ಬೈಂದವು. ಬಾರಿ ಯಶಸ್ವಿ ಕಾರ್ಯಕ್ರಮ ಹೇಳಿ ಬೀಸ್ರೋಡು ಮಾಣಿ ಸುದ್ದಿ ಕಳುಸಿದ. ಅವಾ ಅತ್ಲಾಗಿ ಕೇಂಪು ಹಾಕಿದ್ದ ಈಗ. ಅವು ನೂರ್ಕಾಲ ಬಾಳಲಿ. ಅಯೋಧ್ಯೆಲಿ ರಾಮಮಂದಿರ ಅಪ್ಪದರ ಕಣ್ಣಾರೆ ನೋಡಲಿ ಹೇಳ್ತದು ಪೆಂಗನ ಪ್ರಾರ್ಥನೆ.

ಅದೇ ಹೊತ್ತಿಗೆ ಇತ್ಲಾಗಿ ಬೆಂಗಳೂರಿಲಿ  ಹಿಂದೂ ಸಮಾಜೋತ್ಸವ ಜೋರಿತ್ತು. ಹಾಲುಮಜಲು ಬಾವ ಬೆಳಗ್ಗೆಯೆ ಬೈಕಿಂಗೆ ಬಾವುಟ ಕಟ್ಟಿ, ತಲೆಗೆ ಕೇಸರಿ ಪಟ್ಟಿ ಸುತ್ತಿ ಹೆಗಲಿಂಗೆ ಕೇಸರಿ ಶಾಲು ಹಾಕಿ, ಕುಂಕುಮ ಬೊಟ್ಟು ಇಟ್ಟು ತಯಾರಿ ಮಾಡಿ ಮೆರವಣಿಗೆಲಿ ಮುಂದೆಂದ ಇತ್ತಿದ್ದ, ಅಖೇರಿಯಾವಕ್ಕೆ ಕಾಣೆಕ್ಕಾರೆ ಅವನನ್ನೆ ಮುಂದೆ ಕಳುಸೆಕ್ಕಷ್ಟೆ ಹೇಳಿ ನೆಗೆ ಮಾಡಿದ ಪೆರ್ಲದ ಬಾವ. [ಅವಾ ೬.೨ ಪೀಟು ಇದಾ ಹಾಂಗೆ].ಮಲ್ಲೇಶ್ವರ ಮೈದಾನ ಪೂರ್ತಿ ತುಂಬಿತ್ತು, ಆಚೆವಕ್ಕೆ ಟ್ರಾಪಿಕ್ಕು ಜಾಮು ಆಯಿದಡಾ. ತೊಂದರೆ ಇಲ್ಲೆ ಎಂತಾ. ಒಂದು ದಿನ ಅಲ್ಲದೋ.

ಎನಗೆ ಅಲ್ಲಿಗೆ ಹೋಪಲಾಯಿದಿಲ್ಲೆ, ಕಾರಣ ಎನ್ನ ಹವ್ಯಕ ಮಹಾಸಭೆಗೆ ಬರೇಕು ಹೇಳಿ ಚದುರವಳ್ಳಿ ಬಾವ ದಿನಿಗೇಳಿತ್ತಿದ್ದಾ. ಅಲ್ಲಿ ಪ್ರತಿಬಿಂಬ ಕಾರ್ಯಕ್ರಮ, ಕಳುದ ವಾರವೇ ಹೋಯೆಕ್ಕಿತು, ಬತ್ತಿ [ಬತ್ತೆ, ಅವನ ಊರಿಲಿ ಹಾಂಗೆ ಹೇಳುದು, ನಮ್ಮ ಓರಿನ ಬತ್ತಿ ಅಲ್ಲ ಆತೋ] ಹೇಳಿದವಂಗೆ ಹೋಪಲಾಯಿದಿಲ್ಲೆ. ಈ ವಾರ ತಪ್ಪುಸುವ ಹಾಂಗಿಲ್ಲೆ, ಬತ್ತೆ ಹೇಳಿದ ಚುಬ್ಬಣ್ಣ ಮಾಂತ್ರ ಕಾರ್ಯಕ್ರಮ ಮುಗುದರು ತಲುಪಿದ್ದನಿಲ್ಲೆ. ಅಲ್ಲಿ ಚಣ್ಣ ಮಕ್ಕಳ ಛದ್ಮವೇಶ, ಬೇರೆ ಬೇರೆ ಸ್ಪರ್ಧೆ ಇತ್ತು. ಮತ್ತೆ ಪ್ರೈಜು ಕೊಡುತ್ತ ಕಾರ್ಯಕ್ರಮ. ಅದಾಗಿ ನಮ್ಮ ಕಡ್ನಮನೆ ಬಾವನ ಹೊಸ ಕಾರ್ಯಕ್ರಮ, ಅವನ ಗುರ್ತ ಇಲ್ಲದ್ದವಕ್ಕೆ- ಸಕಲಾಸ್ಟುಡಿಯೋ ಹೇಳುತ್ತ ಚಿತ್ರಕಲಾ ಸಂಸ್ಥೆ ಇದ್ದು ಅವಂದು. ಅವಾ  ಹೊಯಿಗೆಲಿ ಚಿತ್ರ ಬಿಡ್ಸೋ ಹೊಸ ಕಲೆ ಶುರು ಮಾಡಿದ್ದ. ಬಾರಿ ಲಾಯ್ಕ ಆಯಿದು. ಅದರ ನೇರ ವೀಡಿಯೊ ಮಾಡಿ ಸ್ಕ್ರೀನಿಲಿ ತೋರ್ಸುದು. ಭಾರತಲ್ಲಿ ಈ ಚಿತ್ರಕಲೆ ಮಾಡ್ಸು ಎರಡೇ ಜೆನ. ಪ್ರಪಂಚಲ್ಲಿ ನಾಕೋ ಐದು ಜೆನ ಇಪ್ಪದು. ಅವಂಗೆ ಒಳ್ಳೆ ಯಶಸ್ಸು ಸಿಕ್ಕಲಿ.

ಕೆಪ್ಪಣ್ಣ ಬಾವ ಭಟ್ರ ಶುದ್ದಿ ಹೇಳುಲೆ ಸಿಕ್ಕುತ್ತೆ ಹೇಳಿದ್ದಾ, ಇನ್ನೊಂದರಿ ಕಾಂಬ ಆಗದೋ..

~
ಪೆಂಗ ಪ್ರಮ್ ಬೈಲು.
bingi.penga@gmail.com

5 thoughts on “ಸಮ್ಮಾನ – ಸಮಾಜೋತ್ಸವ – ಸಂಸ್ಕೃತಿ

  1. ಶುದ್ಧಿ ಲಾಯಿಕ ಆಯಿದು.ಆನು ಅದೇ ಗ್ರೆಶಿಗೊಂಡು ಇತ್ತಿದ್ದೆ.ತುಂಡು ಶುದ್ಧಿ ಹೇಳಿದ ನಿನ್ನ ಈಗ ಕಂಡತ್ತು..ಕೊಶಿ ಆತು.

  2. ಪೆಂಗಣ್ಣ ಇದ್ದೆಯೋ….ಸುದ್ದಿ ಬರೆದೆಯೋ..
    ಆನೆಂತ ಶುದ್ದಿ ಹೇಳುದು ಪೆಂಗಣ್ಣ.. ನೀನುದೆ, ಅಜ್ಜಕಾನ ಬಾವನುದೆ ಸೇರಿ ಮೊನ್ನೆ ಬ್ರೇಕಿಂಗ್‌ ನ್ಯೂಸೇ ಮಾಡಿದ್ದಿರನ್ನೆ ಮೊನ್ನೆ…!

  3. ಹಿಂದುತ್ವವೂ ಹಿಂದುತ್ವವಾದಿಗಳೂ ಬೇರೆ ಬೇರೆ.
    ಸೋನಿಯಾ ಗಾಂಧಿ ಕಳೆದ ಕೆಲವು ವರ್ಶಂದ ವ್ಯವಸ್ತಿತವಾಗಿ ಎಲ್ಲರನ್ನು ಮೆಟ್ಟುತ್ತಾ ಇದ್ದು, ಅದರ ತಡವಲೆ- ಅದಲಕ್ಕೆ ಸಮರ್ಥವಾಗಿ ಉತ್ತರ ಕೊಡ್ಲೆ ಆರಾರು ಪ್ರಯತ್ನ ಮಾಡಿದ್ದವೋ?

  4. ಅದೇ ಇ೦ದು ಬಿ.ಜೇ.ಪಿ.ಗೆ ತಿವಿದ ಸೋನಿಯಾ ಹೇಳಿ ಮುಖ ಪುಟ ಹಾಕಿದ್ದವು.ಹೇ೦ಗಿದ್ದರೂ ಆನು ತಿ೦ಗಳ ಅಖೇರಿವರೆಗೆ ಸಹಿಸೇಕಷ್ಟೆ ತಿ೦ಗಳ ಪೈಸೆ ಮದಲೇ ಕೊಟ್ಟಿದೆ ಅದ.ಒಪ್ಪ೦ಗಳೊಟ್ಟಿ೦ಗೆ

  5. ಪೂರ್ತಿ ಬಿಟ್ಟಿದಿಲ್ಲೆ ತೋರ್ಸಲೆ ತಕ್ಕ ಪೇಜಾವರ ಮಠಾಧೀಶರ ಕಾರ್ಯಕ್ರಮ ವರದಿ ವಿ.ಕ ಲ್ಲಿ ಹಾಕಿದ್ದವು. ಸಂಸ್ಕೃತಾಧ್ಯಯನ ಅಗತ್ಯ ಇದೆಯೇ ಹೇಳ್ತ ಒಂದು ಲೇಖನವೂ ಹಾಕಿದ್ದವು.
    ನಿನ್ನೆ ಹಿಂದೂ ಸಮಾಜೋತ್ಸವದ ಬೈಕ್ ರಾಲಿ ಗೆ ಕುಂದಾಪುರ – ಗಂಗೊಳ್ಳಿಲಿ ಬ್ಯಾರಿಗೊ (ದುಷ್ಕರ್ಮಿಗೊ) ಕಲ್ಲು ಇಡ್ಕಿ ಗಲಾಟೆ ಮಾಡಿದ್ದವು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×