Oppanna.com

ವಿವಾಹ

ಬರದೋರು :   ಗಣೇಶ ಮಾವ°    on   17/12/2010    12 ಒಪ್ಪಂಗೊ

ಗಣೇಶ ಮಾವ°

ಮನುಷ್ಯಂಗೆ ವಿವಾಹ ಹೇಳುದು ಸಾಮಾಜಿಕ ವಿಚಾರ.ಮನುಷ್ಯ ಜನ್ಮಲ್ಲಿ ಹುಟ್ಟಿದ ಮೇಲೆ ಕೆಲವು ಸಂಪ್ರದಾಯಂಗಳ ನಾವು ಅಳವಡಿಸೆಕ್ಕಾವ್ತು.ಈ ಮಾನವ ಜನ್ಮಲ್ಲಿ ಸಂಸ್ಕಾರಯುತ ಜೀವನ ನಡೆಸೆಕ್ಕಾರೆ ನಮ್ಮ ಹೆರಿಯೋರು ತೋರ್ಸಿಕೊಟ್ಟ ಹದಿನಾರು ಸಂಸ್ಕಾರಂಗಳ ಮೂಲಕ ನಾವು ಜೀವನ ಮಾಡುದು ಅತೀ ಅಗತ್ಯ.. ಈ ಷೋಡಷ ಸಂಸ್ಕಾರಂಗಳಲ್ಲಿ ಅತ್ಯಂತ ಮಹತ್ವ ಇಪ್ಪದು ವಿವಾಹಕ್ಕೆ..ವಿವಾಹ ಸಂಸ್ಕಾರಂದ ಮನುಷ್ಯ ದೈವಋಣ,ಪಿತೃಋಣ,ಋಷಿಋಣ ಹೇಳುವ ಋಣತ್ರಯಂದ ವಿಮುಕ್ತ ಆವುತ್ತ..ವಿವಾಹ ಸಂಸ್ಕಾರ ಇಲ್ಲದ್ದೆ ಕುಟುಂಬ ಜೀವನ ನಡೆಶುವವಕ್ಕೆ ಸಮಾಜಲ್ಲಿ,ದೈವಕಾರ್ಯಲ್ಲಿ ಮಾನ್ಯತೆ ಸಿಕ್ಕುತ್ತಿಲ್ಲೆ.ಹಾಂಗಾಗಿ ವಿವಾಹ ಸಂಸ್ಕಾರ ಷೋಡಷ ಸಂಸ್ಕಾರಂಗಳಲ್ಲಿ ಅತ್ಯಂತ ಮಹತ್ವದ ಸ್ಥಾನವ ಪಡದ್ದು.

ಸಂಸ್ಕಾರ ಹೇಳುದು ಮನುಷ್ಯಂಗೆ ಅಬ್ಬೆಯ ಹೊಟ್ಟೆಲಿ ಸೇರುದಕ್ಕಾಗಿ ಮಾಡುವ ಗರ್ಭಾದಾನ ಕ್ರಿಯೆಂದ ಪ್ರಾರಂಭ ಆಗಿ ಮರಣೋತ್ತರದ ಸಂಸ್ಕಾರದವರೆಗೂ ಷೋಡಶ ಸಂಸ್ಕಾರಲ್ಲಿಯೇ ಜೀವನ ನಡೆತ್ತು..ಇಂತಹಾ ಸಂಸ್ಕಾರಂಗಳ ನಮ್ಮ ಜೀವನಕ್ಕೆ ತೋರ್ಸಿಕೊಟ್ಟ ನಮ್ಮ ಸನಾತನ ಪರಂಪರೆಗೆ ಗೌರವ ಕೊಡುವ ಸಂಸ್ಕಾರ ಹೇಳಿರೆ  ವಿವಾಹ..

ತನ್ನ ಹುಟ್ಟು ತನ್ನ ಕಿರಿಯವರಿಂದ,ತನ್ನ ಸಾವು ತನ್ನ ಹಿರಿಯವರಿಂದ .

ಮಧ್ಯದ ಜೀವನಲ್ಲಿ ನಡೆತ್ತು

ವಿವಾಹ.

ದೇವರು ಪ್ರಸಾದಿಸಿದ ಗಾಳಿ,ನೀರು,ಅಗ್ನಿ,ಹಗಲು,ಇರುಳು,ಸೂರ್ಯ,ಭೂಮಿ,ಔಷಧಿಗ,ಫಲ ವೃಕ್ಷಂಗ,ಆಹಾರ ಧಾನ್ಯ ಇತ್ಯಾದಿಗೊಕ್ಕೆ ಕೃತಜ್ಞತಾ ಭಾವನೆಂದ ಪ್ರಕೃತಿಯ ಸಂಪತ್ತಿನ ಕಾಪಾಡಿ ಹಬ್ಬ ಹರಿದಿನಂಗಳ ಆಚರಣೆ ಮಾಡಿ ಗೌರವ ಕೊಡುದು “ದೈವಋಣ”..

ನಮ್ಮ ಜನ್ಮ ಕಾರಣರಾಗಿ,ನಮ್ಮಲ್ಲಿ ರಕ್ತಮಾಂಸಾದಿಗಳ ತುಂಬಿ,ಮಲಮೂತ್ರಾದಿಗಳ ತೊಳದು, ಜೀವನವ  ದೊಡ್ಡ ವ್ಯಕ್ತಿ  ಮಾಡಿ,ಸಮಯೋಚಿತವಾಗಿ ಅನ್ನವಸ್ತ್ರಾದಿಗಳ ಕೊಟ್ಟು,ವಿದ್ಯಾಬುದ್ಧಿಗಳ ಕಲ್ಸಿ,ಸಮಾಜಲ್ಲಿ ಆದರ್ಶ ವ್ಯಕ್ತಿ ಅಪ್ಪ ಹಾಂಗೆ ಮಾಡಿ,ಗೃಹ ಕ್ಷೇತ್ರ ಧನಾದಿಗಳ ಕೊಟ್ಟ ಅಬ್ಬೆ ಅಪ್ಪಂದ್ರ ವಾರ್ಧಕ್ಯ ಸಮಯಲ್ಲಿ ತೊಂದರೆ ಆಗದ್ದ ಹಾಂಗೆ ಜೀವನ ನಡೆಶುದು “ಪಿತೃಋಣ”..

ಈ ಸೃಷ್ಟಿಲಿ ಸಿಕ್ಕುವ ಸದುಪಾಯಂಗಳ ಋಷಿಗ ಹಲವು ರೀತಿಯ ಶಾಸ್ತ್ರದ ಮೂಲಕ ಅರ್ಥ ಮಾಡಿಗೊಂಬ ರೀತಿಲಿ ನವಗೆ  ತೋರ್ಸಿಕೊಟ್ಟಿದವು.ಗಣಿತ,ಭೂಗೋಳ,ಖಗೋಳ,ಆಹಾರ,ವೇದ,ವೈದ್ಯ ಹೇಳಿ ಅನಂತ ಶಾಸ್ತ್ರಂಗಳ ಕೊಟ್ಟು ಸಮಾಜವ ಸುಸ್ಥಿತ ರೀತಿಲಿ ನಡೆಶುಲೆ ಮಾರ್ಗದರ್ಶನ ಕೊಟ್ಟಿದವು.ಅಂಥಾ ಮಹಾತ್ಮರ ಋಣವ ಅವು ರಚನೆ ಮಾಡಿದ ಅಪಾರ ಗ್ರಂಥ ವಿಜ್ಞಾನವ ವಿದ್ಯಾರ್ಜನೆಂದ ಎಲ್ಲೋರಿಂಗೂ ತಿಳಿಶುದೇ “ಋಷಿಋಣ” ..

ವಿವಾಹ ಹೇಳುವ ಸಂಸ್ಕಾರ ಮಾಡಿಗೊಂಬದರಿಂದ ಈ ಋಣತ್ರಯಂದ ವಿಮುಕ್ತಿ ಸಿಕ್ಕುತ್ತು ಹೇಳಿ ಸನಾತನ ಪರಂಪರೆ ಹಲವಾರು ಶಾಸ್ತ್ರಂಗಳಲ್ಲಿ ಸ್ಪಷ್ಟವಾಗಿ ಹೇಳುತ್ತು.ಎಂತಕೆ ಹೇಳಿರೆ ಯಾವುದೇ ಒಂದು ಕಾರ್ಯವ ನಿರ್ದಿಷ್ಟವಾಗಿ ನಿರಾತಂಕವಾಗಿ ನೆರವೇರಕ್ಕಾದರೆ ಮತ್ತೊಬ್ಬರ ಸಹಾಯ,ಸಹಕಾರಂಗ ಬೇಕೇಬೇಕು. ಅಂಥಾ ಸಹಾಯ ಮಾಡುವವು ಆತ್ಮೀಯರು ಆಗಿರೆಕ್ಕಷ್ಟೇ..ಎಂದಾದರು ಒಂದು ದಿನ ಸಹಾಯ ಮಾಡಿಕ್ಕಿ ಓಡಿ ಹೋಪವು ಆಗ.ಅಂಥಾ ಆತ್ಮೀಯರು,ಸಹಾಯ ಮಾಡುವವು ಎಲ್ಲಿ,ಹೇಂಗೆ ಸಿಕ್ಕುತ್ತವು?ವಿವಾಹ ಮಾಡಿಗೊಂಡಪ್ಪಗ ಮಾತ್ರ ಅಂಥಹಾ ನಂಬಿಕಸ್ಥ ಭಾವನೆಯ ವ್ಯಕ್ತಿ ಸಿಕ್ಕುತ್ತವು.ಈ ಸಂಬಂಧ ಜೀವನ ಪರ್ಯಂತ “ಗಂಡ-ಹೆಂಡತಿ” ಹೇಳುವ ಅವಿನಾಭಾವ ರೀತಿಲಿ ಮುಂದುವರಿತ್ತು. ಈ ರೀತಿ  ಸ್ತ್ರೀ-ಪುರುಷರಿಂಗೆ “ವಿವಾಹ”ಹೇಳುದು ಅಗತ್ಯವಿಧಿ ಆಯೆಕ್ಕು ಹೇಳಿ ಸನಾತನ ಪರಂಪರೆ ಕಡ್ಡಾಯ ಮಾಡಿತ್ತು.

ಇನ್ನು ಇದು ಹೇಂಗೆ ಆಚರಣೆಗೆ ಬಂತು ?ಯಾವ ರೀತಿ ಇದರ ಮುಂದುವರ್ಸಿಗೊಂಡು ಹೋಪಲಕ್ಕು ಹೇಳುದರ ಬಗ್ಗೆ ರಜ್ಜ ವಿವರಣೆ ಕೊಡ್ತೆ..ಮನುಷ್ಯರಿಂಗೆ ನಾಗರಿಕತೆ ತಿಳಿಯದ್ದ ದಿನಂಗಳಲ್ಲಿ ಸ್ತ್ರೀ-ಪುರುಷರ ನಡೂಕೆ ವಿವಾಹ ಹೇಳುವ ಪದವೇ ಇತ್ತಿಲ್ಲೆ.ವಾನರ ಪ್ರಾಣಿಗಳ ಹಾಂಗೆ ಇಚ್ಛಾ ರೀತಿಲಿ ಇತ್ತಿದ್ದವು.ಮಕ್ಕಳ ಹೆತ್ತು ಸಾಂಕುದು,ಬೆಳೆಸುದು ಮಾಂತ್ರ ಸ್ತ್ರೀಗೆ ದೊಡ್ಡ ಬಾಧ್ಯತೆಯಾಗಿಯೊಂಡು ಇತ್ತು.ಹೆಣ್ಣಿನ ಮಾತೃ ಸ್ವರೂಪ ತಿಳಿಯದ್ದೆ ಕೇವಲ ದೈಹಿಕ ಸುಖಕ್ಕಾಗಿ ಮಾತ್ರ ಹೆಣ್ಣು ಹೇಳುವಷ್ಟರಲ್ಲಿಗೆ ಇತ್ತು.ಇದಕ್ಕಾಗಿ ಪರಪುಷರು ಹೇಳುವವು ಯುದ್ಧ ಮಾಡಿ ಕಾದಾಡಿದ್ದು ಹೆಣ್ಣು ಬಲಾತ್ಕಾರಕ್ಕೆ ಒಳಗಾದ ಅನೇಕ ಕಥೇಲಿ ಹೆಚ್ಚಿನವಕ್ಕೆ ಓದಿಗೊಂತಿದ್ದು.ಹೀಂಗೆ ವಿಕೃತವಾಗಿ ಹೆಣ್ಣುಗ  ಅಸಹಾಯಕ ರೀತಿಲಿ ಬಲಿ ಆಯಿಗೊಂಡಿತ್ತವು.ಇದರ ಪರಿಹಾರ ಮಾಡ್ಲೆ ಬೇಕಾಗಿ ದೇವತಾಸ್ವರೂಪದ ನಮ್ಮ ಋಷಿಮುನಿಗ ಒಂದು ಗಂಡಿಂಗೆ ಒಂದು ಹೆಣ್ಣು ಹೇಳುವ ಕಡ್ಡಾಯವಾದ ಕಟ್ಟಳೆಯ ಶಾಸ್ತ್ರದ ಮೂಲಕ ಜಾರಿ ಮಾಡಿದವು.ಇದರಿಂದಾಗಿ ಅಸಹಾಯಕ ಜೀವನ ಅನುಭವಿಸುವ ಹೆಣ್ಣು ಒಂದು ಗಂಡಿನ ಆಶ್ರಯಲ್ಲಿ ಬೆಳವಲೆ ಅನುಕೂಲ ಆತು.ಸ್ತ್ರೀಯರಿಂಗೆ ಪರಪುರುಷರ ಕಾಮಲಾಲಸೆಂದ ಕಾಪಾಡ್ಲೆ ಬೇಕಾಗಿ ಈ ಸಮಯಲ್ಲಿಯೇ “ಪಾತಿವ್ರತ್ಯ”ಹೇಳುವ ಏಕಪುರುಷ ನಿಯಮವ ಋಷಿಮುನಿಗ ಬೋಧನೆ ಮಾಡಿದವು.ಈ ನಿಯಮದ ಪ್ರಭಾವಂದ ಸ್ತ್ರೀಯರ ಮನೆಲಿಯೇ ಮಡುಗಿ ಆಹಾರ ಸಂಪಾದನೆ ಮಾಡಿಯೊಂಡು ಪುರುಷರು ರಕ್ಷಿಸಿಗೊಂಡಿತ್ತವು..ಮುಂದೆ ಇದಕ್ಕೆ ಶಾಸ್ತ್ರೀಯತೆ ಕಲ್ಪಿಸುದಕ್ಕೆ ಬೇಕಾಗಿ “ವಿವಾಹ”ಹೇಳುವ ಮಂಗಲಮಯ ಸಂಸ್ಕಾರವ ಧಾರ್ಮಿಕ ವಿಧಿಲಿ ಜಾರಿ ಮಾಡಿದವು.

ಆದರೆ  ಋಷಿಮುನಿಗೊಕ್ಕೆಮತ್ತೊಂದು ಸಮಸ್ಯೆ ತಲೆಕೊರವಲೆ ಸುರು ಆತು.ಸ್ತ್ರೀಯರಿಂಗೆನೋ ರಕ್ಷಣೆ ಸಿಕ್ಕಿತ್ತು ಈ ಪುರುಷರ ಪರಸ್ತ್ರೀ ವ್ಯಾಮೋಹಂದ ಬಿಡ್ಸಿಯಪ್ಪಗ ಮಾಂತ್ರ ವಿವಾಹ ವಿಧಿಗೆ ಪವಿತ್ರತೆ ಸಿಕ್ಕುಗು ಹೇಳಿ ಗ್ರೇಶಿ ಪುರುಷರಿಂಗೆ ಕೂಡಾ “ಏಕಪತ್ನೀ”ಧರ್ಮವ ನಿರ್ದೇಶನ ಮಾಡಿದವು.

ಸ್ತ್ರೀ-ಪುರುಷರಿಂಗೆ ವಿವಾಹ ಹೇಳುದು ಮರ್ಯಾದೆ,ಗೌರವ,ಸಂಪ್ರದಾಯ,ಧಾರ್ಮಿಕ ವಿಧಿ.ಇದರ ಎಲ್ಲೋರು ಗೌರವಿಸೆಕ್ಕು.ಇತ್ತೀಚಿನ ದಿನಂಗಳಲ್ಲಿ ನವೀನ ನಾಗರಿಕತೆಯ ಹುಚ್ಚಿಲಿ ವಿವಾಹ ಇಲ್ಲದ್ದೆ (ಲೀವಿಂಗ್ ಟು ಗೆದರ್, ಡೇಟಿಂಗ್) ಸ್ವೇಚ್ಛ  ರೀತಿಲಿ ಗೆಂಡು-ಹೆಣ್ಣುಗ ಒಂದೇ ಕೋಣೆಯೊಳ ಹೆರಿಯೋರ ಕಣ್ಣು ತಪ್ಸಿ ಜೀವನ ಮಾಡುವ ಪರಿಸ್ಥಿತಿ ನಿರ್ಮಾಣ ಆದ್ದು ವಿಷಾದನೀಯ..ಇದು ತಪ್ಪು!ಅನಾಗರೀಕ!ಅಸಂಸ್ಕೃತಿ!ಅರಾಜಕ!ಅಧರ್ಮ!ನೀಚಪ್ರವೃತ್ತಿ..

ಇದು ಭಾರತೀಯ ಧರ್ಮಕ್ಕೆ ಅವಮಾನ!ಸ್ತ್ರೀ-ಪುರುಷರಿಂಗೆ ಯವ್ವೌನ ಬಂದ ಮದಲ್ಲಿ ಆಕರ್ಷಣೆಗೆ ಹೆಚ್ಚು ಮರುಳಾವುತ್ತವು.ಈ ಆಕರ್ಷಣೆಯನ್ನೇ “ಪ್ರೀತಿ”ಹೇಳಿ ಗ್ರೇಶುತ್ತವು.ಪ್ರೀತಿಯ ನಿಜವಾದ ಮರ್ಮವ ತಿಳಿಯದ್ದೇ ತನ್ನದು ಹೇಳಿ ಎಂತೆಲ್ಲಾ ಇದ್ದು ಅದೆಲ್ಲಾ ಕಳಕ್ಕೊಂಡಿರ್ತವು.ಇಂತಹಾ ಸಮಯಲ್ಲಿ ಅಬ್ಬೆ-ಅಪ್ಪ,ಅಣ್ಣ-ಅಕ್ಕ,ಆರುದೇ ಕಣ್ಣಿಂಗೆ ಕಾಣ್ತವಿಲ್ಲೆ.ಸರಕಾರದ ಕಾನೂನೇ ದಿವ್ಯಾಸ್ತ್ರ ಹೇಳಿ ಗ್ರೇಶಿಗೊಂಡು ಹೆರಿಯೋರ ವಿರೋಧಿಸಿ ಅವರ ಭಾವನೆಗೊಕ್ಕೆ ಬೆಲೆ ಕೊಡದ್ದೆ ಕಾನೂನಿನ ಚೌಕಟ್ಟಿನ ಒಳ ಮಾಂತ್ರ ಮದುವೆ ಹೇಳಿ ಆವುತ್ತವು.

ಎರಡು ವರ್ಷ ಪೂರ್ತಿ ಅಪ್ಪದರ ಒಳ ಎರಡೂ ಹೊಡೆಯ ಸಂಬಂಧ ಸಿಕ್ಕದ್ದಪ್ಪಗ ಆಕರ್ಷಣೆ ಕಡಮ್ಮೆ ಅಪ್ಪಲೆ ಸುರು ಆವುತ್ತು.ಕ್ರಮೇಣ ರಾಜಕುಮಾರನ ಹಾಂಗೆ ಕಂಡುಗೊಂಡಿದ್ದವ ರಂಗಪ್ಪನ ಹಾಂಗೆ ಕೂಸಿಂಗೆ ಕಾಣ್ತು.ರತಿದೇವಿಯ ಹಾಂಗೆ ಕಾಣ್ತೆ ಹೇಳಿ ಹೊಗಳಿಗೊಂಡಿದ್ದ ಮಾಣಿಗೆ ಅವನ ಹೆಂಡತಿ ರತ್ನಮ್ಮನ ಹಾಂಗೆ ಕಾಂಬಲೆ ಸುರು ಆವ್ತು.ಬದುಕಿನ ಸತ್ವವ ತಿಳಿಯದ್ದೇ ಕೆಲವು ಜೆನ ಸಾವಿಂಗೆ ಶರಣಾವುತ್ತವು.ಸಾವ ಪರಿಸ್ಥಿತಿ ಬಾರದ್ರೂ ಬಾಳು ಹಾಳಾವುತ್ತು.ಆತ್ಮೀಯರಿಲ್ಲದ್ದೆ ನಿತ್ಯ ದು:ಖವ ಅನುಭವಿಸೆಕ್ಕಾವುತ್ತು.ಹೀಂಗೆ ಎಂದೂ ಆರಿಂಗೂ ಅಪ್ಪಲೆ ಆಗ..ಅದಕ್ಕಾಗಿ ಮೊದಲು ನಮ್ಮ ದೇಶಲ್ಲಿ ವಿದೇಶೀ ಸಂಸ್ಕೃತಿಯ ದೂರ ಮಾಡಿ ಹೆರಿಯೋರ ಆಶೀರ್ವಾದ ಸದಾ ಇಪ್ಪ,ದೇವರ ಅನುಗ್ರಹ ಇಪ್ಪ ರೀತಿಲಿ ಜೀವನ ಮಾಡುವತ್ತ ಪ್ರಯತ್ನ ಮಾಡೆಕಾದ್ದು ಅನಿವಾರ್ಯ.

ಪಾಶ್ಚಾತ್ಯ ದೇಶಲ್ಲಿ ಜನಂಗ ಯಾವುದೇ ಕಟ್ಟುಪಾಡು ಇಲ್ಲದ್ದೆ ಸ್ವೇಚ್ಚಾರೀತಿಲಿ ಜೀವನ ಮಾಡ್ತವು.ಇಂತಹ  ಸಂಸ್ಕೃತಿಯ ಅನುಭವಿಸುದು ಇಂದು ಒಂದು ಪ್ರತಿಷ್ಥೆಯ ಸಂಕೇತ ಹೇಳುವ ಅಂಧಕಾರ ಜೀವನಲ್ಲಿ ಇಂದು ನಾವು ನಮ್ಮ ಹೆರಿಯೋರು ಹಾಕಿಕೊಟ್ಟ ಶಾಸ್ತ್ರವಿಧಿಗಳ ಗೌರವಿಸುವ,ಅನುಭವಿಸುವ ಪ್ರಯತ್ನದ ದಾರಿ ಹಿಡಿವ..

ಭಾರತೀಯ ಸಾಂಸಾರಿಕ ಧರ್ಮಲ್ಲಿ ಅಬ್ಬೆ-ಅಪ್ಪ ಮಕ್ಕೊಗೆ ದೇವತಾ ಸಮಾನರು.ಮಕ್ಕ ಅಬ್ಬೆ ಅಪ್ಪಂದ್ರಿಂಗೆ ದೊಡ್ಡ ಸಂಪತ್ತು.ಇಂತಹಾ ಸಂಪ್ರದಾಯ ಬೆಳದು ಅನುಸರಿಸಿಗೊಂಡು ಹೋಪ ದೇಶ ನಮ್ಮ “ಭಾರತ”..

ಪಾಶ್ಚಾತ್ಯರಿಂಗೆ ಸಂಪ್ರದಾಯಕ್ಕಿಂತಲೂ ಕಾನೂನು ದೊಡ್ಡದು.

ಭಾರತೀಯರಿಂಗೆ ಕಾನೂನಿಂದಲೂ ಸಂಪ್ರದಾಯ ದೊಡ್ಡದು.

ಇಂತಹ ಧಾರಾ ವಿವಾಹವೇ ಧಾರಾಳವಾಗಲಿ
ಈ ದೇಶದ ಮಣ್ಣು,ನೀರು ಪರಮ ಪವಿತ್ರ ಹೇಳಿ ಪೂಜನೀಯ ಸ್ಥಾನಲ್ಲಿ ಆಚರ್ಸಿಗೊಂಡು ಬಯಿಂದು.ಮತ್ತೆ ಜನ್ಮ ಇದ್ದರೆ ಈ ದೇಶಲ್ಲಿಯೇ  ಹುಟ್ಟೆಕ್ಕು ಹೇಳುವ ಬಯಕೆಯ ಸಂಸ್ಕಾರ ನಮ್ಮದು.ಭಾರತೀಯ ವಿವಾಹ ಧರ್ಮಕ್ಕೆ ಕಾನೂನಿನ ರಕ್ಷಣೆ ಇದ್ದು.ಹೆರಿಯೋರ ಮನ್ನಣೆ ಇದ್ದು.ಬಂಧುಗಳ ಸಹಮತವೂ ಇದ್ದು.ಇಂತಹ ಮಂಗಲಮಯ ವಿವಾಹ ಸಂಸ್ಕೃತಿಯ ನಾವು ಗೌರವಿಸಿ ಆಚರಣೆ ಮಾಡುದೇ ಭಾರತೀಯ ಋಷಿಪರಂಪರೆಗೊಕ್ಕೆ ಸಲ್ಲುಸುವ ವಂದನೆ..

12 thoughts on “ವಿವಾಹ

  1. ಸಣ್ಣಕೆ ಬೇಡ ಭಾವ,ದೊಡ್ಡಕೆ ಮಾಡುವ° ಚರ್ಚೆ,ಇದಾ ಎಲೆಸಂಚಿ ,ಹೊಗೆಸೊಪ್ಪು ರಜ ಖಾರ ಇಕ್ಕು..
    ಇದೂ,ನಿಂಗೊ ಹೇಳಿದ್ದು ನಮ್ಮ ಸಮಾಜಲ್ಲಿ ನೆಡೆತ್ತ ವಿಷಯವೇ ಅಲ್ಲದೋ? ಮಾಣಿಯಂಗಳ ಕಡೆ ಒಂದು ಅನುಭವ ಆದರೆ ಕೂಸಿನ ಕಡೆ ಇನ್ನೊಂದು ಅನುಭವ.
    ಅದಕ್ಕೆ ಅಲ್ಲದೋ ಹೇರಿಯೋರು ಹೇಳಿದ್ಸು ,” ಮದುವೆ ಮಾಡಿ ನೋಡು” ಹೇಳಿ.
    ಹಾ°,ಹೇಳಿದ ಹಾಂಗೆ ನಿಂಗಳ ಅನುಭವ ಏನಾರು ಇದ್ದರೆ ಬರಲಿ ನೋಡುವ°.ಅಷ್ಟಪ್ಪಗ ಕಳಕ್ಕೆ ಜೆನ ಕೂಡುಗು,ಚರ್ಚೆ ರೈಸುಗು.

  2. ಮದುವೆ ಹೇಳುವದು ಒಬ್ಬ ಮನುಷ್ಯನ ಜೀವನದ ಅತ್ಯಂತ ಪ್ರಮುಖವಾದ ಘಟ್ಟ. ಹಾಂಗೇ, ಒಬ್ಬ ಮನುಷ್ಯನ ಅತ್ಯಂತ ಪರೀಕ್ಷಾತ್ಮಕ ಘಟ್ಟವೂ ಅಪ್ಪು. ಏಕೆ ಹೇಳಿರೆ ಒಬ್ಬ ಮನುಷ್ಯನ ಮದುವೆಯ ಸಮಯಲ್ಲಿ ಅವನ ಹತ್ರಾಣ ಸಂಬಂಧಿಕರು, ಗೆಳೆಯರು ಏವ ರೀತಿ ವರ್ತಿಸುತ್ತವು ಹೇಳುವದು ಅವಂಗೆ ಸರಿಯಾಗಿ ಗೊಂತಾವುತ್ತು. ಮದುವೆಗೆ ಕೂಸು/ಮಾಣಿ ನೋಡ್ತ ಸುದ್ದಿ ಗೊಂತಪ್ಪಗಳೇ ಅದರ ತಪ್ಪುಸುಲೆ ಹೆರಡ್ತವು, (ಕೆಲವು ಸರ್ತಿ ನಿಘಂಟು ಆದ ಮದುವೆ ಕೂಡ ತಪ್ಪುಸುತ್ತವು ಇದ್ದವು, ಅದು ಬೇರೆ ವಿಷಯ), ಸಣ್ಣ ಸಣ್ಣ ಕೊರತೆಗಳ ಕಂಡುಹಿಡಿದು ಚುಚ್ಚು ಮಾತು ಆಡುವವು, ಬೈಯ್ತವು, ಮೋಸ ಮಾಡ್ತವು ಇತ್ಯಾದಿಗಳ ಕಾಂಬಲೆ ಸಿಕ್ಕುವದು ಮದುವೆ ಸಮಯಲ್ಲಿ.
    ಎಲ್ಲಕ್ಕಿಂತ ಮೇಲಾಗಿ ಹತ್ರ್ರಾಣ ಸಂಬಂಧದವು, ಕುಟುಂಬದವು, ಕೆಲವು ಜೆನ ಗೆಳೆಯರು ಕೂಡ ಮದುವೆಯ ಸಮಯಲ್ಲಿ ಒಬ್ಬ ವ್ಯಕ್ತಿಯ ಸಾಮರ್ಥ್ಯ ಹೇಂಗಿದ್ದೋ ಅದಕ್ಕನುಸರಿಸಿ ಚೂಂಟಿ (ಚಿವುಟಿ) ನೋಡ್ತವು. ಅವಂಗೆ ಸಹನೆ ಇದ್ದರೆ ಇದೆಲ್ಲವನ್ನೂ ಸಹಿಸಿಕೊಂಡು ಮದುವೆ ಆಯೆಕ್ಕು. ಇಲ್ಲದ್ರೆ ಅವನ ಕಥೆ ಗೋವಿಂದ. ಮದುವೆ ವಿಷಯಲ್ಲಿ ಅತಿ ಹತ್ರಾಣ ಸಂಬಂಧದವರನ್ನೇ ಬಿಡೆಕಾಗಿ ಬಂದ ಉಧಾಹರಣೆ ನಮ್ಮ ಸಮಾಜಲ್ಲಿ ಬೇಕಾದಷ್ಟಿದ್ದು. ಮದುವೆ ಸಂಬಂಧ ತಪ್ಪುಸುವದು ಅತಿ ಕೆಟ್ಟ ಚಟ. ಅದರಲ್ಲೂ ನಮ್ಮವರಲ್ಲಿ ಕೆಲವು ಹರ್ಕುಬಾಯಿಗೊಕ್ಕೆ ಅವರ ನಾಲಿಗೆ ತೀಟೆ ತೀರ್ಸಿಗೊಂಬದು ಒಂದು ಖುಷಿಯಾದ ಹವ್ಯಾಸ. ಈ ವಿಷಯಲ್ಲಿ ಸಣ್ಣಕೆ ಒಂದು ಚರ್ಚೆ ಮಾಡಿದರೂ ಅಕ್ಕು.

    1. ನಮ್ಮ ಜೀವನಲ್ಲಿ ವಿವಾಹದ ಬಗ್ಗೆ ನಡವ ಗುಣ ಅವಗುಣದ ಬಗ್ಗೆ ಭಾರೀ ಚೆಂದಕೆ ಚಿತ್ರಣ ಕೊಟ್ಟಿದಿ..ಧನ್ಯವಾದಂಗೋ

  3. ಋಣತ್ರಯಂಗಳ ವಿವರವನ್ನೂ ಕೊಟ್ಟು, ಮದುವೆಯ ಮಹತ್ವದ ಬಗ್ಗೆ ಒಳ್ಳೆ ವಿವರವಾದ ಲೇಖನ. ಧನ್ಯವಾದಂಗೊ.
    ಯಾವುದೇ ಢಂಬಾಚಾರಂಗೊ ಇಲ್ಲದ್ದೆ, ವರದಕ್ಷಿಣೆ ಉಪದ್ರ ಇಲ್ಲದ್ದೆ, ಸರಳವಾಗಿ ಮದುವೆ ಆವ್ತಿದ್ದರೆ ಅದು ನಮ್ಮ ಹವ್ಯಕಲ್ಲಿ ಮಾತ್ರ.

  4. ‘ದೂರದ ಬೆಟ್ಟ ನುಣ್ಣ೦ಗೆ’ ಹೇಳ್ತ ಮಾತಿಲ್ಲೆಯೋ? ಹಾಂಗೆ ನವಗೆ ಪಾಶ್ಚಾತ್ಯರ ಜೀವನ ಕ್ರಮ ಲಾಯಿಕ ಕಾ೦ಬೊದಲ್ಲದೋ? ಗಣೇಶ ಭಾವ ಹೇಳಿದ ಹಾಂಗೆ ಪಾಶ್ಚಾತ್ಯರಿ೦ಗೆ ಸಂಪ್ರದಾಯ ಇಲ್ಲೆ,ಎಂತಗೆ ಹೇಳಿರೆ ಅವರ ಚರಿತ್ರೆ ಕೇವಲ ಕೆಲವು ನೂರು ವರುಷದ್ದು.ಸಂಸ್ಕಾರ ಗೊಂತಿಲ್ಲೆ,ಬರೇ ಸ್ವೇಚ್ಛಾಚಾರ.ಇನ್ನು ಮದುವೆ ಹೇಳಿರೆ ದೊಡ್ಡ ಬಂಧನ,ಅವು ಹೆದರೊದು ವಿಚ್ಛೇದನಕ್ಕೆ.ಅವರ ಕಾನೂನು ಅದಕ್ಕೆ ಸರಿಯಾಗಿ ಇದ್ದು,ಬಿಡುಗಟ್ಟಿ೦ಗೆ ದೊಡ್ಡ ಮೊತ್ತ ಕೊಡೆಕ್ಕಾವುತ್ತು.
    ಬೆಳಿಯರ ಹತ್ತರೆ ಅವರ ಹೆಂಡತಿ ಮಕ್ಕಳ ವಿಷಯ ತಪ್ಪಿ ಹೋಗಿಯೂ ಕೆಳುಲೇ ಆಗ,ಹೆಚ್ಚಿನವು ಗಾಳಿ ಹೋದ ಬುಗ್ಗೆಯ ಹಾಂಗೆ “ಟುಸ್” ಆವುತ್ತವು ಉತ್ತರಿಸುಲೇ ಎಡಿಯದ್ದೆ !! .

  5. ಪಾಶ್ಚಾತ್ಯರಿ೦ಗೆ ಸ೦ಪ್ರದಾಯ೦ದ ಕಾನೂನು ದೊಡ್ಡದು,ಭಾರತೀಯರಿ೦ಗೆ ಕಾನೂನಿ೦ದ ಸ೦ಪ್ರದಾಯ ದೊಡ್ಡದು.ವ್ಹಾವಾ ಗಣೇಶ ಮಾವ೦ ವ್ಹಾವ ಎಷ್ಟು ಚೆ೦ದಕೆ ಎರಡು ಸ೦ಸ್ಕ್ರುತಿಯ ಎರಡು ವಾಕ್ಯಲ್ಲಿ ಹೇಳಿದಿ Fantastic,..ಇನ್ನು ಗೆ೦ಡು ಹೆಣ್ಣುಗೊ ಹಿರಿಯವರ ಕಣ್ಣು ತಪ್ಪುಸಿ ಒ೦ದು ಕೋಣೇಲಿ …(ಇದರ ಸಮರ್ತಿಸುತ್ತ ಹಿರಿಯವೂದೆ ಇದ್ದವು,ಖುಶವ೦ತ ಸಿ೦ಗಿನ ಹಾ೦ಗಿಪ್ಪವು).ನಮ್ಮಲ್ಲಿಯೂ ಹಿ೦ಗಿಪ್ಪವು ಇದ್ದವೂ ಹೇಳಿರೆ ನಿ೦ಗೊ ನ೦ಬುತ್ತೀರೊ ಇಲ್ಯೊ ಗೊ೦ತಿಲ್ಲೆ.ಅ೦ದ್ರಾಣ ಕಾಲಲ್ಲಿ ಹಾ೦ಗೆ ಇದ್ದತ್ತು ಹೇಳಿ ಇ೦ದೂ ಹಾ೦ಗೇ ಇರೇಕು ಹೇಳಿ ಇಲ್ಲೆ ಹೇಳುವದರ ಎನ್ನ ಕೆಮಿಯಾರೆ ಕೇಳಿದ್ದೆ.(ಅವನ ಮಗಳು ಆರೊಟ್ಟಿ೦ಗೋ ಓಡಿ ಹೊಯಿದು ಹೇಳುವದು ಅಲಾಯಿದ).ಇರಳಿ ಷೋಡಷ ಸ೦ಸ್ಕಾರಲ್ಲಿ ಮುಖ್ಯವಾದ ವಿವಾಹ ಕರ್ಮದ ಬಗ್ಯೆ ಚೆ೦ದಕೆ ವಿವರ್ಸಿದ್ದದಕ್ಕೆ ಒ೦ದು ದೊಡ್ಡ ಒಪ್ಪ.ಒಪ್ಪ೦ಗಳೊಟ್ಟಿ೦ಗೆ.

    1. ಅಂದ್ರಾಣ ಕಾಲ ಪರಿಸ್ಥಿತಿಗೆ ಇಂದು ನಾವು ನೀರು ಹಾಕಿ ಬೆಳೆಶಿರೆ ಮುಂದಾಣ ಜನಾಂಗ ನವಗೆ ಒಳ್ಳೆ ಫಲ ಕೊಡುಗು ಹೇಳುವ ನಿರೀಕ್ಷೆ ಮಾವಾ…ಒಪ್ಪಕ್ಕೆ ಧನ್ಯವಾದಂಗೋ!!!

  6. ವಿವಾಹದ ಮಹತ್ವವ ವಿವರಿಸಿದ ಉತ್ತಮ ಲೇಖನ. ವಿವಾಹ ಇಲ್ಲದ್ದೆ “ಕೂಡಿಬಾಳುವಿಕೆ”ಯ ಹೊಡೇಂಗೆ, ಹಳೆಯ ಅನಾಗರಿಕ ಪದ್ದತಿಯ ಹೊಡೆಂಗೆ ವಾಲುತ್ತ ಈಗಾಣ ಯುವಜನಾಂಗವ ನೆನಸುವಗ ಛಿ ಹೇಳೀ ಅನಿಸುತ್ತು. ಇದು ತಪ್ಪು!ಅನಾಗರೀಕ!ಅಸಂಸ್ಕೃತಿ!ಅರಾಜಕ!ಅಧರ್ಮ!ನೀಚಪ್ರವೃತ್ತಿ. ಸರಿಯಾದ ಪದಪ್ರಯೋಗ ಮಾಡಿದ್ದೆ ಗಣೇಶ ಮಾವಾ.
    ವಿವಾಹ ಹೇಳುವ ಸಂಸ್ಕಾರ ಮಾಡಿಗೊಂಬದರಿಂದ ಋಣತ್ರಯಂದ ವಿಮುಕ್ತಿ ಸಿಕ್ಕುತ್ತು ಹೇಳಿದೆ. ಕೆಲವು ಜೆನ ವಿವಾಹಕ್ಕೆ ಬೇಕಾಗಿ ಸುಮ್ಮನೇ ಸಾಲ ಮಾಡಿ ಅನಗತ್ಯ ಗೌಜಿ ಮಾಡ್ತವಾನೆ. ಮತ್ತೊಂದು ಋಣಕ್ಕೆ ಸಿಕ್ಕಿ ಹಾಕ್ಯೆಳುತ್ತವು. ನಮ್ಮ ಹವ್ಯಕರ ಹಾಂಗೆ ಸರಳ ವಿವಾಹವೇ ಒಳ್ಳೆದು.

    1. ಗೋಪಾಲ ಮಾವಾ,
      ನಿಂಗ ಹೇಳಿದ ಹಾಂಗೆ ಮದುವೆ ಅಪ್ಪಲೆ ಹೋಗಿ ಬ್ಯಾಂಕಿನ ಋಣ ಆಗದ್ದ ಹಾಂಗೆ ಆಗಲಿ ಹೇಳಿ ಈಗಾಣ ಕಾಲಲ್ಲಿಯೂ ನೋಡೆಕ್ಕಾವ್ತು. ಒಪ್ಪೊಂಗೊಕ್ಕೆ ಧನ್ಯವಾದ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×