ಹೇ ಭಾರತಿ – ಡಾಮಹೇಶಣ್ಣ ಬರದ ಸಂಸ್ಕೃತ ಪದ್ಯಕ್ಕೆ, ಈಗ ಧ್ವನಿರೂಪ!
ಈ ಪದ್ಯವ ಓದಿದ್ದದು, ಅರ್ಥೈಸಿಗೊ೦ಡದು– ಈಗ ಕೇಳ್ಳಕ್ಕು!
ಇದರ ರಾಗಲ್ಲಿ ಎನ್ನ ಮಿತ್ರ ದಿನಕರ ಹಾಡಿದ್ದದರ ಇಲ್ಲಿ ಕೇಳಿ-
ಹೇ ಭಾರತಿ!
ಸಂಸ್ಕೃತಾಭಿಮಾನಿಗಳ ಭಾವನೆಗಳ ಪ್ರತಿಧ್ವನಿ–
मनुजभावजीवरूपिणि वचनरूपिणि ! भारति !
सुरमुखार्चितॆ मर्त्यपूजितॆ ! ब्रह्मभामिनि! सुंन्दरि !! १ !!
सरससुमधुरभाषितॆ तॆ जगति विरसो दर्श्यतॆ ।
दनुजपूजितपूजितॆ ते दनुजनीतिः नीयतॆ ॥ २ ॥ मनुजभाव.. ॥
वर्णनातीतवर्णॆ तव वर्णनं नाकर्ण्यतॆ ।
सप्तसुमधुरनादलसितॆ कुतः सुप्ता देवते ॥ ३॥ मनुजभाव.. ॥
कॊपदूरां वाक्सुधारां धारयामृतवर्षिणीम् ।
समरसान्वितभावमधुरां भाषयामृतमाधुरीम् ॥ ४ ॥ मनुजभाव.. ॥
सुधासारसारणाय दॆहि शक्तिं दॆवि मॆ ।
अस्मदालापनान्तं कलरवं तव श्राव्यतॆ ॥ ५ ॥ मनुजभाव.. ॥
(ಶ್ರೀ ಅಡಿಗರಿಗೆ ವ೦ದಿಸಿ)
~
ಸೂ:
ಕೂಳಕ್ಕೋಡ್ಳು ಅಣ್ಣ ಹೇಳಿರೆ ಮದಲಿಂದಲೇ ಹಾಂಗೆ. ಓದುಗು, ಬರಗು.
ಸಂಸ್ಕೃತಿ, ಸಂಸ್ಕೃತ - ಎರಡರಲ್ಲಿದೇ ವಿಶೇಷ ಆಸಕ್ತಿ.
ಮಹೇಶಣ್ಣ ಹೇಳಿ ಇವರ ಹೆಸರು, ಎಂಗೊ ಎಲ್ಲ ಕೂಳಕ್ಕೂಡ್ಳಣ್ಣ ಹೇಳಿಯೇ ದಿನಿಗೆಳುದು.
ಊರಿಲಿ, ನೀರ್ಚಾಲು ಶಾಲೆಲಿ ಕಲಿವಗಳೇ ಹಾಂಗೆ - ಎಡಪ್ಪಾಡಿ ಬಾವ ಹೇಳುಗು - ಬಾಕಿ ಒಳುದವೆಲ್ಲ ಬಿಂಗಿ ಮಾಡಿಗೊಂಡು, ಮಾಷ್ಟ್ರನ ಅಂಗಿಗೆ ಶಾಯಿ ಹಾಕಿಯೊಂಡು ಆಡುವಗ, ಇವು ಕರೆಲಿ ಕೂದಂಡು ಓದುಗಡ.
ಮುಂದೆ ಉಜಿರೆಲಿ ಕಲ್ತುಗೊಂಡು ಇಪ್ಪಗಳೂ ಹಾಂಗೆಯೇ.
ಅಲ್ಲಿಂದಲೂ ಮುಂದೆ ತಿರುಪತಿಲಿ ಕಲ್ತವು - ಅಷ್ಟಪ್ಪಗ ಪ್ರತಿಸರ್ತಿ ಊರಿಂಗೆ ಬಪ್ಪಗಳೂ ಒಪ್ಪಣ್ಣಂಗೆ ಲಾಡು ಸಿಕ್ಕಿಯೋಂಡು ಇತ್ತು. 😉
ಈಗ, ಪ್ರಸ್ತುತ ಬೊಂಬಾಯಿಯ ಹತ್ರೆ ಐ.ಐ.ಟಿ ಹೇಳ್ತ ದೊಡ್ಡ ಕೋಲೇಜಿಲಿ -ಭಾರತಲ್ಲಿ ಆದ ವಿಜ್ಞಾನದ ಬೆಳವಣಿಗೆಯ ಬಗ್ಗೆ - ಪಚ್ಚಡಿ (Ph.D) ಮಾಡಿಕ್ಕಿ ಡಾಗುಟ್ರು ಆಯಿದವು.
ಕಿದೂರು ಬಾವನ ಹಾಂಗೆ ಮದ್ದಿನ ಇಂಜೆಕ್ಷನು ಕುತ್ತತ್ತ ಡಾಗ್ಟ್ರು ಅಲ್ಲ, ತತ್ವದ ಇಂಜೆಕ್ಷನು ಕುತ್ತುತ್ತ ಡಾಗ್ಟ್ರು.
ಕುಶಿ ಆವುತ್ತು, ನಮ್ಮೋರು ಮೇಗೆ ಮೇಗೆ ಹೋಪಗ. ಅಲ್ಲದಾ? ಅವಕ್ಕೆ ರಜ ಕುಶಾಲುದೇ ಇದ್ದು. ಚಿಂತನೆಯುದೇ ಇದ್ದು.
ಭಾರತೀಯರ ಸಂಶೋಧನೆಗಳ ಬಗೆಗೆ ಕಾಳಜಿಯುದೇ ಇದ್ದು. ನಮ್ಮೋರ ಹಿಂದಾಣೋರ "ಮಹತ್ವ"ದ ಬಗೆಗೆ ಹೆಮ್ಮೆಯುದೇ ಇದ್ದು.
ಒಪ್ಪಣ್ಣನ ಬೈಲಿಂಗೆ ಬಂದು ಶುದ್ದಿ ಹೇಳ್ತಿರಾ ಹೇಳಿ ಕೇಳುವಗ ಸಂತೋಷಲ್ಲಿ ’ಅಕ್ಕಪ್ಪಾ, ಧಾರಾಳ!’ ಹೇಳಿದವು. ಹಾಂಗಾಗಿ, ನಮ್ಮೋರ ಮಹತ್ವಂಗಳ ಹೇಳುಲೆ "ಮಹತ್ವ" ಹೇಳ್ತ ಅಂಕಣ, ಇವು ಬರದ್ದರ ಓದಿಕ್ಕಿ, ನಮ್ಮೋರ ಬಗೆಗೆ ನವಗೆಲ್ಲರಿಂಗುದೇ ಹೆಮ್ಮೆ ಬಂದು, ಹಿಂದಾಣೋರ ಮಹತ್ವ ಬಂದರೆ ಕೂಳೆಕ್ಕೋಡ್ಳಣ್ಣನ ಶ್ರಮ ಸಾರ್ಥಕ ಆದ ಹಾಂಗೆ.
ಓದಿ, ಒಪ್ಪ ಕೊಡಿ. "ಮಹತ್ವ"ದ ಮಾಹಿತಿಯ ಅರ್ಥ ಮಾಡಿಗೊಳ್ಳಿ..!
ಆಗದೋ?
Latest posts by ಡಾಮಹೇಶಣ್ಣ
(see all)
ದಿನಕರನ ದನಿಲಿ ಮಹೇಶಣ್ಣ ಬರದ ಸಂಸ್ಕೃತ ಪದ್ಯ ಸೊಗಸಾಗಿ ಬಂತು. ಮೋಹನ ಮುರಳಿಗಾನವ ಮತ್ತೊಂದರಿ ಕೇಳಿದ ಹಾಂಗಾತು.
ಧನ್ಯವಾದಂಗೊ.
ಸಾಹಿತ್ಯ ಮತ್ತೆ ಅರ್ಥ ಈ ಮೊದಲು ತಿಳ್ಕೊಂಡಿದು.
ಈಗ ಧ್ವನಿ ಸಹಿತ ಕೇಳಲೆ ಕೊಶೀ ಆತು. ಇಬ್ರಿಂಗೂ ಧನ್ಯವಾದಂಗೊ
ಉತ್ತಮಂ ಅಸ್ತಿ| ಪುನ: ಪುನರಪಿ ಶ್ರುತವತೀ| ತತ್ರಾಪಿ “वर्णनातीतवर्णॆ तव वर्णनं नाकर्ण्यतॆ ।
सप्तसुमधुरनादलसितॆ कुतः सुप्ता देवते||” ಅತ್ಯಂತಂ ಪ್ರಿಯಮಭವತ್| ಮಹೇಶಣ್ಣ೦ ತಥಾ ದಿನಕರಣ್ಣ೦ ಧನ್ಯವಾದಾ:|
ಹಾಡಿದ್ದು ತು೦ಬಾ ಲಾಯಿಕಾಯಿದು…
ಉತ್ತಮಂ । ಭಾವಪೂರ್ಣಮಸ್ತಿ ।
ರಜಾ ಕೇಳಿದೆ.ಮತ್ತೆ ಕೇಳುತ್ತೆ.