- ಸಪ್ತಪದಿ - August 1, 2011
- 15-ಜೂನ್-2011: ಖಂಡಗ್ರಾಸ ಚಂದ್ರಗ್ರಹಣ - June 15, 2011
- ಚಾಂದ್ರ ಮಾನ ಯುಗಾದಿಗೆ ನೆರೆಕರೆಯ ಸಂಭ್ರಮ - April 2, 2011
ಅಬ್ಬ!!ಸುಮಾರು ದಿನ ಆತು ಬೈಲಿಂಗೆ ಬಾರದ್ದೆ.ಒಂದು ದಿಕ್ಕೆ ಚಳಿ.ಇನ್ನೊಂದಿಕ್ಕೆ ಎಲ್ಲೋರು ಅವರವರ ಕೆಲಸಲ್ಲಿ ಬ್ಯುಸಿ. ಎಲ್ಲೋರು ಬೌಶ್ಶ ಈ ಸಮಯಲ್ಲಿ ಬ್ಯುಸೀ ಇರ್ತವು ಹೇಳಿ ಕಾಣ್ತು.ಆರನ್ನೂ ಮಾತಡ್ಸಲೇ ಎಡಿಗಾಯಿದಿಲ್ಲೇ..ನೋಡ್ತಾ ಇದ್ದ ಹಾಂಗೆ ನಮ್ಮ ಬೈಲು ವರ್ಷಾಚರಣೆ ಮಾಡಿಗೊಂಡು ಹೊಸ ರೂಪಲ್ಲಿ ಚೆಂದ ಕಾಣ್ತಾ ಇದ್ದು.ಈ ಸಮಯಲ್ಲಿ ಅನೇಕ ವರ್ಷಾಚರಣೆ ಮಾಡಿಗೊಂಡು ಜೀವನಲ್ಲಿ ಅರುವತ್ತು ವರ್ಷ ಪ್ರಾಯ ಅಪ್ಪಗ ಮಾಡುವ “ಷಷ್ಟಿಪೂರ್ತಿ”ಯ ವಿಷಯದ ಬಗ್ಗೆ ರಜ ಶುದ್ಧಿ ಹೇಳುವ ಹೇಳಿ ಕಂಡತ್ತು.ಅವಕಾಶ ಮಾಡಿಯೊಂಡು ಎಲ್ಲೋರು ಮಾಡ್ಸಿಗೊಂಬಲೇ ಬೇಕಾದ ಹಬ್ಬ ಇದು.ಅರುವತ್ತು ವರ್ಷ ತುಂಬಿದ ದಂಪತಿಗೊಕ್ಕೆ ಅವರ ಮಕ್ಕ ಮಾಡುವ ವಿಶಿಷ್ಟ ಹಬ್ಬ ಇದು.ಇದೊಂದು ಮೇಲ್ನೋಟಕ್ಕೆ ಮದುವೆಯ ಹಾಂಗೆ ಕಾಂಬ ಮಹೋತ್ಸವ.ಅಬ್ಬೆ ಅಪ್ಪಂದ್ರು ಮದುವೆಯ ಸಮಯಲ್ಲಿ ಯಾವ ರೀತಿ ಸಂಭ್ರಮಪಟ್ಟಿದವು ಹೇಳುದರ ಮಕ್ಕೊಗೆ ತೋರ್ಸಿಕೊಡುವ ಮಹೋತ್ಸವ ಹೇಳಿರೆ ತಪ್ಪಲ್ಲ.
ಈ ಸಂಭ್ರಮ ಮಾಡ್ಸಿಗೊಂಬ ಅದೃಷ್ಟ ಎಲ್ಲೋರಿಂಗೂ ಸಿಕ್ಕುತ್ತಿಲ್ಲೆ.ಈ ಸಮಯಲ್ಲಿ ಆ ದಂಪತಿಗೊ ಜೊತೆಯಾಗಿ ಜೀವನಲ್ಲಿ ಕಂಡ ಅನುಭವಂಗ,ಮಧುರ ಅನುಭೂತಿಗ,ಎಷ್ಟೆಷ್ಟೋ ಯೋಚನೆಗ,ಕಷ್ಟ-ಸುಖ,ನೋವು ನಲಿವುಗಳ ಬಹುತೇಕ ಮುಗಿಶಿ ಮಕ್ಕ-ಸೊಸೆ,ಪುಳ್ಯಕ್ಕ ಸಮಾನ ಪ್ರಾಯದವು,ನೆಂಟ್ರು-ಇಷ್ಟ್ರು ಎಲ್ಲೋರು ಸೇರಿ ಹಳೆ ನೆಂಪುಗಳ ಮೆಲುಕು ಹಾಕುವ ಸಮಯ.ಈ ದಿನ ಎಲ್ಲೋರು ಸೇರಿ, ಶುಭಾಶಯ,ಅಭಿನಂದನೆ ಸಲ್ಲುಸುವ ಮಧುರ ಮಹತ್ತರ ಸಂಭ್ರಮ..ಅರುವತ್ತು ವರ್ಷದ ಪ್ರಾಯ ಹೇಳಿರೆ ಸರಿ ಸುಮಾರು ಮುವತ್ತೈದು ವರ್ಷಂಗಳ ದಾಂಪತ್ಯದ ಅನುಭವ.ಅದಕ್ಕೆ ಮಿಗಿಲಾದ ಲೋಕಾನುಭವ!!!
ಮಕ್ಕೊಗೆ ಪ್ರಾಯಕ್ಕೆ ಬಂದಪ್ಪಗ ಹೆರಿಯವು ಮದುವೆ ಮಾಡಿ ಎರಡು ಕುಟುಂಬ,ಮನಸ್ಸುಗಳ ಒಟ್ಟು ಮಾಡಿ ಸಂಭ್ರಮಿಸುತ್ತವು.ಇದು ಸರ್ವ ಸಹಜ.ಆದರೆ ಈ ಋಣವ ತೀರ್ಸೆಕ್ಕಾರೆ ಮಕ್ಕ,ಸೊಸೆಯಕ್ಕೋ,ಅಳಿಯಂದ್ರು ಅವರ ಈ ಸಂಭ್ರಮ ಮಾಡಿ ಗೌರವಿಸೆಕ್ಕಾದ್ದು ಕರ್ತವ್ಯ.
ಒಬ್ಬ ವೆಗ್ತಿ ಜೀವನಲ್ಲಿ ಕ್ರಿಯಾಶೀಲ ಆಗಿಪ್ಪ ಸಮಯ ಹೇಳಿರೆ ಅರುವತ್ತು ವರ್ಷ.ಮತ್ತೆ ಅವನ ಆರೋಗ್ಯ ದೃಷ್ಟಿಲಿ ವಿಶ್ರಾಂತ ಜೀವನ ನಡೆಶುದು ಒಳ್ಳೆದು ಹೇಳುವ ವೈಜ್ಞಾನಿಕ ದೃಷ್ಟಿಕೋನ ಮಡಿಕ್ಕೊಂಡು ಈ ಹಬ್ಬವ ಆಚರಣೆಗೆ ತಂದ ನಮ್ಮ ಹೆಮ್ಮೆಯ ಭಾರತೀಯ ಸನಾತನ ಪರಂಪರೆ.ಇಪ್ಪತ್ತು ವರ್ಷ ಬಾಲ್ಯ,ಮತ್ತೆ ಇಪ್ಪತ್ತು ವರ್ಷ ಯೌವ್ವನ,ಮತ್ತೆ ನಲುವತ್ತರ ಮೇಗೆ ಮಕ್ಕಳ ಜೀವನ ನಿರೂಪಣೆ,ಉದ್ಯೋಗ ಹೇಳಿ ಅರುವತ್ತನೇ ವರ್ಷಕ್ಕೆ ಅಪ್ಪಗ ಈ ಹಬ್ಬವ ಆಚರಣೆ ಮಾಡುದು,ಅಬ್ಬ!!ಅದೆಂತಹ ಸಂಭ್ರಮ?? ಈ ಸಮಯಲ್ಲಿ ಕೆಲವಾರು ಅಂಶಗಳನ್ನಾರೂ ಆ ದಂಪತಿಗೊಕ್ಕೆ ಕಣ್ಣಿಂಗೆ ಕಟ್ಟಿದ ಹಾಂಗಿಕ್ಕು.ಜೀವನ ಮಾಡ್ಲೆ ಆರ್ಥಿಕ ಸಂಕಷ್ಟಂದ ಅನುಭವಿಸಿದ ಕಷ್ಟ-ಸುಖಂಗ,ಆತ್ಮೀಯರಿಂದಲೂ, ನೆರೆಕರೆಯವರಿಂದಲೂ ಪಟ್ಟ ಅವಮಾನಂಗ,ಉಂಬಲೆ ಅಕ್ಕಿ ಇಲ್ಲದ್ದ ಸಮಯಲ್ಲಿ ಮನಗೆ ನೆಂಟ್ರು ಬಂದಪ್ಪಗ ಬಾಗಿಲಿನ ಕರೇಲಿ ನಿಂದುಗೊಂಡು ಕೂಗಲೂ ಎಡಿಗಾಗದ್ದೆ ನುಂಗಿದ ಕಣ್ಣೀರಿನ ದಿನಂಗ,ಹಾಕುಲೆ ವಸ್ತ್ರ ಇಲ್ಲದ್ದೆ ಚಳಿಗೆ ನಡುಗಿದ ದಿನಂಗ ಎಲ್ಲವೂ ಈ ಸಮಯಲ್ಲಿ ನೆಂಪು ಅಪ್ಪದು ಸಹಜ.ಗತಕಾಲವ ವರ್ತಮಾನದ ದಿನಂಗಳಲ್ಲಿ ಬೆರ್ಸಿ ವೈರಪ್ರತೀಕಾರಂಗಳ ಮರತ್ತು ಬಂಧು-ಮಿತ್ರರ,ಯೌವ್ವನದ ಹಳೆ ಜೋಸ್ತಿಗಳ ದಿನುಗೋಳಿ ಮಾಡಿಗೊಂಬ ಮಂಗಳಕಾರ್ಯ..ಯೌವ್ವನ ಪ್ರಾಯಲ್ಲಿ ಮಾಡಿದ ತಪ್ಪುಗ,ಅಪಾರ್ಥಂದ ಮಾಡಿದ ತಪ್ಪುಗ ನೂರಾರು ಇಕ್ಕು.ಅದರೆಲ್ಲಾ ಬಂಧುಗಳ ಮುಂದೆ ಮಂತ್ರಪೂರ್ವಕವಾಗಿ ಕ್ಷಮೆ ಕೇಳಿ ಬದುಕಿನ ಪ್ರಕ್ಷಾಲನ ಮಾಡುವ ಸಮಯ.ಇಂತಹಾ ಸಮಯ ಮತ್ತೆ ಆ ವೆಗ್ತಿಗೆ ಬಾರ!!ಈ ಸುಸಮಯಲ್ಲಿಯೇ ಆ ವೆಗ್ತಿಯ ಜೊತೆಲಿಯೇ ಅಷ್ಟು ಕಾಲ ನೋವು-ನಲಿವುಗಳ ಹಂಚಿಗೊಂಡು ಸಂಸಾರ ಮಾಡಿದ ಅರ್ಧಾಂಗಿಯ ಜತೇಲಿ ಮತ್ತೆ ತನ್ನ ಮಕ್ಕಳ ಎದುರೇ ವೈವಾಹಿಕ ಜೀವನವ ನೆನಪಿಸಿ ಮನೆ ನೆಡೆಶುವ,ಜೀವನದ ಜವಾಬ್ದಾರಿಯ ಮಕ್ಕೊಗೆ ಒಪ್ಪುಸಿ ಸಂತೃಪ್ತ ಜೀವನವ ನಡೆಶುವ ಸುಮುಹೂರ್ತ.ಇಂತಹಾ ವಿಶಿಷ್ಟ ಹಬ್ಬವ ಮಕ್ಕ ಆದವು ಅವರವರ ಅಬ್ಬೆ-ಅಪ್ಪಂದ್ರಿಂಗೆ ಆಚರ್ಸಿ ಗೌರವ ಸಲ್ಲುಸುದು ಕರ್ತವ್ಯ ಅಲ್ದಾ?
ಬೈಲಿಲಿ ಕಳುದ ವರ್ಷ ಸಂಭ್ರಮಪಟ್ಟ ಮಾಷ್ಟ್ರುಮಾವನ ಷಷ್ಟಿಪೂರ್ತಿ ಕಾರ್ಯಕ್ರಮದ ಚಿತ್ರಣ:-
ಎಲ್ಲೋರು ಓದಿ ನೋವು-ನಲಿವುಗಳ ಜೀವನಲ್ಲಿ ಅಳವಡಿಸೆಕ್ಕಾದ ಪುಸ್ತಕ:-
ಹೀಂಗೊಂದು ಆಚರಣೆ ಇದ್ದು ಹೇಳಿಯೂ ಗೊಂತಿತ್ತು, ಕಂಡೂ ಗೊಂತಿತ್ತು.
ಅದರ ಆಚರಣೆಯ ಮಹತ್ವದ ಬಗ್ಗೆ ಒಳ್ಳೆ ಲೇಖನ. ಧನ್ಯವಾದಂಗೊ
ಧನ್ಯವಾದ ಶರ್ಮಪ್ಪಚ್ಚೀ…
laayakaayidu gurugale.