- ಡಿಮ್ – ಡಿಪ್ !!!! - November 28, 2011
- ಎನ್ನ ಕ್ಷೇತ್ರ ಎನಗೆ ಇಷ್ಟ 🙂 - May 16, 2011
- ರಾಮ ಕಥಾ ವಿಸ್ಮಯ - January 12, 2011
“ಹಲೋ ಅಣ್ಣಾ, ಹೇಂಗಿದ್ದೆ?”, ಉದಿಯಪ್ಪಗ ಎಂಟು ಗಂಟೆ ಹೊತ್ತಿಂಗೆ ಅಣ್ಣನ ಮೊಬೈಲಿಂಗೆ ಕಾಲ್ ಮಾಡಿತ್ತಿದ್ದೆ.
ಅಣ್ಣ ಎಂಜಿನಿಯರಿಂಗ್ ಕಲ್ತು, ಬೆಂಗಳೂರಿಲಿ ಕೆಲಸಕ್ಕೆ ಸೇರಿ ರಜ್ಜ ಸಮಯ ಆಗಿತ್ತಷ್ಟೇ. ಅವ ಬೆಂಗಳೂರಿಂಗೆ ಹೋಪ ಮೊದಲು ಒಟ್ಟಿಂಗೆ ಇದ್ದ ಕಾರಣ, ಉದಾಸಿನ ಆಯ್ಕೊಂಡಿತ್ತು.
ಆದರೆ, ಅಣ್ಣ ತುಂಬಾ ಸೀರಿಯಸ್ ಆಗಿ “ಎಂತ ವಿಷಯ? ಬೇಗ ಹೇಳು” ಹೇಳಿ ಹೇಳಿದ.
“ಅರೇ! ವಿಷಯ ಎಂತರ?!! ಹೀಂಗೇ ಫೋನ್ ಮಾಡಿದ್ದು, ನೀನು ಹೇಂಗಿದ್ದೆ ಹೇಳಿ ಕೇಳ್ವ ಹೇಳಿ ಆತು” ಹೇಳಿ ಹೇಳಿದೆ.
“ನಿನಗೀಗ ಪುರ್ಸೊತ್ತಾದ್ದ?! ಮಡುಗು ಫೋನ್” ಹೇಳಿ ಅಣ್ಣ ಕಾಲ್ ಕಟ್ ಮಾಡಿದ.
“ಯಬ್ಬಾ!! ತಮ್ಮನತ್ರೆ ಮಾತಾಡ್ಳೂ ಪುರ್ಸೊತ್ತಿಲ್ಲದ್ದೆ ಆತ ಇವಂಗೆ?!” ಹೇಳಿ ಆಗ ಗ್ರೇಶಿತ್ತಿದೆ.
ಅಮ್ಮನತ್ರೆ “ಅಣ್ಣ ಫೋನ್ ಕಟ್ ಮಾಡಿದ” ಹೇಳಿ ಹೇಳಿದೆ. “ಅವ ಬ್ಯುಸಿ ಇಕ್ಕು ಮಗ. ಹೊತ್ತಪ್ಪಗ ಮಾತಾಡುವ” ಹೇಳಿ ಅಮ್ಮ ಎನ್ನ ಸಮಾಧಾನ ಮಾಡಿದವು.
ಆಗ ಆರು ಎಷ್ಟು ಸಮಾಧಾನ ಮಾಡಿದರೂ ಎನಗೆ ಅನಿಸಿಕೊಂಡಿತ್ತು, “ಮನುಷ್ಯರತ್ರೆ ಮಾತಾಡ್ಳೂ ಪುರ್ಸೊತ್ತಿಲ್ಲದ್ದದು ಇದೆಂಥಾ ಬ್ಯುಸಿ?” ಹೇಳಿ.
ಆದರೆ ಈಗ ಐದು ವರ್ಷದ ಮತ್ತೆ, ಬೆಂಗಳೂರಿಂಗೆ ಬಂದಿಪ್ಪಗ ಅರ್ಥ ಆವ್ತು, ಬೆಂಗಳೂರಿಲಿ ಜನ ಎಂತಕೆ ಬ್ಯುಸಿ ಹೇಳಿ!
ಇತ್ತೀಚೆಗಂತೂ ಸಣ್ಣ ಮಕ್ಕಳಿಂದ ಹಿಡಿದು, ಪ್ರಾಯ ಆದವರವರೆಗೆ ಎಲ್ಲರೂ ಬ್ಯುಸಿಯೇ (ಕೆಲವರು ಸುಮ್ಮನೆ ಬ್ಯುಸಿ ಇದ್ದೆಯ ಹೇಳಿ ಹೇಳ್ತವು. ಅದು ಬೇರೆ ವಿಷಯ).
ಅದೂ ಬೆಂಗಳುರಿನಂತಹ ಮಹಾನಗರಂಗಳಲ್ಲಿ ಜನಕ್ಕೆ ಒಂದು ಕಡೆಂದ ಇನ್ನೊಂದು ಕಡೆಗೆ ಹೋಪಲೇ ಸುಮಾರು ಹೊತ್ತು ಬೇಕಾವ್ತು.
ಸಿಕ್ಕಾಪಟ್ಟೆ ಟ್ರಾಫಿಕ್ ಇಪ್ಪ ಕಾರಣ, ಮನೆಂದ ಹೆರಟ ಕೂಡ್ಳೇ ಯಾವಾಗ ತಲುಪುತ್ತೋ ಹೇಳಿ ಚಿಂತೆ ಸುರು ಆವ್ತು.
ಬಸ್ಸಿಲಿ ಹೋಪದಾದರೆ ಸೀಟು ಸಿಕ್ಕುಗಾ, ಇಲ್ಯಾ ಹೇಳಿ ಚಿಂತೆ, ನಮ್ಮ ಸ್ವಂತ ಗಾಡಿಲ್ಲಿ ಹೋಪದಾದರೆ, ಆ ರಷ್ಲಿ ಗಾಡಿ ಓಡಿಸುದು ಹೇಳಿದರೆ ಟೆನ್ಷನ್ ಕಟ್ಟಿಟ್ಟ ಬುತ್ತಿ.
ಆಚೆ ಹೊಡೆಂದಲೂ ಗಾಡಿಗ ಬತ್ತಾ ಇರ್ತು – ಈಚೆ ಹೊಡೆಂದಲೂ ಗಾಡಿಗ ಬತ್ತಾ ಇರ್ತು. ಅವುಗಳೆಡೆಲಿ ಹೋಪದು ಹೇಳಿದರೆ ಸಾಕುಸಾಕಾವ್ತು.
ಹೀಂಗಿಪ್ಪಗ, ಅವರವರ ಜಾಗ್ರತೆ ಮಾಡಿಕೊಂಬದರಲ್ಲೇ ಜನಂಗ ಬ್ಯುಸಿ.
ಹಾಂಗಾಗಿ ಆರಿಂಗೂ ಪುರುಸೊತ್ತೇ ಇಲ್ಲೆ.
ಉದಿಯಪ್ಪಗ ಮನೆಂದ ಕೆಲಸಕ್ಕೆ ಹೆರಟರೆ, ಮತ್ತೆ ಮನೆಗೆತ್ತುವಾಗ ಇರುಳಾವ್ತು.
ಬೆಂಗಳೂರಿಲಿಪ್ಪದು ಹೇಳಿದರೆ, ಪುರಂದರ ದಾಸರು ಹೇಳಿದ ಹಾಂಗೆ, “ಅನುಗಾಲವೂ ಚಿಂತೆ”.
ಹೀಂಗಿಪ್ಪ ಪರಿಸ್ಥಿತಿಲ್ಲಿಯೂ ನಮ್ಮಲ್ಲೇ ತುಂಬಾ ಜನ ಎಂತಕೆ ಹಳ್ಳಿಂದ ಹೋಗಿ ಬೆಂಗಳೂರಿಲಿ ಸೆಟ್ಲ್ ಆವ್ತವು?
ತಲೆ ಒಡದು ಹೋಪಷ್ಟು ಟೆನ್ಷನ್ ಮಡಿಕ್ಕೊಂಡು ಎಂತಕೆ ಹೆಣಗಾಡ್ತವು?
ಹಳ್ಳಿಲ್ಲಿ ಅಥವಾ ಸಣ್ಣ ಪೇಟೆಲ್ಲಿಪ್ಪ ಮಾನಸಿಕ ನೆಮ್ಮದಿಯ ಬಿಟ್ಟು ಎಂತಕೆ ಹೋವ್ತವು?
– ಕಾರಣಂಗ ತುಂಬಾ ಇಕ್ಕು.
ಅವುಗಳ ಬೆಂಗಳೂರಿಲಿ ಸೆಟ್ಲ್ ಆಗದ್ದ ಆನು ಹೇಳುದಕ್ಕಿಂತ ಸೆಟ್ಲ್ ಆದ ಒಪ್ಪಣ್ಣನ ಬೈಲಿಲಿಪ್ಪವು ಹೇಳುದು ಒಳ್ಳೆದು. ಅಲ್ದಾ?!
ಇದೆಲ್ಲದರ ಪಾರಿಹಾರಿಕ ಉದಯವೇ ಗ್ರಾಮರಾಜ್ಯ
ಒಳ್ಳೆದಾಯಿದು ಬರದ್ಸು.
ಅಕ್ಷರಣ್ಣಂಗೆ ಸ್ವಾಗತ. ಎನ್ನ ಗುರ್ತ ಇದ್ದಲ್ಲದೋ? 🙂
{ ಆನು ಎಂತಕೆ ಬೆಂಗಳೂರಿಂಗೆ ಬಂದೆ?!!}
ಬೋಸಬಾವಂಗೂ ಕೆಲವು ಸರ್ತಿ ಇದೇ ನಮುನೆ ಸಂಶಯ ಬತ್ತು…
ಆನೆಂತಕೆ ಇಲ್ಲಿಗೆ ಬಂದೆ? – ಹೇಳಿ ಕೇಳ್ತ°, ಎಂಗಳಲ್ಲಿಗೆ ಬಂದಾದ ಮತ್ತೆ!
ಇದುದೇ ಅದೇ ನಮುನೆಯ ಸಂಶಯವೋ ಹೇಳಿ ಗ್ರೇಶಿದೆ ಒಂದರಿ! 😉
ಅಕ್ಷರನ ಬರಹ ಲಾಯ್ಕಾಯಿದು. ಪೇಟೆ ಜೀವನಲ್ಲಿ ಬ್ಯುಸಿಯಾಗಿಪ್ಪದೇ ಒಂದು ಕೊಶಿ. ಹಳ್ಳಿ ಜೀವನಲ್ಲಿ ಬ್ಯುಸಿಯಾಗಿದ್ದೆ ಹೇಳಿ ಹೇಳ್ತವನ ಆನಂತೂ ಕಂಡಿದಿಲ್ಲೆ. ನಿಜವಾಗಿ ನೋಡ್ತರೆ ಈ ಟ್ರಾಫಿಕ್ ಇತ್ಯಾದಿಗಳಲ್ಲಿಪ್ಪಗ ‘ಆನು ಬ್ಯುಸಿ’ ಹೇಳುದರ ಬದಲು ಹಳ್ಳಿಲಿಪ್ಪವ° ‘ತೋಟಲ್ಲಿ ಕೆಲಸ ಮಾಡ್ತಾ ಇದ್ದೆ’ ಹೇಳುದೇ ನಿಜವಾದ ಬ್ಯುಸಿ ಹೇಳಿ ಎನಗೆ ತೋರ್ತು. ಟ್ರಾಫಿಕ್ ಸೃಷ್ಟಿ ಮಾಡಿದ್ದು ಆರು? ನಾವೇ ಅಲ್ಲದಾ? ರಜ್ಜ ಸಮಯ (ಎರಡು-ಮೂರು ತಿಂಗಳು) ಬೆಂಗ್ಳೂರಿಲ್ಲಿ ಇತ್ತಿದ್ದ ಕಾರಣ ಎನಗೂ ಬೆಂಗ್ಳೂರಿನ ‘ಬ್ಯುಸಿ ಲೈಫ್’ ಗೊಂತಿದ್ದು. ಎನ್ನ ಗೆಳೆಯರೇ ಕೆಲವು ಸರ್ತಿ ಹೇಂಗಿಪ್ಪ ಬ್ಯುಸಿ ಹೇಳಿ ನೋಡಿಯಪ್ಪಗ ಎನಗೂ ಬೆಂಗ್ಳೂರು ಸಾಕಾತು… ಅದು 3 ವರ್ಷ ಹಳೇ ಸಂಗತಿ. ಈಗಾಣ ಬ್ಯುಸಿ ಲೈಫ್ ಇನ್ನೂ ಬ್ಯುಸಿಯಾಗಿದ್ದಡ.
ಅಕ್ಷರಣ್ಣೋ, ಚೆಂದ ಬರದ್ದೆ.. ಆನು ಮುಂದೆ ದೊಡ್ಡಾದ ಮತ್ತೆ ಬೆಂಗ್ಲೂರಿಂಗೆಲ್ಲ ಹೋಪಲಿಲ್ಲೆ.. ಆನು ಮಾಷ್ಟ್ರಪ್ಪದು. ಎನಗೆ ಹೇಳಿಕೊಡುದು ಹೇಳಿರೆ ತುಂಬಾ ಇಷ್ಟ.. ಆರು ಬೆಂಗ್ಳೂರಿಂಗೋಗಿ ಮತ್ತೆ ಸುಮ್ಮನೆ ಅಲ್ಲಿ ಹೊಗೆ ಧೂಳು ತಿಂಬದೂ! ಚಾಕ್ಲೇಟು ತಿಂಬದಾದರೆ ಅಕ್ಕಪ್ಪ! 😉
ಅಕ್ಷಯನ ಪ್ರಶ್ನೆ ಒಂದು ಯಕ್ಷ ಪ್ರಶ್ನೆಯ ಹಾಂಗಿಪ್ಪದು!
ಉದ್ಯೋಗ ಅತೀ ಮುಖ್ಯವಾದ ಅಂಶ ಜೀವನಲ್ಲಿ. ಉದ್ಯೋಗ ಇಲ್ಲದ್ದಿಪ್ಪದು ಶ್ರೇಯಸ್ಕರ ಅಲ್ಲ ಹೇಳುವದು ಎಲ್ಲೋರಿಂಗುದೆ ಗೊಂತಿದ್ದು. (ಉದ್ಯೋಗ ಹೇಳಿರೆ ಎಂತದು ಹೆಂಗಿಪ್ಪದು ಹೇಳುವದು ವಿಚಾರಾರ್ಹ ವಿಷಯ!)
ಉದ್ಯೋಗ ಹೇಳುವದಕ್ಕೆ ನಮ್ಮಲ್ಲಿ ಕೆಲಸ ಹೇಳಿ ಒಂದು ಪದ ಇದ್ದು.
ಊರಿಲ್ಲಿ ಮನೆಲ್ಲಿದ್ದು ಕೃಷಿ ಮಾಡಿಯೊಂಡು ಇದ್ದವನ ಬಗ್ಗೆ “ಅವಂಗೆ ಕೆಲಸ ಇಲ್ಲೆ, ಅವ ಮನೆಲ್ಲೇ ಇಪ್ಪದು” ಹೇಳುವದು ನಮ್ಮ ಊರಿಲ್ಲಿ ಬಹಳವಾಗಿ ಬಳಕೆ ಅಪ್ಪ ಮಾತು.
ಕೃಷಿಯ ಒಂದು ಉದ್ಯೋಗ ಹೇಳಿ ಆರ (ಹೆಚ್ಚಿನವರ) ಬಾಯಿಲ್ಲಿಯುದೆ ಬತ್ತಿಲ್ಲೆ. “ಅವ ಮನೆಲ್ಲಿ ಕೂದ್ದದು/ ಅವನ ಕೆಲಸಕ್ಕೆ ಹೋಗೆಡ ಹೇಳಿ ಮನೆಲ್ಲಿ ಕೂರುಸಿದ್ದದು, ಕೃಷಿಯ ನಂಬಿರೆ ಉದ್ಧಾರ ಆಗ” ಹಿಂಗಿಪ್ಪ ಮಾತುಗೋ ಕಮೆಂಟುಗೊ ಯುವಕರ/ಯುವತಿಯರ ಮೇಲೆ ಪರಿಣಾಮ ಬೀರುತ್ತು. ನಾವು ನಮ್ಮ ಬಗ್ಗೆ ಮಾತಾಡಿಗೊಂಬದರ ಬಗ್ಗೆಯೂ ಜಾಗ್ರತೆ ಇರೆಕು!
ನಗರಲ್ಲಿ ಬೆಳವಣಿಗೆಗೆ (ಕೆಲವು ರೀತಿಯ) ಅವಕಾಶಂಗ ಹೆಚ್ಚು ಹೇಳುವದುದೆ ನಿಜ. ನಗರಜೀವನದ ಬಗ್ಗೆ ಇಪ್ಪ ಆಕರ್ಷಣೆ ಇಂದು ನಿನ್ನೆಯದ್ದಲ್ಲ.
ಮನೇಲೇ ಕೂದವಕ್ಕೆ ಕ್ರಿಶಿ ಮಾಡುವವಕ್ಕೆ ಅವರವರ ಅಪ್ಪಂದ್ರೂ ಬೆಲೆ ಕೊಡ್ತವಿಲ್ಲೆ ಮಹೇಶಣ್ಣೋ!
2001 ರಲ್ಲಿ ಆನು ಬೆಂಗಳೂರಿ೦ಗೆ ಬಪ್ಪಗ ಭಾರಿ ಕೊಶಿ ಆಗಿತ್ತು.ಈಗ ಆನೂ ಇದೆ ಪ್ರಶ್ನೆ ಕೇಳುತ್ತಾ ಇದ್ದೆ ,ಎಂತಗಾರೂ ಆನು ಇಲ್ಲಿಗೆ ಬಂದೆ??ಅಕ್ಷರನ ಪ್ರವೇಶ ರೈಸಿತ್ತದಾ..
ಹಹಾ, ಚೆಂಡೆ ಬಡುದ್ದು ನಿಂಗಳೇ ಅಲ್ದಾ ರಘು ಅಣ್ಣ??!! ಎನ್ನ ಒಪ್ಪಣ್ಣಕ್ಕೆ ಪರಿಚಯ ಮಾಡ್ಸಿದ ದಿನ ಭಾರಿ ಲಾಯ್ಕ ಕಮೆಂಟ್ ಮಾಡಿತ್ತಿರಿ…..
ಅಕ್ಷರ
ಅಕ್ಷರ,
ಪೇಟೆಯ ವಾಸ್ತವ ಚಿತ್ರಣ ಕೊಟ್ಟು, ಜೆನಂಗಳ ಅಭಿಪ್ರಾಯಕ್ಕೆ ಪ್ರಚೋದನೆ ಕೊಟ್ಟ ಲೇಖನ.
ನಿನ್ನ ಅಕ್ಷರ ಕೃಷಿ ಹೀಂಗೆ ಮುಂದುವರಿಯಲಿ
ಧನ್ಯವಾದಂಗೊ
ಬೆಂಗಳೂರಿನ ತಾತ್ಕಾಲಿಕ ವೆವಸ್ಥೆಯ ಬಗ್ಗೆ ಒಳ್ಳೆ ಚಿತ್ರಣ ಕೊಟ್ಟಿದಿ.ಸೌಮ್ಯಕ್ಕ ಹೇಳಿದ ಹಾಂಗೆ ಹೆಚ್ಚಿನವುದೇ ಅನಿವಾರ್ಯ ಹೇಳಿ ಇಲ್ಲಿ ಇಪ್ಪದು ಸತ್ಯ..ಆದರೂ ನಮ್ಮ ಸಂಸ್ಕೃತಿಯ ನಾವು ಒಳಿಶಿಗೊಂಡು ಹೋಪದು ನಮ್ಮ ಕರ್ತವ್ಯ..ಈ ನಿಟ್ಟಿಲಿ ಒಪ್ಪಣ್ಣನ ಬೈಲು ಸಾರ್ಥಕತೆಯ ಪಡದ್ದು..ಒಳ್ಳೆ ಲೇಖನ.. ಧನ್ಯವಾದಂಗೋ…
ಸತ್ಯದ ಮೋರೆಗೆ ಬಡುದ ಹಾಂಗೆ ವಿವರುಸಿ, ಒಂದು ಸತ್ಯ ಸಂಗತಿಯ ಬರದ್ದ ಅಕ್ಷರ. ಏವದೂ ನಮ್ಮ ಕೈಲಿ ಇಲ್ಲೆ. ಎಲ್ಲೋರು ಹಳ್ಳಿಲಿ ಇರೆಕು ಹೇಳಿರು ಕಷ್ಟವೇ. ಹಳ್ಳಿಯೂ ಬೇಕು, ಪೇಟೆಯೂ ಬೇಕು. ಒಂದು ಸಮತೋಲನ ಮಾಡ್ಯೊಂಡು ಹೋಯೆಕಷ್ಟೆ. ನಿನ್ನ ಹೊಸ ಹೊಸ ಲೇಖನಂಗೊ ಬತ್ತಾ ಇರಳಿ.
ತುಂಬಾ ಧನ್ಯವಾದಂಗೊ ಮಾವ.. ನಿಂಗಳೆಲ್ಲರ ಆಶೀರ್ವಾದ ಎನ್ನ ಮೇಲಿರಲಿ…..
ಅಕ್ಷರ
ಅಕ್ಷರನ ಅಕ್ಷರಂಗಳ ಬಗ್ಗೆ ಅಕ್ಷರ ರೂಪಲ್ಲಿ ಬರದು ಹೇಳುದು ಕಷ್ಟ !!
ಎನಗೆ ನಿಜವಾಗಿಯೂ ತುಂಬಾ ಸಂತೋಷ ಆತು 🙂 ಕಾರಣ ಎರಡು
೧] ಬೈಲಿನ ನೆರೆಕರೆಗೆ ಹೊಸ ಸೇರ್ಪಡೆ , ಬೈಲು ಬೆಳೆತ್ತಾ ಇದ್ದು 🙂
೨] ಎಂಗಳ ನೆರೆಕರೆಯ ಮಾಣಿ (ದಿನ ಉದಿಯಾದರೆ ಚೀಲ ಬೆನ್ನಿಂಗೆ ಹಾಕಿ ಕ್ಲಾಸಿಂಗೆ ಓಡ್ತ ಮಾಣಿ) ಬೈಲಿಂಗೆ ಬಂದು ಎಲ್ಲೋರ ನೆರೆಕರೆಯ ಮಾಣಿ ಆದ್ದು 🙂
ಅಕ್ಷರ- ಈ ಶುದ್ದಿ ಲಾಯ್ಕಾಯ್ದು, ಉತ್ತಮ ವಿಚಾರದ ಮೇಲೆ ಬೆಣಚ್ಚು ಚೆಲ್ಲಿದ್ದೆ 🙂 ಪೇಟೆಯ ಬಣ್ಣದ ದೀಪದ ಅಡಿಯಾಣ ಕತ್ತಲಿನೊಳ ಮನಸ್ಸಿನ ನೆಮ್ಮದಿಯ ಕಳಕ್ಕೊಂಬವ್ವು ಆತ್ಮವಿಮರ್ಶೆ ಮಾಡಿಗೊಳ್ಳೆಕಾದ ವಿಷಯ 🙂 ಇನ್ನು ಮುಂದೆಯೂ ಉತ್ತಮ ಶುದ್ದಿಗೊ ಬರಲಿ 🙂
ಸುವರ್ಣಿನಿ ಅಕ್ಕ ತುಂಬಾ ಸಮಯಂದ ಒಪ್ಪಣ್ಣನ ಬೈಲಿಲಿ ಬರೆ ಮಾರಾಯ ಹೇಳಿ ಹೇಳಿಕೊಂಡಿತ್ತವು. ಆನೇ ರಜ್ಜ ತಡ ಮಾಡಿದೆ. ಮತ್ತೆ ಗುರಿಕ್ಕಾರ್ರಿಂದೂ ಮೋರೆಪುಟಲ್ಲಿ ಮೆಸೇಜ್ ಬಂತು. ಇಲ್ಲದಿದ್ದರೆ ಇನ್ನೂ ಆನು ಹವ್ಯಕಲ್ಲಿ ಬರವಲೆ ಸುರು ಮಾಡ್ತಿತ್ತಿಲ್ಲೆ…….
ಸುವರ್ಣಿನಿ ಅಕ್ಕ……
ಮಹೇಶಣ್ಣ……..
…….. ತುಂಬಾ ಧನ್ಯವಾದಂಗೊ.
ಅಕ್ಷರ
ಮಂಗಳೂರ ಮಾಣಿಗೆ ಬೆಂಗಳೂರು ಗೊಂತಿಲ್ಲೆ:(
ಒಂದು ಸರ್ತಿ NSSನ Republic Parade ಗೆ March ಮಾಡುಲೆ ಹೊಗಿತ್ತಿದ್ದೆ… ಎಂತ ಉರೋ?? ಆ ಮೆಜೆಸ್ಟಿಕ್ಕು bus stand ಲಿ ೨ ಘಂಟೆ ಕಾದ್ದದೆ ನೆಮ್ಪಿಪ್ಪದು ಲಾಯಕಕ್ಕೆ. :):)
ondu peeligeya ಉಳಿಸಿ ಬೆಳೆಸಿದ ಊರು ಬೆಂಗಳೂರು.enagoo alliyana rush hita avtille.ಆದರೆ ಐ ಟಿ ಬೆಳೆದ ಮೇಲೆ ನಮ್ಮವಕ್ಕೆ ತುಂಬಾ ಉಪಕಾರ aayidu heludara maravalediya.ellara ಮಾತಿಲೂ ಸರಿಯಾದ ವಾದಂಗೋ ಇದ್ದು, ಕಾಲಾಯ ತಸ್ಮೈ ನಮಃ
Olle lekhana bhava.
Mathra aanu illi heliddadara opputthille. Busy – Tension heli heludella summane. Anude IT ge bandu 2.5 varsha aathu. Hangippa busy tension yenthadu yenage baindille. Appu ooringe ambagambaga bappale avutthille helire berentha samasyeyu ile. Varalli 2 dina raje iddu.
Ee busy, tension helthavakke weekend cinema, party heli thirugule purusotthu iddu. Idella thorikege. IT li ippa hecchinavude dinakke 5-6 ganenda hecchina productive kelasa madthaville. ondu 10% exception.
Innondari aararu nammvakke kodle yediyadda samaya iddareshtu illadreshtu.
ದಿನಕ್ಕೆ ೩ ಘಂಟೆ ಪ್ರಯಾಣ ಮಾಡುದು ಇಲ್ಲಿ ಸಾಮಾನ್ಯ. ಅಷ್ಟು ಪ್ರಯಾಣ ಮಾಡಿ ಅಪ್ಪಗ ಸುಸ್ತಾಗಿ ಸಮಯ ಇದ್ದರು ಕೂಡ ಇನ್ನೊಬ್ಬರೊಟ್ಟಿಂಗೆ ಮಾತಾಡುವ ಮನಸಾವುತ್ತಿಲ್ಲೆ. ಇದು ವಾಸ್ತವ. ಮನೆ ಹತ್ತರೆ ಆಪೀಸು ಇಪ್ಪ ಪುಣ್ಯವಂತರ ಕಥೆ ಬೇರೆ. ಇನ್ನು ಮೆನೇಜರ್ ಮಣ್ಣ ಆದರೆ ಕೇಳುದೇ ಬೇಡ. ಒಂದು ಎಂಟು-ಹತ್ತು ವರ್ಷ ಎಕ್ಸ್ಪೀರಿಯೆನ್ಸ್ ಆದ ಮೇಲೆ ಬರೇ ಇಂಡಿವಿಜುವಲ್ ಕಾಂಟ್ರಿಬ್ಯೂಶನ್ ಮಾಡಿದರೆ ಅದಕ್ಕೆ ಬೆಲೆ ಇಲ್ಲೆ. ಅದಕ್ಕೇ ಸುಮಾರು ಜನ ಇಷ್ಟ ಇಲ್ಲಾರೂ ಮೆನೇಜ್ ಮೆಂಟ್ ಗೆ ಇಳಿಯೆಕ್ಕಾವುತ್ತು. ಅಷ್ಟಪ್ಪಗ ದಿನಕ್ಕೆ ಇಪ್ಪತ್ತನಾಲಕ್ಕು ಘಂಟೆಯೂ ಸಾಲ.
{ಬೆಂಗಳೂರಿಂಗೆ ಹೋಗದ್ದರೆ ಕೂಸು ಸಿಕ್ಕುತ್ತಿಲ್ಲೆ}
ಇದು ಎನ್ನ ಗೆಳೆಯನೊಬ್ಬನ ನೋವಿನ ಕಥೆ ಕೂಡಾ ಅವ ಆರು ಎಂತ ಎಲ್ಲ ಬೇಡ.. ಅವನ ಹತ್ತರೆ ಮಾತಾಡುವಗ ಕರುಳು ಕಿತ್ತು ಬಂದ ಹಾಂಗೆ ಆವುತ್ತು. ಸಭ್ಯ ಒಳ್ಳೆ ಮನಸಿನ ಚುರುಕು ಹುಡುಗ. ವಿದ್ಯೆ (ಈಗಾಣ ಅರ್ಥಲ್ಲಿ) ಅಷ್ಟು ತಲೆಗೆ ಹತ್ತಿದ್ದಿಲ್ಲೆ ಆದರೆ ಬುಧ್ಧಿವಂತಿಕೆಗೆ ಕಮ್ಮಿ ಇಲ್ಲೆ. ಆದರೆ ಎಂತ ಮಾಡುದು, ಬೆಂಗಳೂರಿಲಿ ಕೆಲಸ ಸಿಕ್ಕಿದ್ದಿಲ್ಲೆ, ಅದಕ್ಕೆ ಕೂಸು ಸಿಕ್ಕುತ್ತಿಲ್ಲೆಡ. ಮನೆಲಿ ಸಾಕಷ್ಟು ಅನುಕೂಲ ಇದ್ದುದೆ.
ಈ ಸಮಸ್ಯೆ ದೊಡ್ಡಾಕೆ ಇದ್ದು.
ಬ್ರಾಹ್ಮಣೇತರ ಕೂಸುಗಳ ತಪ್ಪಲೆ(ಅನಾಥಾಶ್ರಮಂಗಳಿಂದಲೂ) ಧಾರಾಳ ಸುರುವಾಯಿದು.
ಹಿಂದೆಯೂ ಇತ್ತಡ=( ಓದಿ-“ತುಳುನಾಡು”-ಡಾ. ಗುರುರಾಜ ಭಟ್)
ಸಮಸ್ಯೆ ಎಂತರ ಹೇಳ್ರೆ- ಬ್ರಾಹ್ಮಣ್ಯ ಕಡಮ್ಮೆ ಆಯಿದು; ಸಂಸ್ಕಾರ ಕಡಮ್ಮೆ ಆಯಿದು; ಅನುಷ್ಠಾನ ಇಲ್ಲೆ;
ಈ ಸಮಸ್ಯೆಗೆ ಪರಿಹಾರ ಎ೦ತರ? ಹಾ೦ಗಿಪ್ಪ ಮಾಣಿಯ೦ಗಳ ಮು೦ದಾಣ ಭವಿಷ್ಯ ಎ೦ತರ? ಅವರ ಕೌಟು೦ಬಿಕ ಜೀವನದ ಕತೆ ಎ೦ತರ?
ಇದಕ್ಕೆಲ್ಲಾ ಉತ್ತರ ಹೇಳದ್ರೆ ನಿನ್ನ ತಲೆ ಒಡದು ಸಾವಿರ ಹೋಳು ಅಕ್ಕು ಹೇಳಿ ಹೇಳ್ತಿಯೋ ಹೇಳಿ ಗ್ರೇಶಿದೆ. ಸದ್ಯ ಹಾಂಗೆ ಹೇಳಿದ್ದಿಲ್ಲೆ, ನೀನು !
ಪರಿಹಾರ ಎಂತೂ ಕಾಣುತ್ತಿಲ್ಲೆ. ಕಾಲಕ್ಕೆ ತಕ್ಕ ಹಾಂಗೆ ಕೋಲ ಹೇಳಿ ಹೇಳೆಕಷ್ಟೆ.
{ಹೀಂಗಿಪ್ಪ ಪರಿಸ್ಥಿತಿಲ್ಲಿಯೂ ನಮ್ಮಲ್ಲೇ ತುಂಬಾ ಜನ ಎಂತಕೆ ಹಳ್ಳಿಂದ ಹೋಗಿ ಬೆಂಗಳೂರಿಲಿ ಸೆಟ್ಲ್ ಆವ್ತವು}
ಇದಕ್ಕೆ ಉತ್ತರ ತುಂಬಾ ಸುಲಭ. ಕೆಲವದರ ಇಲ್ಲಿ ಪಟ್ಟಿ ಮಾಡುತ್ತೆ. ಇದು ಎನ್ನ ಅನುಭವ ಅಥವಾ ಅನಿಸಿಕೆ :
೧. ಬೆಂಗಳೂರಿಂಗೆ ಹೋಗದ್ದರೆ ಕೂಸು ಸಿಕ್ಕುತ್ತಿಲ್ಲೆ
೨. ಬೆಂಗಳೂರಿಂಗೆ ಹೋಗದ್ದರೆ ಪ್ರಿಜ್ಜು, ವಾಶಿಂಗ್ ಮೆಶೀನು, ಡಿಶ್ ಟಿವಿ ಮತ್ತೆ ಕಂಪ್ಯೂಟರ್ ತೆಕ್ಕೊಂಬಲೆ ಕಷ್ಟ
೩. ಎಜುಕೇಶನ್ ಸಾಲ ತೀರ್ಸುಲೆ ಹೋಪದು, ಮತ್ತೆ ಬಪ್ಪಲೆ ಮನಸಾವುತ್ತಿಲ್ಲೆ
೪. ಮನೆಲಿ ಕಷ್ಟ ಇದ್ದು, ಜೀವನಕ್ಕೆ ಸಂಪಾದನೆ ಬೇಕು (ಈ ಕೆಟಗರಿಯವು ತುಂಬಾ ಜನ ಇಲ್ಲೆ ಹೇಳಿ ಅನ್ಸುತ್ತು)
೫. ಊರಿಲಿ ಇದ್ದರೆ ಮರ್ಯಾದೆ ಇಲ್ಲೆ
೬. ಊರಿಲಿ ಸಾಂಪ್ರದಾಯಿಕ ಕೃಷಿ ಬಿಟ್ಟರೆ ಬೇರೆ ಉದ್ಯೋಗ ಮಾರ್ಗದ ಅರಿವಿಲ್ಲೆ ಅಥವಾ ಅವಕಾಶ ಕಮ್ಮಿ
೭. ಕೃಷಿಲಿ ಬಪ್ಪ ಉತ್ಪಾದನೆಗೆ ಹೊಂದುವ ಜೀವನ ಶೈಲಿ ಇಲ್ಲೆ
೮. ಎಲ್ಲರೂ ಹೋಪದು ಹೇಳಿ ಹೋಪದು (ಹೆಚ್ಚಿನವೆಲ್ಲಾ ಇದೇ ಕೆಟಗರಿ ಹೇಳಿ ಕಾಣುತ್ತು)
೯. ತಂತ್ರಜ್ನಾನ ಹಣಕಾಸು ಇತ್ಯಾದಿ ಸಬ್ಜೆಕ್ಟ್ ಗಳಲ್ಲಿ ಹೆಚ್ಚು ಆಸಕ್ತಿ, ದೊಡ್ಡ ಮಟ್ಟಲ್ಲಿ, ಪರದೇಶಲ್ಲಿ ಸಾಧನೆ ಮಾಡುವ ಹುಮ್ಮಸ್ಸು
೧೦. ಪೇಟೆ ಜಾಗೆಲಿ ಹೆಚ್ಚು ಉತ್ಪಾದನೆ (real estate) ಹೇಳುವ ತಪ್ಪು ನಂಬಿಕೆ
ಎನಗೆ ತಿಳುದ ಕಾರಣ ಮಾತ್ರ ಪಟ್ಟಿ ಮಾಡಿದ್ದೆ. ಸರಿ ತಪ್ಪು ಹೇಳುವ ಅರ್ಥಲ್ಲ್ಲಿ(Judgemental) ಅಲ್ಲ.
{೧೦. ಪೇಟೆ ಜಾಗೆಲಿ ಹೆಚ್ಚು ಉತ್ಪಾದನೆ (real estate) ಹೇಳುವ ತಪ್ಪು ನಂಬಿಕೆ}
ಇದರ “೧೦. ಪೇಟೆ ಜಾಗೆಲಿ ಹೆಚ್ಚು ಉತ್ಪಾದನೆ (real estate) ಹೇಳುವ ಕಾರಣಕ್ಕೆ” ಹೇಳಿ ಓದೆಕ್ಕು ಹೇಳಿ ಕೋರಿಕೆ.
ಅಪ್ಪು. ಒಬ್ಬೊಬ್ಬರ ಜೀವನಲ್ಲಿಯೂ ಅವರವರದ್ದೇ ಆದ ಕಾರಣ ಇರ್ತು. ಹಾಂಗಾಗಿಯೇ ಆನು ಪಟ್ಟಿ ಮಾಡಿದ್ದಿಲ್ಲೆ. ಅವರವರ ಕಾರಣವ ಅವ್ವವ್ವೇ ಹುಡುಕಿಕೊಂಡು ಹೇಳಲಿ ಹೇಳಿ ಕಂಡತ್ತು.
Appachhi, Benagaloru athava yavude nagarakke Hopale swalpa mattige oorina vaatavaranade karana… Kalivadu petage hogi kelsa madle heliye hecchinavara bhavane..,Atu collage aagi maneliyee koodare yavude jambarakke hodaruu modalige hechhinavvu keluva prashne neenatha maneli kooddu heli!!, ontara ee tarada prashnego kooda manasikavagi parinama beluttu..
Adare petage hogi havyakaru arthikavagi rajja drdha aydavu heludu nija… Halli olledu kaili yavude arthika samasye illadre…Kela madyama vargadavakke ondu sthithi bappa varege pete jeevana anivarya.. Hecchinavvu innu 2 varshalli oorige hopadu heli hodavu 20 varsha kaledaruu alle ippadu viparyasa… Ee kalalli pete jevana ondu mattige anivarya, adare nammade ondu target madugi adu reach ada koodale oorige hopadu uttama heli nanna anisike…
ಎನಗೆ ಬೆಂಗ್ಳೂರಿಲಿ ಮೂರು ನಾಕು ವರ್ಶ ಇದ್ದದರ್ಲೇ ಜಿಗುಪ್ಸೆ ಬಯಿಂದು. ಇದ್ದಷ್ಟು ಸಮಯ ಎನ್ನ ರೂಮಿನ ಕೆಳಾಣ ಹಂತಲ್ಲಿಯೇ ಮನೆ ಇದ್ದ ಓನರಿನ ಕೂಡ ಮಾತಾಡ್ಸಿದ್ದಿಲ್ಲೆ ಬೌಷ. ರಘುಮಾವ ಹೇಳ್ತವು ಏವತ್ತು, ಬೆಂಗ್ಳೂರಿಲಿ ದೂರವ ಗಂಟೆ ಲೆಕ್ಕಲ್ಲಿ ಹೇಳೆಕ್ಕಾವುತ್ತು ಹೇಳಿ.. ಕೆಲವರಿಂಗೆ ಬೆಂಗ್ಳೂರು ಅನಿವಾರ್ಯ, ಕೆಲವರಿಂಗೆ ಹೊಟ್ಟೆಪಾಡು, ಕೆಲವರಿಂಗೆ ಕನಸುಗಳ ನನಸು ಮಾಡ್ಲಿಪ್ಪ ಜಾಗೆ, ಕೆಲವರಿಂಗೆ ದೂರದ ಬೆಟ್ಟ ಕಣ್ಣಿಂಗೆ………….. 😉
ಅಂತೂ ನೆಮ್ಮದಿ ನಮ್ಮೊಳವೇ ಇದ್ದು, ಬೆಂಗ್ಳೂರಿಲಿಪ್ಪಾಗ ತುಂಬಾ ಬಿಸಿ ಇಪ್ಪ ಕಾರಣ, ನಮ್ಮೊಳವೇ ಇದ್ದರೂ ಹುಡ್ಕುಲೆ ಪುರುಸೊತ್ತಾವ್ತಿಲ್ಲೆ! ಅಷ್ಟೆ! 🙂 ಒಳ್ಳೆ ಲೇಖನ ಅಕ್ಷರಣ್ಣೋ! ನಿನ್ನ ಬ್ಲಾಗುದೆ ನೋಡಿದೆ, ಚೆಂದ ಬರೆತ್ತೆ! 🙂
ತುಂಬಾ ಧನ್ಯವಾದಂಗೊ. ಸಾಧ್ಯವಾದರೆ ಎನ್ನ ಬ್ಲಾಗ್ ಲಿದೆ ಕಮೆಂಟ್ ಮಾಡಿ.
ಅಕ್ಷರ
ಒಟ್ಟಾರೆ ಬೆಂಗಳೂರು ಹತ್ತುತ್ತ ಮರ್ಳು ಜನ೦ಗೊಕ್ಕೆ.. 🙁
ಬೆಂಗಳೂರಿಲಿ ಜನ ಒಟ್ಟು ಜೀವನದ ಅರ್ಧ ಭಾಗದಷ್ಟು ಟ್ರಾಫಿಕ್ಕಿಲೇ ಕಳತ್ತವು ಅಲ್ಲದಾ… 😉
ಲೇಖನ ಒಪ್ಪ ಆಯಿದು. ಒಪ್ಪಂಗಳೊಟ್ಟಿಂಗೆ…
ತುಂಬಾ ಧನ್ಯವಾದಂಗೊ
ಅಕ್ಷರ ಮಾಣಿ,ನಿನಗೆ ಬಂದ ಸಂಶಯ ಬೆಂಗಳೂರಿಂಗೆ ಬಂದ ಸುರುವಿಂಗೆ ಎನಗೂ ಬಯಿಂದು “ಎಂತಕೆ ಎಲ್ಲರೂ ಬೆಂಗಳೂರಿಂಗೆ ಬತ್ತವಪ್ಪಾ!!!” ಹೇಳಿ.. ಆನು ಅನಿವಾರ್ಯ ಆದ ಕಾರಣ ಇಲ್ಲಿ ಇಪ್ಪದು..ಎನಗೆ ಈಗಳೂ ನಮ್ಮ ಊರೇ ತುಂಬಾ ಇಷ್ಟ..ಎನಗೂ ಇಲ್ಲಿಯಾಣ ಪುರ್ಸೋತ್ತಿಲ್ಲದ್ದೆ ಓಡುವ ಜೀವನ ಇಷ್ಟ ಆಯಿದಿಲ್ಲೆ.. ನಮ್ಮ ಹುಟ್ಟೂರಿಲಿಪ್ಪ ಆತ್ಮೀಯತೆ ಈ ಬೆಂಗಳೂರಿಲಿ ಇಲ್ಲೆ.. ಅಷ್ಟಪ್ಪಗ ಇಲ್ಲಿ ಊರಿನ ಆತ್ಮೀಯತೆ ಸೃಷ್ಟಿ ಮಾಡಿಕೊಟ್ಟದು ನಮ್ಮ ಬೈಲು…ಇದರ ಆನು ಯಾವತ್ತೂ ಮರೆಯೆ…ಒಪ್ಪಣ್ಣ ಊರಿನ ಸುದ್ದಿಗೊ ಹೇಳುವಗ ಒಂದರಿ ಊರಿಂಗೆ ಹೋಗಿ ಬಂದ ಹಾಂಗಾವುತ್ತು… 🙂
ಅದಪ್ಪು. ಎನಗುದೆ ಬೈಲಿಲ್ಲಿ ಎನ್ನ ಪರಿಚಯ ಮಾಡ್ಸಿಯಪ್ಪಗಳೇ ಅಷ್ಟು ಜನ ಸ್ವಾಗತ ಮಾಡಿದ್ದು ನೋಡಿ ತುಂಬಾ ಖುಷಿ ಆತು.