- ಶಂಕರಾಚಾರ್ಯ ವಿರಚಿತ “ಆತ್ಮ ಷಟ್ಕಮ್” - April 28, 2012
- ಶ್ರೀ ವ್ಯಾಸಕೃತ ರಾಮಾಷ್ಟಕಮ್ - April 1, 2012
- ಅರ್ಘ್ಯೆಜೆಪ : ಸಂಧ್ಯಾವಂದನೆ - November 28, 2011
ಲಲಿತಾ ಸಹಸ್ರ ನಾಮ ಓದಿತ್ತು, ಕಳುದ ಶುದ್ದಿಲಿ.
ಸಹಸ್ರನಾಮ ಓದಿದ ಕೂಡ್ಳೆ ಓದೆಕ್ಕಪ್ಪದು ಅಷ್ಟೋತ್ತರಶತ.
ದುರ್ಗಾಪೂಜೆಯ ದಿನ ಲಲಿತಾಸಹಸ್ರನಾಮ ಪಾರಾಯಣ ಆದ ಮತ್ತೆ, ರಾಗಲ್ಲಿ ‘ನಮಹಾ – – ನಮಹಾ…!’ ಹೇಳಿ ಬಟ್ಟಮಾವಂದ್ರು ಹೇಳುದರ ನಿಂಗೊ ಕೇಳಿಪ್ಪಿ.. ಅಲ್ಲದೋ? ಅದುವೇ ಇದು.
ಅಷ್ಟೋತ್ತರಶತ (ಅಷ್ಟ + ಉತ್ತರ + ಶತ = ಎಂಟು ಜಾಸ್ತಿ ನೂರರಿಂದ) ಹೇಳಿತ್ತು ಕಂಡ್ರೆ ಎಂತರ?
ಸಹಸ್ರನಾಮಲ್ಲಿ ಸಾವಿರ ವಿವಧ ಹೆಸರಿಲಿ ಕೊಂಡಾಡಿದ ಶಕ್ತಿಯ, ಮತ್ತೆ ನೂರ ಎಂಟು ಹೆಸರಿಂದ ಕೊಂಡಾಡಿ, ಸಂತುಷ್ಟಗೊಳಿಸುದು.
ನಮ್ಮಲ್ಲಿ ಏವದನ್ನುದೇ ಸಾವಿರಲ್ಲಿ ನಿಲ್ಲುಸುತ್ತ ಜೆಂಬಾರ ಇಲ್ಲೆ. ಅಕೇರಿಗೆ ಸೊನ್ನೆ ಬತ್ತ ಕಾರಣವೋ ಏನೋ! ಉಮ್ಮ!!, ಶಾಸ್ತ್ರಿಗಳ ಹತ್ರೆ ಕೇಳೆಕ್ಕಷ್ಟೆ..
ಅಂತೂ, ಅದರ ಹೇಳಿಕ್ಕಿ ಇದರ ಹೇಳ್ತದು ಕ್ರಮ.
ಇದಾ, ಸಹಸ್ರನಾಮದ ಮತ್ತಾಣ ನೂರೆಂಟು ಹೆಸರಿನ ಸಾಲು:
ಅದು ಓದಿ ಆದರೆ ಇದು..
ಓಂ – ಐಂ – ಹ್ರೀಂ – ಶ್ರೀಮ್ ||
ರಜತಾಚಲಶೃಂಗಾಗ್ರಮಧ್ಯಸ್ಥಾಯೈ ನಮೋ ನಮಃ || 1 ||
ಹಿಮಾಚಲಮಹಾವಂಶಪಾವನಾಯೈ ನಮೋ ನಮಃ ||
ಶಂಕರಾರ್ಧಾಂಗಸೌಂದರ್ಯಶರೀರಾಯೈ ನಮೋ ನಮಃ ||
ಲಸನ್ಮರಕತಸ್ವಚ್ಛವಿಗ್ರಹಾಯೈ ನಮೋ ನಮಃ ||
ಮಹಾತಿಶಯಸೌಂದರ್ಯಲಾವಣ್ಯಾಯೈ ನಮೋ ನಮಃ||
ಶಶಾಂಕಶೇಖರಪ್ರಾಣವಲ್ಲಭಾಯೈ ನಮೋ ನಮಃ||
ಸದಾಪಂಚದಶಾತ್ಮೈಕ್ಯಸ್ವರೂಪಾಯೈ ನಮೋ ನಮಃ||
ವಜ್ರಮಾಣಿಕ್ಯಕಟಕಕಿರೀಟಾಯೈ ನಮೋ ನಮಃ||
ಕಸ್ತೂರೀತಿಲಕೋಲ್ಲಾಸನಿಟಿಲಾಯೈ ನಮೋ ನಮಃ||
ಭಸ್ಮರೇಖಾಂಕಿತಲಸನ್ಮಸ್ತಕಾಯೈ ನಮೋ ನಮಃ||
ವಿಕಚಾಂಭೋರುಹದಲಲೋಚನಾಯೈ ನಮೋ ನಮಃ||
ಶರಚ್ಚಾಂಪೇಯಪುಷ್ಪಾಭನಾಸಿಕಾಯೈ ನಮೋ ನಮಃ||
ಲಸತ್ಕಾಂಚನತಾಟಂಕಯುಗಲಾಯೈ ನಮೋ ನಮಃ||
ಮಣಿದರ್ಪಣಸಂಕಾಶಕಪೋಲಾಯೈ ನಮೋ ನಮಃ||
ತಾಂಬೂಲಪೂರಿತಸ್ಮೇರವದನಾಯೈ ನಮೋ ನಮಃ||
ಸುಪಕ್ವದಾಡಿಮೀಬೀಜರದನಾಯೈ ನಮೋ ನಮಃ||
ಕಂಬುಪೂಗಸಮಚ್ಛಾಯಕಂಧರಾಯೈ ನಮೋ ನಮಃ||
ಸ್ಥೂಲಮುಕ್ತಾಫಲೋದಾರಸುಹಾರಾಯೈ ನಮೋ ನಮಃ||
ಗಿರೀಶಬದ್ಧಮಾಂಗಲ್ಯಮಂಗಳಾಯೈ ನಮೋ ನಮಃ||
ಪದ್ಮಪಾಶಾಂಕುಶಲಸತ್ಕರಾಬ್ಜಾಯೈ ನಮೋ ನಮಃ||
ಪದ್ಮಕೈರವಮಂದಾರಸುಮಾಲಿನ್ಯೈ ನಮೋ ನಮಃ||
ಸುವರ್ಣಕುಂಭಯುಗ್ಮಾಭಸುಕುಚಾಯೈ ನಮೋ ನಮಃ||
ರಮಣೀಯಚತುರ್ಬಾಹುಸಂಯುಕ್ತಾಯೈkopie horloges verkoopನಮೋ ನಮಃ||
ಕನಕಾಂಗದಕೇಯೂರಭೂಷಿತಾಯೈ ನಮೋ ನಮಃ||
ಬೃಹತ್ಸೌವರ್ಣಸೌಂದರ್ಯವಸನಾಯೈ ನಮೋ ನಮಃ||
ಬಹನ್ನಿತಂಬವಿಲಸಜ್ಜಘನಾಯೈ ನಮೋ ನಮಃ||
ಸೌಭಾಗ್ಯಜಾತಶೃಂಗಾರಮಧ್ಯಮಾಯೈ ನಮೋ ನಮಃ||
ದಿವ್ಯಭೂಷಣಸಂದೋಹರಂಜಿತಾಯೈ ನಮೋ ನಮಃ||
ಪಾರಿಜಾತಗುಣಾಧಿಕ್ಯಪದಾಬ್ಜಾಯೈ ನಮೋ ನಮಃ||
ಸುಪದ್ಮರಾಗಸಂಕಾಶಚರಣಾಯೈ ನಮೋ ನಮಃ||
ಕಾಮಕೋಟಿಮಹಾಪದ್ಮಪೀಠಸ್ಥಾಯೈ ನಮೋ ನಮಃ||
ಶ್ರೀಕಂಠನೇತ್ರಕುಮುದಚಂದ್ರಿಕಾಯೈ ನಮೋ ನಮಃ||
ಸಚಾಮರರಮಾವಾಣೀವೀಜಿತಾಯೈ ನಮೋ ನಮಃ||
ಭಕ್ತರಕ್ಷಣದಾಕ್ಷಿಣ್ಯಕಟಾಕ್ಷಾಯೈ ನಮೋ ನಮಃ||
ಭೂತೇಶಾಲಿಂಗನೋದ್ಭೂತಪುಲಕಾಂಗ್ಯೈ ನಮೋ ನಮಃ||
ಅನಂಗಜನಕಾಪಾಂಗವೀಕ್ಷಣಾಯೈ ನಮೋ ನಮಃ||
ಬ್ರಹ್ಮೋಪೇಂದ್ರಶಿರೋರತ್ನರಂಜಿತಾಯೈ ನಮೋ ನಮಃ||
ಶಚೀಮುಖ್ಯಾಮರಮಧೂಸೇವಿತಾಯೈ ನಮೋ ನಮಃ||
ಲೀಲಾಕಲ್ಪಿತಬ್ರಹ್ಮಾಂಡಮಂಡಲಾಯೈ ನಮೋ ನಮಃ||
ಅಮೃತಾದಿಮಹಾಶಕ್ತಿಸಂವೃತಾಯೈ ನಮೋ ನಮಃ||
ಏಕಾತಪತ್ರಸಾಮ್ರಾಜ್ಯದಾಯಿಕಾಯೈ ನಮೋ ನಮಃ||
ಸನಕಾದಿಸಮಾರಾಧ್ಯಪಾದುಕಾಯೈ ನಮೋ ನಮಃ||
ದೇವರ್ಷಿಭಿಸ್ಸ್ತೂಯಮಾನುವೈಭವಾಯೈ ನಮೋ ನಮಃ||
ಕಲಶೋದ್ಭವದೂರ್ವಾಸಃಪೂಜಿತಾಯೈ ನಮೋ ನಮಃ||
ಮತ್ತೇಭವಕ್ತ್ರಷಡ್ವಕ್ತ್ರವತ್ಸಲಾಯೈ ನಮೋ ನಮಃ||
ಚಕ್ರರಾಜಮಹಾಯಂತ್ರಮಧ್ಯವರ್ತಿನ್ಯೈ ನಮೋ ನಮಃ||
ಚಿದಗ್ನಿಕುಂಡಸಂಭೂತಸುದೇಹಾಯೈ ನಮೋ ನಮಃ||
ಶಶಾಂಕಖಂಡಸಂಯುಕ್ತಮಕುಟಾಯೈ ನಮೋ ನಮಃ||
ಮತ್ತಹಂಸವಧೂಮಂದಗಮನಾಯೈ ನಮೋ ನಮಃ||
ವಂದಾರುಜನಸಂದೋಹವಂದಿತಾಯೈ ನಮೋ ನಮಃ||
ಅಂತರ್ಮುಖಜನಾನಂದಫಲದಾಯೈ ನಮೋ ನಮಃ||
ಪತಿವ್ರತಾಂಗನಾಭೀಷ್ಟಫಲದಾಯೈ ನಮೋ ನಮಃ||
ಅವ್ಯಾಜಕರುಣಾಪೂರಪೂರಿತಾಯೈ ನಮೋ ನಮಃ||
ನಿತಾಂತಸಚ್ಚಿದಾನಂದಸಂಯುಕ್ತಾಯೈ ನಮೋ ನಮಃ||
ಸಹಸ್ರಸೂರ್ಯಸಂಯುಕ್ತಪ್ರಕಾಶಾಯೈ ನಮೋ ನಮಃ||
ರತ್ನಚಿಂತಾಮಣಿಗೃಹಮಧ್ಯಸ್ಥಾಯೈ ನಮೋ ನಮಃ||
ಹಾನಿವೃದ್ಧಿಗುಣಾಧಿಕ್ಯರಹಿತಾಯೈ ನಮೋ ನಮಃ||
ಮಹಾಪದ್ಮಾಟವೀಮಧ್ಯನಿವಾಸಾಯೈ ನಮೋ ನಮಃ||
ಜಾಗ್ರತ್ಸ್ವಪ್ನಸುಷುಪ್ತೀನಾಂ ಸಾಕ್ಷಿಭೂತ್ಯೈ ನಮೋ ನಮಃ||
ಮಹಾಪಾಪೌಘಪಾಪಾನಾಂ ವಿನಾಶಿನ್ಯೈ ನಮೋ ನಮಃ||
ದುಷ್ಟಭೀತಿಮಹಾಭೀತಿಭಂಜನಾಯೈ ನಮೋ ನಮಃ||
ಸಮಸ್ತದೇವದನುಜಪ್ರೇರಕಾಯೈ ನಮೋ ನಮಃ||
ಸಮಸ್ತಹೃದಯಾಂಭೋಜನಿಲಯಾಯೈ ನಮೋ ನಮಃ||
ಅನಾಹತಮಹಾಪದ್ಮಮಂದಿರಾಯೈ ನಮೋ ನಮಃ||
ಸಹಸ್ರಾರಸರೋಜಾತವಾಸಿತಾಯೈ ನಮೋ ನಮಃ||
ಪುನರಾವೃತ್ತಿರಹಿತಪುರಸ್ಥಾಯೈ ನಮೋ ನಮಃ||
ವಾಣೀಗಾಯತ್ರೀಸಾವಿತ್ರೀಸನ್ನುತಾಯೈ ನಮೋ ನಮಃ||
ರಮಾಭೂಮಿಸುತಾರಾಧ್ಯಪದಾಬ್ಜಾಯೈ ನಮೋ ನಮಃ||
ಲೋಪಾಮುದ್ರಾರ್ಚಿತಶ್ರೀಮಚ್ಚರಣಾಯೈ ನಮೋ ನಮಃ||
ಸಹಸ್ರರತಿಸೌಂದರ್ಯಶರೀರಾಯೈ ನಮೋ ನಮಃ||
ಭಾವನಾಮಾತ್ರಸಂತುಷ್ಟಶರೀರಾಯೈ ನಮೋ ನಮಃ||
ಸತ್ಯಸಂಪೂರ್ಣವಿಜ್ಞಾನಸಿದ್ಧಿದಾಯೈ ನಮೋ ನಮಃ||
ತ್ರಿಲೋಚನಕೃತೋಲ್ಲಾಸಫಲದಾಯೈ ನಮೋ ನಮಃ||
ಶ್ರೀಸುಧಾಬ್ಧಿಮಣಿದ್ವೀಪಮಧ್ಯಗಾಯೈ ನಮೋ ನಮಃ||
ದಕ್ಷಾಧ್ವರವಿನಿರ್ಭೇದಸಾಧನಾಯೈ ನಮೋ ನಮಃ||
ಶ್ರೀನಾಥಸೋದರೀಭೂತಶೋಭಿತಾಯೈ ನಮೋ ನಮಃ||
ಚಂದ್ರಶೇಖರಭಕ್ತಾರ್ತಿಭಂಜನಾಯೈ ನಮೋ ನಮಃ||
ಸರ್ವೋಪಾಧಿವಿನಿರ್ಮುಕ್ತಚೈತನ್ಯಾಯೈ ನಮೋ ನಮಃ||
ನಾಮಪಾರಾಯಣಾಭೀಷ್ಟಫಲದಾಯೈ ನಮೋ ನಮಃ||
ಸೃಷ್ಟಿಸ್ಥಿತಿತಿರೋಧಾನಸಂಕಲ್ಪಾಯೈ ನಮೋ ನಮಃ||
ಶ್ರೀಷೋಡಶಾಕ್ಷರೀಮಂತ್ರಮಧ್ಯಗಾಯೈ ನಮೋ ನಮಃ||
ಅನಾದ್ಯಂತಸ್ವಯಂಭೂತದಿವ್ಯಮೂರ್ತ್ಯೈ ನಮೋ ನಮಃ||
ಭಕ್ತಹಂಸಪರೀಮುಖ್ಯವಿಯೋಗಾಯೈ ನಮೋ ನಮಃ||
ಮಾತೃಮಂಡಲಸಂಯುಕ್ತಲಲಿತಾಯೈ ನಮೋ ನಮಃ||
ಭಂಡದೈತ್ಯಮಹಾಸತ್ವನಾಶನಾಯೈ ನಮೋ ನಮಃ||
ಕ್ರೂರಭಂಡಶಿರಚ್ಛೇದನಿಪುಣಾಯೈ ನಮೋ ನಮಃ||
ಧಾತ್ರಚ್ಯುತಸುರಾಧೀಶಸುಖದಾಯೈ ನಮೋ ನಮಃ||
ಚಂಡಮುಂಡನಿಶುಂಭಾದಿಖಂಡನಾಯೈ ನಮೋ ನಮಃ||
ರಕ್ತಾಕ್ಷರಕ್ತಜಿಹ್ವಾದಿಶಿಕ್ಷಣಾಯೈ ನಮೋ ನಮಃ||
ಮಹಿಷಾಸುರದೋರ್ವೀರ್ಯನಿಗ್ರಹಾಯೈ ನಮೋ ನಮಃ||
ಅಭ್ರಕೇಶಮಹೋತ್ಸಾಹಕಾರಣಾಯೈ ನಮೋ ನಮಃ||
ಮಹೇಶಯುಕ್ತನಟನತತ್ಪರಾಯೈ ನಮೋ ನಮಃ||
ನಿಜಭರ್ತೃಮುಖಾಂಭೋಜಚಿಂತನಾಯೈ ನಮೋ ನಮಃ||
ವೃಷಭಧ್ವಜವಿಜ್ಞಾನಸಿದ್ಧಿದಾಯೈ ನಮೋ ನಮಃ||
ಕಾಮಕ್ರೋಧಾದಿಷಡ್ವರ್ಗನಾಶನಾಯೈ ನಮೋ ನಮಃ||
ರಾಜರಾಜಾರ್ಚಿತಪದಸರೋಜಾಯೈ ನಮೋ ನಮಃ||
ಸರ್ವವೇದಾಂತಸಂಸಿದ್ಧಸುತತ್ವಾಯೈ ನಮೋ ನಮಃ||
ಶ್ರೀವೀರಭಕ್ತವಿಜ್ಞಾನನಿದಾನಾಯೈ ನಮೋ ನಮಃ||
ಅಶೇಷದುಷ್ಟದನುಜಸೂದನಾಯೈ ನಮೋ ನಮಃ||
ಸಾಕ್ಷಾಚ್ಛ್ರೀದಕ್ಷಿಣಾಮೂರ್ತಿಮನೋಜ್ಞಾಯೈ ನಮೋ ನಮಃ||
ಹಯಮೇಧಾಗ್ರಸಂಪೂಜ್ಯಮಹಿಮಾಯೈ ನಮೋ ನಮಃ||
ದಕ್ಷಪ್ರಜಾಪತಿಸುತವೇಷಢ್ಯಾಯೈ ನಮೋ ನಮಃ||
ಸಮಬಾಣೇಕ್ಷುಕೋದಂಡಮಂಡಿತಾಯೈ ನಮೋ ನಮಃ||
ನಿತ್ಯಯೌವನಮಾಂಗಲ್ಯಮಂಗಲಾಯೈ ನಮೋ ನಮಃ||
ಮಹಾದೇವಸಮಾಯುಕ್ತಶರೀರಾಯೈ ನಮೋ ನಮಃ||
ಮಹಾದೇವರತೌತ್ಸುಕ್ಯಮಹಾದೇವ್ಯೈ ನಮೋ ನಮಃ|| 108 ||
ಶ್ರೀ ಲಲಿತಾಷ್ಟೋತ್ತರಶತನಾಮಾವಳಿಃ ಸಂಪೂರ್ಣಮ್
~~ ಮುಗಾತು ~~