ಕಿದೂರು ಡಾಕ್ಟ್ರ ಆರಿಂಗೆ ಪರಿಚಯ ಇಲ್ಲದ್ದು, ನಿಂಗಳೇ ಹೇಳಿ.
ಒಪ್ಪಣ್ಣನ ಬೈಲಿನ ಆರಿಂಗೆ ಎಂತ ಸಂಕಟ ಬಂದರೂ ಮದಾಲು ನೆಂಪಪ್ಪದು ಈ ಡಾಕ್ಟ್ರ. ಮತ್ತೆ ವೆಂಕಟರಮಣನ.
ಕಾಸ್ರೋಡಿನ ಏವದೋ ದೊಡ್ಡ ಆಸ್ಪತ್ರೆಲಿ ಮದ್ದು ಕೊಡುದಡ. ಇವು ಕೊಟ್ಟ ಮದ್ದಿಂಗೆ ಗುಣ ಆಗದ್ದ ಜೆನವೇ ಇಲ್ಲೆಡ.
ಯೇವ ಮದ್ದಾದರೂ ಸಮ, ಇವು ಕೊಟ್ಟ ಮತ್ತೆ ರೋಗ ಇಲ್ಲೆ ಹೇಳಿಯೇ ಅರ್ಥ!
ಅದರಲ್ಲೂ ಬೋದ ತಪ್ಪುಸುದರ್ಲಿ ಎತ್ತಿದ ಕೈ ಅಡ.
ಬೋದ ತಪ್ಪುಸುದೇ ಹಾಂಗೆ, ಮೂರು ನಮುನೆ ಮದ್ದು ಇದ್ದಡ ಅವರತ್ರೆ.
ಬೆಳಿದು, ಕಂದು ಬಣ್ಣದ್ದು, ಕಪ್ಪು ಬಣ್ಣದ್ದು.
ಮಕ್ಕೊಗೆಲ್ಲ ಬೆಳಿ ಬಣ್ಣದ್ದು - ಪಾಪದ್ದು.
ಹದಾದವಕ್ಕೆ ಹದಾ ಪವರಿನ ಕಂದು ಬಣ್ಣದ್ದು,
ದೊಡ್ಡವಕ್ಕೆ ಕಪ್ಪು ಬಣ್ಣದ್ದು - ಷ್ಟ್ರೋಂಗು!
ಮೂರ್ನೇದುದೇ ಹಿಡಿಯದ್ರೆ, ಮತ್ತುದೇ ಬೋದ ತಪ್ಪದ್ರೆ - ಮತ್ತೆ ಅವು ಮಾತಾಡ್ಳೆ ಸುರು ಮಾಡುದಡ!
ಹಾಂಗೆ, ಇವರ ಕೈಲಿ ಬೋದ ತಪ್ಪದ್ದ ಜೆನವೇ ಇಲ್ಲೆ.
ಮನುಷ್ಯರ, ಮುಖ್ಯವಾಗಿ ಮಕ್ಕಳ ಆರೋಗ್ಯದ ಬಗೆಗೆ ವಿಶೇಷ ಕಾಳಜಿ.
ಇವು ಹೇಳ್ತ ಒಂದೊಂದು ಪೋಯಿಂಟುದೇ ಇಂಜೆಕ್ಷನು ಕುತ್ತಿದ ಹಾಂಗೆ ಆವುತ್ತು.
ವಿಷಯ ವಿವರುಸಿಗೋಂಡು ಹೋದರೆ ಷ್ಟೆತಸ್ಕೋಪಿಲಿ ಶಬ್ದ ಕೇಳಿದ ಹಾಂಗೆ ಆವುತ್ತು.
ವೈದ್ಯಕೀಯ ಕ್ಷೇತ್ರದ ಕೆಲವು ಸತ್ಯಂಗಳ ಹೇಳಿಯಪ್ಪಗ ದೋಡ್ಡ ಮಾತ್ರೆ ನುಂಗಿದಷ್ಟು ಕಷ್ಟ ಆವುತ್ತು,
ಕೆಲವು ಗಮ್ಮತ್ತುಗಳ ಹೇಳುವಗ ಸೆಮ್ಮದ ಕೆಂಪುಮದ್ದು ಕುಡುದ ಹಾಂಗಾವುತ್ತು.
ಒಟ್ಟಿಲಿ ಇವು ಡಾಗುಟ್ರು.
ಇವುದೇ ಒಪ್ಪಣ್ಣನ ಬೈಲಿಂಗೆ ಬಂದು ಶುದ್ದಿ ಹೇಳ್ತವು.
ನಾವೆಲ್ಲರುದೇ ಕೇಳುವೊ.
ರಜ ರಜ ಕುಷಾಲು, ರಜ ಚೀಪೆ ಮದ್ದು, ರಜ ರಜ ಮದ್ದು-ಮಾತ್ರೆ, ರಜ ರಜ ಇಂಜೆಕ್ಷನು - ಎಲ್ಲವುದೇ ಸೇರಿ ನಮ್ಮ ಕಿದೂರು ಡಾಕ್ಟ್ರ. (ವೇಲುವೈದ್ಯರ ಶಕ್ತಿಮದ್ದು ಸದ್ಯಕ್ಕೆ ಈಗ ಇವರತ್ರೆ ಮಾತ್ರ ಸ್ಟೋಕು ಇಪ್ಪದಡ.......ಲ೦ಬೋದರ ಗುಟ್ಟಿಲಿ ಹೋಗಿ ತಿ೦ದಿಕ್ಕಿ ಬತ್ತ..ನಿ೦ಗೊಗೂ ಬೇಕಾರೆ ಕೇಳಿ!!!)
ಮದ್ದು ತೆಕ್ಕೊಳಿ, ಒಪ್ಪ ಕೊಡಿ.
ಆಗದೋ?
Latest posts by ಕೆದೂರು ಡಾಕ್ಟ್ರುಬಾವ°
(see all) ಮೊನ್ನೆ ಒ೦ದು ಆದಿತ್ಯವಾರ ಮನೆಲೇ ಕೂದೋ೦ಡಿಪ್ಪಗ ಎಲ್ಲಿಗಾರು ಹೋಪ ಹೇಳ್ತ ಆಲೋಚನೆ ಬ೦ತು..ಕಾಸ್ರೋಡಿನವಕ್ಕೆ ಸುರುವಿ೦ಗೆ ನೆ೦ಪಪ್ಪ ಜಾಗೆ ಬೇಕಲಕೋಟೆ ಅಲ್ದ? ಅಲ್ಲಿ ಎ೦ತ ಇದ್ದು? ನೋಡಿ ನೋಡಿ ಬೊಡುದ್ದು, ಬೇರೆಲ್ಲಿಗಾರು ಹೇಳಿ ಆಲೋಚನೆ ಮಾಡುಗ ಪಕ್ಕನೆ ಗು೦ಪೆ ಗುಡ್ಡೆ ನೆ೦ಪಾತು..
ಹತ್ತರೆಯೇ, ಹೊತ್ತೋಪಗ ಬೆಶಿಲು ತಣುದಪ್ಪಗ ಹೆರಟ್ರಾತು. ಗುಡ್ಡೆ ಹತ್ತುವ ಕೆಲಸ ಇಲ್ಲೆ. ಅಲ್ಲಿವರೇಗೆ ಮಾರ್ಗ ಇದ್ದು.
ಹಾ೦ಗೆ ಬೈಲಿನ ಕೆಲಾವು ಜೆನ ಬೈಕ್ಕಿಲಿ ಕೂದೋ೦ಡು ಹೋದೆಯ. ಸೀತಾ೦ಗೋಳಿ, ಅ೦ಗಡಿಮುಗರು ಪೆರ್ಮುದೆ ದಾರಿ ಆಗಿ.
ಹಾ೦ಗೇ ಗುಡ್ಡೆಲಿ ನೆಡಕ್ಕೊ೦ಡು ಹೋಪಗ ಅಲ್ಲಿ ಒಪ್ಪಣ್ಣನ ಹಳೇ ಪ್ರೆ೦ಡು ದೊಡ್ಡಗಡ್ಡದ ಮಮ್ಮದೆ ಬ್ಯಾರಿ ಒಬ್ಬನೇ ಕೂದೋ೦ಡಿತ್ತು!!
ಅದರ ಅಲ್ಲಿ ನೋಡಿ ಆಶ್ಚರ್ಯ ಆತು. ಎ೦ಗ ಕೇಳಿದೆಯ, “ಎ೦ತ ಮಮ್ಮದೆ ಇ೦ದು ಮರದ ಕಚ್ಚೋಡ ಇಲ್ಯ? ಇಲ್ಲಿ ಕೂದೋ೦ಡು ಎ೦ತ ಮಾಡ್ಸು?”
ಅದಕ್ಕೆ ಮಮ್ಮದೆ ಹೇಳಿತ್ತು
“ಒನ್ನೂ ಇಲ್ಲ ಸಾಮಿ, ಈರ೦ಡು ಅ೦ಜಿ೦ದೆ ತೇರಿ೦ದೆ ಪುತ್ರ೦ದೆ ಶತ್ರು೦ದೆ ಪೊರಚುಟ್ಟವ೦ದೆ ಅಚ್ಚನೆ ವರಕಾಕುನ್ನು ”
!!%॒॓॑*ಽ(_+ ಎ೦ಗೊಗೆ ತಲೆಬುಡ ಅರ್ತ ಆಯಿದಿಲ್ಲೆ ಇದೆ೦ತಪ್ಪಾ ಹೇಳಿ.
ನಿ೦ಗೊಗೆ ಆರಿ೦ಗಾರು ಮಮ್ಮದೆ ಎ೦ತ ಹೇಳಿದ್ದು ಅರ್ತ ಆತ?
{ ಅದಕ್ಕೆ ಮಮ್ಮದೆ ಹೇಳಿತ್ತು }
ಚೆಲಾ ಮಮ್ಮದೆಯೇ!
ಅದರತ್ರೆ ಆನು ಆ ಒಗಟು ಕೇಳಿ “ಒಂದು ದಿನಲ್ಲಿ ಉತ್ತರ ತೆಯಾರು ಮಾಡಿಮಡಗೆಕ್ಕು” ಹೇಳಿ ಜೋರು ಮಾಡಿಕ್ಕಿ ಬಂದದು.
ಅದಕ್ಕೇ ಅದು ಆ ನಮುನೆ ಬೇಜಾರಲ್ಲಿ ಕೂದ್ಸು!
ಅದು ಡಾಗುಟ್ರತ್ರೆ ಕೇಳಿತ್ತು, ಡಾಗುಟ್ರು ಬೈಲಿಲಿ ಕೇಳಿದವು!
ಚೆ, ಎಲ್ಲ ಹಾಳಾತು! 🙁 😉
ಡಾಗುಟ್ರು ಉತ್ತರ ಹೇಳಿದವೋ ಎಂತ್ಸೋ- ಉಮ್ಮಪ್ಪ…!
ದಾಕುಟ್ರಣ್ಣ, ಬಪ್ಪ ವಾರ ಜಾಂಬ್ರಿ ಗುಡ್ಡಗೆ ಹೋಪನೋ?
ಅದರ ಅರ್ಥ ಮಮ್ಮದೆಯ ಹತ್ತರೆ ಕೇಳೆಕ್ಕಸ್ತೆ…….
ಹತ್ತು ರಥಂಗಳ ಹೊಂದಿದವನ (ದಶರಥನ) ಮಗನ (ರಾಮನ) ಶತ್ರುವಿನ (ರಾವಣನ) ಮನೆಯ ಸುಟ್ಟವನ (ಹನೂಮಂತನ) ಅಪ್ಪನ ಬರವಿನ ಎದುರುನೋಡಿಗೊಂಡಿದ್ದೆ.
ಅಬ್ಬಾ ಮಮ್ಮದೆಯೇ! ಇಡೀ ರಾಮಾಯಣವ ಒ೦ದೇ ವಾಕ್ಯಲ್ಲಿ ಮುಗಿಶಿತ್ತನ್ನೆ..
ಹುಮ್… ಮಮ್ಮದೆ ಅಮ್ಬಗ ಜಬ್ಬಾರಿಂದಲು ಜೋರಿದ್ದು.. ತಾಳಮದ್ದಳೆಲಿ ಒೞೇ ರೈಸುಗು..ರಘು ನಿನ್ನ ಸೋಲುಸುಗು…
ಬೊಳು೦ಬು ಭಾವ,
ಗೆಣ೦ಗು ಸುಟ್ಟು (ಪೊರಚುಟ್ಟವ೦ದೆ) ತಿ೦ದಿಕ್ಕಿಯೊ ಹೇ೦ಗೆ?
ಗೆಣಂಗನ್ನೂ ಮನೆಯನ್ನೂ ಒಟ್ಟಿಂಗೇ ಸುಟ್ಟವ° ಹನೂಮಂತ.
ಕ್ಷಮಿಸಿ,ಇವನೇ ಸರಿ..
ಡಾಗುಟ್ರೆ,ಒಳ್ಳೆ ಚೋದ್ಯ.
ಎನಗೆ ಗೊ೦ತಾತು.ಸುಭಗ ಭಾವ ಹೇಳಿದ್ದು ಸರಿ,ಒಳ್ಳೆ ಅರ್ಥಧಾರಿ,ಈ ಮಮ್ಮದೆ. ಮಲೆಯಾಳಲ್ಲಿ ತಾಳಮದ್ದಳೆಗೆ ಇವನೇ ಸರಿ,ಜಬ್ಬಾರ್ ನ ಎದುರು ಅರ್ಥ ಹೇಳುಲೆ.
{…ಈರ೦ಡು ಅ೦ಜಿ೦ದೆ ಪುತ್ರ೦ದೆ ಶತ್ರು೦ದೆ ಪೊರಚುಟ್ಟವ೦ದೆ ಅಚ್ಚನೆ ಬರಕಾಕುನ್ನು}
ಇದರ ಅರ್ಥ ಎನಗೊ೦ತಾತು-
ಈಗ ರಜ್ಜ ಮೊದಲು, (ಈರ೦ಡು)
ಅದರ ಅಜ್ಜ೦ದೆ, ಪುತ್ರ೦ದೆ , (ಅ೦ಜಿ೦ದೆ ಪುತ್ರ೦ದೆ )
ಪೆರ್ಚಿ ಕಟಿದಾ೦ಗೆ ಓಡಿದವು (ಪೊರಚುಟ್ಟವ೦ದೆ)
ಶತ್ರುನ ಜಾಲಿಲ್ಲಿಪ್ಪ ಭಾಳೆಗೊನೆ(ಬರಕಾಕುನ್ನು)
ಕದ್ದೊ೦ಡು ಹೋಪಲೆ ಬ೦ದವು ಪೆಟ್ಟುತಿ೦ದೊ೦ಡು ಓಡಿದವು.” 😉
ಹೇಳಿ..
ಏ ಬೋಚ ಭಾವಾ,
ನಿನ್ನ ಭಾಷಾ೦ತರ ಕೇಳಿರೆ ಮಮ್ಮದೆ ಬ್ಯಾರಿ ಗು೦ಪೆ ಗುಡ್ಡೆ೦ದ ಕೆಳ ಹಾರಿ ಪ್ರಾಣ ಬಿಡುಗೋ ಹೇಳಿ..
ಅದಾ,ಬೋಚ ಭಾವ,
{ಈರ೦ಡು ಅ೦ಜಿ೦ದೆ ತೇರಿ೦ದೆ ಪುತ್ರ೦ದೆ ಶತ್ರು೦ದೆ ಪೊರಚುಟ್ಟವ೦ದೆ ಅಚ್ಚನೆ ವರಕಾಕುನ್ನು}
“ತೇರಿ೦ದೆ” ಹೇದರೆ ಎ೦ತ್ಸೋ?ಬಾಳೆಕಾಯಿ ಕೊನೆ೦ದ ತೆರಿದವು ಹೇಳಿಯೋ?ಅಲ್ಲ,ಪೆರ್ಚಿಕಟ್ಟಿ ಓಡುವದರ ಎಡೆಲಿ, ಬಾಳೆಗೊನೆ ಕಟ್ತಿ ತೇರು ಎಳದವು ಹೇಳಿಯೋ?
ಹಾ.. ಅಪ್ಪು ರಘು ಭಾವ .. “ತೇರಿ೦ದೆ” ಹೇಳಿರೆ, ಕೆಲು ಭಾರೆ ಹಣ್ಣಿನ, ತೆರುದು.. ಗಡಿಬಿಡಿಲಿ.. ಬಾಯಿಗೆ ಚಳ್ಳೆ೦ಡು ಓಡಿದವೂ ಹೇಳೀ.. 😉
ಅನುಭವಂದ ಹೇಳಿದ್ದೋ ಬೋಚ ಭಾವ?.
ಎಂತದೇ ಆಗಲಿ ತಲೆ ಓಡುತ್ತು.
ಅಪ್ಪಚ್ಚಿ ಇದರ ಅನುಭವ, argentumaani ಗೆ ಇದ್ದಡ.. 😉
ವಿದ್ವಾ೦ಸ ಮಹಾಶಯನೆ…
ನಿನಗಾರು ಹೇಳಿದರೀ ಗುಟ್ಟು?
ಏಕೆ ಮಾಡ್ತಾ ಇದ್ದೆ ರಟ್ಟು!
ನಿನ್ನ ಬಾಯಿಗೆ ದೋಸೆ ಹಿಟ್ಟು 😉
ಏ ಅರ್ಗೆ೦ಟೂ,
ಹಿಟ್ತಿನ ಬೆಶಿ ಕಾವಲಿಗೆಗೆ ಹಾಕಿ ರಜ ತಟ್ಟೂ.
ನಿ೦ಗೊಗಪ್ಪಗ ಕಾವಲಿಗೆ ತಯಾರು ಭಾವ 😉 ಬೇಜಾರು ಮಾಡೆಕ್ಕಾದೊವು ಬೋಸ ಭಾವ 😉
( ಆದ್ರೆ ಅವಕ್ಕೆ ಬೇಜಾರು ಆವ್ತಿಲ್ಲೆಡ ;))
ಅವ್ವು ಯೆಲ್ಲದಕ್ಕೂ ಸೆಟ್ಟು!
ಹಲ್ಲಿ೦ಗೂ ಸೆಟ್ಟು,
ನಡೂಕಾಣದ್ದು ಬಿದ್ದು ಗುಟ್ಟು ರಟ್ಟು!
ನಿನಗೆ ಎಲ್ಲಾದಕ್ಕು ಅರ್ಗೆ೦ಟು…
ಮಡುಗುಸುವೆ ಆನು ಹಲ್ಲಿ೦ಗೆ ಸೆಟ್ಟು..
ಚೆ೦ದ ಚೆ೦ದ ಅಪ್ಪೆ ಬಣ್ಣ ಎಲ್ಲಾ ಕೋಟ್ಟು
ಮತ್ತೆ ಎನ್ನ ನೋಡುವೆ ಬಾಯಿ ಬಿಟ್ಟು… 😉
೪ ದಿನ ಕ೦ಪುಟರ್ ನೋಡ್ತಿಲ್ಲೆ ಹೇಳಿ ಅರ್ಗೆ೦ಟಾಗಿತ್ತು!
ಈಗ ಭಾವ೦ದು ಉತ್ತರ ನೋಡಿ ಹೊಟ್ಟೆ ತು೦ಬಿತ್ತು!
ಅಪ್ಪು “ಹಲ್ಲಿ೦ಗೆ ಸೆಟ್ಟು” ಮಡುಗೊದು ಹೇ೦ಗೆ? ಹೋಯ್ 😛
ಮಾಡೇಡ ನೀನು ಗೆ೦ಟು…
ಹೀ೦ಗೆ ಮಾಡಿರೆ ಬೇಳುಗು ನಾಲ್ಕು ಪೆಟ್ಟು..
ರಘು ಭಾವ ಹೇಳಿದಾ೦ಗೆ ದೋಸೆ ತಟ್ಟು..
ಆನು ತಿ೦ಬಲೆ ಸೆಟ್ಟು.. 😉
ಇದು ಹೋ..ಹೋ… ಹೋಹ್ ಆಯ್ದನ್ನೆ ಉತ್ತರ!!
ನಮ್ಮದೂ ಒ೦ದು.. ಹಿ ಹಿ ಹಿ.. 😀 ಹೇಳಿ ಇರಲೀ ಹೇಳಿ.. ಭಾವ.. 😉
ಓಯ್ ಡಾಕ್ಟ್ರು ಭಾವಾ.. ಇದರ ಉತ್ತರ ಎನಗೆ ಗೊಂತಾತು. ಮಮ್ಮದೆಯೂ ನಿಂಗಳಾಂಗೇ ಗಾಳಿತಿಂಬಲೆ ಅಲ್ಲಿ ಕೂದ್ದು. ಮಾಂತ್ರ ನಿಂಗೊ ಕೊಟ್ಟ ವಾಕ್ಯ ಅಪೂರ್ಣವಾಗಿದ್ದು ಹೇಳಿ ಎನ್ನ ಅಂದಾಜು. ಏಕೆ ಹೇಳಿರೆ ಅಲ್ಲಿ ‘ದಶ’ ಹೇಳ್ತ ಶಬ್ದ ಮಾಂತ್ರ ಸಿಕ್ಕುತ್ತಷ್ಟೆ. ‘ರಥ’ವ ಸೂಚಿಸುವ ಏವ ಸುಳಿವೂ ಇಲ್ಲೆ. ಒಡುಕ್ಕಾಣ ಶಬ್ದ ‘ವರವು ಕಾಕುನ್ನು’ಹೇಳಿ ಇದ್ದಿದ್ದರೆ ಇನ್ನೂ ಸ್ಪಷ್ಟ ಆವ್ತಿತ್ತು.
ಎಂತಾರು ಮಮ್ಮದೆ ಎಂಗಳ ಸಂಪಾಜೆಯ ‘ಜಬ್ಬಾರ್ ಸಮೋ’ನಿಂದಲೂ ಬಲ ಇದ್ದು ಮಿನಿಯ…! 😉
ಅಪ್ಪು ಬರವಗೆ ತೇರಿ೦ದೆ ಶಬ್ದ ಬಿಟ್ಟು ಹೋತು. ಸರಿ ಮಾಡುವ..
ಎನಗೆ ಸತ್ಯಕ್ಕಾರು ಅರ್ಥ ಆಯ್ದಿಲ್ಲೇ.
ಒಪ್ಪಣ್ಣ ನಕಾಯ್ತಾ ಇದ್ದೆ ಹೇಳಿದ್ದೋ ಎಂಥ ಪಟ್ಟಾಂಗ ಕ್ಕೆ?!