- ತೆಂಕಲಾಗಿಂದ ಹೇಳಿಕೆ ಬಂತು - November 5, 2012
- ಮಡಿಕೇರಿ ಆಕಾಶವಾಣಿಲಿ “ಇರ್ತಲೆ” ಬಗ್ಗೆ ಸುಭಗಣ್ಣನ ಸಂದರ್ಶನ - October 8, 2012
- ಈ ಪದ್ಯದ ಛಂದಸ್ಸು, ಆಶಯ ಗುರುತುಸಿ!! - February 29, 2012
ನಮ್ಮ ಪೆರ್ಲ ಹತ್ರಾಣ ಬಜಕ್ಕೂಡ್ಲು ಅಮೃತಧಾರಾ ಗೋಶಾಲೆಯ ಪುನರುತ್ಥಾನವ ಸಂಕಲ್ಪಿಸಿ ಇತ್ತೀಚೆಗೆ ಅಲ್ಲಿ ‘ಗೋ ತುಲಾಭಾರ‘ ಕಾರ್ಯಕ್ರಮ ಏರ್ಪಾಡು ಮಾಡಿದ್ದು;
ಅದು ಒಳ್ಳೆ ಗೌಜಿಲಿ ಚೆಂದಕೆ ನೆಡದ ಸಂಗತಿ ಬೈಲಿನವಕ್ಕೆ ಎಲ್ಲೋರಿಂಗು ಗೊಂತಿಪ್ಪದೇ.
ಆದರೆ ಬರೀ ಮೆರವಣಿಗೆ ತುಲಾಭಾರ ಹೇಳಿ ಗೌಜಿ ಮಾಡಿರೆ ಸಾಲನ್ನೆ?
ಗೋಶಾಲೆಲಿಪ್ಪ ದನಗಳ ಹೊಟ್ಟೆ ತುಂಬುಸುದು ಹೇಂಗೆ ಹೇಳಿ ಆಲೋಚನೆ ಮಾಡೆಕ್ಕನ್ನೆ?
ಅಪ್ಪು.
ಆಲೋಚನೆ ಮಾಡಿದವು ಡಾ. ಕೃಷ್ಣಮೂರ್ತಿಯವೂ ಗೋಶಾಲೆಯ ಇತರ ವ್ಯವಸ್ಥಾಪಕರೂ ಸೇರಿ.
ಎಕ್ಕಸಕ್ಕ ಪೈಸ ಕೊಟ್ಟು ಘಟ್ಟದ ಮೇಗಂದ ಆ ವಿಷ ಹಿಡ್ಕಟೆ ಬೆಳುಲು ತಂದುಹಾಕುದರ ಬದಲು, ಇಲ್ಲೇ ಗುಡ್ಡೆಗಳಲ್ಲಿ ಯಥೇಷ್ಟ ಇಪ್ಪ ವಿಷಮುಕ್ತ ನೈಸರ್ಗಿಕ ಮುಳಿಹುಲ್ಲಿನ ಕೆರಸಿ ಕೊಂಡೋಪೊ ಹೇಳಿ ಆಲೋಚನೆ ಮಾಡಿದವು.
ಆದರೆ ಇದು ಒಬ್ಬ-ಇಬ್ಬರಿರಿಂದ ಅಪ್ಪ ಕೆಲಸ ಅಲ್ಲ.
ಕೂಲಿ ಕೊಟ್ಟು ಕೆರಸಿರೆ ಆಳು ಮಜೂರಿಯೇ ಕಂಡಾಪಟ್ಟೆ ಆಗಿಹೋಕು.
ಅಂಬಗ ಹೀಂಗೊಂದು ನೋಡಿಕ್ಕುವೊ ಹೇಳಿ – ಮುಳ್ಳೇರಿಯ ಮಂಡಲದ ಸೇವಾ ವಿಭಾಗದವರ ಸಂಪರ್ಕ ಮಾಡಿದವು.
ಶ್ರೀ ಗುರುಗಳಿಂದ ಸೇವಾದೀಕ್ಷೆ ಸ್ವೀಕರಿಸಿ ಅವಕಾಶಕ್ಕೆ ಕಾಯ್ತಾ ಇಪ್ಪ ನಮ್ಮ ಕಾರ್ಯಕರ್ತರು ‘ಎಡಿಯ’ ಹೇಳುಗೊ?
ಇದಾ, ಮನ್ನೆ ಫೆಬ್ರವರಿ 28ನೇ ತಾರೀಕು 65 ಜೆನ ಕಾರ್ಯಕರ್ತರು ಮೆಷಿನಿಲ್ಲಿ ಕೆರಸಿ ಮಡುಗಿದ ಮುಳಿಹುಲ್ಲಿನ ಚೊಕ್ಕಕೆ ಕಟ್ಟ ಕಟ್ಟಿ ಭರ್ತಿ ಎರಡು ಲೋಡು ತುಂಬುಸಿ ಬಜಕ್ಕೂಡ್ಲಿಂಗೆ ಕಳುಸಿಕೊಟ್ಟಿದವು.
ಮೂರ್ತಿ ಡಾಕ್ಟ್ರಣ್ಣನ ಪ್ರಕಾರ ಅಲ್ಯಾಣ ಉಂಬೆಗೊಕ್ಕೆ ಇದು ಎರಡು ತಿಂಗಳಿಂಗೆ ಧಾರಾಳ ಸಾಕಕ್ಕಡ.
ಪಟಂಗೊ ಇಲ್ಲಿದ್ದು:
ನಿನ್ನಾಣ ಉತ್ತರದೆಶ ಪತ್ರಿಕೆಲಿ ಆ ವಿಶಯ ಇತ್ತಿದು ಚೆನ್ನೈ ಭಾವಾ.
ವಿಷಯ ತಿಳುದು ಕೊಶಿ ಆತು. ಎಲ್ಲೋರು ಒಟ್ಟು ಸೇರಿದರೆ, ಕಾರ್ಯಂಗೊ ಸುಲಭ ಆವ್ತು ಹೇಳ್ತಕ್ಕೆ ಒಳ್ಳೆ ಉದಾಹರಣೆ.
ಒಪ್ಪಂಗಳ ಒಟ್ಟಿಂಗೆ ಹಳೇ ನೆನಪುಗಳ ಕೆದಕಿಕೊಂಡ ಬಾಲಣ್ಣ, ಚೆನ್ನೈ ಭಾವಂದ್ರ ಆತ್ಮೀಯತೆ ಕಂಡು ಸಂತೋಷ ಆತು. ಒಪ್ಪಣ್ಣನ ಬೈಲ ಮೂಲಕ ಅದೆಷ್ಟು ಕೆಲಸಂಗೊ ಆವ್ತಾ ಇದ್ದಲ್ಲದೊ ?
ನಮ್ಮ ಸಮಾಜದ, ಎಲ್ಲರಿಂಗೂ ಮಾದರಿ ಅಪ್ಪಂತಹ ಜೀವನದ ಬಗ್ಗೆ ಓದಿ ತುಂಬಾ ಖುಷಿ ಆತು. ಧನ್ಯವಾದಂಗೋ…..
ಅಪ್ಪೋ ಭಾವ, ಬದಿಯಡ್ಕ ಬ್ಯಾರಿಯಣ್ಣ ಒಂದು ಅದರ ಮುಳಿ ಕೋಟೆ ಇಡೀ ಕೆರಸಿ ಬಜಕ್ಕೊಡ್ಲಿಂಗೆ ದಾನ ಕೊಟ್ಟಿದಡ- ನಿನ್ನಾಣ ಬಿಸಿ ಬಿಸಿ ಸುದ್ದಿ. ನಿಂಗಳ ಬೆನ್ನಿಂಗೇ ಅದು ಕೇಳಿ ಸಂತೋಷ ಆತು. (‘ಸಮೋಸ ‘ ಹಂಚಿದ್ದವು )
ಎನಗೆ ಅದರ ವಿವರ ಸಿಕ್ಕಿದ್ದಿಲ್ಲೆ. ನಿಂಗೊಗೆ ವಿವರ ಸಿಕ್ಕಿದ್ದರೆ,ಇಲ್ಲಿ ತಿಳಿಸಿದರೆ ಬೈಲಿ ಹಂಚಿಗೊಂಬಲಾವ್ತಿತ್ತು.
ಸಹಕಾರ ಪದ್ಧತಿಲಿ ಮುಳಿ ಕೆರಸಿ, ಬಜಕ್ಕೂಡ್ಲಿಂಗೆ ಕಳುಸಿದ ಸುದ್ದಿ ನೋಡಿ ಕೊಶೀ ಆತು. ಮನ್ಸಸ್ಸಿದ್ದರೆ ಮಾರ್ಗ ಹೇಳಿ ತೋರಿಸಿಕೊಟ್ಟ ಮುಳ್ಕ್ಷ್ಳೇರಿಯಾ ಮಂಡಲದ ಕಾರ್ಯಕರ್ತರ ಸೇವೆ, ಸಮಾಜಕ್ಕೆ ಮಾದರಿ.
ನಿಂಗೊ ಬರದ್ದಷ್ಟೂ ವೀಡಿಯೊದ ಹಾಂಗೆ ಮನಪಟಲಲ್ಲಿ ಹಾದು ಹೋತು.
೨ ವರ್ಷ ಮದಲೆ ಒಂದಾರಿ ಡಾ.ಹರಿಕೃಷ್ಣ ಭರಣ್ಯ ರೈಲಿಲಿ ಸಿಕ್ಕಿತ್ತಿದ್ದವು . ಇದೆಲ್ಲಾ ಮನಬಿಚ್ಚಿ ಮಾತಡುವ ಸದವಕಾಶ ಸಿಕ್ಕಿ ಸಂತೋಷ ಪಟ್ಟೆಯೋ. ಚಂದಲ್ಲಿ ಎಲ್ಲವೂ ನಡದ್ದದ್ದು ದೈವ ಕೃಪೆ. ಶ್ರೀ ಗುರುಗಳ ಆಶೀರ್ವಾದ.
ಹವ್ಯಕ ನಾಟಕ ಯಕ್ಷಗಾನ ಮರವಲೆಡಿಯ. ಇಂದಿಂಗೂ ಕೆಲವು ಹಳೇ ಸ್ನೇಹಿತರು ಅದರ ನೆಂಪು ಮಾಡಿಸಿ ಮರುಪರಿಚಯ ಆವ್ತಾ ಇದ್ದು ಕೆಲವೊಂದರಿ.
‘ಉದರ ನಿಮಿತ್ಥಂ ಬಹುಕೃತ ವೇಷಂ’ . ಗ್ರಹಚಾರ ಬಲಂದಾಗಿ ಜೀವನೋಪಾಯಕ್ಕಾಗಿ ಕೈ ಸುತ್ತೊಂಡವು ನಮ್ಮಾಂಗೆ ಹಲವರು. ಒಂದು ಮರದ ಬೀಜ ಹಲವು ಕಡೆ ಪಸರಿಸುತ್ತಾಂಗೆ ನಾವು ಹಲವು ದಿಕ್ಕೆ ಹಂಚಿ ಹೋದರೂ ಈ ಒಪ್ಪಣ್ಣ ಬೈಲು ಮತ್ತೆ ಕಾಂಬ ಹಾಂಗೆ ಮಾಡಿತ್ತು. ಸಮ್ಮೇಳನಕ್ಕೆ ನಮ್ಮೊಟ್ಟಿನ್ಗೆ ದುಡುದ ಕೆಲವು ಸಹೃದಯಿಗೋ ಈಗ ನಮ್ಮೊಟ್ಟಿನ್ಗೆ ಇಲ್ಲೆನ್ನೇ – ಗ್ರೆಶುವಾಗ ಬೇಜಾರಾವ್ತು.
ಬೈಲಿ ಹೃದಯ ಬಿಚ್ಚಿ ಹಂಚಿಕೊಂಡದ್ದಕ್ಕೆ ಒಪ್ಪ.
ತೂಂಬು ತೆಗದ ಹಾಂಗೆ ಅತನ್ನೆ ಚೆನ್ನೈ ಭಾವಾ !
ರಶೀತಿ ಪುಸ್ತಕ ಹಿಡ್ಕೊಂದು ಹೋದ್ದದು ಹೇಳುವಗ ಎಲ್ಲಾ ಕನಸಿನ ಹಾಂಗೆ .. ದಿಬ್ಬಾಣದ ಹಾಂಗೆ ….ಕೆಲವು ಸರೀ ಚಿತ್ರಂಗೊ,..ಇನ್ನು ಕೆಲವು ರಜಾ ಮಾಸಿದ್ದು. ಅಂತೂ ನೆಂಪಿನ ಮಾಲೆ !
ಬರೇ ಉತ್ಸಾಹ ಮಾತ್ರ ಕೈಲಿ ಹಿಡ್ಕೊಂಡು ಅಂದು ನಾವು ಕೆಲವು “ಎಲ್ ಟಿ ಟಿ ಇ”-ಗೊ ಹೆರಟದು. ಎನ್ನ ಕಾಸರಗೋಡಿನ ದುಸ್ಸಾಹಸ.. ಕೈಸುಟ್ಟೊಂಡಿದ್ದ ಬಿಸಿನೆಸ್, ಅದರ ನೆಡುವೇ ಯೇತಡ್ಕದ ಚಂದ್ರ, ಗೋವಿಂದಣ್ಣ, ಸುಬ್ರಹ್ಮಣ್ಣ್ಯಣ್ಣ, ಸಾಂಪತ್ತಿಲ ರವಿ, ನೀನು, ಮುಂದಿಲ ದಿನಕರ, ಹಳೆಮನೆ ಈಶ್ವರ (ರಮ್ಯ) ಪಳ್ಳತ್ತಡ್ಕ ಮಾಸ್ಟ್ರು, ಇಕ್ಕೇರಿ ಉದನೇಶ, ದ.ಮೂರ್ತಿ, ಪಜಿಲ ಜೆ ಪಿ, ಕೋಂಗೋಟು ರತ್ನಾಕರ , ಕಾರಿಂಜ ಶಿವರಾಮಣ್ಣ ……. ಎಲ್ಲಾ ಹೆಸರುಗೊ ಇನ್ನೂ ಬಾಕಿ ಇದ್ದು………
ರಶೀದಿ ಪುಸ್ತಕ ತೆಕ್ಕ್ಂಡು ಹೋಪಗ ನಾಯಿ ಅಟ್ಟುಸಿಕ್ಂಡು ಬಂದದರಿಂದ ಹಿಡುದು, ಸಂಮ್ಮೇಳನದ ದಿನ ಉದಿಯಪ್ಪಗ ೧೦ ಗ್ಂಟೆ ವರೆಗೂ ಇಲ್ಲದ್ದ ಜನ ಮತ್ತೆ ಪೆರಡಾಲ ಹೊಳೆಲಿ ಮಳೆಗಾಲದ ಬೆಳ್ಳ ಬಂದ ಹಾಂಗೆ,… ನಾವು ಊಟಕ್ಕೆಂತ ಮಾಡೊದಫ್ಫ ! ” ಕೆಣುದತ್ತನ್ನೇ ! !” ಹೇಳಿ ಗ್ರೇಶುವಷ್ಟು ಜನ !
ಸಂಮೇಳನಕ್ಕೆ ಆಶೀರ್ವಾದ ತೆಕ್ಕೊಂಬಲೆ ತೀರ್ಥಹಳ್ಳಿ ಗೆ ಹೋದವಕ್ಕೆ ಒದಗಿದ ಸ್ವರ್ಣ ಮಂತ್ರಾಕ್ಶತೆಯ ಕಾರಣ ಇಷ್ಟೊಂದು ಗ್ರೇಂಡು -ಹೇದು ಪಾಕ ಶಾಲೆಯ ಗಡಿಬಿಡಿಗಳ ಸರಿಯಾಗಿ ನೋಡಿಯೊಂಡ ದಿ. ವೆಂಕಪ್ಪ ಮಾವ ( ಪಟ್ಟಾಜೆ) ನ ವಾದಕ್ಕೆ ಇರುಳು ಮೈ ಕೈ ಬೇನೆ ಆಗೆಂಡು ಒಪ್ಪಿತ್ತು !
ಹಂಗೆ ಈ ಸಮ್ಮೇಳನದ ಅಖೈರಿಯಾಣ ಲೆಕ್ಕಂಗಳ ಮಾದ್ಲೆ ಕಾರಿಂಜ ಶಿವರಾಮಣ್ಣನ ಮನೆಲಿ ಸೇರಿದವಕ್ಕೆ ಇರುಳು ಅವರ ಅಬ್ಬೆಯ ನಿರ್ಯಾಣವನ್ನೂ ನೋಡೆಕಾಗಿ ಬಂತು. ..
ಎನಗೆ ಇನ್ನೊಂದು ವಾರಕ್ಕೆ ಇದರ ನೆಂಪೇ ಧಾರಾಳ . . . !
ತುಂಬಾ ….. ತುಂಬಾ ಆ ಆ ಆ ಆ ಆ.. ಥೇಂಕ್ಸು ! ! ಹಾಂಗೇ .. ಆರತ್ರಾದರೂ ಆ ಸಮ್ಮೇಳನದ ಫೋಟೊ.. ಕರಪತ್ರ ..ಎಂತಾರೂ ಇದ್ದರೆ ಕೊಡ್ಲೆ ಎಡಿಗೋ.. ? !
ಒಳ್ಳೆಯ ಸುದ್ದಿ.
ಬಾಲಣ್ಣ, ನೆಂಪು ಇದ್ದಿದ್ದು. ಮರವಲೇಡಿಗೋ -‘ ಕಾಸರಗೋಡು ಹೈವ ಯುವ ಸಮ್ಮೇಳನ’ . ನಮ್ಮ ಬಯಲಿಲ್ಲಿ ತೋಟಲ್ಲೇ ಗುಡ್ಡೆ ಕರೇಲಿ ನಡಕ್ಕೊಂಡು ಆಚ ಬಯಲಿಂಗೆ ಜೀಪಿಲ್ಲಿ ಹೋದ್ದು ರಶೀದಿ ಪುಸ್ತಕ ಹಿಡ್ಕೊಂಡು.
ಸುಭಗಣ್ಣನ ಮುಳಿ ಲಾರಿ , ವನ ಊಟ, ಮುಳಿ ಕಟ್ಟ ನೋಡಿ ಸಂತೋಷ ಆತು. ಬರದ್ದಕ್ಕೆ ನಮ್ಮ ‘ಸುಭಗ’ಗ್ಗೆ ಇಲ್ಲಿಂದ ಒಂದು ಒಪ್ಪ .
ಮೂರ್ತಿಯ ಹಳೇ ಕ್ಲಿನಿಕ್ಕಿಲ್ಲಿ ದಿನಾ ಕಸ್ತಲೆಪ್ಗ ಕೆಲವು ಜೆನ ಎಂಗೊ ಕೂದುಂಡು ಕಾಟಂಕೋಟಿ ಮಾತಾಡೆಂದು ಇದ್ದಿದ್ದಿಯೊ ಮೊದಲು.ಚೆನ್ನೈ ಭಾವಂಗೆ ನೆಂಪು ಇದ್ದೋ ಏನೋ !
ಅಂಬಗ ಮೂರ್ತಿಗೆ ಕಣ್ಣು ಬ್ಡಿಡಿಸಿದ್ದವಿಲ್ಲೆ ! ಅಂಬಗಾಣ ಗ್ರೂಪಿಲ್ಲಿ ಏಕ್ಟಿವ್ ಆಗಿದ್ದ ಹೆಚ್ಚಿನವೂ ಈಗ ಅಶ್ಟು ಎಳಕ್ಕಲ್ಲಿ ಇಲ್ಲೆ ! ಮೂರ್ತಿ ಮಾಂತ್ರ ಹಿಂದಿಯ – ಚುಃಪಾ ರುಸ್ತುಂ – ! !
ಗೋಜಾಗ್ರುತಿ, ಊರಿಂದ ಸುರುವಾದ್ದು ,-ಕಿಚ್ಚೂ ದಾರಿಯೂ ಗುರುಗೊ ತೋರ್ದ್ದು.
ಮೊನ್ನೆ ಆದಿತ್ಯವಾರ, ರಾಮನಗರಲ್ಲಿ, ರೈತರ ಸ್ತ್ರೈಕಿನ ದಿನ , ಮೈಸೋರಿಂದ ಒಳದಾರಿಲಾಗಿ ಬರೆಕಾಗಿ ಬನ್ತು. ಅಲ್ಲಿ ವಿಭೂತಿಪುರ ಹೇಳಿ ಒಂದು ಜಾಗೆಲಿ ಒಂದು ವೇನೂ ಕೆಲೆ ಬ್ಯಾರಿಗಳನ್ನೂ ಹೆಂಮಕ್ಕೊ ಕತ್ತಿ ಹಿಡುಕ್ಕೊಂಡು ಹೆದರುಸಿಯೆಂಡಿದ್ದಿದ್ದವು. ಹೋಪ ಸಾಹಸ ಮಾಡದ್ದೆ ದೂರಂದ ನೋಡಿದರೆ, ವೇನಿಲ್ಲಿ ಕಂಜಿಗೊ ! ಎಲ್ಲಾ ಹೋರಿಗೊ ! ದಾರಿಲಿ ಇವೂ ಸಿಕ್ಕಿಬಿದ್ದವು !
ಮತ್ಟೆ ಎಂತಾತು.. ನಿಂಗೊಗೆ ಅಂದಾಜು ಮಾಡ್ಲೆ ಎದಡಿಗು !
ಈ ಜಾಗ್ರುತಿ ನಮ್ಮ ಗುರುಗೊ ಬರುಸಿದ್ದವು ! ಈಗ ಬದಿಯದ್ಕಕ್ಕೆ ಬಂದರೆ ಬಸ್ಸು ಸ್ತಾಂದಡಿಲ್ಲಿ ನಮ್ಮ ಭಾಶೆಲಿ ಜನ ಸ್ಂಕೋಚ ಇಲ್ಲದ್ದೆ ಮಾತಾದುವದೂ ಕಾಣ್ತು. ಗೋ ಜಾಗ್ರುತಿ…ಒಂದು ರೀತಿಲಿ ನಮ್ಮ ಸ್ವಾಭಿಮಾನದ ಜಾಗ್ರುತಿಯೂ ಆಯಿದು .
ತುಂಬ ಖುಶಿ … ಖುಶಿಲೇ ಇದರ ಬರದೆ ! ಎಲ್ಲೋರಿಂಗೂ ಅಭಿನಂದನೆಗೊ !
ಭಾರೀ ಸಂತೋಷದ ಶುದ್ದಿ
ಭರ್ಜರಿ ಮೇವಿನ ಭರ್ಜರಿ ಶುದ್ದಿ ಭಾವ.ಓದಿ ಕೊಶಿ ಆತು.
ಕಾರ್ಯಕರ್ತರ ಸೇವಾಮನೋಭಾವವ ಮೆಚ್ಚೆಕ್ಕು.ಸಮಾಜ ಒಗ್ಗಟ್ತಿಲಿ ನಿ೦ದು ಕೆಲಸ ಮಾಡಿರೆ ಎಲ್ಲ ಕೆಲಸವೂ ಹುಲ್ಲಿನ ನೆಗ್ಗಿದ ಹಾ೦ಗೆ,ಅಲ್ಲದೋ? ಇದು ನವಗೆ ಮಾರ್ಗದರ್ಶಿಯಾಗಲಿ ಹೇಳಿ ಹಾರೈಸುವ°.