- ದಿಡೀರ್ ಪರಂಗಿ ಕಾಯಿ(ಅನನಾಸ್)ಉಪ್ಪಿನಕಾಯಿ - March 8, 2013
- ಕರ್ನಾಟಕ ಮತದಾರ ಪಟ್ಟಿಗೆ ಹೆಸರು ಸೇರ್ಸುದು ಹೇಂಗೆ? - October 8, 2012
- ಹವ್ಯಕ ಪುಸ್ತಕಂಗಳ ಲೋಕಾರ್ಪಣೆ - August 26, 2012
ಒಂದು ಸುದ್ದಿ ಬಂದರೆ ಅದರ ಸುತ್ತ ಹುಟ್ಟುವ ಊಹಾಪೋಹಂಗಳೇ ಇಂದ್ರಾಣ ತುಂಡರಿಸುವ ಶುದ್ದಿಗೋ – ಭಾಗ ೨
ಮೊದಲು ‘ಬಂದ ಸುದ್ದಿ’.
ಚಿನ್ನದ ನ್ಯೂಸ್ ೨೪x೭ ರ ಪ್ರಧಾನ ಸಂಪಾದಕ ರಾಜೀನಾಮೆ.
ಈ ಶುದ್ದಿ ಎಂತಕೆ ಕೇಳೆಡಿ. ನಮ್ಮ ಶುದ್ದಿ ಮಾದ್ಯಮದ ಶುದ್ದಿಗೊ ಎಲ್ಲೊರು ಕುತೂಹಲಲ್ಲಿ ನೋಡುದು. ನಮ್ಮವಕ್ಕೆ ಕೆಲಸ ಕೊಟ್ಟ ಮಾಧ್ಯಮವು ಅಪ್ಪು.
ಮತ್ತೆ ‘ಇದೀಗ ಬಂದ ಸುದ್ದಿ‘.
ರಾಜೀನಾಮೆ ನಿರಾಕರಣೆ, ಆನು ಕೊಟ್ಟಿದಿಲ್ಲೆ ಎರಡು ದಿನ ರಜೆ ಹಾಕಿತ್ತೆ.
ಜನ ತಪ್ಪು ತಿಳ್ಕೊಂಬಲೆ ಆಗ ಹೇಳಿ ಇಂದೇ ಸುದ್ದಿ ಮಥನಕ್ಕೆ ಬಂತ್ತೆ ಹೇಳ್ತ ಹೇಳಿಕೆ. ಇರುಳು ಪ್ರತ್ಯಕ್ಷ.
ಈ ವಿಶ್ಯ ಹೇಳುಲೆ ಶುರು ಆದ ಬ್ಲೊಗಿಂದ ಒದುರಿಂಗೆ ಪಂಥಾಹ್ವಾನ. ಏಕೋ?
ಆ ವಿಶ್ಯ ನವಗೆ ಬೇಡ. ಅಲ್ಲಿ ಗೆ ಮುಗಿಯಲಿ.
ಈಗ ಕೆಲವು ‘ಊಹಾಪೋಹಂಗೋ‘ [ಇದು ಸುದ್ದಿ ಹುಡುಕುವಾಗ ಸಿಕ್ಕಿದ್ದು, ಆರು ಹೇಳಿದ್ದು ಗೊಂತಿಲ್ಲೆ].
ರಾಜೀನಾಮೆ ಕೊಟ್ಟರೆ ಮುಂದೆ?
ಎಂತಕೆ ಬಿಡುಗು? ದೊಡ್ಡ ಉತ್ತರ – ಮಾಲೀಕರೊಟ್ಟಿಂಗೆ ಸಮ ಬಾರದ್ದು
ಮುಂದೆ ಎಂತ ಮಾಡುಗು? – ೧. ಆಸ್ತಿ ಇದ್ದಡ ಹಾಂಗೆ ಕೃಷಿಲಿಯೂ ಆಸಕ್ತಿ ಇದ್ದಡ, ಹಾಂಗಾಗಿ ತೊಂದರೆ ಇಲ್ಲೆ. ೨. ಮಾಧ್ಯಮ ಲೋಕವ ಬಿಡುಲೆ ಮನಸ್ಸುಆಗದ್ದೆ ಕನ್ನಡ ಮಣ್ಣಿನ ಮಗನ ಮಗನ ಟಿ.ವಿ. ಸೇರುದು, ಸ್ನೇಹಾಚಾರ ಇಪ್ಪ ಕಾರಣ ಇಲ್ಲೂ ತೊಂದರೆ ಇಲ್ಲೆ.
ಹೊಸ ಚಾನೆಲಿಂಗೆ ಹೋದರೆ ಎಂತ ಮಾಡುಗು? – ಕೆಲವು ಜೆನಂಗಳ ಹೊತ್ತುಗೊಂಡು ಹೋಕು.
ಹೀಂಗಾದರೆ ಚಿನ್ನಕ್ಕೆ ಮುಖ್ಯಸ್ಥ ಆರು? – ಹೈದಾರಾಬಾದಿಂದ ಸುದ್ದಿ ಹೇಳ್ತ ಟಿ.ವಿ.ಲಿ ಮಾಜಿ ಮುಖ್ಯಸ್ಥ ಆಗಿದ್ದವು ಬತ್ತಾ ಇದ್ದವು ಹೇಳಿ ಶುದ್ದಿ.
ಎಂತದೆ ಇರಲಿ, ಮಾಧ್ಯ ಲೋಕಲ್ಲಿ ದೊಡ್ಡ ಬದಲಾವಣೆಯು ಆವುತ್ತಾ ಇದ್ದು – ಜೆಪಾನಿಲಿ ಬಂದ ಸುನಾಮಿಯ ಹಾಂಗೆ. ಕಾದು ನೋಡುವೋ.
ಈಗ ಒಂದು ‘ವಿಶ್ರಾಂತಿ, ಮತ್ತೆ ಸಿಕ್ಕುವೋ’.
ಆದರೆ ಈ ಮಾತು ನೆನಪಿರಳಿ, ಚಿನ್ನದ ನ್ಯೂಸಿಂದ ಹೋಪದು ಹೋಪದೆ ಅದರಲ್ಲಿ ಎರಡು ಮಾತಿಲ್ಲೆ. ಯೇವತ್ತು ನೋಡೆಕಷ್ಟೆ.
ಕಾದೊಂಡಿರಿ.
~
ಪೆಂಗಣ್ಣ ಪ್ರಮ್ ಬೈಲು.
bingi.penga@gmail.com
ಅಯ್ಯೋ ಈ ಸುದ್ದಿಮನೆಗಳದ್ದೇ ಈಗ ದೊಡ್ಡ ಕತೆ ಅಲ್ದಾ, ವಿ.ಭಟ್ರು ಹೋಗಿ ನಮ್ಮ ಶಿವಸುಬ್ಬಣ್ಣನ ಹೆರಹೋಪಾಂಗೆ ಮಾಡ್ದ. ರವಿಹೆಗಡೆ ಹೋಗಿ ತಿಮ್ಮಪ್ಪಣ್ಣನ ಎಬ್ಸ್ದದ. ಈ ನಂಗಳ ಜೆನಗಳೇ ಎಂತಕ್ಕೆ ಹೀಂಗ್ ಮಾದ್ತ್ ಗೊತ್ತಾಗ್ತಾ ಇಲ್ಲೆ. ಪಕ್ಕಾ ದೋಸ್ತ, ಅಣ್ಣ ತಮ್ಮ ಹೇಳ್ಕಂದು ಇದ್ದಂವನೇ ವಿ.ಭಟ್ರ ಮೇಲೆ ಕೆಟ್ದಾಗಿ ಬ್ರೆತಿದ್ದ ಬೆಳಗೆರೆ. ಈ ಪತ್ರಿಕೆಯವರ ಬಗ್ಗೇ ಒಂದು ಪತ್ರಿಕೆ ಮಾಡ್ಳಕ್ಕು ಕಾಣ್ತು.
ಅವ ಹೋಪದು ಅಪ್ಪಡ.
ಕಾರಣ ಒಂದೇ ಹೆಸರಿನ ಇಬ್ರಿಂಗೂ ಒಳನ್ದೊಳ ಸರಿ “ಇಲ್ಲಾಂತ”