Latest posts by ಹಳೆಮನೆ ಅಣ್ಣ (see all)
- ಹವ್ಯಕ ಪುಸ್ತಕಂಗಳ ಲೋಕಾರ್ಪಣೆಯ ವಿಡಿಯೋ - August 28, 2012
- ಬೆದುರು ಅಕ್ಕಿಯ ಪಟಂಗೊ - June 15, 2012
- ತಂಜಾವೂರಿನ ಬೃಹದೀಶ್ವರ ದೇವಸ್ಥಾನ – ಕೆಮರಾ ಕಣ್ಣಿಲ್ಲಿ… - February 20, 2012
ಇಂದು ಚಂದ್ರ° ದೊಡ್ಡಕೆ ಕಾಂಬದಡ. ಪಟ ತೆಗವಗ ಹೇಂಗೆ ಕಾಣುಗು ಹೇಳಿ ಎನಗೂ ತುಂಬ ಕುತೂಹಲ ಇದ್ದತ್ತು. ಇದಾ… ಬೆಶಿ ಬೆಶಿ ಪಟ ನೋಡಿ ಒಪ್ಪ ಕೊಡಿ. (ಬೆಶಿ ಬೆಶಿ ಹೇಳಿದ್ದದು ಎಂತಕೆ ಹೇಳಿರೆ ಈ ಚಂದ್ರ° ಕೆಲಾವು ಜನಕ್ಕೆ ಸೆಟ್ ದೋಸೆ ಹಾಂಗೂ, ಎಣ್ಣೆಲಿ ಹೊರುದ ಗುರುವಾಯೂರು ಹಪ್ಪಳದ ಹಾಂಗೂ ಕಾಣುಗು… 🙂 )
ವಾಸ್ತವ ಸಂಗತಿಲಿ ಇಂದ್ರಾಣ ಚಂದ್ರ° ಹೆಚ್ಚು ದೊಡ್ಡ ಏನೂ ಕಂಡಿದನಿಲ್ಲೆ. ಕೆಮರಲ್ಲಿ ಝೂಮ್ ಇದ್ದ ಕಾರಣ ಚಿತ್ರಲ್ಲಿ ದೊಡ್ಡ ಕಾಣುತ್ತು ಅಷ್ಟೆ.
ಒಪ್ಪ ಕೊಟ್ಟ ಎಲ್ಲೋರಿಂಗೂ ಧನ್ಯವಾದಂಗೊ.
ಆನು ಹೊತ್ತೋಪಗ ೭ ಗಂಟೆಗೆ ನೊಡುವಾಗ ದೊಡ್ಡ ಕಂಡಿದು.ಮಕ್ಕಳೂ ನೊಡಿದವು.( ಕಾರಿಲಿ ಇತ್ತಿದ್ದೆ). ಫಟ ತೆಗೆಯಕ್ಕು ಹೇಳಿ ಮತ್ತೆ ಟೆರೇಸಿಂಗೆ ಹೋಗಿ ನೋಡುವಗ ಹಾಂಗಿತ್ತಿಲ್ಲೆ. ದೊಡ್ಡದಾಗಿ ಇದ್ದದು ಅಪ್ಪು..
ಹಳೆಮನೆ ಅಣ್ಣ,ಧನ್ಯವಾದ.
ಆನು ಇರುಳು ಚ೦ದ್ರನ ನೋಡಿದೆ.ಚೆಲ,ಬದಲಾವಣೆ ಇಲ್ಲೆ,ಉದೆಗಾಲಕ್ಕೆ ನೋಡಿದೆ,ಅದೇ ಗಾತ್ರ.
ಅ೦ತೂ ಮಾಧ್ಯಮದವಕ್ಕೆ ಒ೦ದು ಶುದ್ದಿ ಆತಿದು,ಪುಟ ತು೦ಬುಸುಲೆ.ಗಟ್ಟದವು ಗೆದ್ದೆಲಿಯೇ ಮನುಗಿದವಡ,ಹೆದರಿ.
ಹಳೆಮನೆ ಅಣ್ಣ, ತಂಪಾದ ಚಂದಪ್ಪ ಚಾಮಿಯ ಪಟವ ತೆಗದಪ್ಪಗಳೇ ಬೆಶಿ ಬೆಶಿ ಆಗಿ ಬೈಲಿಂಗೆ ಹಾಕಿದ್ದಕ್ಕೆ ಧನ್ಯವಾದಂಗ. ಚೆಂದ ಬಯಿಂದು ಆತಾ ಪಟ.
ಚ೦ದ್ರನ ನೋಡಿ ಹಳೆಮನೆ ಅಣ್ಣ೦ಗೆ ಬೆಶಿ ಆದ್ದು ಎ೦ತಕಪ್ಪ? ಚ೦ದ್ರ ತ೦ಪು ಹೇಳಿ ಮುಳಿಯ ಭಾವನ ಹಾ೦ಗಿಪ್ಪ ಕವಿಗೊ ಹೇಳ್ತವು!
ಶಿವ ಶಿವಾ!!
ಗೆಣಪ್ಪಣ್ಣೊ!
ನಿ೦ಗೊ ಹೀ೦ಗೆ ಶಬ್ದಕೋಶ ಬರದರೆ ನಿ೦ಗೊಗೆ ಶಬ್ದ`ಚೂಡಾಮಣಿ’ ಹೇಳಿ ಬಿರುದು ಕೊಟ್ಟಿಕ್ಕುಗು.
ಚೂಡಾಮಣಿ ಹೇಳುಸ್ಸರ “ಚೂಡುಮಾಣಿ” ಹೇಳ್ತವು ಬೈಲಿನ ಕೆಲವು ಎಳಕ್ಕದ ಮಕ್ಕೊ! 🙁 😉
ಹುಣ್ಣಿಮೆ ಅಮವಾಸ್ಯೆ ಬಪ್ಪಗ ಕೆಲವು ಜೆನಂಗೊಕ್ಕೆ ಚೂಡು ಎಳಗುವದು ಇದ್ದಡ. ಅಂಬಗ ಅವರ ರೆಜಾ ಜಾಗ್ರತೆಲಿ ನೋಡಿಗೊಳೆಕ್ಕು ಅಲ್ಲದಾ?
`ಎನಗೆ’ ಬೆಶಿ ಆಯಿದು ಹೇಳಿ ಆನು ಎಲ್ಲಿ ಹೇಳಿದ್ದೆ?
ನಿಜವಾದ ಹೆಸರಿಲ್ಲದ್ದೆ ಬರೆತ್ತವು ಎದುರಂಗೆ ಬಂದು ಪ್ರತಿಕ್ರಿಯೆ ಕೊಟ್ಟರೆ ಒೞೆದು. ಸುಮ್ಮನೆ ಕಾಲಹರಣ (ನೇರಂಪೋಕು) ಮಾಡೆಕ್ಕಾದ ಅಗತ್ಯ ಆರಿಂಗೂ ಇಲ್ಲೆ.
ಅದು ಲಾಯ್ಕಾಯ್ದು ಅಣ್ಣ! 😉
ಯೇ! ಎನಗೆ ಎಂಗಳ ಅಡಿಗೆ ರಾಧಣ್ಣ ಮಾಡಿದ ಹೋಳಿಗೆಯಾಂಗೆ ಕಾಣ್ತಪ್ಪ! 😉
ಅದಾ.. ಚೆನ್ನೈ ಭಾವ ರೈಲಿಲ್ಲಿ ಊರಿಂಗೆ ಬತ್ತಾ ಇಪ್ಪಗ ಗಿಳಿಬಾಗಿಲಿಲ್ಲಿ ಬಗ್ಗಿ ನೋಡಿದವಡ. ‘ಬೋಸ ಭಾವನ ಹೆಗ್ಳ ಚಂದ್ರನನ್ನೂ ಮಾಂದಿಹಾಕಿದ್ದು ಇಂದು ಸರೀ ಕಾಣ್ತು’ ಹೇಳಿ ಸಮೋಸ ಕಳುಸಿದ್ದವು.
ಅಪ್ಪುಳಿ..!! ಮಾಟೆಗೊ ಇದ್ದಡ.. ಚ೦ದ್ರನ ಮೇಲೆ.. ಪಟಲ್ಲಿಯೂ ಸರೀ ಕಾಣ್ತು ನೋಡಿ ಬೇಕಾರೆ… 😉
ಕೆಮರಾಲ್ಲಿ ದೊಡ್ಡ ಕಾಣ್ತನೋ ಚ೦ದಾಮಾವ?
ಎನ್ನ ಕ೦ಪ್ಯುಟರು ಬೆಶಿ ಆಯ್ದು 😉
ಒ೦ದು ಬಾಲ್ದಿ ನೀರು ಹೊಯಿ.. ತಣ್ಣ೦ಗಕ್ಕು.. ಏ?? 😀
ಒ೦ದು ಕೊಡಪ್ಪಾನ ನೀರು ತರ್ಲಿಯೊ ಹೇ೦ಗೆ? 😉
ಬರೆ ೧೨ಶೇಕಡಾ ದೊಡ್ಡ ಕಾಂಬದು,ನಮಗೆ ಬರೀ ಕಣ್ಣಿಂಗೆ ವ್ಯತ್ಯಾಸ ಕಾಣುತ್ತಿಲ್ಲೆ.
ಸರಿಯಾದ ಹೊತ್ತಿಂಗೆ ಹಾಕಿದ್ದಕ್ಕೆ ಧನ್ಯವಾದ.ಹೆರ ಹೋಗಿ ನೋಡಿಕ್ಕಿ ಬಂದಿಯೊ°.