Oppanna.com

ಸಮಾಜಕ್ಕೆ ‘ಡಾಕ್ಟ್ರು’ – ಅಂಬೇಡ್ಕರು

ಬರದೋರು :   ಅಕ್ಷರದಣ್ಣ    on   14/04/2011    8 ಒಪ್ಪಂಗೊ

ಅಕ್ಷರದಣ್ಣ
Latest posts by ಅಕ್ಷರದಣ್ಣ (see all)

ನಮ್ಮ ಅಕ್ಷರದಣ್ಣನ ಅರಡಿಗಲ್ಲದೋ ನಿಂಗೊಗೆ?

ಅವು ಸುಮಾರು ಒರಿಶಂದ ಕೊಡೆಯಾಲಲ್ಲಿ ಇದ್ದುಗೊಂಡು, ಕಂಪ್ಯೂಟರಿಲಿ ಚಿತ್ರ ಬಿಡುಸುತ್ತ ಕೆಲಸ ಮಾಡ್ತಾ ಇದ್ದವಡ. ಮದುವೆ ಕಾಕತ, ಪುಸ್ತಕ ಇತ್ಯಾದಿಗಳ ಡೆಸಯಿನು ಮಾಡಿ ಕೊಡುಗಡ ಚೆಂದಕ್ಕೆ. ಕಂಪ್ಯೂಟರು ಮಾಂತ್ರ ಅಲ್ಲ, ಸಾಮಾಜಿಕ ಜೀವನಲ್ಲಿಯೂ ತೊಡಗುಸಿಗೊಂಡಿದವು.
ಹಾಂಗೆ ಅವುದೇ ಒಂದು ಲೆಕ್ಕಲ್ಲಿ ಅ-ಕ್ಷರದ ಕೆಲಸ ಮಾಡ್ತವು. ಅವು ಮಾಡ್ತ ಕೆಲಸಕ್ಕೆ ಅಳಿ ಇಲ್ಲೆ,
ಕ್ಷರ ಇಲ್ಲೆ.

ಅವಕ್ಕೆ ನಮ್ಮ ಬೈಲಿನ ಬಗ್ಗೆ ಭಾರೀ ಅಭಿಮಾನ.
ಕುಂಬ್ಳೇ ಸೀಮೆಯ ಹವ್ಯಕ ಸುಲಲಿತವಾಗಿ ಮಾತಾಡುಲೆ ಕಷ್ಟ ಆವುತ್ತರೂ, ರಜ ರಜ ಮಾತಾಡ್ತವು. ಕೇಳಿದ್ದಕ್ಕೆ ಉತ್ತರ ಕೊಡ್ತವು.
ಬೈಲಿನ ಎಲ್ಲ ಶುದ್ದಿಗಳ ತಪ್ಪದ್ದೆ ಓದಿ ಅರ್ಥ ಮಾಡಿಗೊಂಗು, ಕೊಶಿ ಆದ್ದಕ್ಕೆ ಒಪ್ಪವೂ ಕೊಡುಗು.

ಇಂದಿಂದ ಅವುದೇ ಬೈಲಿಲಿ ಶುದ್ದಿ ಹೇಳ್ತವಡ. ಅವಕ್ಕೆ ಹವ್ಯಕಲ್ಲಿ ಮಾತಾಡುಲೆ ಸುಮನಕ್ಕ ಸಕಾಯ ಮಾಡ್ತವಡ.
ಬನ್ನಿ, ಅಕ್ಷರದಣ್ಣನ ಶುದ್ದಿಗಳ ಓದಿ, ಒಪ್ಪ ಕೊಡುವೊ.
ಕ್ಷರದಣ್ಣನ ಪುಟಂಗೊ:
ಬೈಲುಪುಟ: ಸಂಕೊಲೆ
ನೆರೆಕರೆ ಪುಟ: ಸಂಕೊಲೆ
ಮೋರೆಪುಟ: ಸಂಕೊಲೆ
ಓರುಕುಟ್ಟುತ್ತ ಪುಟ: ಸಂಕೊಲೆ

ಸುಮನಕ್ಕನ ಪುಟಂಗೊ:
ಮೋರೆಪುಟ: ಸಂಕೊಲೆ

ಇಬ್ರಿಂಗೂ ಸುಸ್ವಾಗತಮ್!
-ಗುರಿಕ್ಕಾರ°.

ಈಗ ವಿಶಯ ಎಂತ ಗೊತ್ತಿದ್ದಾ?
ನಿಂಗೊಗೆಲ್ಲಾ ಡಾಕ್ಟ್ರು ಬಿ ಆರ್ ಅಂಬೇಡ್ಕರರ ಪರಿಚಯ ಇದ್ದಾ?? ನಮ್ಮ ದೇಶ ಕಂಡ ಅತ್ಯುನ್ನತ ಸಾಮಾಜಿಕ ರಾಜಕೀಯ ನೇತಾರರಲ್ಲಿ ಇವು ಅದ್ಭುತ ಜನ!! ನಮ್ಮ ಸಮಾಜಕ್ಕೆಲ್ಲಾ ಇವೇ ನಿಜವಾದ ಡಾಕ್ಟ್ರು …. ಎಂತಕೆ ಹೇಳಿ ಹೇಳ್ತೆ…. ನಮ್ಮ ದೇಶಲ್ಲಿ ಕೆಲವು ತೊಂದರೆಗ ಇತ್ತನ್ನೆ, ತೊಂದರೆ ಹೇಳಿದರೆ ಅಸ್ಪ್ರುಶ್ಯತೆ!! ದೇಶ ವಿದೇಶಂಗಳಲ್ಲಿ ಅವು ಕಾನೂನು ವಿದ್ಯಾಭ್ಯಾಸ ಮುಗಿಶಿಕ್ಕಿ ಹಿಂದುಳಿದವರ ಮೇಲೆ ತಪ್ಪಲೆ ಬೇಕಾಗಿ ಅವರ ಜೀವನವನ್ನೇ ಮುಡಿಪಾಗಿ ಮಡಿಗಿದವು… ಸಂವಿಧಾನ ಶಿಲ್ಪಿ, ಆಧುನಿಕ ಮನು ಹೇಳಿ ಎಲ್ಲಾ ಹೆಸರಿದ್ದು ಇವಕ್ಕೆ… ಇಂದು ಎಂತಕೆ ಅವರ ವಿಷಯ ಹೇಳ್ತಾ ಇಪ್ಪದೂಳಿ ನಿಂಗೊಗೆ ಅಂದಾಜಿ ಆತಾ?? ಎಪ್ರಿಲ್ ೧೪ ಅವರ ಜನ್ಮ ದಿನ… ಡಾಕ್ಟ್ರ ಶ್ರದ್ಧಾಭಕ್ತಿಂದ ನೆನಪ್ಸಿಕೊಂಡು ಅವರ ಕನಸಿನ ಸಾಕಾರ ಮಾಡ್ಲೆ ಪ್ರಯತ್ನ ಆದರೂ ಮಾಡ್ತೇಳಿ ಮನಸ್ಸಿಲಿಯೇ ನಿರ್ಧಾರ ಮಾಡುವ, ಆಗದ??

ಅಲ್ಲಾ ನವಗೆ ಸ್ವಾತಂತ್ರ್ಯ ಸಿಕ್ಕಿ ೬೦ ವರ್ಷ ಆತನ್ನೆ ಆದರೂ ನಾವೆಲ್ಲಾ ಗ್ರೇಶಿದ ಹಾಂಗೆ ಪರಿಶಿಷ್ಟ ಪಂಗಡಂಗಳ ಆರ್ಥಿಕ ಮತ್ತೆ ಸಾಮಾಜಿಕ ಸ್ಥಿತಿ ಸುಧಾರ್ಸಿದ್ದಾ? ಇಲ್ಲೆನ್ನೆ… ಅದಕ್ಕೆ ಕಾರಣ ನಮ್ಮ ಆಳಿದ ಹಲವು ರಾಜಕೀಯ ಪಕ್ಷಂಗ.. ಸ್ವಾತಂತ್ರ್ಯ ಸಿಕ್ಕೆಕ್ಕಾರೆ ಮೊದಲು ಈ ಅಸ್ಪ್ರುಶ್ಯತೆ ಇಪ್ಪಲಾಗ ಹೇಳಿ ಡಾಕ್ಟ್ರು ತುಂಬಾ ಕೆಲಸ ಮಾಡಿದ್ದವು, ಆದರೆ ಸ್ವಾತಂತ್ರ್ಯದ ಮತ್ತೆ ಇದು ಬೇರೆಯೇ ವಿಕೃತ ರೂಪ ಪಡಕೊಂಡತ್ತು… ಅದು ಎಂತ ಹೇಳಿ ನಾವೀಗ ನೋಡುವ….

ಈ ಪದ್ಧತಿಯ ನಿರ್ನಾಮ ಮಾಡೆಕ್ಕೂಳಿ ಸಾಧು ಸಂತರು ಎಲ್ಲಾ ಹಲವು ದಾರಿಗಳ ಮೂಲಕ ಪ್ರಯತ್ನ ಪಟ್ಟಿದವು. ಶಿವಾಜಿ ಅಸ್ಪ್ರುಶ್ಯರನ್ನೆ ಒಟ್ಟು ಸೇರ್ಸಿ ಸೈನ್ಯ ಕಟ್ಟಿ ದೇಶ ರಕ್ಶಣೆ ಮಾಡಿದ್ದವು ಗೊಂತಿದ್ದಾ?? ರಾಮಕೃಷ್ಣ ಪರಮಹಂಸರು ನಡು ಇರುಳು ಹೀಂಗೆ ಒಬ್ಬನ ಮನೆಗೆ ಹೋಗಿ ಶೌಚ ಕ್ಲೀನ್ ಮಾಡಿಕ್ಕಿ ಬಯಿಂದವಡ.. ಸ್ವಾಮಿ ವಿವೇಕಾನಂದರು ಕೇರಳದ ಅಸ್ಪ್ರುಶ್ಯತೆಯ ಅವಸ್ಥೆ ನೋಡಿ ‘ಇಡೀ ಕೇರಳ ಪ್ರಾಂತವೇ ದೊಡ್ಡ ಹುಚ್ಚರ ಸಂತೇಳಿ’ ಹೇಳಿತ್ತಿದ್ದವು.. ಸಾವರ್ಕರ್ ದೆ ಈ ವಿಷಯಕ್ಕೆ ಮಹತ್ವ ಕೊಟ್ಟಿದವು. ದೇವರಿಂಗೆ ಇಷ್ಟದ ಜನ ಹೇಳ್ವ ಅರ್ಥಲ್ಲಿ ‘ಹರಿಜನ’ ಶಬ್ದವ ಗಾಂಧೀಜಿ ಉಪಯೋಗ್ಸುಲೆ ಶುರು ಮಾಡಿದ್ದು. ಒಟ್ಟಿಂಗೆ ಡಾಕ್ಟ್ರ ಅದ್ಭುತ ಪ್ರಯತ್ನ! ಇದೆಲ್ಲದರಿಂದಾಗಿ ಅಸ್ಪ್ರುಶ್ಯತೆ ರಜಾ ಕಡಮ್ಮೆ ಆತು. ಹಾಂಗಾಗಿ ಡಾಕ್ಟ್ರ ಆಧುನಿಕ ಯುಗದ ‘ಮಹಾ ಬ್ರಾಹ್ಮಣ’ ಹೇಳಿರೆ ತಪ್ಪಲ್ಲ!!

ಇಷ್ಟೆಲ್ಲಾ ಆದರೂ ಈಗ ಹೊಸತ್ತು ಒಂದು ಅಪಾಯ ನಮ್ಮ ಎದುರು ಬಯಿಂದು. ಅವಕ್ಕೆ ನಮ್ಮಲ್ಲಿ ಮೋಸ ಆಯಿದು ಹೇಳಿ ಅದರನ್ನೆ ಉಪಯೋಗ್ಸಿಗೊಂಡು ನಮ್ಮ ಬಗ್ಗೆ ಒಳುದ ಹಿಂದೂ ಜನರಲ್ಲಿ ದ್ವೇಷ ಬಿತ್ತುವ ಕೆಲಸವ ಸ್ವಾರ್ಥಿ ನಾಯಕರು ಮಾಡ್ತಾ ಇದ್ದವು.. ಈಗಾಣ ಕಾಲಲ್ಲಿ ಕೇರಳಲ್ಲಿ ಕಮ್ಯುನಿಸ್ಟರು ಇನ್ನೂ ಇದ್ದವೂಳಿ ಆದರೆ ಅದಕ್ಕೆ ಕಾರಣ ಇದುವೆ!! ಇಲ್ಲ ಸಲ್ಲದ್ದೆಲ್ಲಾ ಹೇಳಿ ಹಿಂದೂ ಜನಂಗಳ ನಡುಗೆ ಮತ ಒಡದು ಹೋಪ ಹಾಂಗೆ ಮಾಡ್ತವು. ಇದೆಲ್ಲದರ ಮಧ್ಯೆ ಹೊಸ ವಿಷಯ ಎಂತ ಗೊಂತಿದ್ದಾ?? ಹರಿಜನಂಗ ಹಿಂದುಗಳೇ ಅಲ್ಲಾಳಿ ಹೊಸ ರಾಗ ಸುರುವಾಯಿದು. ಕ್ರೈಸ್ತ – ಮುಸಲ್ಮಾನರ ಹಾಂಗೆ ಇವುದೆ ಅನ್ಯಧರ್ಮದವೂಳಿ ಹೊಸ ಕಥೆ ಕಟ್ಟುಲೆ ಶುರು ಮಾಡಿದ್ದವು. ಇದಕ್ಕೆಲ್ಲಾ ಜೈ ಹೇಳುಲೆ ನಮ್ಮ ರಾಜಕೀಯದವು ಸೈ! ಅವಕ್ಕೆ ವೋಟ್ ಸಿಕ್ಕಿರೆ ಆತಲ್ಲಾ!! ಕ್ರೈಸ್ತ ಪಾದ್ರಿಗ ಎಲ್ಲಾ ಧನ-ಧಾನ್ಯ ಬಲಂದಲೇ ಜಿಲ್ಲೆ- ಜಿಲ್ಲೆಗಳನ್ನೇ ಅವರ ವೋಟ್ ಬಾಂಕ್ ಗೆ ಎಳೆತ್ತಾ ಇದ್ದವು.

ಒಂದರಿ ಹರಿಜನಂಗೊಕ್ಕೆ ಅವು ಹಿಂದೂಗ ಅಲ್ಲಾ ಹೇಳ್ವ ಭಾವನೆ ಬಂದರೆ ಮತ್ತೆ ಭಾರತ ಛಿದ್ರ ಆತು ಹೇಳಿಯೆ ಲೆಕ್ಕ!! ಹಿಂದುತ್ವದ ಭಾವನೆ ನಮ್ಮಲ್ಲಿ ಕಣ್ಮರೆ ಆದರೆ ಮಾತೃ ಭೂಮಿಯ ಕಲ್ಪನೆ, ಭಕ್ತಿ ಭಾವನೆ, ಮಹಾ ಪುರುಷರ ಬಲಿದಾನ ಹೀಂಗೆ ಎಲ್ಲವೂ ಕೇವಲ ಶಬ್ದಂಗ ಆಗಿಯೇ ಒಳುದು ಬಿಡುಗು.

ಹೀಂಗೆ ಎಲ್ಲಾ ನೋಡಿರೆ ಇದ್ದನ್ನೆ ಮಹಾಪುರುಷ ಅಂಬೇಡ್ಕರರ ಹೆಸರು ಹೇಳಿಗೊಂಡು ನಮ್ಮ ಭಾರತವನ್ನೇ, ಭಾರತದ ಅಪಾರವಾದ ಕಲ್ಪನೆಯನ್ನೇ ಒಡದು ಹಾಕುಲೆ ಕೆಟ್ಟ ಜನಂಗೊ ಪ್ರಯತ್ನ ಪಡ್ತಾ ಇಪ್ಪದು ಗೊಂತಾವ್ತು. ಇದಕ್ಕೆ ನಾವೆಂತ ಮಾಡೆಕ್ಕು ಹೇಳಿರೆ ಇನ್ನಾದರು ಎಲ್ಲರಿಂಗೂ ನಿಜವಾದ ವಿಷಯ ಎಂತಾ ಹೇಳಿ ಬಿಡಿಸಿ ಹೇಳೆಕ್ಕು! ಅಲ್ಲದ? ಎಂತ ಹೇಳ್ತಿ ನಿಂಗ? ಡಾಕ್ಟ್ರ ಹುಟ್ಟಿದ ದಿನ ಇಂದು ಹಾಂಗೆ ಇಷ್ಟೆಲ್ಲಾ ವಿಷಯ ಬಂತಿದಾ….ಈ ಲೆಕ್ಕಲ್ಲಿ ಆದರೂ ನಾವು ಇಂದಿಂದ ಈ ಕೆಲಸವ ಶುರು ಮಾಡುವ ಆತಾ??

ಅನುವಾದ: ಸುಮನ ಮುಳ್ಳುಂಜ

8 thoughts on “ಸಮಾಜಕ್ಕೆ ‘ಡಾಕ್ಟ್ರು’ – ಅಂಬೇಡ್ಕರು

  1. ಅಕ್ಷರದಣ್ಣಾ, ಶುದ್ದಿ ಹೇಳ್ತ ರೂಪಲ್ಲಿ ಬೈಲಿಂಗೆ ಬಂದ ನಿಂಗೊಗೆ ಸ್ವಾಗತ!!

    ನಿಂಗಳ ಶುದ್ದಿ ಲಾಯ್ಕಲ್ಲಿ ಬಯಿಂದು. ಒಳ್ಳೆ ವೆಗ್ತಿತ್ವದ ಬಗ್ಗೆ ಸರಿಯಾದ ದಿನ, ಸರಿಯಾದ ರೀತಿಲಿ ಹೇಳಿದ್ದಿ. ಹೀಂಗಿರ್ತ ಮಹಾನ್ ವೆಗ್ತಿಗಳ ಬಗ್ಗೆ ನಿಂಗೊಗೆ ತುಂಬಾ ಅರಡಿಗು ಅಲ್ಲದಾ? ಅವರ ಎಲ್ಲರ ಎಂಗೊಗೆದೇ ಪರಿಚಯ ಮಾಡ್ಸಿಕ್ಕಿ. ಎಂಗಳೂ ಇನ್ನೂ ಹೆಚ್ಚು ಹೆಚ್ಚು ತಿಳ್ಕೊಳ್ತೆಯಾ ಅವರ ವೆಗ್ತಿತ್ವಂಗಳ ಬಗ್ಗೆ!!

    ನಿಂಗಳ ಶಬ್ಧಂಗಳ ಅನುವಾದ ಮಾಡಿದ ಸುಮನಕ್ಕಂಗುದೇ ಸ್ವಾಗತ ಮತ್ತೆ ಧನ್ಯವಾದಂಗ. ಅಕ್ಷರದಣ್ಣನ ವಿಷಯ ಬಂಢಾರವ ನಮ್ಮ ಭಾಷೆಲಿ ಹೆರ ಹಾಕುತ್ತಲ್ಲಿ ಸುಮನಕ್ಕನ ಸಹಕಾರಕ್ಕೆ ಅಭಿನಂದನೆಗಾ…

    ಸುಮನಕ್ಕಾ, ಅಕ್ಷರದಣ್ಣನ ಖಜಾನೆಂದ ವಿಶಯಂಗಳ ಮೊಗದು ಕೊಡಿ ಬೈಲಿಂಗೆ, ಹಾಂಗೆ ಮುಂದೆ ಅವ್ವೇ ನಮ್ಮ ಭಾಷೆಲಿ ಬರವಲೆದೇ ಅವಕ್ಕೆ ನಿಂಗಳೇ ಮಾರ್ಗದರ್ಶಕರಾಗಿ.. ಈಗಾಗಳೆ ಅವಕ್ಕೆ ನಮ್ಮ ಭಾಶೆ ಬತ್ತು. ಮಾತಾಡ್ಲೆ ಸಂಕೋಚ ಮಾಡ್ತವು ಅಷ್ಟೇ!!!

    ಇನ್ನುದೇ ಬರಲಿ ಶುದ್ದಿಗಾ..

  2. ಅಕ್ಷರದಣ್ಣಾ,ಆತ್ಮೀಯ ಸ್ವಾಗತ.
    ಭಾರತದ ಸ೦ವಿಧಾನ ರಚನೆಯ ನಾಯಕತ್ವ ಅ೦ಬೇಡ್ಕರ್ ವಹಿಸಿತ್ತಿದ್ದವು.ಅವರ ಒಟ್ಟಿ೦ಗೆ ದುಡಿದ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್,ಅಲ್ಲಾಡಿ ಗೋಪಾಲಸ್ವಾಮಿ ಅಯ್ಯರ್,ಕನೆಯಲಾಲ್ ಮುನ್ಶಿ ಮೊದಲಾದ ಕಾನೂನಿನ ತಜ್ಣ೦ಗೊ ಚೌಕಿಲಿಯೇ ಬಾಕಿ ಆದವು,ಅ೦ಬೇಡ್ಕರ್ ರೈಸಿದವು.
    ಏನೇ ಇರಳಿ.ಇ೦ದು ಅ೦ಬೇಡ್ಕರ್ ನ ಹೆಸರಿನ ವೋಟು ಬೇ೦ಕಿನ ರಾಜಕೀಯಕ್ಕೆ ಬೇಕಾದ ಹಾ೦ಗೆ ಉಪಯೋಗ ಮಾಡುತ್ತಾ ಇಪ್ಪದು ಬೇಜಾರಿನ ಸ೦ಗತಿ.ಜಾತಿ ಧರ್ಮದ ಹೆಸರಿಲಿ ದೇಶದ ಜೆನ೦ಗಳ ಒಡದು ಆಳುವ ನಾಯಕರ ಖ೦ಡಿಸೆಕ್ಕು.ಭಾರತೀಯ ಹೇಳಿ ಹೆಮ್ಮೆಲಿ ಹೇಳುವ ಎಲ್ಲ ಜೆನ೦ಗಳೂ ಒ೦ದು ಹೇಳುವ ಚಿ೦ತನೆಯ ಬೆಳೆಸೆಕ್ಕು.

  3. ಅಕ್ಷರದಣ್ಣನ ವೈಚಾರಿಕ ಲೇಖನವ ಬೈಲಿಲ್ಲಿ ಓದಿ ಕೊಶಿ ಆತು. ಎಲ್ಲೋರು, ಬೇರೆ ಬೇರೆ ಜಾತಿಯವು ಆಗಿದ್ದರುದೆ, ನಾವೆಲ್ಲೋರು ಒಂದು. ಭಾರತೀಯರು ಹೇಳ್ತ ಭಾವನೆ ನಮ್ಮಲ್ಲಿ ಬೇಕು. ಪ್ರತಿಯೊಂದು ಜಾತಿಗುದೆ ಅದರದ್ದೇ ಆದ ಪ್ರತ್ಯೇಕತೆ, ವೈಶಿಷ್ಟ್ಯತೆ ಇರುತ್ತು. ಅದುದೆ ಇರಳಿ, ಒಟ್ಟಿಂಗೆ ಬೇರೆ ಜಾತಿಯವುದೆ, ನಮ್ಮ ಸಹೋದರರ ಹಾಂಗೆ ಹೇಳಿ ಕಾಣೆಕು. ಎಲ್ಲಿವರೆಗೆ ನಾವೆಲ್ಲ ಒಗ್ಗಟ್ಟಾವುತ್ತಿಲ್ಲೆಯೋ, ಅಲ್ಲಿ ವರೆಗೆ ಕೆಟ್ಟ ರಾಜಕೀಯ ವ್ಯಕ್ತಿಗಳ ಸ್ವಾರ್ಥ ನೆಡದೇ ನೆಡೆತ್ತು. ಜೆನಂಗಳ ಒಡದು, ಅವರ ಹಾಳು ಮಾಡಿ ಆಳುವ ರಾಜಕೀಯ ಈಗಾಣದ್ದು. ಅಕ್ಷರದಣ್ಣನ ಕನಸು ನೆನಸಾಗಲಿ. ರಾಮ ರಾಜ್ಯ ಬರಲಿ.

  4. ಅಕ್ಷರದಣ್ಣಾ..

    ಒಳ್ಳೆ ದಿನ – ಒಳ್ಳೆ ಜನರ ಬಗ್ಗೆ – ಒಳ್ಳೆ ರೀತಿಲಿ ಶುದ್ದಿ ಹೇಳಿದ್ದಿ.
    ತುಂಬಾ ತುಂಬಾ ಕೊಶಿ ಆತು.

    ಶುದ್ದಿ ಬರವ ಆಸಗ್ತಿ, ಅದರ ಅನುವಾದ ಮಾಡಿದ ಸುಮನಕ್ಕನ ಪ್ರತಿಭೆ – ಎರಡುದೇ ಮನಸ್ಸುಮುಟ್ಟಿತ್ತು.
    ನಿಂಗೊಗೆ ಇರ್ತ ಸಮಾಜದ ಒಳದೃಷ್ಟಿ ನಿಂಗೊಗೆ ಇನ್ನೂ ಶುದ್ದಿ ಹೇಳುವ ಹಾಂಗೆ ಪ್ರೇರೇಪಣೆ ಮಾಡಲಿ – ಹೇಳ್ತದು ಒಪ್ಪಣ್ಣನ ಆಶಯ.
    ಬೈಲಿಂಗೆ ಸ್ವಾಗತ..

  5. ಅಕ್ಷರದಣ್ಣನ ಬರಹ ಇಲ್ಲಿ ನೋಡಿ ತುಂಬಾ ಕೊಶೀ ಅತು.
    ವೋಟ್ ಬ್ಯಾಂಕಿಂಗೆ ಬೇಕಾಗಿ ಪೊಲಿಟಿಕಲ್ ಪಾರ್ಟಿಯವು ಯಾವ ಮಟ್ಟಕ್ಕೆ ಇಳಿತ್ತವು ಹೇಳಿ ಕೇರಳದ ಈ ಸರ್ತಿಯಾಣ ಚುನಾವಣೆಲಿ ಕಾಣ್ತಾ ಇದ್ದು. ಒಂದು ಉಗ್ರ್ಗಾಮಿ ಸಂಘ್ಹಟೆನೆಯೊಟ್ಟಿಂಗೆ ರಾಜಿ ಮಾಡಿ ಅವರ ವೋಟ್ ತೆಕ್ಕೊಂಬ ಹುನ್ನಾರ ಮಾಡಿದವು. ಇದು ಹೀಂಗೆ ಮುಂದುವರುದರೆ ದೇಶ ಯಾವ ಸ್ಥಿತಿಗೆ ಬಕ್ಕು ಗೊಂತಾವ್ತಿಲ್ಲೆ.
    ಜೆನಂಗಳ ಒಡದು ಆಳುವ ನೀತಿಯ ಬ್ರಿಟಿಷರು ಹೇಳಿ ಕೊಟ್ಟವು. ನಮ್ಮ ರಾಜಕೀಯ ಪಕ್ಶದವು ಗಾಂಧಿಯ ಹೆಸರು ಹೇಳಿಂಡು, ಜಾತಿ ಜಾತಿಲಿ ವೈರತ್ವ ತಂದು ಅದೇ ಕೆಲಸವ ಮಾಡ್ತಾ ಇಪ್ಪದು ವಿಪರ್ಯಾಸವೇ ಸರಿ.
    ಅಂಬೇಡ್ಕರ್ ಜಯಂತಿ ಹೇಳಿ ಒಂದು ದಿನ ಸಾರ್ವಜನಿಕ ರಜೆ ಕೊಟ್ಟರೆ ಮುಗುದತ್ತು ಹೇಳ್ತ ಭಾವನೆ ಮಾತ್ರ ಇಪ್ಪ ಸರ್ಕಾರ. ಅವರ ಯಾವದೇ ತತ್ವ ಹೇಳಿರೆ ಎಂತರ ಹೇಳಿ ಎಶ್ಟು ಪೊಲಿಟಿಶಿಯನ್ಸ್ ಗೊಕ್ಕೆ ಗೊಂತಿಕ್ಕು. ಗೊಂತಿದ್ದರೂ ಕಾರ್ಯ ರೂಪಕ್ಕೆ ತಪ್ಪಲೆ ಎಷ್ಟು ತಯಾರು ಇಕ್ಕು?
    ಎಲ್ಲರೂ ಮಾದುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಹೇಳ್ತದು ಹೋಗಿ ಎಲ್ಲರೂ ಮಾಡುವುದು ಕುರ್ಚಿಗಾಗಿ, ಸ್ವಂತ ಮಕ್ಕಳಿಗಾಗಿ ಹೇಳಿ ಆಯಿದು.

  6. ಅಕ್ಷರದಣ್ಣಾ,
    ನಿಂಗಳ ಬೈಲಿಲ್ಲಿ ಕಂಡು ತುಂಬಾ ತುಂಬಾ ಖುಶಿ ಆತು.

    ಅಪ್ಪು ಅಂಬೇಡ್ಕರ್ರು ನಿಜವಾದ ಡಾಕ್ತ್ರು. ಸಮಾಜಲ್ಲಿದ್ದ-ಇಪ್ಪ ಅಸ್ಪ್ರುಷ್ಯತೆ ಹೇಳುವ ರೋಗಕ್ಕೆ ಓಪರೇಶನ್ ಮಾಡ್ಲೆ ಹೆರಟವ್ವು.
    ಪ್ರತಿಯೊಂದು ಜಾತಿಗೂ ಅದರದ್ದೇ ಆದ ವಿಶೇಷತೆಗೊ ಇದ್ದು. ಒಬ್ಬ ಒಂದು ಜಾತಿಲಿ ಹುಟ್ಟಿದ ಮಾತ್ರಕ್ಕೆ ಅವ ಆ ಜಾತಿಯವ ಆವುತ್ತ ಅಷ್ಟೆ. ಆ ಜಾತಿಯ ಮೂಲ ತತ್ವಂಗಳ ಅರ್ಥ ಮಾಡಿಗೊಂಡು ಅವನ ಕರ್ತವ್ಯಂಗಳ ನೇರ್ಪಕೆ ಮುಂದೊರಿಶಿಯೊಂಡು ಹೋದರೆ ಮಾತ್ರ ಅವ ಒಬ್ಬ ಒಳ್ಳೇ ನಾಗರಿಕ ಅಪ್ಪಲೆ ಸಾಧ್ಯ.
    ಇಂದಿನ ಈ ಅಸಮಾನತೆಗೂ ಹಿಂದಿನ ಎಂತಾರು ಕಾರಣ ಇದ್ದಿರಲೇ ಬೇಕು. ಬ್ರಾಹ್ಮಣರ ಜಾತಿಲಿ ಹುಟ್ತಿದ ಕೂಡಲೇ ಬ್ರಾಹ್ಮಣ್ಯ ಬರೆಕೂ ಹೇಳಿ ಇಲ್ಲೆ – ಬ್ರಾಹ್ಮಣ ಜಾತಿಲಿ ಹುಟ್ಟದ್ದವರಲ್ಲಿಯೂ ಬ್ರಾಹ್ಮಣ್ಯ ಇಪ್ಪಲಾಗ ಹೇಳಿಯೂ ಇಲ್ಲೆ. ವರ್ಣ ಮತ್ತು ಜಾತಿಯ differentiate ಮಾಡುವಾಗ ಆದ ತಪ್ಪುಗಳೂ ಇದಕ್ಕೆ ಕಾರಣ ಅಪ್ಪನ್ನೇ?

    ನಿಜ ಅಕ್ಷರದಣ್ಣ… ಇಂದಿಂದಲೇ ಕೆಲಸ ಸುರುಮಾಡ್ಲೇಬೇಕು…

    ಜಾತಿ ವ್ಯವಸ್ಥೆ ಬೇಕೇ ಬೇಕು. ಪ್ರತೀ ಜಾತಿಗೂ ಅದರದ್ದೆ ಆದ ಒಂದು ಅಸ್ಮಿತೆ ಇರೆಕು. ಬೇರೆ ಬೇರೆ ಬಣ್ಣದ ಹೂಗುಗೊ ಒಟ್ಟಿಂಗೆ ಇಪ್ಪ ಹೂಗುಛ್ಚ – ೭ ಬಣ್ಣದ ಕಾಮನಬಿಲ್ಲು – ಬೇರೆ ಬೇರೆ ಹವಿಕ ಭಾಷೆಸೇರಿ ಚೆಂದ ಕಾಂಬ ನಮ್ಮ ಬೈಲು – ಹಾಂಗೇ, ಬೇರೆ ಬೇರೆ ಧರ್ಮಂಗಳ ಕೂಡಿ ಇದ್ದರೇ ಚೆಂದ. ನಮ್ಮ ದೇಶ ನಿಜಕ್ಕೂ ಭಾರತ ಆಯೆಕು…

    ಜಾತಿ ಧರ್ಮಂಗೊ ಎಷ್ಟಿದ್ದರೂ ತೊಂದರಿಲ್ಲೆ – ಬೇಕಿಪ್ಪದು ಒಂದೇ ರೀತಿ ಭಾವಿಸುವ ಹ್ರುದಯ ಮತ್ತು ಮನಸ್ಸು..ಎಂತ ಹೇಳ್ತಿ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×