Latest posts by ಅಡ್ಕತ್ತಿಮಾರುಮಾವ° (see all)
- ಜೇನು..ಜೇನು..ಜೇನು.. - November 17, 2011
- ಹಲಸಿನ ಹಣ್ಣಿನ ಮೇಳ.. - August 24, 2011
- ಭೂತವ ಕಂಡಿದಿರಾ.??? - June 22, 2011
ಬೈಲಿನ ಎಲ್ಲರಿಂಗೂ ನಮಸ್ಕಾರ.
ಈಗ ಹಲಸಿನ ಕಾಯಿಯ ಕಾಲ. ಎಲ್ಲಿ ಹೋದರೂ ಕುಜುವೆಗೊ ಗೆಜ್ಜೆ ಕಟ್ಟಿದ ಹಾಂಗೆ ಕಾಣ್ತು.
ಇದಾ, ಕೆಲವು ಪಟಂಗೊ ಇಲ್ಲಿದ್ದು – ಇಲ್ಲಿಪ್ಪ ಹಲಸಿನ ಕಾಯಿಗೊಕ್ಕೆ ಒಳ್ಳೆ ಹೆಸರಿದ್ದು
ಒಂದು ಸಂಪಗೆ ಬಕ್ಕ – ಕೆಲವು ಪಟಂಗ ಅದರದ್ದು. ಇನ್ನೊಂದು ಹಪ್ಪಳ ತುಳುವ. ಇನ್ನೊಂದು ಕೆಂಪ.
ಹೀಂಗೇ ತುಂಬ ವೈವಿಧ್ಯ ಜಾತಿಯ ಹಲಸಿನ ಕಾಯಿಗೊ ಅಡ್ಕತ್ತಿಮಾರಿನ ವಳಚ್ಚಲಿಲಿಯೂ ಇದ್ದು.
ನೋಡಿ, ಹೇಂಗಿದ್ದು – ಹೇಳಿಕ್ಕಿ.
~
ಅಡ್ಕತ್ತಿಮಾರುಮಾವ°
ರೆಚ್ಹೆ ಕೂಡ ಉಪಯೋಗ ಇದ್ದು..ಮೊದಲು ಸೊಳೆ ಒಟ್ಟಿಂಗೆ ಅದರ ಕೂಡಾ ಉಪ್ಪಿಲಿ ಹಾಯಿಕ್ಕೊಂಡು ಇತ್ತವು ಜೋರು ಮಳೆ ಬಪ್ಪಗ ರೆಚ್ಹೆಗೆ ಮೆಣಸಿನ ಸೆಂಡಗೆ ಕೂಡಿ ಉಂಬ ರುಚಿ ಅದ್ಭುತ..ಅದರ ಈಗ ವರ್ಣಿಸುಲೆ ಹೆರಟರೆ ಇದ್ದನ್ನೆ ರಚ್ಹೆ ಒಂದೂ ಒಳಿಯ..!!
ನಮ್ಮ ಹಾಂಗೆ ಸಸ್ಯಾಹಾರಿಗೊಕ್ಕೆ ಎ ವಿಟಮಿನ್ ಸಿಕ್ಕುವ ಸುಲಭದ(ಹಳ್ಳಿಲಿ ಮಾಂತ್ರ)ಫಲವಸ್ತು ಹಲಸು.ಹೆರಾಣ ಮುಳ್ಳಿನ ಬಿಟ್ರೆ ಬೇರೆಲ್ಲ ತಿಂಬ ಹಾಂಗಿಪ್ಪ ವಸ್ತು ಹಲಸು ಮಾಂತ್ರ ಹೇಳಿರೆ ಅತಿಶಯೋಕ್ತಿ ಆಗ.ಕೃಷಿಕರು ಮಾರಾಟ ಮಾಡುವ ವ್ಯವಸ್ತೆ ಮಾಡಿರೆ ಒಳ್ಳೆ ಸಂಪಾದನೆಯ ದಾರಿಯೂ.
ಖ೦ಡಿತಾ ಅಪ್ಪು. ನಿನ್ನೆ ಇಲ್ಲಿ ಸುಪರ್ ಮಾರ್ಕೆಟಿಲ್ಲಿ ನೋಡಿದೆ, ಹಲಸಿನ ಬೇಳೆಗೆ ೧ ಕಿಲೊ – ೧೨೧ ರುಪಾಯಿ!! ಹಲಸಿನ ಹಣ್ಣಿನ ಸೊಳೆ ೧೦ ಸೊಳೆಯ ಒ೦ದು ಪೇಕೇಟಿ೦ಗೆ ೯೮ ರುಪಾಯಿ (ಬೇಳೆ ಇಲ್ಲದ್ದೆ)!!! ನಮ್ಮ ಕೃಷಿಕರಿ೦ಗೆ ಸರಿಯಾದ ರೀತಿಲಿ ಮಾರ್ಕೆಟಿ೦ಗೆ ಎ೦ಟರ್ ಆದರೆ ಒಳ್ಳೇ ಗುಣ ಇದ್ದು..
ರೆಚ್ಚೆ ಕೂಡ ಉಪಯೋಗ ಇದ್ದು ಹೇಳಿ ಮಾಂತ್ರ ಇನ್ನೂ ಗೊಂತಾಯ್ದಿಲ್ಲೆ ಹೇಳಿ ಕಾಣುತ್ತಪ್ಪೋ?!
ಲಾಯ್ಕಿ ಇದ್ದು
ಅಂಬಗ ಹೀಂಗೆ ಮಾಡುವನೋ ಗಣೇಶಣ್ಣ – ಅವರವರ ಕೈ ಅಡಿಗೆ ಅವಕ್ಕವಕ್ಕೆ ರುಚಿ ಆವ್ತಿಲ್ಲೇಡ. (ಶ್ರೀ ಅಕ್ಕ ಹೇಳಿದ್ದಾತೋ). ನಿಂಗಳ ಮೆಡಿ ತಂದು ಉಪ್ಪಿನಕ್ಕಾಯಿ ಹಾಕಿ ಎನಕೊಟ್ಟಿಕ್ಕಿ. ಒಪ್ಪಣ್ಣ ಸಣ್ಣ ಕುಪ್ಪಿಲಿ ಮಾಡಿ ಮಡಿಗಿದ್ದು ನಿಂಗೊಗೆ.
ಇದಾ., ಗುರಿಕ್ಕಾರು ಅಲ್ಲಿ ಕಣ್ಣು ಹೊಡಚ್ಚುಸುಗು ನೋಡಿ ಇಂತರ ಇದು ಇವ್ವು ಅನಗತ್ಯ ಚೆರಪ್ಪುತ್ತು ಹೇದು.!
ಬೈಲಿನ ಮುಂದಿನ ಮೀಟಿಂಗಿಲಿ ಎಲ್ಲರು ಓಟ್ಟಿಂಗೆ ಸೇರಿ ಕೂತು ಉಂಡ್ಲಕಾಳು,ಹಪ್ಪಳ ಮಾಡಿ ಎಲ್ಲರಿಂಗು ಹಂಚಿರೆ ಸ್ಮರಣಿಕೆ ಮತ್ತು ಪುಸ್ತಕದ ಖರ್ಚು ಓಳುಶಲಕ್ಕು ಹೇಳಿ ಮಾಷ್ಟ್ರುಮಾವನ ಸಣ್ಣಮಗಂದೇ, ಚುಬ್ಬಣ್ಣಂದೇ ಗುರಿಕ್ಕಾರ್ರ ಹತ್ತರೆ ಮಾತಾಡಿಯೊಂಡು ಇತ್ತಿದ್ದವಡ.
ಯೇ ಭಾವ , ಎನ್ನದೊಂದು ಪುಕ್ಸಟೆ ಸಲಹೆ ಕೂಡ ಇದ್ದು. ಹೇಂಗೂ ಒರುಷ ಒರುಷ ಎಲ್ಲೋರಿಂಗೂ ಉಪ್ಪಿನಕ್ಕಾಯಿ ಹಾಕೆಕು. ಎಲ್ಲೋರು ಅವರವರಿಂಗೆ ಎಡಿಗಾಷ್ಟು ಮೆಡಿ ತೆಕ್ಕೊಂಡು ಬಂದು ಒಟ್ಟು ಸೇರ್ಸಿ ಒಟ್ಟಿಗೆ ಉಪ್ಪಿನಕಾಯಿ ಮಾಡಿ ಎಲ್ಲೋರಿಂಗು ಹಂಚಿರೆಂತ ಸವಿನೆನಪು ಹೇಳಿ. (ದರ್ಮಕ್ಕೆ ಸಲಹೆ ಕೊಡ್ಲೇ ಎಟ್ಟು ಜೆನ ಬೇಕಾರು ಇದ್ದವಪ್ಪೋ!)
ಹಲಸಿನ ಮೆಡಿಯ ಉಪ್ಪಿನ ಕಾಯಿಯೋ ಭಾವಯ್ಯ?
ಗುಜ್ಜೆ ಉಪ್ಪಿನಕ್ಕಾಯಿ ಎನಗಾವ್ತು ಸುಭಗಣ್ಣನ್ಗೆಯೂ ಆವ್ತು. ನಿಂಗೊಗೆ ಬೇಕಾರೆ ಕಾನಕಲ್ಲಟೆ ಸಿಕ್ಕುತ್ತೋ ನೋಡುವ ಶ್ರೀಶಣ್ಣ
ಚೆನ್ನೈ ಭಾವಾ.. ಎನಗೆ ಗೊ೦ತಿದ್ದ ಮಟ್ಟಿ೦ಗೆ ಉಪ್ಪಿನಕಾಯಿ ಹಾಕುವಗ ಒ೦ದರಿಯ೦ಗೆ ಒ೦ದೇ ಮರದ ಮೆಡಿಯ ಉಪ್ಪಿನಕಾಯಿ ಹಾಕುವದು, ಅಲ್ಲದ್ದೆ ಹಲವು ಜನ ಹಲವು ಊರಿ೦ದ ತ೦ದ ಹಲವು ಮರ೦ಗಳ / ಹಲವು ರೀತಿಯ ಮೆಡಿಗಳ ಒಟ್ಟಿ೦ಗೆ ಸೇರಿಸಿ ಉಪ್ಪಿನ ಕಾಯಿ ಹಾಕಿರೆ ಅದು ಎಷ್ಟು ದಿನ ಉಳಿಗು? ಒ೦ದು ವಾರದ ಒಳ ಉ೦ಡು ಮುಗುಶುವೊ ಹೇಳಿರೆ ಮೆಡಿ ಉಪ್ಪಿನಕಾಯಿ ಉಣ್ಣುತ್ತ ಪಾಕಕ್ಕೆ ಬರೆಕಾರೇ ಸುಮಾರು ದಿನ ಬೇಡದೊ? ಮಾ೦ತ್ರ ಅಲ್ಲ, ಮೆಡಿ ಹಾಕೆಕಾರೆ ಅದರ ಉಪ್ಪಿಲ್ಲಿ ಬೆರಿಸಿ ದಿನಗಟ್ಲೆ ಮಡುಗೆಡದೋ?.. ಇದೆಲ್ಲ ಆಲೋಚನೆ ಮಾಡುವಗ ಇದು ಅಷ್ಟು ಪ್ರಾಯೋಗಿಕ ಅಲ್ಲದೋ ಹೇಳಿ ಕಾಣ್ತಪ್ಪಾ.. ನಿ೦ಗೊ ಎ೦ತ ಹೇಳ್ತಿ?
mena illadda halassu idduu
ಬಿತ್ತಿಲ್ಲದ ದ್ರಾಕ್ಷೆ ಹಾಂಗೇ ಬೇಳೆ ಇಲ್ಲದ್ದ ಹಲಸು ಇಕ್ಕೋ ಭಾವ?!
ಬೇಳೆ ಹೋಳಿಗೆ ಮಾಡುದು ಹೇಂಗೆ ಮತ್ತೆ?
ಬೇಳೆ ಬೇಕು, ನವಗೆ ಕೈಗೆ ಹಿಡಿತ್ತ ಮೇಣ ಬೇಡ ಭಾವಯ್ಯಾ ..
ಹಶುವಾವುತ್ತು.. ಹಣ್ಣಿನ ಪರಿಮಳ ಬತ್ತು. ಬಾಯಿಲಿ ನೀರರಿತ್ತು.
ಮರಕ್ಕೆ ಕಣ್ಣು ಮುಟ್ಟುಗು.
ಯೇ ಉದಯಣ್ಣೋ,
ಮರಕ್ಕೆ ಕಣ್ಣುಮುಟ್ಟುಸಲೆ ಹೋದವನ ಮೂಗಿಂಗೆ ಮೇಣ ಮುಟ್ಟುಗು!
ಅದು ಹಲಸಿನ ಮರ ಅಲ್ಲದೋ? 😉
ಹಲಸಿನಕಾಯಿಗಳ ಪಟಂಗೊ ಕಣ್ಣಿಂಗೆ ಕಟ್ಟಿದ ಹಾಂಗೆ ಬಯಿಂದು. ಚೆಂದ ಆಯಿದು. ಎಂಗೊ ಪೇಟೆಯವೆಲ್ಲ ಪಟ ನೋಡಿಯೇ ಬಾಯಿಲಿ ನೀರು ಹರುಸೆಕಷ್ಟೇ !
{ಬಾಯಿಲಿ ನೀರು ಹರುಸೆಕಷ್ಟೇ }
ಕೀಬೋರ್ಡು ಜಾಗ್ರತೆ ಮಾವಾ°..
ಒಂದು ಕೀಬೋರ್ಡಿಂಗೂ – ನೂರು ಸೊಳಗೂ ಒಂದೇ ಕ್ರಯ ಅಡ, ಪೇಟೆಲಿ! 😉
ಪಟಂಗೊ ಒಪ್ಪ ಆಯಿದು…. ಪಟಲ್ಲಿಪ್ಪ ಹಲಸಿನಕಾಯಿ ಎಲ್ಲಾ ಒಟ್ಟು ಸೇರಿಸಿದರೆ ಸುಮಾರು 4000 ಹಪ್ಪಳ ಮಾಡುಲೆ ಎಡಿಗು ಅಲ್ಲದಾ ಮಾವ… 😉
{ಹಲಸಿನಕಾಯಿ ಒಟ್ಟು ಸೇರಿಸಿದರೆ 4000 ಹಪ್ಪಳ}
ಪ್ರದೀಪಣ್ಣಂದು ಇದು ಸುಲಾಬದ ಕೆಣಿ ಆತಾ!
ಹಲಸಿನ ಕಾಯಿ ಒಟ್ಟು ಸೇರುಸಿರೆ ಹಪ್ಪಳ ಆಗ!
ಒಟ್ಟು ಸೇರುಸೇಕಾದ್ದು ಹಲಸಿನಕಾಯಿಯ ಅಲ್ಲ, ಬೈಲಿನ ನೆರೆಕರೆಯೋರ! 😉
ಉಂಡೆ ಮಾಡ್ಳೆ ಆನು ತಯಾರು. ನಿಂಗೊ ಇದ್ದಿರೋ ಒಟ್ಟಿಂಗೇ?
ಎಂತಕೆ ಉಂಡೆ ತಿಂಬಲೋ?!!
🙂
ಆನು ಹೇಳಿದ್ದು ಪಟಲ್ಲಿಪ್ಪ ಹಲಸಿನಕಾಯಿಗಳ ಎಲ್ಲವನ್ನೂ ಹಪ್ಪಳ ಮಾಡಿದರೆ ಸುಮಾರು 4000 ಅಕ್ಕು ಹೇಳಿ… ಹಪ್ಪಳ ಮಾಡ್ತರೆ ಆನುದೆ ಇದ್ದೆ…. 🙂
ಹಪ್ಪಳದ ಹಸಿ ಹಿಟ್ಟಿನ ಉಂಡೆಯ ಬಾಯಿಗೆ ಹಾಕುತ್ತ ಪ್ಲಾನೋ ನಗೆ ಮಾಣಿ?
ಮನೆಲಿ ಮಾವ ಇಪ್ಪಾಗ ಹಪ್ಪಳ ಮಾಡಿಗೊಂಡಿದ್ದದು ನೆಂಪಾವುತ್ತು.ಇಂದು ಮಾವನೂ ಇಲ್ಲೆ,ಹಲಸಿನ ಮರಂಗಳೂ ಇಲ್ಲೆ.ರೋಟು ಅಗಲ ಮಾಡುಲೆ ಹೇಳಿ ಸೊಳೆ ಹೊರಿವ, ಹಪ್ಪಳ ಮಾಡುವ ,ಪೆರಟಿ ಕಾಸುವ,ಹಣ್ಣು ಮಾಡುವ ಮರಂಗಳ ಎಲ್ಲ ಕಡುದವು……..ಈ ವರುಷದ ಫಲ ಮುಗಿಯಲಿ ಹೇಳಿ ಬೇಡಿಗೊಂಡೆ.ಕೇಳಿದ್ದವಿಲ್ಲೆ ಮಾಪ್ಳೆಗೊ…………..
ಮಾವ ಸ್ಪೇಷಲ್ ಹೇಳಿ ಬರದ್ದರ ನೋಡಿ ,ಹೊಸ ನಮುನೆಯ ತಿಂಡಿ ಮಣ್ಣ ಇಕ್ಕು ಹೇಳಿ ಗ್ರೇಶಿದ್ದು. ಇಲ್ಲಿ ನೋಡಿರೆ ಪಟ ಮಾಂತ್ರ.
ಪಟ ಲಾಯಿಕ್ಕ ಬಯಿಂದು.
ಇಲ್ಲಿ ಪಟ ನೋಡಿ ಒಪ್ಪ ಹಾಕಿದವಕ್ಕೆಲ್ಲ ಒಂದು ಕಟ್ಟ ಹಲಸಿನ ಹಪ್ಪಳ , ಒಂದು ಹಣ್ಣು ಕಳುಸಿ ಕೊಡುವ ಅಂದಾಜಿಲಿ ಇದ್ದೀರಡ ಅಪ್ಪೋ?
{ಇಲ್ಲಿ ಒಪ್ಪ ಹಾಕಿದವಕ್ಕೆಲ್ಲ ಒಂದು ಕಟ್ಟ ಹಪ್ಪಳ}
ಅದಪ್ಪೋ ಅಡ್ಕತ್ತಿಮಾರುಮಾವಾ?
ಹಾಂಗಾರೆ ಗುರಿಕ್ಕಾರ್ರ ಹತ್ರೆ ಹೇಳಿ ಕೊಳಚ್ಚಿಪ್ಪು ಬಾವನ ಒಪ್ಪ ಉದ್ದುಸುವೇ..
ಲಲ್ಲ ಲಲ್ಲ ಲಾ.. 😉
(ಅಷ್ಟಪ್ಪಗ ಎನಗೆ ಮಾಂತ್ರ ಹಪ್ಪಳಕಟ್ಟ)
🙂
ಗುಜ್ಜೆ ತಾಳು ತಿ೦ದಷ್ಟು.. ಅಲ್ಲಲ್ಲ…ಪೆರಟು ಪಾಯಸ ಸುರುದಷ್ಟು ಕೊಶಿ ಆತು ಮಾವ,ಪಟ ನೋಡಿ.
@ ಕುಮಾರ ಸರ್ಪ್ಪಂಗಳ ..ಅಪ್ಪು ಬೆಳೆಯೆಕ್ಕಸ್ತ್ತೆ ..ಒಪ್ಪಕ್ಕೆ ಧನ್ಯವಾದಂಗ..@ಮಂಗ್ಳೂರ ಮಾಣಿ.. ಧನ್ಯವಾದಂಗ..
ಏ ಬೋಚ ಬಾವೋ ..ನವಗೆ ಹಪ್ಪಳ ಆಗೆಡದ?ಉಪ್ಪಿಲಿಹಾಕಲೆ ಬೇಕಲ್ಲದಾ..ಮತ್ತೆ ರಜ್ಜ ಬೈಲಿಲಿ ಹಂಚುದು ಹೇಂಗೂ ಇದ್ದನ್ನೆ…ಎಂತ ಹೇಳುತ್ತೆ? ಮತ್ತೆ ನೀನು ಮಳೆಗಾಲಲ್ಲಿ ಬಂದರೆ ಉಂಡಲ ಕಾಳು ಮಾಡೆಡದಾ..?ನಿನಗೆ ಹಲ್ಲಿಲ್ಲೆ ಹೇಳಿ ಕೊಡದ್ದೆ ಇಪ್ಪಲೆ ಆವುತ್ತಾ? ಚೆನ್ನೇಯ್ ಬಾವ ಚೀಲ ತತ್ತ ಸುದ್ದಿ ಹೇಳಿದ್ದವು ಆ ಹೆಳೆಲಿ ಆದರೂ ಒಂದರಿ ಇಲ್ಲಿಗೆ ಬನ್ನಿ ಬಾವ..
ಯಬೋ…!!! 😛
ಅದು ಹಲಸಿನ ಮರ ಅಪ್ಪನ್ನೆ?? 😀
ಮಾವ° ಎನ್ನದೊ ಒ೦ದು ಪ್ರಶ್ಣೆ..!! 🙂
ಅಲ್ಲಾ ಕೆಳ ಇಪ್ಪದರವೇ ತಿ೦ದು ಮುಗಿಯಾ..!! 😀
ಕೊಡಿಲಿಪ್ಪದರ ಎ೦ತ್ಸರ ಮಾಡ್ತದು?? 😉
🙂 ಫಟಂಗ ಲಾಯಕ ಬೈಂದು…
ಮಾವ ಪಟ ತೋರ್ಸಿಯೇ ನಿವ್ರಿತ್ತಿಯೋ?! ಈ ಒರುಷ ಇಟ್ಟು ಕಟ್ಟ ಹಪ್ಪಳ ಮಾಡಿದ್ದಿ . ಇದಾ ಪ್ರತಿ ವೆರೈಟಿಲಿ ಒಂದೊಂದು ಕಟ್ಟ ಹಪ್ಪಳ ಎನಗೆ ಆತೋ. ಮಾವ ಕೊಟ್ಟಿಗೆ ಎಂದು?. ಪೆರಟಿ ಒಣಗಿಯಪ್ಪಗ ಕಾಗದ ಹಾಕಿ . ಚೀಲ ತೆಕ್ಕೊಂಡು ಬತ್ತೆ ಅಕ್ಕೋ.
ಯಾವ ಹಲಸಿನಕಾಯಿಯುದೆ ಬೆಳದ್ದಿಲ್ಲೆ……….
ಪಟಂಗ ಭಾರೀ ಲಾಯಿಕ್ಕ ಆಯಿದು………
ಅದರಲ್ಲಿ ತುಂಬಾ ಹಲಸಿನ ಕಾಯಿ ಇದ್ದ ಕಾರಣ ಬೆಳದಿರ ಅಲ್ಲದೋ????????
ಅಣ್ಣ ಇಷ್ಟು ಹಲಸಿನ ಕಾಯಿ ಇದ್ದು ಹೆಳಿ ಗೊನ್ಥಿದ್ದರೆ ದೀಪಿ ಮೊನ್ನೆ ನಿನ್ಗಳಲ್ಲಿಗೆ ಬರ್ತಿದ್ದಡ್ಡ…;-) ಫೊತೊ ಲಾಯಿಕ ಬೈನ್ದು…ಹಣ್ನು ತಿ೦ಬಲೆ ಬತ್ತೆಯಾ…;-)
ವಿನಯತ್ತೇ..
ನಿಂಗೊ ಹಪ್ಪಳ ಮಾಡ್ತ ದಿನ ಬನ್ನಿ, ಅದು ಒಣಗುತ್ತ ದಿನಕ್ಕೆ ಆನು ಬತ್ತೆ! 😉
engalalli mena illadda halasina mara iddu maavaa.
eega ella bhavandra maneliyude dinagilu helttange gujje palya,halasina kaayi dose, halasina kaayi sonte, ityadiga irtalladaa?
functioninge hodaru alli 1 bage halsina palya irte irtu.