- ರಘು ಮುಳಿಯಂಗೆ ಸಿಂಗಪುರ ಕನ್ನಡ ಸಂಘದ ಪ್ರಶಸ್ತಿ - November 10, 2015
- ಯುನಿಕೋಡ್ ೭.೦ ಬೀಟಾ - March 16, 2014
- ವಿಕಿಪೀಡಿಯಲ್ಲಿ ಹವ್ಯಕ ಬಗ್ಗೆ - April 2, 2013
ನಮ್ಮ ಕುಂಞಿಮಾಣಿ ಡಿಗ್ರಿ, ವೇದಪಾಠ ಎಲ್ಲ ಮಾಡ್ಕೊಂಡಿದ್ದ. ಬೆಂಗಳೂರಿಲಿ ಪೌರೋಹಿತ್ಯ ಮಾಡ್ಕೊಂಡಿದ್ದ. ಒಳ್ಳೆ ಸಂಪಾದನೆನೂ ಇದ್ದು. ಆದ್ರೆ ಅವಂಗೆ ಮದ್ವೆ ಅಪ್ಪಲೆ ಕೂಸೇ ಸಿಕ್ಕಿದ್ದಿಲ್ಲೆ. ಪ್ರಾಯ 35 ದಾಟುತ್ತ ಬಂತು. ಎಂತ ಮಾಡೊದೂಳಿ ತಲೆ ಕೆರಕ್ಕೊಂಡು ಕೆರಕ್ಕೊಂಡು ಸಾಕಾತು. ಎಲ್ಲ ದೇವಸ್ಥಾನಂಗೊಕ್ಕೆ ಹೋಗಿ ತುಲಭಾರ ಎಲ್ಲ ಮಾಡ್ಸಿ ಆತು. ಎಲ್ಲ ಕೂಸುಗಕ್ಕೂ ಐಟಿಲಿ ಕೆಲ್ಸ ಮಾಡೊ ಮಾಣಿನೇ ಆಯೆಕ್ಕು. ಕುಂಞಿಮಾಣಿ ಅವನ ಭಾವನತ್ರ ಇದಕ್ಕೆಂತ ಮಾಡೊದೂಳೀ ಕೇಳಿದ. ನೀನು ಇಂಟರ್‌ನೆಟ್‌ಲಿ ಇಪ್ಪ ವೆವ್‌ಸೈಟಿಲಿ ರಿಜಿಸ್ಟರ್ ಮಾಡ್ಸೂಳಿ ಹೇಳ್ಕೊಟ್ಟ. ಕುಂಞಿಮಾಣಿಗೆ ಅದ್ರ ಪೂರ್ತಿ ವಿವರ ಗೊತ್ತಿಲ್ಲೆ. ಪುಣ್ಯಕ್ಕೆ ಆ ವೈವಾಹಿಕ ಬ್ಯೂರೋ ಟೆಲಿಫೋನಿನ ಮೂಲಕವೂ ಕೆಲ್ಸ ಮಾಡ್ತೂಳಿ ಗೊಂತಾತು. ನಂಬರ್ ಪತ್ತೆ ಹಚ್ಚಿದ. ಮೊಬೈಲ್ ಫೋನಿಗೆ ಇಪ್ಪತೈದು ರೂಪಾಯಿ ಕರೆನ್ಸಿ ಹಾಕಿ ನಂಬರ್ ಒತ್ತಿದ.
“ಹವ್ಯಕ ವೈವಾಹಿಕ ಬ್ಯೂರೋಗೆ ತಮಗೆ ಸ್ವಾಗತ. ಕನ್ನಡ ಭಾಷೆಗೆ ಸಂಖ್ಯೆ ಒಂದನ್ನು ಒತ್ತಿ. For English press 2.”
ಕುಂಞಿಮಾಣಿ ಒಂದು ಒತ್ತಿದ.
“ಕನ್ನಡ ಭಾಷೆಗೆ ಸಂಖ್ಯೆ ಒಂದನ್ನು ಒತ್ತಿ. ಹವ್ಯಕ ಭಾಷೆಗೆ ಸಂಖ್ಯೆ ಎರಡನ್ನು ಒತ್ತಿ.”
ಇದು ಹವ್ಯಕ ಭಾಷೆಲಿಯೂ ಇದ್ದು ಹೇಳಿ ನಮ್ಮ ಮಾಣಿಗೆ ತುಂಬ ಖುಷಿ ಆತು. ಅವ ಎರಡು ನಂಬರ್ ಒತ್ತಿದ.
“ದಕ್ಷಿಣ ಕನ್ನಡ ಹವ್ಯಕ ಭಾಷೆಗೆ ಸಂಖ್ಯೆ ಒಂದರ ಒತ್ತಿ. ಸಾಗರ ಸಿರ್ಸಿ ಹವ್ಯಕ ಭಾಷೆಗೆ ಸಂಖ್ಯೆ ಎರಡು ಒತ್ತಿ. ಗೋಕರ್ಣ ಕುಮಟ ಹವ್ಕಯ ಭಾಷೆಗೆ ಸಂಖ್ಯೆ ಮೂರು ಒತ್ತಿ.”
ಕುಂಞಿಮಾಣಿಗೆ ಇನ್ನೂ ಆಶ್ಚರ್ಯ ಆತು. ಇರ್ಲೀಳಿ ಸಂಖ್ಯೆ ಒಂದು ಒತ್ತಿದ.
“ನಿಂಗೊಗೆ ಕೂಸು ಬೇಕಾದ್ರೆ ಒಂದು ಒತ್ತಿ. ಮಾಣಿ ಬೇಕಾದ್ರೆ ಎರಡು ಒತ್ತಿ.”
ಒಂದು ಒತ್ತಿದ.
“ನಿಂಗೊಗೆ ಇದು ಸುರುವಿನ ಮದುವೆ ಆದ್ರೆ ಒಂದು ಒತ್ತಿ. ಮರುಮದುವೆ ಆದ್ರೆ ಎರಡು ಒತ್ತಿ.”
ಒಂದು ಒತ್ತಿದ.
“ನಿಂಗೊಗೆ ಸುರು ಮದುವೆಪ್ಪ ಕೂಸು ಬೇಕಿದ್ರೆ ಒಂದು ಒತ್ತಿ. ಮರುಮದುವೆ ಅಪ್ಪ ಕೂಸು ಬೇಕಿದ್ರೆ ಎರಡು ಒತ್ತಿ.”
ಒಂದು ಒತ್ತಿದ.
“ನಿಂಗೊಗೆ ಕೆಲಸಲ್ಲಿಪ್ಪ ಕೂಸು ಬೇಕಿದ್ರೆ ಒಂದು ಒತ್ತಿ. ಮನೇಲೆ ಇಪ್ಪ ಕೂಸು ಬೇಕಿದ್ರೆ ಎರಡು ಒತ್ತಿ.”
ಕುಂಞಿಮಾಣಿ ಆಲೋಚನೆ ಮಾಡಿದ. ಮನೇಲೆ ಇಪ್ಪ ಕೂಸಿಂದ ಕೆಲಸಕ್ಕೆ ಹೋಪ ಕೂಸಾದ್ರೆ ಒಳ್ಳೆದೂಳಿ ಆಲೋಚನೆ ಮಾಡಿ ಒಂದು ಒತ್ತಿದ.
“ನಿಂಗೊಗೆ ದಕ್ಷಿಣ ಕನ್ನಡದ ಕೂಸು ಬೇಕಿದ್ರೆ ಒಂದು ಒತ್ತಿ. ಸಾಗರ ಸಿರ್ಸಿ ಕಡೆಯ ಕೂಸು ಬೇಕಿದ್ರೆ ಎರಡು ಒತ್ತಿ. ಗೋಕರ್ಣ ಕುಮಟ ಕಡೆಯ ಕೂಸು ಬೇಕಿದ್ರೆ ಮೂರು ಒತ್ತಿ.”
ಒಂದು ಒತ್ತಿದ.
“ನಿಂಗೋಗೆ ಪ್ರೈವೆಟ್ ಕಂಪೆನಿಲಿ ಕೆಲಸ ಮಾಡುವ ಕೂಸು ಬೇಕಿದ್ರೆ ಒಂದು ಒತ್ತಿ. ಗವರ್ನಮೆಂಟ್ ಕೆಲಸಲ್ಲಿಪ್ಪ ಕೂಸು ಬೇಕಿದ್ರೆ ಎರಡು ಒತ್ತಿ.”
ಪ್ರೈವೇಟ್ ಕಂಪೆನಿಲಿ ಆದ್ರೆ ಸಂಬಳ ಜಾಸ್ತೀಲಿ ಆಲೋಚನೆ ಮಾಡಿದ ಕುಂಞಿಮಾಣಿ ಒಂದು ಒತ್ತಿದ.
“ನಿಂಗೊಗೆ ಫುಲ್‌ಟೈಮ್ ಕೆಲಸ ಮಾಡುವ ಕೂಸು ಬೇಕಿದ್ರೆ ಒಂದು ಒತ್ತಿ. ಪಾರ್ಟ್‌ಟೈಮ್ ಕೆಲಸ ಮಾಡುವ ಕೂಸು ಬೇಕಿದ್ರೆ ಎರಡು ಒತ್ತಿ.”
ಮಾಣಿ ಆಲೋಚನೆ ಮಾಡಿದ. ಫುಲ್‌ಟೈಮ್ ಆದ್ರೆ ಒಳ್ಳೆದೂಳಿ ಒಂದು ಒತ್ತಿದ.
“ನಿಂಗೊಗೆ ಐಟಿಲಿ ಕೆಲಸ ಮಾಡುವ ಕೂಸು ಬೇಕಿದ್ರೆ ಒಂದು ಒತ್ತಿ. ಬೇರೆ ಪ್ರೈವೇಟ್ ಕಂಪೆನಿಲಿ ಕೆಲಸ ಮಾಡುವ ಕೂಸು ಬೇಕಿದ್ರೆ ಎರಡು ಒತ್ತಿ.”
ಈಗ ಐಟಿ ಕೂಸುಗೊಕ್ಕೆ ಡಿಮ್ಯಾಂಡ್ ಜಾಸ್ತಿ. ಅಷ್ಟೇ ಅಲ್ಲ. ನಮ್ಮೂರಿನ ಕೂಸುಗೊ ಎಲ್ಲ ಬೆಂಗಳೂರಿಲಿ ಐಟಿಲಿಯೇ ಇಪ್ಪೊದು. ಹಾಂಗಾಗಿ ಐಟಿ ಹೇಳಿದ್ರೆ ಕೂಸು ಸಿಕ್ಕುವ ಚಾನ್ಸ್ ಜಾಸ್ತೀಳಿ ಆಲೋಚನೆ ಮಾಡಿದ ನಮ್ಮ ಮಾಣಿ ಒಂದು ಒತ್ತಿದ.
“ನಿಂಗೊಗೆ ಬೆಂಗಳೂರಿಲಿ ಕೆಲಸಲ್ಲಿಪ್ಪ ಕೂಸು ಬೇಕಿದ್ರೆ ಒಂದು ಒತ್ತಿ. ಬೇರೆ ಕಡೆ ಇಪ್ಪ ಕೂಸು ಬೇಕಿದ್ರೆ ಎರಡು ಒತ್ತಿ.”
ಒಂದು ಒತ್ತಿದ.
“ನಿಂಗೊಗೆ ಸಾಫ್ಟ್‌ವೇರ್‌ಲಿ ಇಪ್ಪ ಕೂಸು ಬೇಕಿದ್ರೆ ಒಂದು ಒತ್ತಿ. ಹಾರ್ಡ್‌ವೇರಿಲಿ ಇಪ್ಪ ಕೂಸು ಬೇಕಿದ್ರೆ ಎರಡು ಒತ್ತಿ. ಕಾಲ್‌ಸೆಂಟರಿಲಿ ಇಪ್ಪ ಕೂಸು ಬೇಕಿದ್ರೆ ಮೂರು ಒತ್ತಿ.”
ಈಗ ನಮ್ಮ ಮಾಣಿಗೆ ನಿಜಕ್ಕೂ ಮಂಡೆ ಬಿಸಿ ಆತು. ಇದೆಂತದಪ್ಪಾಳಿ. ಪುಣ್ಯಕ್ಕೆ ಅವನ ಹತ್ರ ಅವನ ಭಾವ ಅವ ಐಟಿಲಿಯೇ ಇಪ್ಪವ ಕೂತಿತ್ತಿದ್ದ. ಅವ ಹೇಳಿದ “ಬೆಂಗಳೂರಿಲಿ ಸಾಫ್ಟ್‌ವೇರಿಲಿಯೇ ಜಾಸ್ತಿ ಜನ ಇಪ್ಪೊದು”. ನಮ್ಮ ಮಾಣಿ ಒಂದು ಒತ್ತಿದ.
“ನಿಂಗೊಗೆ ಎಲೆಕ್ಟ್ರಾನಿಕ್ ಸಿಟಿಲಿ ಕೆಲಸಲ್ಲಿಪ್ಪ ಕೂಸು ಬೇಕಿದ್ರೆ ಒಂದು ಒತ್ತಿ. ವೈಟ್‌ಫೀಲ್ಡ್ ಐಟಿ ಪಾರ್ಕಿಲಿ ಕೆಲಸಲ್ಲಿಪ್ಪ ಕೂಸು ಬೇಕಿದ್ರೆ ಎರಡು ಒತ್ತಿ. ಗ್ಲೋಬಲ್ ವಿಲೇಜಿಲಿ ಕೆಲಸಲ್ಲಿಪ್ಪ ಕೂಸು ಬೇಕಿದ್ರೆ ಮೂರು ಒತ್ತಿ.”
ಮಾಣಿಗೆ ಇಷ್ಟೊತ್ತಿಗೆ ಸಾಕಾಗಿತ್ತು. ಸುಮ್ನೆ ಒಂದು ಒತ್ತಿದ.
“ನಿಂಗೊಗೆ ಪ್ರೋಗ್ರಾಮ್ಮರ್ ಕೂಸು ಬೇಕಿದ್ರೆ ಒಂದು ಒತ್ತಿ. ಟೆಸ್ಟಿಂಗಿಲಿ ಇಪ್ಪ ಕೂಸು ಬೇಕಿದ್ರೆ ಎರಡು ಒತ್ತಿ. ಡಾಟಾಬೇಸಿಲಿ ಇಪ್ಪ ಕೂಸು ಬೇಕಿದ್ರೆ ಮೂರು ಒತ್ತಿ. ಸಿಸ್ಟಮ್ ಸಪೋರ್ಟಿಲಿ ಇಪ್ಪ ಕೂಸು ಬೇಕಿದ್ರೆ ನಾಲ್ಕು ಒತ್ತಿ. ಗ್ರಾಫಿಕ್ ಡಿಸೈನಿಲಿ ಇಪ್ಪ ಕೂಸು ಬೇಕಿದ್ರೆ ಐದು ಒತ್ತಿ.”
ಮಾಣಿಗೆ ಈಗ ನಿಜಕ್ಕೂ ಸಾಕಾಗಿತ್ತು. ಸುಮ್ನೆ ಒಂದು ಒತ್ತಿದ.
ಅಷ್ಟೊತ್ತಿಗೆ ಮೊಬೈಲ್ ಕಂಪೆನಿಂದ ಎಡೇಲಿ ಸ್ವರ ಕೇಳಿ ಬಂತು – “ನಿಮ್ಮ ಕರೆನ್ಸಿ ಮುಗಿಯಿತು. ಪುನ ಕರೆನ್ಸಿ ಲೋಡ್ ಮಾಡಿ ಮತ್ತೆ ಕರೆ ಮಾಡಿ.”
ಹಳತ್ತಿಗೆ ಮಡಗಿದ್ದರ ತೆಗೆದು ಓದಿ ಕಮೆಂಟಿಸಿದ ಎಲ್ಲವಕ್ಕು ಧನ್ಯವಾದಂಗೊ
ಮಾವಾ ಈಗ ಹಳತ್ತಿಂಗೆ ಒಳ್ಳೆ ರೇಟಿದ್ದಡ
ಬಹಳ ಚೆನ್ನಾಗಿ ಸಂಭಾಷಣೆ ಬಂದಿದೆ. ಕುಂಗ್ ಮಾಣಿ ಕತೆ ಒಟ್ಟು ” ನರಿಯು [ಕಾಡಿನಲ್ಲಿ] ಹೋತನ ಕಾಲುಗಳ ಸಂಧಿಯ ಮಾಂಸಕ್ಕಾಗಿ — ಈಗ ಬೀಳುತ್ತದೆ ….. ಇದೀಗ ಬೀಳುತ್ತದೆ…….. ಈಗ ಬಿದ್ದೇಹೋಯಿತು……… — ಸಂಜೆಯವರೆಗೂ ಹೋತನ ಹಿಂದೆಯೇ ವ್ಯರ್ಥ ತಿರುಗಿ —– ಹೋತ ತನ್ನ ಗೂಡು ಸೇರಿತು, ನರಿ ಹ್ಯಾಪು ಮೋರೆಯಿಂದ ತನ್ನ ಗೂಡನ್ನು ಸೇರಲೇಬೇಕಲ್ಲ.
ಬರದ್ದು ಲಾಯಿಕಾಯಿದು, ಬೇಜಾರುದೇ ಆತು. ಎಂಗಳ ಬಾಯಾರು ಹೊಡೆಲಿ ಹೀಂಗೆ ಬಾಕಿ ಆದ ಮಾಣಿಗೊ 50ರಂದ ಮೇಲೆ ಇದ್ದವಡ, ಇನ್ನು ಅಪ್ಪಲೂ ಇಲ್ಲೆ .
ಹಾಸ್ಯದ ಮೂಲಕ ವಾಸ್ತವಿಕತೆಯ ಮೇಲೆ ಬೆಳಕು ಚೆಲ್ಲಿದ ಲೇಖನ ಲಾಯಕ ಆಯಿದು…
ಕಾಲಾಯ ತಸ್ಮೈ ನಮ: ನಿರಂತರವಾಗಿ ಒಂದಲ್ಲ ಒಂದು ಸಮಸ್ಯೆ… ಸ್ತ್ರೀ ಶೋಷಣೆ, ಮೇಲ್ವರ್ಗದವರಿಂದ ಕೆಳವರ್ಗದವರ ಶೋಷಣೆ, ಅತ್ತೆ ಸೊಸೆ ಜಗಳ… ಎಲ್ಲ ಕಳುದು ಈಗ ಪುರುಷರ ಶೋಷಣೆಯ ಕಾಲಕ್ಕೆತ್ತಿತ್ತೋ…
ದೇವರೇ ಎಲ್ಲ ಕಡೆ ಪ್ರೀತಿ,ಸಮಾನತೆ,ಆನಂದಗಳಿಂದ ತುಂಬಿ ತುಳುಕುವ ರಾಮ ರಾಜ್ಯವ ನೋಡುವ ಸೌಭಾಗ್ಯ ಈ ದೇಹಕ್ಕೆ ಸಿಕ್ಕಲಿ… ಎಲ್ಲರ ಮೇಲೆ ಕೃಪೆ ತೋರು ರಾಮ… ಹೊಸ ಯುಗ ಪ್ರಾರಂಭವಾಗಲಿ… ಆರಂಭ ನಮ್ಮಿಂದಲೇ…
ಸಮಾಜದ ಕಠೋರ ಸತ್ಯದ ಪ್ರತಿಬಿಂಬ…
ಸೋತವನ ಮತ್ತೂ ಮತ್ತೂ ಹಿಂಡುವದು ಇಂತಹವು. ವಾಸ್ತವತೆ ಬಗ್ಗೆ ಬೆಳಕು ಚೆಲ್ಲಿದ್ದೀರಿ. ಅಭಿನಂದನೆಗಳು.
ಬರದ ಶೈಲಿ ಲಾಯಕಾಯಿದು. ಚೆಂದದ ಬರಹ.ಇಷ್ಟ ಆತು.
ಲೇಖನ ಭಾರೀ ಲಾಯ್ಕ ಆಯ್ದು. ಓದುವಾಗ ನೆಗೆ ಬಂದರೂ ಮನಸ್ಸಿಲಿ ಬೇಜಾರಾತು.
ಪವನಜಮಾವ ಆ ಫೋನ್ ನಂಬರ್ ಯಾವದು ಹೇಳಿ ಹೇಳಿದ್ದೆ ಇಲ್ಲೇ, ಕೊಟ್ರೆ ಆರಿಂಗಾರು ಉಪಯೋಗ ಆಕ್ಕೋ ಎಂತದೋ.
ಇದರ ಟೋಲ್ ಫ್ರೀ ಮಾಡ್ಲೆ ಎಡಿಯದ ?
ಎನಿಗೆ ಗೊತ್ತಿದ್ದ ಹಾಂಗೆ ಟೋಲ್ ಫ್ರೀ ನಂಬರುಗೊ ಮೊಬೈಲಿಲಿ ಕೆಲಸ ಮಾಡ್ತಿಲ್ಲೆ
ಈ ಲೇಖನಕ್ಕೆ ಇದುವರೆಗೆ ಒಂದೇ ಒಂದು ಕೂಸು ಕಮೆಂಟ್ ಹಾಕಿದ್ದಿಲ್ಲೆ. ಎಂತಕೆ?
ಬಚಾವಾದೆ ಮಾರಯ ನೀನು..ಅಲ್ಲದ್ದರೆ ನೀನು ” ಪುಲ್ಲಿಂಗ – ಸ್ತ್ರೀಲಿಂಗ” ವ ಬರದ ಹಾಂಗೆ ಇನ್ನೊದು ಲೇಖನ ಬರೆಯಕ್ಕಾಗಿ ಬತ್ತಿತ್ತು. ಹ್ಹೆ…ಹ್ಹೆ…ಹ್ಹೆ..!
ಪವನಜಣ್ಣ,
ಚೆನ್ನೆಮಣೆಯ ಬೀಳದ್ದಜ್ಜಿ ಆಟದ ಹಾ೦ಗಾತು,ಈ ವಧು ಅನ್ವೇಷಣೆ.ಗ೦ಭೀರ ಸಮಸ್ಯೆಯ ಹಾಸ್ಯರೂಪಲ್ಲಿ ನಿರೂಪಿಸಿದ ರೀತಿ ತು೦ಬಾ ಲಾಯ್ಕಾಯಿದು.
ಒ೦ದು ವೇಳೆ ಕುಂಞಿಮಾಣಿ, ಮನೆಲಿಪ್ಪ ಕೂಸು ಅಕ್ಕು ಹೇಳಿ ಎರಡು ಒತ್ತಿದ್ದರೆ ‘ಸದ್ಯಕ್ಕೆ ಈ ನಮುನೆಲಿ ಆರೂ ಇಲ್ಲೆ,ಕರೆ ನೀಡಿದ್ದಕ್ಕೆ ಧನ್ಯವಾದ’ ಹೇಳಿ ಮುಕ್ತಾಯ ಆವುತ್ತಿತ್ತೋ ಏನೋ ..
ಪವನಜಣ್ಣ, ಸೊಗಸಾಗಿ ಬಯಿಂದು ಶುದ್ದಿ.
ಸದ್ಯ, ಮಾಣಿ ಇಪ್ಪತ್ತೈದೇ ರುಪಾಯಿ ಕರೆನ್ಸಿ ಹಾಕಿ ಅಷ್ಟೇ ಕಳಕ್ಕೊಂಡ. ನೂರೊ ಇನ್ನೂರೊ ಹಾಕಿದ್ದರೆ ಅಷ್ಟೂ ಮುಗಿವನ್ನಾರ ಒತ್ತುವ option ಇರ್ತಿತ್ತೋ ಏನೋ!
ನಿಂಗಳ ಶುದ್ದಿ ಓದಿಯಪ್ಪಗ ನೆಂಪಾತು.. “ಮೊದಲನೇ ಮದುವೆ ಆಕಾಂಕ್ಷಿಗಳು ಒಂದು ಒತ್ತಿ; ಎರಡನೇ ಮದುವೆ ಆಕಾಂಕ್ಷಿಗಳು ಮೊದಲನೇ ಹೆಂಡತಿಯ ಕೊರಳು ಒತ್ತಿ..!” ಈ ಅಮೋಘ ಉಚಿತ ಸಲಹೆ ಎನಗೆ ಹೇಳಿದ್ದು ಆರಪ್ಪಾ- ತೆಕ್ಕುಂಜ ಕುಮಾರಣ್ಣನೋ ಚೆನ್ನೈ ಭಾವನೋ- ಆರೂಳಿ ಸರೀ ನೆಂಪು ಬತ್ತಿಲ್ಲೆ. 😉
“ಮೊದಲನೇ ಮದುವೆ ಆಕಾಂಕ್ಷಿಗಳು ಒಂದು ಒತ್ತಿ; ಎರಡನೇ ಮದುವೆ ಆಕಾಂಕ್ಷಿಗಳು ಮೊದಲನೇ ಹೆಂಡತಿಯ ಕೊರಳು ಒತ್ತಿ..!” – ಹ್ಹಾ ಹ್ಹಾ. ಲಾಯಕ್ಕಿದ್ದು.
ಆದ್ರೆ ಇತ್ತೀಚೆಗೆ ನಮ್ಮ ಜಾತಿಲೇ ಅದರ ಉಲ್ಟ ಆಯಿದು 🙁
ಛೆ ಛೆ ಚೆನ್ನೈ ಭಾವ ಆಗಿರ. ಹೀಂಗಿಪ್ಪ ಐಡಿಯಾ ಎಲ್ಲಾ ಅವಂಗೆ ಆರಡಿಯಾ. ನಿಂಗಳ ಓಟ್ಟಿನ್ಗೇ ಇಪ್ಪ ಆರೋ ನಿಂಗಳ ಕೆಣಿಚ್ಚಿಸಿ ಹಾಕಲೆ…?! ಶ್ರೀಶಣ್ಣನೋ, ಪೊಸವಣಿಕೆ ಚುಬ್ಬಣ್ಣನೋ ಅಲ್ಲಾ ಅದ್ವೈತಕೀಟ … ನೆಂಪು ಮಾಡಿ.
ಆನುವೇ ಹೇಳಿದ್ದೋದು….. ನೆಂಪಾವ್ತಾ ಇಲ್ಲೆ…. ಮಾಡ್ತರೆ ಮಾಡಿ. ಆದರೆ ಎಂಗಳ ಮರೆಯೆಡಿ…. 🙂
ಮದುವೆ “ಪ್ರೋಗ್ರಾಮ್” ಆತಿಲ್ಲೆ ಹೇಳಿ ಹೇಳುಲಕ್ಕೊ? ಪ್ರಾಯ ೩೫…
“ನಿಮ್ಮ ಕರೆನ್ಸಿ ಮುಗಿಯಿತು. ಪುನ ಕರೆನ್ಸಿ ಲೋಡ್ ಮಾಡಿ”– ಮೊಬೈಲು ಕರೆನ್ಸಿ ಮುಗುದತ್ತು, ಆದರೆ ವಯಸ್ಸೆ೦ಬ ಕರೆನ್ಸಿ ಪುನಃ “ಲೋಡು” ಮಾಡುಲೆಡಿತ್ತಾ?
ಈಗಾಣ ಪರಿಸ್ಥಿತಿಯ ಒಪ್ಪ ರೀತಿಲಿ ಬರದ್ದಿ.
—————-
ಪ್ರೀತಿ ಇರಳಿ,
ವಿವೇಕ್ ಮುಳಿಯ
—————-
ಎಲ್ಲವು ಯಾನ್ತ್ತ್ರೀಕರಣ ಆಗಿ, ಹುಟ್ಟಿದ ಎರಡು ಸಮಸ್ಯೆಗೊಕ್ಕೆ ( ಮನುಶ್ಯರ ಅಲೂಚನೆದೆ, ಕಚೇರಿಗಳುದೆ) ಹಿಡುದ ಕನ್ನಟಿಯ ಹಾನ್ಗಿದ್ದು ಈ ಕಥೆ .
ಕರಾದಸ್ತರಲ್ಲಿ ಹೀನ್ಗಿಪ್ಪ ಸಮಸ್ಯೆ ನಮ್ಮನ್ದಲು ರಜ ಮೊದಲೇ ಇತ್ಥು. ಅವರಲ್ಲಿ ಕುಸುಗಳ ಸನ್ಕ್ಯೆ ಕಮ್ಮಿ ಅಡ.ಅದ್ಕ್ಕೆಈಗಾನ,ಮನೆಲಿಪ್ಪ ಮಾನಿಯನ್ಗೊ ಬೇರೆ ಜಾಥಿಯ ಕುಸುಗಳ ಮದುವೆ ಅಯಿದವು.ಬೇರೆ ಜಾಥಿಯ ಮದುವೆ ಅಪ್ಪದು ಅವಕ್ಕವಕ್ಕೆ ಬಿಟ್ಟ ವಿಚಾರ.
ಆನು ಈ ಲೇಖನವ ಎನ್ನ ಮನಸ್ಸಿಲಿ ಸುಮಾರು ಎರಡು ತಿಂಗಳುಗಳಿಂದ ಇರಿಸಿಕೊಂಡಿತ್ತಿದ್ದೆ. ಕಡೆಗೂ ಒಂದು ದಿನ ಕುಟ್ಟಿದೆ. ಇದಕ್ಕೆ ಇಷ್ಟೊಂದು ಒಪ್ಪಂಗೊ ಬಕ್ಕೂಳಿ ಗ್ರಹಿಸಿತ್ತಿದ್ದಿಲ್ಲೆ. ಎಲ್ಲವಕ್ಕೂ ಧನ್ಯವಾದಂಗೊ.
ಬಹಳ ಚೊಕ್ಕವಾದ ಬರಹ.
ಪವನಜ ಮಾವ° ಗಣಕಂಗಳ ಬಗ್ಗೆ ಒಳ್ಳೆ ಲೇಖನ ಬರೆತ್ತದು ಗೊಂತಿತ್ತು. ವಿನೋದವೂ ಬರೆತ್ತವು ಹೇಳಿ ಈಗ ಗೊಂತಾತು. ಓದಿ ಕೊಶಿ ಆತು. ಆದರೆ, ವಿಷಯ ಮಾಂತ್ರ ಗಂಭೀರವಾದ್ದದು.
ಆನು ತರ್ಲೆ ತುಂಬ ಬರಿತ್ತೆ. ನೋಡಿ http://vishvakannada.com/category/%E0%B2%B9%E0%B2%BE%E0%B2%B8%E0%B3%8D%E0%B2%AF/
ಲಾಯಿಕ ಆಯಿದು.ಕರೆನ್ಸಿ ಹಾಕ್ಸಿ ಪುನ ಕಾಲ್ ಮಾಡಿದನೋ ಮಾಣಿ?
ಬೆಕ್ಕೀಗೆ ಆಟ ಇಲಿಗೆಪ್ರಾಣ ಸಂಕಟ..ಹೇಳಿದ ಹಾಂಗೆ ಆತು ಪಾಪ ಮಾಣಿ…ಬರದ್ದು ಲಾಯಿಕ ಆಇದು ..ಒಪ್ಪಂಗಳೊಟ್ಟಿಂಗೆ..
ಇಲ್ಲೊಂದು ಮಾತು ಹೇಳ್ತವು:
ಸಣ್ಣ ಸೌಟು ಹಿಡಿವವಕ್ಕೂ (ಪುರೋಹಿತರು), ದೊಡ್ಡ ಸೌಟು ಹಿಡಿವವಕ್ಕೂ (ಅಡಿಗೆಯವಕ್ಕೂ) ಕೂಸುಗೊ ಸಿಕ್ಕುತ್ತವಿಲ್ಲೆ ಹೇಳಿ. ಇದು ಮಾತ್ರ ಅಲ್ಲದ್ದೆ ಕೃಷಿಕರಿಂಗೂ, ನಮ್ಮ ಜಾತಿಲಿ ಕೂಸು ಸಿಕ್ಕುವದು ಕಷ್ಟ ಹೇಳುವದು ಈಗಾಣ ವಾಸ್ತವ.
ಫೋನ್ ನಂಬ್ರ ಒತ್ತುತ್ತ ಸಂದರ್ಭ ಒಂದು ನೆಂಪಾವ್ತಾ ಇದ್ದು. ದೂರು ಕೊಡ್ಲೆ ಹೇಳಿ ಒಂದು ನಂಬರಿಂಗೆ ಫೋನ್ ಮಾಡಿರೆ,ಇಲ್ಲಿ ಹೇಳಿದ ಹಾಂಗೇ ನಂಬ್ರ ಒತ್ತುವ ಕೆಲಸ ಮಾಡಿದೆ. ಎಲ್ಲಾ ಅಪ್ಪಗ ಅಕೇರಿಗೆ ಅಲ್ಲಿಂದ ಬಂದ ಮಾತು “ಕರೆ ಮಾಡಿದ್ದಕ್ಕೆ ಧನ್ಯವಾದಗಳು” .ಎನಗೆ ಬೇಕಾದ ಕೆಲಸ ಆಯಿದಿಲ್ಲೆ.
ಹಾಸ್ಯದ ನಡುವೆ ಅಡಗಿರುವ ಒ೦ದು ಕಠೋರ ಸತ್ಯ..!!
oppakke ondu oppa..
ನಿಜ ಜೀವನವ, ಹಾಸ್ಯ ರೂಪಲ್ಲಿ ತೋರುಸಿದ್ದದು ಭಾರೀ ಲಾಯಕಾಯಿದು. ಬರದ ಶೈಲಿ ಓದುಸೆಂಡು ಹೋವ್ತು. ಅವರವರ ಬಾಳ ಸಂಗಾತಿಯ ಹುಡುಕುತ್ತ ಗಡಿಬಿಡಿಲಿ ಹೀಂಗೆ ಅಪ್ಪದು ಸಹಜ ಬಿಡಿ. ಆದರೆ ಎಶ್ಟೋ ಮದುವೆಗೊ ವಿವಾಹ ವೇದಿಕೆಯ ಆಶ್ರಯಲ್ಲಿ ಆದ್ದಂತೂ ಸತ್ಯ.
🙂
ಅಲ್ಲಿ ಮಾಣಿ ವೈದಿಕ, ಅದಿಗೆಯವ, ಆಟದವ ಆಗಿದ್ದಲ್ಲಿ ಕೂಡಲೇ ಹೆರ ಬಪ್ಪ ವೆವಸ್ಠೆ ಇದ್ದರೆ ಒಳ್ಲೆದು
ಹಾಸ್ಯದ ನಡುವೆ ಅಡಗಿರುವ ಒ೦ದು ಕಠೋರ ಸತ್ಯ..!! 🙁
ನಿಂಗೊಗೆ ಸಿಕ್ಕಿದ್ದಲ್ದಾ ಭಾವಾ…. ಇನ್ನೆಂತ ತೊಂದರೆ ಇಲ್ಲೆ…. 🙂 ಬೇಜಾರು ಮಾಡೆಡಿ.
ಹ್ಹಹ್ಹಹ್ಹಾ… ಭಾರೀ ಒಳ್ಳೇದಾಯಿದು ಬರಹ.. ಒಪ್ಪ೦ಗೊ
ಅದು airtel ಇರೆಕ್ಕು.
ಅದು ಸಾಪ್ಟ್‌ವೇರಿಲ್ಲಿಪ್ಪ ಬಗ್ಗು. ಅದಕ್ಕೆ ಪೇಚು ರೆಡಿ ಇದ್ದು. ಪೇಚು ಹಚ್ಚಲೆ ಮಾಂತ್ರ ಬಾಕಿ. ಇನ್ನು ಮುಂದೆ, ಕರೆನ್ಸಿ ಎಷ್ಟು ಹಾಕೆಕು ಹೇಳಿ ಐ.ವಿ.ಆರ್ ಶುರುವಿಲ್ಲೇ ಹೇಳ್ತು. “ಸಣ್ಣಮಟ್ಟಿನ ಹುಡುಕಾಟಕ್ಕೆ ೫೦ ರೂ ಕರೆನ್ಸಿ ಬಳಸಿರಿ. ದೊಡ್ಡಮಟ್ಟಿನ ಹುಡುಕಾಟಕ್ಕೆ ೧೦೦ ರೂ ಕರೆನ್ಸಿ ಬಳಸಿರಿ”.
ಇನ್ನೊಂದರಿ ಜೆಂಬ್ರ ಮಾಡ್ಸುಲೆ ಹೋದಲ್ಲಿ ಲಾಂಡ್ ಲೈನಿಂದ ಕುಂಞಿಮಾಣಿ ಫೋನು ಮಾಡಲಿ.(ಪುರೋಹಿತರಿಂಗಪ್ಪಗ ಬೇಡ ಹೇಳವು) ಹಾಂಗಾರೂ ಒಂದು ಕೂಸು ಸಿಕ್ಕುಗೋ…
ಉಮ್ಮಪ್ಪ..!!! ಸಿಕ್ಕಲಿ ಹೇಳಿ ಒಂದು ಈಡುಗಾಯಿ ಮಡುಗುತ್ತೆ. ಕೂಸು ಸಿಕ್ಕಿರೆ ಕಾಯಿ ಗಣಪತಿಗೆ..ಇಲ್ಲದ್ದರೆ ಫೊನಿಂಗೆ ಒಡವದು.
ಒಡವದು ಕಲ್ಲಿಂಗೆ ಬೇಡ ಕುಮಾರಣ್ಣ. ಕತ್ತಿಲ್ಲಿ ಅಕ್ಕು. ಮತ್ತೆ ಬೆಂದಿಗಕ್ಕು ಕಾಯಿ
ಛೇ..!!! ಹೀಂಗಪ್ಪಲಾಗ ಇತ್ತು.. ಪಾಪ ಮಾಣಿ…
ಬರದ್ದು ಲಾಯಕಾಯಿದು.
ati aase gathigedu… maate iddanne…
[ಒಳ್ಳೆ ಸಂಪಾದನೆನೂ ಇದ್ದು …… ನಂಬರ್ ಪತ್ತೆ ಹಚ್ಚಿದ. ಮೊಬೈಲ್ ಫೋನಿಗೆ ಇಪ್ಪತೈದು ರೂಪಾಯಿ ಕರೆನ್ಸಿ ಹಾಕಿ ನಂಬರ್ ಒತ್ತಿದ.] – ಛೆ., ಒಳ್ಳೆ ಸಂಪಾದನೆ ಇದ್ದೂ ಎಂತ ಗುಣ. !
[ಹವ್ಯಕ ಭಾಷೆಲಿಯೂ ಇದ್ದು ಹೇಳಿ ನಮ್ಮ ಮಾಣಿಗೆ ತುಂಬ ಖುಷಿ ಆತು] – ನವಗೂ ಭಾರೀ ಖುಶೀ ಆತಿದ.
[ಕುಂಞಿಮಾಣಿ ಆಲೋಚನೆ ಮಾಡಿದ. ಮನೇಲೆ ಇಪ್ಪ ಕೂಸಿಂದ ಕೆಲಸಕ್ಕೆ ಹೋಪ ಕೂಸಾದ್ರೆ ಒಳ್ಳೆದೂಳಿ ಆಲೋಚನೆ ಮಾಡಿ ಒಂದು ಒತ್ತಿದ.] – ಅಡ್ಡಿ ಇಲ್ಲೆ ಈ ಕುಂಞಿಮಾಣಿ . ವೈದಿಕಕ್ಕೆ ಹೋಗಿ ಬಂದಿಕ್ಕಿ ರಜ ಹೊತ್ತಾರು ಸ್ವಸ್ಥ ಹಾಯಾಗಿ ನೆಮ್ಮದಿಲ್ಲಿ ಕೂಬಲಕ್ಕು ಹೇಳಿ ಲೆಕ್ಕ ಹಾಕಿದನೋ ಎಂತ !! – ಹೀಂಗೂ ಆಲೋಚನೆ ಆವ್ತಿದ.
[ಅಷ್ಟೊತ್ತಿಗೆ ಮೊಬೈಲ್ ಕಂಪೆನಿಂದ ಎಡೇಲಿ ಸ್ವರ ಕೇಳಿ ಬಂತು – “ನಿಮ್ಮ ಕರೆನ್ಸಿ ಮುಗಿಯಿತು. ಪುನ ಕರೆನ್ಸಿ ಲೋಡ್ ಮಾಡಿ ಮತ್ತೆ ಕರೆ ಮಾಡಿ.” ] – ಮೊಬೈಲಿಲ್ಲಿ ಕರೆನ್ಸಿ ಇಲ್ಲದ್ದೆ ಕೂಸು ಹುದ್ಕಲೆ ಹೋಪಲಾಗ ಹೇಳಿ ನಿಂಗೊ ಅಕೇರಿಗೆ ಹೇಳಿದ್ದು ಪಷ್ಟು ಆಯ್ದು.!!
ತಮಾಷೆ ಬದಿಗಿರಲಿ., ಪವನಜ ಮಾವ ನಿಂಗೊ ಶುದ್ದಿ ಬರದ ಕ್ರಮ ತೆಕ್ಕೊಂಡು ಹೋಗಿ ಮತ್ತೆ ಅಕೆರಿಗೆ ನಿಲ್ಸಿದ ಕ್ರಮ ಭಾರೀ ಲಯಕ್ಕ ಆಯ್ದು. ಕೆಲವು ಜೆನಕ್ಕಾದರೂ ಹೀಂಗಿಪ್ಪ ಅನುಭವ ನಿಜಕ್ಕೂ ಆಯ್ಕು, ಇದರ ನೋಡಿರೆ ಹೊ! ನಮ್ಮಂಗೆ ಕೆಲವರಿಂಗಾಯ್ದು ಹೇಳಿ ಕಿರುನಗೆ ಬಿಡುಗು.
ವಾಸ್ತವಿಕ ವಿಚಾರ – ಚಿಂತನೀಯ ಶುದ್ದಿ ಹೇಳಿಗೊಂಡು ಇಲ್ಲಿಂದ ಒಪ್ಪ.