Latest posts by ಸುವರ್ಣಿನೀ ಕೊಣಲೆ (see all)
- ಜೀವನಲ್ಲಿ ಮುಂದೆ ಬಪ್ಪಲೆ ಓಡುದರೊಟ್ಟಿಂಗೆ ಓದುದೂ ಮುಖ್ಯವೇ - July 9, 2014
- “ಯಕ್ಷತ್ರಿವೇಣಿ” - September 24, 2012
- ಬದಲಾಗದ್ದದು ಬದಲಾವಣೆ ಮಾಂತ್ರ ! - September 12, 2012
ಹಬ್ಬ ಕಳತ್ತು, ಇನ್ನು ಮತ್ತೆ ಅದೇ ಲೈಫು !! ಶಾಲೆ, ಕಾಲೇಜು, ಆಪೀಸು, ಆ ಕೆಲಸ, ಈ ಕೆಲಸ ಎಲ್ಲ ಇಪ್ಪದೇ. ಅದರೊಟ್ಟಿಂಗೆ ಊಟ ತಿಂಡಿ ನಿತ್ಯಾಣ ಹಾಂಗೆ ನಡಕ್ಕೊಂಡು ಹೋವ್ತು. ನಿತ್ಯಕ್ಕೆ ಮಾಡುವ ಒಂದು ಸುಲಭದ ಪಾಯಸವ ಮಾಡುವ ಕ್ರಮ ಹೇಳ್ತೆ. ಎನಗೆ ಗೊಂತಿಪ್ಪ ಹಾಂಗೆ ನಮ್ಮ ದಕ್ಷಿಣಕನ್ನಡಲ್ಲಿ ಇದರ ನಾವು ಮಾಡ್ತಿಲ್ಲೆ, [ಮಾಡುವ ಕ್ರಮ ಇದ್ದರೆ,ಎನಗೆ ಗೊಂತಿಲ್ಲೆ] ಅಷ್ಟಕ್ಕೂ ಇದು ಎಂತರ ಹೇಳಿರೆ “ಪಟಕಲ ಕಾಯಿ ಪಾಯಸ”. ಇದು ಎಂಗಳ ಊರಿಲ್ಲಿ ಹಬ್ಬದ ಸಮಯಲ್ಲಿ ಬಾಳೆ ಕೊಡೀಲಿ ಬಳುಸುಲೆ ಮಾಡ್ತವು[ಅಲ್ಲಿ ಪಾಯಸಕ್ಕೆ ಹೆಚ್ಚು importance ಇಲ್ಲೆ].
ಬೇಕಾದ ವಸ್ತುಗೊ:
- ಒಂದು ಪಟಕಲಕಾಯಿ (snakegourd)
- ಬೆಲ್ಲ
- ಒಂದು ಬೌಲ್ ಅಕ್ಕಿ
- ಒಂದು ಬೌಲ್ ಕೆರದ ಕಾಯಿ
- ನೀರು
- ಏಲಕ್ಕಿ ೩-೪
ಮಾಡುವ ಕ್ರಮ:
- ಒಂದು ಗಂಟೆ ಮೊದಲು ಅಕ್ಕಿಯ ನೀರಿಲ್ಲಿ ಬೊದುಳ್ಸುಲೆ ಹಾಕೆಕ್ಕು.
- ಪಟಕಲಕಾಯಿಯ ಸಣ್ಣಕ್ಕೆ ತುಂಡು ಮಾಡೆಕ್ಕು.
- ಪಾತ್ರೆಲಿ ಪಟಕಲಕಾಯಿ ಹೋಳು, ಬೆಲ್ಲ ಮತ್ತೆ ರಜ್ಜ ನೀರು ಹಾಕಿ ಬೇವಲೆ ಮಡುಗೆಕ್ಕು.
- ಕೆರದ ಕಾಯಿ, ಬೊದುಳಿದ ಅಕ್ಕಿ ಮತ್ತೆ ಏಲಕ್ಕಿಯ ರಜ್ಜ ನೀರು ಹಾಕಿ ಕಡೆಯಕ್ಕು, ತರಿತರಿ ಅಪ್ಪಷ್ಟು ಕಡದರೆ ಸಾಕು.
- ಈ ಮಿಶ್ರಣವ ಬೆಂದ ಪಟಕಲಕಾಯಿಗೆ ಹಾಕಿ,ಅಗತ್ಯ ಇದ್ದರೆ ರಜ್ಜ ನೀರು ಹಾಕಿ.
- ಎಲ್ಲವನ್ನೂ ಒಟ್ಟಿಂಗೆ ಮತ್ತೊಂದರಿ ಕೊದುಶಿ ಇಳುಗಿ.
ಪಟಗಲದ ಪಾಯಸ ನೋಡಿ ಮೋರೆ ಅಗಲ ಆತು.ಕೂಡಲೇ ಮನೆಗೆ ತೆಕ್ಕೊಂಡು ಹೋಯೆಕ್ಕಿದ .
ಎನ್ನ ತಮ್ಮಂಗೆ ಒಂದು ಕಾಲಲ್ಲಿ ಬದನೆ ಕಂಡರಾಗ (ಕಂಡರೆ ರಾಗ). ಒಂದರಿ ಎನ್ನ ಅತ್ತಿಗೆ ನಾಳಿ ಬದನೆ ಕೊದಿಲು ಮಾಡಿ ಬಳುಸಿತ್ತು.ಈ ಮಾಣಿ ಸಂಶಯ ಬಂದು ಕೇಳಿದ°-ಎಂತ ಬಾಗ ಇದೂ ಹೇಳಿ. ಅತ್ತಿಗೆ ಹೇಳಿತ್ತು -ಬೆಂಗಳೂರು ಪಟಗಲ ಹೇಳಿ.ತಮ್ಮ ತಿಂದು ಒಳ್ಳೆ ರುಚಿ ಇದ್ದು ಹೇಳಿ ತಿರುಗಿ ಬಳುಸಿಗೊಂಡ°.ಈಗಳೂ ಅವನ ಕಂಡಪ್ಪಗ ಒಂದರಿ ನೆನಪುಸುಲೆ ಇದ್ದು..
ಸುವರ್ಣಿನಿ ಅಕ್ಕೋ,
ಒಳ್ಳೆ ಪಾಯಸ ಮಾಡ್ಲೆ ಹೇಳಿ ಕೊಟ್ಟಿದಿ. ಮಕ್ಕೊ ಅಲ್ಲದ್ದರೆ ಪಟಗಿಲ ಮಾಡಿದರೆ ತಿಂತವಿಲ್ಲೇ. ಪಾಯಸ ಪ್ರೀತಿಯನ್ನೇ!!! ರುಚಿ ಗೊಂತಾಗದ್ದರೆ ತಿನ್ನುಗು ಅಲ್ಲದಾ? 😉
ಮಜ್ಜಿಗೆ ಆಗದ್ದವು ಕತ್ತಲೆಲಿ ಉಂಡಾಂಗೆ ಅಕ್ಕು…..
ಅಪ್ಪು, ಮಕ್ಕೊ ತರಕಾರಿ ಹಣ್ಣು ತಿನ್ನದ್ದರೆ ಹೀಂಗೇ ಎಂತಾರು ಮಾಡಿ ಕೊಡೆಕ್ಕು. ಯಾವ ತರಕಾರಿ ತಿಂತವಿಲ್ಲೆ ಹೇಳಿ, ಹೊಸರುಚಿ ಮಾಡ್ಲಾವ್ತ ನೋಡುವ !!
ಎನ್ನ ಚಿಕ್ಕಮ್ಮನ ಮಗಳಿಂಗೆ ಹಸರು ಪಾಯಸ ಆಗ ! ಕಾರಣ ಎಂತರ ಹೇಳಿರೆ ಅದರ ಅಣ್ಣಂಗೆ ಆವ್ತಿಲ್ಲೆ !! ಅಣ್ಣ ತಿಂತಾ ಇಲ್ಲೆ ಹೇಳಿ ಅದುದೇ ತಿನ್ನ. ಒಂದರಿ ರಜೆಲಿ ಆನು ಹೋದಿಪ್ಪಗ, ಚಿಕ್ಕಮ್ಮ ಹಸರು ಪಾಯಸ ಮಾಡಿತ್ತವು, ಈ ಕೂಸು ಶಾಲೆಂದ ಬಂದು ಹಶು ಅಪ್ಪಗ ಸಮಾ ಹಸರು ಪಾಯಸ ತಿಂದತ್ತು [ಬಗೆ ಎಂತರ ಹೇಳಿ ತಿಂಬಗ ಗೊಂತಿತ್ತಿಲ್ಲೆ ಅದಕ್ಕೆ!] . ಮಾಡಿದ್ದು ರಜ್ಜ ಆದಕಾರಣ ಅಂದು ಇರುಳೇ ಖಾಲಿ ಆತು. ಈ ಜೆನ “ಹಸರು ಪಾಯಸ ಇಷ್ಟು ಲಾಯ್ಕಾವ್ತು ಹೇಳಿ ಗೊಂತೇ ಇತ್ತಿಲ್ಲೆ, ಎನಗೆ ನಾಳೆ ಮತ್ತೆ ಮಾಡಿ ಕೊಡು” ಹೇಳಿ ಶುರು ಮಾಡಿತ್ತು. ಈಗಳೂ ಹಸರು ಪಾಯಸದ ಶುದ್ದಿ ಬಂದಪ್ಪಗ ಅದರ ನೆಗೆ ಮಾಡ್ತೆಯ 🙂 🙂
ಓಹ್…ಎನಗೆ ಗೊಂತೆ ಇತ್ತಿಲ್ಲೇ…ಪಟಕಿಲದ್ದೂ ಪಾಯಸ ಆವ್ತು ಹೇಳಿ.ವಿವರಣೆ ಕೊಟ್ಟದಕ್ಕೆ ಧನ್ಯವಾದಂಗ…
ಮನೆಲಿ ಮಾಡ್ಸಿ ರುಚಿ ನೋಡಿ 🙂 ಅಲ್ಲದ್ದರೇ ನಿಂಗಳೆ ಅಡಿಗೆಕೋಣೆ ಹೊಕ್ಕು try ಮಾಡಿ.
(ಮನೆಲಿ ಮಾಡ್ಸಿ ರುಚಿ ನೋಡಿ)
ಮಾಡ್ಸುದು ಆರತ್ರೆ???
ಪಾಯಸ ಲಾಯ್ಕಾಯ್ದು!! ನಿಂಗ ಬಂಡಾಡಿ ಅಜ್ಜಿಯ ಕೈಂದ “ರೈಟ್ಸ್” ತೆಕ್ಕೊಂಡಿದಿರೋ!!
ಇನ್ನಣ ಸರ್ತಿ ಬೆಂಡೆಕಾಯಿ ಪಾಯಸ ವೋ ಹೆಂಗೆ ?? 😀 😀
ಬಂಡಾಡಿ ಅಜ್ಜಿಯ ಹತ್ತರೆ ಮಾರ್ಕು ತೆಕ್ಕೊಳ್ಳೆಕಷ್ಟೆ !! ಪಾಸು ಮಾಡುಗು ಕಾಣ್ತು, ಅಲ್ಲದಾ? 🙂 🙂
ಬೆಂಡೆಕಾಯಿ ಪಾಯಸ ಮಾಡ್ಲೆ ಎಡಿಯ ಹೇಳಿ ಕಾಣ್ತು. 🙂 ಇನ್ನೆಂತಾರು ಹೊಸತ್ತು , ಎಂಗಳ ಊರಿನ ಅಡಿಗೆಯ ಬರೆತ್ತೆ ಇನ್ನಾಣ ಸರ್ತಿ 🙂
ಬೆಂಡೆ ಕಾಯಿ ಪ್ರಯೋಗ ಮಾಡ್ತೆಯಾ?
ದಾರಳೆ ಕಾಯಿ ಪಾಯಸ ಮಾಡಿ ನೋಡು. ಲಾಯಿಕ ಆವ್ತು.
ಎಂಗೊ ಮಾಡಿತ್ತಿದ್ದೆಯೊ.
suvarnini akka, ee payasa anu try madi nodeka heli… but patakila kayiya aa smell irtilya?
ಇಲ್ಲೆ ಪಾಯಸ ಮಾಡಿಯಪ್ಪಗ smell ಇರ್ತಿಲ್ಲೆ. ಸೊರೆಕ್ಕಾಯಿ ಪಾಯಸವನ್ನುದೇ ಇದೇ ಕ್ರಮಲ್ಲಿ ಮಾಡ್ಲಾವ್ತು.
sari..dhanyavadango..