- ಜೀವನಲ್ಲಿ ಮುಂದೆ ಬಪ್ಪಲೆ ಓಡುದರೊಟ್ಟಿಂಗೆ ಓದುದೂ ಮುಖ್ಯವೇ - July 9, 2014
- “ಯಕ್ಷತ್ರಿವೇಣಿ” - September 24, 2012
- ಬದಲಾಗದ್ದದು ಬದಲಾವಣೆ ಮಾಂತ್ರ ! - September 12, 2012
ಮೊನ್ನೆ ಅಮ್ಮ ರುಚಿಯಾಗಿ ಅವಿಲು ಬೆಂದಿ ಮಾಡಿತ್ತು 🙂 ಅದರ ಎನ್ನ ಮುಂಬೈಯ ಗುರ್ತದವಕ್ಕೆ ಹೇಳಿಯಪ್ಪಗ, ಅವಕ್ಕೆ interesting ಹೇಳಿ ಅನ್ಸಿತ್ತು. ಎನ್ನ ಹತ್ತರೆ ಮಾಡ್ತ ಕ್ರಮ ಎಲ್ಲ ಕೇಳಿದವ್ವು. ಅಂಬಗ ಎನಗೆ ಅನ್ಸಿತ್ತು, ಬೇರೆ ಊರಿನ ಆಹಾರಂಗೊ ಕೆಲವು ನಾವುದೇ ತಿಳ್ಕೊಂಡರೆ ನವಗೂ ಹೊಸರುಚಿ ಮಾಡ್ಲಕ್ಕನ್ನೇ ಹೇಳಿ 🙂 ಎನ್ನ ಅಕ್ಕ ಸೌಮ್ಯಂದೇ ಹೇಳಿತ್ತು, ಇದು good idea ಹೇಳಿ.ಹಾಂಗೆ ಸಾಗರಲ್ಲಿ ಮಾಡ್ತ ಒಂದು ಗೊಜ್ಜಿಯ ಬಗ್ಗೆ ಬೈಲಿನೋರಿಂಗೆ ಗೊಂತು ಮಾಡ್ಸುವ ಹೇಳಿ ಕಂಡತ್ತು. ಇದು ಎನಗೆ ತುಂಬಾ ಇಷ್ಟ, ಆನು ಎನ್ನ ಅತ್ತೆಯ ಹತ್ತರೆ ಕಲ್ತದು :). ಸಾಗರಲ್ಲಿ ಈ ಗೊಜ್ಜಿಯ ಜಂಬ್ರಂಗಳಲ್ಲಿಯೂ ಮಾಡ್ತವು. ತುಂಬಾ ರುಚಿ ..ಹುಳಿ ಹುಳಿ..ಖಾರ..ಬೆಳ್ಳಿಳ್ಳಿ ಒಗ್ಗರಣೆ………. ಬಾಯಿಲಿ ನೀರು ಬತ್ತು 😉
ಈ ಗೊಜ್ಜಿಗೆ ಅಲ್ಲಿ “ಮಂದನ ಗೊಜ್ಜು” ಹೇಳಿ ಹೇಳ್ತವು. ಮಂದಕ್ಕೆ ಇಪ್ಪ ಕಾರಣ ಈ ಹೆಸರು ಬಂದದಾಗಿಕ್ಕು. ಹುಳಿ ಇಪ್ಪ ಮಾವಿನಕಾಯಿ, ಅಂಬಟೆ ಅಥವಾ ಹುಣಸೇಕಾಯಿ, ಈ ಮೂರರಲ್ಲಿ ಯಾವುದರದ್ದೂ ಗೊಜ್ಜಿ ಮಾಡ್ಲಕ್ಕು. ಆನು ಮಾವಿನಕಾಯಿ ಗೊಜ್ಜಿ ಮಾಡ್ತ ಕ್ರಮ ಬರೆತ್ತೆ, ಉಳುದ ಎರಡರನ್ನೂ ಅದೇ ಕ್ರಮಲ್ಲಿ ಮಾಡ್ಲಕ್ಕು.ಅಲ್ಲಿ ಹೆಚ್ಚಾಗಿ ‘ಅಪ್ಪೆ’ ಮಾವಿನಕಾಯಿಯ ಉಪಯೋಗ್ಸುತ್ತವು, ಅದು ಹೆಚ್ಚು ಹುಳಿ ಇಪ್ಪ ಕಾರಣ.
ಬೇಕಪ್ಪ ವಸ್ತುಗೊ:
- ಎರಡು ಮಾವಿನಕಾಯಿ
- ಹಸಿಮೆಣಸು/ಗಾಂಧಾರಿ ಮೆಣಸು
- ಎಣ್ಣೆ
- ಸಾಸಮೆ
- ಉದ್ದಿನಬೇಳೆ
- ಬೆಳ್ಳುಳ್ಳಿ
- ಮಜ್ಜಿಗೆಮೆಣಸು/ಕೆಂಪುಮೆಣಸು
- ಉಪ್ಪು
- ನೀರು
ಮಾಡುವ ಕ್ರಮ:
- ಮಾವಿನಕಾಯಿಯ ಚೋಲಿಸಮೇತ ರಜ್ಜ ನೀರು,ಉಪ್ಪು ಹಾಕಿ ಬೇಶೆಕು.
- ಬೆಂದಮೇಲೆ ಅದೇ ನೀರಿಲ್ಲಿ ಅದರ ಸರೀ ಪುರುಂಚಿ ಗುಳ ತೆಗದು, ಚೋಲಿಯನ್ನೂ ಗೊರಟನ್ನೂ ಇಡ್ಕೆಕು 😉 .
- ಅದಕ್ಕೇ ಹಸಿಮೆಣಸು ಅಥವಾ ಗಾಂಧಾರಿ ಮೆಣಸಿನ ಹಾಕಿ ನುರಿಯಕು.
- ಬಾಣಲೆಯ ಒಲೆಲಿ ಮಡುಗಿ [ಕಿಚ್ಚುದೇ ಹೊತ್ತುಸೆಕ್ಕು], ಅದಕ್ಕೆ ಎಣ್ಣೆ,ಸಾಸಮೆ,ಉದ್ದಿನಬೇಳೆ,ಮಜ್ಜಿಗೆಮೆಣಸು ಅಥವಾ ಕೆಂಪುಮೆಣಸು, ಗುದ್ದಿದ ಬೆಳ್ಳುಳ್ಳಿ ಹಾಕೆಕು.
- ಸಾಸಮೆ ಹೊಟ್ಟುಲೆ ಶುರು ಆದಪ್ಪಗ ತೆಗದು ಮಡುಗಿದ ಮಾವಿನಕಾಯಿಯ ಗುಳವ ಅದಕ್ಕೆ ಹಾಕಿ ಕೊದುಶೆಕ್ಕು.
- ಅದು ಸರೀ ಕೊದ್ದಮೇಲೆ ಇಳುಗಿ.
ಇದರ ಅಶನದೊಟ್ಟಿಂಗೆ ಉಂಬಲೆ ಭಾರೀ ರುಚಿ. ಒಂದರಿಯಾಣ ಊಟಕ್ಕೆ ಅರ್ಧ ಚಮ್ಚೆಯಷ್ಟು ಗೊಜ್ಜಿ ಸಾಕಾವ್ತು, ಅಷ್ಟು ಹುಳಿ,ಖಾರ ಇರ್ತು. ಉಪ್ಪಿನ ಕಾಯಿಯ ಹಾಂಗೆ ರಜ್ಜ ಬಳುಸುಲಿಪ್ಪ ಗೊಜ್ಜಿ ಇದು.
ಈ ಗೊಜ್ಜಿಯ ಒಂದು ವಾರಂದ ಹತ್ತು ದಿನ ಮಡುಗಿರೂ ಹಾಳಾವ್ತಿಲ್ಲೆ, ಆದರೆ ನೀರು ತಾಗ್ಸುಲಾಗ. ಅಗತ್ಯ ಬಿದ್ದರೆ ಎರಡು ದಿನ ಕಳುದಪ್ಪಗ ಇನ್ನೊಂದರಿ ಕೊದುಶುಲಕ್ಕು.
ಆರೋಗ್ಯ, ಕ್ಯಾಲೊರಿಯ ಬಗ್ಗೆ ಚಿಂತೆ ಮಾಡುವವ್ವುದೇ ಇದರ ರುಚಿ ನೋಡ್ಲೆ ತೊಂದರಿಲ್ಲೆ. ಮಿತಿಲಿ ತಿಂದರೆ ಯಾವುದೂ ಕೆಟ್ಟದಲ್ಲ.
ಆದರೆ ಅಸಿಡಿಟಿ, ಹೊಟ್ಟೆಯ ಅಲ್ಸರ್, ಗ್ಯಾಸ್ಟ್ರೈಟಿಸ್, ಹೀಂಗಿದ್ದ ಸಮಸ್ಯೆ ಇಪ್ಪವಕ್ಕೆ ಇದು ಒಳ್ಳೆದಲ್ಲ.
ಆತ್ಮಿಯರೇ, ತಮ್ಮ ಆದರದ ಪ್ರೀತಿ ಕ೦ಡು, ಮನಸ್ಸು ಉಲ್ಲಾಸಭರಿತವಾಗಿದೆ. ನನಗೆ ಹವ್ಯಕ ಭಾಶೆ ಬರುದಿಲ್ಲಾ, ಹಾಗೆ೦ದ ಮಾತ್ರಕ್ಕೆ, ನಾನು ಕಲಿಯುವುದಿಲ್ಲವೆಂದು ಅಲ್ಲ. ಕೊ೦ಚ ಸಮಯ ಹಿಡಿಯತ್ತೆ ಅಷ್ಟೇ. ಈ ಪ್ರಯತ್ನದಲ್ಲಿ, ನನ್ನಿ೦ದ ತಪ್ಪಾಗಬಹುದು. ಕ್ಷಮೆಇರಲಿ. ಹವ್ಯಕ ಭಾಷೆಯ ಸ್ವಾರಸ್ಯವೇ ಬೆರೆ. ಓದುತ್ತಿರಲು, ಬಲುಚೆ೦ದ.
ನಾ ಬಯಲುಸೀಮೆಯವ, ಬಳ್ಲಾರಿ ನ೦ದು ಊರು, ನ೦ಗೆ, ಒಪ್ಪವಾದುದು, ಇಲ್ಲಿಯ ಜನ, ಅವರ ದಿನನಿತ್ಯದ ಲವಲವಿಕೆ, ಇಲ್ಲಿಯ ಶುದ್ದಿ(ಸುದ್ದಿ ನಮ್ಮಕಡೆ ಭಾಷೆ) ತು೦ಬ ಸ್ವಾರಸ್ಯಮಯವಾದುದು.
ಇತಿ ನಿಮ್ಮವ,
ಅನತ
ಅನತಣ್ಣಂಗೆ ನಮಸ್ಕಾರಂಗೊ.
ಬೈಲಿಂಗೆ (ಬಯಲು = oppanna.com) ಆತ್ಮೀಯ ಸ್ವಾಗತಂ!
ಇಲ್ಲಿ ನೆರೆಕರೆ(authors)ಯವು ಹೇಳಿದ ಶುದ್ದಿಗಳ(articles) ಕೇಳಿ; ಒಪ್ಪ ( = ಮುತ್ತು /comments) ಕೊಟ್ಟು ಪ್ರೋತ್ಸಾಹಿಸಿ.
ಬೈಲಿಲಿ ನಿಂಗಳ ಉಪಸ್ಥಿತಿ ಎಲ್ಲೋರ ಕೊಶಿಯ ಹೆಚ್ಚಿಸುತ್ತು.
ನಿಂಗಳ ಪ್ರೀತಿಯ,
~
ಗುರಿಕ್ಕಾರ°
ಬೈಲಿನ ಪರವಾಗಿ
ನಾನು ಬ್ರಾಹ್ಮ್ನಣನೆ, ಆದರೆ, ಉತ್ತಾರಾದಿ ಮಠ, ಹವ್ಯಕ ನಲ್ಲ, ನಾನು ಇಲ್ಲಿಗೆ ಸದಸ್ಯನಾಗಲು ಇಚ್ಛಿಸುವೆ. ಕಾರಣ, ಇಲ್ಲಿ ಕನ್ನಡದಲ್ಲಿ ಬರೆಯಬಹುದು. ಹಾಗು ಹವ್ಯಕರ ದೈನಂದಿನ ಜೀವನ ತಿಳಿಯುವಲ್ಲಿ Help ಆಗುತ್ತೆ. ನನ್ನ ಪೂರ್ವಜರು ಸುಮಾರು ೧೫೦೦ ಇಸವಿಯವರು ಶೇಷ ಭಟ್ಟರು, ಅವರು ಕರ್ನಾಟಕದ ಗಿಬ್ಬುರಿನವರಾಗಿರುತ್ತಾರೆ. ನಾನು ಅವರ ವಂಶದವನು. ಇದರ ಅರ್ಥ, ಅವರು ಹವ್ಯಕರೆ ಆಗಿರಲೆ ಬೇಕು.
ನನಗನಿಸುತ್ತೆ, ನನ್ನನ್ನು ನಿಮ್ಮವನೆ ಎಂದು ನಿಮ್ಮಲ್ಲಿ ಬರಮಾಡಿಕೊಳ್ಳುತ್ತಿರ.
ಇತಿ ನಿಮ್ಮವ
ಅರುಣಕುಮಾರ್ ನಾರಾಯಾಣಾಚಾರ್ ತತ್ತಾರ್
9731094000/9845302301
Bangalore
ನಮಸ್ತೇ ಅರುಣಕುಮಾರಣ್ಣ,
ಒಪ್ಪಣ್ಣನ ಬೈಲು ಬರೀ ಹವ್ಯಕರಿಂಗೆ ಸೀಮಿತ ಆಗಿಲ್ಲೆ. ಹವ್ಯಕತನದ, ಹವ್ಯಕ ಭಾಶೆ ಮಾತಾಡುವ, ಹವ್ಯಕ ಭಾಶೆ ಅರ್ಥ ಅಪ್ಪ ಎಲ್ಲೋರಿಂಗೂ ಇಲ್ಲಿ ಸ್ವಾಗತ ಇದ್ದು.
ನಿಂಗಳ ಪರಿಚಯ ಮಾಡಿಗೊಂಡು ಬಂದದು ಕೊಶೀ ಆತು. ಒಪ್ಪಣ್ಣನ ಬೈಲಿನ ಒಂದು ಭಾಗ ಆಯೆಕ್ಕು ಹೇಳಿ ಇಷ್ಟ ಪಟ್ಟಿದಿ.
ಬೈಲಿನ ಶುದ್ದಿ(article)ಗಳ ಓದಿ ನಿಂಗಳ ಅನಿಸಿಕೆ(ಒಪ್ಪ) ಗಳ ಖಂಡಿತಾ ಬರೆಯಿ.
ಬೈಲಿನ ಲೆಕ್ಕಲ್ಲಿ ನಿಂಗಳ ಸ್ವಾಗತ ಮಾಡ್ತೆ.
ಬೈಲಿನ ರೂಪವ ಅರ್ಥೈಸಿಗೊಂಡು ಎಲ್ಲರ ಒಟ್ಟಿಂಗೆ ಸೇರಿಗೊಳ್ಳಿ.
ಅರುಣಕುಮಾರಣ್ಣಂಗೆ ಸ್ವಾಗತ. ಸ್ವಪರಿಚಯ ಚಂದಕ್ಕೆ ಮಾಡಿಕೊಟ್ಟು ಬೈಲಿನೊಳ ಬಂದದ್ದಕ್ಕೆ ಮೆಚ್ಚುಗೆ ಮತ್ತು ಅಭಿನಂದನೆ.
‘ನನ್ನನ್ನು ನಿಮ್ಮವನೆ ಎಂದು ನಿಮ್ಮಲ್ಲಿ ಬರಮಾಡಿಕೊಳ್ಳುತ್ತಿರ’ – ಖಂಡಿತ., ನಮ್ಮತನ ಉಳಿಸಿ , ಗೌರವಿಸಿ, ಬೆಳೆಸೆಕು ಹೇಳಿ ಭಾವನೆಂದ ಬಪ್ಪ ಎಲ್ಲ ಬಂಧುಗಳನ್ನೂ ಬೈಲು ಆತ್ಮೀಯವಾಗಿ ಬರಮಾಡಿಕೊಳ್ಳುತ್ತು. ಬೈಲಿಲ್ಲಿಪ್ಪ ಶುದ್ದಿಗಳ ಓದಿ, ಅನಿಸಿಕೆ ಬರೆಯಿರಿ. ನೀವೂ ಶುದ್ದಿ ಬರೆಯಿರಿ ಹೇಳಿತ್ತು -‘ಚೆನ್ನೈವಾಣಿ’.
ಸುವರ್ಣಿನಿ ಅಕ್ಕಾ, ಮಂದಜ ಗೊಜ್ಜು ಪಾಕವ ನಿಂಗ ಹೇಳಿದ ಹಾಂಗೆ ಮಾಡ್ಲೆ ಪ್ರಯತ್ನ ಪಡ್ತೆ. ಅಪ್ಪೆ ಸಾರು ಆನು ಒಂದರಿ ಶಿರಸಿಲಿ ಉಂಡಿದೆ.ಭಾರೀ ಲಾಯಿಕ ಆಯಿದು.ಮತ್ತೆ ಒಂದರಿ ಶೃಂಗೇರಿಲಿ ಒಂದು ಅಂಗಡಿಲಿ ಅಪ್ಪೆ ಮಾವಿನ ಎಸೆನ್ಸ್ ಸಿಕ್ಕಿತ್ತು.ಸುಮಾರು ಆರು ತಿಂಗಳು ಸಮಯ ಅದರ ಸಾರು ಮಾಡಿ ಉಂಡಿದೆ.
ಲೇಖನಲ್ಲಿ ಅಭಿಪ್ರಾಯ ಭೇದಂಗ ಬಪ್ಪದು ಸಹಜ.ಅದರ ಯಾವುದನ್ನೂ ಮನಸ್ಸಿಲಿ ಮಡುಗೆಡಿ ಅಕ್ಕಾ,
ನಮ್ಮ ಬೈಲಿನ ಪ್ರತಿಯೊಬ್ಬನೂ ಒಂದೊಂದು ಕ್ಷೇತ್ರಲ್ಲಿ ಮಿಂಚಿಗೊಂಡಿದ್ದವು.ನವಗೆ ಪರಸ್ಪರ ಅದು ಪ್ರಯೋಜನಕ್ಕೆ ಬತ್ತಾ ಇದ್ದು,ಅಲ್ಲದ್ದೆ ನಮ್ಮ ಹೆರಿಯೋರ ಕಾಲದ ಸಂಬಂಧಂಗ,ಆ ಹಳೆ ನೆಂಪುಗ ನಮ್ಮ ಬೈಲಿನ ಮೂಲಕ ಹೊಸ ಪುನರಾವರ್ತನೆ ಆವ್ತಾ ಇದ್ದು. ಇದು ಎಲ್ಲೋರಿಂಗೂ ಕೊಶಿಯೇ ಅಲ್ದೋ?
ಅಪ್ಪೆಹುಳಿ ಸಾರು ಮಧ್ಯಾನ ಉಂಡು ರಜ್ಜ ಮನುಗುವಾ° ಹೇಳಿ ಮನುಗಿರೆ ಒಳ್ಳೆ ಒರಕ್ಕು ಬತ್ತು. ಇದು ಎನ್ನ ಸ್ವಂತ ಅನುಭವ. 2 ವರ್ಷ ಮೊದಲು ಒಂದಾರಿ ಶಿರಸಿಗೆ ಹೋಗಿತ್ತಿದ್ದೆ. ಅಲ್ಲಿ ಇತ್ತಿದ್ದ 2-3 ದಿನವೂ ಮಧ್ಯಾನ ಅಪ್ಪೆಹುಳಿ ಸಾರು. ಚೂರು ಮನಿಕ್ಕೊಳ್ಳಿ ಹೇಳಿದವು ಎನ್ನ ಗೆಳೆಯನ ಅಮ್ಮ, ಅಪ್ಪಚ್ಚಿ ಎಲ್ಲ. ಹಾಂಗೆ ಚೂರು ಮನುಗಿ ಏಳುವಗ ಗಂಟೆ 5!
{ ಹಾಂಗೆ ಚೂರು ಮನುಗಿ ಏಳುವಗ ಗಂಟೆ 5 }
ಐದುಗಂಟಗೇ ಏಳ್ತಿರೋ? ಅಷ್ಟು ಬೇಗ??
ಬಟ್ಯನ ಕೋಳಿಯೂ ಅಷ್ಟು ಬೇಗ ಏಳ್ತಿಲ್ಲೆ!! 😉
ಮೊನ್ನೆ ಕೋಳಿ ಒರಗಿಯೊಂಡು ಇಪ್ಪ ಪಟತೆಗದ್ದಿ ಅಲ್ಲದೋ – ಅದೇ ದಿನವೋ? 🙁
[ಚೂರು ಮನುಗಿ]
ಯಾವುದರ ಚೂರು ಮನುಗುತ್ಸು?
ಡಾಗುಟ್ರಕ್ಕ ಮಂದನ ಗೊಜ್ಜು ಬಾಯಿಲಿ ನೀರು ಬರಿಸಿತ್ತು….
ಈ ಲೇಖನಕ್ಕೆ ಬಂದ ಒಪ್ಪಂಗಳ ಒಟ್ಟಿಂಗೆ ಸೇರಿಸಿದರೆ ‘ಮಂದನ ಸಾಹಿತ್ಯ’ದ ಹಾಂಗೆ ಕಾಣ್ತು…ಇಲ್ಲಿ ಎಲ್ಲವೂ ಇದ್ದು ನಿಂಗ್ ಬರದಾಂಗೆ….ತುಂಬಾ ರುಚಿ ..ಹುಳಿ ಹುಳಿ..ಖಾರ..ಅಕೇರಿಗೆ ಬೆಳ್ಳಿಳ್ಳಿ ಒಗ್ಗರಣೆ ಹಾಕಿದ್ದು ಗುರಿಕ್ಕಾರ್ರು…
ಬೋಸನ ಮಾತು ಹುಳಿ ಹುಳಿಯಾಗಿದ್ದದ….;)
ಸುವರ್ಣೀನಿ ಅಕ್ಕ ಕೊಶಿ ಆತು ಲೇಖನ…… 🙂
@ಜ್ಯೋತಿ ಅಕ್ಕ: ಬೇಜಾರು ಮಾಡೆಡಿ ಆತೋ…ಎಲ್ಲರೂ ಪ್ರೀತಿಯಿಂದ ಹೇಳಿದ್ದು…ನಮ್ಮ ಬಯಲು ಬೆಳೆಕಿದಾ…
ಏ ಬೋಸಣ್ಣ ಇಸ್ಟು ಚೆಂದದ ಮೋರೆಯ ಕೊಳಕ್ಕು ಮಾಡಿಸಿಗೊಳ್ಳೆಡ ಮಿನಿಯ..ಈಗಾಗಳೆ ನೀನು ಚೆಂದಲ್ಲಿ ಆರಿಂಗೆ ಕಮ್ಮಿ????
ಅದಪ್ಪು ಮಾವ ದನ್ಯವಾದ೦ಗೊ… 😛 ಎನಗೆ ಸಿನುಮೆಲಿ ನಾಯಕ ನಟನ ಪಾತ್ರ ಸಿಕ್ಕುಗೊ…!! 🙂 😀
ಅಲ್ಲಿ ಅವು ಹೀಂಗೆ ಹಾಡುಗೋ ಹೇಳಿ:
ನಿನ್ನ ನೋಡಲೆಂತೋ
ಮಾತನಾಡಲೆಂತೋ
ಆಹಾ ಒಂದ್ ಥರಾ ಥರಾ
ಹೇಳಲೊಂದು ಥರಾ ಥರಾ,
ನೋಡಲೊಂದು ಥರಾ ಥರಾ
ಶರ್ಮಪ್ಪಚ್ಚಿ
ಅದಾ….!!! ಶರ್ಮಪ್ಪಚ್ಚಿ “ಸುದೀಪ್” ನ… ಭಾರಿ ಅಭಿಮಾನಿಯೊ.. ಹೇಳಿ….!!
ಹಾ೦ಗಾರೆ ಇದಾ … ಎನ್ನದು ಒ೦ದು ಪದ್ಯ…. 😀 🙂
” ಥರಾ ಥರಾ ಥರಾ ಒಂತರ , ಇಲ್ಲೇ ಯಾರು ಇಲ್ಲ ಕಣೆ(ಣೊ) ನನ್ನತರ…!! ”
ಇಷ್ಟು ಸಾಕು…. ಮುಂದೆ ಪದ್ಯ ಸರಿ ಇಲ್ಲೆ ಬೇಡ… 😛 😀
ಏ ಬೋಸ….ನೀನು ಪದ್ಯ ಭಾರೀ ಚೆಂದಕ್ಕೆ ಹೇಳ್ತೆನ್ನೆ !! ಒಪ್ಪಣ್ಣನ ಮದುವೆಲಿ ನಾಲ್ಕು ಚೂರ್ಣಿಕೆ ಹೇಳೆಕಾತು !! ಬಂದವ್ವು ಖುಷಿ ಆಗಿ ಎರಡು ಹೋಳಿಗೆ ಹೆಚ್ಚು ತಿಂತಿತವ್ವು !!
ಈಗ ಎಂಗಳಲ್ಲಿ ನುಡಿಸಿರಿ ಕಾರ್ಯಕ್ರಮ ಆವ್ತಾ ಇದ್ದು, ಕನ್ನಡ ಪದ್ಯ ಹೇಳ್ತರೆ ಅವಕಾಶ ಇದ್ದು ನಿನಗೆ (ಸಿನೆಮಾ ಪದ್ಯ ಅಲ್ಲ)….
ಅಕ್ಕಕ್ಕು.. ಬತ್ತೆ…ಆನುದೆ, ಶರ್ಮಪ್ಪಚ್ಚಿ, ನಮ್ಮ ಕವಿಯಾದ “ರಘು ಭಾವನುದೆ” :P…. ಪದ್ಯ ಹೇಳಲೆ ಬತ್ಯೊ….! 🙂 😀
ಏ ಬೋಸ ಭಾವ, ನಿನ್ನ ಮೋರೆ ನೋಡಿರೆ ಸಾಕು.ಎಲ್ಲ ಓಡಿ ಹೋಕು,ಗೊಜ್ಜಿ ಉಂಬದು ಮರದು .
ಏ ರಘು ಭಾವ…. ಇದಾ… ಅನು ಮತ್ತೆ “ಬ್ಯುಟಿ ಪಾರ್ಲರ್” ಇ೦ಗೆ ಹೊಗಿ.. ಗೆಡ್ಡ ಎಲ್ಲ ತೆಗದು, ತಲೆ ಬಾಚಿ, ಮೋರೆಗೆ ಬಣ್ಣ ಬಳ್ಕೊ೦ಡು ಒಪ್ಪಕೆ ಚ೦ದ ಚ೦ದಕೆ ಬಪ್ಪೇ ಹಾ…!! ಮತ್ತೆ ಎನ್ನ ನಿ೦ಗೊಗೆ ಗುರ್ಥಸಿಕ್ಕ.. ಅಕ್ಕೊ?? 😀 🙂
ಮೋರೆಗೆ ಬಣ್ಣ ಬಳುಕ್ಕೊಂಡ? ಹಾಂಗಾರೆ ಹಿಮ್ಮೇಳ ಬೇಕಕ್ಕು !!
ಹೊ.. ಅ೦ಬಗ ಆನು ಚ೦ದ ಕಾಣುಸು ಬೇಡದೊ??? 🙁
@ ಬೋಸ
ಚಂದಕಿಂತ ಚಂದ ನೀನೆ ಸುಂದರ
ನಿನ್ನ ನೋಡ ಬಂದ ಬಾನ ಚಂದಿರ
ಈ ಪದ್ಯವ ಎಲ್ಲಿಯೊ ಕೇಳಿದಾ೦ಗೆ ಆವುತನ್ನೆಪ್ಪಾ…!!! 😛 ಹಾ.. ಇದು ಸಿನುಮೆ ಹಾಡು ಅಲ್ಲದೊ…
ಕೊಶಿಯಾತು ಮಾವ… ದನ್ಯವಾದ೦ಗೊ… 😀
ಅ೦ಬಗ “ಬ್ಯುಟಿ ಪಾರ್ಲರ್” ಹೊಪಲಿಲ್ಲೆ….!! 🙂 😀
ಬೋಸ ಬಾವನೂ ರಘು ಬಾವನೂ ಹಿಂಗ್ಲೆಂಡಿನ “ಬ್ಯುಟಿ ಪಾರ್ಲರ್”ಗೆ ಹೋದವೋ ಹೇಂಗೆ ಸುದ್ದಿಯ ಇಲ್ಲೆ..
ಭಾವ ಆನಿದ್ದೆ.. 😀 ರಘು ಬಾವನಲ್ಲಿ ಅ೦ತರ್ಜಾಲ ಸರಿ ಇಲ್ಲೆಡಾ…!! 😉
Sorry Shyammanna. Merely because I am using English does not mean that I have returned from England or abroad. It is just that I am not very fluent in writing in Kannada. If the members here want the conversation to happen in Kannada, then, Oppanna, I am sorry, I cannot participate in this forum anymore. Also, I personally do not think that one should have a very closed mentality towards any language, since, each language is rich and beautiful in its own way.
ಜ್ಯೋತಿ ಅಕ್ಕ ,
ಆರೂ ಇಂಗ್ಲಿಶ್ ಬೇಡ ಹೇಳಿ ಹೇಳವು ಹೇಳಿ ಕಾಣುತ್ತು.ನಮ್ಮವು ಎಲ್ಲ ಆತ್ಮೀಯತೆಲಿ ಕಾಲೆಳವ ( ದುರ) ಅಭ್ಯಾಸದವು.ಸ್ವಲ್ಪ ಎಡ್ಜಸ್ಟ್ ಮಾಡ್ರೀ…ಇಂಗ್ಲಿಶ್ ಅಕ್ಷರಲ್ಲಿ ನಮ್ಮ ಭಾಷೆಲಿ ಬರವೊದರಿಂದ ಇದು ಉತ್ತಮ ಹೇಳಿ ಅನಿಸುತ್ತು.
ಅದಾ..!!! ಕೋಪ ಮಾಡಿಗೊ೦ಬಲಾಗಬ್ಬೊ…!! 😛 😀
1.ಮನುಷ್ಯರಿಂಗೆ ಹಾಸ್ಯ ಪ್ರಜ್ನೆ ಇರೆಕ್ಕಾದ್ದು ಮುಖ್ಯ.ತಮಾಷೆ ಮಾಡಿದ್ದರ ಅರ್ಠ ಮಾಡಿಕೊಂಬಲೆ ಎಡಿಯದ್ದರೆ ಎಂತ ಮಾಡ್ಲೆ ಆವುತ್ತಿಲ್ಲೆ.
೨. ಆನು ಇಂಗ್ಲಿಷಿಂಗೆ ವಿರೋಧಿ ಅಲ್ಲ. ಆದರೆ ಹವ್ಯಕ ಬ್ಲಾಗಿಲಿ ಹವ್ಯಕ ಬಾಷೆ ಮುಖ್ಯ.
3. If anybody is not fluent in their mothertoung it is time for them to introspect themselves.
೪. ಇಂಗ್ಲಿಷಿಲಿ ಮಾತಾಡೆಕ್ಕಾರೆ ಬೇಕಾದಷ್ಟು ಇಂಗ್ಲಿಷ್ ಬ್ಲಾಗುಗ ಇದ್ದು. ಹವ್ಯಕ ಬ್ಲಾಗಿಲಿಯೂ ಇಂಗ್ಲಿಷ್ ಮಾತಾಡೆಕ್ಕಾದ ಅಗತ್ಯ ಇದ್ದಾ? ಇಂಗ್ಲಿಷಿಲಿ ಮಾತಾಡ್ಲೆ ಸುರು ಮಾಡಿರೆ ಹವ್ಯಕ ಬ್ಲಾಗಿನ ಅಗತ್ಯ ಇದ್ದಾ?
ಶ್ಯಾಮಣ್ಣ, ನಿಜ.
ಆದರೆ ದಿವ್ಯಕ್ಕಂಗೆ ಕನ್ನಡಲ್ಲಿ ಬರವ ಸಮಸ್ಯೆ ಇಪ್ಪ ಹಾಂಗೆ ಕಾಣುತ್ತು.
ಎನಗೆ ಸಂಗತಿ ಎಂಥ ಹೇಳಿಯೇ ಅರ್ಥ ಆಯಿದಿಲ್ಲಾನ್ನೆ!!,ಆರಾದರು ವಿಷಯ ಎಂಥರ ಹೇಳಿ ಎಲ್ಲರಿಂಗೂ ಅರ್ಥ ಅಪ್ಪ ಭಾಷೆಲಿ ವಿವರಿಸಿ ಹೇಳುತ್ತಿರೋ?!!!
ಹವ್ಯಕ ಬ್ಲಾಗ್ ಮಾಡಿದ್ದು ಹವ್ಯಕ ಭಾಷೆ ಸಂಸ್ಕೃತಿಯ represent ಮಾಡ್ಲೆ ಹೇಳಿ. ಇಂಗ್ಲೀಷ್ ಅಥವಾ ಬೇರೆ ಯಾವುದೇ ಭಾಷೆಯ ಉಪಯೋಗ್ಸುಲಾಗ ಹೇಳಿ ಅಲ್ಲ, ಆದರೆ ನಮ್ಮ ಭಾಷೆಯ ಬಗ್ಗೆ ನಾವೇ ಅಸಡ್ಡೆ ತೋರ್ಸುದು ಸರಿಯಾ? ನಿಂಗೊಗೆ ಕನ್ನಡಲ್ಲಿ ಬರವಲೆ ಕಷ್ಟ ಆದರೆ, ಇಂಗ್ಲೀಷ್ ಅಕ್ಷರಲ್ಲಿಯೇ ಕನ್ನಡವ ಬರವಲಕ್ಕು. ಇನ್ನು ಬೈಲಿಲ್ಲಿ ಇಪ್ಪ ಎಲ್ಲೋರಿಂಗೂ ಇಂಗ್ಲೀಷ್ ಬತ್ತು, ಬಾರದ್ದ ಕಾರಣ ನಿಂಗಳ force ಮಾಡುದಲ್ಲ. ನಿಂಗಳ ಹತ್ತರೆ request ಮಾಡಿದ್ದಕ್ಕೆ ಕಾರಣ ಹೇಳಿರೆ, ನಮ್ಮ ಭಾಷೆಲಿಯೇ ಮಾತಾಡಿರೆ ನಮ್ಮ ನಮ್ಮ ಒಳಾಣ ಸಂಬಂಧಂಗೊ ಹೆಚ್ಚು ಗಟ್ಟಿ ಅಕ್ಕು ಹೇಳುವ ಉದ್ದೇಶಂದ. ಹಾಂಗೆ ನೋಡಿರೆ ಬೈಲಿಲ್ಲಿ ಇಪ್ಪ ಸುಮಾರು ಜೆನಕ್ಕೆ ಕನ್ನಡಲ್ಲಿ ಬರವಲೆ ಕಷ್ಟ ಆವ್ತು. ಎನಗುದೇ ಸುಮಾರು ಶಬ್ದಂಗಳ ನಮ್ಮ ಭಾಷೆಲಿ ಅಥವಾ ಕನ್ನಡಲ್ಲಿ ಬರವಲೆ ತುಂಬಾ ಸಮಸ್ಯೆ ಆವ್ತು, ಆದರೆ ನವಗೆ ಎಡಿತ್ತಿಲ್ಲೆ ಹೇಳಿದ ಮಾಂತ್ರಕ್ಕೆ ಅಸಾಧ್ಯ ಹೇಳಿ ಅಲ್ಲನ್ನೆ? ಆನು ಇಲ್ಲಿ ವೈದ್ಯಕೀಯ ವಿಚಾರಂಗಳ ಬರವಗ ಅದರ ಕನ್ನಡಲ್ಲಿ ಬರವಲೆ ತುಂಬಾ ಕಷ್ಟ ಪಡ್ತೆ, ಕೆಲವು ಇಂಗ್ಲೀಷ್,ಗ್ರೀಕ್ ಇತ್ಯಾದಿ ಶಬ್ದಂಗೊಕ್ಕೆ ಸಮಾನ ಶಬ್ದ ಇಲ್ಲೆ ಕನ್ನಡಲ್ಲಿ, ಹಾಂಗಿದ್ದ ಸಂದರ್ಭಲ್ಲಿ ಅದರ ವಿವರಣೆ ಕೊಟ್ಟು ಬೈಲಿನೋರಿಂಗೆ ಅರ್ಥ ಮಾಡ್ಸೆಕಾದು ಎನ್ನ ಕರ್ತವ್ಯ ಆಗಿಪ್ಪ ಕಾರಣ ಆನು ಸಾಧ್ಯ ಆದಷ್ಟು ಪ್ರಯತ್ನ ಮಾಡ್ತೆ. ಬೇರೆ ಭಾಷೆಯ ಬಗ್ಗೆ ಸಹಿಷ್ಣುತೆ ಇಪ್ಪದರೊಟ್ಟಿಂಗೇ ನಮ್ಮ ಭಾಷೆಯ ಬಗ್ಗೆ ಗೌರವ ಇರೆಕಾದ್ದು ಅಗತ್ಯ ಅಲ್ಲದಾ?
ಇನ್ನು humor ನ ವಿಚಾರಕ್ಕೆ ಬಂದರೆ, ಈ ನಮ್ಮ ಬೈಲಿಲ್ಲಿ ಹಾಸ್ಯ ಇದ್ದದೇ, ಅದರ ತಪ್ಪು ಅರ್ಥ ಮಾಡದ್ದೆ ಇಪ್ಪದು ನಮ್ಮ ದೊಡ್ಡತನ. ಬೈಲಿಲ್ಲಿ ಆರಿಂಗೂ ಆರನ್ನೂ ಸಣ್ಣ ಮಾಡೀ ಮಾತಾಡೂವ ಉದ್ದೇಶ ಇಲ್ಲೆ, ಅಗತ್ಯವೂ ಇಲ್ಲೆ. ನಿಂಗಳ ಆರೂ insult ಮಾಡಿದ್ದವಿಲ್ಲೆ.
ಸರಿ ತಪ್ಪು ಎಲ್ಲವೂ ಅವರವರ ಭಾವಕ್ಕೆ ಸಂಬಂಧಪಟ್ಟದು. ನಾವು ಜಗತ್ತಿನ ನೋಡುವ ದೃಷ್ಟಿಕೋನದ ಮೇಲೆ ನಾವು ಜಗತ್ತಿನ ಅರ್ಥ ಮಾಡಿಗೊಂಬ ರೀತಿ ಇರ್ತು.
“each language is rich and beautiful in its own way.”… then why r u not able to see the beauty n richness of our Havyaka language?
“I personally do not think that one should have a very closed mentality towards any language” ..ಎಲ್ಲೋರಿಂಗೂ ಎಲ್ಲ ಅಮ್ಮಂದ್ರ ಬಗ್ಗೆಯೂ ಗೌರವ ಇರ್ತು, ಆದರೆ ತನ್ನ ಅಮ್ಮನ ಬಗ್ಗೆ ಇಪ್ಪ ಪ್ರೀತಿಯೇ ಬೇರೆ, ಇಲ್ಲಿಯೂ ಹಾಂಗೆ ಬೇರೆ ಭಾಷೆಯ ಒಪ್ಪಿರೂ ನಮ್ಮ ಭಾಷೆಯ ಬಗ್ಗೆ ನಮ್ಮ ಪ್ರೀತಿ ಬೇರೆಯೇ….
i hope that u have understood the intension behind usage of Havyaka language here!!
and one more thing is..this is not a small well, this is a river which flows..flourishes…and finally reaches an ocean.
ಈಗ ರಜಾ ಅರ್ಥ ಅಪ್ಪಲೆ ಸುರು ಆತು ಸುವರ್ಣಿನಿ ಅಕ್ಕಾ,!!!
ಸತ್ಯ ಹೇಳಿದಿ ಶ್ಯಾಮಣ್ಣ, ನಮ್ಮ ಭಾಷೆಯ ನವಗೇ ಉಪಯೋಗ್ಸುದು ಕಷ್ಟ ಆವ್ತು ಹೇಳಿ ಆದರೆ…ನಿಜವಾಗಿಯೂ introspection ಬೇಕಾದ್ದೆ.
ಒಳುದೋರತ್ರೆ ಒಂದು ಪ್ರಶ್ನೆ – ’ಮಂದನ ಗೊಜ್ಜು ’ ಮತ್ತೆ ’ಅಪ್ಪೆಹುಳಿ ಗೊಜ್ಜು’ ಹೇಳ್ತದಕ್ಕೆ ಇಂಗ್ಲಿಷ್ ಬಾಷಾಂತರ ಎಂತ?
ಶಾಮಣ್ಣ, ನಿನಗೆ “ಲಾತ್ ಬಜೆ-ಕಾಟ್ ಪುಣಿ” ಕಥೆ ಗೊಂತಿದ್ದಾ? ಆನು ಹಾಂಗೆ ಎಂತಾದರು ಉತ್ತರ ಕೊಟ್ರೆ ನೀನು ಏಂತ ಹೇಳ್ತಿಯೋ ಏನೊ ಹೇಳಿ ರಜಾ….!!!!
ಎಲ್ಲೋರಿಂಗೂ ನಮಸ್ಕಾರ ಇದ್ದು.
ಗುರುಗೊ ನಮ್ಮ ಊರಿಂಗೇ ಬಂದ ಕಾರಣ ರಜಾ ಪುರುಸೊತ್ತು ಕಮ್ಮಿ ಆಗಿ ಇತ್ಲಾಗಿ ಬಪ್ಪಲೇ ಕಷ್ಟ ಆತಿದಾ!
ನಾಳ್ತು ಎಂಟಕ್ಕೆ ಬನ್ನಿ, ಚೊಕ್ಕಾಡಿಗೆ – ಸಹಸ್ರ ರುದ್ರ ಇದ್ದಾಡ!
ಅದರ ಹೇಳಿಕೆ ಸುರುಮಾಡೆಕ್ಕಷ್ಟೆ ಇನ್ನು ಬೈಲಿಲಿ.
ಅದಿರಳಿ,
ಹೇಳಿದಾಂಗೆ, ಜ್ಯೋತಿಅಕ್ಕ, ಶಾಮಣ್ಣ – ಇಬ್ರದ್ದುದೇ ಬೈಲಿನ ಬೆಳೆಶುತ್ತ ಆಸಗ್ತಿ ಕೊಶಿ ಆತು.
ಜ್ಯೋತಿಅಕ್ಕ ಹೇಳಿರೆ ಬೇರೆ ಆರುದೇ ಅಲ್ಲ, ಬೆಂಗುಳೂರಿನ ವಸಂತನಗರದ ಗುರಿಕ್ಕಾರ್ರು – ಎನ್ನಾರುಭಟ್ರು ಇದ್ದವಲ್ಲದೋ – ಅವರ ಮಗಳು. ಹುಟ್ಟಿ ಬೆಳದ್ದು ಬೊಂಬಾಯಿ-ಡೆಲ್ಲಿ- ಆದ ಕಾರಣ ಕನ್ನಡ ಅಷ್ಟು ಪರಿಚಯ ಇಲ್ಲೆ.
ಮನೆಲಿ ಮಾತಾಡುದು ಹವ್ಯಕವೇ ಆದರೂ, ಹಿಂದಿಲಿ ಬರೆತ್ತದು ಹೆಚ್ಚು ಸುಲಾಬ ಆವುತ್ತು.
ಅಡಿಗೆಲಿ ಬಾರೀ ಉಶಾರಿ ಅವು. ಬಿಲ್ವಪತ್ರೆ ತಂಬುಳಿಂದ ಹಿಡುದು, ವಿಧವಿಧದ ಅಪ್ಪೆಹುಳಿ ಮಾಡುದರ ಒರೆಂಗೆ – ಎಲ್ಲವುದೇ ಅರಡಿಗು. ವಿಟ್ಳಸೀಮೆಂದ ಹೊನ್ನಾವರ ಹೊಡೆಂಗೆ ಮದುವೆ ಆಗಿ, ಪ್ರಸ್ತುತ ಬೆಂಗುಳೂರಿಲಿ ದೊಡ್ಡ ಕಂಪೆನಿಲಿ ಕೆಲಸಲ್ಲಿ ಇದ್ದವು. ಮೊನ್ನೆ ನಾವು ಬೆಂಗುಳೂರಿಂಗೆ ಹೋಗಿಪ್ಪಗ ಸಿಕ್ಕಿಪ್ಪಗ ಬೈಲಿನ ಶುದ್ದಿ ಹೇಳಿತ್ತಿದ್ದೆ. ಸರಿಯಾದ ಶುದ್ದಿನೋಡಿ ಒಪ್ಪ ಕೊಡ್ಳೆಕಾದೊಂಡಿದ್ದಿದ್ದವು. ಇಂದು ಬೈಲಿಂಗೆ ಬಂದವು, ಅವಕ್ಕೆ ಸ್ವಾಗತ.
ಅವಕ್ಕೆ ಕನ್ನಡ ಬತ್ತಿಲ್ಲೆ ಹೇಳ್ತ ಸತ್ಯವ ಅವು ಮೊನ್ನೆ ಎನ್ನ ಹತ್ತರೆ ಮಾತಾಡುವಗಳೇ ಹೇಳಿದವು. ಸಾರ ಇಲ್ಲೆ, ನಿಂಗೊಗೆ ಬಪ್ಪ ಭಾಶೆಲಿ ಬರೆಯಿ, ಕ್ರಮೇಣ ಕಲಿವಲಕ್ಕು – ಹೇಳಿ ಒಪ್ಪುಸಿತ್ತಿದ್ದೆ.
ಶಾಮಣ್ಣ, ನಿಂಗಳ ಕಾಳಜಿ ಸಂತೋಷವೇ. ಆದರೂ, ಅವರ ಸ್ಥಿತಿಯ ಅರಿತುಗೊಂಬ.
ಈಗಾಣ ಒಪ್ಪ ಶುದ್ಧ ಇಂಗ್ಳೀಶಿಲಿ ಇದ್ದರೂ, ಕ್ರಮೇಣ ಅವು ಕನ್ನಡ ಲಿಪಿ ಕಲ್ತು, ಹವ್ಯಕಲ್ಲಿ ಒಪ್ಪ ಕೊಡ್ತ ಮಟ್ಟಕ್ಕೆ ಬರುಸುವ.
ಬೈಲು ಬೆಳೆಯಲಿ, ಶುದ್ದಿಗೊ ತೇಲಾಡಲಿ, ಒಪ್ಪಂಗೊ ಹರಿದುಬರ್ಲಿ!!
ಈ ವಿಶಯಲ್ಲಿ ಇನ್ನು ಆರುದೇ ಒಪ್ಪ ಬರವದು ಬೇಡ, ಸುವರ್ಣಿನಿಅಕ್ಕನ ಇಷ್ಟೊಳ್ಳೆ ಶುದ್ದಿ ಇಪ್ಪಗ ಶುದ್ದಿಗೇ ಒಪ್ಪ ಕೊಡುವ! ಆಗದೋ? 🙂
ದೇವರು, ಗುರುಗೊ ಎಲ್ಲೋರಿಂಗೂ ಒಳ್ಳೆದು ಮಾಡ್ಳಿ.
|| ಹರೇರಾಮ ||
ಜ್ಯೋತಿ ಅಕ್ಕಾ…ನಿಂಗಳೂ ಒಪ್ಪಣ್ಣನ ಬೈಲಿಂಗೆ ಬನ್ನಿ, ನಮ್ಮ ಭಾಷೆಯ, ಉಳುಶುಂವ, ಬೆಳಶುಂವ..ಒಟ್ಟಿಂಗೆ ಸುಮಾರು ಹೊಸ ಜೆನರ ಗುರ್ತ ಮಾಡಿಗೊಂಬ, ಹೊಸ ವಿಚಾರ ತಿಳ್ಕೊಂಬ, ಮನಸ್ಸಿನ ಉದಾಸೀನವ ಕಳವ..ರಜ್ಜ ಗಮ್ಮತ್ತು,ಗೌಜಿ..ಜೀವನಕ್ಕೆ ಬೇಕಾದ್ದೆ ಅಲ್ಲದಾ? ಅದೂ ನಮ್ಮೋರೊಟ್ಟಿಂಗೆ…
This dish is almost like appehuli. Does the dish have thick consistency? Or is it made as watery as appehuli?
ಯ. ಯ. ಇಟ್ ಇಸ್ ಅಪ್ಪೆ ಹುಳೀ ಓನ್ಲೀ….!
ಜ್ಯೋತಿ ಅಕ್ಕ ಇಂಗ್ಲೆಂಡಿಂದ ಈಗಷ್ಟೆ ಬಂದ ಹಾಂಗೆ ಕಾಣ್ತು….
ಅಪ್ಪೆಹುಳಿ ಹೇಳಿರೆ ನೀರಿನ ಹಾಂಗೆ consistency ಇರ್ತು. ಇದು ಅಪ್ಪೆಹುಳಿ ಅಲ್ಲ, ಇದು ಮಂದಕ್ಕೆ ಇರ್ತು/semisolid.
ಎನ್ನ ಅಮ್ಮ ಇಪ್ಪಾಗ ನೀರಿಲ್ಲಿ ಹಾಕಿದ ಮಾವಿನ ಕಾಯೀಲಿಯು ಹಿ೦ಗೆ ಮಾಡಿಯೊ೦ಡಿತ್ತು.ತು೦ಬಾ ರುಚಿ ಆಗಿಯೊ೦ಡಿತ್ತು.ಹಸಿ ಮಾವಿನಕಾಯಿಲಿ ಮಡಿದ್ದು ಎನಗೆ ಗೊ೦ತಿಲ್ಲೆ.ಆದರೆ ಮಾವಿನ ಕಾಯೀಲಿ ಹಲವು ನಮುನೆ ಗೊಜ್ಜಿಗೊ ಮಾಡುತ್ತವು.ಅ೦ತು ಒಳ್ಳೆ ಗೊಜ್ಜು ಬಳುಸಿದ್ದಕ್ಕೆ ಸುವರ್ಣಿನಿಯಕ್ಕ೦ಗೆ ಒ೦ದಷ್ಟು ಧನ್ಯವಾದ೦ಗೊ.ಒ೦ದು ಸ೦ಶಯ ಬಾಣಲೆಯ ಒಲೇಲಿ ಮಡುಗಿ(ಕಿಚ್ಚೂದೆ ಹೊತ್ತುಸೇಕು) ಇದರ ಬಗ್ಯೆ:- ಬಾಣಲೆ ಒಳ ಕಿಚ್ಚು ಹೊತ್ಸೇಕಾದ್ದದೊ?ಹೆರವೊ?ಎಣ್ಣೆ ಸಾಸಮೆ ಎಲ್ಲಾ ಕಿಚ್ಚಿ೦ಗೆ ಹಾಕೆ ಕಾದ್ದೊ ಹೇ೦ಗೆ?ಎ೦ಗೊ ತೊ೦ಡ೦ಗೋಕ್ಕೆ ಪಕ್ಕ ತಲಗೆ ಹೋವುತ್ತಿಲ್ಲೆ ಅದ ಹಾ೦ಗಾಗಿ ಸ೦ಶಯ ಪರಿಹಾರಕ್ಕೆ ಬೇಕಾಗಿ ಕೇಳಿಯೊ೦ಡದು.ಒಪ್ಪ೦ಗಳೊಟ್ಟಿ೦ಗೆ.
ಅದು ಮಾವಾ,ಎಣ್ಣೆ ಬಾಣಲೆಲಿ ಒಲೆ ಮೇಲೆ ಮಡುಗಿ, ಒಲೆಗೆ ಕಿಚ್ಚು ಹೊತ್ಸಿ ,ಎಣ್ಣೆ ಯೆಡಿಯೂರಪ್ಪನ ಮೋರೆಯ ಹಾಂಗೆ ನಿಗಿನಿಗಿ ಹೇಳಿ ಕೊದುದು ಅಪ್ಪಗ ಒಳುದ ಸಾಹಿತ್ಯ ಹಾಕೆಕ್ಕು ಹೇಳಿ,ಅಲ್ಲದೋ ಡಾಗುಟ್ರಕ್ಕಾ..
ಸಾಹಿತ್ಯ ಹೇಳಿದರೆ, ಕನ್ನಡ ಸಾಹಿತ್ಯವೊ, ಇಂಗ್ಳ್ಳೀಷೊ ?
ಏ ಮಾವ, ಅಡಿಗೆ ಸಾಹಿತ್ಯಕ್ಕೂ ಭಾಷೆ ಇದ್ದೋ?
ಆಹಾಹಾ!!!! ಬಾಯಿಲಿ ನೀರು ಬ೦ತು..ಇ೦ದು ಇರುಳು ಇದರ ಮಾಡಿಯೇ ಮಾಡುವದು ಹೇಳಿ ತೀರ್ಮಾನ ಮಾಡಿ ಆತು ( ಸುಪರ್ ಮಾರ್ಕೆಟಿಲ್ಲಿ ಮಾವಿನಕಾಯಿ ಸಿಕ್ಕುಗು ಹೇಳ್ತ ನ೦ಬಿಕೆ). ಮಾಡ್ಳುದೆ ಸುಲಭ ಅಲ್ದಾ.. ಎನ್ನ ಹಾ೦ಗೆ ಸ್ವಯ೦ಪಾಕ ಮಾಡ್ತವಕ್ಕೆ ಭಾರೀ ದೊಡ್ಡ ಉಪಕಾರ. ಇನ್ನುದೆ ಹೀ೦ಗೆ ಇಪ್ಪ ಒಳ್ಳೊಳ್ಳೆ ಅಡಿಗೆಗಳ ಹೇಳಿ ಕೊಡಿ ಅಕ್ಕಾ..
ಗಣೇಶಣ್ಣಾ,ಮಾವಿನಮರಲ್ಲಿ ಹೂಗು ಬಿಡುಲಾಯಿದಿಲ್ಲೇ.ದುಬೈ ಸುಪರ್ ಮಾರ್ಕೆಟಿಲಿ ಸುಪರ್ ಮಾವಿನಕಾಯಿ ಸಿಕ್ಕಿತ್ತೋ??
ಆನು ನಿನ್ನೆ ಮಾವಿನಕಾಯಿ ತೆಕ್ಕೊ೦ಡುಹೋಗಿ ಗೊಜ್ಜು ಮಾಡಿ ಉ೦ಡೂ ಆತು.. 🙂 ಹುಳಿ ಚೂರು ಕಮ್ಮಿ ಇತ್ತು ಅಷ್ಟೆ… ಇಲ್ಲಿ ಪೈಸೆ ಇದ್ದರೆ ಯಾವ ಕಾಲಲ್ಲಿಯುದೆ ಮಾವಿನಕಾಯಿ ಸಿಕ್ಕುತ್ತು..
ನಿಂಗಳ ಚಾನ್ಸು ಆತಾ…. ಮಾವಿನಕಾಯಿ ಅಪ್ಪ ಜಾಗೆಲ್ಲಿಯೇ ಸಿಕ್ಕದ್ದೆ ದುಬಾಯಿಲ್ಲೆ ಸಿಕ್ಕುತ್ತು ಹೇಳಿರೆ ಆಶ್ಚರ್ಯ ಆವುತ್ತಪ್ಪಾ…!!!!!
:).. ನಮ್ಮ ಊರಿನ ಮಾವಿನಕಾಯಿ ಅಲ್ಲ.. ಬೇರೆ ಯಾವುದೋ ದೇಶಲ್ಲಿ ಆದ್ದದು. ಆದರೂ ಮಾವಿನಕಾಯಿ ಮಾವಿನಕಾಯಿಯೇ ಅಲ್ಲದೋ?..
ಅಷ್ಟೇ ಈಗ!!!!
ಅದಾ ನೆಗೆಗಾರನ ಮೋರೆ ಕಂಡತ್ತದಾ… ಸುಮಾರು ದಿನದ ನಂತರ !!!! ಪಾಪ ಒಪ್ಪಣ್ಣನ ಮದುವೆಲ್ಲಿ ನೆಗೆ ಮಾಡಿ, ನೆಗೆ ಮಾಡಿಸಿ ಬಚ್ಚಿತ್ತಿದಾಯಿಕ್ಕು ….
ಸು ಅಕ್ಕನ ಗೊಜ್ಜಿ (ಮಂದನ ಗೊಜ್ಜಿ) ಎನಗೆ ಭಾರಿ ಪ್ರೀತಿ…. ಆದರೆ ಮಾವಿನಕಾಯಿ ಇಲ್ಲದ್ದ ಸಮೆಯಲ್ಲಿ ಬರದು ಬಾಯಿಲ್ಲಿ ನೀರು ಬರುಸುದೆಂತಕಪ್ಪಾ… ಛೆ ಛೆ!!!!!
ಆಗಲಿ ಒಳ್ಳೇದಾತು…. ಒಪ್ಪಣ್ಣ.comilli ಇರ್ತನ್ನೇ ಹೆಂಗಾರು…
ಅಂಬಟೆ ಸಿಕ್ಕಿರೆ ಅದರ್ಲಿಯೇ ಮಾಡಿ 🙂 ಅದುದೇ ರುಚಿ ಆವ್ತು.
{ ಅಂಬಟೆ ಸಿಕ್ಕಿರೆ ಅದರ್ಲಿಯೇ ಮಾಡಿ }
ಇದೊಳ್ಳೆ ಕತೆ, ಚಾಯದಹೊಡಿ ಸಿಕ್ಕದ್ದರೆ ಕಾಪಿಹೊಡಿಲೇ ಚಾಯಮಾಡಿ – ಹೇಳಿದ ಹಾಂಗೆ ಆತು ಈ ಡಾಗುಟ್ರ ಒಯಿವಾಟು! 🙁
ಕಾಲೇಜಿಲ್ಲಿ ಪಾಠ ಮಾಡುವಗಳೂ ಇಷ್ಟು ಕಷ್ಟ ಆವ್ತಿಲ್ಲೆ !! ಈ ನೆಗೆಗಾರಂಗೂ ಬೋಸಂಗೂ ಅರ್ಥ ಮಾಡ್ಸುಲೆ ಕಲ್ತ ಬುದ್ಧಿ ಎಲ್ಲ ಖರ್ಚು ಮಾಡೆಕ್ಕಾವ್ತು !!
ನೆಗೆಗಾರ..ನೀನು ಪೂರ ಓದಿದ್ದಿಲ್ಲೆಯೋ ಹೇಳಿ ಕಾಣ್ತು. ಆನು ಸುರೂವಿಂಗೆ ಬರದ್ದೆ. ಮಂದನ ಗೊಜ್ಜು ಮಾವಿನಕಾಯಿ, ಅಂಬಟೆ ಮತ್ತೆ ಹುಣಸೇಕಾಯಿಲಿ ಮಾಡ್ಲಾವ್ತು ಹೇಳಿ. ಆದರೆ ಬರವಗ ಮೂರನ್ನೂ ಬರವಲೆ ಕಷ್ಟ ಹಾಂಗಾಗಿ ಮಾವಿನ ಕಾಯಿ ಮಾಂತ್ರ ಬರದ್ದು. ಈಗ ಅರ್ಥ ಆತೋ? ಕಾಪಿಹೊಡಿಲಿ ಚಾಯ ಮಾಡೂಲೆ ಹೇಳಿದ್ದಲ್ಲ ಅಣ್ಣೋ !!!
ಅವನ ಬುದ್ದಿ ನಿಂಗೊಗೆ ಗೊಂತಿಲ್ಲೆಯೋ…. ಅವ ಪ್ರತಿಕ್ರಿಯೆಗಳ ಮಾಂತ್ರ ಓದುದು… 🙂 ಲೇಖನ ಓದುವಷ್ಟು ಪುರುಸೊತ್ತು ಬೇಕನ್ನೇ ಅವಂಗೆ! ಹೋಪೋರ ಬಪ್ಪೋರ ಕಾಲೆಳೆಯಕ್ಕನ್ನೇ!!! 🙂
ಒಪ್ಪಣ್ಣನ ಮದುವೆಲಿ ನೆಗೆಗಾರನ ನೆಗೆ ಮಾಡ್ತ ಗೌಜಿಯ ನೋಡಿ ಕೆಲವು ಜೆನ ಹೇಳಿದವ್ವಡ ’ಒಂದು laughter club ಶುರು ಮಾಡ್ಲಕ್ಕು ಇಂವ’ ಹೇಳಿ.
laughter club = ನೆಗೆ ಮಾಡ್ಲೆ ಅರಡಿಯದ್ದವ್ವು ಹ್ಹಹ್ಹಹ್ಹ ಹೇಳಿ ಮರ್ಲು ಹಿಡುದವರ ಹಾಂಗೆ ನೆಗೆ ಮಾಡ್ಲೆ ಕಲಿವ ಸಂಘ,ಮಾಡ್ತವಕ್ಕೆ ನಿಜವಾಗಿ ನೆಗೆ ಬಾರದ್ರೂ, ಅವ್ವು ಮಾಡ್ತ ವಿಚಿತ್ರಂಗಳ ನೋಡಿ ಬೇರೆಯವಕ್ಕಂತೂ ಖಂಡಿತಾ ಹೊಟ್ಟೆಬೇನೆ ಅಪ್ಪಷ್ಟು ನೆಗೆ ಬತ್ತು 😉
ಅಪ್ಪೂಳಿ ಆ ಸಂಕಟ ದೇವರಿಂಗೇ ಪ್ರೀತಿ…..!!!
{ ದೇವರಿಂಗೇ ಪ್ರೀತಿ }
– ನೀರ್ಕಜೆ ಅಪ್ಪಚ್ಚಿಗೋ? 😉
ಎಲಾ… ನೆಗೆಗಾರನೇ ಇವನ ಕಾಲೆಳೆಯಾಟ ಇಲ್ಲೆ ಹೇಳಿ ಗ್ರೇಶಿತ್ತಿದೆ…. ಅದು ಪತಿ ದೇವರಲ್ಲ ಮಾರಾಯನೇ! ಚಾಮಿ ದೇವರು…
{ಸಾಗರಲ್ಲಿ ಈ ಗೊಜ್ಜಿಯ ಜಂಬ್ರಂಗಳಲ್ಲಿಯೂ ಮಾಡ್ತವು. ತುಂಬಾ ರುಚಿ ..ಹುಳಿ ಹುಳಿ..ಖಾರ..ಬೆಳ್ಳಿಳ್ಳಿ ಒಗ್ಗರಣೆ…}
ಆ ಊರಿನ ಜೆಂಬ್ರಂಗಳಲ್ಲಿ ಬೆಳ್ಳುಳ್ಳಿ ಉಪಯೋಗಿಸುತ್ತವಾ? ಯೆಬೇ..!
ಜಂಬ್ರಲ್ಲಿ ಮಾಡುವಗ ಬೆಳ್ಳುಳ್ಳಿಯ ಹಾಕುತ್ತವಿಲ್ಲೆ 🙂 .ನಿತ್ಯಕ್ಕೆ ಮಾಡುವಗ ಮಾಂತ್ರ.
ಇದಾ ನೆಗೆಗಾರಣ್ಣ….ಆ ಊರಿನವರ ಹಾಂಗೆಲ್ಲ ಹೇಳೆಡ ಆತ..ಎನಗೆ ಬೇಜಾರಾವ್ತು, ಆನು ಕೂಗುವೆ… ಅದು ಎನ್ನ ಊರಲ್ಲದಾ? ಆನು ಹೆಸರಿನೊಟ್ಟಿಂಗೆ ಹಾಕದ್ದೇ ಇದ್ದರೂ[ಇದಕ್ಕೆ ಕಾರಣ ಬೇರೆ ಇದ್ದು]
ಹ್ಮ್ಮ್,, ನಳ ಪಾಕಲ್ಲಿ ಭೀಮಂಗೆ ಒಳ್ಳೆ ಹೆಸರಿದ್ದಡ ಅಲ್ದಾ? ಹಾಂಗಾಗಿ ಅದೇ ಕೋಣೆಲಿಯೇ ಪರಿಮ್ಮಳ ಬಪ್ಪದಾಯಿಕ್ಕು.
ಮಾರಾಯನೆ.. ನಳಪಾಕಲ್ಲಿ ನಳಂಗೆ ಹೆಸರಿಪ್ಪದು, ಭೀಮಪಾಕಲ್ಲಿ ಭೀಮಂಗೆ ಹೆಸರಿಪ್ಪದು…
ಕ್ಷಮಿಸಿ,ಗೊಂತಾಯಿದಿಲ್ಲೆ..ಪಾಕಲ್ಲಿ ನಳ ಮತ್ತೆ ಭೀಮನ ವೆತ್ಯಾಸ ತಿಳಿಶುವಿರೋ?
ನಳ ಮಹಾರಾಜ ಗೊಂತಿದ್ದಲ್ಲ -ನಳ ದಮಯಂತಿ ಕತೆಲಿ ಬಪ್ಪ ಮಹಾರಾಜ- ಆವ ದೊಡ್ಡ ಪಾಕಶಾಸ್ತ್ರ ಪ್ರವೀಣ ಆಗಿತ್ತಿದ್ದಡ.ಅವಂದಾಗಿ ನಳಪಾಕ ಹೇಳ್ತ ಹೆಸರು ಬಂದದಡ, ಭೀಮ ವಲಲ ಹೇಳ್ತ ಹೆಸರಿಲಿ ವಿರಾಟನ ಪಾಕಶಾಲೆಲಿ ಅಡಿಗೆಬಟ್ಟ ಆಗಿತ್ತಿದ್ದ ಅಲ್ಲದ… ಅದರಂದ ಭೀಮಪಾಕ ಹೇಳ್ತ ಹೆಸರು ಬಂದದಡ.ರುಚಿ ಮತ್ತೆ ವಿಧಾನದ ವ್ಯತ್ಯಾಸ ಎನಗೆ ಗೊಂತಿಲ್ಲೆ.ಇದು ಆನು ಸಣ್ಣ ಇಪ್ಪಗ ಎಂಗಳ ಮನೆಗೆ ಯಕ್ಷಗಾನದ ಪಡ್ರೆ ಚಂದ್ರು ಬಂದುಕೊಂಡು ಇತ್ತಿದ್ದ. ಅವ ಹೇಳಿದ ಕತೆ.
ಮತ್ತೆ ಇದರ ಹೆಚ್ಚಾಗಿ ಗಂಡಸರ ಅಡಿಗೆಗೆ ಮಾಂತ್ರ ಹೇಳುದು…ಹೆಮ್ಮಕ್ಕಳ ಅಡಿಗೆಗೆ ಹೇಳ್ತವಿಲ್ಲೆ.
ಈ ಕಲಿಯುಗಲ್ಲಿ ನಳ ಪಾಕದ ಅರ್ಥ ರಜಾ ಬದಲಾವಣೆ ಆಯಿದಾಡ,ಅದೂ ಈಗೀಗ,-ನಳ ಪಾಕ ಹೇಳಿದರೆ ಈ ಪೇಟೆಲಿಪ್ಪ ಮಕ್ಕೊ,ಬಿಡಾರಲ್ಲಿ ದಮಯಂತಿ ಇಪ್ಪಗ ಮಾಡುವ ಅಡಿಗೆಗೆ ಹೇಳುವದಾಡ.ಒಪ್ಪಣ್ಣನ ಹತ್ರೆ ಒಂದು ತಿಂಗಳು ಬಿಟ್ಟು ಕೇಳುವ,ಪುರುಸೋತ್ತಿಲ್ಲಿ,ಆಗದೋ?
ಹಾಂಗೇ ಶೆಕ್ಕರೆಪಾಕಲ್ಲಿ ಶೆಕ್ಕರೆಗೆ, ಬೆಲ್ಲಪಾಕಲ್ಲಿ ಬೆಲ್ಲಕ್ಕೆ, ಮೈಸೂರುಪಾಕಲ್ಲಿ ಮೈಸೂರಿಂಗೆ….
ತಮಾಷೆಗೆ ಹೇಳಿದ್ದಾತ…
ಹೀ೦ಗೆ ಹೇಳುವದು ಕೇಳಿದ್ದೆ:
ಅಡಿಗೆಗೆ ಬೇಕಾದ ಸಾಮಗ್ರಿಗೊ ಸರಿಕಟ್ಟಾಗಿ ಸಿಕ್ಕದ್ರುದೆ ಸಿಕ್ಕಿದ್ದರಲ್ಲೆ ಸುಧಾರುಸಿ ರುಚಿಯಾದ ಪಾಕ ತಯಾರುಸಿರೆ ಅದು ನಳಪಾಕ ಅಡ.
ಭೀಮಪಾಕ ಹೇಳಿರೆ–ತಯಾರುಸೆಕಾದ ಪಾಕಕ್ಕೆ ಬೇಕಪ್ಪ ಎಲ್ಲಾ ಸಾಮಗ್ರಿಗಳ ವ್ಯವಸ್ಥೆ ಇದ್ದೊ೦ಡು ಮಾಡುವ ರುಚಿಯಾದ ಪಾಕ ಅಡ.
ಎರಡರಲ್ಲುದೆ ಇಪ್ಪ ಸಾಮಾನ್ಯ ವಿಷಯ ‘ರುಚಿ’!