ಬರದೋರು :   ಚೂರಿಬೈಲು ದೀಪಕ್ಕ    on   20/02/2011    30 ಒಪ್ಪಂಗೊ

ಚೂರಿಬೈಲು ದೀಪಕ್ಕ
Latest posts by ಚೂರಿಬೈಲು ದೀಪಕ್ಕ (see all)

ಸುಮಾರು ಸಮಯದ ಮತ್ತೆ ಚೂರಿಬೈಲು ದೀಪಕ್ಕನ ಅಡಿಗೆ, ಬೈಲಿಲಿ ಬತ್ತಾ ಇದ್ದು.
ಮಾಡಿನೋಡಿ, ಅತಿರಸಕ್ಕೆ ಒಪ್ಪ ಕೊಡಿ!

ಬೇಕಪ್ಪ ಸಾಮಗ್ರಿಗೊ:

ಅತಿರಸ (ಪಟ: ಇಂಟರ್ನೆಟ್ಟಿಂದ)

ಅಕ್ಕಿಹೊಡಿ – 1 ಗ್ಲಾಸ್ (ಬೆಳ್ತಿಗೆ)
ಕಾಯಿಸುಳಿ – 1/2 ಗ್ಲಾಸ್
ಏಲಕ್ಕಿ ಹೊಡಿ – ೧ ಚಮ್ಚ
ಎಣ್ಣೆ – ಹೊರಿವಲೆ ತಕ್ಕಷ್ಟು
ಬೆಲ್ಲ – 200ಗ್ರಾಂ(1 ಗ್ಲಾಸ್ ಅಕ್ಕಿಗೆ)

ಮಾಡುವ ವಿಧಾನ:
ಬೆಲ್ಲಕ್ಕೆ ರಜ್ಜ ನೀರು ಹಾಕಿ ಪಾಕಕ್ಕೆ ಮಡುಗೆಕ್ಕು.
ಅದಕ್ಕೆ ಕಾಯಿಸುಳಿ, ಏಲಕ್ಕಿ ಹಾಕೆಕ್ಕು.
ಅದೇ ಪಾಕಕ್ಕೆ ಅಕ್ಕಿ ಹೊಡಿಯ ಹಾಕಿ ಸರೀ ಕಲಸೆಕ್ಕು.
ಮತ್ತೆ 2 ಚಮ್ಚ ಎಣ್ಣೆಯ ಅದಕ್ಕೆ ಹಾಕಿ ಮಿಶ್ರ ಮಾಡೆಕ್ಕು.
ಈಗ ಅತಿರಸದ ಹಿಟ್ಟು ತಯಾರಾತು.

ಇನ್ನು ಹೊರಿವದು.
ಈ ಹಿಟ್ಟಿನ ಸಣ್ಣ ಸಣ್ಣ ಉಂಡೆ ಮಾಡಿ, ಅದರ ತಟ್ಟಿ – ಒಡೆಯ ಹಾಂಗೆ ಮಾಡಿ – ಎಣ್ಣೆಗೆ ಬಿಡೆಕು.
ಈ ಹಿಟ್ಟು ಹೊರುದು ಕೆಂಪಪ್ಪಲ್ಲಿ ವರೆಗೆ ಕಾಸೆಕ್ಕು.
ಈಗ ಅತಿರಸ ತಯಾರು!

ಇದರ ಮಡುಗುತ್ತರೆ ಎರಡುವಾರಕ್ಕೆ ಹಾಳಾವುತ್ತಿಲ್ಲೆ.

30 thoughts on “ಅತಿರಸ

    1. ಮಾಡಿ ತಿಂದದೋ? ಮಾಡಿಸಿ ತಿಂದದೋ ? ಮಾಡಿ ಮಡಿಗಿದ್ದರ ತಿಂದದೋ ಹೇಳಿ ಇನ್ನೊಂದರಿ ಹೇಳಿಕ್ಕಿ. ತರ್ಸಿ ತಿಂದದಲ್ಲ ಎನಗೊಂತಿಲ್ಲ್ಯೋ!!

  1. ದೀಪಕ್ಕ°, ನಿಂಗಳ ಪಾಕಶಾಲೆಂದ ಸುಮಾರು ದಿನಂದ ಮತ್ತೆ ಒಂದು ಲಾಯ್ಕದ ಅತಿರಸ ಹೆರ ಬಂತದಾ!!!

    ಸತ್ಯ ಹೇಳಿ!! ಇದು ಮಗನ ಹುಟ್ಟಿದದಿನದ ಲೆಕ್ಕಲ್ಲಿ ಮಾಡಿ ಬೈಲಿಂಗೆ ಹಂಚಿದ್ದದೋ??? 😉 🙂 🙂

    ಇನ್ನುದೇ ನಮುನೆ ನಮುನೆ ಅಡಿಗೆಗೋ ಬರಲಿ ದೀಪಕ್ಕಾ…. ಕಾಯ್ತಾ ಇದ್ದೆ..

      1. ಏ,ನೆಗೆಗಾರ,ಕಾಯ್ಸೊದು ಅಲ್ಲದೋ°.ಕಾಯಿ ತಾ ಹೇಳಿದ್ದು.ಬೇಗ ಓಡು.

      2. ಅಪ್ಪೋ ನೆಗೆಮಾಣಿ!! ಎಂತ ಹೇಳಿದ್ದು ನೀನು?

        [ಹೆಚ್ಚು ಕಾವಲಾಗ, ದೀಪಕ್ಕ ಹೇಳಿದ್ದವು.
        ಮತ್ತೆ ಕರಂಚುತ್ತಡ! ]

        ಹಾಂ!! ಅದಪ್ಪು!! ಮೊನ್ನೆ ದೀಪಕ್ಕ ಅತಿರಸ ಮಾಡುವಾಗ ನೀನು ಅಲ್ಲಿಯೇ ಇತ್ತಿದ್ದೆಡ್ಡ!! ಅತಿರಸ ರಜಾ ಕೆಂಪಪ್ಪಗಳೇ ಅವರ ಹತ್ತರೆ ತೆಗವಲೆ ಹೇಳಿಗೊಂಡಿತ್ತಿದ್ದೆಡ್ಡಾ!! ‘ಕರಂಚಿತ್ತೋ,, ಕರಂಚಿತ್ತು’ ಹೇಳಿ!!!
        ಅಷ್ಟು ಅಂಬೇರ್ಪು ಎಂತದಾ° ಅದು? x-( 🙂 😉
        ಸುರೂವಿಂಗೆ ನಿನಗೆ ಕೊಟ್ಟು ಅತ್ಲಾಗಿ ಕಳ್ಸಿಕ್ಕಿಯೇ ಒಳುದೋರಿಂಗೆ ಮಾಡಿ ಕೊಟ್ಟದಡ್ಡ!! ಪಾಪ ದೀಪಕ್ಕ!!

  2. ದೀಪಕ್ಕ… …
    ಬೆಲ್ಲದ ಪಾಕ ಯಾವ ಹದಕ್ಕೆ ಬರೆಕ್ಕು?? ಪಾಕ ಆತ ಹೆಳೀ ನೊಡುದು ಹೆನ್ಗೆ?

  3. ಹಾ… ಸೀವು ಸಿವು… 😛
    ಎನ್ನಾ ಬಾಯಿಲಿ ನೀರು ಬತ್ತು… 😀
    ಎನಗೆ ಚಿತ್ರ ನೋಡಿ ಕೊದಿಯರುದು , ಬೇಕಪ್ಪ ಸಾಮಗ್ರಿಗೊ ಮಾ೦ತ್ರ ಓದಿಕ್ಕಿ ಗೆಣಪ್ಪಣ್ಣನ ಅ೦ಗಡಿಗೆ ಓಡಿ ಸಾಮಗ್ರಿ ತ೦ದೆ…
    ಮತ್ತೆ ಮಾಡುವ ವಿಧಾನ ಓದಿದೆ.. 😉
    ಆದರೆ- “ಬೇಕಪ್ಪ ಸಾಮಗ್ರಿಗೊ”, ಲಿ ಬೆಲ್ಲಾ ಬರದ್ದೇ ಇಲ್ಲೆ.. ಮಾಡುವ ವಿಧಾನ ಲಿದ್ದು… 🙁
    ಈಗ ಬೆಲ್ಲ ಇಲ್ಲದೆ ಮಾಡ್ತು ಹೇ೦ಗೆ???? 🙁

    1. ಬೆಲ್ಲ ಇಲ್ಲದ್ದರೆ ಮೆಣಸು ಹಾಕು ಬೋಸಬಾವಾ…
      ಒಳ್ಳೆತ ಕಡ್ಪ ಆವುತ್ತು, ತಿಂದರೆ ನಾಕುದಿನ ನೆಂಪೊಳಿಗು! 😉

  4. ರಸಭರಿತ ಅತಿರಸದ ಪಟ ನೋಡಿಯೇ ಬಾಯಿಲಿ ಜೊಲ್ಲುರಸ ಹರುದತ್ತದ. ತಯಾರಿ ಮಾಡ್ಳೆ ತಿಳುಸಿ ಕೊಟ್ಟ ದೀಪಕ್ಕಂಗೆ ಧನ್ಯವಾದಂಗೊ. ಬೆಲ್ಲ ನವಗೆ ಬೇಕಾದಷ್ಟು ಹಾಕುವ ಅಪ್ಪಾ. ದೊಡ್ಡ ವಿಶಯ ಅಲ್ಲ. ಅತಿರಸ ಎಣ್ಣೆ ಸರೀ ಕುಡಿತ್ತೋ ಹೇಳಿ. ನವಗುದೆ ಕುಡುಶುತ್ತು.

  5. ಬೆಲ್ಲ ಪ್ರಮಾಣ ಹೇ೦ಗೆ ಹೇಳೊದಪ್ಪಾ..ಅದು “ರುಚಿಗೆ ತಕ್ಕಷ್ಟು” ಪ್ರಮಾಣಲ್ಲಿ ಸೇರುಸುಲೆ ಇಪ್ಪದಲ್ಲದೋ? ಎನಗಪ್ಪಗ ಒ೦ದು ಕಿಲ ಅಕ್ಕಿಗೆ ನಾಲ್ಕು ಕಿಲ ಬೆಲ್ಲ ಸೇರುಸಿರೆ ಸೀವು ಹದಾ ಅಕ್ಕೋ ಹೇಳಿ..ಅಲ್ಲದೋ ದೀಪಕ್ಕಾ?

    1. @(ಎನಗಪ್ಪಗ ಒ೦ದು ಕಿಲ ಅಕ್ಕಿಗೆ ನಾಲ್ಕು ಕಿಲ ಬೆಲ್ಲ ಸೇರುಸಿರೆ ಸೀವು ಹದಾ ಅಕ್ಕೋ ಹೇಳಿ..)
      ಏ ರಘು ಭಾವಾ.. ತಿ೦ಬಲೆ ಲಾಯ್ಕ ಆವ್ತು ಹೇಳಿ ಹೀ೦ಗೆಯುದೆ ಬೆಲ್ಲ ಸೇರುಸುವದೋ!! ಬೇಡಪ್ಪಾ ಬೇಡ… ಆಪೀಸಿಲ್ಲಿ ಕೂದ೦ಡು ಕೆಲಸ ಮಾಡ್ತ, ಬೇಕಾಷ್ಟು ತಲೆಬೆಶಿಯೂ ಇಪ್ಪ ನಮ್ಮ ಹಾ೦ಗಿಪ್ಪವು ಹೀ೦ಗೆ ಒ೦ದಕ್ಕೆ ನಾಲ್ಕು ಪಟ್ಟು ಸೀವು ತಿ೦ದರೆ ಡಯಾಬಿಟೀಸು ಸುರುವಕ್ಕು.. ಮತ್ತೆ ಕೈಕ್ಕೆ ಕೈಕ್ಕೆ ಮಾತ್ರೆಗೊ, ಇ೦ಜೆಕ್ಷನು ಎಲ್ಲ ತೆಕ್ಕೋಳೆಕಕ್ಕು.. ಹೇಳಿದ್ದಿಲ್ಲೆ ಬೇಡ ಹಾ…

      1. { ನಾಲ್ಕು ಕಿಲ ಬೆಲ್ಲ ಸೇರುಸಿರೆ }
        ಹುಳುಕುತ್ತುಗು ಹೊಟ್ಟೆಲಿ!
        ಆಗದ್ದೆ ಇಲ್ಲೆ, ಚೂರಿಬೈಲು ಡಾಗುಟ್ರತ್ರೆ ಮದ್ದಿದ್ದು!! 😉

    2. ರಘುಭಾವ ಪೇಟೇಲಿದ್ದರೂ ಹಳೇ ಕ್ರಮ ಮಡುಕ್ಕೊಂಡ ಹಾಂಗೆ ಕಾಣುತ್ತು!ಬೆಲ್ಲ ಹಾಕಿ ಮಾಡಿದ ಹಸರ ಪಾಯಸಕ್ಕೆ ನಿಂಗೊಗೆ ಖಂಡಿತ ನಾಕು ಚಂಚ ಸಕ್ಕರೆ ಬೇಕಕ್ಕೋ ಹೇಳಿ?

      1. ಶ೦ಕರಣ್ಣಾ,ಶೆಕ್ಕರೆ ಬೇಡಪ್ಪಾ. ಅಚ್ಚು ಬೆಲ್ಲ ಹಾಕಿದ ಹಸರು ಪಾಯಸಕ್ಕೆ ಕಾಯಿಹಾಲು ಬೇಕಾವುತ್ತಿಲ್ಲೆ,ಅಷ್ಟೆ..

  6. ದೀಪಕ್ಕಂಗೆ ಸಾಮಾನಿನ ಪಟ್ಟಿ ಹೇಳುವಗ ಬೆಲ್ಲ ಸೇರ್ಸಲೆ ಮರದ್ದು!

    ಅತಿರಸವ ನಾಕು ದಿನ ಹೇಮಾರಿಕೆ ಮಡುಗುತ್ತರೆ ಮಣ್ಣಳಗೆಲಿ ಹಾಕಿ ವಸ್ತ್ರಲ್ಲಿ ಬಾಯಿಕಟ್ಟಿ ಮಡುಗೆಕ್ಕಡ. ಅಪ್ಪೊ ದೀಪಕ್ಕ?

    1. ಹೋಯಿ… ಅದು ಸಕ್ಕರೆ ಖಾಯಿಲೆ ಇಪ್ಪವಕ್ಕೆ ಆಯ್ಕು ಈಗ ಹೇಳಿದ್ದು. ನಿಂಗೊಗೆ ಸೀವಿನದ್ದು ಅಯೆಕ್ಕರೆ ನಾಳಂಗೆ ಹೇಳುಗು ನೋಡಿ.

      1. ಬೆಲ್ಲದ ವಿವರ ಸೇರುಸಿದವು ದೀಪಕ್ಕ.. ಕೊಶಿ ಆತು.

        ದೀಪಕ್ಕಾ..
        ಅಡಿಗೆ ಮಾಡ್ತದು ಹೇಂಗೆ ಹೇಳಿ ಗೊಂತಾತು, ಆದರೆ ಮಾಡ್ಳೆ ಉದಾಸ್ನ ಬಿಡ್ತಿಲ್ಲೆನ್ನೇ!
        ಎಂಗೊ ಯೇವಗ ಬರೆಕ್ಕು ಚೂರಿಬೈಲು ಮನೆಗೆ? 😉

    2. ಒಹ್, ಇದಾ ಅಪ್ಪನ್ನೇ, ಆನು ಈಗಲ್ಲದೋ ನೋಡಿದ್ದು ಅದರ. ದೀಪಕ್ಕ ಹೇಳಿದ್ದು ಸರಿಯೇ. ಸುರುವಿಂಗೆ ಬೆಲ್ಲ ಸೇರ್ಸಲೆ ಇಲ್ಲಿ ಪಟ್ಟಿ ಪ್ರಕಾರ. ಅದು ಸೀವು ಆಗದ್ದವಕ್ಕೆ.

      ಮತ್ತೆ ಅಕ್ಕಾದವಕ್ಕೆ “ಬೆಲ್ಲಕ್ಕೆ ರಜ್ಜ ನೀರು ಹಾಕಿ ಪಾಕಕ್ಕೆ ಮಡುಗೆಕ್ಕು.
      ಅದಕ್ಕೆ ಕಾಯಿಸುಳಿ” ಹೇಳಿದ್ದವಿದಾ. !

      1. { ಮಣ್ಣಳಗೆಲಿ ಹಾಕಿ ವಸ್ತ್ರಲ್ಲಿ ಬಾಯಿಕಟ್ಟಿ }
        ಅತಿರಸವ ಮಣ್ಣಳಗೆಲಿ ಹಾಕುದು ಸಮ. ಆದರೆ ವಸ್ತ್ರಲ್ಲಿ ಬಾಯಿಕಟ್ಟಿಗೊಂಬದಕ್ಕೂ ಅದಕ್ಕೂ ಎಂತ ಸಮ್ಮಂದ?
        ಅದುದೇ ನಾಕುದಿನ!
        ಉಂಬದು ತಿಂಬದು ಹೇಂಗಪ್ಪ? 🙁

        1. (ಅತಿರಸವ ಮಣ್ಣಳಗೆಲಿ ಹಾಕುದು ಸಮ. ಆದರೆ ವಸ್ತ್ರಲ್ಲಿ ಬಾಯಿಕಟ್ಟಿಗೊಂಬದಕ್ಕೂ ಅದಕ್ಕೂ ಎಂತ ಸಮ್ಮಂದ?)
          ಮಣ್ಣಳಗೆಲಿ ಹಾಕಿದ ಅತ್ತಿರಸ ಒಂದೊಂದೆ ಕಾಣೆ ಅಪ್ಪಲಾಗನ್ನೆ… ಆದಕ್ಕೆ ವಸ್ತ್ರಲ್ಲಿ ಬಾಯಿ ಕಟ್ಟಿಕೊಂಬದಾದಿಕ್ಕು… ಮನೆಲಿಪ್ಪ ಎಲ್ಲೋರುದೆ ವಸ್ತ್ರ ಕಟ್ಟಿಕೊಳ್ಳೆಕ್ಕೋ?

  7. ಸಣ್ಣದಿಪ್ಪಗ ಎನ್ನ ಸೋದರತ್ತೆ ಮನೇಲಿ ಅಂಬಗಂಬಗ ಮಾಡುಗು ಇದರ. ಎನ್ನ ಮೂಗಿಲ್ಲಿ ನೆಳವು ಕೂರ್ತೋ ಗೊಂತಿಲ್ಲೇ. ನಾವು ಹಲವು ಸರ್ತಿ ಅದೇ ಟೈಮ್ ಹಾಜರಾಯ್ದು ಭಾವಂದ್ರೊಟ್ಟಿನ್ಗೆ ಕೂದು ತಟ್ಟೆ ಕಾಲಿ ಮಾಡಿ ಕೊಡ್ಲೇ.

    1. ‘ಅತಿರಸ’ ಹೇಳಿ ಪೂರ್ತಿ ನಾಲ್ಕಕ್ಷರ ಹೇಳ್ಳೆ ಪುರ್ಸೊತ್ತಿಲ್ಲದ್ದ ಹಳೆ ಹೆಮ್ಮಕ್ಕೊ ಇದರ ಸಣ್ಣ ಮಾಡಿ ‘ಅತ್ರಸ’ ಹೇಳುಗಡ.
      ತಿಂಬಲೆ ಪಷ್ಟಾವುತ್ತು. ಮಾಂತ್ರ ಕಂಡಾಪಟ್ಟೆ ನೀರು ಕುಡಿಯೆಕ್ಕಾವ್ತು. ಎನ್ನ ಅನುಭವ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×