Oppanna.com

ಅವಲಕ್ಕಿ ಸೆಂಡಗೆ

ಬರದೋರು :   ವೇಣಿಯಕ್ಕ°    on   13/01/2015    0 ಒಪ್ಪಂಗೊ

ವೇಣಿಯಕ್ಕ°

ಅವಲಕ್ಕಿ ಸೆಂಡಗೆ

ಬೇಕಪ್ಪ ಸಾಮಾನುಗೊ:

  • 1/2 ಕಿಲೋ ಸಾಧಾರಣ ದಪ್ಪ ಅವಲಕ್ಕಿ
  • 10-12 ಕಣೆ ಬೇನ್ಸೊಪ್ಪು
  • 2 ದೊಡ್ಡ ನೀರುಳ್ಳಿ
  • 15-20 ಹಸಿಮೆಣಸು
  • 1.5 -2 ಚಮ್ಚೆ ಎಳ್ಳು
  • 1 ಚಮ್ಚೆ ಇಂಗಿನ ಹೊಡಿ ಅಥವಾ ದ್ರಾಕ್ಷೆ ಗಾತ್ರದ ಇಂಗು
  • ರುಚಿಗೆ ತಕ್ಕಸ್ಟು ಉಪ್ಪು
  • 3-4 ಕಪ್(ಕುಡ್ತೆ) ಹುಳಿ ಮಜ್ಜಿಗೆ

ಮಾಡುವ ಕ್ರಮ:

ಒಂದು ಪಾತ್ರಲಿ ಅವಲಕ್ಕಿ, ಎಳ್ಳು, ಮಜ್ಜಿಗೆ, ಸಾಧಾರಣ 8 ಕುಡ್ತೆ ನೀರು ಹಾಕಿ, 30 ನಿಮಿಷ ಒಂದು ಕರೆಲಿ ಮಡುಗಿ.

ಹಸಿಮೆಣಸು, ಬೇನ್ಸೊಪ್ಪು, ಇಂಗು, 1/2 ಕುಡ್ತೆ ನೀರಿನ ಮಿಕ್ಸಿಗೆ ಹಾಕಿ ನೊಂಪಿಂಗೆ ಕಡೆರಿ. ಇದಕ್ಕೆ ಕೊರದ ನೀರುಳ್ಳಿಯ ಹಾಕಿ ಒಂದು ಸುತ್ತು ತಿರುಗ್ಸಿ.

ಬೊದುಳಿದ ಅವಲಕ್ಕಿ, ಕಡದ ಮಸಾಲೆ, ಉಪ್ಪಿನ ಸೇರ್ಸಿ ಮಿ‍ಕ್ಸಿಗೆ ಹಾಕಿ ಒಂದರಿ ತಿರುಗ್ಸಿ. ಹಿಟ್ಟು ಕೆಳಾಣ ಚಿತ್ರಲ್ಲಿ ತೋರ್ಸಿದಸ್ಟು ದಪ್ಪ ಇರಲಿ.

ರೆಜ್ಜ ರೆಜ್ಜವೆ ಹಿಟ್ಟಿನ ತೆಗದು ಒಂದು ಪ್ಲಾಸ್ಟೀಕು ಶೀಟ್ / ಬಾಳೆ ಎಲೆ / ಮುಂಡಿ ಎಲೆಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಹಾಕಿ.

ಇದರ 6-8 ದಿನ ಬೆಶಿಲಿಲ್ಲಿ ಒಣಗ್ಸಿ ಒಂದು ಕರಡಿಗೆಲಿ ಹಾಕಿ ಮಡುಗಿ.

ಇದರ ಎಣ್ಣೆಲಿ ಹೊರುದು ಊಟಕ್ಕೆ ಬಳುಸಿ. ಇದು ಸಾರು, ಮೇಲಾರ, ತಂಬ್ಳಿ, ಮಜ್ಜಿಗೆ, ಮೊಸರು ಅಶನದ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.
ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 300 ಸೆಂಡಗೆ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×