Oppanna.com

ನೇಂದ್ರ ಬಾಳೆಕಾಯಿ ಚೋಲಿ ತಾಳು(ಪಲ್ಯ)

ಬರದೋರು :   ವೇಣಿಯಕ್ಕ°    on   29/01/2013    4 ಒಪ್ಪಂಗೊ

ವೇಣಿಯಕ್ಕ°

ನೇಂದ್ರ ಬಾಳೆಕಾಯಿ ಚೋಲಿ ತಾಳು(ಪಲ್ಯ)

ಬೇಕಪ್ಪ ಸಾಮಾನುಗೊ:

  • 1 ಕಟ್ಟು ನೇಂದ್ರ ಬಾಳೆಕಾಯಿ ಚೋಲಿ(ಸಾಧಾರಣ 5 ನೇಂದ್ರ ಬಾಳೆಕಾಯಿಯ ಚೋಲಿ)
  • 4-5 ಚಮ್ಚೆ ಕಾಯಿ ತುರಿ
  • 3/4 ಚಮ್ಚೆ  ಮೆಣಸಿನ ಹೊಡಿ
  • ರುಚಿಗೆ ತಕ್ಕಸ್ಟು ಉಪ್ಪು
  • ಚಿಟಿಕೆ ಅರುಶಿನ ಹೊಡಿ
  • ನಿಂಬೆ ಗಾತ್ರದ ಬೆಲ್ಲ
  • ದ್ರಾಕ್ಷೆ ಗಾತ್ರದ ಹುಳಿ
  • 5-6 ಬೇನ್ಸೊಪ್ಪು
  • 1 ಚಮ್ಚೆ ಉದ್ದಿನ ಬೇಳೆ
  • 1 ಚಮ್ಚೆ ಸಾಸಮೆ (1/4 ಚಮ್ಚೆ ಮಸಾಲೆಗೆ + 3/4 ಚಮ್ಚೆ ಒಗ್ಗರಣೆಗೆ)
  • 1/2 ಒಣಕ್ಕು ಮೆಣಸು
  • 2 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಒಂದು ಪಾತ್ರಲ್ಲಿ ರೆಜ್ಜ ಮಜ್ಜಿಗೆ, ನೀರು ಹಾಕಿ ಮಡುಗಿ. ಬಾಳೆಕಾಯಿ ಚೋಲಿಯ ಸಣ್ಣಕೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊರದು ಮಜ್ಜಿಗೆ ಹಾಕಿದ ನೀರಿಂಗೆ ಹಾಕಿ, ಒಂದು 5 ನಿಮಿಷ ಮಡುಗಿ.

ಬಾಳೆಕಾಯಿ ಚೋಲಿಯ ಮಜ್ಜಿಗೆ ನೀರಿಂದ ತೆಗದು, ಪ್ರೆಶರ್ ಕುಕ್ಕರ್ಲ್ಲಿ ಹಾಕಿ.
ಅದಕ್ಕೆ ಬೆಲ್ಲ, ಹುಳಿ ಪುರುಂಚಿದ ನೀರು, ಮೆಣಸಿನ ಹೊಡಿ, ಅರುಶಿನ ಹೊಡಿ, ಉಪ್ಪು, ರೆಜ್ಜ ನೀರು ಹಾಕಿ ಬೇಶಿ(3-4 ಸೀಟಿ).

ತೆಂಗಿನಕಾಯಿ, 1/4 ಚಮ್ಚೆ ಸಾಸಮೆಯ ಮಿಕ್ಸಿಲಿ ಹಾಕಿ, ರೆಜ್ಜ ನೀರು ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊಜಕ್ಕು ಮಾಡಿ.

ಕುಕ್ಕರ್ನ ಪ್ರೆಶರ್ ಹೋದ ಮೇಲೆ, ತಾಳಿನ ನೀರು ಆರ್ಸಿ, ಕಾಯಿ ತುರಿ ಹಾಕಿ ತೊಳಸಿ. ತಾಳಿನ ಸಣ್ಣ ಕಿಚ್ಚಿಲ್ಲಿ ಒಂದೆರಡು ನಿಮಿಷ ಮಡುಗಿ.
ಒಗ್ಗರಣೆ ಸಟ್ಟುಗಿಲ್ಲಿ, ಉದ್ದಿನ ಬೇಳೆ, ಸಾಸಮೆ, ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ.
ಒಗ್ಗರಣೆ ಹೊಟ್ಟುವಗ ಬೇನ್ಸೊಪ್ಪು ಹಾಕಿ, ಒಗ್ಗರಣೆಯ ತಾಳಿಂಗೆ ಹಾಕಿ ಬೆರುಸಿ. ಇದು ಅಶನ/ಚಪಾತಿ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

4 thoughts on “ನೇಂದ್ರ ಬಾಳೆಕಾಯಿ ಚೋಲಿ ತಾಳು(ಪಲ್ಯ)

  1. ಮನೆಯಲ್ಲಿ ಮಾಡಿ ತಿಂದು ನೊಡಿ ಹೆಳತಿನಿ, ಹೇಂಗೆ?

  2. ವೇಣಿ ಅಕ್ಕ ಮೊನ್ನೆ ಚಿಪ್ಸ್ ಮಾಡಿದ್ದರ ಚೋಲಯೋ??

    1. ಅ೦ತೂ ಬಾಳೆಕಾಯಿ, ಚೋಲಿಯೂ ಬಿಡದ್ದೆ ಮನಾರಕ್ಕೆ ತಿ೦ದು ಮುಗಾತು… 😉
      ಒಳುದರೆ ಪೋಡಿ ಮಾಡಿರಾತು.. 😀

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×