Oppanna.com

ಬದನೆಕಾಯಿ ಮಸಾಲೆ ಪಲ್ಯ

ಬರದೋರು :   ವೇಣಿಯಕ್ಕ°    on   18/12/2012    6 ಒಪ್ಪಂಗೊ

ವೇಣಿಯಕ್ಕ°

ಬದನೆಕಾಯಿ ಮಸಾಲೆ ಪಲ್ಯ

ಬೇಕಪ್ಪ ಸಾಮಾನುಗೊ:

  • 4-5 ಸಾಧಾರಣ ಗಾತ್ರದ ಬದನೆ (ನಾಳಿ ಬದನೆ ಆದರೆ ಒಳ್ಳೆದು)
  • 1/2 – 3/4  ಕಪ್(ಕುಡ್ತೆ) ಕಾಯಿ ತುರಿ
  • 3-4 ಒಣಕ್ಕು ಮೆಣಸು
  • 3/4 ಚಮ್ಚೆ ಕೊತ್ತಂಬರಿ
  • 1/8 ಚಮ್ಚೆ ಜೀರಿಗೆ
  • 1/8 ಚಮ್ಚೆ ಮೆಂತೆ
  • ಚಿಟಿಕೆ ಇಂಗು
  • ದೊಡ್ಡ ದ್ರಾಕ್ಷೆ ಗಾತ್ರದ ಹುಳಿ
  • ದೊಡ್ಡ ನಿಂಬೆ ಗಾತ್ರದ ಬೆಲ್ಲ
  • ರುಚಿಗೆ ತಕ್ಕಸ್ಟು ಉಪ್ಪು
  • ಚಿಟಿಕೆ ಅರುಶಿನ ಹೊಡಿ
  • 10-12 ಬೇನ್ಸೊಪ್ಪು
  • 1 1/4 ಚಮ್ಚೆ ಉದ್ದಿನ ಬೇಳೆ (1/4 ಚಮ್ಚೆ ಮಸಾಲೆಗೆ + 1 ಚಮ್ಚೆ ಒಗ್ಗರಣೆಗೆ)
  • 1 ಚಮ್ಚೆ ಸಾಸಮೆ
  • 3 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಒಂದು ಪಾತ್ರಲ್ಲಿ ರೆಜ್ಜ ಮಜ್ಜಿಗೆ, ನೀರು ಹಾಕಿ ಮಡುಗಿ. ಬದನೆಯ ಒಂದು ಇಂಚು ಉದ್ದಕ್ಕೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊರದು ಮಜ್ಜಿಗೆ ಹಾಕಿದ ನೀರಿಂಗೆ ಹಾಕಿ, ಒಂದು 5 ನಿಮಿಷ ಮಡುಗಿ.

ಒಂದು ಬಾಣಲೆಲಿ ಅಥವಾ ಒಗ್ಗರಣೆ ಸಟ್ಟುಗಿಲ್ಲಿ 1 ಚಮ್ಚೆ ಎಣ್ಣೆ, 1/4 ಚಮ್ಚೆ ಉದ್ದಿನ ಬೇಳೆ, ಒಣಕ್ಕು ಮೆಣಸು, ಕೊತ್ತಂಬರಿ, ಜೀರಿಗೆ, ಮೆಂತೆ ಹಾಕಿ ಸಣ್ಣ ಕಿಚ್ಚಿಲ್ಲಿ ಪರಿಮ್ಮಳ ಬಪ್ಪನ್ನಾರ ಹೊರಿರಿ. ಅದಕ್ಕೆ ಇಂಗು,  5-6 ಬೇನ್ಸೊಪ್ಪು ಹಾಕಿ ಸಣ್ಣ ಕಿಚ್ಚಿಲ್ಲಿ 1 ನಿಮಿಷ ಹೊರಿರಿ.

ಹೊರುದ ಮಸಾಲೆಯ ಮಿಕ್ಸಿಗೆ ಹಾಕಿ ಕ್ರಶ್ ಮಾಡಿ.
ಅದಕ್ಕೆ ಕಾಯಿ ತುರಿ, ಬೆಲ್ಲ, ಹುಳಿ, ಉಪ್ಪು ಹಾಕಿ, ರೆಜ್ಜ ನೀರು ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಹದ ನೊಂಪಿಂಗೆ ಕಡೆರಿ.

ಒಂದು ಬಾಣಲೆಲಿ, 2 ಚಮ್ಚೆ ಎಣ್ಣೆ, ಸಾಸಮೆ, ಉದ್ದಿನ ಬೇಳೆ ಹಾಕಿ ಬೆಶಿ ಮಾಡಿ.
ಒಗ್ಗರಣೆ ಹೊಟ್ಟುವಗ ಒಳುದ ಬೇನ್ಸೊಪ್ಪು, ಕೊರದ ಬದನೆ ಹಾಕಿ ಲಾಯಿಕಲಿ ತೊಳಸಿ.
ಅರುಶಿನ ಹೊಡಿ, ಚಿಟಿಕೆ ಉಪ್ಪು ಹಾಕಿ 2-3 ನಿಮಿಷ ತೊಳಸಿ. ಇದಕ್ಕೆ ಕಡದ ಮಸಾಲೆ ಹಾಕಿ ಮುಚ್ಚಿ ಹದ ಕಿಚ್ಚಿಲ್ಲಿ ಬೇಶಿ.
ಇದು ಅಶನ/ಚಪಾತಿ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

6 thoughts on “ಬದನೆಕಾಯಿ ಮಸಾಲೆ ಪಲ್ಯ

  1. ಇದರ ಓದಿ ಬದನೆ ಆಸೆ ಆಗಿ ಐಗಳ ಹೋಟ್ಲಿಂಗೆ ಹೋಗಿ ಗುೞ ಪೋಡಿ ತಿಂದಿದನಡ ಇಂದು ಮಾಮಸಮ.

    ಅಕ್ಕಾ ಇದರ ಒಂದರಿ ಮಾಡ್ಲೆ ಹೇಳೆಕ್ಕು ಮನೆಲಿ.. ಬಾರಿ ಪಸ್ಟು ಆದಾಂಗಿದ್ದು..

  2. ಹಾಗಲಕಾಯಿ ಮಸಾಲೆ ಪಲ್ಯಕ್ಕೂ ಇದೇ ಪಾಕವಾ ಅಕ್ಕ?ಎನಗೆ ಭಾರೀ ಇಷ್ಟದ್ದು,ಈ ಸೀವು,ಖಾರಮಿಶ್ರಿತ ರುಚಿ !

    1. ಏ ಭಾವ.. ಹಾಗಲಕಾಯಿ ಕೈಕ್ಕೆ ಅಲ್ಲದೊ?? 😛
      ನಮ್ಮ ನೆಗೆ ಮಾಣಿಗೆ ಕೈಕ್ಕೆ ಭಾರೀ ಇಷ್ಟ ಅಡ.. ನಿoಗೊಗುದೆಯೋ?? 😉
      ನಮ್ಮ ಚೆನ್ನೈ ಭಾವ ಹಾಗಲಕಾಯಿಯ ಜೂಸು ಕುಡಿಗಡ…
      ಹಾ೦ಗೆ ನಮ್ಮ ಪೆ೦ಗಣ್ಣ ಅದರ ಬೋಳುತಿ೦ಗಡ…

      ನವಗೆ ಇದು ಯಾವದು ಬೇಡ…
      ಲಾಯಕೆ ಸೀವಿನ ಪಾಚ ಸಾಕು.. 😉

      1. ಹಾಗಲಕಾಯಿ ಪಾಚ ಮಾಡಿಕೊಟ್ರೆ ಅಕ್ಕೋ..?

    2. ಹಾ… ಇದೇ ಪಾಕ ಉಪಯೋಗ್ಸುಲೆ ಅಕ್ಕು. ಇನ್ನುದೆ ಹೆಚ್ಚು ಹುಳಿ, ಬೆಲ್ಲ, ಉಪ್ಪು, ಮೆಣಸು, ಮಸಾಲೆ ಹಾಯೆಕ್ಕು..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×