- ವಿಷು ವಿಶೇಷ ಸ್ಪರ್ಧೆ – 2021 - April 14, 2021
- 26-ಜೂನ್-2015: ಮುಜುಂಗಾವು ವಿದ್ಯಾಪೀಠಕ್ಕೆ “ವಿದ್ಯಾನಿಧಿ ಸಮರ್ಪಣೆ” - June 26, 2015
- ವಿಷು ವಿಶೇಷ ಸ್ಪರ್ಧೆ 2015 : ಆಹ್ವಾನ - January 11, 2015
ದೊಡ್ಡಮಾಣಿ ದೊಡ್ಡಕ್ಕಂದು ಹೊಸ ಹೊಸ ತಿಂಡಿಗೊ, ಯೇವತ್ತುದೇ!
ಮೊನ್ನೆ ಆರಕ್ಕೆ ಇರುಳಿಂಗೆ ಅಲ್ಲಿ ಬಾರೀ ಗೌಜಿ ಅಡ!!
ಮೂರುಸಂದ್ಯೆ ಅಪ್ಪಗಳೇ ಇಡೀ ಬೈಲಿಂಗೇ ದೊಡ್ಡಬಾವಂದು ಸಮೋಸ(ಸರಳ ಮೊಬೈಲು ಸಂದೇಶ) ಬಯಿಂದು – ‘ಇಂದು ಎಂಗಳ ಅಟ್ಟುಂಬೊಳಂದ ಜೋರು ಹೊಗೆ ಹೋವುತ್ತಾ ಇದ್ದು’ ಹೇಳಿಗೊಂಡು!
ಆ ದಿನ ಇರುಳು ಅಲ್ಲಿ ಒಂದು ಹೊಸ ತಿಂಡಿ – ಬಟಾಣಿ ಪರೋಟ!
ಉತ್ತರಭಾರತದ ಪರೋಟ ಇದ್ದಲ್ದ, ಅದಕ್ಕೆ ಬಟಾಣಿಯೋ – ಎಂತೆಲ್ಲ ಹಾಕಿ ಒಂದು ಹೊಸಾ ರುಚಿ!
ಆಲೂ ಪರೋಟ, ಆಚ ಪರೋಟ, ಈಚ ಪರೋಟ ಹೇಳಿಗೊಂಡು ಇದ್ದಲ್ದ, ಹಾಂಗೆ ಇದೊಂದು ಬಟಾಣಿ ಪರೋಟ ಅಡ.
ಲಾಯ್ಕಾಯಿದಡ, ದೊಡ್ಡಬಾವ° ಹೇಳಿತ್ತಿದ್ದ°, ಪಾಪ!!
ದೊಡ್ಡಮಾವಂಗೆ ಏಕಾದಶಿ ಇದಾ, ಹಾಂಗಾಗಿ ತೊಂದರೆ ಆಯಿದಿಲ್ಲೆ, ದೊಡ್ಡತ್ತೆಗೆ ಮಾಂತ್ರ ರಜ್ಜ ತಟಪಟ ಆಯಿದು ಹೇಳಿ ಕಾಣ್ತು.
ಮೆಲ್ಲಂಗೆ ಗಬ್ಬಲಡ್ಕ, ನೆಟ್ಟಾರು ಹೇಳಿ ಒಂದು ವಾರ ಮನೆಂದ ಹೆರ ಹೋಗಿ ಇರ್ತ ಏರ್ಪಾಡು ಮಾಡಿಗೊಂಡು ಇದ್ದವಡ – ತಂದ ಬಟಾಣಿಕಾಳು ಪೂರ ಮುಗಿವನ್ನಾರ.
ಮೊನ್ನೇಣ ಹೊಸದಿಗಂತಲ್ಲಿ ಅದರ ಮಾಡ್ತದು ಹೇಂಗೆ ಹೇಳಿ ಬರದ್ದು ಈ ದೊಡ್ಡಕ್ಕ°.
ನಿಂಗಳೂ ಮಾಡಿ ನೋಡಿ. ಹೇಂಗಾಯಿದು ಹೇಳಿ.
~
ಒಪ್ಪಣ್ಣ
ಹೊಸದಿಗಂತ, ಮಂಗಳೂರು ಆವೃತ್ತಿ:
ತಾರೀಕು 06-ಪೆಬ್ರವರಿ-2010.
ಓದಿ, ಮಾಡಿನೋಡಿ, ಹೇಂಗಾಯಿದು ಹೇಳಿ!
ಪೇಪರಿನ ಪೂರ್ತಿ ಪುಟ ನೋಡೆಕ್ಕಾರೆ ಈ ಸಂಕೊಲೆ ಒತ್ತಿ! (http://hosadigantha.in/news_img/02-06-2010-10.pdf)
ಈ ಪಾಕ ಇದುವರೆಗೆ ನೋಡಿದ್ದೇ ಇಲ್ಲೆ. ಮಾಡ್ಸಿ ತಿಂದಿಕ್ಕಿ ರುಚಿ ನೋಡೆಕ್ಕೆನಗೆ.
ಬೋದಾಳ ಇದರ ನೋಡಿದ್ದಕ್ಕೆ ನವಗೆ ಗೊಂತಾತು. ಈಗ ನಾವೇ ‘ಬೋದಾಳ’ ಆದ್ಸು..ಫೋ.. !
ಓ ಅಪ್ಪನ್ನೇ… ಪರೋಟ ತಂದು ಮಡುಗುದ್ದು ಗೊಂತೇ ಆಯ್ದಿಲ್ಲೆ ಆರಿಂಗೂ ಅಪ್ಪೋ…
ಬೆಶಿ ಬೆಶಿ ಇಲ್ಲದ್ರೂ ತಣುದ್ದಿಲ್ಲೆ ಆತೋ… ಬಟಾಣಿ ಹಾಕಿ ಪರೋಟ ಲಾಯಕ ಆಯ್ದಪ್ಪೊ.
ಚೆ ಚೆ ಚೆ….. ಆರುದೇ ಒಪ್ಪ ಕೊಟ್ಟಿದವಿಲ್ಲೆ ನಮ್ಮ ದೊಡ್ಡ ಭಾವಂಗೆ…. ಆನಾರೂ ಕೊಟ್ಟಿಕ್ಕಿತೆ…..
ಪರೋಟ ಪಷ್ಟ್ಲಾಸಾಯಿದು ಭಾವಾ…..
ಚೆ ಚೆ ಚೆ….. ಆರುದೇ ಒಪ್ಪ ಕೊಟ್ಟಿದವಿಲ್ಲೆ ನಮ್ಮ ದೊಡ್ಡ ಭಾವಂಗೆ…. ಆನಾರೂ ಕೊಟ್ಟಿಕ್ಕಿತೆ…..