- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಹಲಸಿನಕಾಯಿ ಬೇಳೆ ಸಾರು
ಬೇಕಪ್ಪ ಸಾಮಾನುಗೊ:
- 5-6 ಹಲಸಿನಕಾಯಿ ಬೇಳೆ
- 2-3 ಚಮ್ಚೆ ಕಾಯಿ ತುರಿ
- 4-5 ಒಣಕ್ಕು ಮೆಣಸು
- 2 ಚಮ್ಚೆ ಕೊತ್ತಂಬರಿ
- 1/4 ಚಮ್ಚೆ ಮೆಂತೆ
- 1/2 ಚಮ್ಚೆ ಉದ್ದಿನ ಬೇಳೆ
- 1/4 ಚಮ್ಚೆ ಜೀರಿಗೆ
- 1/8 ಚಮ್ಚೆ ಅರುಶಿನ ಹೊಡಿ
- 1/8 ಚಮ್ಚೆ ಇಂಗಿನ ಹೊಡಿ ಅಥವಾ ದೊಡ್ಡ ಚಿಟಿಕೆ ಇಂಗು
- ದೊಡ್ಡ ದ್ರಾಕ್ಷೆ ಗಾತ್ರದ ಬೆಲ್ಲ
- ಸಣ್ಣ ದ್ರಾಕ್ಷೆ ಗಾತ್ರದ ಹುಳಿ
- ರುಚಿಗೆ ತಕ್ಕಸ್ಟು ಉಪ್ಪು
- 2 ಕಣೆ ಬೇನ್ಸೊಪ್ಪು
- 1 ಚಮ್ಚೆ ಸಾಸಮೆ
- 1-2 ಮುರುದ ಒಣಕ್ಕು ಮೆಣಸು
- 2 ಚಮ್ಚೆ ಎಣ್ಣೆ
ಹಲಸಿನಕಾಯಿ ಬೇಳೆಯ ಕೆಂಡಲ್ಲಿ ಸುಟ್ಟು ಹಾಕಿ ಅಥವಾ ಕುಕ್ಕರ್ಲ್ಲಿ ಬೇಶಿ ಚೋಲಿ ತೆಗದು ಮಡುಗಿ.
ಬಾಣಲೆಲಿ ಕೊತ್ತಂಬರಿ, ಉದ್ದಿನ ಬೇಳೆ, ಮೆಂತೆ, ಜೀರಿಗೆ, ಒಣಕ್ಕು ಮೆಣಸು, 1 ಚಮ್ಚೆ ಎಣ್ಣೆ ಹಾಕಿ ಸಣ್ಣ ಕಿಚ್ಚಿಲ್ಲಿ ಹೊರಿರಿ.
ಅದು ಪರಿಮ್ಮಳ ಬಪ್ಪಗ ಅದಕ್ಕೆ ಇಂಗು, ಅರುಶಿನ ಹೊಡಿ, 1.5 ಕಣೆ ಬೇನ್ಸೊಪ್ಪು ಹಾಕಿ ಒಂದು ನಿಮಿಷ ಸಣ್ಣ ಕಿಚ್ಚಿಲ್ಲಿ ಹೊರಿರಿ.
ಅದಕ್ಕೆ ಕಾಯಿ ತುರಿ ಹಾಕಿ 1-2 ನಿಮಿಷ ಸಣ್ಣ/ಹದ ಕಿಚ್ಚಿಲ್ಲಿ ಹೊರಿರಿ.
ಮಿಕ್ಸಿಲಿ/ಗ್ರೈಂಡರಿಲ್ಲಿ ಹೊರುದ ಮಸಾಲೆ, ಹುಳಿಯ ಹಾಕಿ, ಬೇಕಾಸ್ಟು ನೀರು ಹಾಕಿ ಕಡೆರಿ.
ಅದು ನೊಂಪಪ್ಪಲಪ್ಪಗ ಅದಕ್ಕೆ ಸುಟ್ಟು ಹಾಕಿದ/ಬೇಶಿದ ಬೇಳೆಯ ಹಾಕಿ 2-3 ನಿಮಿಷ ಕಡೆರಿ.
ಇದರ ಒಂದು ಪಾತ್ರಕ್ಕೆ ಹಾಕಿ, ಉಪ್ಪು, ಬೆಲ್ಲ, ಸಾಧಾರಣ 5-6 ಕುಡ್ತೆ ನೀರು ಹಾಕಿ ಕೊದುಶಿ.
ಕೊದುದ ಮೇಲೆ 2-3 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಮುರುದ ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡೆಕ್ಕು.
ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ಒಗ್ಗರಣೆಯ ಸಾರಿಂಗೆ ಹಾಕಿ ತೊಳಸಿ.
ಇದು ತುಪ್ಪ ಅಶನಕ್ಕೆ ಹಪ್ಪಳದ ಒಟ್ಟಿಂಗೆ ತಿಂಬಲೆ ಲಾಯಿಕ ಆವ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಬೇಳೆ ಸಾರು,ಹೋಳಿಗೆ ಎಂಗಳೂ ಮಾಡ್ತೆಯ.ಶುದ್ದಿ ಓದಿ ಅಪ್ಪಗ ಹಳತ್ತು ಎಲ್ಲಾ ಪುನಾ ನೆಂಪಾತು
ಬೇಳೆಯ ಸುಕ್ರು೦ಡೆ ಕೂಡಾ ಮಾಡ್ಳಾವುತ್ತು ಹೇಳಿ ಕೇಳಿದ್ದೆ, ಆರಿ೦ಗಾರೂ ಗೊ೦ತಿದ್ದರೆ ಬರೆರಿ.
ಮಳೆಗಾಲಲ್ಲಿ ಬೇಳೆಯ ಎಲ್ಲಾ ಬಗೆಗಳೂ ಲಾಯಕ್ಕಾವುತ್ತು. ವೇಣಿ ಅಕ್ಕ೦ಗೆ ಧನ್ಯವಾದ೦ಗೊ!
ಈ ಚಿತ್ರಂಗಳ ನೋಡಿಯೇ ಬಾಯಿಲಿ ನೀರು ಬಂತು . ಎನ್ನ ಹಲಸಿನಕಾಯಿ ಬೇಳೆ ಕಟ್ಟಿ ಮಡುಗಿದ್ದರ ಇಂದೇ ತೆಗದು ಸಾರು ಮಾಡ್ತೆ …:)
ಒ೦ದು ಎರಡು ಬಾಳೆಲೆ ಹರಡು
ಮೂರು ನಾಕು ಅನ್ನ ಹಾಕು
ಐದು ಆರು ಬೇಳೆ ಸಾರು—–
ಎನ್ನ ಅಚ್ಚುಮೆಚ್ಚಿನ ಸಾರು ಇದು…. ಅಬ್ಬ ! ಫೋಟೋಲ್ಲಿ ನೋಡಿಯೇ ಇಲ್ಲಿವರೆಗೆ ಅದರ ಸ್ಪೆಷಲ್ ಪರಿಮಳ ಬಂತನ್ನೇ ವೇಣೀ…
ಊರಿಂಗೆ ಹೋದಿಪ್ಪಗ ಒಂದು ದಿನ, ಈ ಸಾರು ಊಟಕ್ಕೆ ಇದ್ದಿಪ್ಪಗ, ಎಲ್ಲರು ಸೇರಿ ಹೋಟೆಲಿಂಗೆ ಹೋಪ ಪ್ಲಾನ್ ಮಾಡಿಯಪ್ಪಗ, ಎನಗೆ ಈ ಸಾರಿಲ್ಲಿ ಉಣ್ಣೆಕ್ಕು ಹೇಳಿ ಅಪ್ಪನ ಮನೆಂದ ಹೆರಟಿದೇ ಇಲ್ಲೆ….