Oppanna.com

ಬೇಳೆಚೆಕ್ಕೆ ತಾಳು(ಪಲ್ಯ)

ಬರದೋರು :   ವೇಣಿಯಕ್ಕ°    on   02/04/2013    0 ಒಪ್ಪಂಗೊ

ವೇಣಿಯಕ್ಕ°

ಬೇಳೆಚೆಕ್ಕೆ ತಾಳು(ಪಲ್ಯ)

ಬೇಕಪ್ಪ ಸಾಮಾನುಗೊ:

  • 1/2 ಸಾಧಾರಣ ಗಾತ್ರದ ಬೇಳೆಚೆಕ್ಕೆ
  • 1/4 ಕಪ್(ಕುಡ್ತೆ) ಕಾಯಿ ತುರಿ
  • 1.5-2 ಚಮ್ಚೆ ಮೆಣಸಿನ ಹೊಡಿ
  • ದೊಡ್ಡ ದ್ರಾಕ್ಷೆ ಗಾತ್ರದ ಬೆಲ್ಲ
  • 1/4 ಚಮ್ಚೆ ಅರುಶಿನ ಹೊಡಿ
  • ರುಚಿಗೆ ತಕ್ಕಸ್ಟು ಉಪ್ಪು
  • 1-2 ಮುರುದ ಒಣಕ್ಕು ಮೆಣಸು
  • 1.5 ಚಮ್ಚೆ ಉದ್ದಿನ ಬೇಳೆ
  • 3/4 ಚಮ್ಚೆ ಸಾಸಮೆ
  • 10-15 ಬೇನ್ಸೊಪ್ಪು
  • 3-4 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಬೇಳೆಚೆಕ್ಕೆಯ ಅರ್ಧ ಭಾಗ ಮಾಡಿ, ಮೇಣವ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿ ಮಾಡಿ, ಗೂಂಜಿನ ತೆಗೆರಿ.

ಕಡಿಂದ ಸೊಳೆಯ ತೆಗೆರಿ.

ಪ್ರತಿ ಸೊಳೆಯನ್ನೂ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉದ್ದಕೆ 4 ಭಾಗ ಮಾಡಿ.

ಒಂದು ಪಾತ್ರಲ್ಲಿ ರೆಜ್ಜ ನೀರು ತೆಕ್ಕೊಂಡು ಅದಕ್ಕೆ ಈ ಕೊರದ ಬೇಳೆಚೆಕ್ಕೆಯ ಹಾಕಿ.

ಪೊದುಂಕುಳು, ಹೂಸಾರೆ ಎಲ್ಲ ತೆಗದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸೊಳೆ, ಬೇಳೆಯ ಬೇರೆ ಬೇರೆ ಮಾಡಿ.

ಬೇಳೆಯ ಪ್ರೆಶರ್ ಕುಕ್ಕರ್ಲ್ಲಿ ಹಾಕಿ, ರೆಜ್ಜ ಉಪ್ಪು, ನೀರು ಹಾಕಿ ಬೇಶಿ.(1-2 ಸೀಟಿ ಸಾಕು).
ಒಂದು ಬಾಣಲೆಲಿ ಸೊಳೆ, ಉಪ್ಪು, ಮೆಣಸಿನ ಹೊಡಿ, ಬೆಲ್ಲ, ಅರುಶಿನ ಹೊಡಿ, ರೆಜ್ಜ ನೀರು ಹಾಕಿ ಬೇಶಿ.
ಇದಕ್ಕೆ ಬೇಶಿದ ಬೇಳೆಯನ್ನೂ ಹಾಕಿ ತೊಳಸಿ. ನೀರು ಆರಿಗೊಂಡು ಬಪ್ಪಲಪ್ಪಗ ಕಾಯಿ ಸುಳಿ ಹಾಕಿ ತೊಳಸಿ. ತಾಳಿನ 4-5 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.
ಒಗ್ಗರಣೆ ಸಟ್ಟುಗಿಲ್ಲಿ, ಉದ್ದಿನ ಬೇಳೆ, ಸಾಸಮೆ, ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ಒಗ್ಗರಣೆಯ ತಾಳಿಂಗೆ ಹಾಕಿ.
ಇದು ಅಶನ, ರೊಟ್ಟಿ, ಚಪಾತಿಯ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×