Oppanna.com

ಬೇಳೆ ಸೌತೆ ತಾಳು(ಪಲ್ಯ)

ಬರದೋರು :   ವೇಣಿಯಕ್ಕ°    on   18/06/2013    3 ಒಪ್ಪಂಗೊ

ವೇಣಿಯಕ್ಕ°

ಬೇಳೆ ಸೌತೆ ತಾಳು(ಪಲ್ಯ)

ಬೇಕಪ್ಪ ಸಾಮಾನುಗೊ:

  • 1 ದೊಡ್ಡ ಬಣ್ಣದ ಸೌತೆ (ಮಂಗಳೂರು ಸೌತೆ)
  • 20-25 ಹಲಸಿನಕಾಯಿ ಬೇಳೆ
  • 1/2-3/4 ಕಪ್(ಕುಡ್ತೆ) ಕಾಯಿ ತುರಿ
  • ನಿಂಬೆ ಹುಳಿ ಗಾತ್ರದ ಬೆಲ್ಲ
  • ಚಿಟಿಕೆ ಅರುಶಿನ ಹೊಡಿ
  • ರುಚಿಗೆ ತಕ್ಕಸ್ಟು ಉಪ್ಪು
  • 1.5 ಚಮ್ಚೆ ಮೆಣಸಿನ ಹೊಡಿ
  • 1.5-2 ಚಮ್ಚೆ ಉದ್ದಿನ ಬೇಳೆ
  • 1 ಚಮ್ಚೆ ಸಾಸಮೆ
  • 5-6 ಬೇನ್ಸೊಪ್ಪು
  • 2 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಬೇಳೆಯ ಕೇಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಗುಂಡುಕಲ್ಲು ಉಪಯೋಗ್ಸಿ ಗುದ್ದಿ.

ಬೇಳೆಯ ಹೆರಾಣ ಚೋಲಿಯ ತೆಗದು, ಬೆಶಿ ನೀರಿಲ್ಲಿ 5-10 ನಿಮಿಷ ಹಾಕಿ.  ಬೇಳೆಯ ಕೆರಸಿ/ಕಲ್ಲಿಂಗೆ ಹಾಕಿ ತಿಕ್ಕಿ, ಕಂದು ಬಣ್ಣದ ಚೋಲಿಯ ತೆಗೆರಿ.

ಬೆಳಿ ಮಾಡಿದ ಬೇಳೆಯ ಪ್ರೆಶರ್ ಕುಕ್ಕರ್ಂಗೆ ಹಾಕಿ, ಬೇಕಸ್ಟು ನೀರುದೆ, ಉಪ್ಪುದೆ ಹಾಕಿ ಬೇಶಿ. (2-3 ಸೀಟಿ ಸಾಕು)

ಸೌತೆಕಾಯಿಯ ಕೊರದು, ಬಿತ್ತು, ತಿರುಳಿನ ಮನಾರಕೆ ತೆಗದು ಒಂದು ಇಂಚು ಉದ್ದಕೆ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತೆಳ್ಳಂಗೆ ಕೊರೆರಿ.

ಕೊರದ ಸೌತೆಕಾಯಿಯ ಬಾಣಲೆಗೆ ಹಾಕಿ, ಉಪ್ಪು, ಬೆಲ್ಲ, ಮೆಣಸಿನ ಹೊಡಿ, ಅರುಶಿನ ಹೊಡಿ ಹಾಕಿ, ಬೇಕಾದಸ್ಟು ನೀರು ಹಾಕಿ ಮುಚ್ಚಲು ಮುಚ್ಚಿ ಬೇಶಿ.
ಅದಕ್ಕೆ ಬೆಂದ ಬೇಳೆಯ ಹಾಕಿ ತೊಳಸಿ. ಪಲ್ಯವ ಸಾಧಾರಣ ನೀರು ಆರುವನ್ನಾರ ಹದ ಕಿಚ್ಚಿಲ್ಲಿ ಮಡುಗಿ.
ಕಾಯಿಯ ಮಿಕ್ಸಿಲಿ ಹಾಕಿ ರೆಜ್ಜ ನೀರು ಹಾಕಿ ಕೊಜಕ್ಕು ಮಾಡಿ, ಪಲ್ಯಕ್ಕೆ ಹಾಕಿ ಬೆರುಸಿ. ಪಲ್ಯವ 2-3 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.
ಒಗ್ಗರಣೆ ಸಟ್ಟುಗಿಲ್ಲಿ, ಉದ್ದಿನ ಬೇಳೆ, ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡಿ.
ಅದು ಹೊಟ್ಟಿ ಅಪ್ಪಗ ಬೇನ್ಸೊಪ್ಪು ಹಾಕಿ, ಒಗ್ಗರಣೆಯ ತಾಳಿಂಗೆ ಹಾಕಿ ತೊಳಸಿ. ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

3 thoughts on “ಬೇಳೆ ಸೌತೆ ತಾಳು(ಪಲ್ಯ)

  1. ಭಾರೀ ರುಚಿ ಅಪ್ಪ ತಾಳು ಇದು, ಈಗ ತಿನ್ನದ್ದೆ ಎಷ್ಟೋ ಸಮಯ ಆತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×