Oppanna.com

ಬೆಂಡೆ ಬೋಂಡ

ಬರದೋರು :   ದೊಡ್ಡಭಾವ°    on   21/01/2010    3 ಒಪ್ಪಂಗೊ

ದೊಡ್ಡಮಾಣಿದೊಡ್ಡಕ್ಕ ಹೇಳಿರೆ ಎಲ್ಲೊರಿಂಗೂ ಗೊಂತಿರ, ಅಟ್ಟುಂಬೊಳಂದ ಹೆರ ಬಪ್ಪದು ಕಮ್ಮಿ ಇದಾ, ಹಾಂಗೆ!
ನಮ್ಮ ದೊಡ್ಡಬಾವನ ಎಜಮಾಂತಿ!
ಒಳ್ಳೆ ರುಚಿರುಚಿಯಾದ ಕೈ ಅಡಿಗೆ, ದೊಡ್ಡಬಾವನ ನೋಡುವಗಳೇ ಗೊಂತಾವುತ್ತು ಅದು.
ಬೆಳ್ಳುಳ್ಳಿ ಸೊಲುದು ಒಂದು ಒಗ್ಗರಣೆ ಹಾಕಿರೆ, ಗುರುವಾಯನಕೆರೆಂದ ನೀರ್ಚಾಲೊರೆಂಗುದೇ ಪರಿಮ್ಮಳ ಬಕ್ಕು!
ದೊಡ್ಡಕ್ಕನ ಪುರುಸೊತ್ತಿಲಿ ಅವರ ಮನೆಗೆ ಹೋದರೆ ನಮುನೆ ನಮುನೆ ತಿಂಡಿಗೊ ಇದ್ದೇ ಇಕ್ಕು, ಎಲ್ಲವುದೇ ಹೊಸತ್ತು ಹೊಸತ್ತು ಪ್ರಯೋಗಂಗೊ.
ಎಣ್ಣೆತಿಂಡಿಗೊ ಧಾರಾಳ ಅರಡಿಗು.
ನಿತ್ಯಕ್ಕೆ ತೆಂಗಿನೆಣ್ಣೆ ಸಾಕಾವುತ್ತಿಲ್ಲೆ ಹೇಳಿಗೊಂಡು ದೊಡ್ಡಬಾವ ಕಳುದೊರಿಷ ಇಪ್ಪತ್ತು ತೆಂಗಿನಸೆಸಿ ಮಡಗುಸಿದ್ದ- ಮೇಗಾಣ ತಟ್ಟಿನ ಕಟ್ಟಪುಣಿಲಿ!
ದೊಡ್ಡಕ್ಕ ತುಂಬ ಪಾಪ, ಆದರೂ, ದೊಡ್ಡಬಾವಂಗೆ ಒಂದೋಂದರಿ ಬೈವದಿದ್ದು.
ಹೇಳಿದ್ದು ಕೇಳದ್ರೆ ಮತ್ತೆಂತರ ಮಾಡುದು ಬೇಕೆ, ಅಲ್ಲಮತ್ತೆ!
ಅದಾ, ಓ ಮೊನ್ನೆ – ದೊಡ್ಡಬಾವ ನೆಡಿರುಳು ಸಿನೆಮ ನೋಡಿಗೊಂಡು – ಬೊಬ್ಬೆಹೊಡದು ನೆಗೆಮಾಡಿದ್ದಕ್ಕೆ ಬೈದ್ದದು, ಗೊಂತಿದ್ದನ್ನೆ!
ಅಡಿಗೆಲಿ ಚೀಪೆಯುದೇ ಇರ್ತು, ಕಾರವುದೇ ಇರ್ತು, ಒಗ್ಗರಣೆಯುದೇ ಇರ್ತು! ಎಂತ ಹೇಳ್ತಿ!!
ಆದರೆ ಒಪ್ಪಣ್ಣನ ಬೈಲಿನ ಬೇರೆ ಆರಿಂಗೂ ಬಯ್ಯ ದೊಡ್ಡಕ್ಕ.
ಎಡಿಗಾರೆ ಎಂತಾರು ಮಾಡಿ ಬಳುಸುಗು. ಜೋರು ಪಿಸುರು ಬಂದಿದ್ದರೆ ಖಾರ ಮಾಡುಗು, ಅಷ್ಟೆ!
ಓ ಮೊನ್ನೆ ಸಿಕ್ಕಿಪ್ಪಗ ಕೇಳಿದೆ, “ದೊಡ್ಡಕ್ಕಾ, ಬೈಲಿನವಕ್ಕೆ ಎಂತಾರು Günstige Replica Uhren ತಿಂಡಿ ಮಾಡಿ ಕೊಡ್ತೆಯಾ?” ಹೇಳಿ.
ಅಷ್ಟಪ್ಪಗ, ‘ಇದಾ, ಮೊನ್ನೆ ಪೇಪರಿಲಿ ಬಯಿಂದು – ಅದರ ಮಾಡಿಗೊಳಿ, ಸುಲಾಬ ಇದ್ದು’ ಹೇಳಿತ್ತು..
ಆ ಪೇಪರಿನ ತುಂಡು ಇಲ್ಲಿ ತಂದು ನೇಲುಸಿದ್ದೆ.
ಬೆಂಡೆಕಾಯಿ ಬೋಂಡ ಅಡ, ನಿಂಗಳೂ ಮಾಡಿ ನೋಡಿ..
ಲಾಯ್ಕಾದರೆ ಬೈಲಿನವರ ದಿನಿಗೆಳುದು ಮರೇಡಿ ಮಾಂತ್ರ, ಹಾಂ!
~
ಒಪ್ಪಣ್ಣ

 
ತಾರೀಕು 20-ಜೆನವರಿ-2009 ,ರ ೧೦ನೇ ಪುಟದ ಪಟ:

ಬೆಂಡೆಕಾಯಿ ಬೋಂಡ
ಪೂರ್ತಿ ಪುಟ ಓದಲೆ ಇಲ್ಲಿ ಒತ್ತಿ

ಇಡೀ ಪುಟ ಓದೆಕ್ಕಾರೆ ಇಲ್ಲಿ ಒತ್ತಿ:
 
(ಪುರುಸೊತ್ತಿದ್ದರೆ ಪೂರ್ತಿ ಪುಟ ನೋಡ್ಳಕ್ಕು, ಚೆಂದದ ಪಟಂಗ ಇದ್ದು – ಹೇಳಿ ದೊಡ್ಡಬಾವ ಹೇಳಿದವು!!!)

3 thoughts on “ಬೆಂಡೆ ಬೋಂಡ

  1. ಹೇ………. ಈ ಅಜ್ಜಿಗೆ ಹೇದರೆ ಗೊಂತಾಗ ಗಣೇಶೋ….ನವಗೆ ಈ ಅಜ್ಜಿ ನೇರ್ಪ ಚೋರು ಕೊಟ್ಟ ಮೇಲೆ ಅಲ್ದೋ ಬೋಂಡದ ಶುದ್ದಿ ?

  2. ಎಂತ ಗಣೇಶೋ…. ನಮ್ಮ ಒಪ್ಪಕ್ಕ ಅಷ್ಟು ಜೋರ?

  3. ಮಾಡ್ಲೆ ಎಲ್ಲಾ ಅಕ್ಕು..ಆದರೆ ಸುರುವಿಂಗೆ ಒಪ್ಪಕ್ಕಂಗೆ ರುಚಿ ತೋರ್ಸೆಕ್ಕು.ಹಾಂಗಾದರೆ ಒಪ್ಪಣ್ಣ,ಮತ್ತೆ ಅವನ ಬೈಲಿನವಕ್ಕೆ ಸಿಕ್ಕುಗಷ್ಟೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×