Oppanna.com

ಬೆಂಡೆಕಾಯಿ ಪಕೋಡ

ಬರದೋರು :   ವೇಣಿಯಕ್ಕ°    on   09/12/2014    0 ಒಪ್ಪಂಗೊ

ವೇಣಿಯಕ್ಕ°

ಬೆಂಡೆಕಾಯಿ ಪಕೋಡ

ಬೇಕಪ್ಪ ಸಾಮಾನುಗೊ:

  • 2 ದೊಡ್ಡ ಬೆಂಡೆಕಾಯಿ(ಊರ ಬೆಂಡೆಕಾಯಿ ಆದರೆ ಒಳ್ಳೆದು)
  • 1 ಸಾಧಾರಣ ಗಾತ್ರದ ನೀರುಳ್ಳಿ
  • 4-5 ಚಮ್ಚೆ ಕಡ್ಲೆ ಹೊಡಿ
  • 2-3 ಚಮ್ಚೆ ಅಕ್ಕಿ ಹೊಡಿ
  • 1/2 ಚಮ್ಚೆ ಗರಂ ಮಸಾಲೆ
  • 1/2 – 3/4 ಚಮ್ಚೆ ಮೆಣಸಿನ ಹೊಡಿ
  • ಚಿಟಿಕೆ ಇಂಗು
  • ರುಚಿಗೆ ತಕ್ಕಸ್ಟು ಉಪ್ಪು
  • 10-12 ಜೀರಿಗೆ
  • 1 ಹಸಿಮೆಣಸು
  • 2-3 ಎಳೆ ಕೊತ್ತಂಬರಿ ಸೊಪ್ಪು
  • 4-5 ಬೇನ್ಸೊಪ್ಪು
  • ಎಣ್ಣೆ ಹೊರಿವಲೆ

ಮಾಡುವ ಕ್ರಮ:

ಬೆಂಡೆಕಾಯಿ, ನೀರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಬೇನ್ಸೊಪ್ಪಿನ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ.

ಒಂದು ಪಾತ್ರಕ್ಕೆ ಕೊಚ್ಚಿದ ತರಕಾರಿಗಳ ಹಾಕಿ, ಅದಕ್ಕೆ ಅಕ್ಕಿ ಹೊಡಿ, ಕಡ್ಲೆ ಹೊಡಿ, ಮೆಣಸಿನ ಹೊಡಿ, ಜೀರಿಗೆ, ಇಂಗು, ಗರಂ ಮಸಾಲೆ, ಉಪ್ಪು ಹಾಕಿ ಲಾಯಿಕಲಿ ತೊಳಸಿ. ಬೇಕಪ್ಪಸ್ಟು ನೀರು ಹಾಕಿ, ಹಿಟ್ಟಿನ ಕೆಳಾಣ ಚಿತ್ರಲ್ಲಿ ತೋರ್ಸಿದಸ್ಟು ಹದಕ್ಕೆ ಕಲಸಿ.

ಒಂದು ಬಾಣಲೆಲಿ ಎಣ್ಣೆ ಮಡುಗಿ ಬೆಶಿ ಮಾಡಿ. ರೆಜ್ಜ-ರೆಜ್ಜವೆ ಹಿಟ್ಟಿನ ತೆಗದು ರೆಜ್ಜ ಚೆಟ್ಟೆ ಮಾಡಿ ಎಣ್ಣೆಗೆ ಹಾಕಿ ಬೇಶಿ.(ಎಣ್ಣೆಯ ಗುಜು ಗುಜು ಅಜನೆ ನಿಂದರೆ ಆತು ಹೇಳಿ ಲೆಕ್ಕ.)
ಬೆಶಿ ಬೆಶಿ ಪಕೋಡವ ಟೊಮೇಟೋ ಸಾಸ್ ಒಟ್ಟಿಂಗೆ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×