- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಬೆಂಡೆಕಾಯಿ ತಾಳು(ಪಲ್ಯ)
ಬೇಕಪ್ಪ ಸಾಮಾನುಗೊ:
- 15 ಬೆಂಡೆಕಾಯಿ (ಊರ ಬೆಂಡೆಕಾಯಿ ಆದರೆ ಒಳ್ಳೆದು)
- ಸಣ್ಣ ನಿಂಬೆ ಹಣ್ಣಿನ ಗಾತ್ರದ ಬೆಲ್ಲ
- 1/2-3/4 ಚಮ್ಚೆ ಮೆಣಸಿನ ಹೊಡಿ
- ಚಿಟಿಕೆ ಅರುಶಿನ ಹೊಡಿ
- ದ್ರಾಕ್ಷೆ ಗಾತ್ರದ ಹುಳಿ
- 4-5 ಚಮ್ಚೆ ಕಾಯಿ ತುರಿ
- 1/2 ಚಮ್ಚೆ ಸಾಸಮೆ
- 1 ಚಮ್ಚೆ ಉದ್ದಿನ ಬೇಳೆ
- 5-6 ಬೇನ್ಸೊಪ್ಪು
- 1-2 ಚಮ್ಚೆ ಎಣ್ಣೆ
ಮಾಡುವ ಕ್ರಮ:
ಬೆಂಡೆಕಾಯಿಯ ತೊಳದು, ತೊಟ್ಟು ತೆಗದು, ಸಾಧಾರಣ 1/2 ಇಂಚು ಉದ್ದಕೆ ಕೊರದು ಮಡುಗಿ.
ಹುಳಿಗೆ ರೆಜ್ಜ ನೀರು ಹಾಕಿ, ಪುರುಂಚಿ ಮಡುಗಿ. ಬಾಣಾಲೆಲಿ ಕೊರದ ಬೆಂಡೆಕಾಯಿ, ಹುಳಿನೀರು, ಉಪ್ಪು, ಬೆಲ್ಲ, ಮೆಣಸಿನ ಹೊಡಿ, ರೆಜ್ಜ ನೀರು(ಸಾಧಾರಣ 1/4 ಕುಡ್ತೆ) ಹಾಕಿ ಮುಚ್ಚಲು ಮುಚ್ಚಿ, ಸಾಧಾರಣ ನೀರು ಆರುವನ್ನಾರ ಹದ ಕಿಚ್ಚಿಲ್ಲಿ ಬೇಶಿ. 3-4 ನಿಮಿಷಕ್ಕೊಂದರಿ ತಾಳಿನ ತೊಳಸಿಗೊಂಡಿರಿ.
ಇದಕ್ಕೆ ಕಾಯಿತುರಿ ಹಾಕಿ ತೊಳಸಿ, ತಾಳಿನ ಸಣ್ಣ ಕಿಚ್ಚಿಲ್ಲಿ 5-10 ನಿಮಿಷ ಮಡುಗಿ.
ಒಗ್ಗರಣೆ ಸಟ್ಟುಗಿಲ್ಲಿ ಎಣ್ಣೆ, ಉದ್ದಿನಬೇಳೆ, ಸಾಸಮೆ ಹಾಕಿ ಬೆಶಿ ಮಾಡಿ. ಒಗ್ಗರಣೆ ಹೊಟ್ಟುವಗ ಬೇನ್ಸೊಪ್ಪು ಹಾಕಿ, ಒಗ್ಗರಣೆಯ ತಾಳಿಂಗೆ ಹಾಕಿ ತೊಳಸಿ.
ಇದು ಅಶನ ತುಪ್ಪ, ಮೊಸರು/ಮಜ್ಜಿಗೆ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.