Oppanna.com

ಬೆಂಡೆಕಾಯಿ ಪ್ರೈ

ಬರದೋರು :   ವೇಣಿಯಕ್ಕ°    on   03/03/2015    3 ಒಪ್ಪಂಗೊ

ವೇಣಿಯಕ್ಕ°

ಬೆಂಡೆಕಾಯಿ ಪ್ರೈ

ಬೇಕಪ್ಪ ಸಾಮಾನುಗೊ:

  • 20-25 ಬೆಂಡೆಕಾಯಿ
  • 2-3 ಹಸಿಮೆಣಸು
  • 1 ಸಾಧಾರಣ ಗಾತ್ರದ ನೀರುಳ್ಳಿ
  • 3/4-1 ಚಮ್ಚೆ ಸಾಂಬಾರಿನ / ಸಾರಿನ ಹೊಡಿ
  • ಚಿಟಿಕೆ ಅರುಶಿನ ಹೊಡಿ
  • ದೊಡ್ಡ ಚಿಟಿಕೆ ಹುಳಿ ಹೊಡಿ / ಮಾವಿನಕಾಯಿ(ಅಮ್ಚೂರ) ಹೊಡಿ
  • ಚಿಟಿಕೆ ಇಂಗು
  • 2-3 ಚಮ್ಚೆ ಪುಟಾಣಿ ಹೊಡಿ
  • 1/2 ಚಮ್ಚೆ ಸಾಸಮೆ
  • 5-6 ಬೇನ್ಸೊಪ್ಪು
  • 4-5  ಚಮ್ಚೆ ಎಣ್ಣೆ

ಮಾಡುವ ಕ್ರಮ:

ಬೆಂಡೆಕಾಯಿಯ ತೊಳದು, ತೊಟ್ಟು ತೆಗದು,ತೆಳ್ಳಂಗೆ ಉದ್ದಕೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊರದು ಮಡುಗಿ.

ನೀರುಳ್ಳಿಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ ಮಡುಗಿ. ಹಸಿಮೆಣಸಿನ ಸಿಗುದು ಮಡುಗಿ.

ಬಾಣಲೆಗೆ ಎಣ್ಣೆ, ಸಾಸಮೆ ಹಾಕಿ ಬೆಶಿ ಮಾಡಿ. ಒಗ್ಗರಣೆ ಹೊಟ್ಟಿ ಅಪ್ಪಗ ಇಂಗು, ಬೇನ್ಸೊಪ್ಪು, ಕೊರದ ನೀರುಳ್ಳಿ, ಹಸಿಮೆಣಸಿನ ಹಾಕಿ ಹದ/ಸಣ್ಣ ಕಿಚ್ಚಿಲ್ಲಿ 4-5 ನಿಮಿಷ ಬಾಡ್ಸಿ. ಇದಕ್ಕೆ ಕೊರದ ಬೆಂಡೆಕಾಯಿ, ಉಪ್ಪು, ಹುಳಿ ಹೊಡಿ ಹಾಕಿ ಹದ ಕಿಚ್ಚಿಲಿ 8-10 ನಿಮಿಷ ಬಾಡ್ಸಿ. ಇದಕ್ಕೆ ಸಾರಿನ ಹೊಡಿ/ಸಾಂಬಾರಿನ ಹೊಡಿ ಹಾಕಿ, ರೆಜ್ಜ ಹೊತ್ತು ಬಾಡ್ಸಿ. ಬೆಂಡೆಕಾಯಿ ಬೆಂದ ಮೇಲೆ ಪುಟಾಣಿ ಹೊಡಿ ಹಾಕಿ ಲಾಯಿಕ ತೊಳಸಿ, ಪಲ್ಯವ 1-2 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ. ಇದು ಅಶನ, ಚಪಾತಿ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

3 thoughts on “ಬೆಂಡೆಕಾಯಿ ಪ್ರೈ

  1. ಇದರ ರಜ ನೀರಾಗಿ ಮಾಡಿದರೆ ಚಪಾತಿಗೆ ಲಾಯಿಕಕ್ಕ ಏನೋ .

    1. ಖಂಡಿತಾ ಲಾಯಿಕ್ಕಾವುತ್ತು. ಇಂದು ಎನಗೆ ಇದೇ ಐಟಮ್. ( ಪುಟಾಣಿ ಹೊಡಿ ಹಾಕದ್ದೆ ಮಾಡಿದ್ದು)

  2. ಇಂದ್ರಾಣ ಚಪಾತಿಯೊಟ್ಟಿಂಗೆ ಬೆಂಡೆ ತಾಳು ಮಾಡ್ತೆ ಅಕ್ಕೋ, ಕೇಳಿತ್ತಿದ್ದು ನಿನ್ನೆ ಇರುಳು. ಆನು ತಳಿಯದ್ದೆ ಎಂತ್ಸೂ ಉತ್ತರ ಕೊಟ್ಟಿದಿಲೆ.ಹಾಂಗಾಗಿ ಇಂದು ಲೆಮನ್ ರೈಸು ಡಬ್ಬಿಲಿ. ಇಂದು ಇರುಳಿಂಗೆ ಬೆಂಡೆ ಪಲ್ಯ ಇದೇ ನಮೂನೆ ಮಾಡ್ಲೆ ಹೇಳ್ತೆ. ನಾಳಂಗೆ ಇದುವೇ, ಚಪಾತಿಯೊಟ್ಟಿಂಗೆ .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×